Author: admin

ಬೆಲ್ಜಿಯಂನ ವೆಸ್ಟ್ ಫ್ಲಾಂಡರ್ಸ್ ಪ್ರಾಂತ್ಯದ ಅರಣ್ಯದಲ್ಲಿ 14 ವರ್ಷದ ಬಾಲಕಿಯ ಮೇಲೆ ಹತ್ತು ಮಂದಿ ಅಪ್ರಾಪ್ತರು ಕಾಡಿಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. ಅತ್ಯಾಚಾರ ಎಸಗಿದ ಎಲ್ಲಾ ಹತ್ತು ಆರೋಪಿಗಳು 11 ಮತ್ತು 16 ರ ನಡುವಿನ ವಯಸ್ಸಿನವರು ಎನ್ನಲಾಗಿದೆ. ಕೊರ್ಟ್ರಿಜ್ಕ್ ನಗರದಲ್ಲಿ ಬಾಲಕಿ ತನ್ನ ಗೆಳೆಯನೊಂದಿಗೆ ಹೊರಗಡೆ ಹೋಗಿದ್ದಳು. ಅಲ್ಲಿ ಆತನ ಹಲವು ಸ್ನೇಹಿತರು ಕೂಡ ಬಂದಿದ್ದರು. ಏಪ್ರಿಲ್​ 2 ರಿಂದ ಏಪ್ರಿಲ್​ 6ರ ನಡುವೆ 10 ಮಂದಿ ಅಪ್ರಾಪ್ತರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಓರ್ವ ಬಾಲಕನಿಗೆ 11 ವರ್ಷ ಆತ ತುಂಬಾ ಚಿಕ್ಕವನಾದ ಕಾರಣ ಹೆಚ್ಚಿನ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಅವರೆಲ್ಲರನ್ನೂ ಗುರುತಿಸಿ ಬಂಧಿಸಲಾಗಿದೆ ಮತ್ತು ಬಾಲಾಪರಾಧಿ ನ್ಯಾಯಾಲಯವು ಕ್ರಮ ಕೈಗೊಂಡಿದೆ. ಬಾಲಕಿ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮೂರು ವರ್ಷಗಳ ಹಿಂದೆ ಈಸ್ಟ್ ಫ್ಲಾಂಡರ್ಸ್‌ನ ಘೆಂಟ್‌ ನಲ್ಲಿ ಇದೇ ರೀತಿಯ ಪ್ರಕರಣವು ನಡೆದಿತ್ತು. ಬೆಲ್ಜಿಯಂ ಸರ್ಕಾರವು ಜೂನ್ 2021…

Read More

ಭಾರತದಲ್ಲಿ ಎಲ್ಲೆಲ್ಲಿ ಬೆಲೆಯೇರಿಕೆ ಇದೆಯೋ ಅಲ್ಲೆಲ್ಲ ಮಧ್ಯಮವರ್ಗದವರೇ ಇದರ ಭಾರವನ್ನು ಹೊರಬೇಕಾಗುತ್ತದೆ. ಅಡುಗೆಗೆ ತರಕಾರಿಗಳು ಅತ್ಯಂತ ಮುಖ್ಯವಾಗಿ ಬೇಕಾಗುತ್ತದೆ. ಟೊಮೆಟೊ ಮತ್ತು ಈರುಳ್ಳಿ ಇಲ್ಲದೆ ಯಾವುದೇ ಅಡುಗೆಯ ಖಾದ್ಯ ರುಚಿ ಇರುವುದಿಲ್ಲ. ಆದರೆ ಟೊಮೆಟೊ ಮತ್ತು ಈರುಳ್ಳಿ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ. ಟೊಮೆಟೊ ಮತ್ತು ಈರುಳ್ಳಿ ಮಾತ್ರವಲ್ಲ, ಭಾರತೀಯ ಅಡುಗೆ ಮನೆಗಳಲ್ಲಿ ಬಳಸುವ ಅತ್ಯಂತ ಸಾಮಾನ್ಯ ತರಕಾರಿ ಆಲೂಗಡ್ಡೆ ಕೂಡ ಸಾಕಷ್ಟು ದುಬಾರಿಯಾಗಿದೆ. ಈ ತರಕಾರಿಗಳ ಬೆಲೆ ಏಕೆ ಹೆಚ್ಚುತ್ತಿದೆ ಎಂದು ತಿಳಿಯೋಣ. ಕಳೆದ ಕೆಲವು ವರ್ಷಗಳಿಂದ ಈರುಳ್ಳಿ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಇದರಿಂದಾಗಿ ಭಾರತ ಸರ್ಕಾರ ಈರುಳ್ಳಿ ರಫ್ತು ನಿಷೇಧಿಸಬೇಕಾಯಿತು. ಕಳೆದ ವರ್ಷ ಡಿಸೆಂಬರ್‌ ನಲ್ಲಿ ಭಾರತ ಸರ್ಕಾರ ಈರುಳ್ಳಿ ರಫ್ತನ್ನು ಸಂಪೂರ್ಣವಾಗಿ ನಿಲ್ಲಿಸಿತ್ತು. ಆದರೆ ಇತ್ತೀಚೆಗಷ್ಟೇ ಕೆಲ ದಿನಗಳ ಹಿಂದೆ ಈರುಳ್ಳಿ ಮೇಲೆ ಹೇರಿದ್ದ ನಿಷೇಧವನ್ನು ಸರ್ಕಾರ ಹಿಂಪಡೆದಿದೆ. ಈರುಳ್ಳಿ ರಫ್ತಿಗೆ ಹಠಾತ್ ರೋಗ ಕಾಣಿಸಿಕೊಂಡ ಕಾರಣ ಈರುಳ್ಳಿ ಬೆಲೆಯಲ್ಲಿ ಕೊಂಚ ಬದಲಾವಣೆಯಾಗಿದೆ. ಈ ವರ್ಷದ ಜನವರಿಯಲ್ಲಿ ಟೊಮೆಟೊ…

Read More

ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಹಿನ್ನೆಲೆ ವಕೀಲ ದೇವರಾಜೇಗೌಡನನ್ನು ಹಿರಿಯೂರಿನಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಸಂಬಂಧ ಕೇಸ್ ದಾಖಲಾಗಿತ್ತು. ಇಂದು ಅದೇ ಮಹಿಳೆ ವಿರುದ್ಧ ದೇವರಾಜೇಗೌಡ ಹೆಬ್ಬಾಳ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ದೇವರಾಜೇಗೌಡ ಹಿರಿಯೂರು ಠಾಣೆ ಪೊಲೀಸರ ವಶದಲ್ಲಿದ್ದಾರೆ. ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ವೈರಲ್ ವಿಚಾರದಲ್ಲಿ ವಕೀಲ ದೇವರಾಜೇಗೌಡಗೆ ಸಂಕಷ್ಟ ಎದುರಾಗಿದೆ. ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ದಾಖಲಾಗಿದ್ದ ಕೇಸ್ ​ನ ವಿಚಾರಗಳು ಬಹಿರಂಗವಾಗಿವೆ. ಏಪ್ರಿಲ್ 1 ರಂದು ಹೊಳೆನರಸೀಪುರ ನಗರ ಠಾಣೆಯಲ್ಲಿ ಸಂತ್ರಸ್ಥ ಮಹಿಳೆಯಿಂದ‌ ದೂರು ನೀಡಲಾಗಿತ್ತು. ಸೈಟ್ ಮಾರಾಟ ಮಾಡಿಸಿಕೊಡುವ ನೆಪದಲ್ಲಿ ತನ್ನನ್ನು ಲೈಂಗಿಕವಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ. ಹೆದರಿಸಿ ಬೆದರಿಸಿ ತನ್ನ ಮೇಲೆ ದೌರ್ಜನ್ಯ ನಡೆಸಲಾಗಿದೆ. ವಿಡಿಯೋ ಕಾಲ್ ಮಾಡಿ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ. ವಿಡಿಯೋ ಕಾಲ್ ಮಾಡಿ ತನ್ನ ಖಾಸಗಿ ಅಂಗಾಂಗ ತೋರಿಸಿ ಪ್ರಚೋದನೆಗೆ ಯತ್ನಿಸಿದ್ದಾರೆ. ಹೀಗಾಗಿ ಮಹಿಳೆ‌…

Read More

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯು 56 ಮಂದಿ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಿದ್ದನ್ನು ಖಂಡಿಸಿ ಆಸ್ಪತ್ರೆಯ ಬಳಿ ಪ್ರತಿಭಟನೆ ನಡೆಸುತ್ತಿದ್ದ ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರತಿಭಟನಾ ವೇಳೆಯಲ್ಲಿ ಮಾತನಾಡಿದ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್‍ ನ(ಎಐಸಿಸಿಟಿಯು) ರಾಜ್ಯ ಸದಸ್ಯೆ ಮೈತ್ರೇಯಿ ಅವರು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವಾರ್ಡ್ ಅಟೆಂಡರ್ ‍ಗಳಾಗಿ ಕೆಲಸ ಮಾಡುತ್ತಿರುವ 56 ಕಾರ್ಮಿಕರು ಮಾರ್ಚ್ ಮತ್ತು ಎಪ್ರಿಲ್ ‍ನ ವೇತನಕ್ಕಾಗಿ ಒತ್ತಾಯ ಮಾಡಿದ್ದಕ್ಕಾಗಿ ಕಾನೂನು ಬಾಹಿರವಾಗಿ ಈ ಕಾರ್ಮಿಕರನ್ನು ವಜಾಗೊಳಿಸಲಾಗಿದೆ. ಈ ಕಾರ್ಮಿಕರಲ್ಲಿ ಬಹುಪಾಲು ಕಾರ್ಮಿಕರು ಮಹಿಳೆಯರಾಗಿದ್ದು ದಲಿತ ಮತ್ತು ತುಳತಕ್ಕೊಳಪ್ಪಟ್ಟ ಸಮುದಾಯಗಳಿಗೆ ಸೇರಿದವರಿದ್ದಾರೆ ಎಂದರು. ಕಾರ್ಮಿಕರು ಕಳೆದ 10ರಿಂದ 30ವರ್ಷಗಳ ನಡುವೆ ಕೆಲಸ ಮಾಡುತ್ತಿದ್ದಾರೆ, ಆದರೆ ಅವರ ಹಕ್ಕುಗಳನ್ನು ನಿರಾಕರಿಸಲು ಗುತ್ತಿಗೆ ಕಾರ್ಮಿಕರು ಎಂದು ಕರೆಯುತ್ತಾರೆ, ಆದರೆ ವಾಸ್ತವವಾಗಿ ಅವರು ಕಾಯಂ ಕಾರ್ಮಿಕರು ಮಾಡುವ ಕೆಲಸವನ್ನೇ ಮಾಡುತ್ತಿದ್ದರೆ. ವಿಕ್ಟೋರಿಯಾಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸಿದ ಈ ಕಾರ್ಮಿಕರು ಕೊರೋನ ಸಮಯದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟಿರುವ ಕೋವಿಡ್ ವಿರುದ್ಧ ಹೋರಾಡಿದ…

Read More

ಬೆಂಗಳೂರು: ಪೋಕ್ಸೋ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿ, ಕೆಲ ದಿನಗಳ ಹಿಂದೆ ಜಾಮೀನು ಪಡೆದು ಹೊರಬಂದಿದ್ದ ಯುವಕ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಇಲ್ಲಿನ ಸಂಪಂಗಿರಾಮನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ. ಸತ್ಯ(20) ಎಂಬಾತ ಮೃತಪಟ್ಟ ಯುವಕ. ಈತ ಸಂಪಂಗಿರಾಮನಗರ ನಿವಾಸಿಯಾಗಿದ್ದು, ಫ್ಲಂಬರ್ ಕೆಲಸ ಮಾಡಿಕೊಂಡಿದ್ದ. ಅದೇ ಏರಿಯಾದಲ್ಲಿ ಬಾಲಕಿಯನ್ನು ಪ್ರೀತಿಸುತ್ತಿದ್ದ. ಆದರೆ, ಬಾಲಕಿಯು ಅಪ್ರಾಪ್ತೆ ಆಗಿರುವುದರಿಂದ ಆತನ ಮನೆಯವರು ಮಗಳ ತಲೆಕೆಡಿಸಿದ್ದಾನೆಂದು ದೂರು ನೀಡಿದ್ದರು ಎಂದು ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಎಚ್.ಟೆಕ್ಕಣ್ಣನವರ್ ತಿಳಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಸಂಪಂಗಿರಾಮನಗರ ಠಾಣಾ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಕೆಲ ದಿನಗಳ ಬಳಿಕ ಜಾಮೀನು ಪಡೆದು ಹೊರಬಂದಿದ್ದ ಸತ್ಯ, ಮತ್ತೆ ಅಪ್ರಾಪ್ತೆಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದ. ಇದು ಆಕೆಯ ಮನೆಯವರೆಗೆ ಗೊತ್ತಾಗಿ ಗಲಾಟೆಯಾಗಿದೆ ಎನ್ನಲಾಗಿದೆ. ಮೇ 9ರವರೆಗೂ ಮನೆಯಲ್ಲಿದ್ದ ಸತ್ಯ ಶುಕ್ರವಾರ ಬೆಳಗ್ಗೆ ಕಟ್ಟಡದವೊಂದರ ಸಂದಿಯಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ…

Read More

ಕಲಬುರಗಿ: ರಾಜ್ಯದ 236 ತಾಲೂಕುಗಳ ಪೈಕಿ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಬರ ಹಾಗೂ ಕುಡಿಯುವ ನೀರು ನಿರ್ವಹಣೆ ಕುರಿತು ಸಭೆ ನಡೆಸಲು ಅನುಮತಿ ಕೋರಿ‌ ಚುನಾವಣಾ ಆಯೋಗಕ್ಕೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದಾರೆ. 223 ತಾಲೂಕುಗಳನ್ನು ಈಗಾಗಲೇ ಬರಪೀತ ತಾಲೂಕುಗಳೆಂದು ಘೋಷಿಸಲಾಗಿದೆ. ಹವಾಮಾನ ಇಲಾಖೆಯ ಪ್ರಕಾರ ರಾಜ್ಯದಲ್ಲಿ ಮುಂಗಾರು ವಿಳಂಬವಾಗಲಿದೆ. ಪ್ರಯುಕ್ತ ಈಗಾಗಲೇ ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಕುಡಿಯುವ ನೀರಿನ‌ ಸಮಸ್ಯೆ ಉಲ್ಬಣವಾಗಿರುತ್ತದೆ. ಮುಂದಿನ ಎರಡು ತಿಂಗಳುಗಳ ವರೆಗೆ ಜನರಿಗೆ ಹಾಗೂ ಜಾನುವಾರುಗಳಿಗೆ ಶುದ್ಧವಾದ ಹಾಗೂ ಸಮರ್ಪಕ ಕುಡಿಯುವ ನೀರು ನಿರ್ವಹಣೆ ಅವಶ್ಯಕವಾಗಿರುತ್ತದೆ. ಆದ್ದರಿಂದ ಬರ ಹಾಗೂ ಕುಡಿಯುವ ನೀರು ನಿರ್ವಹಣೆ ಕುರಿತು ಸಭೆ ನಡೆಸಲು, ಇಲಾಖಾ ಸಚಿವರಿಗೆ ಅನುಮತಿ ನೀಡಲು ಕೋರುತ್ತಾ ಸದರಿ ಸಭೆ ಹಾಗೂ ಸಭೆಯ ನಿರ್ಧಾರಗಳನ್ನು ಮಾದರಿ ನೀತಿ ಸಂಹಿತೆಯಿಂದ ವಿನಾಯಿತಿ ನೀಡಲು ಕೋರುತ್ತಿರುವುದಾಗಿ ಪತ್ರದಲ್ಲಿ ಅವರು ಮನವಿ ಮಾಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ…

Read More

ಎಪ್ರಿಲ್ 13ರಂದು ಹಾರ್ಮುಜ್ ಜಲಸಂಧಿಯ ಬಳಿ ಇರಾನ್ ವಶಕ್ಕೆ ಪಡೆದಿದ್ದ, ಪೋರ್ಚುಗೀಸ್ ಧ್ವಜ ಹೊಂದಿದ್ದ ಹಡಗಿನಲ್ಲಿದ್ದ 25 ಸಿಬ್ಬಂದಿಗಳಲ್ಲಿ 7 ಸಿಬ್ಬಂದಿಗಳನ್ನು ಬಿಡುಗಡೆಗೊಳಿಸಿದ್ದು, ಇವರಲ್ಲಿ ಐವರು ಭಾರತೀಯರು ಸೇರಿದ್ದಾರೆ ಎಂದು ಪೋರ್ಚುಗಲ್‍ ನ ವಿದೇಶಾಂಗ ಇಲಾಖೆ ತಿಳಿಸಿದೆ. ಬಿಡುಗಡೆಗೊಂಡವರಲ್ಲಿ ಐವರು ಭಾರತೀಯರು, ಓರ್ವ ಫಿಲಿಪ್ಪೀನ್ಸ್ ಹಾಗೂ ಓರ್ವ ಎಸ್ಟೋನಿಯಾ ಪ್ರಜೆಗಳು ಸೇರಿದ್ದಾರೆ. ಪೋರ್ಚುಗೀಸ್ ಧ್ವಜ ಹೊಂದಿರುವ ಎಂಎಸ್‍ ಸಿ ಏರೀಸ್ ಹಡಗನ್ನು ಎಪ್ರಿಲ್ 13ರಂದು ಇರಾನ್ ‍ನ ರೆವೊಲ್ಯುಷನರಿ ಗಾಡ್ರ್ಸ್ ವಶಕ್ಕೆ ಪಡೆದಿತ್ತು. ಕಂಟೈನರ್ ಹಡಗು ಇಸ್ರೇಲ್ ಜತೆ ಸಂಪರ್ಕ ಹೊಂದಿತ್ತು ಎಂದು ಇರಾನ್ ವಿದೇಶಾಂಗ ಇಲಾಖೆ ತಿಳಿಸಿತ್ತು. ಇರಾನ್ ‍ನ ಕ್ರಮವನ್ನು ಸ್ವಾಗತಿಸಿರುವ ಪೋರ್ಚುಗಲ್, ಉಳಿದ 17 ಸಿಬ್ಬಂದಿಗಳನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆಗ್ರಹಿಸಿದೆ. ಹಡಗಿನ ಎಲ್ಲಾ ಸಿಬ್ಬಂದಿಗಳನ್ನೂ ಮಾನವೀಯ ನೆಲೆಯಲ್ಲಿ ಬಿಡುಗಡೆಗೊಳಿಸಲಾಗುವುದು. ಆದರೆ ಜಫ್ತಿ ಮಾಡಿರುವ ಹಡಗನ್ನು ಬಿಡುಗಡೆಗೊಳಿಸುವುದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವರು ಕಳೆದ ವಾರ ಹೇಳಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…

Read More

ಕೊಡಗು: ಎಸ್‌ ಎಸ್‌ ಎಲ್‌ ಸಿ ಪಾಸ್​​ ಆದ ವಿದ್ಯಾರ್ಥಿಯ ರುಂಡ ಕತ್ತರಿಸಿದ ಪ್ರಕರಣ ಕೇಳಿ ಇಡೀ ಕೊಡಗೇ ಬೆಚ್ಚಿಬಿದ್ದಿತ್ತು. 16 ವರ್ಷದ ಬಾಲಕಿಯನ್ನು 34 ವರ್ಷದ ಕೊಲೆಗಾರ ಕೊಂದಿದ್ದನು. ಅಪ್ರಾಪ್ತೆಯನ್ನು ಹಗಲು ನಿಶ್ಚಿತಾರ್ಥ ಮಾಡಿಕೊಂಡು ಸಂಜೆ ವೇಳೆ ಆಕೆಗೆ ಕತ್ತಿಯಿಂದ ಕಡಿದು ರುಂಡ-ಮುಂಡ ಬೇರ್ಪಡಿಸಿದ್ದನು. ಬಳಿಕ ಕಾಡಿನತ್ತ ತಲೆ ಹಿಡಿದುಕೊಂಡು ಪರಾರಿಯಾಗಿದ್ದನು. ಆದರೀಗ ಪರಾರಿಯಾದ ಕೊಲೆಗಾರ ಸಿಕ್ಕಿದ್ದಾನೆ. ಮೀನಾ ಮತ್ತು ಪ್ರಕಾಶ ಇಬ್ಬರು ಲವ್​ ಮಾಡುತ್ತಿದ್ದರು. ಕೊನೆಗೆ ಪ್ರಕಾಶ ಒತ್ತಾಯದ ಮೇರೆಗೆ ಆಕೆಯನ್ನ ವಿವಾಹ ಮಾಡಿ ಕೊಡುವುದಾಗಿ ಹುಡುಗಿ ಮನೆಯವರು ಒಪ್ಪಿದ್ದರು. ಅದರಂತೆಯೇ ಗುರುವಾರದಂದು ಅಪ್ರಾಪ್ತ ಬಾಲಕಿಯನ್ನು ಪ್ರಕಾಶ ನಿಶ್ಚಿತಾರ್ಥ ಮಾಡಿಕೊಂಡು ತನ್ನ ಮನೆ ಸೇರಿದ್ದನು. ಆದರೆ ಸಂಜೆ ವೇಳೆಗೆ ಕತ್ತಿ ಹಿಡಿದುಕೊಂಡು ಏಕಾಏಕಿ ಹುಡುಗಿ ಮನೆಗೆ ಬಂದವನು ಆಕೆಯ ತಂದೆ-ತಾಯಿಗೆ ಹಲ್ಲೆ ಮಾಡಿ, ಹುಡುಗಿಯನ್ನು ಎಳೆದೊಯ್ದು ಆಕೆಯ ರುಂಡವನ್ನೇ ಕತ್ತರಿಸಿಬಿಟ್ಟಿದ್ದನು. ನಂತರ ರುಂಡವನ್ನು ಕಾಡಿನಲ್ಲಿ ಬಿಸಾಕಿ ತನ್ನ ಮನೆ ಸೇರಿ ಕೋವಿ ಹಿಡಿದುಕೊಂಡು ಕಾಡಿಗೆ ಪರಾರಿಯಾಗಿದ್ದನು. ಪೊಲೀಸರು ಆರೋಪಿಗಾಗಿ…

Read More

ಕೆಲವು ಘಟನೆ, ಸನ್ನಿವೇಶಗಳನ್ನು ನೋಡಿದಾಗ ನಮ್ಮ ದೇಶದಲ್ಲಿ ಬಡವರಿಗೆ, ಸಿರಿವಂತರಿಗೆ, ನಾಯಕರಿಗೆ ಒಂದು ಕಾನೂನು ಅನಿಸುತ್ತದೆ. ಕಾನೂನು ಇರುವುದೇ ಬಡವರು, ಸಾಮನ್ಯ ವರ್ಗದವರು ಪಾಲಿಸಲು ಅನಿಸುತ್ತದೆ. ಹಣವಂತರು ಹೇಗಾದರು ಇರಬಹುದು. ಕೆಲವೊಮ್ಮೆ ಜನ ಸಾಮಾನ್ಯರಿಗೆ ಸಿಗದ ವಿಶೇಷ ಸವಲತ್ತುಗಳು ಅವರಿಗೆ ಸಿಕ್ಕಿಬಿಡುತ್ತವೆ. ಅದು ಕಾನೂನು ಬಾಹಿರ ಆದರೂ ಕೂಡಾ! ಅಂಥದ್ದೇ ಒಂದು ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದ್ದು, ಬಿಜೆಪಿ ನಾಯಕನೊಬ್ಬನ ತನ್ನ ಅಪ್ರಾಪ್ತ ಮಗನಿಂದ ಮತದಾನ ಮಾಡಿಸಿದ್ದಾನೆ. ಇಷ್ಟೇ ಅಲ್ಲದೆ ಇದನ್ನು ವಿಡಿಯೋ ಮಾಡಿಕೊಂಡು, ಪೋಸ್ಟ್ ಕೂಡ ಮಾಡಿದ್ದಾನೆ. ಮಧ್ಯಪ್ರದೇಶದ ಭೋಪಾಲ್ ನ ಬೆರಾಸಿಯಾ ಮತಗಟ್ಟೆಯಲ್ಲಿ ಬಿಜೆಪಿ ನಾಯಕನ ಅಪ್ರಾಪ್ತ ಮಗ ಮತ ಚಲಾಯಿಸುತ್ತಿರುವ ವಿಡಿಯೋ ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. 14 ಸೆಕೆಂಡುಗಳ ಈ ವಿಡಿಯೋವನ್ನು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಅವರ ಮಾಧ್ಯಮ ಸಲಹೆಗಾರ ಮೆಹರ್ ಅವರ ಫೇಸ್ಬುಕ್ ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಅಂದಹಾಗೆ ವೈರಲ್ ಆದ ವಿಡಿಯೋದಲ್ಲಿ ಬಿಜೆಪಿ…

Read More

ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ 625 ಅಂಕಗಳಿಗೆ 600ಕ್ಕೂ ಹೆಚ್ಚು ಅಂಕ ಪಡೆದು 98 ಪರ್ಸೆಂಟ್ ತೆಗೆದಿದ್ದಾರೆ. ತಮ್ಮ ಮಕ್ಕಳ ಫಲಿತಾಂಶವನ್ನು ಕಂಡು ಪೋಷಕರಲ್ಲಿ ಸಂಭ್ರಮ ಮನೆ ಮಾಡಿದೆ. ಕೊರಟಗೆರೆ ಪಟ್ಟಣದ ಚಾಣಕ್ಯ ಶಾಲೆಯಲ್ಲಿ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕ ಪಡೆದು ಕೊರಟಗೆರೆ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಭವಿಷ್ಯದಲ್ಲಿ ಏನು ಕನಸು ಕಂಡಿದ್ದರು ಅಂತಹ ವಿದ್ಯಾಭ್ಯಾಸವನ್ನು ಕಷ್ಟಪಟ್ಟಾದರೂ ಕೊಡಿಸುತ್ತೇವೆ ಎಂದಿದ್ದಾರೆ ಪೋಷಕರು. ಮಕ್ಕಳಿಗೆ ಫೋನ್ ಗಳನ್ನು ಕೊಡುವುದನ್ನು ನಿಲ್ಲಿಸಬೇಕು.  ಅವರು ಶಾಲೆಯಲ್ಲಿ ಏನು ಮಾಡುತ್ತಿದ್ದಾರೆ ಮನೆಗೆ ಬಂದಾಗ ಓದುತ್ತಾರೋ ಇಲ್ಲವೋ ಎಂದು ಗಮನಿಸಬೇಕು. ಮಕ್ಕಳ ಭವಿಷ್ಯದ ಕಡೆ ಗಮನ ಕೊಡಬೇಕು ಎಂದು ಪೋಷಕರು ತಿಳಿಸಿದ್ದಾರೆ. ಪೋಷಕರು ಹಾಗೂ ಶಿಕ್ಷಕರ ಮಾರ್ಗದರ್ಶನದಲ್ಲಿ ತುಂಬಾ ಕಷ್ಟಪಟ್ಟು ಓದಿದ್ದೇವೆ. ಆದ್ದರಿಂದ ಉತ್ತಮ ಫಲಿತಾಂಶ ಬಂದಿದೆ ಎಂದಿದ್ದಾರೆ ವಿದ್ಯಾರ್ಥಿಗಳು. ಕಾರ್ಯನಿರತ ಪತ್ರಕರ್ತ ಸಂಘದ ತಾಲ್ಲೂಕು ಅಧ್ಯಕ್ಷರಾದ ಪುರುಷೋತ್ತಮರವರ ಮಗ ಪ್ರೀಯತೋಷ್ ತಾಲ್ಲೂಕಿಗೆ ಮೊದಲ ಸ್ಥಾನ ಪಡೆದಿದ್ದಾರೆ. ಸಣ್ಣ ಹೋಟೆಲ್ ಉದ್ಯಮಿ ವೆಂಕಟೇಶ್ ಮಗಳು…

Read More