ಕೊಡಗು: ಎಸ್ ಎಸ್ ಎಲ್ ಸಿ ಪಾಸ್ ಆದ ವಿದ್ಯಾರ್ಥಿಯ ರುಂಡ ಕತ್ತರಿಸಿದ ಪ್ರಕರಣ ಕೇಳಿ ಇಡೀ ಕೊಡಗೇ ಬೆಚ್ಚಿಬಿದ್ದಿತ್ತು. 16 ವರ್ಷದ ಬಾಲಕಿಯನ್ನು 34 ವರ್ಷದ ಕೊಲೆಗಾರ ಕೊಂದಿದ್ದನು. ಅಪ್ರಾಪ್ತೆಯನ್ನು ಹಗಲು ನಿಶ್ಚಿತಾರ್ಥ ಮಾಡಿಕೊಂಡು ಸಂಜೆ ವೇಳೆ ಆಕೆಗೆ ಕತ್ತಿಯಿಂದ ಕಡಿದು ರುಂಡ-ಮುಂಡ ಬೇರ್ಪಡಿಸಿದ್ದನು. ಬಳಿಕ ಕಾಡಿನತ್ತ ತಲೆ ಹಿಡಿದುಕೊಂಡು ಪರಾರಿಯಾಗಿದ್ದನು. ಆದರೀಗ ಪರಾರಿಯಾದ ಕೊಲೆಗಾರ ಸಿಕ್ಕಿದ್ದಾನೆ.
ಮೀನಾ ಮತ್ತು ಪ್ರಕಾಶ ಇಬ್ಬರು ಲವ್ ಮಾಡುತ್ತಿದ್ದರು. ಕೊನೆಗೆ ಪ್ರಕಾಶ ಒತ್ತಾಯದ ಮೇರೆಗೆ ಆಕೆಯನ್ನ ವಿವಾಹ ಮಾಡಿ ಕೊಡುವುದಾಗಿ ಹುಡುಗಿ ಮನೆಯವರು ಒಪ್ಪಿದ್ದರು. ಅದರಂತೆಯೇ ಗುರುವಾರದಂದು ಅಪ್ರಾಪ್ತ ಬಾಲಕಿಯನ್ನು ಪ್ರಕಾಶ ನಿಶ್ಚಿತಾರ್ಥ ಮಾಡಿಕೊಂಡು ತನ್ನ ಮನೆ ಸೇರಿದ್ದನು. ಆದರೆ ಸಂಜೆ ವೇಳೆಗೆ ಕತ್ತಿ ಹಿಡಿದುಕೊಂಡು ಏಕಾಏಕಿ ಹುಡುಗಿ ಮನೆಗೆ ಬಂದವನು ಆಕೆಯ ತಂದೆ-ತಾಯಿಗೆ ಹಲ್ಲೆ ಮಾಡಿ, ಹುಡುಗಿಯನ್ನು ಎಳೆದೊಯ್ದು ಆಕೆಯ ರುಂಡವನ್ನೇ ಕತ್ತರಿಸಿಬಿಟ್ಟಿದ್ದನು. ನಂತರ ರುಂಡವನ್ನು ಕಾಡಿನಲ್ಲಿ ಬಿಸಾಕಿ ತನ್ನ ಮನೆ ಸೇರಿ ಕೋವಿ ಹಿಡಿದುಕೊಂಡು ಕಾಡಿಗೆ ಪರಾರಿಯಾಗಿದ್ದನು.
ಪೊಲೀಸರು ಆರೋಪಿಗಾಗಿ ನಿನ್ನೆಯಿಂದ ಹುಡುಕಾಟ ಶುರು ಮಾಡಿದ್ದು, ಆರೋಪಿ ಸುಳಿವು ಸಿಕ್ಕಿರಲಿಲ್ಲ. ಕೋವಿ ಹಿಡಿದು ಕಾಡಿಗೆ ಹೋಗಿದ್ದ ಆರೋಪಿಗಾಗಿ ರಾತ್ರಿ ವೇಳೆ ಶೋಧ ನಡೆಸುವುದು ಸುಲಭವಲ್ಲ ಎಂದು ಹುಡುಕಾಟ ನಿಲ್ಲಿಸಿದ್ದರು. ಆದರಿಂದ ಆರೋಪಿ ಪ್ರಕಾಶ ಕಾಡಿನಲ್ಲಿ ಪತ್ತೆಯಾಗಿದ್ದಾನೆ. ಸದ್ಯ ಆತನನ್ನು ಸೋಮವಾರ ಪೇಟೆ ಪೊಲೀಸರು ಬಂಧಿಸಿದ್ದಾನೆ. ಸದ್ಯ ಆತನ ವಿಚಾರಣೆ ನಡೆಯುತ್ತಿದೆ. ಬಾಲಕಿ 16 ವರ್ಷ ವಯಸ್ಸಿನವಳಾಗಿದ್ದು, ಎಸ್ ಎಸ್ ಎಲ್ ಸಿ ಓದುತ್ತಿದ್ದಳು. ಇಡೀ ಶಾಲೆಯಲ್ಲಿ ಆಕೆಯೊಬ್ಬಳೇ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದ ಕಾರಣ, ಆಕೆಯ ಮೇಲೆ ಶಿಕ್ಷಕರಿಗೆ ಬೆಟ್ಟದಷ್ಟು ನಿರೀಕ್ಷೆಯಿತ್ತು. ಎಲ್ಲರ ನಿರೀಕ್ಷೆಯಂತೆ ಆಕೆ ಪರೀಕ್ಷೆ ಬರೆದು ಪಾಸ್ ಕೂಡ ಆಗಿದ್ದಳು. ಆದರೆ ಅದೇ ದಿನ ಪ್ರಕಾಶನ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡ ಅವಳು, ಸಂಜೆ ವೇಳೆಗೆ ಹೆಣವಾಗಿದ್ದಾಳೆ.
ಸದ್ಯ ಆರೋಪಿ ಪ್ರಕಾಶ ಪೊಲೀಸರ ವಶದಲ್ಲಿದ್ದಾನೆ. ಆರೋಪಿ 16ರ ಬಾಲಕಿಯನ್ನು ಕೊಲೆ ಮಾಡಲು ನೈಜ್ಯ ಕಾರಣವೇನು? ರುಂಡವನ್ನು ಎಲ್ಲಿ ಬಿಸಾಕಿದ್ದಾನೆ? ಎಂಬುದು ತನಿಖೆ ವೇಳೆ ಬೆಳಕಿಗೆ ಬರಲಿದೆ. ಅತ್ತ ಬಾಲಕಿ ಪೋಷಕರು ರುಂಡ ಸಿಗದೆ ಬಾಲಕಿಯ ಅಂತ್ಯಕ್ರಿಯೆ ಮಾಡಲ್ಲ ಎಂದು ಹೇಳಿದ್ದಾರೆ. ಸದ್ಯ ಆರೋಪಿ ಅರೆಸ್ಟ್ ಆಗಿದ್ದು, ಆತ ಎಲ್ಲಿ ರುಂಡ ಎಸೆದಿದ್ದಾನೆ ಎಂಬುದು ವಿಚಾರಣೆ ವೇಳೆ ಬಾಯಿ ಬಿಡಬೇಕಿದೆ. ಬಳಿಕ ರುಂಡವನ್ನು ಹುಡುಕಾಡಿ ಬಾಲಕಿಯ ಅಂತ್ಯಕ್ರಿಯೆ ಮಾಡಲಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296