Subscribe to Updates
Get the latest creative news from FooBar about art, design and business.
- ಹಿರಿಯ ಪತ್ರಕರ್ತೆ, ಜಿ.ಪಂ. ಮಾಜಿ ಅಧ್ಯಕ್ಷೆ ಕಮಲಾ ಗಂಗಹನುಮಯ್ಯ ವಿಧಿವಶ
- ಸರಗೂರಿನಲ್ಲಿ ಅಕ್ರಮ ಕೇರಳ ಲಾಟರಿ ದಂಧೆ ಜಾಲ ಪತ್ತೆ: ಇಬ್ಬರು ಆರೋಪಿಗಳ ಬಂಧನ, 1.44 ಲಕ್ಷ ಮೌಲ್ಯದ ಟಿಕೆಟ್ ವಶ
- ಜ್ಞಾನ ಪ್ರಕಾಶ್ ಸ್ವಾಮೀಜಿ ಜನ್ಮದಿನ ಆಚರಣೆ ಅಂಗವಾಗಿ ಮಕ್ಕಳಿಗೆ ನೋಟ್ ಬುಕ್ ವಿತರಣೆ
- ಪ.ಪಂ. ಮಾಜಿ ಅಧ್ಯಕ್ಷ ಸರಗೂರು ಶಿವಣ್ಣ ಅವರ 63ನೇ ಜನ್ಮದಿನಾಚರಣೆ
- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ: ಪ್ರವೇಶಾತಿಗೆ ಅರ್ಜಿ ಆಹ್ವಾನ
- ಗೋನೆಗಾರರು ಕೇರಾ ಸುರಕ್ಷಾ ವಿಮಾ ಯೋಜನೆ ಪ್ರಯೋಜನೆ ಪಡೆಯಲು ತೋಟಗಾರಿಕೆ ಇಲಾಖೆ ಮನವಿ
- 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ
- ತುಮಕೂರು: ಗಾಂಜಾ ಸಾಗಣೆ: ಅಪರಾಧಿಗೆ 4 ವರ್ಷ ಕಠಿಣ ಶಿಕ್ಷೆ; ದಂಡ
Author: admin
ಬೆಂಗಳೂರು: ವೀಡಿಯೋ ಚಿತ್ರೀಕರಣ ಮಾಡಲು ನಿರ್ಭಂಧಿತ ಪ್ರದೇಶ ಆಗಿದ್ದರೂ ಯೂಟ್ಯೂಬರ್ ಒಬ್ಬ ಏರ್ ಪೋರ್ಟ್ನ ನಿರ್ಭಂಧಿತ ಪ್ರದೇಶದಲ್ಲಿ ವೀಡಿಯೋ ಚಿತ್ರೀಕರಣ ಮಾಡಿ ಯೂಟ್ಯೂಬ್ ಚಾನಲ್ ನಲ್ಲಿ ವೀಡಿಯೋ ಹಂಚಿಕೊಂಡಿದ್ದಾನೆ. ಇದೀಗ ಆ ಯೂಟ್ಯೂಬರ್ ನನ್ನು ಏರ್ ಪೋರ್ಟ್ ಪೊಲೀಸರು ಬಂಧಿಸಿದ್ದು ಆತನ ವಿರುದ್ದ ಎಫ್ ಐಆರ್ ದಾಖಲಿಸಿದ್ದಾರೆ. ವಿಕಾಸ್ ಗೌಡ ಬಂಧಿತ ವ್ಯಕ್ತಿಯಾಗಿದ್ದು, ಯಲಹಂಕ ಮೂಲದವನಾಗಿದ್ದಾನೆ. ವಿಮಾನದಲ್ಲಿ ಪ್ರಯಾಣಿಸಲು ಟಿಕೇಟ್ ಖರೀದಿಸಿ ವಿಮಾನ ನಿಲ್ದಾಣಕ್ಕೆ ಪ್ರವೇಶಿಸಿದ್ದ ವಿಕಾಸ್, ವಿಮಾನದಲ್ಲಿ ಪ್ರಯಾಣಿಸದೇ ಸುಮಾರು ನಾಲ್ಕೈದು ಗಂಟೆಗಳ ಕಾಲ ಏರ್ಪೋರ್ಟ್ನಲ್ಲೇ ಇದ್ದುಕೊಂಡು ವೀಡಿಯೋ ಚಿತ್ರೀಕರಣಕ್ಕೆ ನಿರ್ಬಂಧಿತ ಪ್ರದೇಶವಾದ ರನ್ ವೇ ಚಿತ್ರೀಕರಿಸಿದ್ದಾನೆ, ಚಿತ್ರೀಕರಿಸಿದ್ದಲ್ಲದೇ ತನ್ನ ಯೂಟ್ಯೂಬ್ ಚಾನಲ್ ನಲ್ಲೂ ಹಂಚಿಕೊಂಡಿದ್ದ. ಈ ವೀಡಿಯೋ ಹಂಚಿಕೊಳ್ಳುವಾಗ ವಿಮಾನ ನಿಲ್ದಾಣಕ್ಕೆ ಟಿಕೇಟ್ ಖರೀದಿಸದೇ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಣ್ತಪ್ಪಿಸಿ ಪ್ರವೇಶಿಸಿರುವುದಾಗಿ ಮತ್ತು ಕಳೆದ 24 ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲೇ ಇದ್ದೆ ಎಂದಿದ್ದಾನೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಅಧಿಕಾರಿಗಳು ಈ ವೀಡಿಯೋವನ್ನು ಖುದ್ದು ವೀಕ್ಷಿಸಿ ವಿಕಾಸ್…
ತುಮಕೂರು: ಜಿಲ್ಲೆಯ ಪಾವಗಡ ತಾಲೂಕು ನಿಡಗಲ್ಲು ಹೋಬಳಿ ಮತ್ತು ಗ್ರಾಮದಲ್ಲಿ ಮೊದಲನೇ ಬಾರಿಗೆ ಭಾರತ ರತ್ನ, ಸಂವಿಧಾನ ಶಿಲ್ಪಿ, ವಿಶ್ವ ನಾಯಕ, ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಅವರ 133 ನೇ ಜಯಂತಿಯನ್ನು ಆಚರಿಸಲಾಯಿತು. ಪರಿಶಿಷ್ಟ ಸಮುದಾಯದ ಎಲ್ಲಾ ಮನೆಗಳಿಗೂ ಬುದ್ಧ, ಡಾ.ಬಿ ಆರ್. ಅಂಬೇಡ್ಕರ್ ಅವರ ಫೋಟೋ ತೆಗೆದುಕೊಂಡು ಹೋಗಿ ಸಂವಿಧಾನದ ಪೀಠಿಕೆ ಪ್ರತಿಜ್ಞೆ ಮಾಡುವ ಮುಖಾಂತರ ಸರಳವಾಗಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸರ್ಕಲ್ ಇನ್ಸ್ಪೆಕ್ಟರ್ ಎಸ್.ಆರ್.ರಾಘವೇಂದ್ರ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು. ಭಾರತೀಯ ಪರಿವರ್ತನ ಸಂಘ ತುಮಕೂರು ಜಿಲ್ಲಾಧ್ಯಕ್ಷರಾದ ಚಿಕ್ಕತಿಮ್ಮನಹಟ್ಟಿ ಗ್ರಾಮದ ಎಚ್.ಕೆಂಚರಾಯ ಮಾತನಾಡಿ, ಭಾರತದಲ್ಲಿ ಶಿಕ್ಷಣ ವ್ಯವಸ್ಥೆ ಸಂವಿಧಾನಕ್ಕಿಂತ ಮುಂಚೆ ಹೇಗಿತ್ತು, ಯಾರೆಲ್ಲಾ ವಿದ್ಯಾಭ್ಯಾಸ ಪಡೆಯುತ್ತಿದ್ದರು ಹಾಗೂ ವೋಟಿನ ಹಕ್ಕನ್ನು ಬಾಬಾ ಸಾಹೇಬರು ಮಹಿಳೆಯರನ್ನು ಒಳಗೊಂಡಂತೆ ಎಲ್ಲಾ ಸಮುದಾಯದ ಜನರಿಗೂ ತಂದುಕೊಡಲು 1918 ರಿಂದ 1932ರವರೆಗೆ ಹೋರಾಟ ಮಾಡಿದ ಪರಿಣಾಮ 1935 ರ ಕಾಯ್ದೆಯಲ್ಲಿ ಎಲ್ಲರಿಗೂ ಓಟಿನ ಹಕ್ಕು ದೊರೆಯಿತು ಹಾಗೂ ವೋಟಿನ ಮಹತ್ವವನ್ನು ತಿಳಿಸಿದರು.…
ನವದೆಹಲಿ: ಅಯೋಧ್ಯೆಯಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಬಳಿಕ ಮೊದಲ ರಾಮನವಮಿ ಬಂದಿದೆ. ಇಂದು ರಾಮನವಮಿ ಹಿನ್ನೆಲೆಯಲ್ಲಿ ಬಾಲರಾಮನ ಕಣ್ತುಂಬಿಕೊಳ್ಳಲು ದೇಶದ ಹಲವೆಡೆಯಿಂದ ಭಕ್ತ ಸಾಗರವೇ ಹರಿದುಬಂದಿದೆ. ಈ ದಿನದ ವಿಶೇಷ ಎಂಬಂತೆ ಇಂದು ಮಧ್ಯಾಹ್ನ 12:16ರ ಸುಮಾರಿಗೆ ಸೂರ್ಯಕಿರಣಗಳು ಬಾಲರಾಮನ ಮೂರ್ತಿಗೆ ಮುತ್ತಿಕ್ಕಲಿವೆ. ಸುಮಾರು 5 ನಿಮಿಷಗಳ ಕಾಲ ಸೂರ್ಯ ರಶ್ಮಿ ಬಾಲರಾಮನ ಮೇಲಿರಲಿದೆ. ಸುಮಾರು 17 ಲಕ್ಷ ಭಕ್ತರು ಅಯೋಧ್ಯೆಯತ್ತ ಬರುವ ನಿರೀಕ್ಷೆಯಿದೆ. ಹೀಗಾಗಿ ಮಂದಿರದ ವಿವಿಐಪಿ ಹಾಗೂ ವಿಐಪಿ ದರ್ಶನ ರದ್ದು ಮಾಡಲಾಗಿದೆ. ಬೆಳಗ್ಗೆ 3:30ರಿಂದ ರಾತ್ರಿ 11 ಗಂಟೆಯವರೆಗೆ ನಿರಂತರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಬೆಂಗಳೂರು: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದೆ. ಇದರಿಂದಾಗಿ ಪ್ರವಾಸೋದ್ಯಮಕ್ಕೂ ಭಾರೀ ಹೊಡೆತ ನೀಡುತ್ತಿದೆ. ವಿಶ್ವ ಪರಂಪರೆಯ ತಾಣವಾದ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಭಾರೀ ಇಳಿಕೆಯಾಗಿದೆ. 10 ವರ್ಷಗಳಲ್ಲೇ ಅತೀ ಕಡಿಮೆ ಪ್ರವಾಸಿಗರು ಹಂಪಿಗೆ ಭೇಟಿ ನೀಡುತ್ತಿದ್ದಾರೆ. ಸಾಮಾನ್ಯವಾಗಿ ದಿನಕ್ಕೆ 5,000 ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಇದೀಗ ಈ ಸಂಖ್ಯೆ ಕೇವಲ 150ಕ್ಕೆ ಇಳಿಕೆಯಾಗಿದೆ. ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆಯಾಗಿರುವುದರಿಂದ ಮಾರಾಟಗಾರರು, ಸಣ್ಣ ಅಂಗಡಿಗಳ ವರ್ತಕರ ಜೀವನೋಪಾಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಇಲ್ಲಿನ ಹೊಟೇಲ್ ಉದ್ಯಮದ ಮೇಲೆ ಕೂಡ ಇದು ಪರಿಣಾಮ ಬೀರಿದೆ. ಹಂಪಿಯ ಹೋಟೆಲ್ ಗಳಲ್ಲಿ ಕೊಠಡಿ ಬುಕಿಂಗ್ ಶೇಕಡಾ 20 ಕ್ಕೆ ಕುಸಿದಿದೆ. ಸಾಮಾನ್ಯವಾಗಿ ನಮ್ಮಲ್ಲಿರುವ 200 ಕೊಠಡಿಗಳಲ್ಲಿ 180 ಕೊಠಡಿಗಳು ಭರ್ತಿಯಾಗುತ್ತಿದ್ದವು. ಈಗ ಅವುಗಳಲ್ಲಿ ಕೇವಲ 30 ಬುಕ್ ಆಗಿವೆ ಎಂದು ಹೊಟೇಲ್ ಮಾಲಿಕರು ಹೇಳುತ್ತಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.…
ಬೆಂಗಳೂರು: ಬಿರು ಬಿಸಿಲಿನ ಹಿನ್ನೆಲೆಯಲ್ಲಿ ಜಿಲ್ಲಾ, ವಿಚಾರಣಾಧೀನ ನ್ಯಾಯಾಲಯಗಳಲ್ಲಿ ವಕೀಲರು ‘ಕಪ್ಪು ಕೋಟ್’ ಧರಿಸುವುದರಿಂದ ಹೈಕೋರ್ಟ್ ವಿನಾಯಿತಿ ನೀಡಿದೆ. ಏಪ್ರಿಲ್ 18 ರಿಂದ ಮೇ 31, 2024 ರವರೆಗೆ ಬೇಸಿಗೆ ಅವಧಿಯಲ್ಲಿ ವಿಚಾರಣೆಗೆ ಹಾಜರಾಗುವಾಗ ರಾಜ್ಯಾದ್ಯಂತ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಲ್ಲಿ ಅಭ್ಯಾಸ ಮಾಡುವ ವಕೀಲರಿಗೆ ಕಪ್ಪು ಕೋಟ್ ಧರಿಸುವುದರಿಂದ ಕರ್ನಾಟಕ ಹೈಕೋರ್ಟ್ ವಿನಾಯಿತಿ ನೀಡಿದೆ. ಬದಲಾಗಿ, ವಕೀಲರು ಯಾವುದೇ ಸಮಚಿತ್ತದ ಬಿಳಿ ಶರ್ಟ್ / ಬಿಳಿ ಸಲ್ವಾರ್ ಕಮೀಜ್ / ಯಾವುದೇ ಸಮಚಿತ್ತದ ಬಣ್ಣದ ಸೀರೆಯನ್ನು ಧರಿಸಬಹುದು. ಸಾಮಾನ್ಯ ನಿಗದಿತ ಉಡುಪಿನ ಬದಲಿಗೆ ಸಾದಾ ಬಿಳಿ ನೆಕ್ ಬ್ಯಾಂಡ್‌ಗಳನ್ನು ಧರಿಸಬಹುದು ಎಂದು ಹೈಕೋರ್ಟ್ ನ ರಿಜಿಸ್ಟ್ರಾರ್ ಜನರಲ್ ಕೆಎಸ್ ಭರತ್ ಕುಮಾರ್ ಅವರು ಮಂಗಳವಾರದಂದು ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಮಧುಗಿರಿ: ಪಟ್ಟಣದ ಏಕಶಿಲಾ ಬೆಟ್ಟದ ತಪ್ಪಲಿನಲ್ಲಿರುವ ಶ್ರೀಕೋಟೆ ಕೋದಂಡರಾಮಸ್ವಾಮಿ ದೇವಸ್ಥಾನದಲ್ಲಿ ರಾಮೋತ್ಸವದ ಅಂಗವಾಗಿ ಏ.17 ರ ಬುಧವಾರ ಬೆಳಿಗ್ಗೆ ಶ್ರೀ ಸ್ವಾಮಿ ಅವರಿಗೆ ಪಂಚಾಮೃತ ಅಭಿಷೇಕ, ಅಲಂಕಾರ, ಅರ್ಚನೆ, ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ಇರುತ್ತದೆ. ಶ್ರೀ ರಾಮನವಮಿ ಅಂಗವಾಗಿ ಸಂಜೆ ಬೆಂಗಳೂರಿನ ಪ್ರಶಾಂತ ಭಾರ್ಗವ ಅವರಿಂದ ಭಕ್ತಿಗೀತೆಗಳ ಕಾರ್ಯಕ್ರಮ ಇರುತ್ತದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಸಕಾಲದಲ್ಲಿ ಭಾಗವಹಿಸಿ, ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ಭಕ್ತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ವರ್ಣಾ ಅಲಂಕಾರ: ಮಧುಗಿರಿ ಪಟ್ಟಣದಲ್ಲಿರುವ ಸರ್ವ ಜನಾಂಗದ ಭಕ್ತಾದಿಗಳ ಸಹಕಾರದೊಂದಿಗೆ ದೇವಸ್ಥಾನದ ಗೋಪುರ, ಪ್ರಾಂಗಣ, ಒಳಭಾಗದಲ್ಲಿ ವರ್ಣ ಅಲಂಕಾರ ಮಾಡಿ ವಿಶೇಷ ಮೆರಗು ಬಂದಿದೆ. ಬ್ರಹ್ಮರಥೋತ್ಸವ: ಮಧುಗಿರಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ರಸ್ತೆಯಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿಗೆ ಏಪ್ರಿಲ್ 17ರಿಂದ 20ರ ವರೆಗೂ ಬ್ರಹ್ಮರಥೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಏ.8 ಗುರುವಾರ ರಂದು ಮಧ್ಯಾಹ್ನ 12:30ಕ್ಕೆ ಬ್ರಹ್ಮರಥೋತ್ಸವ ನಡೆಯಲಿದೆ ಬ್ರಹ್ಮರಥೋತ್ಸವ: ಮಧುಗಿರಿ ಇತಿಹಾಸ ಪ್ರಸಿದ್ಧ ಶ್ರೀ ಪ್ರಸನ್ನ ಪಾರ್ವತಿ…
ದ್ವಾರಕೀಶ್ ಅವರ ಮೂಲ ಹೆಸರು ಬುಂಗ್ಲೆ ಶರ್ಮಾ ರಾವ್. ಸ್ಯಾಂಡಲ್ ವುಡ್ ನ ನಿರ್ಮಾಪಕ ಮತ್ತು ನಿರ್ದೇಶಕರಾಗಿದ್ದ ಸಿ.ವಿ.ಶಿವಶಂಕರ್ ಅವರು ಬುಂಗ್ಲೆ ಶರ್ಮಾ ರಾವ್ ಗೆ ದ್ವಾರಕೀಶ್ ಎಂದು ಹೆಸರಿಟ್ಟಿದ್ದರು. ಸ್ಯಾಂಡಲ್ ವುಡ್ ನ ಪ್ರಚಂಡ ಕುಳ್ಳ ದ್ವಾರಕೀಶ್ ಅವರು ಮೈಸೂರಿನ ಇಟ್ಟಿಗೆಗೂಡುವಿನಲ್ಲಿ 1942ರ ಆಗಸ್ಟ್ 19ರಂದು ಜನಿಸಿದರು. ಆರಂಭಿಕ ಶಿಕ್ಷಣವನ್ನು ಶಾರದಾ ವಿಲಾಸ್ ಮತ್ತು ಬಾನುಮಯ್ಯ ಸ್ಕೂಲ್ ನಲ್ಲಿ ಪಡೆದರು. ಸಿಪಿಸಿ ಪಾಲಿಟೆಕ್ನಿಕ್ ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ ಪಡೆದರು. ಶಿಕ್ಷಣ ಪೂರ್ಣಗೊಂಡ ಬಳಿಕ ಇವರ ಸಹೋದರ ವಾಹನ ಬಿಡಿಭಾಗಗಳ ಬಿಸ್ನೆಸ್ ಆರಂಭಿಸಿದರು. ಭಾರತ್ ಆಟೋ ಸ್ಪೇರ್ ಹೆಸರಿನ ಶಾಪ್ ಅನ್ನು ಮೈಸೂರಿನಲ್ಲಿ ತೆರೆದಿದ್ದರು. ಮಾವ ಹುಣಸೂರು ಕೃಷ್ಣಮೂರ್ತಿ ನೆರವಿನಿಂದ ಸಿನಿಮಾರಂಗ ಪ್ರವೇಶಿಸಿದರು. 24ನೇ ವರ್ಷದಲ್ಲಿ ಪ್ರೊಡ್ಯುಸರ್: ದಿವಂಗತ ದ್ವಾರಕೀಶ್ ಅವರು ತನ್ನ 24ನೇ ವಯಸ್ಸಿನಲ್ಲಿ ನಿರ್ಮಾಪಕರಾದರು. 1966ರಲ್ಲಿ ಇವರು ಮಮತೆಯ ಬಂಧನ ಎಂಬ ಸಿನಿಮಾದ ಸಹ ನಿರ್ಮಾಪಕರಾದರು. ತುಂಬಾ ಫಿಕ್ಚರ್ಸ್ ನಡಿ ಈ ಸಿನಿಮಾ ತೆರೆಕಂಡಿತ್ತು. ಇದಾದ…
ಬೆಂಗಳೂರು: ಸ್ಯಾಂಡಲ್ ವುಡ್ ನ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ನಿಧನಕ್ಕೆ ಸಂಬಂಧಪಟ್ಟಂತೆ ಒಂದು ಕಾಕಾತಾಳೀಯ ಅಂಶ ಬಹಿರಂಗಗೊಂಡಿದೆ. ತಮ್ಮ ಪತ್ನಿ ದೈವಾದೀನರಾದ ದಿನದಂದೇ ದ್ವಾರಕೀಶ್ ನಿಧನರಾಗಿದ್ದಾರೆ. ದ್ವಾರಕೀಶ್ ಪತ್ನಿ ಅಂಬುಜಾ ಅವರು 2021ರ ಏಪ್ರಿಲ್ 16ರಂದು ಮೃತಪಟ್ಟಿದ್ದರು. ಇದಾಗಿ ಮೂರು ವರ್ಷಗಳ ಬಳಿಕ ಇದೇ ದಿನಾಂಕದಂದು ದ್ವಾರಕೀಶ್ ನಿಧನರಾಗಿದ್ದಾರೆ. ದ್ವಾರಕೀಶ್ ಮತ್ತು ಅಂಬುಜಾ ಅವರ ವಿವಾಹ 1967ರಲ್ಲಿ ನಡೆದಿತ್ತು. ಮೂರು ವರ್ಷದ ಹಿಂದೆ ಅಂಬುಜಾ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದರು. ಇದೀಗ ಪತ್ನಿ ಮೃತಪಟ್ಟ ದಿನದಂದೇ ದ್ವಾರಕೀಶ್ ಮೃತಪಟ್ಟ ಘಟನೆಯು ಅಚ್ಚರಿ ತಂದಿದೆ. ಶ್ಯಾಮರಾವ್ ಮತ್ತು ಜಯಮ್ಮರ ಪುತ್ರ ದ್ವಾರಕೀಶ್ ಅವರು ಚಿತ್ರರಂಗಕ್ಕೆ ಆಗಮಿಸಲು ಸೋದರ ಮಾವ ಹುಣಸೂರು ಕೃಷ್ಣಮೂರ್ತಿ ಕಾರಣವಾಗಿದ್ದರು. ದ್ವಾರಕೀಶ್ ಗೆ ಶೈಲಜಾ ಎಂಬ ಇನ್ನೊಬ್ಬರು ಪತ್ನಿಯೂ ಇದ್ದಾರೆ. “ನಾನು ಅಂಬುಜಾ ಮತ್ತು ಶೈಲಾಜಾ ಜತೆಜತೆಗೆ ಇದ್ದೇನೆ. ನನ್ನ ಜೀವನ ಹೀಗೆಯೇ ಸಾಗುತ್ತಿದೆ” ಎಂದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ದ್ವಾರಕೀಶ್ ಹೇಳಿದ್ದರು. “ನಾನು ಜೀವನದಲ್ಲಿ ಎರಡು…
ಬೆಂಗಳೂರು:ದಂಪತಿಗಳು ಬೈಕ್ ಹಿಂಬಾಗದಲ್ಲಿ ಮಗುವನ್ನು ಫೂಟ್ ರೆಸ್ಟ್ ಮೇಲೆ ನಿಲ್ಲಿಸಿ ಪ್ರಯಾಣಿಸುತಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ವೈಟ್ಫೀಲ್ಡ್ ನ ಮುಖ್ಯರಸ್ತೆಯಲ್ಲಿ ದಂಪತಿಗಳು ಬೈಕ್ ನಲ್ಲಿ ತೆರಳುತ್ತಿದ್ದರು. ಈ ದೃಶ್ಯವನ್ನ ಹಿಂಬದಿಯಲ್ಲಿ ಬರುತ್ತಿದ್ದ ವಾಹನದಲ್ಲಿದ್ದವರು ಸೆರೆ ಹಿಡಿದಿದ್ದಾರೆ. ಸದ್ಯ ಬೈಕ್ ನಂಬರ್ ಬರೆದು, ವಿಡಿಯೋವನ್ನು ಪೋಸ್ಟ್ ಅನ್ನು ಎಕ್ಸ್ನಲ್ಲಿ ಶೇರ್ ಮಾಡಲಾಗಿದೆ. ದಂಪತಿಗಳು ಮಗುವನ್ನ ಬೈಕ್ ನಲ್ಲಿ ಕರೆದುಕೊಂಡು ಹೋಗುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA
ಸರಗೂರು: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ಸದುಪಯೋಗವನ್ನು ನಾವು ಪಡೆದುಕೊಳ್ಳುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪರ ಕಾರ್ಯಕ್ರಮಗಳನ್ನು ಒಪ್ಪಿಕೊಂಡಿದ್ದೇವೆ. ಹಾಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಸುನೀಲ್ ಬೋಸ್ ಗೆ ಹೆಚ್ಚು ಮತಗಳನ್ನು ನೀಡಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು. ಹಂಚೀಪುರ,ಮುಳ್ಳೂರು.ಕೆ ಬೆಳತ್ತೂರು ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯಲ್ಲಿ ಮಂಗಳವಾರ ದಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಭೆಯನ್ನು ಹಮ್ಮಿಕೊಂಡಿದ್ದು,ಗಣ್ಯರು ಜ್ಯೋತಿ ಬೆಳಗಿಸಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ನಾನು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ ವೇಳೆ ನೀಡಿದ ಮತಗಳಗಿಂತ ಹೆಚ್ಚಿನ ಮತಗಳನ್ನು ಸುನೀಲ್ ಬೋಸ್ ರವರಿಗೆ ನೀಡಬೇಕು.ಆರ್ಭ್ಯಥಿಯಾದ ಸುನೀಲ್ ಬೋಸ್ ರವರು ಸ್ಪರ್ಧಿಸಿರುವ ಕ್ಷೇತ್ರದಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿದ್ದು.ಎಲ್ಲಿ ಕ್ಷೇತ್ರಗಳಿಗಿಂತ ನಮ್ಮ ಕ್ಷೇತ್ರದಲ್ಲಿ ಹೆಚ್ಚು ಮತಗಳನ್ನು ನೀಡಲಾಗುವುದು ಎಂದರು. ಚಾಮರಾಜನಗರ ಲೋಕಸಭಾ ಕ್ಷೇತ್ರದ ಮೀಸಲು ಆರ್ಭ್ಯಥಿ ಸುನೀಲ್ ಬೋಸ್ ಮಾತನಾಡಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಪ್ರಚಾರ ಮಾಡಿ ಈ ಕ್ಷೇತ್ರದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅನಿಲ್ ಚಿಕ್ಕಮಾದು…