ಬೆಂಗಳೂರು: ವೀಡಿಯೋ ಚಿತ್ರೀಕರಣ ಮಾಡಲು ನಿರ್ಭಂಧಿತ ಪ್ರದೇಶ ಆಗಿದ್ದರೂ ಯೂಟ್ಯೂಬರ್ ಒಬ್ಬ ಏರ್ ಪೋರ್ಟ್ನ ನಿರ್ಭಂಧಿತ ಪ್ರದೇಶದಲ್ಲಿ ವೀಡಿಯೋ ಚಿತ್ರೀಕರಣ ಮಾಡಿ ಯೂಟ್ಯೂಬ್ ಚಾನಲ್ ನಲ್ಲಿ ವೀಡಿಯೋ ಹಂಚಿಕೊಂಡಿದ್ದಾನೆ. ಇದೀಗ ಆ ಯೂಟ್ಯೂಬರ್ ನನ್ನು ಏರ್ ಪೋರ್ಟ್ ಪೊಲೀಸರು ಬಂಧಿಸಿದ್ದು ಆತನ ವಿರುದ್ದ ಎಫ್ ಐಆರ್ ದಾಖಲಿಸಿದ್ದಾರೆ. ವಿಕಾಸ್ ಗೌಡ ಬಂಧಿತ ವ್ಯಕ್ತಿಯಾಗಿದ್ದು, ಯಲಹಂಕ ಮೂಲದವನಾಗಿದ್ದಾನೆ.
ವಿಮಾನದಲ್ಲಿ ಪ್ರಯಾಣಿಸಲು ಟಿಕೇಟ್ ಖರೀದಿಸಿ ವಿಮಾನ ನಿಲ್ದಾಣಕ್ಕೆ ಪ್ರವೇಶಿಸಿದ್ದ ವಿಕಾಸ್, ವಿಮಾನದಲ್ಲಿ ಪ್ರಯಾಣಿಸದೇ ಸುಮಾರು ನಾಲ್ಕೈದು ಗಂಟೆಗಳ ಕಾಲ ಏರ್ಪೋರ್ಟ್ನಲ್ಲೇ ಇದ್ದುಕೊಂಡು ವೀಡಿಯೋ ಚಿತ್ರೀಕರಣಕ್ಕೆ ನಿರ್ಬಂಧಿತ ಪ್ರದೇಶವಾದ ರನ್ ವೇ ಚಿತ್ರೀಕರಿಸಿದ್ದಾನೆ, ಚಿತ್ರೀಕರಿಸಿದ್ದಲ್ಲದೇ ತನ್ನ ಯೂಟ್ಯೂಬ್ ಚಾನಲ್ ನಲ್ಲೂ ಹಂಚಿಕೊಂಡಿದ್ದ.
ಈ ವೀಡಿಯೋ ಹಂಚಿಕೊಳ್ಳುವಾಗ ವಿಮಾನ ನಿಲ್ದಾಣಕ್ಕೆ ಟಿಕೇಟ್ ಖರೀದಿಸದೇ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಣ್ತಪ್ಪಿಸಿ ಪ್ರವೇಶಿಸಿರುವುದಾಗಿ ಮತ್ತು ಕಳೆದ 24 ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲೇ ಇದ್ದೆ ಎಂದಿದ್ದಾನೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಅಧಿಕಾರಿಗಳು ಈ ವೀಡಿಯೋವನ್ನು ಖುದ್ದು ವೀಕ್ಷಿಸಿ ವಿಕಾಸ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಬಳಿಕ ಏರ್ಪೋರ್ಟ್ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದ್ದು ಎಫ್ಐಆರ್ ದಾಖಲಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296