Subscribe to Updates
Get the latest creative news from FooBar about art, design and business.
- ಹಿರಿಯ ಪತ್ರಕರ್ತೆ, ಜಿ.ಪಂ. ಮಾಜಿ ಅಧ್ಯಕ್ಷೆ ಕಮಲಾ ಗಂಗಹನುಮಯ್ಯ ವಿಧಿವಶ
- ಸರಗೂರಿನಲ್ಲಿ ಅಕ್ರಮ ಕೇರಳ ಲಾಟರಿ ದಂಧೆ ಜಾಲ ಪತ್ತೆ: ಇಬ್ಬರು ಆರೋಪಿಗಳ ಬಂಧನ, 1.44 ಲಕ್ಷ ಮೌಲ್ಯದ ಟಿಕೆಟ್ ವಶ
- ಜ್ಞಾನ ಪ್ರಕಾಶ್ ಸ್ವಾಮೀಜಿ ಜನ್ಮದಿನ ಆಚರಣೆ ಅಂಗವಾಗಿ ಮಕ್ಕಳಿಗೆ ನೋಟ್ ಬುಕ್ ವಿತರಣೆ
- ಪ.ಪಂ. ಮಾಜಿ ಅಧ್ಯಕ್ಷ ಸರಗೂರು ಶಿವಣ್ಣ ಅವರ 63ನೇ ಜನ್ಮದಿನಾಚರಣೆ
- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ: ಪ್ರವೇಶಾತಿಗೆ ಅರ್ಜಿ ಆಹ್ವಾನ
- ಗೋನೆಗಾರರು ಕೇರಾ ಸುರಕ್ಷಾ ವಿಮಾ ಯೋಜನೆ ಪ್ರಯೋಜನೆ ಪಡೆಯಲು ತೋಟಗಾರಿಕೆ ಇಲಾಖೆ ಮನವಿ
- 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ
- ತುಮಕೂರು: ಗಾಂಜಾ ಸಾಗಣೆ: ಅಪರಾಧಿಗೆ 4 ವರ್ಷ ಕಠಿಣ ಶಿಕ್ಷೆ; ದಂಡ
Author: admin
ವೈ.ಎನ್.ಹೊಸಕೋಟೆ: ವಿಕಸಿತ ಭಾರತಕ್ಕಾಗಿ ಮತ್ತೊಮ್ಮೆ ಬಿಜೆಪಿಯನ್ನು ಗೆಲ್ಲಿಸಿ ಎಂದು ಮಾಜಿ ಸಂಸದ ಜನಾರ್ದನ ಸ್ವಾಮಿ ತಿಳಿಸಿದರು. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ಗೋವಿಂದ ಕಾರಜೋಳ ಅವರ ಪರವಾಗಿ ಗ್ರಾಮದಲ್ಲಿಇಂದು ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾಮದ ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮತಯಾಚನೆ ಮಾಡಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಈ ಹತ್ತು ವರ್ಷಗಳ ಕಾಲ ಭಾರತ ದೇಶವನ್ನು ಕಟ್ಟಿ ಹೊಸದಾಗಿ ವಿಶ್ವದ ಮುಂದೆ ಅಭಿವೃದ್ಧಿ ಹೊಂದಿದ ದೇಶವೆಂದು ತೋರಿಸಿ ಕೊಟ್ಟ ಧೀಮಂತ ನಾಯಕರಾಗಿದ್ದಾರೆ. ಇವರು ಒಬ್ಬ ಸಾಮಾನ್ಯ ಬಡ ಕುಟುಂಬದವರು ಕೂಡಾ ಈ ದೇಶದ ಪ್ರಧಾನಿ ಆಗಬಹುದು ಎಂದು ತೋರಿಸಿಕೊಟ್ಟರು. ಹಾಗೇ ಅವರು ನೀಡಿದ ಅಭಿವೃದ್ಧಿ ಯೋಜನೆಯಿಂದಾಗಿ ಮೂರನೇ ಬಾರಿಗೆ 400 ಹೆಚ್ಚು ಲೋಕ ಸಭಾ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಮತಷ್ಟು ದೇಶವನ್ನು ಉನ್ನತ ಸ್ಥಾನದಲ್ಲಿ ನೋಡುವುದಾಗಿ ಮಾಧ್ಯಮದವರಿಗೆ ತಿಳಿಸಿದರು. ನಾನು ಸಂಸದನಾದ ಸಂದರ್ಭದಲ್ಲಿ ಭದ್ರಾ ಮೇಲ್ದಂಡೆ ಯೋಜನೆ, ಹಾಗೂ DRDO,ISRO ದಂತಹ ಶಾಶ್ವತ ಯೋಜನೆಗಳನ್ನು ಜಾರಿಗೆ…
ತುಮಕೂರು: ನಗರದ ಶ್ರೀ ಸಿದ್ದಗಂಗಾ ಫಾರ್ಮಸಿ ಕಾಲೇಜು ವತಿಯಿಂದ ಇತ್ತೀಚಿಗೆ ಜರಗಿದ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಶಿವಯೋಗಿಗಳವರ ಜಯಂತಿ ಮತ್ತು ವಿಶ್ವ ಆರೋಗ್ಯ ದಿನವನ್ನು ವಿಭಿನ್ನ ಹಾಗೂ ವಿನೂತನವಾಗಿ ಆಚರಿಸಲಾಯಿತು. ಶ್ರೀಗಳವರ 117 ಜಯಂತಿಯ ಪ್ರಯುಕ್ತ ಕಾಲೇಜಿನ ಸುತ್ತಮುತ್ತಲಿನ 117 ಮನೆಗಳಲ್ಲಿ ‘ಮನೆ ಔಷಧಿ ವಿಮರ್ಶೆ ಮತ್ತು ಆರೋಗ್ಯ ಜಾಗೃತಿ’ ಶೀರ್ಷಿಕೆ ಅಡಿಯಲ್ಲಿ ಮನೆ ಮನೆಗಳಲ್ಲಿ ಆರೋಗ್ಯ, ಔಷಧ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುರೇಶ ವಿ.ಕುಲಕರ್ಣಿರವರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಉತ್ತಮ ಆರೋಗ್ಯದ ಮಹತ್ವ ಬಗ್ಗೆ ವಿವರಿಸಿದರು. ಕಾರ್ಯಕ್ರಮದ ಉಸ್ತುವಾರಿಯನ್ನು ಡಾ.ಪಿ.ಅಶೋಕ್ ಕುಮಾರ್, ರವಿನಂದನ್ ಎ.ಪಿ. ಮತ್ತು ಡಾ.ನಂದಿನಿ ಎಂ.ಸ್ ವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಮನೆ-ಮನೆಗೆ ಭೇಟಿ ನೀಡಿದರು ಮತ್ತು ಅನೇಕ ಕ್ಲಿನಿಕಲ್ ಫಾರ್ಮಸಿ ಚಟುವಟಿಕೆಗಳನ್ನು ನಡೆಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್…
ಹಿರಿಯ ನಟ ದ್ವಾರಕೀಶ್ ಅವರ ಅಂತಿಮ ದರ್ಶನಕ್ಕೆ ನಾಳೆ ಬೆಳಗ್ಗೆ 7 ಗಂಟೆಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ದ್ವಾರಕೀಶ್ ಕುಟುಂಬಸ್ಥರು ತಿಳಿಸಿದ್ದಾರೆ. ನಾಳೆ ಏಳು ಗಂಟೆಯಿಂದ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದ್ದು, ನಂತರ ಚಾಮರಾಜಪೇಟೆಯ ಟಿಆರ್ ಮಿಲ್ ನಲ್ಲಿಅವರ ಅಂತ್ಯಕ್ರಿಯೆ ನೆರವೇರಿಸಲಾಗುತ್ತಿದೆ. ಈ ಕುರಿತಂತೆ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್, ದ್ವಾರಕೀಶ್ ಚಿತ್ರರಂಗದ ದೊಡ್ಡ ಆಸ್ತಿ. ಅವರ ಅಗಲಿಕೆ ಎಲ್ಲರಿಗೂ ತುಂಬಾ ನೋವಾಗಿದೆ. ಅವರು ಕೇವಲ ನಟರಲ್ಲ ನಿರ್ದೇಶಕ, ನಿರ್ಮಾಪಕ ಕೂಡ ಹೌದು. ಹಾಗಾಗಿ ನಾಳೆ ಚಿತ್ರರಂಗ ಬಂದ್ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ನಾಳೆ ಸ್ವಯಂಪ್ರೇರಿತವಾಗಿ ಬಂದ್ ಮಾಡಬೇಕು ಅಂತ ಕೇಳಿಕೊಳ್ತೀನಿ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA
ಲಕ್ಷ್ಮಿ ನಿವಾಸ ಸೀರಿಯಲ್ ನಲ್ಲಿ ಜಯಂತ್ ಸೈಕೋ ನಡವಳಿಕೆ ಕಳೆದ ಹಲವು ಸಂಚಿಕೆಗಳಲ್ಲಿ ವೀಕ್ಷಕರು ಗಮನಿಸುತ್ತಿದ್ದಾರೆ. ಜಯಂತ್ ತನ್ನ ಪತ್ನಿ ಕುರಿತು ವಿಪರೀತ ಪೊಸೆಸಿವ್ ನೆಸ್ ಬೆಳೆಸಿಕೊಂಡಿದ್ದಾನೆ. ಜಯಂತ್ ತನ್ನ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾನೆ. ಡಾಕ್ಟರ್ ಜಾಹ್ವವಿಯ ಮೈ ಮುಟ್ಟುವುದು ಜಯಂತ್ಗೆ ಅಸಹನೀಯ ಎಂದೆನಿಸಿದ್ದು, ಡಾಕ್ಟರ್ ಸ್ಕೇತಾಸ್ಕೋಪ್ ಅನ್ನು ಜಾಹ್ನವಿಯ ಎದೆಯಲ್ಲಿಟ್ಟು ಪರೀಕ್ಷಿಸಿದಾಗ ಜಯಂತ್ ಗೆ ಕಿರಿಕಿರಿಯಾಗಿದೆ. ಇದೇ ಸಮಯದಲ್ಲಿ ನಾಡಿ ಮಿಡಿತ ಟೆಸ್ಟ್ ಮಾಡಲು ಡಾಕ್ಟರ್ ಜಾಹ್ನವಿ ಕೈ ಹಿಡಿದುಕೊಂಡಾಗ ವಿಪರೀತ ಹಿಂಸೆ ಅನುಭವಿಸಿದ್ದಾನೆ ಜಯಂತ್. ಎಲ್ಲಾ ಟೆಸ್ಟ್ ಮಾಡಿದ ಬಳಿಕ “ನಾನು ಪ್ರಿಸ್ಕ್ರಿಪ್ಷನ್ ಬರೆದುಕೊಡ್ತಿನಿ, ಅದನ್ನ ಫಾಲೋ ಮಾಡಿ” ಎಂದು ವೈದ್ಯರು ಹೇಳುತ್ತಾರೆ. ಆಮೇಲೆ ಹುಷಾರು ಎಂದು ಜಾಹ್ವವಿಯ ಬೆನ್ನಮೇಲೆ ಡಾಕ್ಟರ್ ಕೈ ಇಟ್ಟಾಗ ಜಯಂತ್ ಉರಿದುಹೋಗಿದ್ದಾನೆ. ಪರೀಕ್ಷೆಯ ಬಳಿಕ ಹೊರಗೆ ಪತ್ನಿಯನ್ನು ಕುಳ್ಳಿರಿಸಿದ ಜಯಂತ್ “ನಾನು ಹೋಗಿ ಮಾತ್ರೆಗಳನ್ನು ತೆಗೆದುಕೊಂಡು ಬರ್ತೇನೆ” ಎಂದು ನೇರವಾಗಿ ಡಾಕ್ಟರ್ ರೂಂಗೆ ನುಗ್ಗಿದ್ದಾನೆ. “ನನ್ನ ಬಿಟ್ಟು ಬೇರೆ ಯಾರೂ ಅವರ…
ಪಾವಗಡ: ಸಮರ್ಪಕ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಸೋಮವಾರ ಬೆಸ್ಕಾಂ ಎಇಇ ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ತಾಲ್ಲೂಕು ಅಧ್ಯಕ್ಷ ಪೂಜಾರಪ್ಪ ಮಾತನಾಡಿ, ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ರೈತರ ಕೃಷಿ ಕಾರ್ಯಕ್ಕೆ ಹಿನ್ನಡೆಯಾಗುತ್ತಿದೆ. ಸಮರ್ಪಕವಾಗಿ ವಿದ್ಯುತ್ ಪೂರೈಸದಿರುವುದರಿಂದ ರೈತರ ಬೆಳೆಗಳು ಒಣಗುತ್ತಿವೆ. ಶೈಲಾಪುರ ಸಬ್ ಸ್ಟೇಷನ್ ನಲ್ಲಿ ಸರ್ಕಾರ ನಿಗದಿ ಮಾಡಿರುವ ವೇಳಾಪಟ್ಟಿಯಂತೆ 3 ಪೇಸ್ 8 ಗಂಟೆ, ಸಿಂಗಲ್ ಪೇಸ್ 6 ಗಂಟೆ ವಿದ್ಯುತ್ ನೀಡದೇ ತಮಗೆ ಇಷ್ಟ ಬಂದ ಹಾಗೆ ವಿದ್ಯುತ್ ಸರಬರಾಜು ಮಾಡುತ್ತಿರುವ ಬೆಸ್ಕಾಂ ಇಲಾಖೆ ರೈತರ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು. ಮುಖಂಡ ಎತ್ತಿನಹಳ್ಳಿ ಚಿನ್ನ ಮಾತನಾಡಿ, ರೈತರ ಪಂಪ್‌ಸೆಟ್‌ಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ರೈತರು ಹೊಲಗದ್ದೆಗಳಲ್ಲಿ ಶೇಂಗಾ, ಟೊಮೇಟೊ, ಮೆಣಸು, ಬದನೆ, ಅಡಿಕೆ ಹಾಗೂ ಇತರೆ ಬೆಳೆಗಳಿಗೆ ಪಂಪ್‌ಸೆಟ್ ಮೋಟಾರ್‌ಗಳ ಮೂಲಕ ನೀರುಣಿಸುವರು. ಇಂತಹ ಸಂದರ್ಭದಲ್ಲಿ ಬೆಸ್ಕಾಂ ಸರಿಯಾದ ರೀತಿಯಲ್ಲಿ ವಿದ್ಯುತ್…
ಬೆಳಗಿನ ಹೊತ್ತಿಗೆ ಹಲವು ರೀತಿಯ ಹಸಿರು ಜ್ಯೂಸ್‌ಗಳನ್ನು ಕುಡಿದರೆ ಆರೋಗ್ಯಕ್ಕೆ ಒಳಿತು. ಅಂಥದ್ದೇ ಹಸಿರು ಜ್ಯೂಸ್‌ಗಳ ಪೈಕಿ ಒಂದು ಪಾಲಕ್ ಸೊಪ್ಪಿನದ್ದು. ರುಚಿಗೆ ಬೇಕಿದ್ದರೆ ಶುಂಠಿ, ನಿಂಬೆ ರಸಗಳನ್ನೆಲ್ಲ ಬೆರೆಸಿಕೊಂಡರೆ ಹಸಿರು ಜ್ಯೂಸ್‌ಗಳು ಬಾಯಿಗೂ ರುಚಿ ದೇಹಕ್ಕೂ ಹಿತ ನೀಡುತ್ತದೆ. ಹಲವು ರೀತಿಯ ಉತ್ಕರ್ಷಣ ನಿರೋಧಕಗಳು, ಕಬ್ಬಿಣ, ಕ್ಯಾಲ್ಸಿಯಂನಂಥ ಅಗತ್ಯ ಖನಿಜಗಳು, ಎ, ಸಿ, ಇ ನಂಥ ಮಹತ್ವದ ಜೀವಸತ್ವಗಳನ್ನು ಒಳಗೊಂಡ ಈ ಸೊಪ್ಪಿನಲ್ಲಿ ನಾರು ಸಹ ಹೇರಳವಾಗಿದೆ. ತುಳಸಿಯನ್ನು ಆಹಾರ ರೂಪದಲ್ಲಿ ಸೇವಿಸಿದರೆ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಬೆಳಗ್ಗೆ ಮಾಡುವ ಚಹಾಗೆ ತುಳಸಿಯ ತಾಜಾ ಎಲೆಗಳನ್ನು ಹಾಕಿ ಬಿಸಿ ಬಿಸಿಯಾಗಿ ಕುಡಿದರೆ ನೆಗಡಿ ಹಾಗೂ ಕಟ್ಟಿದ ಮೂಗು ಸರಾಗವಾಗುತ್ತದೆ. ತುಳಸಿಯ ಪಾನಕ ಮಾಡಿ ಸಹ ಕುಡಿಯಬಹುದು. ಇತರ ಹಣ್ಣಿನ ಜ್ಯೂಸ್‌ಗಳಿಗೆ ತುಳಸಿಯ ಎಲೆಗಳನ್ನು ಬೆರೆಸಿ ಕುಡಿಯಬಹುದು. ತುಳಸಿ ಎಲೆಯಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನಿಷಿಯಂ ಮುಂತಾದ ಪೋಷಕಾಂಶಗಳಿದ್ದು, ಇದನ್ನು ಅನ್ನಕ್ಕೂ ಬೆರೆಸಿ ತಿನ್ನಬಹುದು. ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತೆ ಮಾವಿನ ಕಾಯಿ…
ತಮಿಳು ನಟ ವಿಶಾಲ್ ರಾಜಕೀಯಕ್ಕೆ ಎಂಟ್ರಿಕೊಡಲು ಸಿದ್ಧರಾಗಿದ್ದುಯಾವುದೇ ಪಕ್ಷದಲ್ಲಿ ಸೇರದೇ ತಾವೇ ರಾಜಕೀಯ ಪಕ್ಷ ಸ್ಥಾಪಿಸುವುದಾಗಿಯೂ ಘೋಷಿಸಿದ್ದಾರೆ. 2026ರಲ್ಲಿ ತಮಿಳುನಾಡು ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆಂದು ತಿಳಿಸಿದ್ದಾರೆ. ಅಲ್ಲದೆ ಅತಿ ಶೀಘ್ರದಲ್ಲಿ ರಾಜಕೀಯ ಪ್ರವೇಶ ಮಾಡುವುದು ಖಚಿತ ಎಂದಿರುವ ವಿಶಾಲ್. ರಾಜಕೀಯ ಪ್ರವೇಶದ ಭಾಗವಾಗಿ ಪಕ್ಷ ಸ್ಥಾಪಿಸುವುದಾಗಿ ತಿಳಿಸಿದ್ದಾರೆ. ರಾಜ್ಯದ ಜನತೆ ಸಮಸ್ಯೆ ಅಥವಾ ಸೂಕ್ತ ಸೌಲಭ್ಯಗಳ ಕೊರತೆ ಎದುರಿಸುತ್ತಿದ್ದಾರೆ. ಅವುಗಳನ್ನು ಪರಿಹರಿಸಲು ರಾಜಕೀಯ ಪ್ರವೇಶ ನಿಶ್ಚಿತ ಎಂದಿದ್ದಾರೆ. ಇನ್ನು ಯಾವುದಾದರೂ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ವಿಶಾಲ್, ಮೊದಲು ತನ್ನನ್ನು ತಾನು ಸಾಬೀತುಪಡಿಸಿಕೊಂಡ ನಂತರವೇ ಮೈತ್ರಿ ಮತ್ತಿತರ ವಿಚಾರಗಳ ಬಗ್ಗೆ ಯೋಚಿಸುತ್ತೇನೆ, ಆದರೆ, ಸದ್ಯಕ್ಕೆ ಅಂತಹ ಯೋಚನೆ ಇಲ್ಲ ಎಂದು ಹೇಳಿದರು. ಅವರ ಹೇಳಿಕೆ ತಮಿಳುನಾಡು ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೆಲ ದಿನಗಳ ಹಿಂದೆ ದಳಪತಿ ವಿಜಯ್ ಕೂಡ ತಮ್ಮದೇ ಪಕ್ಷ ಕಟ್ಟಿಕೊಂಡು 2026ರ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ತೋರಿಸುತ್ತಿದ್ದಾರೆ. ತಮಿಳುನಾಡಿನಲ್ಲಿ ಚಿತ್ರರಂಗದ ಗಣ್ಯರು ರಾಜಕೀಯಕ್ಕೆ…
ರೈತರ ವಿಚಾರವಾಗಿ ಹಗುರವಾಗಿ ಮಾತನಾಡಿದ ಸಚಿವ ಶಿವಾನಂದ ಪಾಟೀಲ ಆತ್ಮಹತ್ಯೆ ಮಾಡಿಕೊಂಡರೆ ನಾನು ₹5 ಕೋಟಿ ಪರಿಹಾರ ಕೊಡುತ್ತೇನೆ. ಅವರ ಮಾತನ್ನು ಬೆಂಬಲಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ಆತ್ಮಹತ್ಯೆ ಮಾಡಿಕೊಂಡರೆ ₹50 ಕೋಟಿ ಕೊಡುತ್ತೇನೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಚುನಾವಣಾ ಪ್ರಚಾರ ಸಂದರ್ಭ ಮಾತನಾಡಿದ ಅವರು, ‘ರೈತರು ಪರಿಹಾರದ ಆಸೆಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಸಚಿವ ಶಿವಾನಂದ ಅವರು ವಿಧಾನಸೌಧದಲ್ಲೇ ಈ ಹಿಂದೆ ಹೇಳಿಕೆ ನೀಡಿದ್ದಾರೆ. ಅವತ್ತೇ, ‘ನೀವು ಕೂಡಾ ಆತ್ಮಹತ್ಯೆ ಮಾಡಿಕೊಂಡು ತೋರಿಸಿ’ ಎಂದು ನಾನು ಹೇಳಿದ್ದೆ. ಈಗಲೂ ಹೇಳುತ್ತೇನೆ; ನಮ್ಮ ಬಳಿ ಹಣವಿಲ್ಲದಿದ್ದರೂ ಜನರಿಂದ ಸಂಗ್ರಹಿಸಿ ನಿಮ್ಮ ಕುಟುಂಬಕ್ಕೆ ಕೊಡುತ್ತೇವೆ’ ಎಂದು ಅವರು ಹೇಳಿದ್ದಾರೆ. ತಾನು ಪಂಚಮಸಾಲಿ ಎಂದು ಪುತ್ರಿ ಪರವಾಗಿ ಮತ ಕೇಳುತ್ತಿರುವ ಶಿವಾನಂದ ಪಾಟೀಲ ಅವರು, ಪಂಚಮಸಾಲಿ ಹೋರಾಟ ನಡೆದಾಗ ಇವರೆಲ್ಲ ಎಲ್ಲಿ ಹೋಗಿದ್ದರು’ ಎಂದು ಯತ್ನಾಳ್ ಖಾರವಾಗಿ ಕುಟುಕಿದ್ದಾರೆ. ‘ಬಿಜೆಪಿ ಪಕ್ಷವು 400 ಸ್ಥಾನಗಳನ್ನು ಗೆದ್ದರೂ…
ಚುನಾವಣೆ ಬಂತೆಂದರೆ ಹಣ, ಮಧ್ಯ ಮತ್ತು ಉಡುಗೊರೆಗಳ ಕಾರ್ ಬಾರು ಜೋರಾಗಿರುತ್ತವೆ. ಚುನಾವಣಾ ಆಯೋಗದ ಅಧಿಕಾರಿಗಳು ಅನಧಿಕೃತ ವಸ್ತುಗಳನ್ನು ವಶಕ್ಕೆ ಪಡೆದು ಉತ್ತಮ ಪ್ರಜಾಪ್ರಭುತ್ವ ರಾಜಕೀಯ ಸ್ಥಿರತೆಗೆ ಸಹಾಯ ಮಾಡುತ್ತಾರೆ. ಈ ಬಾರಿಯ ಲೋಕಸಭಾ ಚುನಾವಣೆಗೂ ಮುಂಚೆ(ಎ.15 ರ ವಳಗೆ) ನಗದು, ಮದ್ಯ, ಡ್ರಗ್ಸ್, ಉಚಿತ ಉಡುಗೊರೆ ಸೇರಿದಂತೆ ಒಟ್ಟು 4,658.16 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಚುನಾವಣಾ ಆಯೋಗ ವಶಪಡಿಸಿಕೊಂಡಿದೆ. ಮಾರ್ಚ್ 1 ರಿಂದ ಏಪ್ರಿಲ್ 13ರ ವರೆಗೆ ವಶಪಡಿಸಿಕೊಂಡ ವಸ್ತುಗಳ ವಿವರವನ್ನು ಚುನಾವಣಾ ಆಯೋಗ ಮಾಧ್ಯಮ ಹೇಳಿಕೆಯ ಮೂಲಕ ತಿಳಿಸಿದೆ. 75 ವರ್ಷಗಳ ಚುನಾವಣಾ ಇತಿಹಾಸದಲ್ಲಿ ಇಷ್ಟೊಂದು ಪ್ರಮಾಣದ ವಸ್ತುಗಳನ್ನು ವಶಪಡಿಸಿಕೊಂಡಿರುವುದು ಇದೇ ಮೊದಲು ಎಂದು ಆಯೋಗ ತಿಳಿಸಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು 3,475 ಕೋಟಿ ರೂ. ಮೌಲ್ಯದ ನಗದು, ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಬಾರಿ ಚುನಾವಣೆ ನಡೆಯುವ ಮೊದಲೇ ಕಳೆದ ವರ್ಷದ ದಾಖಲೆಯನ್ನು ಮುರಿಯಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್…
ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಮೀಸಲಾತಿ ರದ್ದತಿ ವಿಚಾರ ಆಗಾಗ ಚರ್ಚೆಯಾಗುತ್ತಿತ್ತು. ಇದೀಗ ಲೋಕಸಭಾ ಚುನಾವಣೆ ಹೊತ್ತಲ್ಲಿ ಮತ್ತೆ ಆ ವಿಚಾರ ಮುನ್ನಲೆಗೆ ಬಂದಿದ್ದು, ಮೀಸಲಾತಿಯನ್ನು ಯಾವುದೇ ಕಾರಣಕ್ಕೂ ರದ್ದು ಮಾಡುವುದಿಲ್ಲ, ಅದು ಶಾಶ್ವತವಾದದ್ದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟೀಕರಣ ನೀಡಿದ್ದಾರೆ. ಬಿಜೆಪಿ ಎಂದಿಗೂ ಮೀಸಲಾತಿಯನ್ನು ರದ್ದುಗೊಳಿಸುವುದಿಲ್ಲ. ನಮಗೆ ಈಗ ಬಹುಮತವಿದ್ದು, ಮೀಸಲಾತಿ ವಿಚಾರದಲ್ಲಿ ತಲೆಕೆಡಿಸಿಕೊಂಡಿಲ್ಲ.ಈಗ 370 ನೇ ವಿಧಿಯನ್ನು ರದ್ದುಗೊಳಿಸಿದ್ದೇವೆ ಮತ್ತು ತ್ರಿವಳಿ ತಲಾಖ್ ಕೊನೆಗೊಳಿಸಿದ್ದೇವೆ ಆದರೆ ಮೀಸಲಾತಿಯನ್ನು ರದ್ದುಗೊಳಿಸಲಿಲ್ಲ. ಮೀಸಲಾತಿ ಎಂದಿಗೂ ಶಾಶ್ವತವಾದದ್ದು ಅದನ್ನು ಎಂದೂ ತೆಗೆಯಲ್ಲ, ಕಾಂಗ್ರೆಸ್ ಗೂ ತೆಗೆಯಲು ಬಿಡುವುದಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ. ಬಳಿಕ ಮಾತನಾಡಿದ ಅವರು 70 ವರ್ಷಗಳಲ್ಲಿ ಕಾಂಗ್ರೆಸ್ 370 ನೇ ವಿಧಿಯನ್ನು ರದ್ದುಗೊಳಿಸಲಿಲ್ಲ. ಆದರೆ ನಾವು ಅದನ್ನು ತೆಗೆದು ಕಾಶ್ಮೀರವನ್ನು ಮುಖ್ಯವಾಹಿನಿಗೆ ತಂದಿದ್ದೇವೆ. ರಾಮಮಂದಿರ ವಿಚಾರವನ್ನು ಕಾಂಗ್ರೆಸ್ ವರ್ಷಗಳ ಕಾಲ ಎಳೆದಾಡುತ್ತಾ ಬಂದಿತ್ತು. ರಾಮಮಂದಿರ ನಿರ್ಮಾಣದ ಭರವಸೆಯನ್ನೂ ಮೋದಿ ಈಡೇರಿಸಿದ್ದಾರೆ. ಏಕರೂಪ ನಾಗರಿಕ ಸಂಹಿತೆ,…