Subscribe to Updates
Get the latest creative news from FooBar about art, design and business.
- ಹಿಂದೂಗಳ ಮೇಲಿನ ದೌರ್ಜನ್ಯ ಸಹಿಸಲ್ಲ: ಬಾಂಗ್ಲಾ ವಿರುದ್ಧ ಗುಡುಗಿದ ದೊಡ್ಡಹಳ್ಳಿ ಅಶೋಕ್
- ಕಲ್ಯಾಣ ಕರ್ನಾಟಕ ಸರ್ಕಾರಿ ನೌಕರರ ಸಂಘ: ಪದಾಧಿಕಾರಿಗಳ ಆಯ್ಕೆ
- ತುಮಕೂರು | ಅದ್ದೂರಿ ಕನ್ನಡ ರಾಜ್ಯೋತ್ಸವ, ಉಚಿತ ಆರೋಗ್ಯ ತಪಾಸಣಾ ಶಿಬಿರ
- ಡಿ.29ರಿಂದ ತುಮಕೂರು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನ: ಏನೇನು ಕಾರ್ಯಕ್ರಮಗಳು ಇರಲಿವೆ?
- ತುರುವೇಕೆರೆ: ಡಿ.30: ಸಂಪಿಗೆಯಲ್ಲಿ ವೈಕುಂಠ ಏಕಾದಶಿ ಮಹೋತ್ಸವ
- ಕುಣಿಗಲ್: ಡಿ.29ರಿಂದ ವೆಂಕಟರಮಣ ಸ್ವಾಮಿ ಪೂಜೋತ್ಸವ
- ತುರುವೇಕೆರೆ: ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ತೀರ್ಮಾನ
- ವಿದ್ಯುತ್ ಕಂಬಗಳಿಗೆ ಕಾರು ಡಿಕ್ಕಿ: ತಪ್ಪಿದ ಭಾರೀ ಅನಾಹುತ
Author: admin
ಬೆಂಗಳೂರು: ಎಂದು ಆರ್ ಎಸ್ ಎಸ್ ನ ಪ್ರಾರ್ಥನೆ ಮಾಡಿದ್ದು, ತಪ್ಪಾಗಿದ್ದರೆ ಪಕ್ಷದ ಕಾರ್ಯಕರ್ತರು, ಮುಖಂಡರು, ಇಂಡಿಯಾ ರಾಜಕೀಯ ಕೂಟದ ಮುಖಂಡರ ಕ್ಷಮೆ ಕೇಳುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣದ ಕುರಿತು ಚರ್ಚೆ ನಡೆಯುತ್ತಿದ್ದಾಗ ನಾನು ವಿರೋಧ ಪಕ್ಷದ ನಾಯಕ ಆರ್.ಆಶೋಕ್ ಅವರ ಹಿನ್ನೆಲೆಯನ್ನು ಹೇಳುವ ಸಲುವಾಗಿ ನಮಸ್ತೆ ಸದಾ ವತ್ಸಲೆ ಎಂದು ಹಾಡಿದ್ದೇನೆ. ಇದರಲ್ಲಿ ಆರ್ ಎಸ್ ಎಸ್ ಅನ್ನು ಹೊಗಳುವ ಉದ್ದೇಶ ಇರಲಿಲ್ಲ ಎಂದಿದ್ದಾರೆ. ನನ್ನ ಜೀವನ ಕಾಂಗ್ರೆಸ್ ಕಾರ್ಯಕರ್ತರ ಬದುಕಿಗೆ ಮೆಟ್ಟಿಲು ಆಗಬೇಕೆ ಹೊರತು, ಭಾವನೆಗಳಿಗೆ ಧಕ್ಕೆಯಾಗಬಾರದು. ನಮ ಪಕ್ಷದ ಹಿರಿಯ ನಾಯಕರುಗಳು ದೊಡ್ಡ ದೊಡ್ಡ ಸಲಹೆಗಳನ್ನು ನೀಡಿದ್ದಾರೆ. ಅದನ್ನು ಗೌರವಿಸುತ್ತೇನೆ. ಆದರೆ ಮಾಧ್ಯಮಗಳಲ್ಲಿ ಮಾತನಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ನೇರವಾಗಿ ಕಾಂಗ್ರೆಸ್ ಕಚೇರಿಗೆ ಬನ್ನಿ, ಸಭೆ ಮಾಡಿ ಚರ್ಚಿಸಿ ಎಂದು ಮನವಿ ಮಾಡಿದರು. ಎಲ್ಲರಿಗಿಂತ ದೊಡ್ಡವನೆಂಬ ಭಾವನೆ ನನಗೆ ಇಲ್ಲ. ಯಾರೇ ಸಲಹೆ ನೀಡಿದ್ದರೂ ಸ್ವೀಕರಿಸುತ್ತೇನೆ.…
ಬೆಂಗಳೂರು: ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಜಗದೀಶ್ ನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಲುಕ್ ಔಟ್ ನೋಟೀಸ್ ಜಾರಿಯಾದ ಹಿನ್ನೆಲೆಯಲ್ಲಿ ದೆಹಲಿ ಏರ್ ಪೋರ್ಟ್‌ನಲ್ಲಿ ಆರೋಪಿ ಜಗದೀಶ್ ಅಲಿಯಾಸ್ ಜಗ್ಗನನ್ನು ವಶಕ್ಕೆ ಪಡೆದುಕೊಂಡು ನಗರಕ್ಕೆ ಕರೆತಂದಿದ್ದಾರೆ. ಭಾರತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಕ್ಲು ಶಿವ ಹತ್ಯೆಯಾದ ನಂತರ ಆರೋಪಿ ಜಗದೀಶ್ ತಲೆಮರೆಸಿ ಕೊಂಡಿದ್ದನು. ಆತನ ಬಂಧನಕ್ಕೆ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಈ ತಂಡಗಳು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ಸೇರಿದಂತೆ ಹಲವು ಕಡೆಗಳಲ್ಲಿ ಶೋಧ ನಡೆಸುತ್ತಿದ್ದರೂ ಆತನ ಸುಳಿವು ಸಿಕ್ಕಿರಲಿಲ್ಲ. ಆತ ಚನ್ನೈ ಮೂಲಕ ದುಬೈಗೆ ಪರಾರಿಯಾಗಿದ್ದಾನೆಂಬ ಮಾಹಿತಿ ಲಭ್ಯವಾಗಿತ್ತು. ಬಳಿಕ ಲುಕ್ ಔಟ್ ನೋಟೀಸ್ ಜಾರಿಮಾಡಲಾಗಿತ್ತು.ದೆಹಲಿ ಏರ್ ಪೋರ್ಟ್‌ನಲ್ಲಿ ಕಾಣಿಸಿಕೊಂಡ ಜಗ್ಗನನ್ನು ಅಲ್ಲಿನ ಪೊಲೀಸರು ವಶಕ್ಕೆ ಪಡೆದು ಸಿಐಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿಯನ್ನು ಆಧರಿಸಿ ಸಿಐಡಿ ಅಧಿಕಾರಿಗಳು ತಕ್ಷಣ ದೆಹಲಿಗೆ ತೆರಳಿ ಇಂದು ಮುಂಜಾನೆ ಆತನನ್ನು…
ತಿಪಟೂರು: ಕಲ್ಪತರು ತಾಂತ್ರಿಕ ವಿದ್ಯಾಲಯ ಹಾಗೂ ತುಮಕೂರಿನ ಇನ್ನೋವೇಶನ್ ಮತ್ತು ಎಂಟರ್ ಫ್ರೀ ಇನರ್ಶಿಪ್ ಕೌನ್ಸಿಲಿಂಗ್ ಸಹಯೋಗದೊಂದಿಗೆ ಉದ್ಯಮಶೀಲತೆಯ ವೃತ್ತಿಗಳಿಗೆ ಅವಕಾಶಗಳ ಮಹಾಸಾಗರ ಎಂಬ ಜಾಗೃತಿ ಕಾರ್ಯಕ್ರಮವನ್ನು ಅಕ್ಟೋಬರ್ 29ರಂದು ಕೆಐಟಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಪತರು ವಿದ್ಯಾ ಸಂಸ್ಥೆಯ ಕಲ್ಪತರು ವಿದ್ಯಾ ಸಂಸ್ಥೆಯ ಖಜಾಂಚಿ ಟಿ.ಎಸ್.ಶಿವಪ್ರಸಾದ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಪತರು ಸಂಸ್ಥೆ ಅಡಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಶಾಲಾ ಕಾಲೇಜುಗಳು ಇದರಲ್ಲಿ ಭಾಗವಹಿಸುತ್ತಿದ್ದು, ಮಿಷನ್ 2035 ದೀರ್ಘಾವಧಿ ತಂತ್ರ ಯೋಜನೆಯನ್ನು ಅನುಸರಿಸುತ್ತಿದೆ, ಸ್ಮಾರ್ಟ್ ಆಪ್ ಗಳು ಇಂಕ್ಯುಬೇಷನ್ ಕೇಂದ್ರಗಳು ಸಂಶೋಧನೆಗಳು ಯೋಜನೆಗಳು ಅನುದಾನಗಳು ಹಾಗೂ ಹೂಡಿಕೆಗೆ ಅವಕಾಶಗಳತ್ತ ವಿಶೇಷ ಗಮನ ನೀಡಲಾಗುವುದು ಎಂದರು. ಇದಕ್ಕಾಗಿ ಈಗಾಗಲೇ 90 ಲಕ್ಷ ರೂ. ವೆಚ್ಚದಲ್ಲಿ ಐಡಿಯಾ ಲ್ಯಾಬ್ ಪ್ರಾರಂಭಿಸಿದ್ದು, ಮುಂಬರುವ ದಿನಗಳಲ್ಲಿ ಇಂಕ್ಟಿವೇಶನ್ ಕ್ವಾಟಮ್ ಕಂಪ್ಯೂಟರ್ ಸೆಕ್ಯೂರಿಟಿ ಕೇಂದ್ರಗಳು ಮುಂತಾದ ಭವಿಷ್ಯಗಳನ್ನು ಸ್ಥಾಪಿಸಲು ಕ್ರಮ ಕೈಗೊಂಡಿದೆ ಇದಕ್ಕೆ ವಿದ್ಯಾರ್ಥಿಗಳು ಬೋಧಕರಾದಿಯಾಗಿ ಸಾರ್ವಜನಿಕ ಸಹಕಾರವು ಬೇಕು ಈ ಕಾರ್ಯಕ್ರಮಕ್ಕೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ…
ಮಧುಗಿರಿ: ಕೊಂಡವಾಡಿ ಗ್ರಾಮದ ರೈತರಿಗೆ 45 ದಿನಗಳಿಂದ ಹಾಲಿನ ಬಟವಾಡೆ ನೀಡದೆ ಒಟ್ಟು 18 ಲಕ್ಷ ಹಣ ಬಾಕಿ ಉಳಿಸಿಕೊಂಡಿರುವ ಮಧುಗಿರಿ ಎ ಆರ್ ಕಚೇರಿ ಅಧಿಕಾರಿ ಓಬಳೇಶ್, ರಾಜಕೀಯ ಒತ್ತಡ ಹೇರಿಸಿ ಹಣವನ್ನು ನೀಡದಂತೆ ಬ್ಯಾಂಕಿಗೆ ಸಹಕಾರ ಇಲಾಖೆಯ ಮಧುಗಿರಿ ಕಚೇರಿಯ ಅಧಿಕಾರಿಗಳು ಪತ್ರ ಬರೆದಿದ್ದಾರೆ ಎಂದು ಕೊಂಡವಾಡಿ ರೈತರು ಆಕ್ರೋಶ ವ್ಯಕ್ತಪಡಿಸಿದರು. ತುಮುಲ್ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ, ಅಧಿಕಾರಿಗಳು ಕೊಂಡವಾಡಿ ಡೇರಿಯಲ್ಲಿ ಸರಕಾರದ ಆದೇಶದಂತೆ ಆಡಳಿತ ಮಂಡಳಿಯು ಇರಬೇಕಿದ್ದು, ಕೋರ್ಟ್ ಆದೇಶ ಉಲ್ಲಂಘಿಸಿ ಇಲಾಖೆಯಿಂದಲೇ ಆಡಳಿತಾಧಿಕಾರಿಯನ್ನು ನೇಮಿಸಿರುವುದು ಕಾನೂನು ಬಾಹಿರ. ಈ ಬಗ್ಗೆ ಕೋರ್ಟ್ ಆದೇಶವಿದ್ದು ತಡೆಯಾಜ್ಞೆ ನೀಡಿದೆ. ಆದರೂ ಆಡಳಿತಾಧಿಕಾರಿಯನ್ನು ನೇಮಿಸಿ ರೈತರ ಬಟವಾಡೆ ಹಣ ವಿತರಣೆಗೆ ಅಡ್ಡಿ ಮಾಡಲಾಗಿದೆ ಎಂದು ಆರೋಪಿಸಿದರು. ಡಿಆರ್ ಜೊತೆ ಮಾತನಾಡಿದ ಎ.ಆರ್.ಒಬಳೇಶ್ ಬ್ಯಾಂಕಿಗೆ ಹಣ ಬಿಡುಗಡೆಗೆ ಪತ್ರ ಬರೆಯಲಾಗುವುದೆಂದು ಹೇಳಿ ಪತ್ರ ನೀಡಿದರು. ಆದರೆ ಆ ಪತ್ರ ಹಿಡಿದು ಹೊರಟ ರೈತರಿಗೆ ಬ್ಯಾಂಕಿನಲ್ಲಿ ಚಳ್ಳೆಹಣ್ಣು ತಿನ್ನಿಸಲಾಗಿದೆ. ಪತ್ರವನ್ನು…
ತುಮಕೂರು: ಗಣೇಶನ ಹಬ್ಬದ ಸಂಭ್ರಮ ಎಲ್ಲೆಲ್ಲೂ ಕಂಡು ಬರುತ್ತಿದೆ. ಇದೇ ಸಂದರ್ಭದಲ್ಲಿ ಸಾರ್ವಜನಿಕರು ಸುಗಮವಾಗಿ ಹಬ್ಬ ಆಚರಿಸಲು ಅನುಕೂಲವಾಗುವಂತೆ ತುಮಕೂರು ಜಿಲ್ಲಾ ಪೊಲೀಸ್ ಕೆಲವೊಂದು ಮಾರ್ಗದರ್ಶನ, ಸೂಚನೆಗಳನ್ನ ನೀಡಿದೆ. ಗಣೇಶ ಮೂರ್ತಿ ಪ್ರತಿಷ್ಠಾಪನೆ ಸಮಯದಲ್ಲಿ ಅನುಸರಿಸಬೇಕಾದ ಸೂಚನೆಗಳು: ಗಣೇಶ ಪ್ರತಿಷ್ಠಾಪನೆ ಮಾಡುವ ಮೊದಲು ಸಂಬಂಧಿಸಿದ ಪೊಲೀಸ್ ಠಾಣೆಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯುವುದು. ಪಿಓಪಿಗಳಿಂದ ಮಾಡಲ್ಪಟ್ಟ ವಿಗ್ರಹಗಳ ಬಳಕೆಯನ್ನು ತಪ್ಪಿಸಿ ಪರಿಸರಸ್ನೇಹಿ ವಸ್ತುಗಳಿಂದ ಮಾಡಲ್ಪಟ್ಟ ವಿಗ್ರಹಗಳನ್ನು ಪ್ರತಿಷ್ಠಾಪಿಸುವುದು. ಗಣೇಶ ಮಂಟಪದಲ್ಲಿ ಅಥವಾ ಮೆರವಣಿಗೆ ಸಮಯದಲ್ಲಿ ಅಶ್ಲೀಲ ನೃತ್ಯ, ಅಶ್ಲೀಲ ಚಿತ್ರಗೀತೆಗಳು, ಸಂಭಾಷಣೆ ಅಥವಾ ಸ್ಥಬ್ದ ಚಿತ್ರಗಳನ್ನು ಹಾಕಬಾರದು ಹಾಗೂ ಕೋಮು ಪ್ರಚೋದಕ/ಉದ್ರೇಕಕಾರಿ ಘೋಷಣೆಗಳನ್ನು ಕೂಗುವಂತಿಲ್ಲ. ಸದಾಕಾಲ ಮಂಟಪದಲ್ಲಿ ಸ್ವಯಂ ಸೇವಕರು ಇರಬೇಕು. ಗಣೇಶ ಮಂಟಪಗಳಿಂದ ವಾಹನ ಸಂಚಾರಕ್ಕೆ ಅದರಲ್ಲೂ ಕೂಡ ಸಾರ್ವಜನಿಕರ ಸಂಚಾರಕ್ಕೆ ಮತ್ತು ಅಗ್ನಿಶಾಮಕ ವಾಹನಗಳ ಸಂಚಾರಕ್ಕೆ ಅಡೆತಡೆಯಾಗುವಂತೆ ಮಂಟಪಗಳನ್ನು ನಿರ್ಮಿಸಕೂಡದು ಹಾಗೂ ಅಗ್ನಿ ಅನಾಹುತಗಳಿಗೆ ಆಸ್ಪದವಾಗದಂತೆ ಮಂಟಪಗಳನ್ನು ನಿರ್ಮಿಸುವುದು. ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ವಿದ್ಯುತ್ ಕಂಬ ಹೈಟೆನ್ಷನ್ ಕೇಬಲ್ ಗಳ…
ಮಧುಗಿರಿ : ಶಾಸಕ ಕೆ.ಎನ್.ರಾಜಣ್ಣನವರನ್ನು ಸಂಪುಟದಿಂದ ವಜಾಗೊಳಿಸಿದ್ದನ್ನು ಖಂಡಿಸಿ ಮಿಡಿಗೇಶಿ ಗ್ರಾ.ಪಂ. ಸದಸ್ಯರು ರಾಜೀನಾಮೆ ನೀಡಿದ್ದು ಇಂದು ಇಡೀ ಗ್ರಾಪಂ ಪೂರ್ತಿ 11 ಸದಸ್ಯರು ಅಧ್ಯಕ್ಷರಾದಿಯಾಗಿ ವೈಯಕ್ತಿಕವಾಗಿ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ. ತಾಲೂಕಿನ ಮಿಡಿಗೇಶಿ ಹೋಬಳಿಯ ಮಿಡಿಗೇಶಿ ಗ್ರಾ.ಪಂ. ಆಡಳಿತ ಮಂಡಳಿಯೇ ಪೂರ್ತಿ ರಾಜೀನಾಮೆ ಪತ್ರವನ್ನು ಉಪವಿಭಾಗಾಧಿಕಾರಿಗಳ ಕಚೇರಿಗೆ ನೀಡಿದ್ದಾರೆ. ಇದೇ ವೇಳೆ ಮಿಡಿಗೇಶಿ ಗ್ರಾಪಂ ಮಾಜಿ ಅಧ್ಯಕ್ಷ ಎಸ್ ಎನ್ ರಾಜು ಮಾತನಾಡಿ, ಕಾಂಗ್ರೆಸ್ ಹೈ ಕಮಾಂಡ್ ರಾಜಣ್ಣನವರ ವಿಚಾರದಲ್ಲಿ ಆತುರಪಟ್ಟಿದೆ. ರಾಜಣ್ಣ ಇದ್ದರಷ್ಟೆ ಜಿಲ್ಲೆಯಲ್ಲಿ ಕಾಂಗ್ರೆಸ್ ಅವರು ಹೇಳಿದ ಮಾತನ್ನು ತಿರುಚಿ ರಾಹುಲ್ ಗಾಂಧಿಯವರಿಗೆ ತಪ್ಪು ಮಾಹಿತಿ ನೀಡಿದ ಕಾರಣ ಕೆ.ಎನ್.ಆರ್. ವಜಾಗೊಂಡರು ಎಂದು ಆರೋಪಿಸಿದರು. ಆದರೆ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿಯವರನ್ನು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇಡಿ ಕೇಸು ಹಾಕಿಸಿದ್ದ ಅಮಿತ್ ಷಾ ಜೊತೆ ವೇದಿಕೆ ಹಂಚಿಕೊಂಡವರು, ಸದನದಲ್ಲಿ ಕಾಂಗ್ರೆಸ್ ವಿರೋಧಿಸುವ ಆರ್ ಎಸ್ ಎಸ್ ಗೀತೆಯನ್ನು ಹಾಡುವವರು ಹಾಗೂ ಇತರೆ ಒಳ ರಾಜಕೀಯ ಮಾಡುವ ಜೊತೆಗೆ ಕುಂಭ…
ಮಧುಗಿರಿ: ಸದಾ ಸಮುದಾಯದ ಅಭಿವೃದ್ಧಿಗಾಗಿ ಸದಾ ಮಂದಿರುವೆ ಹಾಗೂ ಶೀಘ್ರದಲ್ಲಿ ವೀರಶೈವ ಲಿಂಗಾಯಿತ ಸಮುದಾಯ ಭವನವನ್ನು ಕಟ್ಟಿಸಿಕೊಡಲಾಗುವುದು ಎಂದು ಕೇಂದ್ರ ಜಲ ಶಕ್ತಿ ಮತ್ತು ರಾಜ್ಯ ರೈಲ್ವೆ ಖಾತೆ ಸಚಿವ ವಿ ಸೋಮಣ್ಣ ಭರವಸೆ ನೀಡಿದರು. ಪಟ್ಟಣದ ಕನ್ನಡ ಭವನದ ಕೆ.ಎನ್.ರಾಜಣ್ಣ ಸಭಾಂಗಣದಲ್ಲಿ ಭಾನುವಾರ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯಿತ ಒಂದು ಇತಿಹಾಸವುಳ್ಳ ಸಮಾಜ ವಾಗಿದ್ದು, ಸಮಾಜದಲ್ಲಿರುವ ನೂನ್ಯತೆಗಳನ್ನು ಸರಿಪಡಿಸಿಕೊಂಡು ಒಂದೇ ನಾಣ್ಯದ ಎರಡು ಮುಖಗಳಾಗಿ ಸಮಾಜ ಬೆಳೆಯಬೇಕಾಗಿದೆ. ಸಮಾಜದ ಅಭಿವೃದ್ಧಿಗಾಗಿ ಸದಾ ಬದ್ಧವಾಗಿರುವೆ ಶೀಘ್ರದಲ್ಲೇ ಸಮುದಾಯ ಭವನವನ್ನು ಕಟ್ಟಿಕೊಡಲಾಗುವುದು ಎಂದು ಹೇಳಿದರು. ಮೋದಿ ದೇಶದ ಭವಿಷ್ಯದ ಆಸ್ತಿ ಎಲ್ಲಾ ವರ್ಗದವರನ್ನು ಸಮಾನವಾಗಿ ನೋಡುವಂತಹ ಮಹಾನ್ ವ್ಯಕ್ತಿ, ಮೋದಿಯವರ ಕಾಳಜಿಯಿಂದ 10,000 ವೈದ್ಯಕೀಯ ಸೀಟುಗಳು ಈ ವರ್ಷದಲ್ಲೇ ಹೆಚ್ಚುವರಿ ಆಗಲಿದೆ ಇದರಿಂದ ಬಡವರಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು. ಇತ್ತೀಚಿನ ದಿನಗಳಲ್ಲಿ ಸಮಾಜದ ಬಡ ಕುಟುಂಬದ ಮಕ್ಕಳಿಗೆ ಶಿಕ್ಷಣ ಕೊಡಿಸುವುದೇ…
ಬೀದರ್ : ಅತಿವೃಷ್ಟಿ ಪೀಡಿತ ಪ್ರದೇಶದ ಪ್ರತಿ ಎಕರೆಗೆ ಸರಕಾರದಿಂದ 25 ಸಾವಿರ ರೂ. ಪರಿಹಾರ ಘೋಷಣೆ ಮಾಡಬೇಕು ಎಂದು ಶಾಸಕ ಪ್ರಭು ಚೌವ್ಹಾಣ್ ಒತ್ತಾಯಿಸಿದರು. ಔರಾದ್ (ಬಿ) ಹಾಗೂ ಕಮಲಗನರ ತಾಲ್ಲೂಕಿನ ಗ್ರಾಮಗಳಾದ ನಾಮಾನಾಯಕ್ ತಾಂಡಾ, ಬಾವಲಗಾಂವ, ಚೊಂಡಿಮುಖೇಡ್, ಚಿಕ್ಲಿ(ಯು) ತಾಂಡಾ, ಅಕನಾಪೂರ, ಗಂಗನಬೀಡ, ದಾಬಕಾ, ಮುತಖೇಡ್, ನಂದಿ ಬಿಜಲಗಾಂವ, ಚಿಮ್ಮೇಗಾಂವ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಮಳೆಯಿಂದಾದ ಹಾನಿಯನ್ನು ಅವರು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಔರಾದ್ (ಬಿ) ತಹಶೀಲ್ದಾರ್ ಮಹೇಶ್ ಪಾಟೀಲ್, ಕಮಲನಗರ ತಹಶೀಲ್ದಾರ್ ಅಮಿತಕುಮಾರ್ ಕುಲಕರ್ಣಿ, ಔರಾದ ಹಾಗೂ ಕಮಲಗನರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ್, ಹಣಮಂತ್ ಕೌಟಗೆ, ಪಂಚಾಯತ್ ರಾಜ್ ಇಲಾಖೆಯ ಎಇಇ ಸುನೀಲ್ ಚಿಲ್ಲರ್ಗೆ, ಲೋಕೋಪಯೋಗಿ ಇಲಾಖೆಯ ಎಇಇ ಪ್ರೇಮಸಾಗರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ಮಾರುತಿ ರಾಠೋಡ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಮಲಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ.ರಂಗೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ,…
ಬೀದರ್: ಜಿಲ್ಲೆಯ ಕಮಲನಗರ ತಾಲೂಕಿನ ಹೊರಂಡಿ ಗ್ರಾಮದಲ್ಲಿ ಸಾಹಿತ್ಯ ರತ್ನ ಲೋಕಶಾಹಿರ ಅಣ್ಣಾಭಾವು ಸಾಠೆ ಅವರ 105ನೇ ಜಯಂತ್ಯೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಮಾದಿಗ ಸಮುದಾಯದ ಯುವ ಮುಖಂಡ ಸುಧಾಕರ್ ಕೊಳ್ಳುರ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಣ್ಣಾಭಾವು ಸಾಠೆ ಅವರ ಸಾಹಿತ್ಯ ಕಥೆ ಕಾದಂಬರಿಗಳು ಇಡೀ ವಿಶ್ವ ವಿಖ್ಯಾತವಾಗಿದೆ. ಅವರ ಕಾದಂಬರಿಗಳ ಮೇಲೆ ಅನೇಕ ರಾಷ್ಟ್ರಗಳಲ್ಲಿ ಅಧ್ಯಯನಗಳ ನಡೆಸಿ ಡಾಕ್ಟರೇಟ್ ಪದವಿ ಪಡೆಯುತ್ತಿದ್ದಾರೆ. ಮಾದಿಗ ಸಮುದಾಯದ ಯುವಕರು ಶಿಕ್ಷಕರಾಗಬೇಕು. ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಮತ್ತು ಎಲ್ಲರೊಂದಿಗೆ ಪರಸ್ಪರ ಪ್ರೀತಿ ವಿಶ್ವಾಸ ಸೌಹಾರ್ದತೆಯಿಂದ ಬದುಕಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ಬಾಬುರವ ಪಾಟೀಲ ವಹಿಸಿಕೊಂಡು ಮಾತನಾಡಿದರು, ಪಾಂಡುರಂಗ ಸೂರ್ಯವಂಶಿ ಉಪನ್ಯಾಸ ಮಂಡಿಸಿದರು, ದಿಲೀಪ್ ಬಿರಾದಾರ, ರಾಜಕುಮಾರ್ ಕೊಂಡೆ, ಶಾಂಗಶೆಟ್ಟಿ, ದಿಲೀಪ ಡೊಂಗಳೆ, ಶರತ, ಶಾಲಿವನ್ ಬಿರಾದರ್, ತುಳಸಿರಾಮ್ ಜಕ್ಕತೆ, ಗೋಪಾಲ್ ಗಾಯಕ್ವಾಡ್, ಚಂದ್ರಕಾಂತ್ ಸೂರ್ಯವಂಶಿ, ಶಿಕಂದರ, ದೇವೇಂದ್ರ, ಅನಿಲ, ನಾಗನಾಥ್ ಗಾಯಕೋಡ್, ಸುದರ್ಶನ್, ಅಂಬಾದಾಸ, ಮುಂತಾದರೂ ಉಪಸ್ಥಿತರಿದ್ದರು. ವರದಿ: ಅರವಿಂದ…
ತಿಪಟೂರು: ಕಟ್ಟಕಡೆಯ ಸಾರ್ವಜನಿಕರಿಗೆ ಬೇಗನೆ ಅನುಕೂಲ ಮತ್ತು ಸಹಾಯ ಪಡೆಯಲು ಸಹಕಾರಿ ಕ್ಷೇತ್ರ ಎಷ್ಟೋ ಜನರ ಆಪದ್ಬಾಂಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶ್ರೀ ಗುರುಮಲ್ಲಿಕಾರ್ಜುನ ಸ್ವಾಮಿ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ ಮತ್ತು ತಮ್ಮಡಿಹಳ್ಳಿ ವಿರಕ್ತಮಠಧ್ಯಕ್ಷರಾದ ಶ್ರೀ ಡಾ.ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು. ನಗರದ ಗೊರಗೊಂಡನಹಳ್ಳಿ ಶ್ರೀ ಅಭಿನವ ಸದನದ ಆವರಣದಲ್ಲಿ ಶ್ರೀ ಗುರುಮಲ್ಲಿಕಾರ್ಜುನ ಸ್ವಾಮಿ ವಿವಿಧೋದ್ದೇಶ ಪತ್ತಿನ ಸಹಕಾರ ಸಂಘ ನಿಯಮಿತದ 2024–25 ನೇ ಸಾಲಿನ 14ನೇ ವರ್ಷದ ಸರ್ವ ಸದಸ್ಯರುಗಳ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಭಾರತ ದೇಶ ಸಂಸ್ಕೃತಿ, ಸಾಹಿತ್ಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸೇವೆಗೆ ಹೆಸರುವಾಸಿಯಾಗಿದೆ. ಅದರಲ್ಲೂ ಕರ್ನಾಟಕ ರಾಜ್ಯ ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಚಾಪು ಮೂಡಿಸಿ, ಸಾರ್ವಜನಿಕರಿಗೆ ಸ್ಪಂದಿಸುವಲ್ಲಿ ಮಹತ್ತರ ಬೆಳವಣಿಗೆ ಸಾಧಿಸಿದೆ. ನಾವುಗಳು ನೊಂದವರಲ್ಲಿ ಮತ್ತು ಬೆಂದವರಲ್ಲಿ ದೇವರನ್ನು ಕಾಣುತ್ತಾ ಸೇವೆಗೆ ಮುಡಿಪಾಗಿದ್ದೇವೆ. ನಿಮ್ಮದೇ ಹಣವನ್ನು ದುರುಪಯೋಗಪಡಿಸಿಕೊಳ್ಳದೆ ಸಹಕಾರಿಯ ಬೆಳವಣಿಗೆಗೆ ಸಹಕರಿಸಿ ಎಂದು ತಿಳಿಸಿದರು. ಕುಮಾರ್ ಆಸ್ಪತ್ರೆ ವೈದ್ಯ ಡಾ.ಜಿ.ಎಸ್.ಶ್ರೀಧರ್ ಮಾತನಾಡಿ,…