Author: admin

ನಾಲಂದಾ/ತುಮಕೂರು: ಕರ್ನಾಟಕದ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಒಂದೇ ಕುಟುಂಬದ ನಾಲ್ವರು ಸದಸ್ಯರು ಬಿಹಾರದ ನಾಲಂದಾ ಜಿಲ್ಲೆಯ ರಾಜಗೀರ್‌ನಲ್ಲಿರುವ ಧರ್ಮಶಾಲೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಘಟನೆ ಸ್ಥಳೀಯವಾಗಿ ಮತ್ತು ಕರ್ನಾಟಕದಲ್ಲಿ ತೀವ್ರ ಆಘಾತ ಮೂಡಿಸಿದೆ. ಮೃತರ ವಿವರ: ಮೃತರನ್ನು ಜಿ.ಆರ್. ಸುಮಂಗಲಾ (78), ಅವರ ಮಗ ಜಿ.ಆರ್. ನಾಗಪ್ರಸಾದ್ (50), ಮತ್ತು ಪುತ್ರಿಯರಾದ ಜಿ.ಆರ್. ಶಿಲ್ಪಾ (48) ಹಾಗೂ ಜಿ.ಆರ್. ಶ್ರುತಾ (43) ಎಂದು ಗುರುತಿಸಲಾಗಿದೆ. ಇವರು ಮೂಲತಃ ತುಮಕೂರಿನ ಗುಬ್ಬಿ ತಾಲೂಕಿನವರು ಎಂದು ತಿಳಿದುಬಂದಿದೆ. ಘಟನೆಯ ಹಿನ್ನೆಲೆ: ಈ ಕುಟುಂಬವು ಜನವರಿ 30ರಂದು ನೇಪಾಳ ಪ್ರವಾಸ ಮುಗಿಸಿ ಬಿಹಾರದ ಪವಿತ್ರ ಯಾತ್ರಾ ಸ್ಥಳವಾದ ರಾಜಗೀರ್‌ಗೆ ಆಗಮಿಸಿತ್ತು. ಅಲ್ಲಿನ ಧರ್ಮಶಾಲೆಯೊಂದರಲ್ಲಿ ಕೊಠಡಿ ಬುಕ್ ಮಾಡಿದ್ದರು. ಆದರೆ, ಕಳೆದ ಮೂರು ದಿನಗಳಿಂದ ಕೊಠಡಿಯ ಬಾಗಿಲು ತೆರೆಯದ ಕಾರಣ ಹಾಗೂ ಅಲ್ಲಿಂದ ದುರ್ವಾಸನೆ ಬರಲಾರಂಭಿಸಿದಾಗ ಸಂಶಯಗೊಂಡ ಧರ್ಮಶಾಲೆಯ ವ್ಯವಸ್ಥಾಪಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶುಕ್ರವಾರ ಬೆಳಿಗ್ಗೆ ಪೊಲೀಸರು ಬಾಗಿಲು ಮುರಿದು ಒಳಹೋದಾಗ…

Read More

ಒಮ್ಮೆ ಏನಾಯಿತೆಂದರೆ, ಒಬ್ಬ ಸನ್ಯಾಸಿ ಜೀವನದಲ್ಲಿ ಸಾಕಷ್ಟು ನೊಂದು ಬೆಂದು ಬೇಸತ್ತು ಹೋಗಿದ್ದನು. ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದನು. ಅವನಿಗೆ ತನ್ನ ಬಂಧು ಬಾಂದವರು ಯಾರೆಂಬುದೇ ಗೊತ್ತಿರಲಿಲ್ಲ. ಆರಕ್ಕೂ ಏರದೇ ಮೂರಕ್ಕೂ ಇಳಿಯದೇ ನೆಲೆ ಇಲ್ಲದೇ ಎಲ್ಲೆಂದರಲ್ಲಿ ಕುಳಿತು ಭಿಕ್ಷಾ ಊಟ ಮಾಡುತ್ತಿದ್ದ ನೆಲೆಯೇ ನೆಲೆಯಾಗಿತ್ತು. ಹೀಗಿರುವಾಗ ಒಂದು ದಿನ ರಾತ್ರಿ ಪಾಳುಬಿದ್ದ ದೇವಸ್ಥಾನದ ಜಗುಲಿ ಮೇಲೆ ಮಲಗಿಕೊಂಡು, ಎರಡೂ ಕೈ ತಲೆಗೆ ಒರಗಿಕೊಂಡು,  ನಾನು ಇನ್ನು ಜೀವನದಲ್ಲಿ ಏನನ್ನೂ ಸಾಧಿಸಲಿಲ್ಲ, ಇನ್ನು ಭಿಕ್ಷಾಟನೆಯಲ್ಲಿಯೇ ಬದುಕುತ್ತಿದ್ದೇನೆ, ಬೇರೆ ಸಾಧು ಸತ್ಪರುಷರು ಹೆಸರು, ಹಣ ಮಾಡುತ್ತಾರೆ ಅದು ಅವರು ಪಡೆದಿರುವ ಅದೃಷ್ಟ ಆಗಿರುತ್ತದೆ, ನನಗೆ ಇಷ್ಟು ವರುಷವಾದರೂ ಅದೃಷ್ಟ ಬಂದಿಲ್ಲವೆಂದರೆ ನನ್ನ ಹಣೆ ಬರಹದ ಪಾಡು ಇಷ್ಟೇ ಆಗಿರುತ್ತದೆ ಎಂದು ಯೋಚಿಸಿ ಇನ್ನು ನಾನು ಬದುಕಿರಬಾರದು ಯಾವುದಾದರೂ ಕೆರೆಗೆ ಬಿದ್ದು ಸಾಯಬೇಕು, ಎಂದು ಯೋಚಿಸಿ ಸೂರ್ಯೋದಯವಾಗುತ್ತಿದ್ದಂತೆ ಅತ್ಯಂತ ಕಠೋರ ಮನಸ್ಸಿನಿಂದ ಕಾಡಿನ ಒಂದು ಕೆರೆಯ ದಂಡೆಯ ಮೇಲೆ ನಡೆಯುತ್ತಾ, ಕೆರೆಗೆ ಹಾರಿ ಬಿಡೋಣ…

Read More

ಶಿರಾ: ಈಡಿಗ ಸಮುದಾಯದ ಕುಲಕಸುಬಾದ ಸೇಂದಿ ಮಾರಾಟವನ್ನು ಈ ಸಮುದಾಯದ ಜೀವನಕ್ಕೆ ಮಾರ್ಗೋಪಾಯಕ್ಕಾಗಿ ಪರ್ಯಾಯ ವ್ಯವಸ್ಥೆ ಮಾಡದೆ ನಿಷೇಧಿಸಿದ್ದು, ಪುನಃ ಈ ಸಮುದಾಯದ ಕುಲಕಸುಬಾದ ಸೇಂದಿ ಮಾರಾಟವನ್ನು ಮುಂದುವರೆಸಲು ಅವಕಾಶ ನೀಡುವಂತೆ ಒತ್ತಾಯಿಸಿ ಕಾನೂನು ಹೋರಾಟ ನಡೆಸುವುದು ಖಚಿತ ಎಂದು ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಹೇಳಿದರು. ಈಡಿಗ ಜನಾಂಗದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಚಿತ್ತಾಪುರ ತಾಲ್ಲೂಕಿನ ಕರಗಲ್ಲು ಗ್ರಾಮದ ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದಿಂದ ಬೆಂಗಳೂರಿನವರೆಗೆ ಸುಮಾರು 700 ಕಿಮೀ ಪಾದಯಾತ್ರೆಯು ಗುರುವಾರ ಶಿರಾಕ್ಕೆ ಆಗಮಿಸಿತು. ಸಮುದಾಯದ ಮುಖಂಡರು ಹಾಗೂ ಮಾತೆಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಿದ ನಂತರ ಅವರು ಈಡಿಗ ಜನಾಂಗದ ಜಾಗೃತಿ ಸಭೆಯಲ್ಲಿ ಮಾತನಾಡಿದರು. ಶಿರಾದಿಂದ ಪ್ರಾರಂಭವಾದ ಪಾದಯಾತ್ರೆಯಲ್ಲಿ ಸುಮಂಗಲಿಯರು ಪೂರ್ಣಕುಂಭ ಕಲಶಗಳನ್ನು ಹೊತ್ತು ಸಾಗಿದರು. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಶಿರಾ ಭಾಗದ ಅನೇಕ ಮಂದಿ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಗುರುವಾರ ರಾತ್ರಿ ದೊಡ್ಡ ಆಲದಮರದಲ್ಲಿ ತಂಗಿ, ಪಾದಯಾತ್ರೆ ಇಂದು (ಶುಕ್ರವಾರ) ತುಮಕೂರು ತಾಲ್ಲೂಕು ಪ್ರವೇಶಿಸಲಿದೆ. ಪ್ರಣವಾನಂದ…

Read More

ಕೊರಟಗೆರೆ: ರಾಜಕೀಯದ ಸುದೀರ್ಘ ಇತಿಹಾಸದಲ್ಲಿ ಈ ಹಿಂದೆ ಕೋಳಾಲ ಹೋಬಳಿ ಜಿ.ಪಂ. ಸದಸ್ಯನಾಗಿದ್ದ ವೇಳೆಯಿಂದಲೂ ಕೊರಟಗೆರೆ ಕ್ಷೇತ್ರದ ಜನತೆಯ ಪರವಾಗಿ ಕೆಲಸ ಮಾಡಿದ್ದೇನೆ ಎಂದು ಮಾಜಿ ಜಿ.ಪಂ.ಸದಸ್ಯ ಪಿ.ಎನ್. ಕೃಷ್ಣಮೂರ್ತಿ ತಿಳಿಸಿದರು. ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಮಾವತ್ತೂರು ಗ್ರಾ.ಪಂ. ವ್ಯಾಪ್ತಿಯ ಲಿಂಗಾಪುರ ಗ್ರಾಮದಲ್ಲಿ ಶ್ರೀಮಾರಮ್ಮ ದೇವಾಲಯ ಸಮಿತಿಯಿಂದ ಆಯೋಜಿಸದ್ದ ಮಾರಮ್ಮ ದೇವಿ ಉತ್ಸವ ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಬುಧವಾರ ಸಂಜೆ ಪಾಲ್ಗೊಂಡು ದೇವಿಗೆ ಪೂಜೆ ಸಲ್ಲಿಸಿ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ಹಿರಿಯರ ಕಾಲದಿಂದಲೂ ಕ್ಷೇತ್ರದ ಜನತೆ ಪ್ರೀತಿ, ವಿಶ್ವಾಸ ತೋರಿ ಕೈ ಹಿಡಿದು ನಡೆಸಿದ್ದಾರೆ. 2028ಕ್ಕೆ ಕೊರಟಗೆರೆ ಕ್ಷೇತ್ರ ಸಾಮಾನ್ಯ ಮೀಸಲು ಕ್ಷೇತ್ರವಾದರೆ ಇಲ್ಲಿಂದಲೇ ಸ್ಪರ್ಧಿಸಲ್ಲಿದ್ದೇನೆ, ಸೋತರೂ ಗೆದ್ದರು ಎಂದಿಗೂ ನಿಮ್ಮವನೇ, ಇದೇ ಪ್ರೀತಿ ವಿಶ್ವಾಸ ಕೊನೆವರೆಗೂ ಕಾಪಾಡಿಕೊಂಡು ನಿಮ್ಮೆಲ್ಲರ ಸೇವೆಯನ್ನು ಮಾಡುತ್ತೇನೆ ಎಂದರು. ಕರವೇ ಅಧ್ಯಕ್ಷ ನರಸಿಂಹರಾಜು ಮತ್ತು ಸ್ನೇಹಿತರು ಗ್ರಾಮದೇವತೆ ಉತ್ಸವ ಮೂರ್ತಿಯ ಪ್ರತಿಷ್ಠಾಪನೆಗೆ ವಿಶೇಷ ಆಸಕ್ತಿ ತೋರಿ ಶ್ರಮವಹಿಸಿ ಕೆಲಸ ಮಾಡಿರುವುದು ಹೆಮ್ಮೆಯ ಸಂಗತಿ. ಇಂತಹ…

Read More

ತಿಪಟೂರು: ಕೇಂದ್ರ ಸರ್ಕಾರದ ಜನವಿರೋಧಿ, ರೈತ ವಿರೋಧಿ, ಕಾರ್ಮಿಕ ವಿರೋಧಿ ಹಾಗೂ ಮಹಿಳಾ ವಿರೋಧಿ ನೀತಿಗಳ ವಿರುದ್ಧ ಫೆಬ್ರವರಿ 12 ರಂದು ಅಖಿಲ ಭಾರತ ಮುಷ್ಕರ ಹಾಗೂ ಸ್ವಯಂಪ್ರೇರಿತ ಬಂದ್‌ ಗೆ ಕರೆ ನೀಡಲಾಗಿದ್ದು, ತಿಪಟೂರಿನಲ್ಲಿ ಅದನ್ನು ಯಶಸ್ವಿಗೊಳಿಸಲು ಕಾರ್ಮಿಕ ಹಾಗೂ ರೈತ ಸಂಘಟನೆಗಳ ಒಕ್ಕೂಟ ಪ್ರದರ್ಶನದ ನಡೆದ ಜಂಟಿ ಸಮಾವೇಶ ನಗರದ ಖಾಸಗಿ ಸಭಾಂಗಣದಲ್ಲಿ ನಡೆಸಲಾಯಿತು. ಕಾಂಗ್ರೆಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಬಿ.ಶಶಿಧರ್ ಮಾತನಾಡಿ, ನರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ಸಂಪೂರ್ಣ ನಾಶ ಮಾಡಲು ಹೊರಟಿದ್ದು ಕೃಷಿ ಕೂಲಿಕಾರರ ಕೈಯಿಂದ ಕೆಲಸ ಕಿತ್ತುಕೊಳ್ಳುತ್ತಿದೆ. ಕಟಾವಿನ ಮಹತ್ತರ ಸಮಯದಲ್ಲಿ ಕೆಲಸ ಇಲ್ಲ ಎಂಬುದು, ತಮ್ಮ ಜಮೀನನ್ನು ಅಭಿವೃದ್ಧಿಪಡಿಸಿಕೊಳ್ಳಲು, ರೈತರು ಕನಿಷ್ಠ ಬದುಕು ಬದುಕಲಿದ್ದ ನರೇಗಾ ಯೋಜನೆಯನ್ನು ಮಣ್ಣು ಪಾಲು ಮಾಡುತ್ತಿರುವ ಸರ್ಕಾರಗಳ ನೀತಿಗಳ ವಿರುದ್ಧ ಫೆಬ್ರವರಿ 12ರ ಹೋರಾಟವನ್ನು ನಾವು ನೀವುಗಳೆಲ್ಲರೂ ಯಶಸ್ವಿ ಮಾಡಬೇಕಿದೆ ಎಂದರು. ಸಭೆಯಲ್ಲಿ ಡಿಎಸ್‌ಎಸ್ ಜಿಲ್ಲಾಧ್ಯಕ್ಷ ಕುಂದೂರು ತಿಮ್ಮಯ್ಯ, ಎಐಕೆಎಂಎಸ್ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ…

Read More

ಗುಬ್ಬಿ: ತಾಲ್ಲೂಕಿನಲ್ಲಿ ಅರ್ಹವಿರುವ ಎಲ್ಲ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿಸುವ ಕೆಲಸ ಹೆಚ್ಚಿನ ವೇಗದಲ್ಲಿ ಸಾಗುತ್ತಿದೆ. ಈ ನಿರ್ಣಯದಿಂದ ಗ್ರಾಮಗಳಿಗೆ ಸರ್ಕಾರಿ ಸೌಲಭ್ಯ ಸರಿಯಾಗಿ ತಲುಪಲು ಸಾಧ್ಯವಾಗಲಿದೆ. ಸರ್ವೆ ನಂಬರ್ ಪ್ರದೇಶಗಳಲ್ಲಿ ಅನೇಕ ವರ್ಷಗಳಿಂದ ಮನೆ ಕಟ್ಟಿಕೊಂಡಿದ್ದರೂ, ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದ ನಿವಾಸಿಗಳ ಸಮಸ್ಯೆ ಗಮನಿಸಿದ ಸರ್ಕಾರ, ಎಲ್ಲ ಅರ್ಹ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ಸೂಚನೆ ನೀಡಿತ್ತು. ಅದರಂತೆ ತಾಲ್ಲೂಕು ಆಡಳಿತ ಕಾರ್ಯನಿರ್ವಹಿಸುತ್ತಿದೆ. ತಾಲ್ಲೂಕಿನಲ್ಲಿ ಈಗಾಗಲೇ ಸುಮಾರು 2 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಗಿದೆ. ಈ ಕ್ರಮದೊಂದಿಗೆ ಗುಬ್ಬಿ ತಾಲ್ಲೂಕು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಕಂದಾಯ ಗ್ರಾಮಗಳನ್ನು ರಚಿಸಿದ ತಾಲ್ಲೂಕಾಗಿದೆ. ತಾಲ್ಲೂಕಿನ ಎಲ್ಲ ಕಂದಾಯ ವೃತ್ತಗಳಲ್ಲಿ ಅರ್ಹರಾದ ಫಲಾನುಭವಿಗಳನ್ನು ಗುರುತಿಸಿ, ದಾಖಲೆಗಳನ್ನು ಸಂಗ್ರಹಿಸಿ ಸಲ್ಲಿಸುವಂತೆ ಗ್ರಾಮ ಆಡಳಿತ ಅಧಿಕಾರಿಗಳಿಗೆ ತಹಶೀಲ್ದಾರ್ ಸೂಚನೆ ನೀಡಿದ್ದಾರೆ. ತುಮಕೂರು ಉಪವಿಭಾಗೀಯ ಅಧಿಕಾರಿ ನೇತೃತ್ವದಲ್ಲಿ ವಿಚಾರಣೆ ನಡೆಸಿ, ಅರ್ಹ ಫಲಾನುಭವಿಗಳು ವಾಸಿಸುತ್ತಿರುವ ಜಾಗಗಳನ್ನು ನೋಂದಣಿ ಮಾಡಿ ಅವರಿಗೆ ಹಕ್ಕು ಪತ್ರ ವಿತರಿಸಲಾಗುತ್ತಿದೆ. ತಾಲ್ಲೂಕಿನ ಯಾವುದೇ ಗ್ರಾಮದ…

Read More

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚುತ್ತಿರುವ ಸುಳ್ಳು ಸುದ್ದಿ (Fake News), ದ್ವೇಷ ಭಾಷಣ (Hate Speech) ಮತ್ತು ತಪ್ಪು ಮಾಹಿತಿ ಹರಡುವುದನ್ನು ತಡೆಯಲು ಕರ್ನಾಟಕ ಸರ್ಕಾರವು ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (AI) ಚಾಲಿತ ‘ಸೋಷಿಯಲ್ ಮೀಡಿಯಾ ಅನಾಲಿಟಿಕ್ಸ್ ಸಲ್ಯೂಷನ್’ ತಂತ್ರಾಂಶವನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಇದಕ್ಕೆ ಸುಮಾರು 67.26 ಕೋಟಿ ರೂ. ವೆಚ್ಚದ ತಾತ್ವಿಕ ಅನುಮೋದನೆ ನೀಡಲಾಗಿದೆ. ಯೋಜನೆಯ ಉದ್ದೇಶ: ಸಾಂಪ್ರದಾಯಿಕ ವಿಧಾನಗಳಿಂದ ಸುಳ್ಳು ಸುದ್ದಿಗಳನ್ನು ಪತ್ತೆಹಚ್ಚುವುದು ಕಷ್ಟಕರವಾಗುತ್ತಿರುವ ಹಿನ್ನೆಲೆಯಲ್ಲಿ, ಡಿಜಿಟಲ್ ಬೆದರಿಕೆಗಳನ್ನು ಕ್ಷಿಪ್ರವಾಗಿ ಗುರುತಿಸಲು ಎಐ ತಂತ್ರಜ್ಞಾನ ಬಳಸಲಾಗುತ್ತಿದೆ. ಮಕ್ಕಳ ಕಳ್ಳಸಾಗಣೆ, ಆನ್–ಲೈನ್ ನಿಂದನೆ ಮತ್ತು ಉಗ್ರಗಾಮಿ ಚಟುವಟಿಕೆಗಳ ನಿರೂಪಣೆಗಳನ್ನು ಇದು ಪತ್ತೆಹಚ್ಚಲಿದೆ. ವ್ಯಾಪ್ತಿ: ಈ ತಂತ್ರಾಂಶವು ಸಾಮಾಜಿಕ ಜಾಲತಾಣಗಳು ಮತ್ತು ಮೆಸೇಜಿಂಗ್ ಪ್ಲಾಟ್‌ ಫಾರ್ಮ್‌ಗಳ ಮೇಲೆ ನಿಗಾ ಇಡಲಿದೆ. ಆದರೆ, ಮುಖ್ಯವಾಹಿನಿಯ ಮಾಧ್ಯಮಗಳ ಡಿಜಿಟಲ್ ವೇದಿಕೆಗಳು ಇದರ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಚಿವ…

Read More

ನೆಲಮಂಗಲ: ಬೆಂಗಳೂರಿನಿಂದ ಕಲಬುರಗಿಗೆ ತೆರಳುತ್ತಿದ್ದ ಖಾಸಗಿ ಬಸ್ ಒಂದು ಭೀಕರ ಅಪಘಾತಕ್ಕೀಡಾಗಿ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ಹನುಮಂತಪುರ ಗೇಟ್ ಬಳಿ ಇಂದು (ಶುಕ್ರವಾರ) ಮುಂಜಾನೆ ಸಂಭವಿಸಿದೆ. ಘಟನೆಯ ವಿವರ: ಬೆಂಗಳೂರಿನಿಂದ ಕಲಬುರಗಿ ಕಡೆಗೆ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ‘ಸಂಜನಾ ಟ್ರಾವೆಲ್ಸ್’ಗೆ ಸೇರಿದ ಬಸ್, ನೆಲಮಂಗಲ ತಾಲೂಕಿನ ಹನುಮಂತಪುರ ಗೇಟ್ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಮೊದಲು ರಸ್ತೆ ವಿಭಜಕಕ್ಕೆ (ಡಿವೈಡರ್) ಡಿಕ್ಕಿ ಹೊಡೆದಿದೆ. ನಂತರ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಬಸ್‌ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಸಮಯಪ್ರಜ್ಞೆ ಮೆರೆದ ಚಾಲಕ: ಬಸ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಎಚ್ಚೆತ್ತ ಚಾಲಕ, ತಕ್ಷಣವೇ ಎಲ್ಲ ಪ್ರಯಾಣಿಕರನ್ನು ಕೆಳಗೆ ಇಳಿಯುವಂತೆ ಸೂಚಿಸಿದ್ದಾನೆ. ಬಸ್‌ನಲ್ಲಿದ್ದ ಸುಮಾರು 40 ಪ್ರಯಾಣಿಕರು ಕೂಡಲೇ ಕೆಳಗಿಳಿದಿದ್ದರಿಂದ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದಂತಾಗಿದೆ. ಕ್ಷಣಾರ್ಧದಲ್ಲೇ ಬೆಂಕಿ ಇಡೀ ಬಸ್ ಅನ್ನು ಆವರಿಸಿದ್ದು, ವಾಹನ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಬೆಂಕಿ ತೀವ್ರವಾಗಿದ್ದರಿಂದ ಪ್ರಯಾಣಿಕರಿಗೆ ಪ್ರಾಣಾಪಾಯವಾಗದಿದ್ದರೂ, ಬಸ್‌ನ…

Read More

ಬೆಂಗಳೂರು: ಬಹುನಿರೀಕ್ಷಿತ ಬೆಂಗಳೂರು ಬಿಸಿನೆಸ್ ಕಾರಿಡಾರ್ (BBC) ಯೋಜನೆಯ ಮೊದಲ ಹಂತವನ್ನು ಮುಂದಿನ 18 ತಿಂಗಳಲ್ಲಿ (ಒಂದೂವರೆ ವರ್ಷ) ಪೂರ್ಣಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (BDA) ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯ ನಂತರ ಮಾತನಾಡಿದ ಅವರು, ಈ ಯೋಜನೆಯ ಕುರಿತು ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡರು. ಪರಿಹಾರ ವಿತರಣೆ: ಯೋಜನೆಗಾಗಿ ಭೂಮಿ ನೀಡಿದ ಉತ್ತರ ಮತ್ತು ದಕ್ಷಿಣ ಕಾರಿಡಾರ್‌ನ ಭೂಮಾಲೀಕರಿಗೆ ಪರಿಹಾರದ ಚೆಕ್‌ಗಳು, ಪ್ರಮಾಣಪತ್ರಗಳು ಹಾಗೂ ಟಿಡಿಎಸ್ (TDS) ದಾಖಲೆಗಳನ್ನು ವಿತರಿಸಲಾಗಿದೆ. ಪರಿಹಾರದ ಆಯ್ಕೆಗಳು: ಭೂಮಾಲೀಕರಿಗೆ ಸರ್ಕಾರ ವಿವಿಧ ರೀತಿಯ ಪರಿಹಾರಗಳನ್ನು ನೀಡಿದೆ. ಕೆಲವು ಮಾಲೀಕರು ಶೇ. 35ರಷ್ಟು ವಾಣಿಜ್ಯ ಬಳಕೆಯ ಭೂಮಿಯನ್ನು ಪಡೆಯಲು ಒಲವು ತೋರಿದ್ದರೆ, ಮತ್ತೆ ಕೆಲವು ಮಾಲೀಕರು ನಗದು ಪರಿಹಾರವನ್ನು ಪಡೆದಿದ್ದಾರೆ. ಪರಿಹಾರದ ಮೊತ್ತ: ಭೂಮಾಲೀಕರಿಗೆ ಮಾರುಕಟ್ಟೆ ಮೌಲ್ಯದ ಮೂರು ಪಟ್ಟು ಹೆಚ್ಚಿನ ದರದಲ್ಲಿ ಪರಿಹಾರ ನೀಡಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA)…

Read More

ನವದೆಹಲಿ: ಕೇಂದ್ರ ಬಜೆಟ್‌ ನಲ್ಲಿ ರೈಲ್ವೆ ವಲಯಕ್ಕೆ ನೀಡಲಾದ ಆದ್ಯತೆ ಮತ್ತು ಹೊಸ ಯೋಜನೆಗಳ ಘೋಷಣೆಯನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಶ್ಲಾಘಿಸಿದ್ದಾರೆ. ಈ ಕುರಿತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದಿರುವ ಅವರು, ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಕಾರಿಡಾರ್ ಅನ್ನು ಬೀದರ್ ವರೆಗೆ ವಿಸ್ತರಿಸುವಂತೆ ವಿಶೇಷ ಮನವಿ ಮಾಡಿದ್ದಾರೆ. ಬಜೆಟ್ ಶ್ಲಾಘನೆ: 2026ರ ಕೇಂದ್ರ ಬಜೆಟ್‌ ನಲ್ಲಿ ಸುಮಾರು 4,000 ಕಿ.ಮೀ. ವ್ಯಾಪ್ತಿಯ ಏಳು ಹೊಸ ಹೈಸ್ಪೀಡ್ ರೈಲು ಕಾರಿಡಾರ್‌ ಗಳನ್ನು ಘೋಷಿಸಿರುವುದನ್ನು ದೇವೇಗೌಡರು ಸ್ವಾಗತಿಸಿದ್ದಾರೆ. ಈ ಯೋಜನೆಗಳು ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಬೀದರ್ ವರೆಗೆ ವಿಸ್ತರಣೆ: ಬೆಂಗಳೂರು ಮತ್ತು ಹೈದರಾಬಾದ್ ನಡುವಿನ ಹೈಸ್ಪೀಡ್ ರೈಲು ಮಾರ್ಗವನ್ನು ಬೀದರ್ ವರೆಗೆ ವಿಸ್ತರಿಸುವುದರಿಂದ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಪತ್ರದಲ್ಲಿ ಒತ್ತಿ ಹೇಳಿದ್ದಾರೆ. ದಕ್ಷಿಣ ಭಾರತದ ತ್ರಿಕೋನ ಸಂಪರ್ಕ: ಚೆನ್ನೈ—ಬೆಂಗಳೂರು–ಹೈದರಾಬಾದ್ ಕಾರಿಡಾರ್ ದಕ್ಷಿಣ ಭಾರತದಲ್ಲಿ ಒಂದು ‘ಅತಿ ವೇಗದ…

Read More