Subscribe to Updates
Get the latest creative news from FooBar about art, design and business.
- ಇ–ಪೌತಿ ಖಾತಾ ಆಂದೋಲನ–2 : ರೈತರಿಂದ ಅರ್ಜಿಗಳ ಸ್ವೀಕಾರ — ಬಾಕಿ ಆರ್ ಆರ್ ಟಿ ಅರ್ಜಿಗಳ ಶೀಘ್ರ ವಿಲೇವಾರಿಗೆ ಸೂಚನೆ
- ನೀಟ್ ಮರು ಪರೀಕ್ಷೆ ; ಕಟ್ಟುನಿಟ್ಟಿನ ಸಿದ್ಧತೆಗೆ ಎಡಿಸಿ ಸೂಚನೆ
- ಕೆಪಿಎಸ್ ಶಾಲೆಗೆ ಕುಂಕಮನಹಳ್ಳಿ ಶಾಲೆಯನ್ನು ವಿಲೀನಗೊಳಿಸದಂತೆ ಆಗ್ರಹ
- ಜೂನ್ 19ರಂದು ತುಮಕೂರಿನಲ್ಲಿ ಪ್ರಧಾನ ಮಂತ್ರಿ ವಿಕಸಿತ ಭಾರತ ಉದ್ಯೋಗ ಯೋಜನೆ ಫಲಾನುಭವಿಗಳಿಗೆ ಪ್ರೋತ್ಸಾಹಧನ ವಿತರಣೆ
- ಸಿರಾನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
- ಜು.18: ನ್ಯಾಯಾಲಯಗಳಲ್ಲಿ ವಿಶೇಷ ಲೋಕ ಅದಾಲತ್: ವಿವಿಧ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಸಹಕಾರಿ
- ಕೊರಟಗೆರೆ: ಆಟೋ ಡಿಕ್ಕಿಯಾಗಿ ಯುವಕ ಸಾವು
- ಸಮಾಜ ಕಲ್ಯಾಣ ಇಲಾಖೆ: ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಆರಂಭ
Author: admin
ಕೊರಟಗೆರೆ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ ವಿಂಗಡಣೆ ಕಾರ್ಯವನ್ನು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ಪೂರ್ಣಗೊಳಿಸಿದೆ. ಹೊಸ ಪಟ್ಟಿಯನ್ನು ಗೆಜೆಟ್ ನಲ್ಲಿ ಪ್ರಕಟಿಸಿದೆ. ತಾಲ್ಲೂಕಿನಲ್ಲಿ ಜಿಲ್ಲಾ ಪಂಚಾಯಿತಿಯ ಒಟ್ಟು ಕ್ಷೇತ್ರಗಳ ಸಂಖ್ಯೆಯನ್ನು 4ಕ್ಕೆ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಒಟ್ಟು ಸಂಖ್ಯೆಯನ್ನು 15ಕ್ಕೆ ನಿಗದಿಪಡಿಸಲಾಗಿದೆ. ಕೊರಟಗೆರೆ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮಾಡಲಾಗಿದೆ. ಪಟ್ಟಣದ ಸುತ್ತಮುತ್ತಲಿನ ಕೆಲವು ಪ್ರದೇಶಗಳನ್ನು ಪುರಸಭೆ ವ್ಯಾಪ್ತಿಗೆ ಸೇರಿಸಲಾಗಿದೆ. ಆ ಪ್ರದೇಶಗಳನ್ನು ಕೈಬಿಟ್ಟು ಗಡಿ ಗುರುತಿಸಲಾಗಿದೆ. ಹಾಗಾಗಿ ಈ ಹಿಂದೆ ತಾಲ್ಲೂಕು ಪಂಚಾಯಿತಿಗೆ ಗುರುತಿಸಿದ್ದ 16 ಕ್ಷೇತ್ರಗಳನ್ನು ಈಗ 15ಕ್ಕೆ ಇಳಿಕೆ ಮಾಡಲಾಗಿದೆ. ತಾ.ಪಂ ಕ್ಷೇತ್ರ ಹಾಗೂ ಕ್ಷೇತ್ರದ ವ್ಯಾಪ್ತಿಗೆ ಸೇರಿದ ಗ್ರಾಮಗಳು: ತೋವಿನಕೆರೆ: ತೋವಿನಕೆರೆ, ಮುದಿಗೌಡನಹಳ್ಳಿ, ಬಡಮುದ್ರನಪಾಳ್ಯ, ಬೋರಯ್ಯನಹಟ್ಟಿ, ದೊಡ್ಡ ಸಂಜೀವೆಗೌಡನಪಾಳ್ಯ, ಚಿಕ್ಕಸಂಜೀವೆಗೌಡನಪಾಳ್ಯ, ಬಿಸಾಡಿಹಳ್ಳಿ, ಕಣಿವೆ ಹೊಸಹಳ್ಳಿ, ದೊಡ್ಡಗೌಡನ ಪಾಳ್ಯ, ಅಷ್ಟೇನಹಳ್ಳಿ, ಕುರಿಹಳ್ಳಿ, ಬೋರಪ್ಪನಹಟ್ಟಿ, ಸೂರೇನಹಳ್ಳಿ, ಚಿಕ್ಕವೆಂಕಟದಾಸೇಗೌಡನ ಪಾಳ್ಯ, ಕಲ್ಲುವೀರನಹಟ್ಟಿ, ಚಿಕ್ಕಣ್ಣನಹಳ್ಳಿ, ಮರಾಠಿಗರಪಾಳ್ಯ, ಚಿಕ್ಕರಸನಹಳ್ಳಿ, ದೇವರಹಳ್ಳಿ, ಕಬ್ಬಿಗೆರೆ,…
ಕೊರಟಗೆರೆ : ನಮ್ಮ ದೇಶದ ಗ್ರಾಮೀಣ ಸಂಸ್ಕೃತಿಯ ಜೀವಾಳವೇ ನಾಗರಕಟ್ಟೆ. ಪ್ರತಿಯೊಂದು ಗ್ರಾಮದಲ್ಲೂ ನಾಗರಕಟ್ಟೆಯನ್ನು ನಮ್ಮ ಪೂರ್ವಿಕರು ವಿಶಿಷ್ಟವಾದ ಧಾರ್ಮಿಕ–ಸಾಂಸ್ಕೃತಿಕ ಅರ್ಥಪೂರ್ಣತೆಯೊಂದಿಗೆ ಇದರ ಹಿಂದೆ ವೈಜ್ಞಾನಿಕ ದೃಷ್ಟಿಕೋನವೂ ಅಡಗಿದೆ ಎಂದು ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ಹೇಳಿದರು. ಪಟ್ಟಣದ ಬಸ್ ಸ್ಟ್ಯಾಂಡ್ ನಲ್ಲಿರುವ ನಾಗರಕಟ್ಟೆ ಸೇವಾ ಸಮಿತಿಯ ವತಿಯಿಂದ ಆಯೋಜಿಸಿದ್ದ 8 ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ನಮ್ಮ ಪ್ರತಿಯೊಂದು ಧಾರ್ಮಿಕ ಆಚರಣೆಯೂ ಕೇವಲ ನಂಬಿಕೆಗೆ ಸೀಮಿತವಲ್ಲ; ಅದರಲ್ಲಿ ವೈಜ್ಞಾನಿಕ ತತ್ತ್ವಗಳು ಅಡಗಿವೆ. ಅರಳಿ ಮರದಿಂದ ಹೆಚ್ಚು ಆಮ್ಲಜನಕ ಉತ್ಪತ್ತಿಯಾಗುವುದರಿಂದ ಪ್ರತಿ ಗ್ರಾಮದಲ್ಲಿಯೂ ಅರಳಿ ಕಟ್ಟೆಯನ್ನು ನಿರ್ಮಿಸಿ, ಅದರ ಕೆಳಗೆ ನಾಗದೇವರನ್ನು ಪ್ರತಿಷ್ಠಾಪಿಸುವ ಪರಂಪರೆಯನ್ನು ನಮ್ಮ ಪೂರ್ವಿಕರು ರೂಪಿಸಿದ್ದರು. ಇದು ಪರಿಸರ ಸಂರಕ್ಷಣೆಗೂ ಮಾನಸಿಕ ಶಾಂತಿಗೂ ಸಹಕಾರಿ ಎಂದರು. ಕಾರ್ಯಕ್ರಮದಲ್ಲಿ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಮ್ಮ ಆಚರಣೆಗಳನ್ನು ಕೇವಲ ವಿಧಿವಿಧಾನಗಳಾಗಿ…
ಮಧುಗಿರಿ: ಅಧಿಕಾರಿಗಳ ಭ್ರಷ್ಟಾಚಾರ ಮತ್ತು ವಿಳಂಬ ಧೋರಣೆಗೆ ಬೇಸತ್ತ ರೈತರೊಬ್ಬರು ತಾಲ್ಲೂಕು ಕಚೇರಿ ಮುಂದೆ ತಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ನೀಡಲು ಮುಂದಾದ ವಿಚಿತ್ರ ಹಾಗೂ ಆಕ್ರೋಶದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ನಡೆದಿದೆ. ಘಟನೆಯ ವಿವರ: ತಾಲ್ಲೂಕಿನ ದೊಡ್ಡರಿ ಹೋಬಳಿಯ ಜಕ್ಕೇನಹಳ್ಳಿ ಗ್ರಾಮದ ರೈತ ಪ್ರಸನ್ನಕುಮಾರ್ ಎಂಬವರು ಈ ವಿನೂತನ ಪ್ರತಿಭಟನೆ ನಡೆಸಿದವರು. ಕಳೆದ ಎರಡು ವರ್ಷಗಳಿಂದ ತಮ್ಮ ಜಮೀನಿಗೆ ದಾರಿ ಮಾಡಿಕೊಡುವಂತೆ ಅವರು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಅಲೆದಾಡುತ್ತಿದ್ದರು. ಲೋಕಾಯುಕ್ತ ನ್ಯಾಯಾಲಯವು ಒಂದು ತಿಂಗಳೊಳಗೆ ರಸ್ತೆ ನಿರ್ಮಿಸಿಕೊಡುವಂತೆ ಆದೇಶ ನೀಡಿದ್ದರೂ, ಸ್ಥಳೀಯ ಅಧಿಕಾರಿಗಳು ಮಾತ್ರ ಕಾರ್ಯಪ್ರವೃತ್ತರಾಗಿರಲಿಲ್ಲ. ಮೂಲಂಗಿ ಹಿಡಿದು ಆಕ್ರೋಶ: ಜಮೀನಿನ ದಾರಿ ಒತ್ತುವರಿ ತೆರವುಗೊಳಿಸಲು ಅಥವಾ ಸ್ಥಳ ಪರಿಶೀಲನೆ ನಡೆಸಲು ಅಧಿಕಾರಿಗಳು ಹಣದ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿರುವ ಪ್ರಸನ್ನಕುಮಾರ್, ಮಂಗಳವಾರ ತಾಲ್ಲೂಕು ಕಚೇರಿ ಮುಂದೆ ಮೈಕ್ ಹಿಡಿದು ಘೋಷಣೆ ಕೂಗಿದರು. “ನನ್ನ ಬಳಿ ಲಂಚ ನೀಡಲು ಹಣವಿಲ್ಲ, ಹಾಗಾಗಿ ನಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ಕೊಡುತ್ತೇನೆ…
ತುಮಕೂರು : ಸರ್ಕಾರದ ಸುತ್ತೋಲೆಯನ್ನು ಉಲ್ಲಂಘಿಸಿ ಕೆ.ಎಸ್.ಆರ್.ಟಿ.ಸಿ./ಬಿ ಎಂ ಟಿ ಸಿ, ಬಿ.ಟಿ.ಎಸ್. ಬಸ್ಸುಗಳ ಮೇಲೆ ಇಂಗ್ಲಿಷ್ ಪೋಸ್ಟರ್ ಗಳು, ಸ್ಟೀಕರ್ ಗಳು ಹಾಗೂ ಅನಧಿಕೃತ ಸ್ಪೀಕರ್ ಗಳು ಇನ್ನೂ ಅಳವಡಿಸಿಕೊಂಡಿರುವುದು ಅತ್ಯಂತ ಖಂಡನೀಯ ಎಂದು ಅಂಬೇಡ್ಕರ್ ಸಮಿತಿ ಸಮಾಜ ಸೇವಾ ಸಮಿತಿ, ತುಮಕೂರು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕರ್ನಾಟಕ ರಾಜ್ಯ ಸರ್ಕಾರವು ಈಗಾಗಲೇ ಹೊರಡಿಸಿರುವ ಸುತ್ತೋಲೆ/ಆದೇಶದಂತೆ ಸರ್ಕಾರಿ ಸಾರಿಗೆ ಬಸ್ಸುಗಳ ಮೇಲೆ ಇಂಗ್ಲಿಷ್ ಪೋಸ್ಟರ್ ಗಳು, ಸ್ಟೀಕರ್ ಗಳು ಹಾಗೂ ಅನಧಿಕೃತ ಧ್ವನಿವರ್ಧಕಗಳನ್ನು ತೆರವುಗೊಳಿಸುವಂತೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಆದರೂ ತುಮಕೂರು ನಗರದಲ್ಲಿ ಸಂಚರಿಸುತ್ತಿರುವ ಕೆಲವು ಕೆ.ಎಸ್.ಆರ್.ಟಿ.ಸಿ./ಬಿ.ಟಿ.ಎಸ್. ಬಸ್ಸುಗಳಲ್ಲಿ ಇಂದಿಗೂ ಇಂಗ್ಲಿಷ್ ಪೋಸ್ಟರ್ ಗಳು ಹಾಗೂ ಸ್ಪೀಕರ್ ಗಳು ರಾರಾಜಿಸುತ್ತಿರುವುದು ಸರ್ಕಾರದ ಆದೇಶಗಳಿಗೆ ನೇರ ಸವಾಲು ಹಾಕಿದಂತೆ ಆಗಿದೆ. ಇದು ಕನ್ನಡ ಭಾಷೆ, ಕನ್ನಡಿಗರ ಭಾವನೆಗಳು ಹಾಗೂ ರಾಜ್ಯದ ಗೌರವಕ್ಕೆ ಧಕ್ಕೆ ತರುವ ಕಾರ್ಯವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಈ ಕುರಿತು ಅಂಬೇಡ್ಕರ್ ಸಮಿತಿ ಸಮಾಜ ಸೇವಾ…
ಸರಗೂರು: ತಾಲೂಕಿನಲ್ಲಿ ಮಾನವ ಮತ್ತು ಕಾಡಾನೆ ನಡುವಣ ಸಂಘರ್ಷ ಮುಂದುವರಿದಿದ್ದು, ಗುರುವಾರ ಬೆಳಗಿನ ಜಾವ ಕಾಡಾನೆ ದಾಳಿಗೆ ರೈತರೊಬ್ಬರು ಬಲಿಯಾಗಿರುವ ದಾರುಣ ಘಟನೆ ಬಿ.ಮಟಕರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್.ಟಿ ಕಾಲೋನಿಯಲ್ಲಿ ನಡೆದಿದೆ. ಘಟನೆಯ ವಿವರ: ಮೃತ ರೈತರನ್ನು ಎಸ್.ಟಿ.ಕಾಲೋನಿ ಗ್ರಾಮದ ನಿವಾಸಿ ಮಾದ (75) ಎಂದು ಗುರುತಿಸಲಾಗಿದೆ. ಗುರುವಾರ ಬೆಳಿಗ್ಗೆ ಮಾದ ಅವರು ಮಲ ವಿಸರ್ಜನೆಗಾಗಿ ಜಮೀನಿನ ಕಡೆಗೆ ತೆರಳಿದ್ದಾಗ, ಮೊಳೆಯೂರು ವಲಯದಿಂದ ಬಂದ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿದೆ. ಆನೆಯು ಅವರನ್ನು ತುಳಿದು ಹಾಕಿದ್ದರಿಂದ ಮಾದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಹಳ ಹೊತ್ತಾದರೂ ಮಾದ ಅವರು ಮನೆಗೆ ಮರಳದಿದ್ದಾಗ ಆತಂಕಗೊಂಡ ಕುಟುಂಬಸ್ಥರು ಹುಡುಕಿಕೊಂಡು ಹೋದಾಗ, ಬಂಡೀಪುರ ಗ್ಯಾಸ್ ಗೋಡೌನ್ ಪಕ್ಕದ ರಸ್ತೆಯ ಬಳಿ ಶವವು ಅರೆನಗ್ನಾವಸ್ಥೆಯಲ್ಲಿ ಪತ್ತೆಯಾಗಿದೆ. ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ: ಘಟನೆ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ನೂರಾರು ಗ್ರಾಮಸ್ಥರು ಮತ್ತು ಸಂಬಂಧಿಕರು ಜಮಾಯಿಸಿ ಅರಣ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. “ರೈಲು ಕಂಬಿಗಳ ಬ್ಯಾರಿಕೇಡ್ ಗಳು…
ಶಿರಾ (ತುಮಕೂರು): ಈಡಿಗ ಜನಾಂಗದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಅವರು ಹಮ್ಮಿಕೊಂಡಿರುವ ಬೃಹತ್ ಪಾದಯಾತ್ರೆಗೆ ಶಿರಾ ತಾಲ್ಲೂಕಿನಲ್ಲಿ ಬುಧವಾರ ಅದ್ಧೂರಿ ಸ್ವಾಗತ ಕೋರಲಾಯಿತು. ಚಿತ್ತಾಪುರ ತಾಲ್ಲೂಕಿನ ಕರಗಲ್ಲು ಗ್ರಾಮದಿಂದ ಬೆಂಗಳೂರಿನವರೆಗೆ ಸುಮಾರು 700 ಕಿ.ಮೀ. ದೂರದ ಈ ಪಾದಯಾತ್ರೆಯು ಶಿರಾ ತಾಲ್ಲೂಕಿನ ಗಡಿಭಾಗವಾದ ಉಜ್ಜನಕುಂಟೆಗೆ ಆಗಮಿಸಿದಾಗ, ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಮುಖಂಡರು ಮತ್ತು ಸಮುದಾಯದ ನಾಯಕರು ಸ್ವಾಮೀಜಿಯವರನ್ನು ಸ್ವಾಗತಿಸಿದರು. ಪಾದಯಾತ್ರೆಯ ಸಂದರ್ಭದಲ್ಲಿ ಮಾತನಾಡಿದ ಪ್ರಣವಾನಂದ ಸ್ವಾಮೀಜಿ, ಈಡಿಗ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಈ ಪಾದಯಾತ್ರೆ ನಡೆಸುತ್ತಿರುವುದಾಗಿ ತಿಳಿಸಿದರು. ಬೇಡಿಕೆಗಳು: ಪರ್ಯಾಯ ವ್ಯವಸ್ಥೆ: ಈಡಿಗರ ಕುಲಕಸುಬಾದ ಸೇಂದಿ ಮಾರಾಟ ನಿಷೇಧಿಸಿರುವುದರಿಂದ ಜನಾಂಗದವರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಬಾಧಿತ ಕುಟುಂಬಗಳಿಗೆ ತಲಾ 5 ಎಕರೆ ಜಮೀನು ಮಂಜೂರು ಮಾಡಬೇಕು. ಮೀಸಲಾತಿ: ಈಡಿಗ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ (ST) ಸೇರಿಸಬೇಕು. ಗೌರವ: ಬೆಂಗಳೂರಿನ ವಿಧಾನಸೌಧದ ಮುಂದೆ ಬ್ರಹ್ಮಶ್ರೀ ನಾರಾಯಣಗುರು ಅವರ…
ನವದೆಹಲಿ: ಕರ್ನಾಟಕದ ಬಾಕಿ ಇರುವ ನೀರಾವರಿ ಯೋಜನೆಗಳಿಗೆ ಶೀಘ್ರವಾಗಿ ಅನುಮೋದನೆ ನೀಡುವಂತೆ ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಹೆಚ್.ಡಿ. ದೇವೇಗೌಡ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ರಾಜ್ಯಸಭೆಯಲ್ಲಿ ಈ ವಿಷಯದ ಕುರಿತು ಮಾತನಾಡುತ್ತಾ ಅವರು ಅತ್ಯಂತ ಭಾವುಕರಾದರು. ಯೋಜನೆಗಳಿಗೆ ಆಗ್ರಹ: ಕಾವೇರಿ ಮತ್ತು ಕೃಷ್ಣಾ ನದಿ ಪಾತ್ರದ ಪ್ರಮುಖ ನೀರಾವರಿ ಯೋಜನೆಗಳು ದಶಕಗಳಿಂದ ನೆನೆಗುದಿಗೆ ಬಿದ್ದಿವೆ. ಮೇಕೆದಾಟು ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆ (UKP) ಸೇರಿದಂತೆ ರಾಜ್ಯದ ಹಿತಾಸಕ್ತಿ ಕಾಪಾಡುವ ಯೋಜನೆಗಳಿಗೆ ಕೇಂದ್ರ ಸರ್ಕಾರ ಕೂಡಲೇ ಒಪ್ಪಿಗೆ ನೀಡಬೇಕು ಎಂದು ಅವರು ಮನವಿ ಮಾಡಿದರು. ಭಾವನಾತ್ಮಕ ಕ್ಷಣ: ಕರ್ನಾಟಕದ ರೈತರ ಸಂಕಷ್ಟ ಮತ್ತು ನೀರಾವರಿ ಸಮಸ್ಯೆಗಳ ಬಗ್ಗೆ ವಿವರಿಸುವಾಗ ದೇವೇಗೌಡರು ಗದ್ಗದಿತರಾದರು. “ನನ್ನ ಜೀವನದ ಕೊನೆಯ ಹಂತದಲ್ಲಿದ್ದೇನೆ, ಈ ಯೋಜನೆಗಳು ಜಾರಿಯಾಗುವುದನ್ನು ನೋಡುವ ಆಸೆ ನನಗಿದೆ” ಎಂದು ಅವರು ಭಾವುಕರಾಗಿ ನುಡಿದರು. ತಾರತಮ್ಯದ ಆರೋಪ: ಅಂತರರಾಜ್ಯ ನದಿ ನೀರು ಹಂಚಿಕೆ ವಿಷಯದಲ್ಲಿ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಸುಪ್ರೀಂ ಕೋರ್ಟ್ ಮತ್ತು…
ತುಮಕೂರು: ಪ್ರವಾಸಿ ಸ್ಥಳಗಳಲ್ಲಿ ಶಾಲಾ ಹಾಗೂ ಪ್ರವಾಸಿಗ ಮಕ್ಕಳ ಸುರಕ್ಷತೆ ಖಾತರಿಪಡಿಸಲು ನಿಯಮ ಅಳವಡಿಸುವ ಬಗ್ಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ. ತಿಪ್ಪೇಸ್ವಾಮಿ ಸರ್ಕಾರದ ಗಮನ ಸೆಳೆದಿದ್ದಾರೆ. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಅವರು, ಇತ್ತೀಚಿನ ವರ್ಷಗಳಲ್ಲಿ ಬೀಚ್ ಗಳಲ್ಲಿ ಮುಳುಗಿ ಮಕ್ಕಳು ಸಾವನ್ನಪ್ಪುತ್ತಿರುವುದು, ಸೆಲ್ಫಿ ತೆಗೆದುಕೊಳ್ಳುವ ವೇಳೆ ಬೀಳುವುದು, ಚಾರಣದ ವೇಳೆ ದಾರಿ ತಪ್ಪಿ ಅಪಾಯಕ್ಕೆ ಸಿಲುಕುವುದು ಇತ್ಯಾದಿ ದುರ್ಘಟನೆಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಎಲ್ಲ ಪ್ರವಾಸಿ ತಾಣಗಳ ಸ್ಥಳಗಳಲ್ಲಿ ಮಕ್ಕಳ ಸಹಾಯವಾಣಿ ಪ್ರದರ್ಶನ ಮಾಡಬೇಕು ಎಂದಿದ್ದಾರೆ. ಅಪಾಯಕಾರಿ ಪ್ರದೇಶಗಳಲ್ಲಿ ಸೂಚನಾ ಫಲಕ ಅಳವಡಿಸಬೇಕು. ಪ್ರವಾಸೋದ್ಯಮ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗೆ ತರಬೇತಿ ನೀಡಬೇಕು. ಮಕ್ಕಳ ಸುರಕ್ಷತಾ ವಲಯ ಗುರುತಿಸಬೇಕು. ಶಾಲಾ ಪ್ರವಾಸಗಳಿಗೆ ಪೂರ್ವ ನೋಂದಣಿ ಮಾಡಬೇಕು ಇತ್ಯಾದಿ ಸಲಹೆಗಳನ್ನು ನೀಡಿದ್ದು, ಇವುಗಳ ಜಾರಿಗೆ ಮನವಿ ಮಾಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…
ಪಾವಗಡ: ನಿರಂತರವಾಗಿರುವ ಶಿಕ್ಷಣ ವ್ಯವಸ್ಥೆಯ ನಿರ್ಲಕ್ಷ್ಯತೆ ದೇಶಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಅತ್ಯಂತ ಅಪಾಯಕಾರಿ ಎಂದು ಹಿರಿಯ ಸಾಹಿತಿ, ನಾಡೋಜ ಬರಗೂರು ರಾಮಚಂದ್ರಪ್ಪ ತಿಳಿಸಿದರು. ಅವರು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಎಸ್.ಎಸ್.ಕೆ. ರಂಗಮಂದಿರದಲ್ಲಿ ಮಂಗಳವಾರ 8ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ದೇಶದಲ್ಲಿ ದೊಡ್ಡಮಟ್ಟದ ಪಲ್ಲಟ ಉಂಟುಮಾಡಿದೆ. ಸೆರೆಮನೆಯಲ್ಲಿದ್ದ ಶಿಕ್ಷಣ ಹಳ್ಳಿಗಳಿಗೆ, ಹಟ್ಟಿಗಳಿಗೆ, ಮಣ್ಣಿನ ಮನೆಗಳಿಗೆ, ಪ್ರತಿಯೊಬ್ಬರಲ್ಲಿ ಹರಿದುಬಂದಾಗ ಅಕ್ಷರಸ್ಥರು ಬೆಳೆದು ವಿದ್ಯಾವಂತರಾದರು. ಸಮುದಾಯಗಳ ಪ್ರಗತಿಯ ಪರ್ವ ಪ್ರಾರಂಭವಾಯಿತು. ಆದರೆ ಇಂದು ಶೇಕಡಾವಾರು ಫಲಿತಾಂಶಕ್ಕೆ ಮನ್ನಣೆ ನೀಡಲಾಗುತ್ತಿದ್ದು, ಪ್ರಗತಿ ಬದಲಾಗಿ ಅಂಕ ಆಧಾರಿತವಾಗಿ ದೊರೆಯುತ್ತಿರುವ ಶಿಕ್ಷಣವನ್ನು ಗುಣಮಟ್ಟದ ಶಿಕ್ಷಣ ಎಂದು ಕರೆಯಲಾಗುವುದಿಲ್ಲ ಎಂದರು. ಕನಿಷ್ಠ ಪ್ರಾಥಮಿಕ ಶಿಕ್ಷಣವಾದರೂ ಏಕರೂಪವಾಗಿರಬೇಕು ಮತ್ತು ಉನ್ನತ ಶಿಕ್ಷಣ ಬಹುರೂಪಿಯಾಗಿರಬೇಕು. ಗಡಿಭಾಗಗಳಲ್ಲಿ ಅನಿವಾರ್ಯವಾಗಿ ಕನಿಷ್ಠ ಎರಡು ಭಾಷೆಗಳು ಮತ್ತು ಎರಡು, ಮೂರು ಸಂಸ್ಕೃತಿಗಳಿರುವುದು ಸಹಜ. ಈ ಪ್ರದೇಶ ಕೊನೆಯಲ್ಲಿ ಇರುವುದರಿಂದ ಆಳುವವರ ನಿರ್ಲಕ್ಷ್ಯಕ್ಕೆ ಒಳಗಾಗುವುದು ಉಂಟು. ಗಡಿನಾಡು ಪ್ರಗತಿಗಾಗಿ ಸ್ಥಾಪನೆಗೊಂಡಿರುವ ಗಡಿನಾಡು ಅಭಿವೃದ್ಧಿ…
ತುಮಕೂರು: ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ವತಿಯಿಂದ, ಬಡವರ ನೋವನ್ನು ತಮ್ಮ ಬರವಣಿಗೆಯ ಮೂಲಕ ಜಗತ್ತಿಗೆ ಸಾದರಪಡಿಸಿದ ಸಾಹಿತ್ಯ ಲೋಕದ ಅಪ್ರತಿಮ ದೈತ್ಯ ಪ್ರತಿಭೆ ದಲಿತ ಕವಿ ಡಾ. ಸಿದ್ದಲಿಂಗಯ್ಯನವರ ಜನ್ಮ ದಿನಾಚರಣೆಯನ್ನು ನಗರದ ಅಮಾನಿಕೆರೆ ಗಾಜಿನ ಮನೆಯ ಆವರಣದಲ್ಲಿ ಆಚರಿಸಲಾಯಿತು. ದಲಿತ ಕವಿ ಸಿದ್ಧಲಿಂಗಯ್ಯರವರ ಕುರಿತು ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ಮಾತನಾಡುತ್ತಾ, ಕಾವ್ಯವನ್ನೇ ಖಡ್ಗವಾಗಿಸಿಕೊಂಡು ದಲಿತರ ಪರವಾಗಿ ಸಾಮಾಜಿಕ ಸಮಾನತೆಗಾಗಿ ತಮ್ಮ ಬದುಕಿನದ್ದಕ್ಕೂ ಹೋರಾಟ ನಡೆಸಿದ ಕನ್ನಡದ ಹೆಮ್ಮೆಯ ಬಂಡಾಯ ಕವಿಯಾಗಿದ್ದವರು ಡಾ.ಸಿದ್ದಲಿಂಗಯ್ಯನವರು. ಅವರು ಬಡ ಕುಟುಂಬವೊಂದರಲ್ಲಿ ದೇವಯ್ಯ ಮತ್ತು ವೆಂಕಟಮ್ಮನವರ ಪುತ್ರರಾಗಿ 1954ರ ಫೆಬ್ರವರಿ ೩ರಂದು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಮಂಚನಬೆಲೆಯಲ್ಲಿ ಜನಿಸಿದರು. ಪ್ರೊ. ಜಿ.ಎಸ್. ಶಿವರುದ್ರಪ್ಪನವರ ಮಾರ್ಗದರ್ಶನದಲ್ಲಿ `ಗ್ರಾಮದೇವತೆಗಳು’ ಎಂಬ ಪ್ರೌಢ ಪ್ರಬಂಧವನ್ನು ಮಂಡಿಸಿ 1989ರಲ್ಲಿ ಪಿಎಚ್.ಡಿ. ಪದವಿಯನ್ನು ಗಳಿಸಿದರು. ಬೆಂಗಳೂರು…