Author: admin

ಬೆಂಗಳೂರು: ದಶಕಗಳ ಕಾಲದ ಕನಸಿನ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಅರಣ್ಯ ಇಲಾಖೆಯ ಭೂಮಿ ಹಸ್ತಾಂತರ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರ ಅನಗತ್ಯ ವಿಳಂಬ ಮಾಡುತ್ತಿದೆ ಎಂದು ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ವಿಧಾನಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸೋಮವಾರ ವಿಧಾನಸಭೆಯ ಕಲಾಪದಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆಗಳು ಪೂರ್ಣಗೊಂಡಿದ್ದರೂ, ಕೇಂದ್ರ ಸರ್ಕಾರ ಅರಣ್ಯ ಇಲಾಖೆಯ ಅನುಮತಿ ನೀಡಲು ಮೀನಾಮೇಷ ಎಣಿಸುತ್ತಿದೆ. ಕೇಂದ್ರದ ಈ ಧೋರಣೆಯಿಂದಾಗಿ ಬಯಲು ಸೀಮೆಯ ಜನರಿಗೆ ನೀರು ತಲುಪಿಸುವ ಯೋಜನೆಗೆ ಹಿನ್ನಡೆಯಾಗುತ್ತಿದೆ ಎಂದು ದೂರಿದರು. ಕೇಂದ್ರದ ವಿರುದ್ಧ ಕಿಡಿ: “ನಾವು ಈ ದೇಶದ ಪ್ರಜೆಗಳಲ್ಲವೇ? ನಮ್ಮ ಹಕ್ಕನ್ನು ಕೇಳಲು ನಮಗೆ ಅಧಿಕಾರವಿದೆ. ಪ್ರತಿಯೊಂದು ನೀರಾವರಿ ಯೋಜನೆಗೂ ಕೇಂದ್ರ ಸರ್ಕಾರ ಅಡ್ಡಿಪಡಿಸುತ್ತಿದೆ. ಮಹದಾಯಿ ಯೋಜನೆಗೆ ಇಂದಿನವರೆಗೂ ಪೂರ್ಣ ಪ್ರಮಾಣದ ಅವಕಾಶ ಕೊಟ್ಟಿಲ್ಲ, ಈಗ ಎತ್ತಿನಹೊಳೆ ಯೋಜನೆಗೂ ಇದೇ ಪರಿಸ್ಥಿತಿ ಬಂದೊದಗಿದೆ,” ಎಂದು ಶಿವಲಿಂಗೇಗೌಡ ಕಿಡಿಕಾರಿದರು. ಈ ವೇಳೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದಾಗ ಸದನದಲ್ಲಿ…

Read More

ಬೆಂಗಳೂರು: ಸಾಮಾಜಿಕ ಅಸಮಾನತೆ ಹಾಗೂ ಜಾತಿಯಾಧಾರಿತ ಶೋಷಣೆಯ ವಿರುದ್ಧ ಧ್ವನಿ ಎತ್ತಿರುವ ನಟ ದುನಿಯಾ ವಿಜಯ್ ಅಭಿನಯದ ‘ಲ್ಯಾಂಡ್ ಲಾರ್ಡ್’ ಚಿತ್ರಕ್ಕೆ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ಘೋಷಿಸಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಮುಖ್ಯಮಂತ್ರಿಗಳು, ಸಮಾಜದಲ್ಲಿ ಮೌಲ್ಯಯುತ ಸಂದೇಶಗಳನ್ನು ಬಿತ್ತಲು ಮತ್ತು ಸಾರ್ವತ್ರಿಕ ಅಭಿಪ್ರಾಯ ಮೂಡಿಸಲು ಸಿನಿಮಾ ಅತ್ಯಂತ ಪ್ರಬಲ ಮಾಧ್ಯಮವಾಗಿದೆ. ಸಾಮಾಜಿಕ ಅಸಮಾನತೆ ಮತ್ತು ಜಾತಿ ಪದ್ಧತಿಯಂತಹ ಪಿಡುಗುಗಳ ವಿರುದ್ಧ ಬೆಳಕು ಚೆಲ್ಲುವ ಚಿತ್ರಗಳಿಗೆ ಬೆಂಬಲ ನೀಡುವುದು ಸರ್ಕಾರದ ನೈತಿಕ ಜವಾಬ್ದಾರಿ ಎಂದು ತಿಳಿಸಿದ್ದಾರೆ. ಸಾಮಾಜಿಕ ಪರಿವರ್ತನೆಯನ್ನು ಸಾಧಿಸಲು ಸಿನಿಮಾಗಳು ಅತ್ಯಂತ ಪರಿಣಾಮಕಾರಿ ಮಾಧ್ಯಮ ಎನ್ನುವುದು ನನ್ನ ಭಾವನೆ. ಸಾಮಾಜಿಕ ಕಳಕಳಿಯ ಸಿನೆಮಾವನ್ನು ಮಾಡಿದಾಗ ಅಂಥವರ ಜೊತೆ ನಿಂತು ಬೆನ್ನು ತಟ್ಟಬೇಕಿರುವುದು ಸರ್ಕಾರದ ನೈತಿಕ ಹೊಣೆ. ಈ ನಿಟ್ಟಿನಲ್ಲಿ ‘ಲ್ಯಾಂಡ್ ಲಾರ್ಡ್’ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲು ಸೂಚಿಸಲಾಗಿದೆ ಅಂತಾ ಅವರು ತಿಳಿಸಿದ್ದಾರೆ. ಮುಂದಿನ…

Read More

ಬೆಂಗಳೂರು: ರಾಜ್ಯ ವಿಧಾನಸಭೆಯ ಕಲಾಪದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ‘ನಾಯಕತ್ವ’ ಹಾಗೂ ‘ಅಧಿಕಾರ ಹಂಚಿಕೆ’ (Power Sharing) ವಿಚಾರವಾಗಿ ಆಡಳಿತ ಮತ್ತು ವಿರೋಧ ಪಕ್ಷದ ನಾಯಕರ ನಡುವೆ ಸ್ವಾರಸ್ಯಕರ ವಾಗ್ವಾದ ನಡೆಯಿತು. ಸಿಎಂ ಸಿದ್ದರಾಮಯ್ಯ ವ್ಯಂಗ್ಯ: ಸದನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷದವರ ಕಾಲೆಳೆಯುತ್ತಾ, “ನನಗೂ ಮತ್ತು ಡಿ.ಕೆ. ಶಿವಕುಮಾರ್ ಅವರಿಗೂ ಆಗುವುದಿಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ನಮ್ಮ ನಡುವೆ ಹಾಲಾಹಲ ಇದೆ ಎನ್ನುತ್ತಿದ್ದಾರೆ,” ಎಂದು ನಗುತ್ತಲೇ ಡಿಕೆಶಿ ಕಡೆ ನೋಡಿ ಹೇಳಿದರು. ಸಮಯವೇ ಉತ್ತರ ನೀಡಲಿದೆ: ಸಿಎಂ ಮಾತಿಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, “ಎಲ್ಲದಕ್ಕೂ ಸಮಯವೇ ಉತ್ತರ ಕೊಡುತ್ತದೆ ಬಿಡಿ,” ಎಂದು ಮಾರ್ಮಿಕವಾಗಿ ನುಡಿದರು. ಆರ್. ಅಶೋಕ್ ಲೇವಡಿ: ಡಿಕೆಶಿ ಹೇಳಿಕೆಯನ್ನು ಹಿಡಿದು ಮಾತನಾಡಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, “ಇದು ಡಿಕೆಶಿ ಅವರ ಸ್ಟೈಲ್. ಒಂದು ಮಾತಿಗೆ ನೂರು ಅರ್ಥವಿರುತ್ತದೆ. ಆ ಸಮಯ ಯಾವಾಗ ಬರುತ್ತದೆ ಎಂದು…

Read More

ಕೊರಟಗೆರೆ: ನಮ್ಮ ದೇಶದ ನಿಜವಾದ ಶಕ್ತಿ ಗ್ರಾಮಗಳಲ್ಲಿ ಅಡಗಿದೆ. ಗ್ರಾಮೀಣ ಜನರು ಜಾತಿ–ಮತ ಭೇದ ಮರೆತು ಒಗ್ಗಟ್ಟಾಗಿ ಬದುಕಿದಾಗ ಮಾತ್ರ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಇಂತಹ ಏಕತೆಯನ್ನು ಬೆಳೆಸುವಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಡಾ.ಹನುಮಂತನಾಥ ಸ್ವಾಮೀಜಿ ಹೇಳಿದರು. ತಾಲೂಕಿನ ಕೋಳಾಲ ಹೋಬಳಿಯ ಪಾತಗಾನಹಳ್ಳಿ ಗ್ರಾಮದಲ್ಲಿ ಸೋಮವಾರ ನೂತನವಾಗಿ ನಿರ್ಮಿಸಲಾದ ಶ್ರೀ ಚನ್ನಕೇಶ್ವರ ಸ್ವಾಮಿ ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಚನ ನೀಡಿದ ಅವರು, ಗ್ರಾಮೀಣ ಜೀವನದ ಮೌಲ್ಯ, ಪರಸ್ಪರ ಸಹಕಾರ ಹಾಗೂ ಸಾಮಾಜಿಕ ಸಾಮರಸ್ಯದ ಅಗತ್ಯತೆಯನ್ನು ಬಗ್ಗೆ ತಿಳಿಸಿದರು. ಗ್ರಾಮಗಳಲ್ಲಿ ಇರುವ ಸೌಹಾರ್ದತೆಯೇ ದೇಶದ ಬಲ, ಧಾರ್ಮಿಕ ಕೇಂದ್ರಗಳು ಕೇವಲ ಪೂಜೆಯ ಸ್ಥಳಗಳಲ್ಲ, ಸಮಾಜವನ್ನು ಒಂದಾಗಿ ಕಟ್ಟುವ ಕೇಂದ್ರಗಳಾಗಬೇಕು. ಯುವಕರು ದುಶ್ಚಟಗಳಿಗೆ ಒಳಗಾಗದೆ ಸಂಸ್ಕೃತಿ, ಶಿಸ್ತು ಹಾಗೂ ಸೇವಾ ಮನೋಭಾವವನ್ನು ಅಳವಡಿಸಿ ಕೊಳ್ಳಬೇಕು ಎಂದು ಸ್ವಾಮೀಜಿ ಉಪದೇಶ ನೀಡಿದರು.…

Read More

ಹತ್ರಾಸ್: ಮದುವೆಯೆಂಬುದು ನೂರು ಕಾಲದ ಸುಖದ ಸಂಸಾರಕ್ಕೆ ನಾಂದಿ ಹಾಡಬೇಕಾದ ಪವಿತ್ರ ಬಂಧ. ಆದರೆ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ವಿಚಿತ್ರ ಹಾಗೂ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಮದುವೆಯಾದ ಕೇವಲ ಒಂದು ತಿಂಗಳಲ್ಲೇ ಪತ್ನಿಯೊಬ್ಬಳು ತನ್ನ ಪತಿಯನ್ನು ಬಿಟ್ಟು ಹೋಗಲು ನಿರ್ಧರಿಸಿದ್ದಾಳೆ. ಘಟನೆಯ ವಿವರ: ಆಗ್ರಾ ನಿವಾಸಿಯಾದ ಯುವತಿಯೊಬ್ಬಳು ಹತ್ರಾಸ್‌ನ ಅಭಿಷೇಕ್ ಎಂಬುವವರನ್ನು ಒಂದು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ಆರಂಭದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದೇ ಭಾವಿಸಲಾಗಿತ್ತು. ಆದರೆ ಇದ್ದಕ್ಕಿದ್ದಂತೆ ಪತ್ನಿ ತನ್ನ ಪತಿಯಿಂದ ದೂರವಾಗುವುದಾಗಿ ಪಟ್ಟು ಹಿಡಿದಿದ್ದಾರೆ. ಇದಕ್ಕೆ ಅವರು ನೀಡಿರುವ ಕಾರಣ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪತ್ನಿಯ ಆರೋಪವೇನು? ತನ್ನ ಪತಿ ಅಭಿಷೇಕ್ ಅವರ ಮೈಬಣ್ಣ ಕಪ್ಪಗಿದೆ ಹಾಗೂ ಅವರ ನಡುವಿನ ದೈಹಿಕ ಸಂಬಂಧ ತನಗೆ ತೃಪ್ತಿ ನೀಡುತ್ತಿಲ್ಲ ಎಂದು ಪತ್ನಿ ಆರೋಪಿಸಿದ್ದಾರೆ. “ನಮ್ಮ ನಡುವೆ ಯಾವುದೇ ಕೌಟುಂಬಿಕ ಸಮಸ್ಯೆಗಳಿಲ್ಲ, ಆದರೆ ದೈಹಿಕ ಸಂಬಂಧದಲ್ಲಿ ನನಗೆ ತೃಪ್ತಿಯಿಲ್ಲ. ಈ ಬಗ್ಗೆ ನಾನು ಬಹಿರಂಗವಾಗಿ ಚರ್ಚಿಸಲು…

Read More

ತುಮಕೂರು: ನಗರದ ಉದ್ಯಮಿಯೊಬ್ಬರಿಗೆ ಪ್ರಸಿದ್ಧ ಬಟ್ಟೆ ಬ್ರ್ಯಾಂಡ್ ‘ಸ್ನಿಚ್’ (Snitch) ಕಂಪನಿಯ ಫ್ರಾಂಚೈಸಿ ಕೊಡುವುದಾಗಿ ನಂಬಿಸಿ ಬರೋಬ್ಬರಿ 8.75 ಲಕ್ಷ ರೂಪಾಯಿಗಳನ್ನು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಏನಿದು ಪ್ರಕರಣ? ನಗರದ ಕೆ.ಆರ್‌. ಬಡಾವಣೆಯ ನಿವಾಸಿ ಹಾಗೂ ಉದ್ಯಮಿ ಚಂದನ್ ಕುಮಾರ್ ಅವರು ‘ಸ್ನಿಚ್’ ಕಂಪನಿಯ ಬಟ್ಟೆ ಮಳಿಗೆಯನ್ನು ಆರಂಭಿಸಲು ನಿರ್ಧರಿಸಿದ್ದರು. ಈ ಸಂಬಂಧ ಫ್ರಾಂಚೈಸಿ ಪಡೆಯುವ ಬಗ್ಗೆ ಗೂಗಲ್‌ನಲ್ಲಿ ಮಾಹಿತಿ ಹುಡುಕುತ್ತಿದ್ದಾಗ, ಅಪರಿಚಿತ ವ್ಯಕ್ತಿಗಳು ಅವರನ್ನು ಸಂಪರ್ಕಿಸಿದ್ದಾರೆ. ತಾವು ಕಂಪನಿಯ ಪ್ರತಿನಿಧಿಗಳೆಂದು ಪರಿಚಯಿಸಿಕೊಂಡ ವಂಚಕರು, ಚಂದನ್ ಅವರಿಂದ ಮಳಿಗೆಯ ವಿಡಿಯೊ, ಫೋಟೊ ಮತ್ತು ಬ್ಯಾಂಕ್ ವಿವರಗಳನ್ನು ಪಡೆದುಕೊಂಡಿದ್ದಾರೆ. ಹಂತ ಹಂತವಾಗಿ ಹಣ ವಸೂಲಿ: ಫ್ರಾಂಚೈಸಿ ಮಂಜೂರು ಮಾಡುವುದಾಗಿ ನಂಬಿಸಿದ ಕಿಲಾಡಿಗಳು, ಆರಂಭದಲ್ಲಿ ನೋಂದಣಿ ಶುಲ್ಕವಾಗಿ ₹2.75 ಲಕ್ಷ ಪಾವತಿಸುವಂತೆ ಕೇಳಿದ್ದಾರೆ. ಅದನ್ನು ಪಾವತಿಸಿದ ನಂತರ, ಭದ್ರತಾ ಠೇವಣಿಯಾಗಿ ₹12 ಲಕ್ಷ ನೀಡಬೇಕು ಎಂದು ತಿಳಿಸಿ, ಮೊದಲ ಕಂತಿನ ರೂಪದಲ್ಲಿ ಮತ್ತೆ ₹6 ಲಕ್ಷ ವರ್ಗಾಯಿಸಿಕೊಂಡಿದ್ದಾರೆ. ಹೀಗೆ ಒಟ್ಟು ₹8.75 ಲಕ್ಷ…

Read More

ಬೆಂಗಳೂರು: ನರೇಗಾ (MNREGA) ಯೋಜನೆಯ ಹೆಸರಿನಿಂದ ಮಹಾತ್ಮ ಗಾಂಧಿಯವರ ಹೆಸರನ್ನು ಕೈಬಿಡಲಾಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್ ಅವರು ಮಂಗಳವಾರ ಸದನದಲ್ಲಿ ಅಂಕಿಅಂಶಗಳ ಸಮೇತ ತಿರುಗೇಟು ನೀಡಿದರು. 454 ಯೋಜನೆಗಳ ಸುದೀರ್ಘ ಪಟ್ಟಿ: ಕಾಂಗ್ರೆಸ್ ಅವಧಿಯಲ್ಲಿ ಕೇವಲ ನೆಹರೂ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಹೆಸರಿಡಲಾದ ಸುಮಾರು 454 ಯೋಜನೆಗಳು, ರಸ್ತೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಸರ್ಕಾರಿ ಕಟ್ಟಡಗಳ ಪಟ್ಟಿಯನ್ನು ಅಶೋಕ್ ಸದನದಲ್ಲಿ ಪ್ರದರ್ಶಿಸಿದರು. ಅಂದಾಜು ಎರಡು ಮೀಟರ್ ಉದ್ದದ ಈ ಪಟ್ಟಿಯನ್ನು ಓದುವ ಮೂಲಕ ಅವರು ಸರ್ಕಾರದ ಗಮನ ಸೆಳೆದರು. ‘ನಕಲಿ ಗಾಂಧಿ’ಗಳ ವಾಗ್ದಾಳಿ: “ಮಹಾತ್ಮ ಗಾಂಧಿಯವರ ಪೂರ್ಣ ಹೆಸರು ಮೋಹನದಾಸ ಕರಮಚಂದ ಗಾಂಧಿ. ಆದರೆ ಕಾಂಗ್ರೆಸ್ ನಾಯಕರು ಮೊದಲ ಎರಡು ಹೆಸರುಗಳನ್ನು ಬಿಟ್ಟು ಕೇವಲ ‘ಗಾಂಧಿ’ ಹೆಸರನ್ನು ಮಾತ್ರ ಬಳಸಿಕೊಂಡು ರಾಜಕೀಯ ಅಸ್ತಿತ್ವಕ್ಕಾಗಿ ಅದನ್ನು ಹೈಜಾಕ್ ಮಾಡಿದ್ದಾರೆ. ಇವರೆಲ್ಲರೂ ನಕಲಿ ಗಾಂಧಿಗಳು” ಎಂದು ಅಶೋಕ್ ಟೀಕಿಸಿದರು. ಕಾಂಗ್ರೆಸ್‌ಗೆ ಪ್ರಶ್ನೆ: “ನಿಮ್ಮ…

Read More

ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಬಿಜೆಪಿಯ ಆರೋಪವನ್ನು ಗೃಹ ಸಚಿವ ಜಿ. ಪರಮೇಶ್ವರ್ ತಳ್ಳಿಹಾಕಿದ್ದಾರೆ. ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಪರಾಧಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ ಎಂದು ಅಂಕಿ–ಅಂಶಗಳ ಸಹಿತ ಸ್ಪಷ್ಟಪಡಿಸಿದರು. ಹಿಂದಿನ ಸರ್ಕಾರಗಳ ಅವಧಿಯ ಅಪರಾಧಗಳ ವಿವರ: ವಿರೋಧ ಪಕ್ಷದ ನಾಯಕ ಆರ್.ಅಶೋಕ ಮತ್ತು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ತಿರುಗೇಟು ನೀಡಿದ ಪರಮೇಶ್ವರ್, ಅವರ ಅವಧಿಯಲ್ಲಿ ನಡೆದ ಅಪರಾಧಗಳ ಪಟ್ಟಿಯನ್ನು ನೀಡಿದರು: ಆರ್. ಅಶೋಕ (2011-2013): 4,121 ಕೊಲೆಗಳು, 582 ಮಾದಕ ದ್ರವ್ಯ ಪ್ರಕರಣಗಳು ಹಾಗೂ 995 ಸೈಬರ್ ಅಪರಾಧಗಳು ದಾಖಲಾಗಿದ್ದವು. ಬಸವರಾಜ ಬೊಮ್ಮಾಯಿ (2019-2020): 2,554 ಕೊಲೆಗಳು, 8,317 ಮಾದಕ ದ್ರವ್ಯ ಪ್ರಕರಣಗಳು ಮತ್ತು 19,157 ಸೈಬರ್ ಅಪರಾಧ ಪ್ರಕರಣಗಳು ನಡೆದಿದ್ದವು. ಆರಗ ಜ್ಞಾನೇಂದ್ರ: ಇವರ ಅವಧಿಯಲ್ಲಿ 2,417 ಕೊಲೆಗಳು ಹಾಗೂ 24,486 ಸೈಬರ್ ಅಪರಾಧಗಳು ದಾಖಲಾಗಿದ್ದವು. “ನಾನು…

Read More

ಬೆಂಗಳೂರು: ರಾಜ್ಯ ಸರ್ಕಾರ ಮಂಡಿಸಿರುವ ‘ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆ ಮಸೂದೆ–2026’ ಅನ್ನು ಜಾರಿಗೆ ತರದಂತೆ ತಡೆಯಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಉದ್ದೇಶಪೂರ್ವಕವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಗಂಭೀರವಾಗಿ ಆರೋಪಿಸಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಸೂದೆಯ ಕುರಿತು ವಿವರಣೆ ನೀಡಿದರು: ರಾಜ್ಯಪಾಲರ ಆಕ್ಷೇಪ: ಈ ಮಸೂದೆಯಲ್ಲಿರುವ ಸುಮಾರು 28 ಅಂಶಗಳನ್ನು ಪ್ರಶ್ನಿಸಿರುವ ರಾಜ್ಯಪಾಲರು, ಬಿಲ್ ಅನ್ನು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಳುಹಿಸಿಕೊಟ್ಟಿದ್ದಾರೆ. ಈ ಮೂಲಕ ಮಸೂದೆ ನೆನೆಗುದಿಗೆ ಬೀಳುವಂತೆ ಮಾಡಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಸಚಿವರು ದೂರಿದರು. ಮಸೂದೆಯ ಅಗತ್ಯತೆ: ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಮಾಜದಲ್ಲಿ ಅಶಾಂತಿ ಹರಡುವ, ಸಮುದಾಯಗಳನ್ನು ದೂಷಿಸುವ ಮತ್ತು ವೈಯಕ್ತಿಕ ನಿಂದನೆ ಮಾಡುವ ಭಾಷಣಗಳಿಗೆ ಕಡಿವಾಣ ಹಾಕಲು ಈ ಕಾಯ್ದೆ ಅನಿವಾರ್ಯವಾಗಿದೆ. ಕೆಲವು ಭಾಗಗಳಲ್ಲಿ ನಡೆದ ಪ್ರಚೋದನಾಕಾರಿ ಭಾಷಣಗಳ ಪರಿಣಾಮ ಏನಾಗಿದೆ ಎಂಬುದು ನಮಗೆ ತಿಳಿದಿದೆ ಎಂದು ಅವರು ಹೇಳಿದರು. ಮುಂದಿನ ನಡೆ: ಒಂದು ವೇಳೆ ರಾಷ್ಟ್ರಪತಿಗಳು…

Read More

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದ್ದು, ರಾಜ್ಯದ ಆಡಳಿತ ವ್ಯವಸ್ಥೆಯು ಸಂಪೂರ್ಣವಾಗಿ ‘ಕೋಮಾ’ ಸ್ಥಿತಿಗೆ ತಲುಪಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ. ಸೋಮವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ವೇಳೆ ಮಾತನಾಡಿದ ಅವರು, ಸರ್ಕಾರದ ವೈಫಲ್ಯಗಳ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದರು. ಅಶೋಕ್ ಅವರ ಭಾಷಣದ ಪ್ರಮುಖ ಅಂಶಗಳು ಇಲ್ಲಿವೆ: ಸುಳ್ಳಿನ ಭಾಷಣ: ರಾಜ್ಯಪಾಲರ ಭಾಷಣವು ಸತ್ಯಕ್ಕೆ ದೂರವಾಗಿದೆ. ಸರ್ಕಾರವು ರಾಜ್ಯಪಾಲರ ಮೂಲಕ ಸುಳ್ಳನ್ನು ಹೇಳಿಸುತ್ತಿದೆ. ರಾಜ್ಯಪಾಲರ ಭಾಷಣಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ, ಆದರೆ ಸರ್ಕಾರ ಸಿದ್ಧಪಡಿಸಿದ ಭಾಷಣದ ಪಠ್ಯವನ್ನು ವಿರೋಧಿಸುತ್ತೇನೆ ಎಂದು ಅವರು ಹೇಳಿದರು. ಅಧಿಕಾರದ ಜಗಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಡುವಿನ ಅಧಿಕಾರದ ಕಿತ್ತಾಟವು ರಾಜ್ಯದ ಆಡಳಿತದ ಮೇಲೆ ಗಂಭೀರ ಪರಿಣಾಮ ಬೀರಿದೆ. ಹೈಕಮಾಂಡ್ ಓಲೈಕೆ ಮತ್ತು ರಾಜಕೀಯ ಪ್ರತಿಷ್ಠೆಗಾಗಿ ಸರ್ಕಾರವು ರಾಜ್ಯದ ಹಿತಾಸಕ್ತಿಯನ್ನು ಬಲಿಕೊಡುತ್ತಿದೆ ಎಂದು ಅಶೋಕ್ ಆರೋಪಿಸಿದರು. ಭ್ರಷ್ಟಾಚಾರದ ಆರೋಪ:…

Read More