Subscribe to Updates
Get the latest creative news from FooBar about art, design and business.
- ಚಿಲ್ಲರೆಗಳಿಗೆ ನಾನು ಹೆದರುವ ಮಗನೇ ಅಲ್ಲ ಕೀಳುಮಟ್ಟದ ರಾಜಕಾರಣ ನನಗೆ ಗೊತ್ತಿಲ್ಲ: ಶಾಸಕ ಎಸ್. ಆರ್.ಶ್ರೀನಿವಾಸ್ ತಿರುಗೇಟು
- ತುಮಕೂರು ಜಿಲ್ಲೆಯಲ್ಲಿ 0.3 ಮಿ.ಮೀ. ಮಳೆ
- ಕೆಎಸ್ ಆರ್ ಟಿಸಿ ಬಸ್ ದರ ಏರಿಕೆ ಖಚಿತ: ಸಾರಿಗೆ ಸಂಸ್ಥೆ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್
- ಜನರ ಏಳಿಗೆಗಾಗಿ ಯೋಜನೆಗಳು ಜಾರಿ, ಸರ್ಕಾರಿ ಯೋಜನೆಗಳು ಮತಗಳಿಕೆಗೆ ಅಲ್ಲ: ಶಾಸಕ ಕೆ.ಎನ್.ರಾಜಣ್ಣ
- ಪಾವಗಡ: ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಪ್ರಾಂಶುಪಾಲರಿಗೆ ಬೀಳ್ಕೊಡುಗೆ ಸಮಾರಂಭ
- ದೇಶದ 2ನೇ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣಕ್ಕೆ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ
- ಈ ವರ್ಷ 52 ಸಾವಿರ ಅತಿಥಿ ಶಿಕ್ಷಕರ ನೇಮಕ: ಸಚಿವ ಮಧು ಬಂಗಾರಪ್ಪ
- ಬೀದರ್ ಬ್ರಿಮ್ಸ್ (BRIMS) ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯರ ಮೇಲೆ ಭೀಕರ ಹಲ್ಲೆ: 7 ಮಂದಿ ಆರೋಪಿಗಳ ಬಂಧನ
Author: admin
ಈ ಘಟನೆ ಪಟ್ಟೇಗಾರಪಾಳ್ಯದ ಮುನೇಶ್ವರ ನಗರದಲ್ಲಿ ನಡೆದಿದೆ. ಕಿರಿಕ್ ಮಾಡಿ ನಾಯಿ ಮಾಲೀಕನಿಗೆ ಬಾರಿಸಿದ್ದಲ್ಲದೇ ಪುಂಡರು, ಮಾಲೀಕನ ಮಗಳನ್ನು ಕೂಡ ಎಳೆದಾಡಿದ ಮನಕಲಕುವ ಘಟನೆ ಬಗ್ಗೆ ವರದಿಯಾಗಿದೆ. ದೂರುದಾರೆ ಶಾಲಿನಿಯವರ ಮನೆಯಲ್ಲಿ ನಾಯಿ ಬೊಗಳಿದ್ದು, ಪಕ್ಕದ ಮನೆಯ ಶಂಕರ್ ರಾತ್ರಿ 10-30ಕ್ಕೆ ಸ್ನೇಹಿತರ ಜೊತೆ ಬಂದಿದ್ದರು. ಅಪರಿಚಿತರು ಬಂದಿದ್ದಕ್ಕೆ ನಾಯಿ ಬೊಗಳಿದೆ. ಇಷ್ಟಕ್ಕೇ ಶಂಕರ್ ಅಂಡ್ ಗ್ಯಾಂಗ್ ನಾಯಿ ಮೇಲೆ ರೇಗಾಡಿದೆ. ನಾಯಿಯ ಮಾಲೀಕರು ಇದ್ಯಾಕಪ್ಪ ಅಂತಾ ಕೇಳೋಕೆ ಬಂದಾಗ ಅವರ ಮೇಲೂ ಬಾರಿಸಲು ಮುಂದಾಗಿದ್ದಾರೆ. ಇತ್ತ ಅಪ್ಪನ ರಕ್ಷಣೆಗೆ ಬಂದ ಕಾಲೇಜು ವಿದ್ಯಾರ್ಥಿನಿ ಶಾಲಿನಿಯನ್ನು ಕೂಡ ಗ್ಯಾಂಗ್ ಎಳೆದಾಡಿದೆ. ಈ ಬಗ್ಗೆ ಮಹಿಳಾ ಆಯೋಗದ ಅಧ್ಯಕ್ಷರಿಗೆ ಯುವತಿ ಅಳುತ್ತಾ ನಡೆದ ಘಟನೆಯ ಆಡಿಯೊ ಕಳಿಸಿದ್ದಾಳೆ. ನ್ಯಾಯ ಕೊಡಿಸುವಂತೆ ಮಹಿಳಾ ಅಧ್ಯಕ್ಷರಿಗೆ ಅಳುತ್ತಾ ಆಡಿಯೊ ಮೆಸೇಜ್ ಕಳಿಸಿದ್ದಳು. ಸದ್ಯ ಕಾಮಾಕ್ಷಿಪಾಳ್ಯ ಪೊಲೀಸ್ರಿಂದ ಆರೋಪಿ ಕಿರಿಕ್ ಪಾರ್ಟಿ ಶಂಕರ್ ಅರೆಸ್ಟ್ ಮಾಡಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…
ರಂಜಾನ್ ಉಪವಾಸ ಆರಂಭ ಗೊಂಡಿದೆ. ಈ ಮಧ್ಯೆಯೇ ಉತ್ತರಪ್ರದೇಶದ ಸಹರಾನ್ ಪುರದಲ್ಲೊಂದು ಅಪರೂಪದ ಘಟನೆ ಬಗ್ಗೆ ವರದಿಯಾಗಿದೆ. ಹೌದು, ಮುಸ್ಲಿಂ ಯುವಕರು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಮುಸ್ಲಿಂ ವ್ಯಕ್ತಿಯೊಬ್ಬರು ಹಿಂದೂ ಧರ್ಮಕ್ಕೆ ಮತಾಂತರಗೊಂಡ ಪ್ರಕರಣ ನಡೆದಿರುವುದಾಗಿ ವರದಿಯಾಗಿದೆ. ಮೊಹಮ್ಮದ್ ಸಾಜಿದ್ ಎಂಬಾತ ತನ್ನ ಹಿಂದೂ ಧರ್ಮದ ಪತ್ನಿಗೆ ಮುಸ್ಲಿಂ ಯುವಕರು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎನ್ನಲಾಗುತ್ತಿದೆ.ಮೊಹಮ್ಮದ್ ಸಾಜಿದ್ ಇದೀಗ ತನ್ನ ಹೆಸರನ್ನು ಸತ್ಬೀರ್ ರಾಣಾ ಎಂದು ಬದಲಾಯಿಸಿಕೊಂಡಿದ್ದಾನೆ. ಈ ಬೆಳವಣಿಗೆಯ ನಂತರ ಸತ್ಬೀರ್ ಮತ್ತು ಪತ್ನಿ ಅನಿತಾ ಜತೆಯಾಗಿ ಹಿಂದೂ ಧಾರ್ಮಿಕ ವಿಧಿ ವಿಧಾನ ನೆರವೇರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನನ್ನ ಪತ್ನಿ ಹಿಂದೂ ಎಂಬ ಕಾರಣಕ್ಕಾಗಿಯೇ ಕೆಲವು ವರ್ಷಗಳಿಂದ ಸ್ಥಳೀಯ ಜನರು ನಮಗೆ ಕಿರುಕುಳ ನೀಡುತ್ತಿದ್ದಾರೆ. ಈ ಕಾರಣದಿಂದಾಗಿಯೇ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವ ನಿರ್ಧಾರ ತೆಗೆದುಕೊಂಡಿರುವುದಾಗಿ ಸಾಜಿದ್ ಅಲಿಯಾಸ್ ರಾಣಾ ತಿಳಿಸಿರುವುದಾಗಿ ಮಾಧ್ಯಮ ವರದಿ ತಿಳಿಸಿದೆ. ಸಹರಾನ್ ಪುರದ ನಕುಲ್ ಪೊಲೀಸ್ ಠಾಣಾ…
ಮೆಣಸಿನಕಾಯಿ ದರ ದಿಢೀರ್ ಕುಸಿತಗೊಂಡಿದ್ದಕ್ಕೆ ರೈತರು ಆಕ್ರೋಶ ಗೊಂಡು, ಹಾವೇರಿ ಜಿಲ್ಲೆ ಬ್ಯಾಡಗಿ ಮಾರುಕಟ್ಟೆ ಬಳಿ ಗಲಾಟೆ ನಡೆಸಿದ ಪ್ರಕರಣ ಸಂಬಂಧ 42 ಜನರನ್ನ ಬಂಧಿಸಿ ಹೇಳಿಕೆ ಪಡೆಯಲಾಗಿದೆ. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು. ಈ ಕುರಿತು ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಬ್ಯಾಡಗಿ ಎಂಪಿಎಂಸಿ ಕಚೇರಿ ಬಳಿ ಗಲಾಟೆ ಪ್ರಕರಣ ಸಂಬಂಧ 42 ಜನರನ್ನ ಬಂಧಿಸಿ ಅವರಿಂದ ಹೇಳಿಕೆ ಪಡೆಯಲಾಗಿದೆ. ಹೊರಗಿನಿಂದ ಬಂದವರು ಪರಾರಿಯಾಗಿದ್ದಾರೆ. ಪೊಲೀಸರ 1 ತಂಡ ಆಂಧ್ರ ಪ್ರದೇಶದ ನೆಲ್ಲೂರು ಕಡೆ ಕಳುಹಿಸಿಕೊಡಲಾಗಿದೆ. ತಪ್ಪಿಸಿಕೊಂಡವರನ್ನ ಬಂಧಿಸಲಾಗುತ್ತದೆ ಎಂದರು. ಯಾವ ಕಾರಣಕ್ಕೆ ಗಲಾಟೆ ಆಗಿದೆ ಎಂಬುದನ್ನ ತನಿಖೆ ಮಾಡುತಿದ್ದೇವೆ. ಯಾರು ತಪ್ಪು ಮಾಡಿದ್ದಾರೆ ಅಂತವರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ. ಒಣಮೆಣಸಿನ ಕಾಯಿ ದರ ಇಳಿಕೆ ಮಾಡಿಸಿ ಗಲಾಟೆ ಮಾಡಿಸಿರಬಹುದು ಈ ಬಗ್ಗೆ ಖಚಿತ ಮಾಹಿತಿ ಇಲ್ಲ ಎಂದರು. ಮೊನ್ನೆ ಒಣ ಮೆಣಸಿಕನಾಯಿ ದರ ಇಳಿಕೆಯಾಗಿದ್ದಕ್ಕೆ ಬ್ಯಾಡಗಿ ಮಾರುಕಟ್ಟೆ ಆಡಳಿತ ಕಚೇರಿ…
ತುಮಕೂರು: ಕಾರವಾರ ಸಂಸದ ಅನಂತ್ ಕುಮಾರ್ ಹೆಗಡೆ ಪತ್ರಕರ್ತರ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ಕೊಟ್ಟಿರುವುದನ್ನು ಖಂಡಿಸಿ, ತುಮಕೂರು ಜಿಲ್ಲಾ ಕಾರ್ಯ ನಿರತ ಪತ್ರ ಕರ್ತರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಎಂದು ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುರುಷೋತ್ತಮ್ ತಿಳಿಸಿದ್ದಾರೆ. ಜಿಲ್ಲಾ ಕಾರ್ಯನಿರತ ಪತ್ರಿಕೆ ಸಂಘದ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಸಂಸದ ಅನಂತ್ ಕುಮಾರ್ ಹೆಗಡೆ ಅವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುವ ಕುರಿತು ಸರ್ಕಾರವನ್ನು ಜಿಲ್ಲಾಧಿಕಾರಿಗಳ ಮೂಲಕ ಒತ್ತಾಯಿಸಲಾಗುವುದು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಏಕೇಶ್ ರಘುರಾಮ್, ಸತೀಶ್, ನಾಗರಾಜ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಜರಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಲೆಜೆಂಡ್ರಿ ಗಾಯಕಿ ಆಶಾ ಬೋಸ್ಲೆ ಅವರ ಕುಟುಂಬದಲ್ಲಿ ಸುಂದರ ಬ್ಯೂಟಿಯೊಂದು ಚಿತ್ರರಂಗದಲ್ಲಿ ಹೆಸರು ಮಾಡಲು ವೇದಿಕೆ ಸಿದ್ಧವಾಗುತ್ತಿದೆ. ಹೌದು, ಖ್ಯಾತ ಗಾಯಕಿ ಆಶಾ ಅವರ ಮೊಮ್ಮಗಳು ಝನಾಯಿ ಭೋಂಸ್ಲೆ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸರ್ವ ಸಿದ್ಧರಾಗಿದ್ದಾರೆ. ಝನಾಯಿಯ ಚಿತ್ರರಂಗ ಪ್ರವೇಶವನ್ನು ಪ್ರಕಟಿಸುತ್ತಾ, ಆಶಾ ಭೋಂಸ್ಲೆ Xನಲ್ಲಿ ಸಂತೋಷವನ್ನು ಹಂಚಿಕೊಂಡಿದ್ದಾರೆ. ‘ಮುಂಬರುವ ಭವ್ಯ ಮಹಾಕಾವ್ಯ ಛತ್ರಪತಿ ಶಿವಾಜಿ ಮಹಾರಾಜ್‌ನಲ್ಲಿ ನನ್ನ ಮುದ್ದಾದ ಮೊಮ್ಮಗಳು ಸಿನಿಮಾ ಜಗತ್ತನ್ನು ಸೇರುವುದನ್ನು ನೋಡಲು ನಾನು ನಿಜವಾಗಿಯೂ ಸಂತೋಷಗೊಂಡಿದ್ದೇನೆ. ಅವಳು ತನ್ನ ಉದ್ದೇಶಿತ ಸ್ಥಾನವನ್ನು ಪಡೆದುಕೊಳ್ಳುತ್ತಾಳೆ ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ.’ ಶಿವಾಜಿ ಮಹಾರಾಜರ ಪತ್ನಿ ರಾಣಿ ಸಾಯಿಬಾಯಿ ಅವರು ರಾಜ ಮತ್ತು ಮಾನವನ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. ಆ ಪಾತ್ರವನ್ನು ಝನಾಯಿ ನಿಭಾಯಿಸಲಿದ್ದಾರೆ ಎಂದು ಹೇಳಿದ್ದಾರೆ. ಪ್ರೈಡ್ ಆಫ್ ಇಂಡಿಯಾ – ಛತ್ರಪತಿ ಶಿವಾಜಿ ಮಹಾರಾಜ ಚಿತ್ರ ದೊಡ್ಡ ರೀತಿಯಲ್ಲಿ ತಯಾರಾಗುತ್ತಿದೆ ಮತ್ತು ಫೆಬ್ರವರಿ 19, 2026 ರಂದು ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿಯಂದು…
ನಟಿ ಪವಿತ್ರ ಗೌಡ ಅವರು ಇತ್ತೀಚಿಗೆ ಬಿಗ್ ಬಾಸ್ ಸ್ಪರ್ಧಿ ನೀತು ವನಜಾಕ್ಷಿ ಅವರ ಟ್ಯಾಟೂ ಸ್ಟುಡಿಯೋವೊಂದಕ್ಕೆ ಹೋಗಿದ್ದು, ಅಲ್ಲಿ ತಮ್ಮ ಕೈ ಮೇಲೆ 777 ಎಂಬ ಹಚ್ಚೆ ಹಾಕಿಸಿಕೊಂಡಿದ್ದಾರೆ. ಹಾಗೂ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದರಲ್ಲಿ ಸಣ್ಣ ಹಾರ್ಟ್‌ಮಾರ್ಕ್ ಕೂಡಾ ಇದ್ದು, ಇದಕ್ಕೆ ಫ್ಯಾನ್ಸ್‌ಗಳು ನಾನಾ ಅರ್ಥ ಕಲ್ಪಿಸಿ ಕಮೆಂಟ್ ಮಾಡಿದ್ದಾರೆ. ಪವಿತ್ರ ಗೌಡಗೆ ನಟ ದರ್ಶನ್ ಜೊತೆಗಿನ ಆಪ್ತತೆ ಎಲ್ಲರಿಗೂ ಗೊತ್ತಿದೆ. ದರ್ಶನ್ ಅವರ ಹುಟ್ಟಿದ ವರ್ಷ 1977. ಪವಿತ್ರ ಮಗಳು ಹುಟ್ಟಿದ್ದು ನವೆಂಬರ್ 7. ಹೀಗಾಗಿ 777 ಟ್ಯಾಟ್ ಹಾಕಿಕೊಂಡಿರಬಹುದು ಎಂದು ಫ್ಯಾನ್ಸ್ ಊಹೆ ಮಾಡಿದ್ದಾರೆ. ಇನ್ನು ಕೆಲವರು ಇದನ್ನು ದರ್ಶನ್ ಅವರ ಕಾರಿನ ನಂಬರ್ ಎಂದು ಹೇಳಿಕೊಂಡಿದ್ದು, ನಾನಾ ಕಮೆಂಟ್ ಗಳು ಬಂದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಮಹಾ ಶಿವರಾತ್ರಿ ಪ್ರಯುಕ್ತ ಮಲೆಮಹದೇಶ್ವರ ಬೆಟ್ಟಕ್ಕೆ ಹರಿದು ಬಂದ ಲಕ್ಷೋಪ ಲಕ್ಷ ಭಕ್ತರಿಂದ ಮಾದಪ್ಪನ ಆದಾಯದಲ್ಲಿ ಗಣನೀಯ ಏರಿಕೆ ಕಂಡಿದೆ. ಶಿವರಾತ್ರಿ ಜಾತ್ರಾ ಮಹೋತ್ಸವದಲ್ಲಿ ವಿವಿಧ ಮೂಲಗಳಿಂದ ಕೋಟ್ಯಾಂತರ ರೂಪಾಯಿ ಆದಾಯ ಸಂಗ್ರಹಣೆಯಾಗಿದ್ದು, ಕೇವಲ 5 ದಿನಗಳಲ್ಲಿ 3.24 ಕೋಟಿ ರೂ. ಗೂ ಅಧಿಕ ಆದಾಯ ಸಂಗ್ರಹಣೆಯಾಗಿದೆ. ಚಿನ್ನದ ರಥ, ಬೆಳ್ಳಿರಥ, ಹುಲಿವಾಹನ ಸೇವೆ, ಮುಡಿ ಸೇವೆ ಸೇರಿ ವಿವಿಧ ಸೇವೆಗಳಿಂದ ಬಂದಿರುವ ಆದಾಯ. ಹುಂಡಿ ಹಣ ಹೊರತುಪಡಿಸಿ ಭಕ್ತರ ಸೇವೆಗಳಿಂದಲ್ಲೇ ಮೂರುಕಾಲು ಕೋಟಿ ನಗದು ಸಂಗ್ರಹ. ದಿನದಿಂದ ದಿನಕ್ಕೆ ತನ್ನ ಆದಾಯದಲ್ಲಿ ಗಣನೀಯ ಏರಿಕೆ ಕಾಣುತ್ತಿರುವ ಮಾದಪ್ಪ. ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಮಲೆಮಹದೇಶ್ವರ ಬೆಟ್ಟ. ಅತ್ಯಂತ ಹೆಚ್ಚು ಆದಾಯ ಬರುವ ದೇವಾಲಯಗಳಲ್ಲಿ ಎರಡನೇ ಸ್ಥಾನದಲ್ಲಿರುವ ಶ್ರೀ ಕ್ಷೇತ್ರ ಆಗಿದೆ. ಅಮಾವಾಸ್ಯೆ, ಶಿವರಾತ್ರಿ, ಯುಗಾದಿ, ದೀಪಾವಳಿ ಹಬ್ಬಗಳಂದು ನಡೆಯುವ ಜಾತ್ರಾ ಮಹೋತ್ಸವ. ಜತೆಗೆ ಅಮಾವಾಸ್ಯೆ ಸೇವೆ, ಸೋಮವಾರ, ಶುಕ್ರವಾರ ದಿನಗಳಂದೂ ಶ್ರಿ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ.…
ಜಂಜಿಬಾರ್ ದ್ವೀಪಸಮೂಹದ ಪೆಂಬಾ ದ್ವೀಪದಲ್ಲಿ ಸಮುದ್ರ ಆಮೆ ಮಾಂಸವನ್ನು ಸೇವಿಸಿದ ಎಂಟು ಮಕ್ಕಳು ಮತ್ತು ವಯಸ್ಕರು ಸಾವನ್ನಪ್ಪಿರುವ ಕುರಿತು ವರದಿಯಾಗಿದೆ. ಮಾರ್ಚ್ 5 ರಂದು ಈ ಘಟನೆ ನಡೆದಿದ್ದು, ಇನ್ನೂ 78 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಹೇಳಲಾಗಿದೆ. ಗಮನಾರ್ಹ ವಿಷಯ ಏನೆಂದರೆ ಸಮುದ್ರ ಆಮೆಯ ಮಾಂಸದಲ್ಲಿ ವಿಷದ ಅಪಾಯ ಹೆಚ್ಚಿರುವ ಹೊರತಾಗಿಯೂ, ಸುಪ್ರಸಿದ್ಧ ಆಹಾರ, ಸವಿಯಾದ ಪದಾರ್ಥವೆಂದು ಈ ಪ್ರದೇಶದಲ್ಲಿ ಪರಿಗಣಿಸಲಾಗಿದೆ. ಈ ಆಮೆ ಮಾಂಸ ಸ್ಕ್ವಿಡ್ (ಬೊಂಡಾಸ್) ಅಥವಾ ಅಲಿಗೇಟರ್ ಗೆ ಸರಿಸುಮಾರು ಹೋಲಿಸಬಹುದಾದ ವಿನ್ಯಾಸದೊಂದಿಗೆ ಮಾಂಸವು ಗೋಮಾಂಸದ ರುಚಿಯನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತದೆ. ಪ್ರಯೋಗಾಲಯದ ಪರೀಕ್ಷೆಯ ಪ್ರಕಾರ ಈ ಸಾವು ಸಂಭವಿಸಿರುವುದು ಸಮುದ್ರ ಆಮೆಯ ಮಾಂಸವನ್ನು ತಿಂದಿರುವುದರಿಂದ ಎಂದು ದೃಢಪಟ್ಟಿದೆ ಎಂದು ಡಾ ಬಕಾರಿ ಹೇಳಿದ್ದಾರೆ. ಅಪರೂಪದ ಸಂದರ್ಭಗಳಲ್ಲಿ, ಚೆಲೋನಿಟಾಕ್ಸಿಸಮ್ ಎಂದು ಕರೆಯಲ್ಪಡುವ ಒಂದು ರೀತಿಯ ಆಹಾರ ವಿಷದ ಕಾರಣದಿಂದಾಗಿ ಆಮೆ ಮಾಂಸವು ವಿಷಕಾರಿಯಾಗಿದೆ. ನಿಖರವಾದ ಕಾರಣ ತಿಳಿದಿಲ್ಲವಾದರೂ, ಟರ್ಟಲ್ ಫೌಂಡೇಶನ್ ಚಾರಿಟಿ ಪ್ರಕಾರ, ಇದು ಆಮೆಗಳು ತಿನ್ನುವ…
ತುಮಕೂರು: ಲಂಚ ಪಡೆಯುತ್ತಿದ್ದ ಸಮಯದಲ್ಲಿ ವಾಣಿಜ್ಯ ತೆರಿಗೆ ಇಲಾಖೆ (ಜಾರಿ ವಿಭಾಗ-2) ಅಧಿಕಾರಿ ವಿ.ಕೆ.ಮಂಜುನಾಥ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆ ಕಚೇರಿಯಲ್ಲಿ ಸೋಮವಾರ ಜಿ.ಮಂಜುನಾಥರೆಡ್ಡಿ ಅವರಿಂದ ₹40 ಸಾವಿರ ಲಂಚದ ಹಣ ತೆಗೆದುಕೊಳ್ಳುತ್ತಿದ್ದ ಸಮಯದಲ್ಲಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ ಆರೋಪಿ ವಿ.ಕೆ. ಮಂಜುನಾಥ ಅವರನ್ನು ಹಣದ ಸಹಿತ ವಶಕ್ಕೆ ಪಡೆದಿದ್ದಾರೆ. ಪೆಪ್ಲಿ ವಿತರಣೆ ಏಜೆನ್ಸಿ ಹೊಂದಿರುವ ಜಿ.ಮಂಜುನಾಥರೆಡ್ಡಿ ಎಪಿಎಂಸಿ ಯಾರ್ಡ್ ನಲ್ಲಿ ದಾಸ್ತಾನು ಮಳಿಗೆ ಹೊಂದಿದ್ದಾರೆ. ಡಿಸೆಂಬರ್ 26ರಂದು ಸ್ಥಳಕ್ಕೆ ಭೇಟಿ ನೀಡಿದ್ದ ವಿ.ಕೆ.ಮಂಜುನಾಥ ತಪಾಸಣೆ ನಡೆಸಿ, ಕೆಲವು ದಾಖಲೆಗಳನ್ನು ಪರಿಶೀಲಿಸಿದ ನಂತರ ತಪಾಸಣೆ ನಡೆಸಿ, ಕೆಲವು ದಾಖಲೆಗಳನ್ನು ಪರಿಶೀಲಿಸಿದ ನಂತರ ಸ್ಥಳದಲ್ಲೇ ನೋಟಿಸ್ ಜಾರಿ ಮಾಡಿದ್ದರು. ನೋಟಿಸ್‌ನಲ್ಲಿ ಕೇಳಿರುವ ವಿವರಗಳಿಗೆ ಸಂಬಂಧಿಸಿದಂತೆ ಕೆಲವು ದಾಖಲೆಗಳನ್ನು ಅಧಿಕಾರಿಗೆ ಸಲ್ಲಿಸಿದ್ದರು. ದಾಖಲೆಗಳನ್ನು ಪರಿಶೀಲಿಸಿದ ಅಧಿಕಾರಿ ₹7 ಲಕ್ಷ ಜಿಎಸ್‌ಟಿ ಕಟ್ಟುವಂತೆ ಸೂಚಿಸಿದ್ದರು. ಹಣ ಪಾವತಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದರು. ಕೊನೆಗೆ ಮಾತುಕತೆ ನಡೆದು…
ಲೋಕಸಭಾ ಚುನಾವಣಾ ದಿನಾಂಕ ನಿಗದಿಯಾಗಲಿರುವ ಈ ಸಂದರ್ಭದಲ್ಲಿ ಮೈಸೂರಿನ ಟಿಕೆಟ್ ಗಾಗಿ ಪ್ರತಾಪ್ ಸಿಂಹ ಹಾಗೂ ಯದುವೀರ್ ಒಡೆಯರ್ ನಡುವೆ ಟಿಕೆಟ್ ಜಟಾಪಟಿ ನಡೆಯುತ್ತಿದೆ. ಸತತ ಮೂರನೇ ಅವಧಿಗೆ ಮರು ಚುನಾವಣೆಗೆ ಸ್ಪರ್ಧಿಸಲು ತಮಗೆ ಬಿಜೆಪಿ ಟಿಕೆಟ್ ಸಿಗುವುದಿಲ್ಲ ಎಂಬ ಊಹಾಪೋಹಗಳ ಮಧ್ಯೆ, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ತಮ್ಮ ಪಕ್ಷದ ಸದಸ್ಯರು ಮತ್ತು ಸಂಭಾವ್ಯ ಅಭ್ಯರ್ಥಿ ಯದುವೀರ್ ಒಡೆಯರ್ ಅವರನ್ನು ವ್ಯಂಗ್ಯವಾಗಿ ಟೀಕಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ರಾಜ ವಂಶಸ್ಥರಾದ ವೈ. ಕೆ. ಸಿ. ಒಡೆಯರ್ ಅವರು ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವುದನ್ನು ಪರೋಕ್ಷವಾಗಿ ವಿರೋಧಿಸಿದ್ದಾರೆ. “ಐಷಾರಾಮಿ ಜೀವನವನ್ನು ನಡೆಸುತ್ತಿರುವವರು ಜನರ ಸಂಕಷ್ಟಗಳನ್ನು ಹಂಚಿಕೊಳ್ಳಲು ಬಂದರೆ ನಾವು ಅವರನ್ನು ಸ್ವಾಗತಿಸಬೇಕು” ಎಂದು ಅಪಹಾಸ್ಯ ಮಾಡಿದರು. ಒಡೆಯರ್ ಅವರಿಗೆ ಟಿಕೆಟ್ ನೀಡಿದರೆ ಅದನ್ನು ನಾನು ಸ್ವಾಗತಿಸುತ್ತೇನೆ. ಇದಕ್ಕಾಗಿ ನಾನು ಕರ್ನಾಟಕದ ಬಿಜೆಪಿ ನಾಯಕರನ್ನು ಅಭಿನಂದಿಸುತ್ತೇನೆ “ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನವಿರೋಧಿ ನೀತಿಗಳ ವಿರುದ್ಧ…