ನಿಮ್ಮ ಚರ್ಮದ ರಕ್ಷಣೆಗೆ ಬೆಲ್ಲ ಬಳಸಿ: ಹೇಗೆ ಗೊತ್ತಾ?
ಬೆಲ್ಲದಲ್ಲಿ ಆಂಟಿ ಆಕ್ಸಿಡೆಂಟ್, ಸತು ಹಾಗೂ ಸೆಲೆನಿಯಂನಂತ ಖನಿಜಗಳಿದ್ದು, ಇದು ಚರ್ಮದ ರಕ್ಷಣೆಯನ್ನು ಮಾಡುತ್ತದೆ.
2 ಚಮಚ ಜೇನುತುಪ್ಪ, 1 ಚಮಚ ನಿಂಬೆ ರಸ ಹಾಗೂ 2 ಚಮಚ ಬೆಲ್ಲ ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. 10 ನಿಮಿಷಗಳ ಕಾಲ ಮಸಾಜ್ ಮಾಡಿ. ನಂತರ ತಣ್ಣೀರಿನಿಂದ ತೊಳೆಯಿರಿ. 1 ಚಮಚ ಬೆಲ್ಲದ ಪುಡಿಗೆ ಟೊಮೆಟೋ ರಸವನ್ನು ಬೆರೆಸಿ ಕೆಲ ಹನಿ ನಿಂಬೆ ರಸ ಹಾಗೂ ಅರಶಿನ ಪುಡಿಯನ್ನು ಮಿಕ್ಸ್ ಮಾಡಿ, ಮುಖಕ್ಕೆ ಹಚ್ಚಿ. 15 ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆಯಿರಿ.
ಪ್ರತಿದಿನ ಈ ಕಾಫಿ ಕುಡಿಯುವುದರಿಂದ ಹಲವು ಪ್ರಯೋಜನಗಳು:
ಉತ್ಕರ್ಷಣ ನಿರೋಧಕ ಸಮೃದ್ಧವಾಗಿರುವ ಬ್ಲ್ಯಾಕ್ ಕಾಫಿ ಕುಡಿದರೆ ಕ್ಯಾನ್ಸರ್ ತಡೆಗಟ್ಟಬಹುದು. ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ದೇಹದಲ್ಲಿ ಚಯಾಪಚಯ ಕ್ರಿಯೆ ಸರಾಗವಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ.
ಬ್ಲ್ಯಾಕ್ ಕಾಫಿಯನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಕ್ಲೋರೊಜೆನಿಕ್ ಆಮ್ಲ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಕೆಫೀನ್ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸುತ್ತದೆ. ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿದ್ದಲ್ಲಿ ಕಾಫಿ ಸೇವಿಸುವುದು ಉತ್ತಮ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296