Subscribe to Updates
Get the latest creative news from FooBar about art, design and business.
- ಹಿಂದೂಗಳ ಮೇಲಿನ ದೌರ್ಜನ್ಯ ಸಹಿಸಲ್ಲ: ಬಾಂಗ್ಲಾ ವಿರುದ್ಧ ಗುಡುಗಿದ ದೊಡ್ಡಹಳ್ಳಿ ಅಶೋಕ್
- ಕಲ್ಯಾಣ ಕರ್ನಾಟಕ ಸರ್ಕಾರಿ ನೌಕರರ ಸಂಘ: ಪದಾಧಿಕಾರಿಗಳ ಆಯ್ಕೆ
- ತುಮಕೂರು | ಅದ್ದೂರಿ ಕನ್ನಡ ರಾಜ್ಯೋತ್ಸವ, ಉಚಿತ ಆರೋಗ್ಯ ತಪಾಸಣಾ ಶಿಬಿರ
- ಡಿ.29ರಿಂದ ತುಮಕೂರು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನ: ಏನೇನು ಕಾರ್ಯಕ್ರಮಗಳು ಇರಲಿವೆ?
- ತುರುವೇಕೆರೆ: ಡಿ.30: ಸಂಪಿಗೆಯಲ್ಲಿ ವೈಕುಂಠ ಏಕಾದಶಿ ಮಹೋತ್ಸವ
- ಕುಣಿಗಲ್: ಡಿ.29ರಿಂದ ವೆಂಕಟರಮಣ ಸ್ವಾಮಿ ಪೂಜೋತ್ಸವ
- ತುರುವೇಕೆರೆ: ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ತೀರ್ಮಾನ
- ವಿದ್ಯುತ್ ಕಂಬಗಳಿಗೆ ಕಾರು ಡಿಕ್ಕಿ: ತಪ್ಪಿದ ಭಾರೀ ಅನಾಹುತ
Author: admin
ಕೊರಟಗೆರೆ : ಮಾದಿಗ ಬಹುಸಂಖ್ಯಾತ ಕ್ಷೇತ್ರಗಳಲ್ಲಿ ಗುರುತಿಸಿ ಜನಾಂದೋಲನ ಸೃಷ್ಠಿಸಿ ಮತ ಜಾಗೃತಿ ಅಂದೋಲನ ಮಾಡಲಿದ್ದೇವೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಅಭ್ಯರ್ಥಿಗಳು ಒಳಮೀಸಲಾತಿ ಪರವಾಗಿ ಧ್ವನಿ ಎತ್ತದಿದ್ದರೆ, ಆ ಶಾಸಕರನ್ನು ಚುನಾವಣೆಯಲ್ಲಿ ಸೋಲಿಸಲು ದೃಢ ನಿರ್ಧಾರ ಮಾಡಿದ್ದೇವೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಗೌರವಾಧ್ಯಕ್ಷ ಕೇಶವಮೂರ್ತಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಕೊರಟಗೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾದಿಗ ಸಮುದಾಯದ ಸ್ವಾಭಿಮಾನದ ಒಕ್ಕೂಟದಿಂದ ಆಯೋಜಿಸಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಆ.19ರ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೆ ತುರ್ತಾಗಿ ತೀರ್ಮಾನ ಕೈಗೊಳ್ಳಬೇಕು ಎಂದು ಹೇಳಿದರು. ಕಾನೂನು ಸಚಿವ ಹೆಚ್.ಕೆ ಪಾಟೀಲ್ ನೇತೃತ್ವದಲ್ಲಿ ಸಣ್ಣ ಉಪ ಸಮಿತಿ ರಚಿಸಿ ಕೇವಲ 3—4 ದಿನಗಳಲ್ಲಿ ಎಲ್ಲಾ ಸಮುದಾಯಗಳ ಅಹವಾಲು ಸ್ವೀಕರಿಸಿ ನಾಗಮೋಹನ್ ದಾಸ್ ರವರ ಪ.ಜಾತಿ ವರದಿಯ ಆಧಾರದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೇ ಜಾರಿಗೊಳಿಸಬೇಕು. ತಮಿಳುನಾಡು ಮಾದರಿಯಲ್ಲಿ ಸದಾಶಿವ ಆಯೋಗ, ನಾಗಮೋಹನ್‌ದಾಸ್ ವರದಿಯ ಆಧಾರದ ಮೇಲೆ ಮಾದಿಗ…
ಕೊರಟಗೆರೆ : ಸಮಾಜದಲ್ಲಿ ಪ್ರತಿಯೊಬ್ಬರು ಸಮಾನತೆಯಿಂದ ಬಾಳಿದರೆ ದೇಶ ಹಾಗೂ ರಾಜ್ಯ ಪ್ರಗತಿ ಹೊಂದುವುದರ ಜೊತೆಗೆ ಮಾದರಿಯಾಗಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಾಗೋಣ ಎಂದು ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ತಿಳಿಸಿದರು. ಕೊರಟಗೆರೆ ಪಟ್ಟಣದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಖಾಸಗಿ ವಾಹಿನಿಯ ಕಚೇರಿಯಲ್ಲಿ ಆಯೋಜಿಸಲಾದ ಸಮಾನತೆ ಹಾದಿಯ ಪಯಣ ಕುರಿತು ಪ್ರೋಜೆಕ್ಟರ್ ಮೂಲಕ ಸಮಾಜದ ಬದಲಾವಣೆ ಹಾಗೂ ಸಮಾನತೆ ಕುರಿತು ಹಲವು ಮಾಹಿತಿ ನೀಡಿದ ಅವರು, ವಿವಿಧ ಸಂಘಟನೆಯ ಪದಾಧಿಕಾರಿಗಳಿಗೆ ಮಾಹಿತಿ ನೀಡಿ ಭವಿಷ್ಯದ ಕರ್ನಾಟಕ ನಿರ್ಮಾಣ ಮಾಡಬೇಕು, ಉತ್ತಮ ಸಮಾಜ ನಿರ್ಮಾಣವಾಗಬೇಕು ಎಂದು ಹೇಳಿದರು. ಪೆರಿಯಾರ್ ಮತ್ತು ಅಂಬೇಡ್ಕರ್ ಅವರು ನಾವು ಅಧಿಕಾರದಲ್ಲಿ ಬರಬೇಕು ಎಂದು ಹೇಳುತ್ತಾರೆ. ನಾವು ಎಂದರೆ ಸಮಾನತಾವಾದಿಗಳು ಅಧಿಕಾರಕ್ಕೆ ಬರಬೇಕು. ಅಸಮಾನತೆ ವ್ಯವಸ್ಥೆಯೇ ನಮ್ಮ ಶತ್ರು. ಈ ವ್ಯವಸ್ಥೆಯಲ್ಲಿ ಆದಿವಾಸಿ, ದಲಿತ, ಮಹಿಳೆಯರನ್ನು ವಿರೋಧಿಸಲಾಗುತ್ತದೆ. ಇದನ್ನು ನಾವು ಗುರುತಿಸಿಕೊಂಡು ಒಂದು ಪರ್ಯಾಯವಾದ ಶಕ್ತಿ ಕಟ್ಟಬೇಕು ಎಂದು ಹೇಳಿದರು. ಬಾಬಾ ಸಾಹೇಬರಿಗೆ ಮೂರ್ತಿ,…
ಕೊರಟಗೆರೆ: ಸ್ವಾತಂತ್ರ್ಯ ಭಾರತದಲ್ಲಿ ಇಂದು ನಾವು ಬದುಕಿದ್ದೇವೆ ಎಂದರೆ ಸ್ವಾತಂತ್ರ್ಯ ಪೂರ್ವದ ಬ್ರಿಟಿಷ್ ವಸಾಹತುಶಾಹಿಯ ಕಪಿಮುಷ್ಠಿಯಿಂದ ನಲುಗಿ ನರಳಿದಂತಹ ಸಹಸ್ರಾರು ಹಿರಿಯ ಜೀವಗಳ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನವೇ ಕಾರಣ ಎಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ಕೆ.ಮಂಜುನಾಥ್ ತಿಳಿಸಿದರು. ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ತಾಲ್ಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಲಾದ 79ನೇ ಭಾರತ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜರೋಹಣ ನೆರವೇರಿಸಿ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಸ್ವಾತಂತ್ರ್ಯದ ನೆರಳಿನಲ್ಲಿ ಬದುಕುತ್ತಿರುವ ನಾವು ನೀವೆಲ್ಲರೂ ಸ್ವಚ್ಛಂದದ ಸ್ವಾತಂತ್ರ್ಯ ಹಕ್ಕಿಗಳು. ಸ್ವತಂತ್ರ ಕೇವಲ ಬದುಕುವುದಕ್ಕೋಸ್ಕರ ಅಲ್ಲ. ಸಂವಿಧಾನದ ಆಶಯದಲ್ಲಿ ದೇಶದ ಘನತೆ, ಗೌರವ, ಸಂಸ್ಕಾರ, ಸಂಪ್ರದಾಯ, ಜಲ, ನೆಲವನ್ನು ರಕ್ಷಿಸುವುದಲ್ಲದೇ ನಾಡಿನ ಪ್ರಗತಿ–ಅಭಿವೃದ್ಧಿಗೆ ಶ್ರಮಿಸುವುದು ನಮ್ಮ ನಿಮ್ಮೆಲ್ಲರಾ ಆಧ್ಯ ಕರ್ತವ್ಯ. ಪ್ರಜಾಪ್ರಭುತ್ವದ ಸ್ಥಿರ ಪ್ರಗತಿಯು ಸಾಮಾಜಿಕ ಪ್ರಜಾಪ್ರಭುತ್ವದ ಬಲವರ್ತನೆಯ ಕಡೆಗೆ ಸಾಧಿಸಿದ ಪ್ರಗತಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು. ಸ್ವಾತಂತ್ರ್ಯ ಬಂದು ೭೯ವರ್ಷ ಪೂರೈಸಿದರೂ ದೇಶದಲ್ಲಿ ಜಾತಿ…
ನವದೆಹಲಿ: ದರ್ಗಾದ ಮೇಲ್ಛಾವಣಿ ಕುಸಿದು 5 ಮಂದಿ ಮೃತಪಟ್ಟ ದಾರುಣ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಸತತ ಮಳೆಯಿಂದ ಹುಮಾಯೂನ್ ಸಮಾಧಿಯ ಹಿಂದೆ ಇರುವ ಫತೇಹ್ ಶಾ ಎಂಬ ದರ್ಗಾದ ಗೋಡೆ ಮತ್ತು ಛಾವಣಿಯ ಒಂದು ಭಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಪರಿಣಾಮ ಮೂವರು ಮಹಿಳೆಯರು ಮತ್ತು ಇಬ್ಬರು ಪುರುಷರು ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಮಧ್ಯಾಹ್ನ 3:55ಕ್ಕೆ ಪೊಲೀಸ್ ನಿಯಂತ್ರಣ ಕೊಠಡಿಗೆ ಈ ಬಗ್ಗೆ ಮಾಹಿತಿ ಬಂದಿದ್ದು, ತಕ್ಷಣ ಸ್ಥಳಕ್ಕೆ ದೌಡಾಯಿಸಿದ ನಿಜಾಮುದ್ದೀನ್ ಪೊಲೀಸ್ ಠಾಣೆಯ ಎಸ್ ಎಚ್ ಒ ಮತ್ತು ಸ್ಥಳೀಯ ಪೊಲೀಸ್ ತಂಡ ರಕ್ಷಣಾ ಕಾರ್ಯ ಕೈಗೊಂಡಿದೆ. ಬಳಿಕ ಅಗ್ನಿಶಾಮಕ ದಳ, ಸಿಎಟಿ ಆಂಬ್ಯುಲೆನ್ಸ್ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡ ಕೂಡ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ಸೇರಿಕೊಂಡಿತು. ಇಲ್ಲಿಯವರೆಗೆ 11 ಜನರನ್ನು ಅವಶೇಷಗಳಿಂದ ರಕ್ಷಿಸಲಾಗಿದೆ. ಗಾಯಾಳುಗಳನ್ನು ಏಮ್ಸ್ ಟ್ರಾಮಾ ಸೆಂಟರ್ ಮತ್ತು ಲೋಕ ನಾಯಕ್ ಆಸ್ಪತ್ರೆ (ಎಲ್‌ಎನ್‌ಜೆಪಿ) ಸೇರಿದಂತೆ…
ನೆಲಮಂಗಲ: ಕುರಿ, ಮೇಕೆ ತುಂಬಿದ್ದ ಲಾರಿಗೆ KSRTC ಬಸ್ ಡಿಕ್ಕಿಯಾದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ತಾಲೂಕಿನ ಗುಂಡೇನಹಳ್ಳಿ ಗ್ರಾಮದ ಬಳಿ ಇಂದು ಬೆಳಗ್ಗಿನ ಜಾವ 3.30 ಸಮಯದಲ್ಲಿ ಸಂಭವಿಸಿದೆ. ಭೀಕರ ರಸ್ತೆ ಅಪಘಾತದಲ್ಲಿ ಲಾರಿಯಲ್ಲಿದ್ದ ಸೀನಪ್ಪ(50), ನಜೀರ್ ಅಹ್ಮದ್(36), ಆನಂದ್(42) ಮೃತರಾಗಿದ್ದಾರೆ. ಕುರಿ, ಮೇಕೆ ತುಂಬಿಕೊಂಡು ಮುಧೋಳದಿಂದ ತುಮಕೂರು ಮಾರ್ಗವಾಗಿ ಬೆಂಗಳೂರು ಕಡೆಗೆ ಲಾರಿ ತೆರಳುತ್ತಿತ್ತು. ಟೈಯರ್ ಪಂಚರ್ ಆಗಿದ್ದರಿಂದ ಲಾರಿಯನ್ನು ರಸ್ತೆ ಬದಿ ನಿಲ್ಲಿಸಲಾಗಿತ್ತು. ಈ ವೇಳೆ ನಿಂತಿದ್ದ ಲಾರಿಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಲಾರಿ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಸರಗೂರು: ವಾಹನಗಳು ವೇಗ ನಿಯಂತ್ರಣದ ಜತೆಗೆ ರಸ್ತೆ ಅಪಘಾತ ತಪ್ಪಿಸಲೆಂದು ಪಟ್ಟಣದ ವಿವಿಧ ಕಡೆಗಳಲ್ಲಿ ಇರುವ ಸ್ಪೀಡ್ ಬ್ರೇಕರ್ ಅಳವಡಿಸಲಾಗಿತ್ತು, ಆದರೆ ಸ್ಪೀಡ್ ಬ್ರೇಕರ್ ಅಳಿಸಿ ಹೋಗಿ ಇತ್ತೀಚೆಗೆ ಅಪಘಾತಗಳು ಹೆಚ್ಚಾಗಿದ್ದರಿಂದ ನಾವೇ ಸ್ಪೀಡ್ ಬ್ರೇಕರ್ ಗಳಿಗೆ ಬಣ್ಣ ಬಳಿಯುವ ಕಾರ್ಯ ಮುಂದುವರಿಸುತ್ತಿದ್ದೇನೆ ಪ.ಪಂ. ಸದಸ್ಯ ಶ್ರೀನಿವಾಸ ಹೇಳಿದರು. ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಎಚ್.ಡಿ.ಕೋಟೆ ಮತ್ತು ಬೇಗೂರು ಮುಖ್ಯ ರಸ್ತೆಯಲ್ಲಿ ಸ್ಪೀಡ್ ಬ್ರೇಕರ್ ಗಳು ಇದ್ದು, ಸಂಬಂಧ ಪಟ್ಟ ಅಧಿಕಾರಿಗಳು ಸ್ಪೀಡ್ ಬ್ರೇಕರ್ ಗಳಿಗೆ ಬಣ್ಣ ಬಳಿದೆ ಇರುವ ಕಾರಣದಿಂದ ಪಪಂ ಸದಸ್ಯ ಹಾಗೂ ಮುಖಂಡರು ಸ್ವಾತಂತ್ರ್ಯ ದಿನಾಚರಣೆಯಂದು ಬಣ್ಣ ಬಳಿಯುವ ಕೆಲಸ ಮಾಡಿ ಮಾನವೀಯತೆ ಮೆರೆತಿದ್ದಾರೆ. ಇತ್ತೀಚೆಗೆ ಪಟ್ಟಣದಲ್ಲಿ ಸರಕು ಸಾಗಣೆಯಲ್ಲಿ ಹೆಚ್ಚಳವಾಗುತ್ತಿದೆ. ವಾಹನಗಳು ಹಾಗೂ ಬೈಕ್ ಸವಾರರು ಹೆಚ್ಚಾಗಿದ್ದರಿಂದ ಸ್ಪೀಡ್ ಬ್ರೇಕರ್ ಗಳಲ್ಲಿ ಜೀಬ್ರಾ ಕ್ರಾಸ್ ಇಲ್ಲದೆ ಅಪಘಾತಗಳು ಸಂಭವಿಸುತ್ತಿವೆ. ಆದರಿಂದ ನಾವುಗಳು ದಿನನಿತ್ಯ ನೋಡಿಕೊಂಡು ಬರುವುತ್ತಿದ್ದೇವೆ. ಆದರೆ ಅಧಿಕಾರಿಗಳಿಗೆ ಗಮನಕ್ಕೂ ತಂದರೂ ಕೆಲಸ ಮಾಡಿಲ್ಲ ಎಂದು…
ಸರಗೂರು: ವಿದ್ಯಾಭ್ಯಾಸ ಮುಗಿಸಿ ನಂತರವೂ ವಿದ್ಯಾರ್ಥಿಗಳು ತಾವು ಓದಿದ ಪ್ರಥಮ ದರ್ಜೆ ಕಾಲೇಜು ಗುರುಗಳನ್ನು ನೆನಪಿನಲ್ಲಿ ಇಟ್ಟಿಕೊಂಡಿದ್ದಾರೆ ಎಂದರೆ ಇದು ಮಾದರಿ ಕಾರ್ಯ ಎಂದು ದೈಹಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಸ್.ಜೆ.ಪುಟ್ಟರಾಜು ಎಂದರು. ಪಟ್ಟಣದ ಪ್ರಥಮ ದರ್ಜೆ ಕಾಲೇಜು ಎಚ್.ಡಿ.ಕೋಟೆ ಸಭಾಂಗಣದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ದೈಹಿಕ ಶಿಕ್ಷಣ ನಿರ್ದೇಶಕರಾದ ಎಸ್.ಜೆ.ಪುಟ್ಟರಾಜುರವರಿಗೆ ಅಭಿವಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಕಲಿಕೆ ಶ್ರೇಷ್ಠ ಮಟ್ಟದಲ್ಲಿ ಇರಬೇಕು ಎಂಬುದಕ್ಕಾಗಿ ಗುರುಗಳು ದಂಡಿಸುತ್ತಾರೆ. ಬಾಲ್ಯದಲ್ಲಿ ತಿದ್ದದೇ, ತಪ್ಪಿಗೆ ಶಿಕ್ಷೆ ನೀಡಿದೇ ಕಲಿಸುವ ಶಿಕ್ಷಣವು ನಿಜವಾದ ಶಿಕ್ಷಣವೇ ಅಲ್ಲ. ವಿದ್ಯಾರ್ಥಿಗಳು ಬದುಕು ಹಸನಾಗಲಿ ಎಂದು ಮಾತ್ರ ಶಿಕ್ಷಕರು ಬಯಸುತ್ತಾರೆ. ಈ ನಿಟ್ಟಿನಲ್ಲಿ ಇಂದಿನ ಶಿಕ್ಷಣ ಪಾಲಕರ ಸಂಬಂಧ ಉನ್ನತೀಕರಣಗೊಳ್ಳಬೇಕು ಎಂದರು. 15 ವರ್ಷಗಳ ಹಿಂದೆ ನಮ್ಮಿಂದ ಪಾಠ ಕೇಳಿದ ಮಕ್ಕಳು ಇಂದು ಉನ್ನತ ಮಟ್ಟದ ಸ್ಥಾನಗಳಲ್ಲಿ ಇದ್ದಾರೆ. ಇನ್ನೂ ಕೆಲವರು ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರೆಲ್ಲರು ಒಂದೆಡೆ ಸೇರಿ…
ತುಮಕೂರು: ನಗರದ ಸತ್ಯಮಂಗಲದ ಪ್ರತಿಷ್ಠಿತ ಜೈನ್ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಒಂದು ಗೂಡಿ ಬಹಳ ವಿಜೃಂಭಣೆಯಿಂದ ಭಕ್ತಿಪೂರ್ವಕವಾಗಿ ಪೂಜಾ ಕಾರ್ಯಕ್ರಮವನ್ನು ನಡೆಸಲಾಯಿತು. ಇದೇ ಸಂದರ್ಭದಲ್ಲಿ ಪ್ರಾಂಶುಪಾಲರಾದ ಎನ್.ವರುಣ್ ಕುಮಾರ್, ಉಪನ್ಯಾಸಕರಾದ ಪ್ರಶಾಂತ್, ಹರೀಶ್ ಕುಮಾರ್, ಟಿ.ಜಿ.ನಾಗಲಕ್ಷ್ಮಿ, ಭವ್ಯ, ನಂದಿನಿ, ಮುಂತಾದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವರದಿ: ನಂದೀಶ್ ನಾಯ್ಕ ಪಿ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಆರೋಗ್ಯವಂತರಾಗಿರಲು ಚೆನ್ನಾಗಿ ನಿದ್ದೆ ಮಾಡಬೇಕು ಅಂತ ವೈದ್ಯರು ಹೇಳುತ್ತಾರೆ. ಆದರೆ ಅತಿಯಾಗಿ ನಿದ್ದೆ ಮಾಡಿದರೂ ಆರೋಗ್ಯಕ್ಕೆ ಹಾನಿಕಾರಕವಂತೆ. ಅತಿಯಾದ ನಿದ್ದೆಯಿಂದಾಗುವ ಅಡ್ಡಪರಿಣಾಮಗಳು ಯಾವುದು ನಿಮಗೆ ಗೊತ್ತಾ? ತಜ್ಞರು ಮನುಷ್ಯನ ನಿದ್ದೆಯ ಬಗ್ಗೆ ನೀಡಿರುವ ವಿವರವಾದ ಮಾಹಿತಿ ಇಲ್ಲಿದೆ. ಪ್ರತಿ ರಾತ್ರಿ 9 ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡುವವರಿಗೂ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ತಜ್ಞರು ಹೇಳುತ್ತಾರೆ. ರಾತ್ರಿ 7 ಗಂಟೆಗಳಿಗಿಂತ ಕಡಿಮೆ ಸಮಯ ನಿದ್ರೆ ಮಾಡುವ ಜನರಿಗೆ ಅಕಾಲಿಕ ಮರಣದ ಅಪಾಯವು ಶೇಕಡಾ 14 ರಷ್ಟು ಹೆಚ್ಚಾಗಿದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ. ಇದಲ್ಲದೇ, 9 ಗಂಟೆಗಳಿಗಿಂತ ಹೆಚ್ಚು ಸಮಯ ನಿದ್ರೆ ಮಾಡುವವರಿಗೆ ಅಕಾಲಿಕ ಮರಣದ ಅಪಾಯ ಶೇಕಡಾ 34 ರಷ್ಟು ಇದೆ ಎಂದು ತಿಳಿದು ಬಂದಿದೆ. ಹಿಂದೆ ನಡೆಸಿದ 79 ಅಧ್ಯಯನಗಳನ್ನು ಪರಿಶೀಲಿಸಿದ ನಂತರ ಸಂಶೋಧಕರು ಈ ಹೇಳಿಕೆ ನೀಡಿದ್ದಾರೆ. ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮದಂತೆ, ನಿದ್ರೆಯು ಒಟ್ಟಾರೆ ದೇಹದ ಆರೋಗ್ಯಕ್ಕೆ ಬಹಳ ಮುಖ್ಯ. ನಾವು ನಿದ್ರಿಸಿದಾಗ, ದೇಹದಲ್ಲಿ…
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ದರ್ಶನ್ ತೂಗುದೀಪ, ಪವಿತ್ರಾ ಗೌಡ ಸೇರಿ 7 ಆರೋಪಿಗಳ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಇದರ ಬೆನ್ನಲ್ಲೇ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿತ್ತು. ನಟ ದರ್ಶನ್ ಬಂಧನದ ಬೆನ್ನಲ್ಲೇ ಪತ್ನಿ ವಿಜಯಲಕ್ಷ್ಮೀ ಭಾವನಾತ್ಮಕವಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ. ತಮ್ಮ ಅಧಿಕೃತ ಇನ್’ಸ್ಟಾಗ್ರಾಮ್’ನಲ್ಲಿ ದರ್ಶನ್ ನಿಂತಿರುವ ಹಿಮ್ಮುಖದ ಫೋಟೋ ಹಂಚಿಕೊಂಡ ವಿಜಯಲಕ್ಷ್ಮಿ ದರ್ಶನ್, ಬ್ರೋಕನ್ ಹಾರ್ಟ್ (ಒಡೆದ ಹೃದಯ) ಎಮೋಜಿಯನ್ನು ಕ್ಯಾಪ್ಷನ್ ನಲ್ಲಿ ಹಾಕಿದ್ದಾರೆ. ಅಭಿಮಾನಿಯೋರ್ವರು ಪ್ರತಿಕ್ರಿಯಿಸಿ, ‘ಯಾವಾಗಲೂ ನಿಮ್ಮೊಂದಿಗಿದ್ದೇವೆ ಬಾಸ್’ ಎಂದು ತಿಳಿಸಿದ್ದಾರೆ. ಪ್ಲೀಸ್ ಸ್ಟೇ ಸ್ರಾಂಗ್ ಎಂದು ಮತ್ತೋರ್ವರು ತಿಳಿಸಿದ್ದಾರೆ. ಮಿಸ್ ಯು ಬಾಸ್, ಸ್ಟೇ ಸ್ಟ್ರಾಂಗ್ ಅತ್ತಿಗೆ ಎಂಬ ಕಾಮೆಂಟ್ ಹೆಚ್ಚಾಗಿ ಹರಿದು ಬಂದಿದೆ. ದರ್ಶನ್ ಈ ಪ್ರಕರಣದಿಂದ ಮುಕ್ತರಾಗಬೇಕೆಂದು ಬಯಸಿರೋ ಅಭಿಮಾನಿಯೊಬ್ಬರು , ‘ನಾವು ಎಂದೆಂದಿಗೂ ನಿಮ್ಮೊಂದಿಗೆ ಇದ್ದೇವೆ ಬಾಸ್. ನಿಮಗೆ ಹೆಚ್ಚಿನ ಶಕ್ತಿ ಸಿಗಲಿ ಮೇಡಂ. ದಯವಿಟ್ಟು ಬಾಸ್ ಅನ್ನು ಬೇಗ ಹೊರಗೆ ಕರೆದುಕೊಂಡು ಬನ್ನಿ’ ಎಂದು ತಿಳಿಸಿದ್ದಾರೆ. ಮತ್ತೊಂದು…