Subscribe to Updates
Get the latest creative news from FooBar about art, design and business.
- ಒಕ್ಕರಹಳ್ಳಿ ವ್ಯಾಪ್ತಿಯಲ್ಲಿ ಚಿರತೆ ಹಾವಳಿ: ಮೂರು ನಾಯಿಗಳನ್ನು ಬಲಿ ಪಡೆದ ಚಿರತೆ
- ವಿದ್ಯಾರ್ಥಿ ನಿಲಯ ಪ್ರವೇಶಕ್ಕಾಗಿ ಆನ್ ಲೈನ್ ಅರ್ಜಿ ಆಹ್ವಾನ
- ತುಮಕೂರು: ಮೆಮು ರೈಲು ಸಮಯ ಬದಲಾವಣೆ ಸಾಧ್ಯತೆ
- ಕುಡಿಯುವ ನೀರಿಲ್ಲದೆ ಹಸು ಸಾವು: ಹನುಮನಾಯಕನ ಪಾಳ್ಯದಲ್ಲಿ ನೀರಿಗೆ ಹಾಹಾಕಾರ
- ಅಂತರಸನಹಳ್ಳಿಯಲ್ಲಿ ಜರ್ಮನಿಯ ಮ್ಯಾನ್–ಹುಮ್ಮೆಲ್ ಪರಿಸರಸ್ನೇಹಿ ಘಟಕ ಆರಂಭ
- ಗುಬ್ಬಿ: ಹೇರೂರಿನಲ್ಲಿ ಮೇ 25 ರಂದು ಬಸವ ಜಯಂತಿ ಕಾರ್ಯಕ್ರಮ
- ಕೆ.ಆರ್.ಪೇಟೆ: ರಂಗ ಕುಣಿತ ಸ್ಪರ್ಧೆಯಲ್ಲಿ ಶ್ರವಣೂರು ತಂಡಕ್ಕೆ ಪ್ರಥಮ ಬಹುಮಾನ
- ಕರ್ನಾಟಕ ರಾಜ್ಯ ರೈತ ಸಂಘ: ಕೊರಟಗೆರೆ ನಗರ ನೂತನ ಘಟಕ ಸ್ಥಾಪನೆ
Author: admin
ಯಾದಗಿರಿ: ಗ್ಯಾಸ್ ಸಿಲಿಂಡರ್ ಗಳು ಪೂರೈಸುವ ಲಾರಿಯೊಂದು ನಿಯಂತ್ರಣ ತಪ್ಪಿ ನದಿಗೆ ಉರುಳಿ ಬಿದ್ದಿರುವ ಘಟನೆ ಯಾದಗಿರಿಯ ಹುಣಸಗಿ ತಾಲೂಕಿನ ಕೊಡೆಕಲ್ ಗ್ರಾಮದಲ್ಲಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಲಾರಿ ತಲೆಕೆಳಗಾಗಿ ನದಿಯಲ್ಲಿ ಬಿದ್ದಿದೆ. ಘಟನೆಯಲ್ಲಿ ಯಾವುದೆ ಹಾನಿ ಸಂಭವಿಸಿಲ್ಲ. ಚಾಲಕನೂ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ. ಕೊಡೇಕಲ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಧಾರವಾಡ: ಓದಿನ ಕಡೆ ಗಮನಹರಿಸು ತಂದೆ ಬುದ್ಧಿವಾದ ಹೇಳಿದಕ್ಕೆ ಮನನೊಂದ ಮಗ ಆತ್ಮಹತ್ಯೆಗೆ ಶರಣಾದ ಘಟನೆ ಧಾರವಾಡ ನಗರದ ಸಾದನಕೇರಿ ಬಡಾವಣೆಯಲ್ಲಿ ನಡೆದಿದೆ. ಧಾರವಾಡ ನಗರದ ಕೆಲಗೇರಿ ಕೆರೆಗೆ ಹಾರಿ ಫುಟ್ಬಾಲ್ ಆಟಗಾರ ಚೇತನ್ ಕೊಂಡಿಹಾಳ(23) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ‘ಕ್ರೀಡೆಗೆ ಆಸಕ್ತಿ ಕಡಿಮೆ ಕೊಟ್ಟು, ಓದಿನ ಕಡೆ ಗಮನಹರಿಸು’ ಎಂದು ತಂದೆ ಬುದ್ದಿವಾದ ಹೇಳಿದಕ್ಕೆ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶರಣಪ್ಪ ಕೊಂಡಿಹಾಳ ಎಂಬುವರ ಮೃತ ಪುತ್ರ ಚೇತನ್ ಮೃತಪಟ್ಟಿದ್ದಾನೆ. ಚೇತನ್ ಗೆ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಇತ್ತು. ಮಗನ ಆಸಕ್ತಿಯಿಂದಾಗಿ ಓದಿಗೆ ಸಮಸ್ಯೆ ಆಗಬಾರದೆಂದುಕೊಂಡ ಶರಣಪ್ಪ ಕೊಂಡಿಹಾಳ ಅವರು ತಮ್ಮ ಮಗನಿಗೆ ಬುದ್ಧಿ ಹೇಳಿದ್ದಾರೆ. ಇಷ್ಟಕ್ಕೆ ಮನನೊಂದ ಚೇತನ್ ಮನೆಯಿಂದ ನಾಪತ್ತೆಯಾಗಿದ್ದ. ಈಗ ಎರಡು ದಿನಗಳ ನಂತರ ಕೆಲಗೇರಿ ಕೆರೆಯಲ್ಲಿ ಚೇತನ್ ಮೃತದೇಹ ಪತ್ತೆಯಾಗಿದೆ. ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಕಾಸ್ಮೆಟಿಕ್ ಸರ್ಜರಿಗೆ ಬಂದ ಮಹಿಳೆಯೊಬ್ಬಳು ವೈದ್ಯರೊಬ್ಬರಿಗೆ ಕೋಟಿ ಕೋಟಿ ರೂ. ವಂಚಿಸಿರುವ ಪ್ರಕರಣ ವಿಜಯನಗರದಲ್ಲಿ ನಡೆದಿದೆ. ಡಾ. ಗಿರೀಶ್ ವಂಚನೆಗೊಳಗಾದ ವ್ಯಕ್ತಿಯಾಗಿದ್ದು, ಐಶ್ವರ್ಯಾ ಗೌಡ ಎಂಬ ಮಹಿಳೆಯ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಡಾ. ಗಿರೀಶ್ ಬಳಿ ಸೌಂದರ್ಯವರ್ಧಕ ಚಿಕಿತ್ಸೆಗಾಗಿ ಬಂದಿದ್ದ ಐಶ್ವರ್ಯಾ ಗೌಡ ಕ್ರಮೇಣ ಅವರಿಗೆ ಆಪ್ತಳಾಗಿದ್ದಳು. ತನಗೆ ದೊಡ್ಡ ದೊಡ್ಡ ವ್ಯಕ್ತಿಗಳ ಪರಿಚಯವಿದೆ ಎಂದು ಬೂಸಿ ಬಿಟ್ಟಿದ್ದ ಐಶ್ವರ್ಯಾ ತನ್ನ ಪ್ರಭಾವ ಬಳಸಿ ದುಬಾರಿ ಐಷಾರಾಮಿ ಕಾರ್ ನ್ನು ಕಡಿಮೆ ಬೆಲೆಯಲ್ಲಿ ಕೊಡಿಸುವುದಾಗಿ ಆಮಿಷ ತೋರಿದ್ದಳು. ಹಂತಹಂತವಾಗಿ ಅವರಿಂದ 6 ಕೋಟಿ ರೂ. ವಸೂಲಿ ಮಾಡಿದ್ದಳು. ಐಶ್ವರ್ಯಾ ವಂಚನೆ ಅರಿವಾದ ಬಳಿಕ ಹಣ ಕೇಳಿದ್ದಕ್ಕೆ ಅವರ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದರೆಂದು ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಳು. ಇತ್ತ ಕಾರೂ ಇಲ್ಲದೆ, ಕಾಸೂ ಇಲ್ಲದೆ ವೈದ್ಯ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಐಶ್ವರ್ಯ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಕಲಬುರಗಿ: ಕಲಬುರಗಿ ಆಶ್ರಯ ಕಾಲೊನಿಯಲ್ಲಿ ಯುವಕನೊಬ್ಬನನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದ್ದು, ಕಲಬುರಗಿ ಆಶ್ರಯ ಕಾಲೊನಿ ನಿವಾಸಿಯಾಗಿರುವ ರೋಹನ್(22) ಕೊಲೆಯಾದ ಯುವಕನಾಗಿದ್ದಾನೆ. ಕಲಬುರಗಿ ನಗರದ ಏಷ್ಯನ್ ಮಾಲ್ ನಲ್ಲಿ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರೋಹನ್‌ನನ್ನು ಒಬ್ಬ ರೌಡಿ ಶೀಟರ್ ಮಂಗಳವಾರ ರಾತ್ರಿ ಆಶ್ರಯ ಕಾಲೋನಿಯಲ್ಲಿ ಕೊಲೆ ಮಾಡಿದ್ದಾನೆ. ಆರೋಪಿಯು, ಮಹಾರಾಷ್ಟ್ರದ ಪುಣೆಯಿಂದ ಗಡಿಪಾರಾಗಿ ಬಂದಿದ್ದ ರೌಡಿ ಶೀಟರ್ ರೋಹನ್ ಜತೆಗೆ ಯಾವುದೋ ಕಾರಣಕ್ಕೆ ದ್ವೇಷವನ್ನು ಹೊಂದಿದ್ದ ಎನ್ನಲಾಗಿದೆ. ಇದರಿಂದಾಗಿ ಆತ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಹೊಸದಿಲ್ಲಿ: ಕೇವಲ 8 ನೇ ವಯಸ್ಸಿನಲ್ಲಿ, ಆಕೆ 10 ನೇ ತರಗತಿಯ ಪರೀಕ್ಷೆ ಉತ್ತೀರ್ಣಳಾದಳು, ಆಮೂಲಕ ತನ್ನ ಗೆಳೆಯರಿಗಿಂತ ಬಹಳ ಮುಂದಿದ್ದಳು. 10 ನೇ ವಯಸ್ಸಿನಲ್ಲಿ, ಜೈಸ್ವಾಲ್ ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದಳು, ಇದು ಅಸಾಧಾರಣ ಶೈಕ್ಷಣಿಕ ವೃತ್ತಿಜೀವನದ ಆರಂಭ. ಜೈಸ್ವಾಲ್ ಶೈಕ್ಷಣಿಕ ಸಾಧನೆ ಅಲ್ಲಿಗೇ ನಿಲ್ಲಲಿಲ್ಲ. ಆಕೆ ತನ್ನ 13 ನೇ ವಯಸ್ಸಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಪದವಿ ಪಡೆದಳು. 15 ನೇ ವರ್ಷಕ್ಕೆ ಏಷ್ಯಾದ ಕಿರಿಯ ಸ್ನಾತಕೋತ್ತರ ಪದವೀಧರೆ ಎಂಬ ಹೆಗ್ಗಳಿಕೆಗೆ ಪಾತ್ರ, ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ. ಆಕೆಯ ಶೈಕ್ಷಣಿಕ ಸಾಧನೆಯಲ್ಲಿ ಕಾನೂನು ಪದವಿ ಸಹ ಒಳಗೊಂಡಿದೆ, ಇದು ಜೈಸ್ವಾಲ್ ಳ ವೈವಿಧ್ಯಮಯ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಸಾಕ್ಷಿ. 17 ನೇ ವಯಸ್ಸಿನಲ್ಲಿ ಪಿಎಚ್ ಡಿ ಅಧ್ಯಯನ ಪ್ರಾರಂಭಿಸಿದ ಜೈಸ್ವಾಲ್, 22 ನೇ ವಯಸ್ಸಿಗೆ ಭಾರತದ ಅತ್ಯಂತ ಕಿರಿಯ ಡಾಕ್ಟರೇಟ್ ಪದವೀಧರೆ ಎಂಬ ಹೆಸರು ಪಡೆದಳು. ಆಕೆಯ ಅದ್ಭುತ ಸಂಶೋಧನೆಯು ಮಹಿಳೆಯರ ಆರ್ಥಿಕ…
ಪ್ರಸಿದ್ಧ ಚಾರಣಗಳಲ್ಲೊಂದಾದ ಕುಮಾರ ಪವರ್ತದಲ್ಲಿ ಟ್ರಕ್ಕಿಂಗ್ ಗೆ ನಿರ್ಬಂಧ ಹೇರಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಜನಜಂಗುಳಿಯಿಂದ ಪರಿಸರ ಹಾನಿ ಭೀತಿ ಎದುರಾಗಿರುವ ಕಾರಣ ಈ ಕ್ರಮ ಅನಿವಾರ್ಯವಾಗಿ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, “ಚಾರಣ ನಿಯಂತ್ರಣ ಸಂಬಂಧ ವರದಿ ಸಲ್ಲಿಸಲು ಸೂಚಿಸಿದ್ದೇನೆ. ಅದರ ಜೊತೆಗೆ ಚಾರಣಕ್ಕೆ ಆನ್ ಲೈನ್ ದಾಖಲಾತಿ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ಪ್ಲಾಸ್ಟಿಕ್ ತ್ಯಾಜ್ಯದಿಂದ ಅಪಾರ ಹಾನಿಯಾಗುತ್ತಿದೆ. ಕರಾವಳಿ ಪ್ರದೇಶಗಳನ್ನು ಪ್ಲಾಸ್ಟಿಕ್ ಮುಕ್ತ ನಗರ ಮಾಡುವ ಗುರಿ ಇದೆ.ರಾಜ್ಯದ ಎಲ್ಲಾ ಚಾರಣ ಪಥಗಳನ್ನು ಆನ್ ಲೈನ್ ದಾಖಲಾತಿ ವ್ಯಾಪ್ತಿಗೆ ತರುತ್ತೇವೆ. ಏಕಾಏಕಿ ಸಾವಿರಾರು ಜನ ಹೋದರೆ ಇಕ್ಕಟ್ಟಾಗಿ ಸಮಸ್ಯೆ ಆಗುತ್ತದೆ. ಕುಮಾರ ಪರ್ವತದಲ್ಲಿ ಅಂದಾಜು 20 ಕಿ.ಮೀ ಚಾರಣ ಇರಬಹುದು. ಇಂಥ ಜಾಗದಲ್ಲಿ ಎಷ್ಟು ಜನ ಹೋಗಬಹುದು ಅಂತ ನೋಡಿ ಆನ್ ಲೈನ್ ಮೂಲಕ ನಿಗದಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಈ…
ಉತ್ತರಾಖಂಡದ ಮಾಜಿ ಅರಣ್ಯ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಹರಕ್ ಸಿಂಗ್ ರಾವತ್ ವಿರುದ್ಧ ಜಾರಿ ನಿರ್ದೇಶನಾಲಯ ಕ್ರಮ. ಡೆಹ್ರಾಡೂನ್ ನ ಡಿಫೆನ್ಸ್ ಕಾಲೋನಿಯಲ್ಲಿರುವ ರಾವತ್ ನಿವಾಸದ ಮೇಲೆ ಇಡಿ ದಾಳಿ ನಡೆಸಿದೆ. ಉತ್ತರಾಖಂಡ, ದೆಹಲಿ ಮತ್ತು ಚಂಡೀಗಢದ ಸುಮಾರು 15 ಸ್ಥಳಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ. ಕಾರ್ಬೆಟ್ ಟೈಗರ್ ರಿಸರ್ವ್ ಅರಣ್ಯ ಭೂಮಿ ಭ್ರಷ್ಟಾಚಾರ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಕ್ರಮ ಕೈಗೊಳ್ಳುತ್ತಿದೆ ಎಂದು ರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ. ಕಳೆದ ವರ್ಷ ಆಗಸ್ಟ್ ನಲ್ಲಿ ರಾವತ್ ವಿರುದ್ಧ ವಿಜಿಲೆನ್ಸ್ ಇಲಾಖೆ ಕ್ರಮ ಕೈಗೊಂಡಿತ್ತು ಎಂಬುದು ಕೂಡ ಗಮನಾರ್ಹ. ಈ ಹಿಂದೆ ಹರಕ್ ಸಿಂಗ್ ರಾವತ್ ಅವರನ್ನು ಬಿಜೆಪಿ ಪಕ್ಷದಿಂದ ಅಶಿಸ್ತಿನ ಕಾರಣದಿಂದ ಸಂಪುಟ ಸಚಿವರಾಗಿ ಉಚ್ಚಾಟಿಸಲಾಗಿತ್ತು. 2022ರ ವಿಧಾನಸಭಾ ಚುನಾವಣೆಗೂ ಮುನ್ನ ರಾವತ್ ಕಾಂಗ್ರೆಸ್ ಸೇರಿದ್ದರು. ಹರಕ್ ಸಿಂಗ್ ಅವರ ಸೊಸೆ ಅನುಕೃತಿ ಗುಸೇನ್ ಕೂಡ ಕಾಂಗ್ರೆಸ್ ಸೇರಿದರು.
ಕೆಲವೊಮ್ಮೆ ಯಾವುದೇ ಕೆಲಸ ಮಾಡೋ ಮುಂಚೆ ನೂರು ಬಾರಿ ಯೋಚನೆ ಮಾಡಬೇಕಾಗುತ್ತೆ. ಬೇರೆ ಬೇರೆ ಕೋನಗಳಲ್ಲಿ ಯೋಚಿಸಿ ನಿರ್ಧಾರಕ್ಕೆ ಬರಬೇಕಾಗುತ್ತೆ. ಹೌದು, ಬಾಲಿವುಡ್ ನಟ ಹೃತಿಕ್ ರೋಷನ್ ಅಭಿನಯದ ‘ಫೈಟರ್’ ಸಿನಿಮಾ ಕಳೆದ ಜನವರಿ 25, 2024ರಂದು ರಿಲೀಸ್ ಆಗಿರೋದ್ರ ಬಗ್ಗೆ ನಿಮ್ಗೆ ಗೊತ್ತಿದೆ. ಇದೀಗ ನಟ ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ವಿರುದ್ಧ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಜೊತೆಗೆ ಅನಿಲ್ ಕಪೂರ್, ಅಕ್ಷಯ್ ಒಬೆರಾಯ್, ಸಂಜೀದಾ ಶೇಖ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಫೈಟರ್’ ಸಿನಿಮಾದಲ್ಲಿ ನಟ ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ವಾಯುಪಡೆ ಅಧಿಕಾರಿಗಳಾಗಿ ಕಾಣಿಸಿಕೊಂಡಿದ್ದರು. ಸಿನಿಮಾದಲ್ಲಿ ಇಬ್ಬರೂ ವಾಯುಪಡೆ ಅಧಿಕಾರಿಗಳಾಗಿರುತ್ತಾರೆ. ಇಬ್ಬರ ರೊಮ್ಯಾಂಟಿಕ್ ದೃಶ್ಯಗಳೂ ಇವೆ. ಆದರೆ ವಾಯುಪಡೆ ದಿರಿಸಿನಲ್ಲಿ ಚುಂಬನ, ರೊಮ್ಯಾಂಟಿಕ್ ದೃಶ್ಯಗಳನ್ನು ಮಾಡಿದ್ದಕ್ಕೆ ದೀಪಿಕಾ ಮತ್ತು ಹೃತಿಕ್ ಇಬ್ಬರಿಗೂ ವಾಯುಪಡೆ ಲೀಗಲ್ ನೋಟಿಸ್ ನೀಡಿದೆ. ವಾಯುಪಡೆಗೆ ಅದರದ್ದೇ ಆದ ಗೌರವವಿದೆ.…
ಆರ್ಥಿಕ ನೆರವು ಸೇರಿದಂತೆ ವಿಚಾರದಲ್ಲಿ ಕೇಂದ್ರದ ನಿರ್ಲಕ್ಷ್ಯ ಖಂಡಿಸಿ ಇಂದು ದೆಹಲಿಯಲ್ಲಿ ಕರ್ನಾಟಕ ಸರ್ಕಾರದ ಪ್ರತಿಭಟನೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಜಂತರ್ ಮಂತರ್ ನಲ್ಲಿ ‘ಚಲೋ ದೆಹಲಿ’ ಪ್ರತಿಭಟನೆಯ ನೇತೃತ್ವ ವಹಿಸಲಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ ಎಂಬುದು ಕರ್ನಾಟಕ ಸರ್ಕಾರದ ದೂರು. ಬುಧವಾರ ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕಾಂಗ್ರೆಸ್ ಸಚಿವರು, ಶಾಸಕರು, ಎಂಎಲ್ಸಿಗಳು ನಿನ್ನೆ ಬೆಂಗಳೂರಿನಿಂದ ರಾಷ್ಟ್ರ ರಾಜಧಾನಿಗೆ ಆಗಮಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರದ ವಿರುದ್ಧ ರಾಜ್ಯ ಸರ್ಕಾರದ ಸಂಪೂರ್ಣ ತಂಡ ಪ್ರತಿಭಟನೆ ನಡೆಸುತ್ತಿರುವುದು ಇದೇ ಮೊದಲು. ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಕರ್ನಾಟಕದ ರಾಜ್ಯಸಭಾ ಮತ್ತು ಲೋಕಸಭೆಯ ಸದಸ್ಯರು ಮತ್ತು ಕೇಂದ್ರ ಸಚಿವರಿಗೆ ಪತ್ರಗಳನ್ನು ನೀಡಲಾಯಿತು. 2017-18ನೇ ಸಾಲಿನಿಂದ ಕರ್ನಾಟಕಕ್ಕೆ ಅನುದಾನ, ವಿಶೇಷ ಅನುದಾನ ಮತ್ತು ಕೇಂದ್ರದಿಂದ ಆರಂಭಿಸಲಾದ ಯೋಜನೆಗಳಲ್ಲಿ ನೀಡಬೇಕಾದ ಪಾಲು…
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸದಾ ಒಂದಿಲ್ಲೊಂದು ಎಡವಟ್ಟುಗಳನ್ನು ಮಾಡುತ್ತಲೇ ಸುದ್ದಿಯಾಗುತ್ತಿದ್ದಾರೆ. ಈ ಹಿಂದೆ ಬಟಾಟೆಯಿಂದ ಚಿನ್ನ ತೆಗೆಯಬಹುದು ಎಂಬ ಹೇಳಿಕೆ ಭಾರಿ ವೈರಲ್ ಆಗಿತ್ತು. ಇದೀಗ ಅಂತಹದ್ದೇ ಒಂದು ವಿವಾದಾತ್ಮಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗಿದೆ. ಭಾರತ್ ಜೋಡೋ ನ್ಯಾಯ ಯಾತ್ರೆ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ರಾಹುಲ್ ಗಾಂಧಿಯವರು ರೋಡ್ ಶೋ ನಡುವೆ ನಾಯಿಗೆ ಬಿಸ್ಕೆಟ್ ತಿನ್ನಿಸುತ್ತಿರುವುದನ್ನು ನೀವು ವಿಡಿಯೋದಲ್ಲಿ ಗಮನಿಸಬಹುದು. ಆ ಸಮಯದಲ್ಲಿ, ನಾಯಿ ಬಿಸ್ಕತ್ತನ್ನು ತಿನ್ನಲು ನಿರಾಕರಿಸಿದಾಗ, ಅವರು ಅದೇ ಬಿಸ್ಕತ್ತನ್ನು ತನ್ನ ಕಾರ್ಯಕರ್ತನಿಗೆ ನೀಡಿರುವ ವಿಡಿಯೋ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ರಾಹುಲ್ ಗಾಂಧಿ ಅವರ ರೋಡ್ ಶೋ ವೇಳೆ ಅವರ ಜತೆಗಿದ್ದ ನಾಯಿಗೆ ಬಿಸ್ಕತ್ತು ನೀಡಿದ್ದರು. ಆದರೆ ಆ ನಾಯಿ ತಿನ್ನಲು ನಿರಾಕರಿಸಿದೆ. ಅದೇ ಸಮಯದಲ್ಲಿ ಕಾರ್ಯಕರ್ತರೊಬ್ಬರು ರಾಹುಲ್ ಗಾಂಧಿಯನ್ನು ಮಾತನಾಡಿಸಿದರು. ಆಗ ರಾಹುಲ್ ನಾಯಿಗೆ ಹಾಕಿದ್ದ ಬಿಸ್ಕತ್ತಲ್ಲೇ ಒಂದು ಬಿಸ್ಕತ್ತನ್ನು ತೆಗೆದು ಕಾರ್ಯಕರ್ತನಿಗೂ ನೀಡಿದ್ದರು. ಅದಾದ ಬಳಿಕ…