Subscribe to Updates
Get the latest creative news from FooBar about art, design and business.
- ದೇವಾಲಯದಲ್ಲಿ ಅಕ್ಷರಾಭ್ಯಾಸ ಮಕ್ಕಳ ಜೀವನದ ಶ್ರೇಷ್ಠ ಆರಂಭ: ಡಾ.ಹನುಮಂತನಾಥ ಸ್ವಾಮೀಜಿ
- ಸರಗೂರು: ಬೇಲದಕುಪ್ಪೆ ಮಹದೇಶ್ವರ ದೇವಸ್ಥಾನದಲ್ಲಿ ಆಷಾಢ ಅಮಾವಾಸ್ಯೆ ಪೂಜೆ; ಬಸ್ ವ್ಯವಸ್ಥೆಯಿಲ್ಲದೆ ಭಕ್ತರ ಪರದಾಟ
- ಹೊಳವನಹಳ್ಳಿ ಬೆಸ್ಕಾಂ ಶಾಖೆಯ ಸಹಾಯಕ ಇಂಜಿನಿಯರ್ ಯೋಗೇಶ್ ಅವರಿಗೆ ಬೀಳ್ಕೊಡುಗೆ
- ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ದೇವಾಲಯದ ರಾಜಗೋಪುರಕ್ಕೆ 5 ಲಕ್ಷ ದೇಣಿಗೆ
- ಕಾಡುಬೆಗೂರಿನಲ್ಲಿ ದಲಿತ ಮಹಿಳೆ ಮೇಲೆ ದೌರ್ಜನ್ಯ: ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸ್ಥಳೀಯರ ಆಗ್ರಹ
- ಸರಗೂರು: ಚಿಕ್ಕದೇವಮ್ಮ ಬೆಟ್ಟದಲ್ಲಿ ಆಷಾಢ ಅಮಾವಾಸ್ಯೆ ವಿಶೇಷ ಪೂಜೆ; ಸಹಸ್ರಾರು ಭಕ್ತರ ಭಾಗಿ
- ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲು ಯುಜಿಸಿ ಗಮನಹರಿಸಬೇಕಿದೆ: ಡಾ.ಜಿ.ಪರಮೇಶ್ವರ್
- ತುಮಕೂರು: ಜುಲೈ 15ರಿಂದ ಉಚಿತ ಯೋಗ ತರಬೇತಿ, ತರಗತಿಗಳು ಆರಂಭ
Author: admin
ವ್ಯಕ್ತಿಯೊಬ್ಬನ ಹೊಟ್ಟೆಯಿಂದ ಸುಮಾರು 39 ನಾಣ್ಯಗಳು ಮತ್ತು 37 ಅಯಸ್ಕಾಂತಗಳನ್ನು ವೈದ್ಯರು ಹೊರತೆಗೆದ ವಿಚಾರ ಇದೀಗ ಭಾರಿ ವೈರಲ್ ಆಗುತ್ತಿದೆ. ದಿಲ್ಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯ ವೈದ್ಯರ ತಂಡವು ವ್ಯಕ್ತಿಯೊಬ್ಬನ ಕರುಳಿಗೆ ಸರ್ಜರಿ ನಡೆಸಿ, ಬರೋಬ್ಬರಿ 39 ನಾಣ್ಯಗಳು ಹಾಗೂ 37 ಆಯಸ್ಕಾಂತಗಳನ್ನು ಹೊರಗೆ ತೆಗೆದಿದ್ದಾರೆ. ಮನೋವೈದ್ಯಕೀಯ ಸಮಸ್ಯೆ ಹೊಂದಿರುವ ವ್ಯಕ್ತಿ, ಬಾಡಿ ಬಿಲ್ಡಿಂಗ್‌ಗೆ ಜಿಂಕ್ ಸಹಾಯ ಮಾಡುತ್ತದೆ ಎಂಬ ಕಲ್ಪನೆಯಿಂದ ನಾಣ್ಯಗಳು ಮತ್ತು ಮ್ಯಾಗ್ನೆಟ್ ಗಳನ್ನು ನುಂಗಿದ್ದ ಎಂದು ವರದಿಯಾಗಿದೆ. ಕಳೆದ 20ಕ್ಕೂ ಹೆಚ್ಚು ದಿನಗಳಿಂದ ಸತತ ವಾಂತಿ ಹಾಗೂ ಹೊಟ್ಟೆ ನೋವಿನ ಸಮಸ್ಯೆ ಹೊಂದಿದ್ದ 26 ವರ್ಷದ ವ್ಯಕ್ತಿಯನ್ನು ಸರ್ ಗಂಗಾ ರಾಮ್ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್‌ಗೆ ದಾಖಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಆ ರೋಗಿ ಯಾವುದೇ ಆಹಾರ ಸೇವಿಸಲು ಸಾಧ್ಯವಾಗುತ್ತಿರಲಿಲ್ಲ. ರೋಗಿಯ ಸಂಬಂಧಿಕರು ಆತನ ಹೊಟ್ಟೆಯ ಎಕ್ಸ್ ರೇ ತೆಗೆಸಿದ್ದರು. ಆತನ ಹೊಟ್ಟೆಯ ಒಳಗೆ ನಾಣ್ಯಗಳು ಮತ್ತು ಆಯಸ್ಕಾಂತಗಳ ಆಕಾರದ ನೆರಳು ಕಾಣಿಸುತ್ತಿತ್ತು. ಅದರ ಮೂಲಕ…
ದೇವಸ್ಥಾನದ ಆದಾಯದ ವಿಚಾರವಾಗಿ ಆಢಳಿತಾರೂಢ ಕಾಂಗ್ರೆಸ್ ಮತ್ತು ವಿಪಕ್ಷ ಬಿಜೆಪಿ ನಡುವೆ ಕಿತ್ತಾಟ ಜೋರಾಗಿದ್ದು ವಿಜಯಪುರ ಜಿಲ್ಲೆಯಲ್ಲಿ ಬರಹವೊಂದು ವಿವಾದಕ್ಕೆ ಕಾರಣವಾಗಿದೆ. ಬಸವನಬಾಗೇವಾಡಿ ಪಟ್ಟಣದ ಐತಿಹಾಸಿಕ ಬಸವೇಶ್ವರ ದೇವಸ್ಥಾನದ ಹುಂಡಿ (ಕಾಣಿಕೆ ಪೆಟ್ಟಿಗೆ) ಮೇಲೆ ಅಧಿಕಾರಿಗಳು ಅಂಟಿಸಿರುವ ‘ಕಾಣಿಕೆ ಪೆಟ್ಟಿಗೆ ಸರಕಾರಕ್ಕೆ ಸೇರಿದ್ದು’ ಎಂಬ ಬರಹದ ಸ್ಟಿಕ್ಕರ್ ಚರ್ಚೆಗೆ ಕಾರಣವಾಗಿದೆ. ದೇವಸ್ಥಾನದ ಹುಂಡಿಗೆ ಭಕ್ತರು ಕಾಣಿಕೆ ಹಾಕುವುದನ್ನು ಕಡಿಮೆ ಮಾಡಿ ಎಂಬ ಪ್ರಚಾರ ರಾಜ್ಯದಲ್ಲಿ ಜೋರಾದ ಬೆನ್ನಲ್ಲೇ ಇಲ್ಲಿನ ಅಧಿಕಾರಿಗಳು ಈ ಸ್ಟಿಕ್ಕರ್ ಅಂಟಿಸಿ ಚರ್ಚೆಗೆ ಕಾರಣವಾಗಿದೆ. ಬಸವೇಶ್ವರ ದೇವಸ್ಥಾನಕ್ಕೆ ನಿತ್ಯವೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದರ್ಶನ ಪಡೆಯುತ್ತಾರೆ. ಕಾಣಿಕೆ ಪೆಟ್ಟಿಗೆಗೆ ಕೈಲಾದಷ್ಟು ಹಣ ಹಾಕಿ ನಮಸ್ಕರಿಸುತ್ತಾರೆ. ಈಚೆಗೆ ಕಾಣಿಕೆ ಪೆಟ್ಟಿಗೆ ಒಡೆದಿದ್ದ ದೇವಸ್ಥಾನದ ಅಧಿಕಾರಿಗಳು ಒಟ್ಟು 8.53 ಲಕ್ಷ ರೂ. ಹಣ (2023, ಸೆಪ್ಟೆಂಬರ್ ತಿಂಗಳಿಂದ ಇಲ್ಲಿವರೆಗೆ) ವನ್ನು ಎಣಿಕೆ ಮಾಡಿದ್ದಾರೆ. ದಿಢೀರ್ ಸ್ಟಿಕ್ಕರ್ ಅಂಟಿಸಿದ ಬೆಳವಣಿಗೆ ಭಕ್ತರಲ್ಲೂ ಚರ್ಚೆಗೆ ಕಾರಣವಾಗಿದೆ. ”ದೇವಸ್ಥಾನಕ್ಕೆ ಸಂಬಂಧಿಸಿದ ಯಾವುದೇ ಹಣ ದೇವಸ್ಥಾನದ…
ಇಟಲಿಯ ಚರ್ಚ್ ತನ್ನ ವಿಚಿತ್ರವಾದ ನಂಬಿಕೆಯಿಂದ ಭಾರೀ ಸುದ್ದಿಯಲ್ಲಿದೆ. ಈ ಚರ್ಚ್ನ ಒಳಗೆ ಪ್ರವೇಶಿಸುತ್ತಿದ್ದಂತೆ ಮೇಲ್ಛಾವಣಿಯಲ್ಲಿ 500 ವರ್ಷಗಳಿಂದ ನೇತಾಡುತ್ತಿರುವ ಮೊಸಳೆಯೊಂದರ ಮೃತದೇಹದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಈ ಚರ್ಚ್ 13 ನೇ ಶತಮಾನದಷ್ಟು ಹಿಂದಿನದ್ದು ಎಂದು ಹೇಳಲಾಗಿದೆ. ಹಾಗಾದರೆ ಆ ಮೊಸಳೆಯ ಮೃತದೇಹವನ್ನು ಅಲ್ಲಿ ಇಟ್ಟಿದ್ದೇಕೆ? ಅದಕ್ಕೆ ಕಾರಣವೇನು? ಇಟಲಿಯ ಲೊಂಬಾರ್ಡಿ ಪ್ರದೇಶದಲ್ಲಿರುವ ಈ ಚರ್ಚ್ನ ಹೆಸರು Santurio della Beata Virgin Maria delle Grazie ಎಂದು. ಈ ಚರ್ಚ್‌ನಲ್ಲಿ ನಿಜವಾದ ಮೊಸಳೆಯ ಮೃತದೇಹವನ್ನು ನೇತು ಹಾಕಲಾಗಿದೆ ಅಂದರೆ ನೀವು ಅಚ್ಚರಿಗೆ ಒಳಗಾಗ್ತೀರಿ. ಆದರೆ ಇದು ಧಾರ್ಮಿಕ ಸಂಕೇತವೆಂದು ನಂಬಲಾಗಿದೆ. ಸಾಮಾನ್ಯವಾಗಿ ನೋಡಿದಾಗ ಅದು ನಕಲಿ ಮೊಸಳೆಯಂತೆ ಅನಿಸಬಹುದು. ಆದರೆ ಇದು ನಿಜವಾದ ಮೊಸಳೆ. ಇದನ್ನು ಸುಮಾರು 500 ವರ್ಷಗಳ ಹಿಂದೆ ನೇತು ಹಾಕಲಾಗಿದೆ ಎಂದು ಹೇಳಲಾಗುತ್ತದೆ. ಅಲ್ಲಿನ ಸ್ಥಳೀಯರು ಹೇಳುವಂತೆ ಫ್ರಾನ್ಸಿಸ್ಕೊ ಗೊನ್ಜಾಗಾದಲ್ಲಿನ ಖಾಸಗಿ ಮೃಗಾಲಯದಿಂದ ತಪ್ಪಿಸಿಕೊಂಡ ಮೊಸಳೆಯನ್ನು ಇಲ್ಲಿ ಇಬ್ಬರು ಸಹೋದರರು ಸೆರೆಹಿಡಿದು ಕೊಂದಿದ್ದಾರೆ ಎಂದು…
ಬೆಂಗಳೂರು: ಶಾಲೆಯಲ್ಲಿ ಕೊಟ್ಟ ಪ್ರೊಟೀನ್ ಮಾತ್ರೆಯಿಂದ 4 ನೇ ತರಗತಿ ವಿದ್ಯಾರ್ಥಿನಿ ಸಾವನ್ನಪ್ಪಿರುವುದಾಗಿ ಪೋಷಕರು ಆರೋಪ ಮಾಡಿದ್ದಾರೆ. ಈ ಘಟನೆ ಬನಶಂಕರಿಯ ಕಾವೇರಿ ನಗರದಲ್ಲಿ ನಡೆದಿದೆ. ಜೋಯಾ (9) ಮೃತ ಬಾಲಕಿಯಾಗಿದ್ದಾಳೆ. ಕರಿಸಂದ್ರದ ನಮ್ಮೂರ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಮಕ್ಕಳಿಗೆ ಶಿಕ್ಷಕರು ಪೌಷ್ಠಿಕಾಂಶ ಮಾತ್ರೆ ನೀಡಿದ್ದು, ಇದನ್ನು ಸೇವಿಸಿದ ಜೋಯಾ ಅಲ್ಲೇ ಅಸ್ವಸ್ಥಳಾಗಿದ್ದಾಳೆ. ಕೂಡಲೇ ಶಾಲೆಯ ಶಿಕ್ಷಕರು ಸ್ಥಳೀಯ ಆಸ್ಪತ್ರೆಗೆ ಬಾಲಕಿಯನ್ನ ಸೇರಿಸಿದ್ದರು. ಆದರೆ ರಾತ್ರಿ ಬಾಲಕಿ ಮತ್ತೆ ಅಸ್ವಸ್ಥಳಾಗಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೋಗ ಗುರು ಬಾಬಾ ರಾಮ್ದೇವ್ ಅವರ ಪತಂಜಲಿ ಆಯುರ್ವೇದದ ದಾರಿತಪ್ಪಿಸುವ ಜಾಹೀರಾತಿಗೆ ಸಂಬಂಧಿಸಿದ ಪ್ರಕರಣವನ್ನು ಇಂದು ಸುಪ್ರೀಂ ಕೋರ್ಟ್ ನಲ್ಲಿ ಮತ್ತೆ ವಿಚಾರಣೆ ನಡೆಸಿತು. ನವೆಂಬರ್ ನಲ್ಲಿ ನೀಡಿದ್ದ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಅದರ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ. ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರ ವಿಭಾಗೀಯ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು. ಈ ವೇಳೆ, ನ್ಯಾಯಮೂರ್ತಿ ಅಮಾನುಲ್ಲಾ ಕೋಪಗೊಂಡು “ನ್ಯಾಯಾಲಯದ ಆದೇಶದ ಹೊರತಾಗಿಯೂ ದಾರಿತಪ್ಪಿಸುವ ಜಾಹೀರಾತನ್ನು ಪ್ರಕಟಿಸಲು ನಿಮಗೆ ಹೇಗೆ ಧೈರ್ಯವಾಯಿತು” ಎಂದು ಪತಂಜಲಿ ಆಯುರ್ವೇದವನ್ನು ಪ್ರತಿನಿಧಿಸುವ ವಕೀಲರನ್ನು ಪ್ರಶ್ನಿಸಿದ್ದಾರೆ. ಡ್ರಗ್ಸ್ ಮತ್ತು ಮ್ಯಾಜಿಕ್ ರೆಮಿಡೀಸ್(ಆಕ್ಷೇಪಾರ್ಹ ಜಾಹೀರಾತುಗಳು) ಕಾಯಿದೆಯಲ್ಲಿ ನಿರ್ದಿಷ್ಟಪಡಿಸಿದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಉದ್ದೇಶಿಸಿರುವ ಜಾಹೀರಾತು ಅಥವಾ ಔಷಧೀಯ ಉತ್ಪನ್ನಗಳ ಮಾರುಕಟ್ಟೆಯಿಂದ ಪತಂಜಲಿಯನ್ನು ನಿಷೇಧಿಸಲಾಗಿದೆ. ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ವಿಭಾಗಿಯ ಪೀಠವು “ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಇದು ಬಹಳ ದುರದೃಷ್ಟಕರ ಸಂಗತಿ.…
ಮಣಿಪುರದಲ್ಲಿ ಅಪಹರಣಕ್ಕೊಳಗಾಗಿದ್ದ ಪೊಲೀಸ್ ಅಧಿಕಾರಿಯನ್ನು ಸೇನೆ ರಕ್ಷಿಸಿದೆ. ಸುಮಾರು 200 ಶಸ್ತ್ರಸಜ್ಜಿತ ದಾಳಿಕೋರರು ಪೊಲೀಸ್ ಅಧಿಕಾರಿಯನ್ನು ಅಪಹರಿಸಿದ್ದಾರೆ. ಇಂಫಾಲ್ ಪಶ್ಚಿಮ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಘಿನೆನ್ ಅವರನ್ನು ಅಪಹರಿಸಲಾಗಿದೆ. ಪೊಲೀಸ್ ಅಧಿಕಾರಿಯ ಮನೆಯನ್ನು ಲೂಟಿ ಮಾಡಲಾಗಿದೆ ಮತ್ತು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಮಾಹಿತಿಯ ನಂತರ, ಸೇನೆಯು ನಡೆಸಿದ ಕಾರ್ಯಾಚರಣೆಯ ಮೂಲಕ ಅಧಿಕಾರಿಯನ್ನು ರಕ್ಷಿಸಲಾಯಿತು. ಘಟನೆಯ ನಂತರ, ಇಂಫಾಲ್ ನಲ್ಲಿ ಹೆಚ್ಚಿನ ಪಡೆಗಳನ್ನು ನಿಯೋಜಿಸಲಾಗಿದೆ. ಹಿಂಸಾಚಾರದ ಹಿಂದೆ ಮೈತಿ ಬಣದ ಕೈವಾಡವಿದೆ ಎಂದು ಆರೋಪಿಸಲಾಗಿದೆ. ಅಮಿತ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ತುಮಕೂರು: ”ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಾರೆಂಬ ಆರೋಪ ಪ್ರಕರಣದ ಹಿನ್ನೆಲೆಯಲ್ಲಿ ತುಮಕೂರು ನಗರದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು. ನಗರದ ಭದ್ರಮ್ಮ ಚೌಲ್ಟ್ರಿ ವೃತ್ತದಲ್ಲಿರುವಂತಹ ಕಾಂಗ್ರೆಸ್ ಕಚೇರಿ ಎದುರು ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಸಂಸದ ಜಿ ಎಸ್ ಬಸವರಾಜ್ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ಹಾಗೂ ದೇಶದ್ರೋಹಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಕಾಂಗ್ರೆಸ್ ಕಚೇರಿ ಎದುರು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯಬಾರದು ಎಂಬ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಕಾಂಗ್ರೆಸ್ ಕಚೇರಿ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ ವ್ಯವಸ್ಥೆ ಮಾಡಿದ್ದರು. ಇನ್ನು ಕೆಲ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಚೇರಿ ಒಳಗೆ ನುಗ್ಗಲು ಯತ್ನಿಸಿದ ಸಂದರ್ಭದಲ್ಲಿ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಭಾರಿ ಮಾತಿನ ಚಕಮಕಿ ನಡೆಯಿತು. ಸುಮಾರು 50ಕ್ಕೂ ಹೆಚ್ಚು ಮಂದಿ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ವಶಕ್ಕೆ ತೆಗೆದುಕೊಂಡರು ಅಲ್ಲದೆ ಪರಿಸ್ಥಿತಿಯನ್ನು ಹತೋಟಿಗೆ ತರಲಾಯಿತು. ಈ ಸಂದರ್ಭದಲ್ಲಿ ಡಿವೈಎಸ್ಪಿ ಚಂದ್ರಶೇಖರ್…
ಬೀದರ್: ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಸೇವಾನಗರ ತಾಂಡಾ ಬಳಿ ಟಾಟಾ ಎಸ್ ಹಾಗೂ ಟ್ರಕ್ ನಡುವೆ ಡಿಕ್ಕಿ ಸಂಭವಿಸಿದ್ದು ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು , ಐವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಮೃತರನ್ನ ದಸ್ತಗಿರಿ ದಾವಲ್ ಸಾಬ್ (36), ರಸೀದಾ ಶೇಕ್( 41), ಚಾಲಕ ವಲಿ( 31) , ಅಮಾಮ್ ಶೇಕ್( 51) ಎಂದು ಗುರುತಿಸಲಾಗಿದೆ. ಐವರು ಗಾಯಾಳುಗಳನ್ನು ಬೀದರ್ ನ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಂತ್ರಸ್ತರು ಮಹಾರಾಷ್ಟ್ರದ ಉಗ್ಗೀರ್ ಮೂಲದವರು ಎಂದು ತಿಳಿದುಬಂದಿದೆ. ಒಟ್ಟೂ 14 ಜನರು ಉಗ್ಗೀರ್ ನಿಂದ ಹೈದ್ರಾಬಾದ್ ಗೆ ತೆರಳುತ್ತಿದ್ದಾಗ ಟ್ರಕ್ ಹಾಗೂ ಟಾಟಾ ಎಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭಸಿದೆ. ದನ್ನೂರು ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ ಶಾಂತನ್ ನಿಧನರಾದರು. ಅವರಿಗೆ 55 ವರ್ಷ ವಯಸ್ಸಾಗಿತ್ತು. ಅವರು ಹೃದಯಾಘಾತದಿಂದ ಚೆನ್ನೈನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ನಿಧನರಾದರು. ಶಾಂತನ್ ಗೆ ಶ್ರೀಲಂಕಾಕ್ಕೆ ಹೋಗಲು ಕೇಂದ್ರವು ಇತ್ತೀಚೆಗೆ ನಿರ್ಗಮನ ಪರವಾನಗಿಯನ್ನು ನೀಡಿತ್ತು. ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಏಳು ಮಂದಿ ಆರೋಪಿಗಳ ಪೈಕಿ ಶಾಂತನ್ ಅಲಿಯಾಸ್ ಸುತೇಂದ್ರರಾಜ, ಶಿಕ್ಷೆ ಪೂರ್ಣಗೊಳ್ಳುವ ಮುನ್ನವೇ ಬಿಡುಗಡೆಗೊಂಡಿದ್ದರು. ಶಾಂತನ್ ತನ್ನ ವಯಸ್ಸಾದ ತಾಯಿಯನ್ನು ಭೇಟಿ ಮಾಡಲು ಶ್ರೀಲಂಕಾಕ್ಕೆ ಭೇಟಿ ನೀಡಲು ಮತ್ತು ಅಲ್ಲಿಯೇ ಉಳಿಯಲು ಶ್ರೀಲಂಕಾ ಅಧ್ಯಕ್ಷರ ಸಹಾಯವನ್ನು ಈ ಹಿಂದೆ ಕೋರಿದ್ದರು. ಮೇ 2022 ರಲ್ಲಿ, ಸುಪ್ರೀಂ ಕೋರ್ಟ್ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಏಳು ಆರೋಪಿಗಳನ್ನು ಅವರ ಶಿಕ್ಷೆಯ ಅವಧಿ ಮುಗಿಯುವ ಮೊದಲು ಬಿಡುಗಡೆ ಮಾಡಿತು. ಜೈಲಿನಿಂದ ಹೊರಬಂದ ಬಳಿಕ ಶಾಂತನ್ ತಿರುಚ್ಚಿಯ ವಿಶೇಷ ಶಿಬಿರದಲ್ಲಿ ತಂಗಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್…
ಭಾರತದ ಮಾನವ ಸಹಿತ ಬಾಹ್ಯಾಕಾಶ ಮಿಷನ್ ಗಗನಯಾನಕ್ಕೆ ಆಯ್ಕೆಯಾದ ನಾಲ್ಕು ಗಗನಯಾತ್ರಿಗಳಿಗೆ ವಿಂಗ್ ಗಳನ್ನು ಪ್ರಧಾನಿ ನರೇಂದ್ರ ಮೋದಿ ತಿರುವನಂತಪುರಂನಲ್ಲಿರುವ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಘೋಷಿಸಲಾಯಿತು. ಈ ಬಾಹ್ಯಾಕಾಶ ಮಿಷನ್ ಗೆ ಆಯ್ಕೆಯಾಗಿರುವ ಗಗನಯಾತ್ರಿಗಳ ಹೆಸರುಗಳು ಹೀಗಿದ್ದು, ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್, ಗ್ರೂಪ್ ಕ್ಯಾಪ್ಟನ್ ಅಜಿತ್ ಕೃಷ್ಣನ್, ಗ್ರೂಪ್ ಕ್ಯಾಪ್ಟನ್ ಅಂಗದ್ ಪ್ರತಾಪ್ ಮತ್ತು ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ ಎಂಬುದಾಗಿದೆ. ಈ ನಾಲ್ವರನ್ನೂ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296