Subscribe to Updates
Get the latest creative news from FooBar about art, design and business.
- ಒಕ್ಕರಹಳ್ಳಿ ವ್ಯಾಪ್ತಿಯಲ್ಲಿ ಚಿರತೆ ಹಾವಳಿ: ಮೂರು ನಾಯಿಗಳನ್ನು ಬಲಿ ಪಡೆದ ಚಿರತೆ
- ವಿದ್ಯಾರ್ಥಿ ನಿಲಯ ಪ್ರವೇಶಕ್ಕಾಗಿ ಆನ್ ಲೈನ್ ಅರ್ಜಿ ಆಹ್ವಾನ
- ತುಮಕೂರು: ಮೆಮು ರೈಲು ಸಮಯ ಬದಲಾವಣೆ ಸಾಧ್ಯತೆ
- ಕುಡಿಯುವ ನೀರಿಲ್ಲದೆ ಹಸು ಸಾವು: ಹನುಮನಾಯಕನ ಪಾಳ್ಯದಲ್ಲಿ ನೀರಿಗೆ ಹಾಹಾಕಾರ
- ಅಂತರಸನಹಳ್ಳಿಯಲ್ಲಿ ಜರ್ಮನಿಯ ಮ್ಯಾನ್–ಹುಮ್ಮೆಲ್ ಪರಿಸರಸ್ನೇಹಿ ಘಟಕ ಆರಂಭ
- ಗುಬ್ಬಿ: ಹೇರೂರಿನಲ್ಲಿ ಮೇ 25 ರಂದು ಬಸವ ಜಯಂತಿ ಕಾರ್ಯಕ್ರಮ
- ಕೆ.ಆರ್.ಪೇಟೆ: ರಂಗ ಕುಣಿತ ಸ್ಪರ್ಧೆಯಲ್ಲಿ ಶ್ರವಣೂರು ತಂಡಕ್ಕೆ ಪ್ರಥಮ ಬಹುಮಾನ
- ಕರ್ನಾಟಕ ರಾಜ್ಯ ರೈತ ಸಂಘ: ಕೊರಟಗೆರೆ ನಗರ ನೂತನ ಘಟಕ ಸ್ಥಾಪನೆ
Author: admin
ವಾಣಿಜ್ಯ ನಗರಿ ಮುಂಬೈಯಲ್ಲಿ, ಮುಂಬೈನ ಮಾಹೀಂ ರೈಲ್ವೆ ನಿಲ್ದಾಣದಲ್ಲಿನ ಹಳಿಗಳ ಮೇಲೆ ಜನರು ಅಡುಗೆ ತಯಾರಿಸುತ್ತಿರುವ ಹಾಗೂ ಕೆಲವರು ಹಳಿಯ ಮೇಲೆ ಕುಳಿತು ಓದುತ್ತಿರುವ, ಬಟ್ಟೆಗಳನ್ನು ಒಣಗಿಸಿದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಎಲ್ಲರನ್ನು ಆಶ್ಚರ್ಯಚಕಿತಗೊಳಿಸಿದೆ. ಸುರಕ್ಷತೆಯ ಪ್ರಶ್ನೆಯನ್ನು ಮೂಡಿಸಿದೆ. ಈ ದೃಶ್ಯವನ್ನು ನೋಡಿದಾಗ ಎಂಥವರು ಒಂದು ಕ್ಷಣ ಗಾಬರಿಯಾಗೋದಂತು ಗ್ಯಾರಂಟಿ.. ರೈಲ್ವೆ ಹಳಿಯ ಮೇಲೆಯೇ ಅಡುಗೆ ಬೇಯಿಸುತ್ತಿರುವ, ಬಟ್ಟೆ ಒಣಗಿಸಿರುವ ಹಾಗೂ ಜನರು, ಮಕ್ಕಳು ಗಿಜಿಗುಟ್ಟುತ್ತಿರುವ ದೃಶ್ಯ ವೀಡಿಯೋದಲ್ಲಿದೆ. ಈ ವೀಡಿಯೋವನ್ನು ಗಮನಿಸಿ ತಕ್ಷಣವೇ ರೈಲ್ವೆ ಇಲಾಖೆ ಸ್ಥಳಕ್ಕೆ ಭೇಟಿ ನೀಡಬೇಕೆಂದು ಜನರು ಆಗ್ರಹಿಸಿದ್ದಾರೆ. ಕ್ರಮ ತೆಗೆದುಕೊಳ್ಳಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಒತ್ತಾಯಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರೈಲ್ವೆ ಅಧಿಕಾರಿಯೊಬ್ಬರು, ಮಾಹೀಂ ರೈಲ್ವೆ ಹಳಿಗಳನ್ನು ಮುಖ್ಯವಾಗಿ ರಾತ್ರಿ ವೇಳೆ ಕಾರ್ಯಾಚರಿಸಲು ಬಳಕೆಯಾಗುತ್ತಿದೆ. ಆದರೂ ಕೊಳೆಗೇರಿ ನಿವಾಸಿಗಳು ಈ ಹಳಿಗಳನ್ನು ತಮ್ಮ ಅಗತ್ಯತೆಗೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾರೆ. ರೈಲ್ವೆ ಇಲಾಖೆ ನಿರಂತರವಾಗಿ ಪರಿಶೀಲಿಸುತ್ತಿದ್ದು, ಈ ಬಗ್ಗೆ ಗಮನ ಹರಿಸುತ್ತೆ ಎಂದು ತಿಳಿಸಿದ್ದಾರೆ.
ನೀವು ಪ್ರತಿದಿನ ಪುದೀನಾ ತಿಂದರೆ ಈ ಅದ್ಭುತ ಪ್ರಯೋಜನಗಳು ನಿಮ್ಮದಾಗುತ್ತದೆ..!: ಪುದೀನಾ ಖಾದ್ಯಗಳ ರುಚಿಯನ್ನು ಹೆಚ್ಚಿಸುವುದಷ್ಟೇ ಅಲ್ಲ. ನಮ್ಮ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಪುದೀನಾದಲ್ಲಿರುವ ಉತ್ಕರ್ಷಣ ನಿರೋಧಕ ಗುಣಗಳು ಚರ್ಮವನ್ನು ರಕ್ಷಿಸುತ್ತದೆ. ಪುದೀನಾ ಚರ್ಮವನ್ನು ತಾಜಾಗೊಳಿಸುತ್ತದೆ ಮತ್ತು ಪುನಃ ಸಕ್ರಿಯಗೊಳಿಸುತ್ತದೆ. ಪುದೀನಾದಲ್ಲಿ ವಿಟಮಿನ್ ಎ ಸಮೃದ್ಧವಾಗಿದ್ದು ಇದು ಕಣ್ಣಿನ ಆರೋಗ್ಯವನ್ನು ಸುಧಾರಿಸಿ, ದೃಷ್ಟಿಯನ್ನು ಸುಧಾರಿಸುತ್ತದೆ. ಬೆಳಿಗ್ಗೆ ಈ ಪಾನೀಯವನ್ನು ಬಳಸುವುದರಿಂದ ಬಾಯಿಯ ದುರ್ವಾಸನೆ ಕಡಿಮೆಯಾಗುತ್ತದೆ..!: ಹಲ್ಲುಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿರುವುದು, ವಸಡುಗಳಲ್ಲಿ ಕೀವು ಮತ್ತು ಹಲ್ಲುಗಳ ನಡುವಿನ ಕೊಳೆಯಿಂದ ಬಾಯಿಯ ದುರ್ವಾಸನೆ ಉಂಟಾಗುತ್ತದೆ. ಇದನ್ನು ತಪ್ಪಿಸಲು ನೀರಿನಲ್ಲಿ ಲವಂಗವನ್ನು ಕುದಿಸಿ ಆರಿಸಿ ಕುಡಿಯಬಹುದು. 1 ಗ್ಲಾಸ್ ಬೆಚ್ಚಗಿನ ನೀರಿನಲ್ಲಿ 1 ಚಮಚ ನಿಂಬೆ ರಸವನ್ನು ಬೆರೆಸಿ ಬಾಯಿ ಮುಕ್ಕಳಿಸಿದರೆ ಬಾಯಿಯ ದುರ್ವಾಸನೆ ತಡೆಯುತ್ತದೆ. ನೀರಿನಲ್ಲಿ ತುಳಸಿಯನ್ನು ಕುದಿಸಿ ಬಾಯಿ ಮುಕ್ಕಳಿಸಿದರೆ ತುಳಸಿಯಲ್ಲಿರುವ ಬ್ಯಾಕ್ಟಿರಿಯಾ ವಿರೋಧಿ ಗುಣಗಳು ಬಾಯಿಯಿಂದ ಬ್ಯಾಕ್ಟಿರಿಯಾವನ್ನು ತೆಗೆದುಹಾಕುತ್ತದೆ. ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚಾಗಬೇಕಂದ್ರೆ ಇವುಗಳನ್ನು ಸೇವಿಸಿ: ನಮ್ಮ ದೇಹ ಸರಿಯಾಗಿ…
ಸುಮಾರು 60 ವರ್ಷಗಳ ಕಾಲ ಈ ದೇಶವನ್ನಾಳಿದ ಕಾಂಗ್ರೆಸ್ ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಎನ್ನುವಂತೆ ನಡೆದುಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆರೋಪಿಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕರ್ನಾಟಕಕ್ಕೆ ಮಲತಾಯಿ ಧೋರಣೆ ಅನುಸರಿಸಿ ರಾಜ್ಯಕ್ಕೆ ಬಹುದೊಡ್ಡ ಅನ್ಯಾಯಗಳನ್ನು ಎಸಗಿರುವುದಕ್ಕೆ ಇತಿಹಾಸದ ಪುಟಗಳಲ್ಲಿ ದಾಖಲೆ ಇದೆ ಎಂದರು. ಇದನ್ನೆಲ್ಲ ನಾವು ಬಿಚ್ಚಿಟ್ಟು ಕಾಂಗ್ರೆಸ್ ನ ಅಸಲೀ ಮುಖವಾಡ ಕನ್ನಡಿಗರ ಮುಂದೆ ಕಳಚಿಡಲಿದ್ದೇವೆ ಎಂದರು. ಸುಳ್ಳು ಮಾಹಿತಿ ನೀಡಿ ಜನರ ದಿಕ್ಕು ತಪ್ಪಿಸುವುದೂ ಕೂಡ ವಂಚನೆಯ ಇನ್ನೊಂದು ಮುಖ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಿಡಿಕಾರಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕರ್ನಾಟಕದ ಬಿಜೆಪಿ ಇದನ್ನು ಗಂಭೀರವಾಗಿ ಪರಿಗಣಿಸಲಿದೆ, ಕಾಂಗ್ರೆಸ್ ಸರ್ಕಾರದ ಭಂಡವಾಳ ಸಾಕ್ಷಿ ಸಮೇತ ಬಯಲಿಗೆಳೆಯಲಿದೆ ಎಂದು ಬಿವೈ ವಿಜಯೇಂದ್ರ ಎಚ್ಚರಿಕೆ ನೀಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ತೆರಿಗೆ ಬಾಕಿಯ ನೆಪ ಹುಡುಕಿಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆರೋಪಿಸಿದರು. ಬೆಂಗಳೂರಿನಲ್ಲಿ…
ಇರಾಕ್ ನ ರಾಜಧಾನಿ ಬಾಗ್ದಾದ್ ನಲ್ಲಿ ಯುಎಸ್ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಕಮಾಂಡರ್ ಅಬು ಬಕಿರ್ ಅಲ್-ಸಾದಿ ಮತ್ತು ಇಬ್ಬರು ಗಾರ್ಡ್‌ಗಳು ಕೊಲ್ಲಲ್ಪಟ್ಟರು. ಅವರು ಪ್ರಯಾಣಿಸುತ್ತಿದ್ದ ವಾಹನವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಈ ಪ್ರದೇಶದಲ್ಲಿ ತನ್ನ ಪಡೆಗಳ ವಿರುದ್ಧ ದಾಳಿ ನಡೆಸಿದ ಹೆಜ್ಬೊಲ್ಲಾ ಕಮಾಂಡರ್ ಕೊಲ್ಲಲ್ಪಟ್ಟರು ಎಂದು ಯುಎಸ್ ಹೇಳಿದೆ. ಬುಧವಾರ ರಾತ್ರಿ ಬಾಗ್ದಾದ್ ನ ಜನನಿಬಿಡ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಕಾರೊಂದು ಡ್ರೋನ್ ನಿಂದ ಡಿಕ್ಕಿ ಹೊಡೆದಿದೆ. ದಾಳಿಯ ನಂತರ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಅಮೆರಿಕ ದೆವ್ವ ಎಂದು ಜನರು ಪ್ರತಿಭಟಿಸಿದರು. ಅಲ್ಲದೆ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಜನವರಿ 28 ರಂದು ಯುಎಸ್ ಪಡೆಗಳ ಮೇಲಿನ ದಾಳಿಗೆ ಪ್ರತಿಕ್ರಿಯೆಯಾಗಿ ಸಿರಿಯಾ ಮತ್ತು ಇರಾಕ್‌ನಲ್ಲಿ ಯುಎಸ್ ಇದುವರೆಗೆ 85 ಸ್ಟ್ರೈಕ್ ಗಳನ್ನು ನಡೆಸಿದೆ. ಅದೇ ಸಮಯದಲ್ಲಿ, ದಾಳಿಯ ನಂತರ ಹಿಜ್ಬುಲ್ಲಾ ಪ್ರತಿದಾಳಿ ನಡೆಸಲಿದೆ ಎಂದು ವರದಿಯಾಗಿದೆ.
ಕರ್ನಾಟಕವು ಹುಕ್ಕಾ ಉತ್ಪನ್ನಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದೆ ಹುಕ್ಕಾ ಉತ್ಪನ್ನಗಳು ಮತ್ತು ಶಿಶಾಗಳ ಮಾರಾಟ, ಖರೀದಿ, ಪ್ರಚಾರ, ಮಾರುಕಟ್ಟೆ ಮತ್ತು ಸೇವನೆಯನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ನಿರ್ಧಾರವು ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಯನ್ನು ಆಧರಿಸಿದೆ. ನಿಷೇಧಾಜ್ಞೆ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಪರಾಧಿಗಳನ್ನು COTPA (ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಕಾಯಿದೆ) 2003, ಮಕ್ಕಳ ಆರೈಕೆ ಮತ್ತು ಸಂರಕ್ಷಣಾ ಕಾಯಿದೆ 2015, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ 2006, ಕರ್ನಾಟಕ ವಿಷ (ಸ್ವಾಧೀನ ಮತ್ತು ಮಾರಾಟ) ನಿಯಮಗಳು 2015, ಅಗ್ನಿ ನಿಯಂತ್ರಣ ಮತ್ತು ಅಗ್ನಿ ಸಂರಕ್ಷಣಾ ಕಾಯ್ದೆಯ ಇತರ ವಿಭಾಗಗಳ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದಿದೆ ಭಾರತೀಯ ದಂಡ ಸಂಹಿತೆ. ಕಳೆದ ವರ್ಷ ಬೆಂಗಳೂರಿನ ಹುಕ್ಕಾ ಬಾರ್ ನಲ್ಲಿ ಸಂಭವಿಸಿದ ಬೆಂಕಿಯನ್ನು ಗಮನದಲ್ಲಿಟ್ಟುಕೊಂಡು, ನಿಷೇಧವನ್ನು ಉಲ್ಲಂಘಿಸುವವರ ವಿರುದ್ಧ ಅಗ್ನಿ ಸುರಕ್ಷತಾ ನಿಯಮಗಳನ್ನು ವಿಧಿಸಲು ಸರ್ಕಾರ ನಿರ್ಧರಿಸಿದೆ. 45 ನಿಮಿಷಗಳ ಕಾಲ ಹುಕ್ಕಾ ಸೇದುವುದು 100…
ಪ್ರಕಾಶ್ ರಾಜ್. ಈ ಒಂದು ಹೆಸರು ಬಹಳಷ್ಟು ವಿವಾದಗಳಿಗೆ ಕಾರಣವಾಗಿದ್ದು ಇದೀಗ ಮತ್ತೊಮ್ಮೆ ಟ್ರೋಲ್ ಆಗುವ ಮೂಲಕ ಮುನ್ನೆಲೆಗೆ ಬಂದಿದೆ. ಉಡುಪಿಯ ಕಾಪು ಮಾರಿಗುಡಿ ದೇವಾಲಯಕ್ಕೆ ಬಹುಭಾಷಾ ನಟ ಪ್ರಕಾಶ್ ರಾಜ್ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಶ್ರೀದೇವಿಯಲ್ಲಿ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿ ಗೌರವಿಸಿದರು. ನಂತರ ಭರದಿಂದ ಸಾಗುತ್ತಿರುವ ಕಾಮಗಾರಿ ವೀಕ್ಷಿಸಿದ ನಟ ಪ್ರಕಾಶ್ ರೈ ಅವರು ಇಳಕಲ್ಲಿನ ಕಲಾತ್ಮಕ ಶೈಲಿಯ ಕೆತ್ತನೆಗಳ ಬಗ್ಗೆ ಮಾಹಿತಿ ಪಡೆದರು. ಈ ಬೆನ್ನಲ್ಲೇ ಪ್ರಕಾಶ್ ರಾಜ್ ಟೀಕೆಗೆ ಗುರಿಯಾಗುತ್ತಿದ್ದಾರೆ. ʻʻಹಿಂದೂ ದೇವತೆಗಳಿಗೆ ಮರ್ಯಾದೆ ಕೊಡದವನು ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದೇಕೆ? ಆಡಳಿತ ಮಂಡಳಿ ದೇವಾಲಯದ ಒಳಗೆ ಬಿಟ್ಟಿದ್ದು ತಪ್ಪು. ಮೊದಲು ಗೋ ಮೂತ್ರ ಹಾಕಿ ಸಿಂಪಡಿಸಿʼʼ ಎಂದು ಕಮೆಂಟ್ ಮೂಲಕ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಫೋಟೊಗಳು ವೈರಲ್ ಆಗುತ್ತಿದ್ದಂತೆ ʻʻಹಿಂದೂ ದೇವತೆಗಳಿಗೆ ಮರ್ಯಾದೆ ಕೊಡದವನು ದೇವಸ್ಥಾನಕ್ಕೆ…
ʼʼಭಾರತ ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಪ್ರಧಾನಿ ನರೇಂದ್ರ ಮೋದಿ ಅವರ ಮಾತಿನಲ್ಲಿ ಹೇಳುವುದಾದರೆ ಭಾರತ ಪ್ರಜಾಪ್ರಭುತ್ವದ ತಾಯಿ. ಯಾಕೆಂದರೆ ನಮ್ಮ ಈ ವಿಶಿಷ್ಟ ಪ್ರಜಾಪ್ರಭುತ್ವ ವ್ಯವಸ್ಥೆ ಇತರ ರಾಷ್ಟ್ರಗಳಿಗೆ ಮಾದರಿʼʼ ಎಂದು ಗಡ್ಕರಿ ಹೇಳಿದ್ದಾರೆ. ʼʼರಾಜಕಾರಣಿಗಳು ಬಂದು ಹೋದರೂ ಅಂತಿಮವಾಗಿ ಅವರು ಕ್ಷೇತ್ರಗಳಲ್ಲಿ ಜನರಿಗೆ ಏನು ಮಾಡಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಇದರಿಂದಲೇ ಅವರಿಗೆ ತಮ್ಮ ಕ್ಷೇತ್ರದಲ್ಲಿ ಗೌರವ ಸಿಗುತ್ತದೆ. ಪ್ರಚಾರ ಮತ್ತು ಜನಪ್ರಿಯತೆ ಬೇಕು. ಅವರು ಸಂಸತ್ತಿನಲ್ಲಿ ಏನು ಮಾತನಾಡುತ್ತಾರೆ ಎನ್ನುವುದಕ್ಕಿಂತ ಆಯಾ ಕ್ಷೇತ್ರದ ಜನರಿಗಾಗಿ ಅವರು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದು ಮುಖ್ಯವಾಗುತ್ತದೆʼʼ ಎಂದು ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ. ಉತ್ತಮ ಪ್ರದರ್ಶನ ತೋರುವ ಸಂಸದರಿಗೆ ಕೊಡ ಮಾಡುವ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಗಡ್ಕರಿ ಮಾತನಾಡಿದ ಅವರುʼʼ ನಾನು ಯಾವತ್ತೂ ತಮಾಷೆಗೆ ಹೇಳುತ್ತಿರುತ್ತೇನೆ. ಯಾವುದೇ ಸರ್ಕಾರ ಅಧಿಕಾರದಲ್ಲಿರಲಿ ಅಲ್ಲಿ ಒಳ್ಳೆಯ ಕೆಲಸ ಮಾಡುವವರಿಗೆ ಎಂದಿಗೂ ಅರ್ಹವಾದ ಗೌರವ ಸಿಗುವುದಿಲ್ಲ ಮತ್ತು ಕೆಟ್ಟ ಕೆಲಸ ಮಾಡುವವರಿಗೆ ಎಂದಿಗೂ ಶಿಕ್ಷೆಯಾಗುವುದಿಲ್ಲ, ಚರ್ಚೆ, ವಾದ-ವಿವಾದಗಳಲ್ಲಿ ಮೂಡಿಬರುವ…
ಬ್ಯಾಂಕ್ ನೌಕರನ ಹೆಸರಿನಲ್ಲಿ ಬಂದ ಕರೆಗೆ ಸ್ಪಂದಿಸಿ ಮೊಬೈಲ್ ಗೆ ಬಂದ ಒಟಿಪಿಯನ್ನು ಕೊಟ್ಟ ಪುತ್ತೂರಿನ ವ್ಯಕ್ತಿಯೊಬ್ಬರು ಬರೋಬ್ಬರಿ 1,73,000 ರೂ. ಅನ್ನು ಕಳೆದುಕೊಂಡಿದ್ದಾರೆ. ಸಂತ್ರಸ್ಥರು ಇದೀಗ ಹಣವನ್ನೆಲ್ಲ ಕಳೆದುಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 24-2024 ಕಲಂ: IPC 1860 ಕಲಂ-417,419,420 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರೂ ಕೂಡ ಇರುತ್ತಾರೆ. ಕೆಲವು ಸಲ ಬೇಲಿಯೇ ಎದ್ದು ಹೊಲ ಮೇದ ಸ್ಥಿತಿ ಕೂಡ ನಿರ್ಮಾಣವಾಗುತ್ತದೆ. ಚಂದ್ರಶೇಖರ ಭಟ್ (62 ವರ್ಷ) ಬ್ಯಾಂಕ್ ಸಿಬ್ಬಂದಿ ಹೆಸರಿನಲ್ಲಿ ಕೆವೈಸಿ ಅಪ್ಡೆಟ್ ಮಾಡುವ ಕುರಿತು ಸಂದೇಶ ಬಂದಿದೆ. ಸದ್ರಿ ಸಂದೇಶದಲ್ಲಿ ಬಂದಿರುವ ಒಟಿಪಿಯನ್ನು ಚಂದ್ರಶೇಖರ ಭಟ್ ಅಪರಿಚಿತನಿಗೆ ಫೋನ್ ಕರೆಯಲ್ಲಿ ನೀಡಿದ್ದಾರೆ. ಇದಾದ ತಕ್ಷಣ ಇವರ ಅಕೌಂಟ್ ನಿಂದ ಹಣ ಹೋಗುವುದಕ್ಕೆ ಶುರುವಾಗಿದೆ. ಹಂತ ಹಂತವಾಗಿ ಖಾತೆಯಿಂದ ಹಣ ಕಳೆದುಕೊಂಡ ಅವರು ಅಂತಿಮವಾಗಿ 1,73,000 ರೂ. ಅನ್ನು ಕಳೆದುಕೊಂಡಿದ್ದಾರೆ.
ದೇಶಾದ್ಯಂತ ಮಂಗನ ಕಾಯಿಲೆ ಅತ್ಯಂತ ವೇಗವಾಗಿ ಹಬ್ಬುತ್ತಿದೆ ಎಂದು ವರದಿಯಾಗಿದೆ. ಸಹಜವಾಗಿ ಈ ಸುದ್ದಿಯಿಂದ ಜನ ಭಯಭೀತರಾಗಿದ್ದಾರೆ. ಮಂಗನ ಖಾಯಿಲೆ, ಅಥವಾ Kyasanur Forest Disease (KFD) ಅಂತ ಜ್ವರವನ್ನು ಕರೆಯಲಾಗುತ್ತದೆ. ಅರಣ್ಯ ಪ್ರದೇಶಗಳಲ್ಲಿ ವಾಸವಿರುವ ಕೋತಿಯ ವೈರಸ್ ಗಳಿಂದ ಇದು ವೇಗವಾಗಿ ಹಬ್ಬುತ್ತದೆ. ಜ್ವರ, ತಲೆನೋವು, ಸ್ನಾಯು ನೋವು, ವಾಂತಿ ಮುಂತಾದ ರೋಗ ಲಕ್ಷಣಗಳನ್ನು ಹೊಂದಿದೆ. ಸದ್ಯ ೪೯ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದೆ. ಎರಡು ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಆತಂಕ ಬೇಡ ಕಟ್ಟೆಚ್ಚರ ವಹಿಸಿ ಎಂದು ಜಿಲ್ಲಾ ವೈದ್ಯಾಧಿಕಾರಿ ಪಿ ದಿನೇಶ್ ಮಾದ್ಯಮಗಳಿಗೆ ತಿಳಿಸಿದ್ದಾರೆ. ಹೇಗೆ ಹರಡುತ್ತದೆ?: ಮಂಗನ ಖಾಯಿಲೆ ಅಥವಾ Kyasanur Forest Disease (KFD), ಇದೊಂದು Haemaphysalis ಕುಲಕ್ಕೆ ಸೇರಿದ ಉಣುಗುಗಾಗಿದ್ದು ರೋಗಗ್ರಸ್ತ ಕೋತಿಯ ದೇಹದಲ್ಲಿದ್ದ ಉಣುಗು(Tick) ಕೋತಿಯ ಮರಣಾನಂತರ ಉದುರಿ ಗಾಳಿಯ ಮೂಲಕ ಜಾನುವಾರುಗಳಿಗೆ ಹರಡುತ್ತದೆ. ಅಲ್ಲಿಂದ ನೇರವಾಗಿ ಮನುಷ್ಯನ ದೇಹಕ್ಕೆ ಅಂಟಿಕೊಳ್ಳುತ್ತದೆ. ಈ ರೋಗವು ಮನುಷ್ಯನಿಂದ ಮನುಷ್ಯನಿಗೆ ಹರಡುವುದಿಲ್ಲ…
ಈ ಸಮಾಜವನ್ನು ಅರ್ಥ ಮಾಡಿಕೊಳ್ಳೋದೆ ಕಷ್ಟ. ಜೀವನ ಚೆನ್ನಾಗಿರ್ಲಿ ಅಂತ ಬುದ್ಧಿವಾದ ಹೇಳಿದ್ರೂ ಕಷ್ಟ. ಬುದ್ದಿವಾದ ಹೇಳಿಲ್ಲಂದ್ರೆ ಮತ್ತೆ ಮತ್ತೆ ಎಡವಟ್ಟುಗಳನ್ನು ಮಾಡ್ತಾನೆ ಇರ್ತಾರೆ ಜನ. ಹೀಗೆ ಇಲ್ಲೊಬ್ಬ ಯುವಕನೋರ್ವ ವೇಗವಾಗಿ ಗಾಡಿ ಓಡಿಸುತ್ತಿದ್ದುದ್ದನ್ನು ಪ್ರಶ್ನಿಸಿದ ಕಾರಣಕ್ಕೆ ಅನ್ಯಕೋಮಿನ ಯುವಕರ ಗುಂಪೊಂದು ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ದೊಡ್ಡಪೇಟೆಯಲ್ಲಿ ನಡೆದಿದೆ. ಖಾಸಗಿ ಕಾಲೇಜಿನಲ್ಲಿ ಕಂಪ್ಯೂಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸುಶೀಲ್ (23) ಗಂಭೀರವಾಗಿ ಗಾಯಗೊಂಡ ಯುವಕ ಎಂದು ತಿಳಿದು ಬಂದಿದೆ. ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ “ಗಾಯಾಳು ಯುವಕನನ್ನು ಸುಶೀಲ್ ಎಂದು ಗುರುತಿಸಲಾಗಿದೆ. ಇವರು ಕುಮುದ್ವತಿ ಕಾಲೇಜ್ ನಲ್ಲಿ ಕಂಪ್ಯೂಟರ್ ಅಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಬೈಕ್ ನಲ್ಲಿ ವೀಲಿಂಗ್ ಮಾಡಬೇಡಿ ಎಂದು ಬುದ್ಧಿವಾದ ಹೇಳಿದ್ದಕ್ಕೆ ಅನ್ಯಕೋಮಿನ ನಾಲ್ವರು ದುಷ್ಕರ್ಮಿಗಳ ತಂಡ ಎದೆ ಹಾಗೂ ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೆ…