Subscribe to Updates
Get the latest creative news from FooBar about art, design and business.
- ಒಕ್ಕರಹಳ್ಳಿ ವ್ಯಾಪ್ತಿಯಲ್ಲಿ ಚಿರತೆ ಹಾವಳಿ: ಮೂರು ನಾಯಿಗಳನ್ನು ಬಲಿ ಪಡೆದ ಚಿರತೆ
- ವಿದ್ಯಾರ್ಥಿ ನಿಲಯ ಪ್ರವೇಶಕ್ಕಾಗಿ ಆನ್ ಲೈನ್ ಅರ್ಜಿ ಆಹ್ವಾನ
- ತುಮಕೂರು: ಮೆಮು ರೈಲು ಸಮಯ ಬದಲಾವಣೆ ಸಾಧ್ಯತೆ
- ಕುಡಿಯುವ ನೀರಿಲ್ಲದೆ ಹಸು ಸಾವು: ಹನುಮನಾಯಕನ ಪಾಳ್ಯದಲ್ಲಿ ನೀರಿಗೆ ಹಾಹಾಕಾರ
- ಅಂತರಸನಹಳ್ಳಿಯಲ್ಲಿ ಜರ್ಮನಿಯ ಮ್ಯಾನ್–ಹುಮ್ಮೆಲ್ ಪರಿಸರಸ್ನೇಹಿ ಘಟಕ ಆರಂಭ
- ಗುಬ್ಬಿ: ಹೇರೂರಿನಲ್ಲಿ ಮೇ 25 ರಂದು ಬಸವ ಜಯಂತಿ ಕಾರ್ಯಕ್ರಮ
- ಕೆ.ಆರ್.ಪೇಟೆ: ರಂಗ ಕುಣಿತ ಸ್ಪರ್ಧೆಯಲ್ಲಿ ಶ್ರವಣೂರು ತಂಡಕ್ಕೆ ಪ್ರಥಮ ಬಹುಮಾನ
- ಕರ್ನಾಟಕ ರಾಜ್ಯ ರೈತ ಸಂಘ: ಕೊರಟಗೆರೆ ನಗರ ನೂತನ ಘಟಕ ಸ್ಥಾಪನೆ
Author: admin
ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರಕ್ಕೆ ಕರ್ನಾಟಕವೇ ಸ್ಫೂರ್ತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸ್ವಾವಲಂಬಿ ಬಲಿಷ್ಠ ಭಾರತ ನಿರ್ಮಾಣದ ಮಹಾ ಸಂಕಲ್ಪ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಕರ್ನಾಟಕವೇ ಸ್ಫೂರ್ತಿ, ಅಣ್ಣ ಬಸವಣ್ಣ ನವರ ಕಾಯಕ ತತ್ವವೇ ಪ್ರೇರಣೆ ಇದಕ್ಕೆ ‘ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ’ ಸಾಕ್ಷಿ ಸಂಕೇತವಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ ರೈತರ ಕಣ್ಣೀರೊರೆಸಿ ಪರಿಹಾರ ನೀಡಲು ಚಲೋ ಹಳ್ಳಿ ನಡೆಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಲಹೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಮೃದ್ಧ ಕರ್ನಾಟಕ ಮೋದಿ ಜೀ ಅವರ ಆದ್ಯತೆಯಾಗಿರುವಾಗ ಆರ್ಥಿಕ ತಾರತಮ್ಯದ ಸುಳ್ಳು ಕಂತೆ ಹೊತ್ತು ಚಲೋ ದಿಲ್ಲಿ ಬದಲು ಬರಗಾಲದಿಂದ ತತ್ತರಿಸಿರುವ ರೈತರ ಕಣ್ಣೀರೊರೆಸಿ ಪರಿಹಾರ ನೀಡಲು ಚಲೋ ಹಳ್ಳಿ’ ಕಾರ್ಯಕ್ರಮ ಆರಂಭಿಸಿ ನಿಮ್ಮೊಂದಿಗೆ ನಾವೂ ಬರುತ್ತೇವೆ ಎಂದಿದ್ದಾರೆ.
ಕೋಲಾರ: ಗುಂಪೊಂದು ನಾಲ್ವರ ಮೇಲೆ ಹಲ್ಲೆ ಮಾಡಿರುವ ಘಟನೆ ಕೋಲಾರ ತಾಲೂಕಿನ ಕಾಮದೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಜಮೀನಿನ ದಾರಿ ವಿಚಾರಕ್ಕೆ ಸಂಬಂಧಿಸಿದಂತೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಮನೆಗೆ ನುಗ್ಗಿ ಹಲ್ಲೆ, ಗೃಹೋಪಯೋಗಿ ವಸ್ತು ಧ್ವಂಸಗೊಳಿಸಿದ್ದಾರೆ. ಅಲ್ಲದೇ ಭೀರಪ್ಪ, ಅಶ್ವತ್ಥ್, ಲಕ್ಷ್ಮಮ್ಮ, ಶಾರದಮ್ಮ ಎಂಬುವರ ಮೇಲೆ ಹಲ್ಲೆ ಮಾಡಿದೆ. ಪ್ರಕಾಶ್, ರಮೇಶ್ ಎಂಬುವರು ಹಲ್ಲೆ ಮಾಡಿಸಿದ್ದಾರೆಂದು ಆರೋಪಿಸಲಾಗಿದ್ದು, ಈ ಬಗ್ಗೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ: ವಿದ್ಯಾನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ 2ನೇ ತರಗತಿಯ ವಿದ್ಯಾರ್ಥಿನಿಯನ್ನು ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ಖದೀಮನೋರ್ವ ಕಿಡ್ನಾಪ್ ಮಾಡಲು ಯತ್ನಿಸಿ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ನಡೆದಿದ್ದು, ಶಾಲೆಯ ಕಂಪೌಂಡ್ ಬಳಿ ಹೊಂಚುಹಾಕಿ ಕುಳಿತಿದ್ದ ಖದೀಮ, ವಿದ್ಯಾರ್ಥಿ ಹೊರಗಡೆ ಬರುತ್ತಿದ್ದಂತೆ ಆಕೆಯ ಮೂಗಿಗೆ ಬಟ್ಟೆಯಿಂದ ಮುಚ್ಚಿ ಅಪಹರಿಸಲು ಪ್ರಯತ್ನಿಸಿದ್ದಾನೆ. ಕಿಡ್ನಾಪರ್, ಸುಮಾರು 200 ಮೀಟರ್ ತನಕ ವಿದ್ಯಾರ್ಥಿನಿಯನ್ನು ಎಳೆದುಕೊಂಡು ಹೋಗಿದ್ದಾನೆ. ಬಳಿಕ ಬಾಲಕಿ ಆತನ ಕೈಕಚ್ಚಿ ಶಾಲೆಯ ಆವರಣಕ್ಕೆ ಓಡಿ ಬಂದಿದ್ದಾಳೆ. ಸದ್ಯ, ವಿಷಯ ತಿಳಿಯುತ್ತಿದ್ದಂತೆ ವಿದ್ಯಾನಗರ ಸರ್ಕಾರಿ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶ್ರೀಲಂಕಾ: ಶ್ರೀಲಂಕಾ ನೌಕಾಪಡೆ ಸಿಬ್ಬಂದಿ ಗುರುವಾರ ಮುಂಜಾನೆ ನೆಡುಂತೀವು ಬಳಿಯ ರಾಮೇಶ್ವರಂ ಮತ್ತು ತಂಗಚಿಮಾಡಂನಿಂದ 19 ಮೀನುಗಾರರನ್ನು ಬಂಧಿಸಿದ್ದಾರೆ. ಮಾಹಿತಿ ಪ್ರಕಾರ, ಮೀನುಗಾರರು ಅಲೆಕ್ಸ್ ಮತ್ತು ಆಂಟನ್ ಶಶಿಕುಮಾರ್ ಅವರ ಒಡೆತನದ ಎರಡು ದೋಣಿಗಳಲ್ಲಿ ದ್ವೀಪದ ಬಳಿ ಮೀನುಗಾರಿಕೆಯಲ್ಲಿ ತೊಡಗಿದ್ದರು ಎಂದು ಹೇಳಲಾಗಿದೆ. ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಎಲ್ಲಾ 19 ಮೀನುಗಾರರನ್ನು ಹೆಚ್ಚಿನ ತನಿಖೆಗಾಗಿ ಕಂಕಸಂತುರೈ ಬಂದರಿಗೆ ಕರೆದೊಯ್ಯಲಾಯಿತು. ನಾಲ್ಕು ದಿನಗಳ ಹಿಂದೆಯಷ್ಟೇ ರಾಮೇಶ್ವರಂ ಮತ್ತು ತಂಗಚಿಮಡಂನ 23 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿತ್ತು. ಇದನ್ನು ವಿರೋಧಿಸಿ ಮೀನುಗಾರರು ಮರುದಿನ ಸಮುದ್ರಕ್ಕೆ ಇಳಿಯುವುದನ್ನು ನಿಲ್ಲಿಸಿದರು. ತಮಿಳುನಾಡಿನ ಹಲವು ರಾಜಕೀಯ ಪಕ್ಷಗಳು ಬಂಧನವನ್ನು ಖಂಡಿಸಿದ್ದು, ಮೀನುಗಾರರನ್ನು ಶ್ರೀಲಂಕಾ ದೇಶದಿಂದ ಬಿಡುಗಡೆ ಮಾಡಿಸುವಂತೆ ಭಾರತದ ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ.
ತುಮಕೂರು: ಶಾಲೆಯಲ್ಲಿ ಊಟ ಸೇವಿಸಿದ್ದ ಇಬ್ಬರು ಶಿಕ್ಷಕರು ಸೇರಿ 30 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರು ಆಗಿರೋ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಸೀನಪ್ಪನಹಳ್ಳಿನಲ್ಲಿರುವ ಶ್ರೀ ಅಂಬಾ ಭವಾನಿ ಅನುದಾನಿತ ಪ್ರೌಢಶಾಲೆಯಲ್ಲಿ ನಡೆದಿದೆ. ನಿನ್ನೆ ಮಧ್ಯಾಹ್ನ ಶಾಲೆಯಲ್ಲಿ ಮೊಸರನ್ನ ಸೇರಿಸಿದ್ದ ವಿದ್ಯಾರ್ಥಿಗಳು. ನಿನ್ನೆ ರಾತ್ರಿ ವಿದ್ಯಾರ್ಥಿಗಳು ಮನೆಗೆ ಹೋದಾಗ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ. ಕೂಡಲೇ ರಾತ್ರೋರಾತ್ರಿ ಮಕ್ಕಳನ್ನ ಆಸ್ಪತ್ರೆಗೆ ದಾಖಲಿಸಿದ ಪೋಷಕರು, ಕುಣಿಗಲ್ ತಾಲ್ಲೂಕಿನ ಹಿಪ್ಪಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಅದರಲ್ಲಿ 12 ಮಕ್ಕಳಿಗೆ ಹೆಚ್ಚಿನ ಚಿಕಿತ್ಸೆಗೆ ಕುಣಿಗಲ್ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಒಟ್ಟು 80 ವಿದ್ಯಾರ್ಥಿಗಳಿರುವ ಶ್ರೀ ಅಂಬಾ ಭವಾನಿ ಅನುದಾನಿತ ಪ್ರೌಢಶಾಲೆಯಾಗಿದೇ. ಸ್ಥಳಕ್ಕೆ ಕುಣಿಗಲ್ ಟಿಹೆಚ್ ಓ ಹಾಗೂ ಆರೋಗ್ಯಾಧಿಕಾರಿಗಳು ಭೇಟಿ, ಪರಿಶೀಲನೆ ನಡೆಸಿದರು. ವಿದ್ಯಾರ್ಥಿಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದರೂ ಗಂಭೀರಗೊಂಡ 10 ವಿದ್ಯಾರ್ಥಿಗಳಿಗೆ ಕುಣಿಗಲ್ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.
ಬಿಗ್ ಬಾಸ್ ಖ್ಯಾತಿಯ ಇಶಾನಿ, ನಟ ದರ್ಶನ್ ಹುಟ್ಟು ಹಬ್ಬಕ್ಕೆ ಸ್ಪೆಷಲ್ ಗಿಫ್ಟ್ ನೀಡಲಿದ್ದು, ದರ್ಶನ್ ಅವರ ಹುಟ್ಟುಹಬ್ಬದ ದಿನದಂದು ಇಶಾನಿ ಅವರು ದರ್ಶನ್ ಕುರಿತಾದ ವಿಶೇಷವಾದ ಹಾಡೊಂದನ್ನು ರಿಲೀಸ್ ಮಾಡಲಿದ್ದಾರಂತೆ. ಈಗಾಗಲೇ ಹಾಡಿಗಾಗಿ ಸರ್ವ ರೀತಿಯಲ್ಲಿ ಅವರೂ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ದರ್ಶನ್ ತಮ್ಮ ಹುಟ್ಟು ಹಬ್ಬವನ್ನು ಫೆಬ್ರವರಿ 16ರಂದು ಆಚರಿಸಿಕೊಳ್ಳಲಿದ್ದು, ಈಗಾಗಲೇ ಅಭಿಮಾನಿಗಳಿಗೆ ದರ್ಶನ್ ಸಂದೇಶವೊಂದನ್ನು ರವಾನಿಸಿದ್ದು, “ಯಾರೂ ಕೇಕ್ ಮತ್ತು ಬ್ಯಾನರ್ ಕಟ್ಟದಂತೆ ಹೇಳಿದ್ದಾರೆ. ಜೊತೆಗೆ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ದವಸ ಧಾನ್ಯಗಳನ್ನು ಉಡುಗೊರೆಯಾಗಿ ನೀಡಿ” ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಕೊರಟಗೆರೆ: ಪರರ ವಸ್ತುಗಳಿಗೆ ಆಸೆ ಪಡುವ ಜನರ ಮಧ್ಯೆ ಕೊರಟಗೆರೆಯ ಪತ್ರಕರ್ತನೊಬ್ಬ ರಸ್ತೆಯಲ್ಲಿ ಸಿಕ್ಕ ಮೊಬೈಲನ್ನು ಬಳಸದೆ ಕೇವಲ 8 ಗಂಟೆಯಲ್ಲಿ ಮೊಬೈಲ್ ಮಾಲೀಕನನ್ನು ಪತ್ತೆ ಹಚ್ಚಿ ಮೊಬೈಲ್ ಹಿಂತಿರುಗಿಸುವುದರೊಂದಿಗೆ ಮಾನವೀಯತೆ ಮೆರದಿದ್ದಾರೆ. ಸುಮಾರು ಹದಿನೈದು ಸಾವಿರ ಬೆಲೆ ಬಾಳುವ ಮೊಬೈಲ್ ಮಧುಗಿರಿ ತಾಲ್ಲೂಕಿನ ರಂಟವಳಲು ಗ್ರಾಮದ ರಸ್ತೆಯಲ್ಲಿ ಮೊಬೈಲ್ ಮಾಲೀಕ ಉಮೇಶ್ ಕಳೆದುಕೊಂಡಿದ್ದು, ಅದೇ ರಸ್ತೆ ಮಾರ್ಗವಾಗಿ ಕೋಡಿಹಳ್ಳಿ ಗ್ರಾಮದ ಸಂಬಂಧಿಕರ ಮನೆಗೆ ತೆರಳುತ್ತಿದ್ದ ಪತ್ರಕರ್ತ ಮಂಜುಸ್ವಾಮಿ ಎಂ.ಎನ್. ಮತ್ತು ಸ್ನೇಹಿತರು ರಸ್ತೆಯಲ್ಲಿ ಬಿದ್ದಿದ್ದ ಮೊಬೈಲ್ ಅನ್ನು ಗಮನಿಸಿ ಅದನ್ನು ತೆಗೆದುಕೊಂಡು ಬಳಸದೆ ಮೊಬೈಲ್ ಮಾಲೀಕರನ್ನು ಪತ್ತೆ ಹಚ್ಚಲು ಮುಂದಾಗಿದ್ದರು. ಕೇವಲ 8 ಗಂಟೆಯಲ್ಲಿ ಮೊಬೈಲ್ ಮಾಲೀಕನನ್ನು ಪತ್ತೆ ಹಚ್ಚಿದ್ದಾರೆ ಮಧುಗಿರಿ ತಾಲ್ಲೂಕಿನ ಹೊಸಕೆರೆ ಗೊಲ್ಲರಹಟ್ಟಿ ಗ್ರಾಮದ ರೈಸ್ ಮಿಲ್ ಕಾರ್ಮಿಕ ಉಮೇಶ್ ಎಂಬುವ ವ್ಯಕ್ತಿಯ ಮೊಬೈಲ್ ಮಾಲೀಕನಾಗಿದ್ದು ಕೇವಲ 8 ಗಂಟೆಯಲ್ಲಿ ಪತ್ರಕರ್ತ ಮಂಜುಸ್ವಾಮಿ ಎಂ.ಎನ್. ರವರು ಮೊಬೈಲ್ ಹಿಂತಿರುಗಿಸಿ ಮಾನವೀಯತೆ ಮೆರೆದಿದ್ದಾರೆ.. ಮೊಬೈಲ್ ಮಾಲೀಕ ಉಮೇಶ್ ಮಾನವೀಯತೆ…
ಆನೇಕಲ್: ತನ್ನ ಪ್ರೇಯಸಿಗೆ ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಇರುವುದನ್ನು ಕಣ್ಣಾರೆ ನೋಡಿದ ಯುವಕ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿವಾಹಿತ ಮಹಿಳೆಯಾಗಿದ್ದ ದಿವ್ಯಾ ಎಂಬಾಕೆಯು ತನ್ನ ಪತಿಯಿಂದ ವಿಚ್ಚೇದನ ಪಡೆದಿದ್ದಳು. ವಿಚ್ಚೇದನ ಪಡೆದ ಸ್ವಲ್ಪ ದಿನದಲ್ಲೇ ಅನ್ಬರಾಸನ್ ಎಂಬ ಯುವಕನನ್ನು ಪ್ರೀತಿಸಲು ಆರಂಭಿಸಿದ್ದಳು. ಗಂಡ ಹೆಂಡತಿ ಎಂದು ಹೇಳಿ ಚಿಕ್ಕನಾಗಮಂಗಲದ ಬಾಡಿಗೆ ಮನೆ ಪಡೆದು ಕಳೆದ ಆರು ತಿಂಗಳಿನಿಂದ ಲೀವ್ ಇನ್ ರಿಲೇಷನ್ ನಲ್ಲಿದ್ದರು. ಅನ್ಬರಾಸನ್ ಜೊತೆ ಪ್ರೀತಿಯಲ್ಲಿ ಇರುವಾಗಲೇ ವಿದ್ಯಾಗೆ ಸಂತೋಷ್ ಎಂಬ ಯುವಕನ ಜೊತೆ ಲವ್ವಿಡವ್ವಿ ಶುರು ಮಾಡಿದ್ದಾಳೆ. ಈ ವಿಚಾರ ಅನ್ವರಸನ್ ಗೆ ತಿಳಿದಿದೆ. ಅಲ್ಲದೆ, ಮನೆಯಲ್ಲಿ ಸಂತೋಷ್ ಹಾಗೂ ವಿದ್ಯಾ ಜೊತೆಯಲ್ಲಿದ್ದಾಗ ಅನ್ಬರಾಸನ್ ಕಣ್ಣಾರೆ ಕಂಡಿದ್ದನು. ಆದರೆ, ಈ ವಿಚಾರ ತಿಳಿದು ವಿದ್ಯಾಗೆ ಬುದ್ಧಿ ಹೇಳಿದರೂ ಆಕೆ ಕೇಳಿರಲಿಲ್ಲ. ಇದರಿಂದ ಮನನೊಂದು ಅನ್ಬರಾಸನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ಪೋಷಕರು ಮೊದಲು ಯುಡಿಆರ್…
ಚಿಕ್ಕಮಗಳೂರು: ಕಾಲೇಜು ವಿದ್ಯಾರ್ಥಿನಿಯೊಬ್ಬಳು ಡೆಂಗ್ಯೂ ಜ್ವರದಿಂದ ಮೃತಪಟ್ಟಿದ್ದಾಳೆ. ಸಹನಾ ಬಾನು(18) ಮೃತ ದುರ್ದೈವಿಯಾಗಿದ್ದಾರೆ. ಈಕೆ ಚಿಕ್ಕಮಗಳೂರು ನಗರದ ಮಹಮ್ಮದ್ ಖಾನ್ ಗಲ್ಲಿ ನಿವಾಸಿಯಾಗಿದ್ದಾರೆ. ಚಿಕ್ಕಮಗಳೂರು ನಗರದ ಮೊಹ್ಮದ್ ಖಾನ್ ಗಲ್ಲಿ ನಿವಾಸಿಯಾಗಿರುವ ಸುಹನಾ ಬಾನುಳನ್ನು ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ .
ಗದಗ: ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನಲ್ಲಿ ಚಿರತೆ ದಾಳಿಯಿಂದ, ನಾಲ್ಕು ಜನ ಗಾಯಗೊಂಡ ಘಟನೆ ಜೀಗೇರಿ ಗ್ರಾಮದಲ್ಲಿ ನಡೆದಿದೆ. ನಿನ್ನೆ ಬೆಳಿಗ್ಗೆಯಷ್ಟೇ ತೋಟದಲ್ಲಿ ಕೆಲಸ ಮಾಡುತ್ತಿದ್ದಾತನ ಮೇಲೆ ದಾಳಿ ಮಾಡಿದ್ದ ಚಿರತೆ, ಸಂಜೆ ವೇಳೆ ಮತ್ತೆ ನಾಲ್ಕು ಜನರ ಮೇಲೆ ದಾಳಿ ನಡೆಸಿದೆ. ಚಿರತೆಯು ಅರಣ್ಯ ಸಿಬ್ಬಂದಿ ಸೇರಿದಂತೆ ಸ್ಥಳೀಯರ ಮೇಲೆ ಎರಗಿದ್ದು, ದಾಳಿಗೊಳಗಾದವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ಚಿರತೆ ದಾಳಿಯಿಂದ ಸುತ್ತಲಿನ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಚಿರತೆ ಸೆರೆ ಹಿಡಿಯಲು ಪ್ರಯತ್ನ ನಡೆಸಿದ್ದಾರೆ.