Subscribe to Updates
Get the latest creative news from FooBar about art, design and business.
- ತಿಪಟೂರು: ರೋಟರಿ ಸಂಸ್ಥೆಯ 67ನೇ ಅಧ್ಯಕ್ಷರಾಗಿ ಪ್ರಕಾಶ್ ಕೆ. ಪದಗ್ರಹಣ
- ತುಮಕೂರು: ಜುಲೈ 17 ರಂದು ಕಾನೂನು ಅರಿವು–ನೆರವು ಕಾರ್ಯಕ್ರಮ
- ನಿರುದ್ಯೋಗಿಗಳಿಗೆ ಸುವರ್ಣಾವಕಾಶ: ಜುಲೈ 17ರಂದು ತುಮಕೂರಿನಲ್ಲಿ ನೇರ ಸಂದರ್ಶನ
- ತುಮಕೂರು: ಜುಲೈ 17ರಂದು ರಾಜ್ಯ ಕಿರಿಯರ ಅಥ್ಲೆಟಿಕ್ ಕೂಟಕ್ಕೆ ಆಯ್ಕೆ ಪ್ರಕ್ರಿಯೆ: ಕ್ರೀಡಾಪಟುಗಳು ಭಾಗವಹಿಸಿ
- ತುಮಕೂರು: ಗಾಂಜಾ, ಕಳ್ಳತನ, ಸುಲಿಗೆ: 5 ಪ್ರಕರಣಗಳಲ್ಲಿ 12 ಆರೋಪಿಗಳ ಬಂಧನ
- ದೇವಾಲಯದಲ್ಲಿ ಅಕ್ಷರಾಭ್ಯಾಸ ಮಕ್ಕಳ ಜೀವನದ ಶ್ರೇಷ್ಠ ಆರಂಭ: ಡಾ.ಹನುಮಂತನಾಥ ಸ್ವಾಮೀಜಿ
- ಸರಗೂರು: ಬೇಲದಕುಪ್ಪೆ ಮಹದೇಶ್ವರ ದೇವಸ್ಥಾನದಲ್ಲಿ ಆಷಾಢ ಅಮಾವಾಸ್ಯೆ ಪೂಜೆ; ಬಸ್ ವ್ಯವಸ್ಥೆಯಿಲ್ಲದೆ ಭಕ್ತರ ಪರದಾಟ
- ಹೊಳವನಹಳ್ಳಿ ಬೆಸ್ಕಾಂ ಶಾಖೆಯ ಸಹಾಯಕ ಇಂಜಿನಿಯರ್ ಯೋಗೇಶ್ ಅವರಿಗೆ ಬೀಳ್ಕೊಡುಗೆ
Author: admin
ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ನಿಗೂಢ ಸ್ಪೋಟಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಡಿಜಿ, ಐಜಿಪಿ ಅಲೋಕ್ ಮೋಹನ್, ಸ್ಪೋಟದಲ್ಲಿ 9 ಮಂದಿಗೆ ಗಾಯಗಳಾಗಿದೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಘಟನೆಯ ಹಿಂದಿರುವವರನ್ನು ಪತ್ತೆ ಹಚ್ಚುತ್ತೇವೆ ಎಂದು ತಿಳಿಸಿದ್ದಾರೆ. ಘಟನೆ ಕುರಿತು ಮಾತನಾಡಿದ ಡಿಜಿ, ಐಜಿಪಿ ಅಲೋಕ್ ಮೋಹನ್, ಘಟನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವರು ಮಾಹಿತಿ ಪಡೆದಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಸ್ಪೋಟವಾಗಿದೆ. ಘಟನಾ ಸ್ಥಳಕ್ಕೆ ಎಫ್ ಎಸ್ ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಎಫ್ ಎಸ್ ಎಲ್ ಸಂಪೂರ್ಣ ಪರೀಶೀಲನೆ ಬಳಿಕ ಮಾಹಿತಿ ನೀಡುತ್ತೇವೆ ಎಂದರು. ಆರೋಪಿ ಏನು ತಂದಿದ್ದ ಅನ್ನೋದು ಗೊತ್ತಾಗಲಿದೆ. ಎಲ್ಲಾ ತನಿಖಾ ಸಂಸ್ಥೆಗಳಿಗೂ ಮಾಹಿತಿ ಹೋಗಿದೆ. ಐಬಿಗೆ ಮಾಹಿತಿ ನೀಡಿದ್ದೇವೆ. ತನಿಖೆ ನಡೆಸುತ್ತಿದ್ದಾರೆ. ಸ್ಪೋಟದ ಹಿಂದೆ ಇರುವವರನ್ನ ಪತ್ತೆ ಹಚ್ಚುತ್ತೇವೆ ಎಂದು ಅಲೋಕ್ ಮೋಹನ್ ತಿಳಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು…
ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾರ್ಯಕರ್ತರೊಂದಿಗೆ ಈಗಾಗಲೇ ಸಭೆ ಮಾಡಿ ಬಂದಿದ್ದೇನೆ. ಸದ್ಯದ ಪರಿಸ್ಥಿತಿಯಲ್ಲಿ ಮೈಸೂರು, ಚಾಮರಾಜನಗರ ಎರಡರಲ್ಲೂ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ ಎಂಬ ನಿಲುವನ್ನು ಕಾರ್ಯಕರ್ತರ ಅಭಿಪ್ರಾಯವಾಗಿದೆ. ದೇಶದಲ್ಲಿ ಮೋದಿ ಅಲೆ ಇನ್ನಷ್ಟು ಹೆಚ್ಚಾಗಿದೆ. ಸದ್ಯಕ್ಕೆ ರಾಜ್ಯದಲ್ಲಿ ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬಿದ್ದಿರುವ ಶೇ 35 ರಿಂದ 40 ರಷ್ಟು ಮತಗಳು ಬಿಜೆಪಿಗೆ ಬರುವ ಸಾಧ್ಯತೆ ಇದೆ. ಈಗಿನ ಸರ್ಕಾರ ಕುಣಿಯಲಾರದವಳು ನೆಲಡೊಂಡು ಅನ್ನುವ ಹಾಗೆ ಸರಿಯಾಗಿ ಆಡಳಿತ ಮಾಡದೇ ಕೇಂದ್ರದ ಮೇಲೆ ಬೊಟ್ಟು ಮಾಡುತ್ತಿದೆ. ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ಕುಡಿಯುವ ನೀರಿಗೂ ಹಾಹಾಕಾರವಾಗುತ್ತಿದೆ. ರಾಜ್ಯ ಸರ್ಕಾರ ಆಡಳಿತ ನಡೆಸುವಲ್ಲಿ ವಿಫಲವಾಗಿದೆ. ಎಸ್ ಇಪಿ ಟಿಎಸ್ಪಿ ಹಣವನ್ನ ಗ್ಯಾರಂಟಿ ಯೋಜನೆಗಳಿಗಾಗಿ ದುರುಪಯೋಗ ಮಾಡಿಕೊಂಡಿದೆ. ಅಂಬೇಡ್ಕರ್ ಬದುಕಿದ್ದಾಗ ಕಾಂಗ್ರೆಸ್ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಅವರ ಭಾವ ಚಿತ್ರ ಬಳಸಲು ಕಾಂಗ್ರೆಸ್ ಗೆ ನೈತಿಕತೆ ಇಲ್ಲ ಎಂದು ಕಿಡಿಕಾರಿದರು. ಪಾಕಿಸ್ತಾನ್ ಜಿಂದಾಬದ್ ಘೋಷಣೆ ಇದೇನು ಹೊಸದೇನಲ್ಲ. ಕಾಶ್ಮೀರದಲ್ಲಿ, ಬೇರೆ ಬೇರೆ…
ಢಾಕಾ: ಬಾಂಗ್ಲಾದೇಶದ ರಾಜಧಾನಿಯಲ್ಲಿನ ಏಳು ಅಂತಸ್ತಿನ ವಾಣಿಜ್ಯ ಬಳಕೆಯ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 44 ಮೃತಪಟ್ಟಿದ್ದಾರೆ. ಸುಮಾರು 25 ಜನರು ಗಾಯಗೊಂಡಿದ್ದಾರೆ. ಗ್ರೀನ್ ಕೊಝಿ ಕಾಟೇಜ್ ಕಟ್ಟಡದಲ್ಲಿ ಗುರುವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡು, ಬೃಹತ್ ಅಗ್ನಿ ಜ್ವಾಲೆಗಳು ಸಮೀಪದ ಕಟ್ಟಡಗಳಿಗೂ ವ್ಯಾಪಿಸಿದವು. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಲು ಯತ್ನಿಸಿದರಾದರೂ ಬೆಳಗ್ಗೆವರೆಗೂ ಬೆಂಕಿ ನಂದಿಸುವ ಕಾರ್ಯ ಮುಂದುವರಿಯಿತು. “ಕಟ್ಟಡದಲ್ಲಿ ಗೃಹ ಬಳಕೆ ಗ್ಯಾಸ್ ಸಿಲಿಂಡರ್‌ನಲ್ಲಿನ ಸೋರಿಕೆಯಿಂದ ಅಗ್ನಿ ದುರಂತ ಸಂಭವಿಸಿರುವ ಅನುಮಾನವಿದೆ. ಕಟ್ಟಡಕ್ಕೆ ಒಂದೇ ನಿರ್ಗಮನ ದ್ವಾರ ಇದ್ದ ಕಾರಣ ಹಲವರು ಉಸಿರುಗಟ್ಟಿ ಮೃತರಾಗಿದ್ದಾರೆ,” ಎಂದು ಐಜಿಪಿ ಚೌಧರಿ ಅಬ್ದುಲ್ಲಾ ಅಲ್ ಮಾಮುನ್ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಮದುವೆ ಸಂಭ್ರಮ ಜೋರಾಗಿವೆ. ಈ ಅದ್ದೂರಿ ವಿವಾಹ ಸಮಾರಂಭಕ್ಕೆ ಜನಪ್ರಿಯ ಗಾಯಕಿ ರಿಯಾನಾ ಕೂಡ ಆಗಮಿಸಿದ್ದು, ಅಂಬಾನಿ ಕುಟುಂಬದವರು 74 ಕೋಟಿ ರೂಪಾಯಿ ಸಂಭಾವನೆ ನೀಡಿದ್ದಾರೆ ಎನ್ನಲಾಗಿದೆ. ಇದೀಗ ಈ ಖ್ಯಾತ ಗಾಯಕಿ ಹಾಕಿಕೊಂಡಿರುವ ಈ ಹೆಡ್ ಫೋನ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ಹೆಡ್ ಫೋನ್ ಡಿಸೈನ್ ನಿಂದ ಮಾತ್ರವಲ್ಲ ಇದರ ಬೆಲೆಯಿಂದಲೂ ಹೆಸರು ಮಾಡಿದೆ. @rihannaofficiall ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಶೇಷ ಹೆಡ್ ಪೋನ್ ಫೋಟೋ ಹಂಚಿಕೊಂಡಿದ್ದು, ಫೋಟೋದಲ್ಲಿ ಖ್ಯಾತ ಗಾಯಕಿ ರಿಯಾನಾ ಹೆಡ್ ಫೋನ್ ಧರಿಸಿದ್ದಾರೆ. ಈ ಹೆಡ್ ಫೋನ್ ಬೆಲೆ 9,000 ಡಾಲರ್ ಅಂದರೆ 7ಲಕ್ಷದ 46ಸಾವಿರ ರೂಪಾಯಿ ಎನ್ನಲಾಗಿದೆ. ಈ ಹೆಡ್ ಫೋನ್ ಅನ್ನು ಚಿನ್ನದಿಂದ ತಯಾರಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಈ ಪೋಸ್ಟ್ ಭಾರೀ ವೈರಲ್ ಆಗುತ್ತಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು…
ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆ ಕೂಡ ಒಂದು. ಬಹಳಷ್ಟು ಮಂದಿ ಮಹಿಳಾ ಮಣಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಮುಂದಿನ 12 ತಿಂಗಳುಗಳಲ್ಲಿ ಸುಮಾರು 6,100 ಹೊಸ ಬಸ್ ಗಳನ್ನು ಸೇವೆಗೆ ಸೇರಿಸಲು ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಈಗಾಗಲೇ 260 ಬಸ್ ಗಳನ್ನು ಖರೀದಿಸಲು ಮಂಜೂರಾತಿ ನೀಡಲಾಗಿದ್ದು, ಅದರಲ್ಲಿ 100 ಪಲ್ಲಕ್ಕಿ ನಾನ್ ಎಸಿ ಬಸ್ ಗಳು, 120 ನಾನ್ ಎಸಿ ಬಸ್ ಗಳು ಮತ್ತು ಉತ್ತರ ಕರ್ನಾಟಕಕ್ಕಾಗಿ 40 ಎಸಿ ಬಸ್ ಗಳಿಗೆ ಅನುಮೋದನೆ ನೀಡಲಾಗಿದೆ. 50 ಕೋಟಿ ವೆಚ್ಚದಲ್ಲಿ ಸ್ಟಾರ್ಟ್‌ಅಪ್‌ಗಳನ್ನು ಪ್ರೋತ್ಸಾಹಿಸುವ ಯೋಜನೆಗಳ ಜೊತೆಗೆ ರಾಜ್ಯಾದ್ಯಂತ ಕೈಗಾರಿಕಾ ಶ್ರೇಷ್ಠತೆಯ ಕೇಂದ್ರಗಳನ್ನು ಸರ್ಕಾರ ಸ್ಥಾಪಿಸಲಿದೆ ಎನ್ನುವ ವಿಚಾರ ಇದೀಗ ಹೊರಬಿದ್ದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ತಿಪಟೂರು: ಎಲ್ಲಾ ಕೆಲಸಗಳನ್ನು ಸರ್ಕಾರವೇ ಮಾಡಲಾಗುವುದಿಲ್ಲ ಕೆಲವೊಂದು ಕಾರ್ಯಗಳಿಗೆ ಜನರು ಕೈಜೋಡಿಸಬೇಕು. ಆಗ ಮಾತ್ರ ಬಡವರಿಗೆ ಅನುಕೂಲವಾಗಲಿದೆ ಎಂದು ಶಾಸಕ ಕೆ. ಷಡಕ್ಷರಿ ಹೇಳಿದರು. ಡಾ. ಶ್ರೀಧರ್ ಅನ್ನದಾಸೋಹದ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ತಿಪಟೂರಿನಲ್ಲಿ ಮಿನಿ ವಿಧಾನಸೌಧ ಸಾರ್ವಜನಿಕ ಆಸ್ಪತ್ರೆ ಎಲ್ಲಾ ಕಚೇರಿಗಳ ಜಾಗ ಹತ್ತಿರವಿದ್ದು, ದೂರದ ಹಳ್ಳಿಗಳಿಂದ ಆಗಮಿಸುವ ರೈತ ಕಾರ್ಮಿಕರು ಮಧ್ಯಾಹ್ನದ ಅನ್ನದಾಸೋಹದಿಂದ ಅನುಕೂಲವಾಗುತ್ತದೆ. ಇಂತ ಪುಣ್ಯ ಕಾರ್ಯದಲ್ಲಿ ರಾಜಕಾರಣಿಗಳನ್ನು ಸೇರಿಸಿಕೊಳ್ಳಬೇಡಿ, ರಾಜಕಾರಣಿಗಳು ಮುಂದೆ ಬಂದರೆ ಇಂಥ ಒಳ್ಳೆಯ ಕೆಲಸಗಳನ್ನು ಕೆಡಿಸಿಬಿಡುತ್ತಾರೆ ಎಂದು ಹೇಳಿದರು. ಕಲ್ಲೇಶ್ವರ ದೇವಸ್ಥಾನದ ಅವನದಲ್ಲಿ ಮುಜರಾಯಿ ಇಲಾಖೆ ಸೇರಿದ ಜಾಗದಲ್ಲಿ ಸಮುದಾಯ ಭವನ ನಿರ್ಮಿಸಲು ಸಚಿವ ಹೆಚ್.ಕೆ.ಪಾಟೀಲ್ ಅವರಿಂದ 50 ಲಕ್ಷ ಹಣ ಬಿಡುಗಡೆ ಮಾಡಿಸಿದ್ದೇನೆ, ಉಳಿದ ಹಣವನ್ನು ಕೆಲಸ ಪ್ರಾರಂಭವಾದ ಮೇಲೆ ನೀಡುವುದಾಗಿ ಹೇಳಿದ್ದಾರೆ. ಈ ಜಾಗದಲ್ಲಿ ತಾತ್ಕಾಲಿಕವಾಗಿ ಬಾಡಿಗೆ ನೀಡಿದ ಜಾಗವನ್ನು ಅಧಿಕಾರಿಗಳಿಗೆ ಬಿಟ್ಟುಕೊಡಲು ಸೂಚಿಸಿದ್ದೇನೆ. ಆ ಕೆಲಸವನ್ನು ಅಧಿಕಾರಿಗಳು ಮಾಡುತ್ತಾರೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಇ.ಒ.ಸುದರ್ಶನ್,…
ಬೆಂಗಳೂರು: ಲೋಕಸಭಾ ಚುನಾವಣೆಗೂ ಮುನ್ನ ರೈಲ್ವೆ ಪ್ರಯಾಣಿಕರಿಗೆ ಸರ್ಕಾರ ಬಿಗ್ ರಿಲೀಫ್ ನೀಡಿದೆ. ಪ್ಯಾಸೆಂಜರ್ ರೈಲಿನ ಟಿಕೆಟ್ ದರ ಇಳಿಸಲು ರೈಲ್ವೇ ಇಲಾಖೆ ನಿರ್ಧರಿಸಿದೆ. ಫೆಬ್ರವರಿ 27ರಿಂದಲೇ ಈ ಬೆಲೆ ಇಳಿಕೆ ನಿಯಮ ಅನ್ವಯವಾಗಿದೆ. ಎಲ್ಲಾ ಮೇನ್ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ ರೈಲುಗಳು ಮತ್ತು ‘ಶೂನ್ಯ’ದಿಂದ ಪ್ರಾರಂಭವಾಗುವ ಸಂಖ್ಯೆಗಳನ್ನು ಹೊಂದಿರುವ ರೈಲುಗಳಲ್ಲಿ ಸಾಮಾನ್ಯ ದರ್ಜೆಯ ದರಗಳನ್ನು ಸರಿಸುಮಾರು 50% ರಷ್ಟು ಕಡಿತಗೊಳಿಸಲಾಗಿದೆ. ಕರೋನಾ ಅವಧಿ ಮುಗಿದಾಗಿನಿಂದ, ಪ್ರಯಾಣಿಕರ ರೈಲುಗಳ ದರವನ್ನು ಕಡಿಮೆ ಮಾಡಲು ಪ್ರಯಾಣಿಕರಿಂದ ಬೇಡಿಕೆ ಇತ್ತು, ಅದನ್ನು ಈಗ ಸರ್ಕಾರ ಪೂರೈಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ರಾಂಚಿ: ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ನಿಟ್ಟಿನಲ್ಲಿ ಜಾರ್ಖಂಡ್ ಅಭಿವೃದ್ಧಿಯೂ ಹೆಚ್ಚಿನ ಮಹತ್ವ ಪಡೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅವರು ಜಾರ್ಖಂಡ್ ನ ಧನ್ ಬಾದ್ ನ ಸಿಂದ್ರಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ನಮ್ಮ ಸರ್ಕಾರ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಜಾರ್ಖಂಡ್ ಅಭಿವೃದ್ಧಿಗೆ ಆದ್ಯತೆ ನೀಡಿದೆ ಎಂದರು. ಕಳೆದ ಹತ್ತು ವರ್ಷಗಳಲ್ಲಿ ನಾವು ಜಾರ್ಖಂಡ್ ಗಾಗಿ ಕಾರ್ಯನಿರ್ವಹಿಸಿದ್ದೇವೆ. ಜಾರ್ಖಂಡ್ ನ ಬುಡಕಟ್ಟು ಸಮುದಾಯ, ಬಡವರು, ಯುವಕರು ಮತ್ತು ಮಹಿಳೆಯರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿರುವುದಾಗಿ ಪ್ರಧಾನಿ ಮೋದಿ ಹೇಳಿದರು. 2023ನೇ ಸಾಲಿನ ಅಕ್ಟೋಬರ್ ನಿಂದ ಡಿಸೆಂಬರ್ ವರೆಗಿನ ಆರ್ಥಿಕ ಪ್ರಗತಿಯಲ್ಲಿ ಭಾರತ ಶೇ.8.4ರಷ್ಟು ಏರಿಕೆ ಕಂಡಿದೆ. ಎಲ್ಲಾ ನಿರೀಕ್ಷೆಗಳನ್ನು ಮೀರಿ ಭಾರತ ಜಗತ್ತಿನಲ್ಲಿಯೇ ಅತ್ಯಂತ ವೇಗದ ಆರ್ಥಿಕತೆಯತ್ತ ಹೆಜ್ಜೆ ಹಾಕುತ್ತಿದೆ ಎಂದು ಪ್ರಧಾನಿ ತಿಳಿಸಿದರು. ವಿಕಸಿತ ಭಾರತದ ಕಲ್ಪನೆಯಲ್ಲಿ ಜಾರ್ಖಂಡ್ ಕೂಡಾ ಅಭಿವೃದ್ಧಿ ಪಥದತ್ತ ಸಾಗಲು ಎಲ್ಲಾ ರೀತಿಯಿಂದಲೂ ಪ್ರಾಮುಖ್ಯತೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ರೈಲು,…
ತುರುವೇಕೆರೆ: ಅಮ್ಮಸಂದ್ರ ಸಿಮೆಂಟ್ ಕಾರ್ಖಾನೆಯ ಹೆಚ್.ಆರ್.ಮ್ಯಾನೇಜರ್ ಮಂಜುನಾಥಸ್ವಾಮಿಯವರ ವಿರುದ್ಧ ಜಾತಿ ನಿಂದನೆ ಎರಡು ಮೊಕದ್ದಮೆ ದಾಖಲಾಗಿದೆ. ಆದರೂಕೂಡ ಪೊಲೀಸರು ಅವರನ್ನು ಬಂಧಿಸುವಲ್ಲಿ ಮೀನಾಮೇಷ ಎಣಿಸುತ್ತಿದ್ದಾರೆ ಎಂದು ದಲಿತ ಮುಖಂಡ ಹೊನ್ನೇನಹಳ್ಳಿ ಕೃಷ್ಣಪ್ಪ ಆರೋಪಿಸಿದ್ದಾರೆ. ತುರುವೇಕೆರೆ ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತರ ಮೇಲೆ ಪದೇ ಪದೇ ದೌರ್ಜನ್ಯ ನಡೆಯುತಿದ್ದರೂ ಪೊಲೀಸರು ಮೌನ ವಹಿಸಿದ್ದಾರೆ ಎಂದರು. ಮಂಜುನಾಥ ಸ್ವಾಮಿಯವರ ಮೇಲೆ ಎರಡು ಜಾತಿನಿಂದನೆ ಮೊಕದ್ದಮೆ ದಾಖಲಾಗಿದ್ದರೂ ಸಹ ಇದುವರೆಗೂ ಅವರನ್ನು ಬಂಧಿಸಿಲ್ಲ. ಅವರಿಗೆ ಜಾಮೀನು ತೆಗೆದುಕೊಳ್ಳುವುದಕ್ಕೆದಂಡಿನಶಿವರ ಪೊಲೀಸರೇ ಸಹಕರಿಸುತ್ತಿದ್ದಾರೆ ಎಂದು ಆರೋಪಿಸಿದರಲ್ಲದೇ, ಇದು ದಲಿತರಿಗೆ ಬಹಳ ನೋವಿನ ಸಂಗತಿ. ರಕ್ಷಣೆ ಕೊಡಬೇಕಾದ ಪೊಲೀಸ್ ಇಲಾಖೆಯೇ ಆರೋಪಿ ಬಲಾಢ್ಯನಾಗಿರುವುದರಿಂದ ಆರೋಪಿಯನ್ನು ದಸ್ತಗಿರಿ ಮಾಡದೆ ಇರುವುದು ದಲಿತರಿಗೆ ಮಾಡಿದ ಅವಮಾನ ಎಂದರು. ಇಡೀ ವ್ಯಕ್ತಿ ಕಾರ್ಖಾನೆಯ ನೌಕರನಿಂದ ಬಲವಂತವಾಗಿ ಮಲ ಗುಂಡಿಯನ್ನು ಸ್ವಚ್ಛ ಗೊಳಿಸಿರುವುದು ಪರಮ ಅಪರಾಧವಾಗಿದ್ದು, ಅಲ್ಲದೇ ಕಾರ್ಮಿಕರಿಂದ ಬಲವಂತವಾಗಿ ಕಂಪನಿಯು ದಲಿತರ ಪರವಾಗಿದೆ ಎಂಬ ಪತ್ರಿಕಾ ಹೇಳಿಕೆಯನ್ನು ಸಹ ನೀಡಿಸಿದ್ದಾರೆ ಎಂದು…
ಬರ್ವಾದಾ: ದೇಶವು ಮೋದಿ ಗ್ಯಾರಂಟಿಯನ್ನು ನೆಚ್ಚಿಕೊಂಡಿದೆ, ಹೀಗಾಗಿ ಮುಂದಿನ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟವು 400ಕ್ಕೂ ಹೆಚ್ಚು ಸೀಟುಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಜಾರ್ಖಂಡ್ ನ ಧನ್ ಬಾದ್ ನಲ್ಲಿ ನಡೆದ ‘ವಿಜಯ ಸಂಕಲ್ಪ ಮಹಾರ‍್ಯಾಲಿ’ಯಲ್ಲಿ ಅವರು ಮಾತನಾಡಿದರು. ‘ಜಲ ಜೀವನ್ ಮಿಷನ್’, ‘ಪಿಎಂ ಆವಾಸ್ ಯೋಜನೆ’ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಲು ‘ಇಂಡಿಯಾ’ ಮೈತ್ರಿಕೂಟವೂ ಬಿಡುತ್ತಿಲ್ಲ ಎಂದೂ ಅವರು ಆರೋಪಿಸಿದರು. ಅದೊಂದು ಅಭಿವೃದ್ಧಿ ವಿರೋಧಿ, ಜನವಿರೋಧಿ ಮೈತ್ರಿಕೂಟ ಎಂದು ಅವರು ಕಿಡಿಕಾರಿದರು. ‘ಇತರರ ಎಲ್ಲಾ ಭರವಸೆಗಳು ಮುಗಿಯುವಾಗ ಮೋದಿ ಗ್ಯಾರಂಟಿ ಆರಂಭವಾಗುತ್ತದೆ. ಸಿಂದ್ರಿ ರಸಗೊಬ್ಬರ ವಿಭಾಗ ಹಾಗೂ ಉತ್ತರ ಕರಣ್ ಪುರ ವಿದ್ಯುತ್ ಯೋಜನೆ ಮುಂತಾದವುಗಳು ಮೋದಿ ಗ್ಯಾರಂಟಿ ಈಡೇರಿದ ಉದಾಹರಣೆಗಳು’ ಎಂದು ಅವರು ಹೇಳಿದರು. ಜೆಎಂಎಂ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ‘ಸರ್ಕಾರ ರಾಜ್ಯವನ್ನು ಲೂಟಿ ಮಾಡಿದೆ. ಜಾರ್ಖಂಡ್‌ನಲ್ಲಿ ಇಷ್ಟೊಂದು ಬಂಡಲ್ ಪ್ರಮಾಣದ ಹಣ ವಶಪಡಿಸಿಕೊಂಡಿದ್ದನ್ನು ನಾನು ನೋಡಿಲ್ಲ. ಜನರಿಂದ ಲೂಟಿ ಮಾಡಿದ…