Subscribe to Updates
Get the latest creative news from FooBar about art, design and business.
- ದೇವಾಲಯದಲ್ಲಿ ಅಕ್ಷರಾಭ್ಯಾಸ ಮಕ್ಕಳ ಜೀವನದ ಶ್ರೇಷ್ಠ ಆರಂಭ: ಡಾ.ಹನುಮಂತನಾಥ ಸ್ವಾಮೀಜಿ
- ಸರಗೂರು: ಬೇಲದಕುಪ್ಪೆ ಮಹದೇಶ್ವರ ದೇವಸ್ಥಾನದಲ್ಲಿ ಆಷಾಢ ಅಮಾವಾಸ್ಯೆ ಪೂಜೆ; ಬಸ್ ವ್ಯವಸ್ಥೆಯಿಲ್ಲದೆ ಭಕ್ತರ ಪರದಾಟ
- ಹೊಳವನಹಳ್ಳಿ ಬೆಸ್ಕಾಂ ಶಾಖೆಯ ಸಹಾಯಕ ಇಂಜಿನಿಯರ್ ಯೋಗೇಶ್ ಅವರಿಗೆ ಬೀಳ್ಕೊಡುಗೆ
- ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ದೇವಾಲಯದ ರಾಜಗೋಪುರಕ್ಕೆ 5 ಲಕ್ಷ ದೇಣಿಗೆ
- ಕಾಡುಬೆಗೂರಿನಲ್ಲಿ ದಲಿತ ಮಹಿಳೆ ಮೇಲೆ ದೌರ್ಜನ್ಯ: ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸ್ಥಳೀಯರ ಆಗ್ರಹ
- ಸರಗೂರು: ಚಿಕ್ಕದೇವಮ್ಮ ಬೆಟ್ಟದಲ್ಲಿ ಆಷಾಢ ಅಮಾವಾಸ್ಯೆ ವಿಶೇಷ ಪೂಜೆ; ಸಹಸ್ರಾರು ಭಕ್ತರ ಭಾಗಿ
- ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲು ಯುಜಿಸಿ ಗಮನಹರಿಸಬೇಕಿದೆ: ಡಾ.ಜಿ.ಪರಮೇಶ್ವರ್
- ತುಮಕೂರು: ಜುಲೈ 15ರಿಂದ ಉಚಿತ ಯೋಗ ತರಬೇತಿ, ತರಗತಿಗಳು ಆರಂಭ
Author: admin
ಕಾಡ್ಗಿಚ್ಚೆಂಬ ಕೆಂಬೂತವನ್ನು ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ದೂರ ಸಂವೇದಿ ತಂತ್ರಜ್ಞಾನವನ್ನು ಮತ್ತೊಷ್ಟು ಅಭಿವೃದ್ಧಿ ಪಡಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಇತ್ತೀಚೆಗೆ ಜಾಗತಿಕ ತಾಪಮಾನದಿಂದಾಗಿ ಹೆಚ್ಚುತ್ತಿರುವ ಕಾಡ್ಡಿಚ್ಚು ಲೆಕ್ಕವಿಲ್ಲದಷ್ಟು ಅರಣ್ಯ ಪ್ರದೇಶವನ್ನು ದಹಿಸುತ್ತಿದೆ. ಕಾಡ್ಗಿಚ್ಚಿಗೆ ಬ್ರೇಕ್ ಹಾಕಲು ಅರಣ್ಯ ಇಲಾಖೆ ಅಗ್ನಿವೀರರನ್ನು ಹಾಗೂ ಡ್ರೋನ್ ಕ್ಯಾಮೆರಾಗಳನ್ನು ಅಳವಡಿಸಿದರೂ ಪ್ರಯೋಜನವಾಗುತ್ತಿಲ್ಲ. ಈ ಸಮಸ್ಯೆಯನ್ನು ಹತೋಟಿಗೆ ತರುವಲ್ಲಿ ದೂರ ಸಂವೇದಿ ತಂತ್ರಜ್ಞಾನವು ಸಹಕಾರಿಯಾಗಲಿದೆ. 2023 ರಲ್ಲಿ ಕೆನಡಾ ದೇಶವು ಅತಿ ಹೆಚ್ಚು ಕಾಡ್ಗಿಚ್ಚಿಗೆ ತುತ್ತಾಗಿರುವ ದೇಶವಾಗಿದೆ. ಸುಮಾರು18 ಮಿಲಿಯನ್ ಹೆಕ್ಟೇರ್ ಪ್ರದೇಶ ನಾಶವಾಗಿದೆ. ಎನ್.ಸಿ.ಇ.ಐ ವರದಿಯ ಅನುಸಾರ 2023 ರ ಸಾಲಿನಲ್ಲಿ ವಿಶ್ವದಾದ್ಯಂತ ಸುಮಾರು 55,571 ಸ್ಥಳಗಳಲ್ಲಿ ಕಾಡ್ಗಿಚ್ಚು ಸಂಭವಿಸಿದ್ದು, ಆ ಪೈಕಿ 2,633,636 ಎಕರೆಯಷ್ಟು ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಇನ್ನೂ ಕರ್ನಾಟಕವೊಂದರಲ್ಲೇ ಸುಮಾರು 3793.13 SQ ಕಿಲೋಮೀಟರ್ ನಷ್ಟು ಅರಣ್ಯ ಪ್ರದೇಶ ನಾಶವಾಗಿದೆ. ಇದರಿಂದ ಸುಮಾರು 2170 ಮೆಗಾಟನ್ ನಷ್ಟು ಇಂಗಾಲ ಹೊರಸುಸುವಿಕೆ ಉಂಟಾಗಿದ್ದು, ಆ ಪೈಕಿ ಶೇ. 22ರಷ್ಟು ಕೆನಡಾದಲ್ಲಿ ಸಂಭವಿಸಿದ…
ತುಮಕೂರು: ಎನ್.ಹೆಚ್.ಎಂ. ಕಾರ್ಯಕ್ರಮದಡಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಮೂವರನ್ನು ಕರ್ತವ್ಯ ಲೋಪದ ಮೇಲೆ ಕರ್ತವ್ಯದಿಂದ ವಜಾಗೊಳಿಸಲಾಗಿದೆ. ಮೂವರು ರೋಗಿಗಳಾದ ಅನಿತಾ, ಅಂಜಲಿ, ನರಸಮ್ಮ ಮೃತಪಟ್ಟಿದ್ದರು. ರೋಗಿಗಳ ಮರಣಕ್ಕೆ ಸಂಬಂಧಿಸಿದಂತೆ ದಿ:24-02-2024 ರಂದು ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣಾಧಿಕಾರಿಗಳು ತುಮಕೂರು ಮತ್ತು ತನಿಖಾ ತಂಡ ಇವರು ಇಲ್ಲಿ ಖುದ್ದು ಭೇಟಿ ನೀಡಿ ಪರಿಶೀಲಿಸಿದೆ. ಶಸ್ತ್ರಚಿಕಿತ್ಸೆ ಮಾಡಿಕೊಂಡ ರೋಗಿಗಳಲ್ಲಿ ಸೋಂಕು ಹರಡಿಡುವ ಚಿಹ್ನೆಗಳು ಕಂಡುಬಂದಿದ್ದು ಮತ್ತು ಶಸ್ತ್ರಚಿಕಿತ್ಸಾ ಪ್ರಕ್ರಿಯೆಯಲ್ಲಿ ಲೋಪಕಂಡುಬಂದಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಸಾಮಾನ್ಯವಾಗಿ ಈ ರೀತಿ ಸೋಂಕು ಶಸ್ತ್ರಚಿಕಿತ್ಸಾ ಕೊಠಡಿ ಧೂಮಿಕರಣ ಮಾಡದೇ ಇದ್ದಾಗ ಹಾಗೂ ಶಸ್ತ್ರಚಿಕಿತ್ಸಾ ಕೊಠಡಿಯ ಸಲಕರಣೆಗಳನ್ನು AUTO CLAVE ಮಾಡದೇ ಇದ್ದ ಸಂಧರ್ಬದಲ್ಲಿ ಈ ರೀತಿಯ ಸೋಂಕು ಹರಡುವ ಸಾಧ್ಯತೆ ಇದ್ದು, ಈ ಕಾರಣದಿಂದ ಮೂರು ಮರಣಕ್ಕೆ ಕಾರಣವಾಗಿರುವುದು ಕಂಡು ಬಂದಿರುತ್ತದೆ. ಆದ್ದರಿಂದ ಜಿಲ್ಲಾ ಆರೋಗ್ಯ ಸಂಘದ ಕರಾರು ಒಪ್ಪಂದದ ಪ್ರಕಾರ ಕರ್ತವ್ಯ ಲೋಪ ಹಾಗೂ ಕರ್ತವ್ಯ ನಿರ್ಲಕ್ಷತನ, ಬೇಜವಬ್ದಾರಿತನ ತೋರಿದ ಹಿನ್ನಲೆಯಲ್ಲಿ…
ರಾಜ್ಯದಲ್ಲಿ ಬಿಸಿಲಿನ ಝಳಕ್ಕೆ ನಲುಗಿ ಹೋಗುತ್ತಿರುವ ಜನತೆಗೆ ಮಳೆರಾಯ ಸಿಹಿ ಸುದ್ದಿ ನೀಡಿದ್ದಾನೆ. ಮಾರ್ಚ್ ನಲ್ಲಿ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲೆ, ಕೊಡಗು, ಮೈಸೂರು, ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ಹಲವು ಭಾಗಗಳಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದು ರಾಜ್ಯದಲ್ಲಿ ಈ ವರ್ಷದ ಮೊದಲ ಮಳೆಯಾಗಲಿದ್ದು ಬಿಸಿಲಿನ ಬೇಗೆಯಿಂದ ಮುಕ್ತಿ ನೀಡಲಿದೆ. ಇನ್ನೂ, ಚಿತ್ರದುರ್ಗ, ಶಿವಮೊಗ್ಗ, ತುಮಕೂರು, ಬೆಂಗಳೂರು ಗ್ರಾಮಾಂತರಗಳಲ್ಲೂ ಮುಂಬರುವ ತಿಂಗಳ ಮೊದಲ ವಾರದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಬೆಳಗಾವಿ ಗ್ರಾಮೀಣ ಕ್ಷೇತ್ರದ ತುಮ್ಮರಗುದ್ದಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಹನುಮಾನ ಮಂದಿರವನ್ನು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೋಮವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮಸ್ಥರೆಲ್ಲ ಮುಂದಾಗಿ ಹನುಮಾನ್ ಗುಡಿ ಕಟ್ಟಬೇಕೆಂದು ನಿರ್ಧರಿಸಿದಾಗ ನನ್ನಿಂದ ಸಾಧ್ಯವಾದ ನೆರವು ನೀಡಿದೆ. ಅದಕ್ಕಿಂತ ಹೆಚ್ಚಾಗಿ ನೀವೆಲ್ಲ ಬಹಳಷ್ಟು ಶ್ರಮ ಪಟ್ಟು ಭಕ್ತಿಯಿಂದ ಈ ಮಂದಿರವನ್ನು ಸುಂದರವಾಗಿ ನಿರ್ಮಾಣ ಮಾಡಿದ್ದೀರಿ. ಗ್ರಾಮದಲ್ಲಿ ಅದ್ದೂರಿಯಿಂದ ನಡೆಯುತ್ತಿರುವ ಮಂದಿರದ ಉದ್ಘಾಟನೆಯ ಕಾರ್ಯಕ್ರಮ ಮನಸ್ಸಿಗೆ ಖುಷಿ ತಂದಿದೆ. ದೇವರ ಆಶೀರ್ವಾದ ನನಗೆ, ನಿಮಗೆ ಎಲ್ಲರಿಗೂ ಸಿಕ್ಕಿದೆ. ನಾನು ರಾಜ್ಯದಲ್ಲಿ ಮಂತ್ರಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಗ್ರಾಮಕ್ಕೆ ಇನ್ನಷ್ಟು ಒಳ್ಳೆಯದಾಗಲಿದೆ ಎಂದು ಹೇಳಿದರು. ಗ್ರಾಮೀಣ ಕ್ಷೇತ್ರಾದ್ಯಂತ ನೂರಾರು ದೇವಸ್ಥಾನಗಳನ್ನು ಕಳೆದ 5 ವರ್ಷದಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ ದೇವರ ಹೆಸರಿನಲ್ಲಿ ನಾನೆಂದೂ ರಾಜಕಾರಣ ಮಾಡುವುದಿಲ್ಲ, ದೇವರು, ಭಕ್ತಿ ಇವೆಲ್ಲ ನಮ್ಮ ಮನಸ್ಸಿನಲ್ಲಿದೆ. ಜನರು ನನ್ನ ಜೊತೆಗಿದ್ದಾರೆ, ದೇವರ ಆಶಿರ್ವಾದವಿದೆ. ಹಾಗಾಗಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ…
ಬೆಳಗಾವಿ ಗ್ರಾಮೀಣ ಕ್ಷೇತ್ರದ ತುಮ್ಮರಗುದ್ದಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಹನುಮಾನ ಮಂದಿರವನ್ನು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೋಮವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮಸ್ಥರೆಲ್ಲ ಮುಂದಾಗಿ ಹನುಮಾನ್ ಗುಡಿ ಕಟ್ಟಬೇಕೆಂದು ನಿರ್ಧರಿಸಿದಾಗ ನನ್ನಿಂದ ಸಾಧ್ಯವಾದ ನೆರವು ನೀಡಿದೆ. ಅದಕ್ಕಿಂತ ಹೆಚ್ಚಾಗಿ ನೀವೆಲ್ಲ ಬಹಳಷ್ಟು ಶ್ರಮ ಪಟ್ಟು ಭಕ್ತಿಯಿಂದ ಈ ಮಂದಿರವನ್ನು ಸುಂದರವಾಗಿ ನಿರ್ಮಾಣ ಮಾಡಿದ್ದೀರಿ. ಗ್ರಾಮದಲ್ಲಿ ಅದ್ದೂರಿಯಿಂದ ನಡೆಯುತ್ತಿರುವ ಮಂದಿರದ ಉದ್ಘಾಟನೆಯ ಕಾರ್ಯಕ್ರಮ ಮನಸ್ಸಿಗೆ ಖುಷಿ ತಂದಿದೆ. ದೇವರ ಆಶೀರ್ವಾದ ನನಗೆ, ನಿಮಗೆ ಎಲ್ಲರಿಗೂ ಸಿಕ್ಕಿದೆ. ನಾನು ರಾಜ್ಯದಲ್ಲಿ ಮಂತ್ರಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಗ್ರಾಮಕ್ಕೆ ಇನ್ನಷ್ಟು ಒಳ್ಳೆಯದಾಗಲಿದೆ ಎಂದು ಹೇಳಿದರು. ಗ್ರಾಮೀಣ ಕ್ಷೇತ್ರಾದ್ಯಂತ ನೂರಾರು ದೇವಸ್ಥಾನಗಳನ್ನು ಕಳೆದ 5 ವರ್ಷದಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ ದೇವರ ಹೆಸರಿನಲ್ಲಿ ನಾನೆಂದೂ ರಾಜಕಾರಣ ಮಾಡುವುದಿಲ್ಲ, ದೇವರು, ಭಕ್ತಿ ಇವೆಲ್ಲ ನಮ್ಮ ಮನಸ್ಸಿನಲ್ಲಿದೆ. ಜನರು ನನ್ನ ಜೊತೆಗಿದ್ದಾರೆ, ದೇವರ ಆಶಿರ್ವಾದವಿದೆ. ಹಾಗಾಗಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ…
ಹೆಂಡ್ತಿ ಸೆಲೆಕ್ಷನ್ ಮಾಡೋದನ್ನು ನೋಡಿ ತಾಳ್ಮೆಯನ್ನು ಕಳ್ಕೊಂಡನೋ ಅಥವಾ ಜವಳಿ ಅಂಗಡಿಯಲ್ಲಿ ಹೆಂಡ್ತಿಗೆ ಬೇಕಾದ ಬಟ್ಟೆಗಳು ಇಲ್ಲವೆಂದೋ ಏನೋ ಒಟ್ಟಿನಲ್ಲಿ ಸೀರೆ ಅಂಗಡಿ ಸಿಬ್ಬಂದಿಗೆ ಗ್ರಾಹಕನೊಬ್ಬ ಸರಿಯಾಗಿ ಬಾರಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ತನ್ನ ಹೆಂಡತಿಗೆ ಬೇಕಾಗಿರುವ ಸೀರೆ ನಿನ್ನ ಅಂಗಡಿಯಲ್ಲಿ ಒಂದೂ ಇಟ್ಟುಕೊಂಡಿಲ್ಲ. ನೀನು ಸೀರೆ ಅಂಗಡಿಯನ್ನು ಇಟ್ಟುಕೊಂಡಿರುವುದೇ ವೇಸ್ಟ್ ಎಂಬ ಅರ್ಥದಲ್ಲಿ ಸೀರೆ ಅಂಗಡಿ ಸಿಬ್ಬಂದಿಗೆ ಗ್ರಾಹಕನೊಬ್ಬ ಏಟು ಕೊಟ್ಟಿದ್ದಾನೆ ಎನ್ನಲಾಗಿದೆ. ಬಟ್ಟೆ ಖರೀದಿ ವಿಚಾರದಲ್ಲಿ ಅಂಗಡಿಯಲ್ಲಿ ನಡೆದ ಹೊಡೆದಾಟವನ್ನು ಕೇಳಿದರೆ ನಿಮಗೆ ನಗು ಬಾರದೇ ಇರದು. ಕಾರಣ ಸಣ್ಣ ವಿಚಾರಕ್ಕೆ ದೊಡ್ಡ ಮಟ್ಟದ ಹೊಡೆದಾಟವೇ ನಡೆದುಹೋಗಿದ್ದು, ಈಗ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಉತ್ತರಕನ್ನಡ ಜಿಲ್ಲೆಯ ಶಿರಸಿಯ ಸಿಪಿ ಬಜಾರದಲ್ಲಿರುವ ಸಾಗರ ಬಟ್ಟೆ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಅಂಗಡಿಯೊಳಗೆ ನಡೆದ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಘಟನೆ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ಮಹಮ್ಮದ್ ಎಂಬಾತ ಬಟ್ಟೆ ಅಂಗಡಿಗೆ…
ಪೇಜಾವರ ಮಠದ ಭಕ್ತ, ಮುಂಬೈ ಉದ್ಯಮಿ ನಾಗೇಂದ್ರ ಆಚಾರ್ಯ-ಅರುಣಾ ಆಚಾರ್ಯ ದಂಪತಿ ಅಯೋಧ್ಯೆ ರಾಮನಿಗೆ ವಿಶಿಷ್ಟ ದೀಪಸೇವೆ ಸಲ್ಲಿಸಿದ್ದಾರೆ ಎಂದು ವರದಿ ತಿಳಿಸಿದೆ. ಬೆಳ್ಳಿಯ ಎರಡು ಬೃಹತ್ ಕಾಲುದೀಪಗಳನ್ನು ಅಯೋಧ್ಯೆಗೆ ಅರ್ಪಿಸಿದ್ದು, ಪೇಜಾವರ ಮಠದ ಶಿಷ್ಯರಾಗಿರುವ ದಂಪತಿ ರಾಮಸೇವೆ ಮಾಡುವ ಸಂಕಲ್ಪ ಮಾಡಿದ್ದು, ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳ ಮೂಲಕ ಆ ದೀಪಗಳನ್ನು ಅರ್ಪಿಸಿದ್ದಾರೆ ಎನ್ನಲಾಗಿದೆ. ಎರಡು ದೀಪಗಳು ತಲಾ ಮೂರೂವರೆ ಅಡಿ ಎತ್ತರವಿದ್ದು, ತಲಾ 13.5 ಕೆ.ಜಿ. ತೂಕವಿವೆ. ಹೀಗೆ ಕೊಡಲ್ಪಟ್ಟ ಹೊಸ ದೀಪಗಳನ್ನು ರಾಮಮಂದಿರದ ಗರ್ಭಗುಡಿಯ ಮುಂಭಾಗದಲ್ಲಿ ಪೇಜಾವರ ಸ್ವಾಮೀಜಿ ಬೆಳಗಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಮಣ್ಣಾಗಿದ್ದ ಬಟ್ಟೆಗಳನ್ನು ಧರಿಸಿ ಹಳ್ಳಿಯ ರೈತನೊಬ್ಬ ಮೆಟ್ರೋಗೆ ಟಿಕೆಟ್ ಖರೀದಿಸಿ ಬಂದಿದ್ದ. ಆದರೆ, ಈ ಬಟ್ಟೆಯಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲ ಎಂದು ರೈತನಿಗೆ ಅವಮಾನ ಮಾಡಿ ಪ್ರಯಾಣಕ್ಕೆ ಅನುಮತಿ ನಿರಾಕರಿಸಿದ ಘಟನೆ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ನಡೆದಿದೆ. ಆ ಬಳಿಕ ಕೆಲವೇ ಗಂಟೆಗಳಲ್ಲಿ ಆ ಅಧಿಕಾರಿಯನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ. ಪ್ರಯಾಣಕ್ಕೆ ಸೂಕ್ತವಲ್ಲದ ಬಟ್ಟೆಗಳನ್ನು ಕಂಡು ನಮ್ಮ ಮೆಟ್ರೋ ಭದ್ರತಾ ಸಿಬಂದಿ ರೈತನನ್ನು ತಡೆದು ಪ್ರಯಾಣಿಸಲು ಅನುಮತಿ ನೀಡಲಿಲ್ಲ. ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲವನ್ನು ಉಂಟುಮಾಡಿದ ನಂತರ ಭದ್ರತಾ ಮೇಲ್ವಿಚಾರಕನನ್ನು ವಜಾಗೊಳಿಸಲಾಗಿದೆ. ಬಿಳಿ ಅಂಗಿ ಧರಿಸಿ ತಲೆಯ ಮೇಲೆ ಬಟ್ಟೆಯ ಮೂಟೆ ಹೊತ್ತು ಬಂದಿದ್ದ ರೈತನನ್ನು ರಾಜಾಜಿನಗರ ಮೆಟ್ರೋ ನಿಲ್ದಾಣದ ಭದ್ರತಾ ತಪಾಸಣಾ ಕೇಂದ್ರದ ಬಳಿ ಟಿಕೆಟ್ ಹೊಂದಿದ್ದರೂ ತಡೆದು ನಿಲ್ಲಿಸಲಾಯಿತು. ಭದ್ರತಾ ಚೆಕ್ ಪಾಯಿಂಟ್ ನಲ್ಲಿ ಲಗ್ಗೇಜ್ ಸ್ಕ್ಯಾನರ್ ಬಳಿ ಹಿಂದಿ ಮಾತನಾಡುತ್ತ ರೈತ ನಿಂತಿರುವುದು ಕಂಡುಬಂದಿದೆ. ಕಾರ್ತಿಕ್ ಸಿ ಐರಾನಿ ಎಂಬ ವ್ಯಕ್ತಿ ರೈತನ ಮೆಟ್ರೋ ಪ್ರಯಾಣವನ್ನು ತಡೆದ ಕ್ರಮದ…
ನಿಂತಿದ್ದ ಎತ್ತಿನ ಬಂಡಿಗೆ, ಬೈಕ್ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿದ್ದಾರೆ. ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಹೊಸ ದರೋಜಿ ಗ್ರಾಮದ ಬಳಿ ಅಪಘಾತ ನಡೆದಿದೆ. ಒಂದೇ ಬೈಕ್‌ನಲ್ಲಿ ಐದು ಜನರು ಪ್ರಯಾಣಿಸ್ತಿದ್ದರು ಎನ್ನಲಾಗಿದೆ. ಬೈಕ್ ನಲ್ಲಿದ್ದ ಜಂಬುನಾಥ್ ಹಳ್ಳಿಯ ವೆಂಕಟೇಶ, ಹೊಸಪೇಟೆಯ ಅಖಿಲಾ, ಆಶಾ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ನಾಲ್ಕು ವರ್ಷದ ಸರಸ್ವತಿ ಮತ್ತು ಜಂಬಕ್ಕ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಕುಡುತಿನಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ತುಮಕೂರು: ಪಾವಗಡ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಒಂದೇ ದಿನ ವಿವಿಧ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ 7 ಮಂದಿ ಮಹಿಳೆಯರ ಪೈಕಿ ಮೂವರು ಮಹಿಳೆಯರು ಮೃತಪಟ್ಟಿರುವ ಘಟನೆ ನಡೆದಿದೆ. ಸಂತಾನಹರಣ, ಗರ್ಭಕೋಶದ ಚಿಕಿತ್ಸೆ ಹಾಗೂ ಸಿಸರಿಯನ್ ಹೆರಿಗೆ ಒಳಗಾಗಿದ್ದ ಮೂವರು ಮಹಿಳೆಯರು. ಐದು ದಿನಗಳ ಅವಧಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಫೆಬ್ರವರಿ 22 ನೇ ತಾರೀಕು 7 ಮಂದಿಗೆ ಹೆರಿಗೆ ಸೇರಿದ್ದಂತೆ ವಿವಿಧ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಸಂತಾನ ಹರಣ ಚಿಕಿತ್ಸೆಗೆ ಒಳಗಾಗಿದ್ದ ವೀರ್ಲಗೊಂದಿ ಗ್ರಾಮದ ಮಹಿಳೆ 30 ವರ್ಷದ ಅನಿತಾ ಸಂತಾನ ಹರಣ ಚಿಕಿತ್ಸೆ ನಡೆದ ದಿನವೇ ಸಾವನ್ನಪ್ಪಿದ್ದರೆ. ರಾಜವಂತಿ ಮೂಲದ ಅಂಜಲಿಗೆ ಸಿಸರಿಯನ್ ಮೂಲಕ ಹೆರಿಗೆ ಮಾಡಿಸಲಾಗಿತ್ತು. ಹೆರಿಗೆ ಬಳಿಕ ಅಂಜಲಿ ಸ್ಥಿತಿ ಗಂಭೀರವಾಗಿತ್ತು. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಅಂಜಲಿಯನ್ನ ರವಾನಿಸಲಾಗಿತ್ತು. ಚಿಲಿತ್ಸೆ ಫಲಕಾರಿಯಾಗದೆ ಅಂಜಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಫೆಬ್ರವರಿ 24 ರಂದು ಮೃತಪಟ್ಟಿದ್ದಾರೆ. ಬ್ಯಾಡನೂರು ಗ್ರಾಮದ 40 ವರ್ಷದ ನರಸಮ್ಮಗೆ ಗರ್ಭಕೋಶದ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಶಸ್ತ್ರ ಚಿಕಿತ್ಸೆ ಬಳಿಕ ನರಸಮ್ಮ…