Author: admin

ಎಚ್.ಡಿ. ಕೋಟೆ: ಭಾರತಕ್ಕೆ ಅಂಬೇಡ್ಕರ್ ಸಂವಿಧಾನವನ್ನು ನೀಡದಿದ್ದಲ್ಲಿ ಇಂದು ನಾನು ಶಾಸಕನಾಗಲು ಆಗುತ್ತಿರಲಿಲ್ಲ, ಅದೇ ರೀತ ಟೀ ಮಾರುವ ವ್ಯಕ್ತಿಯೋರ್ವ ದೇಶದ ಪ್ರಧಾನಿಯಾಗಲೂ ಸಹ ಆಗುತ್ತಿರಲಿಲ್ಲ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು. ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ 75 ನೇ ಗಣರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಕೇವಲ ಒಂದು ಜಾತಿಗಾಗಲಿ, ಒಂದು ಧರ್ಮಕ್ಕಾಗಲಿ ಸಂವಿಧಾನವನ್ನು ನೀಡಿಲ್ಲ, ಎಲ್ಲರಿಗೂ ಸಹ ಸಮಾನವಾದ ಸಂವಿಧಾನವನ್ನು ನೀಡಿದ್ದಾರೆ ಎಂದರು. ತಾಲ್ಲೂಕಿನ ಕೆಲ ಅಧಿಕಾರಿ ವರ್ಗದವರು ಸಮಗ್ರವಾಗಿ ಗಣರಾಜ್ಯೋತ್ಸವ ಆಚರಿಸಲು ಸಹಕರಿಸಿಲ್ಲ, ಅಂತಹವರಿಗೆ ತಹಸೀಲ್ದಾರ್ ಮೂಲಕ ನೋಟಿಸ್ ಜಾರಿ ಮಾಡಲಾಗುವುದು, ಮುಂದಿನ ಭಾರಿ ಬೆಳ್ಳಿ ರಥದಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುವುದು ಎಂದು ತಿಳಿಸಿದರು. ತಹಸೀಲ್ದಾರ್ ಶ್ರೀನಿವಾಸ್ ಮಾತನಾಡಿ ಭಾರತವನ್ನು ಗಣರಾಜ್ಯವಾಗಲು ಅನೇಕ ದಾರ್ಶನಿಕರ ತ್ಯಾಗ ಬಲಿದಾನವು ಕಾರಣವಾಗಿದೆ. ಇದು ದೇಶದ ಗಣರಾಜ್ಯವಲ್ಲದೇ ದೇಶದ ಪ್ರಜೆಗಳು ಎಚ್ಚೆತ್ತುಕೊಳ್ಳುವ ದಿನ ಇದಾಗಿದೆ ಎಂದರು. ನಾವು ಈ ದೇಶದ…

Read More

ತುಮಕೂರು: ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ಎರಡು ಗುಂಪಿನ ನಡುವೆ ನಡುರಸ್ತೆಯಲ್ಲಿ ಮಾರಾಮಾರಿ ನಡೆದಿರುವ ಘಟನೆ ತಿಪಟೂರು ನಗರದಲ್ಲಿ ನಡೆದಿದೆ. ಬೀದಿ ರೌಡಿಗಳಂತೆ ಹೊಡೆದಾಡಿದ ವಿದ್ಯಾರ್ಥಿಗಳು, ಇದನ್ನು ನೋಡಿದ ಸಾರ್ವಜನಿಕರು ಭೀಕರ ಹೊಡೆದಾಟದ ದೃಶ್ಯದಿಂದ ಬೆಚ್ಚಿಬಿದ್ದಿದ್ದಾರೆ. ತಿಪಟೂರು ನಗರದ ಮುಖ್ಯ ರಸ್ತೆಯಲ್ಲೇ ಪುಡಿ ರೌಡಿಗಳಂತೆ ಹೊಡೆದಾದಿಕೊಂಡಿದ್ದರೆ. ಓದೋಕೆ ಅಂತ ಕಾಲೇಜಿಗೆ ಬಂದು ಗ್ಯಾಂಗ್ ಕಟ್ಟಿಕೊಂಡು ಬಡಿದಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳ ಪುಂಡಾಟಕ್ಕೆ ಸಾರ್ವಜನಿಕರು ಕಂಗಾಲಾಗಿದ್ದಾರೆ. ತಿಪಟೂರು ನಗರದ ಐಬಿ ಸರ್ಕಲ್ ನಿಂದ ಸರ್ಕಾರಿ ಜೂನಿಯರ್ ಕಾಲೇಜಿನ ವರೆಗೆ ಹೊಡೆದಾಡಿಕೊಂಡ ಸಾಗಿದ್ದಾರೆ. ವಿದ್ಯಾರ್ಥಿಗಳ ಬೀದಿ ಕಾಳಗಕ್ಕೆ ಬ್ರೇಕ್ ಹಾಕುವಲ್ಲಿ ಪೊಲೀಸರು ವಿಫಲರಾಗಿದ್ದು ವಿದ್ಯಾರ್ಥಿಗಳಿಗೆ ಕೆಲ ಹೊರಗಿನ ಪುಂಡರ ಸಾತ್ ನೀಡಿ ರುವುದು ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳಿಗೆ ಹೊರಗಿನಿಂದ ಗಾಂಜಾ ಸಪ್ಲೈ ಆಗುತ್ತಿದೆ ಎಂಬ ಗಂಭೀರ ಆರೋಪ ಮಾಡುತ್ತಿರುವ ಸಾರ್ವಜನಿಕರು ಇಂತಹ ವಿಷ ವರ್ತುಲದಿಂದ ವಿದ್ಯಾರ್ಥಿಗಳನ್ನು ಪಾರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಹೊಡೆದಾಡಿಕೊಂಡಿದ್ದ ಒಂದಷ್ಟು ವಿದ್ಯಾರ್ಥಿಗಳನ್ನ ಕರೆಸಿ ಬುದ್ದಿ ಹೇಳಿ ವಾಪಸ್ ಕಳಿಸಿರುವ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ.…

Read More

2003ರಲ್ಲಿ ನೀಲಿ ಚಿತ್ರದ ಮೂಲಕ ಈ ಉದ್ಯಮಕ್ಕೆ ಕಾಲಿಟ್ಟ ಜಸ್ಸಿ ಜೇನ್ಸ್ ಹಾಗೂ ಆಕೆಯ ಬಾಯ್ ಫ್ರೆಂಡ್, ನಟ ಬ್ರೆಟ್ ಹ್ಯಾಸೆನ್ಮುಲ್ಲರ್ ಮಿತಿ ಮೀರಿದ ಮಾದಕವಸ್ತು ಸೇವನೆಯಿಂದಾಗಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಈ ನೀಲಿ ಚಿತ್ರಗಳ ತಾರೆ ಹಾಗೂ ಬಾಯ್ ಫ್ರೆಂಡ್ ಮನೆಯಲ್ಲಿ ಒಟ್ಟಾಗಿ ವಾಸಿಸುತ್ತಿದ್ದು, ಜೇನ್ ಮತ್ತು ಅವರ ಬಾಯ್ ಫ್ರೆಂಡ್ ಶವಗಳನ್ನು ಒಟ್ಟಿಗೆ ಸಿಕ್ಕಿರುವುದರಿಂದ ಈ ಕುರಿತಂತೆ ತನಿಖೆ ಕೂಡ ನಡೆಯಲಾಗುತ್ತಿದೆ ಎನ್ನಲಾಗಿದೆ. ಪೊಲೀಸ್ ಇಲಾಖೆಯು ತನಿಖೆಯನ್ನು ಕೈಗೆತ್ತಿಕೊಂಡಿದೆ. ಜಸ್ಸಿ ಜೇನ್ಸ್  ಅವರು ಹವಾಯಿಯನ್ ವೆಡ್ಡಿಂಗ್ ಸಿನಿಮಾ ಸೇರಿದಂತೆ ಸಾಕಷ್ಟು ಚಿತ್ರಗಳು ಇವರ ಜನಪ್ರಿಯ ಚಿತ್ರಗಳ ಲಿಸ್ಟ್ ನಲ್ಲಿವೆ. ನೀಲಿ ಚಿತ್ರಗಳಲ್ಲಿ ನಟಿಸುವುದು ಮಾತ್ರವಲ್ಲ, ಟಿವಿ ಕಾರ್ಯಕ್ರಮಗಳಲ್ಲಿ, ಸೌಂದರ್ಯ ಸ್ಪರ್ಧೆಯಲ್ಲೂ ಇವರು ಭಾಗಿಯಾಗಿದ್ದು, ಸಾಕಷ್ಟು ಪುರಸ್ಕಾರಗಳನ್ನು ಪಡೆದಿದ್ದಾರೆ. ಅದರಲ್ಲೂ ಇವರು ನಡೆಸಿಕೊಡುತ್ತಿದ್ದ ಮಿಡ್ ನೈಟ್ ಕಾರ್ಯಕ್ರಮ ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.

Read More

ಕಲಬುರಗಿ: ನಗರದ ಹುಮನಾಬಾದ್ ರಸ್ತೆಯಲ್ಲಿ ಆಟೋ ಟಚ್​ ಆಗಿ ಬೈಕ್​ ನಿಂದ ಬಿದ್ದಿದ್ದ ಸವಾರನ ಮೇಲೆ KSRTC ಬಸ್ ಹರಿದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಸೋಮಶೇಖರ್(34) ಮೃತದುರ್ದೈವಿಯಾಗಿದ್ದಾನೆ. ಕೆಲಸ ಮುಗಿಸಿ ಹೊರಟಿದ್ದಾಗ ದುರಂತ ಸಂಭವಿಸಿದೆ. ಬೀದರ್ ಕಡೆಯಿಂದ ಕಲಬುರಗಿ ಕಡೆಗೆ KSRTC ಬಸ್ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಕಲಬುರಗಿ ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Read More

ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ‌ ಇಟಗಾ ಗ್ರಾಮದಲ್ಲಿ ಸಿಲಿಂಡರ್​ ಸ್ಫೋಟಗೊಂಡು ತಾಯಿ ಹಾಗೂ ಮೂವರು ಮಕ್ಕಳಿಗೆ ಗಂಭೀರ ಗಾಯ‌ಗಳಾಗಿರುವಂತಹ ಘಟನೆ ನಡೆದಿದೆ. ತಾಯಿ ಅಂಜನಾ ಹಾಗೂ ಮಕ್ಕಳಾದ ಕಾರ್ತಿಕ್, ಖುಷಿ ಹಾಗೂ ಕೀರ್ತನಾಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡ ತಾಯಿ‌ ಮಕ್ಕಳನ್ನು ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದೇವಸ್ಥಾನದಲ್ಲಿ ಹಚ್ಚಿದ ದೀಪದಿಂದ ಸಿಲಿಂಡರ್ ಸ್ಫೋಟಗೊಂಡಿದ್ದು, ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ದುರಂತ ಹಿನ್ನೆಲೆ ಕಲಬುರಗಿ ಖಾಸಗಿ ಆಸ್ಪತ್ರೆಗೆ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್​ ಭೇಟಿ ನೀಡಿದ್ದು, ಗಾಯಾಳುಗಳ ಆರೋಗ್ಯ ವಿಚಾರಿಸಿ, ಅಲ್ಲದೇ ಗಾಯಳುಗಳ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಆಸ್ಪತ್ರೆ ಆಡಳಿತ ಮಂಡಳಿಗೆ ಅಜಯ್ ಸಿಂಗ್ ಹೇಳಿದ್ದಾರೆ.

Read More

ಬಿಹಾರದಲ್ಲಿ ಮಹಾಮೈತ್ರಿಕೂಟವನ್ನು ಒಡೆದು ಸರ್ಕಾರ ರಚಿಸಲು ಬಿಜೆಪಿ ಮುಂದಾಗಿದೆ. ರಾಜ್ಯದಲ್ಲಿ ಇಂದು ಮತ್ತು ನಾಳೆ ನಡೆಯಲಿರುವ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಸರ್ಕಾರ ರಚನೆಗೆ ಹಲವು ಯೋಜನೆಗಳು ಗುರಿಯಾಗಿವೆ. ಮೈತ್ರಿಕೂಟದಲ್ಲಿ ಜೆಡಿಯು ಮತ್ತು ಕಾಂಗ್ರೆಸ್ ಅನ್ನು ಒಡೆದು ಮತ್ತೊಂದು ಪಾಳೆಯಕ್ಕೆ ತರುವ ಪ್ರಯತ್ನವಾಗಿದೆ. ಭಾನುವಾರ ನಡೆಯಲಿರುವ ಜೆಡಿಯು ಸಭೆಯ ನಂತರ ನಿತೀಶ್ ಕುಮಾರ್ ರಾಜೀನಾಮೆ ಸಲ್ಲಿಸುವ ಸೂಚನೆಗಳಿವೆ. ಮಹಾಮೈತ್ರಿಕೂಟದಲ್ಲಿ ನಿತೀಶ್ ಕುಮಾರ್ ಅವರಿಗೆ ಸಾಕಷ್ಟು ಪರಿಗಣನೆ ಸಿಗುತ್ತಿಲ್ಲ ಎಂಬ ವದಂತಿಗಳಿಗೆ ಜೆಡಿಯು ಶಾಸಕ ಗೋಪಾಲ್ ಮಂಡಲ್ ಪ್ರತಿಕ್ರಿಯೆ ನೀಡಿದ್ದಾರೆ. ನಿತೀಶ್ ಕುಮಾರ್ ಅವರ ಅಸ್ತಿತ್ವ ಅಪಾಯದಲ್ಲಿದೆ ಮತ್ತು ಅವರ ನಿರ್ಧಾರಗಳಿಗೆ ನಾವು ನಿಲ್ಲುತ್ತೇವೆ ಎಂದು ಗೋಪಾಲ್ ಮಂಡಲ್ ಹೇಳಿದರು. ಜೆಡಿಯುನ ಒಂದು ವಿಭಾಗವು ನಿತೀಶ್ ಕುಮಾರ್ ಅವರ ನಡೆಯನ್ನು ವಿರೋಧಿಸಿದೆ. ಇವರ ವಿರುದ್ಧ ಆರ್ ಜೆಡಿ ಕೂಡ ಪ್ರಚಾರ ಆರಂಭಿಸಿದೆ ಎಂದು ವರದಿಯಾಗಿದೆ.

Read More

ಪ್ರಾಣ ಪ್ರತಿಷ್ಠೆಯ ನಂತರ ಅಯೋಧ್ಯೆಯಲ್ಲಿ ಭಕ್ತರ ದಂಡು ಹರಿದಿದೆ. 23ರಿಂದ ದರ್ಶನಕ್ಕೆ ಜನರಿಗೆ ಪ್ರವೇಶ ಕಲ್ಪಿಸಲಾಗಿತ್ತು. ಅಯೋಧ್ಯೆ ರಾಮ ಮಂದಿರದಲ್ಲಿ ಭಕ್ತರ ನಿರಂತರ ಹರಿವನ್ನು ಗಮನದಲ್ಲಿಟ್ಟುಕೊಂಡು ಶ್ರೀ ರಾಮ ಜನ್ಮಭೂಮಿ ತೀರ್ಥ ದೇವಸ್ಥಾನ ಟ್ರಸ್ಟ್ ದರ್ಶನ ಮತ್ತು ಆರತಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಪರಿಷ್ಕೃತ ವೇಳಾಪಟ್ಟಿಯಂತೆ ಬೆಳಗ್ಗೆ 4.30ಕ್ಕೆ ಶೃಂಗಾರ ಆರತಿ, 6.30ಕ್ಕೆ ಮಂಗಳ ಆರತಿ ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದಲೇ ಭಕ್ತರು ದರ್ಶನಕ್ಕಾಗಿ ದೇವಸ್ಥಾನವನ್ನು ಪ್ರವೇಶಿಸಬಹುದು. ಲೈವ್ ಮಿಂಟ್ ಸೇರಿದಂತೆ ರಾಷ್ಟ್ರೀಯ ಮಾಧ್ಯಮಗಳು ಈ ಸುದ್ದಿಯನ್ನು ವರದಿ ಮಾಡಿದೆ. ಮಧ್ಯಾಹ್ನ ಭೋಗ್ ಆರತಿ ಹಾಗೂ ರಾತ್ರಿ 7.30ಕ್ಕೆ ಸಂಜೆ ಆರತಿ ನಡೆಯಲಿದೆ. ರಾತ್ರಿ 8 ಗಂಟೆಗೆ ಎರಡನೇ ಹಂತದ ಭೋಗ್ ಆರತಿ ನಡೆಯಲಿದೆ. ರಾತ್ರಿ 10 ಗಂಟೆಗೆ ಸಾಯನ ಆರತಿಯೊಂದಿಗೆ ಒಂದು ದಿನದ ಪೂಜೆಗಳು ಮುಕ್ತಾಯಗೊಳ್ಳಲಿವೆ. ಪ್ರಧಾನಿ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾ ಸಮಾರಂಭಗಳು ನಡೆದವು.

Read More

ಮಾಗಡಿ: ಬೈಕ್ ‌ಗಳು ಮುಖಾಮುಖಿ ಡಿಕ್ಕಿಯಾಗಿ ಓರ್ವ ಯುವಕ ಸಾವನ್ನಪ್ಪಿದ್ದರೆ, ಮತ್ತಿಬ್ಬರಿಗೆ ಗಂಭೀರ ಗಾಯವಾದ ಘಟನೆ ಮಾಗಡಿ ತಾಲೂಕಿನ ವಡ್ಡರಪಾಳ್ಯ ಬಳಿ ನಡೆದಿದೆ. ಪ್ರದೀಪ್ (18) ಯುವಕ ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತಿಬ್ಬರು ಗಾಯಾಳುಗಳನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಸ್ ಓವರ್ ಟೇಕ್ ಮಾಡಲು ಹೋದಾಗ ಬೈಕ್ ಗಳೆರಡು ಡಿಕ್ಕಿ ಹೊಡೆದುಕೊಂಡು ಈ ಅಪಘಾತ ಸಂಭವಿಸಿದೆ. ಮಾಗಡಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ತುಮಕೂರು: ಕಲೆ ಯಾರೊಬ್ಬರ ಸೊತ್ತಲ್ಲ ಹಾಗೆಯೇ ಕಲೆಯು ಸುಖಾಸುಮ್ಮನೆ ಒಲಿಯುವಂತದ್ದಲ್ಲ ಅದು ಶ್ರಮದಿಂದ ಮೈಮನಸ್ಸಿನಲ್ಲಿ ಪಡೆದುಕೊಳ್ಳುವಂತಹದ್ದು ಎಂದು ನಾಡಿನ ಹಿರಿಯ ಚಿತ್ರಕಲಾವಿದರು ಹಾಗೂ ನಿವೃತ್ತ ಶಿಕ್ಷಕರಾದ ಪಿ.ಎಸ್.ಗ್ರಾಮ್ ಪುರೋಹಿತ್ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಸರ್ಕಾರಿ ಚಿತ್ರಕಲಾ ಪದವಿ ಕಾಲೇಜಿನಲ್ಲಿ ಶುಕ್ರವಾರ 75ನೇ ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ವಿದ್ಯಾರ್ಥಿಗಳ ಸಮೂಹ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಮೊದಲು ನಾಡು, ನುಡಿ, ಭಾಷೆ, ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಬೇಕು ಹಾಗೂ ವಿನಯ, ತಾಳ್ಮೆ ಮೈಗೂಡಿಸಿಕೊಂಡು ನಡೆಯುವ ದಾರಿಯಲ್ಲಿ ಸಾಗಿದರೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ದೇಶದಲ್ಲಿ ಹೋರಾಟದ ಕಿಚ್ಚಿನಿಂದ ಹಲವು ಸಾವು-ನೋವುಗಳ ಸಂದರ್ಭಗಳು ಬಂದು ಹೋಗಿವೆ. ಇದರ ಮಧ್ಯೆಯೂ ಬಡತನದಿಂದ ಬಂದ ಹಲವರು ಇಂದು ಜ್ಞಾನಿಗಳಾಗಿ ನಮ್ಮ ಮುಂದೆ ಬಂದು ನಿಂತಿದ್ದಾರೆ. ಅಂತಹ ಮಹಾನ್ ನಾಯಕರ ಇತಿಹಾಸವನ್ನು ಅರಿತು ನಡೆದರೆ ಬದುಕಿಗೊಂದು ಅರ್ಥ ಬರುತ್ತದೆ ಎಂದು ಹೇಳಿದರು. ಕಲೆ ಎಲ್ಲಾರಿಗೂ ಒಲಿಯುವುದಿಲ್ಲ. ಅದು ಒಮ್ಮೆ ಒಲಿದರೆ ಅಷ್ಟು ಸುಲಭವಾಗಿ ಬಿಟ್ಟು ಹೋಗುವುದಿಲ್ಲ ಕಲೆ,…

Read More

ಧಾರವಾಡ: ಧಾರವಾಡ ಹೊರವಲಯದ ಮುಮ್ಮಿಗಟ್ಟಿ ಗ್ರಾಮದ ಬಳಿ ಕಾರೊಂದು ಪಲ್ಟಿಯಾಗಿ ವೈದ್ಯಕೀಯ ವಿದ್ಯಾರ್ಥಿ ಪ್ರಾಣ ಕಳೆದುಕೊಂಡಿದ್ದಾರೆ. ದೀಪಕ್ (30) ಮೃತ ವೈದ್ಯಕೀಯ ವಿದ್ಯಾರ್ಥಿ. ಮುಮ್ಮಿಗಟ್ಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದುರಸ್ತಿ ಹಿನ್ನೆಲೆಯಲ್ಲಿ ತಿರುವು ಕೊಡಲಾಗಿತ್ತು. ಆದರೆ, ತಿರುವು ನೀಡಿದ್ದು ಗೊತ್ತಾಗದೆ ಕಾರು ಹಿಂದಿನ ರಸ್ತೆಯಲ್ಲೇ ಚಲಿಸಿ ಪಲ್ಟಿಯಾಗಿದೆ. ಅಡ್ಡಾದಿಡ್ಡಿ ಚಲಿಸಿದ ಕಾರನ್ನು ಸರಿ ದಾರಿಗೆ ತರಲು ಪ್ರಯತ್ನಿಸುವ ವೇಳೆ ರಸ್ತೆಯ ಅಂಚಿಗೆ ಸಿಲುಕಿ ಪಲ್ಟಿಯಾಗಿದೆ. ಈ ವೇಳೆ ಗಂಭೀರ ಗಾಯಗೊಂಡಿದ್ದ ಎಂಬಿಬಿಎಸ್ ವಿದ್ಯಾರ್ಥಿ ದೀಪಕ್ (30) ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮತ್ತೋರ್ವ ವಿದ್ಯಾರ್ಥಿ ವಿನಯ ಎಂಬವರಿಗೆ‌ ಸಹ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More