Subscribe to Updates
Get the latest creative news from FooBar about art, design and business.
- ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲು ಯುಜಿಸಿ ಗಮನಹರಿಸಬೇಕಿದೆ: ಡಾ.ಜಿ.ಪರಮೇಶ್ವರ್
- ತುಮಕೂರು: ಜುಲೈ 15ರಿಂದ ಉಚಿತ ಯೋಗ ತರಬೇತಿ, ತರಗತಿಗಳು ಆರಂಭ
- ಅರಸೀಕೆರೆ–ಯಲಹಂಕ ಮೆಮು ರೈಲಿಗೆ ಹಸಿರು ನಿಶಾನೆ
- ಮಾದಕ ವ್ಯಸನಗಳಿಗೆ ಒಳಗಾದರೆ ನಿಮ್ಮ ಇಡೀ ಜೀವನವೇ ನಾಶವಾಗುತ್ತದೆ: ಜನಜಾಗೃತಿ ವೇದಿಕೆ ಸದಸ್ಯ ಶಿವಕುಮಾರ್
- ಪ್ರತಿ ಠಾಣೆಗಳಲ್ಲಿ 2ನೆ ಭಾನುವಾರ ಪರಿಶಿಷ್ಟರ ಸಭೆ: ಪ್ರಿಯಾಂಕ್ ಖರ್ಗೆ
- ಮೀನುಗಾರರಿಗೆ ಸೌಲಭ್ಯ ಸಹಾಯಧನ : ಅರ್ಜಿ ಆಹ್ವಾನ
- ಪಿ.ಆರ್.ಸಿ. ಕಾಯ್ದೆ ಮೂಲಕ ಅಕ್ರಮ ವಲಸಿಗರನ್ನು ಸಕ್ರಮಗೊಳಿಸಲು ಹುನ್ನಾರ: ಶಾಸಕ ಜಿ.ಬಿ.ಜ್ಯೋತಿಗಣೇಶ್ ಆಕ್ರೋಶ
- ಒಕ್ಕಲೆಬ್ಬಿಸಿದರೆ ಸಾಕೇ? ರೈತರಿಗೆ ಪರ್ಯಾಯ ಭೂಮಿ ನೀಡಿ: ಸರ್ಕಾರಕ್ಕೆ ರೈತ ಸಂಘ ಒತ್ತಾಯ
Author: admin
ಬೆಂಗಳೂರು: ಬೆಂಗಳೂರಿನ ಉದ್ಯಾನವೊಂದರ ಬಳಿ ಕಾರಿನಲ್ಲೇ ಬೆತ್ತಲಾಗಿ ಕಾಮತೃಷೆ ತೀರಿಸಿಕೊಳ್ಳಲು ಮುಂದಾಗಿ ಜೋಡಿಯೊಂದು ಎಡವಟ್ಟು ಮಾಡಿಕೊಂಡ ಘಟನೆ ನಡೆದಿದೆ. ಪಾರ್ಕ್ ನಲ್ಲಿ ಅನೇಕ ಮಂದಿ ಇದ್ದರೂ, ಅವರಿಗೆಲ್ಲ ತಾವು ಕಾಣಿಸುತ್ತಿದ್ದರೂ ಅದನ್ನು ಲೆಕ್ಕಿಸದೆ ಜೋಡಿ ಸರಸದಲ್ಲಿ ತಲ್ಲೀನರಾಗಿದ್ದಾರೆ. ಇದೇ ವೇಳೆ ಅಲ್ಲಿ ಕರ್ತವ್ಯ ನಿರತರಾಗಿದ್ದ ಸಬ್ ಇನ್ಸ್ ಪೆಕ್ಟರ್ ಮಹೇಶ್ ಆ ಜೋಡಿಯನ್ನು ಗಮನಿಸಿ, ಬುದ್ಧಿಹೇಳಲು ಕಾರಿನ ಬಳಿ ತೆರಳಿದ್ದಾರೆ. ಕಾರಿನ ಬಳಿ ಹೋಗಿ ನಂಬರ್ ಪ್ಲೇಟ್ ಪರಿಶೀಲನೆ ನಡೆಸಿದ ಸಬ್ ಇನ್ಸ್ ಪೆಕ್ಟರ್ ನನ್ನು ಕಂಡ ಜೋಡಿಯು ತಕ್ಷಣ ಎಚ್ಚೆತ್ತುಕೊಂಡು, ಯುವಕ ಏಕಾಏಕಿ ಕಾರು ಚಲಾಯಿಸಿದ್ದಾನೆ. ದಿಢೀರ್ ಕಾರು ಚಲಿಸಲು ಆರಂಭಿಸಿದ ಕಾರಣ ಸಬ್ ಇನ್ಸ್ ಪೆಕ್ಟರ್ ಮಹೇಶ್ ಬಾನೆಟ್ ಮೇಲೆ ಬಿದ್ದಿದ್ದಾರೆ. ಅವರು ಕಾರಿನ ಬಾನೆಟ್ ಹಿಡಿದುಕೊಂಡು ಒದ್ದಾಡುತ್ತಿದ್ದರೂ ಲೆಕ್ಕಿಸದ ಯುವಕ ಕಾರು ಚಲಾಯಿಸಿ, ಏಕಾಏಕಿ ಕಾರನ್ನು ರಿವರ್ಸ್ ತೆಗೆದು ಮತ್ತೆ ಮುಂದಕ್ಕೆ ಚಲಾಯಿಸಿದ್ದಾನೆ. ಪರಿಣಾಮವಾಗಿ ಕೆಳಬಿದ್ದ ಸಬ್ ಇನ್ಸ್ ಪೆಕ್ಟರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಘಟನೆಯಲ್ಲಿ ಗಂಭೀರವಾಗಿ…
ಬೆಂಗಳೂರು: ಪೌರ ಕಾರ್ಮಿಕರಿಗೆ ನೆರವಾಗುವುದಕ್ಕಾಗಿ ಬಿಬಿಎಂಪಿ ಹ್ಯಾಂಡ್ ಹೆಲ್ಡ್ ಮೆಕ್ಯಾನಿಕಲ್ ಸ್ವೀಪರ್ ಗಳನ್ನು ಅಥವಾ ಕಸ ಗುಡಿಸುವ ಯಂತ್ರಗಳನ್ನು ಖರೀದಿಸಲು ನಿರ್ಧರಿಸಿದೆ. ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ಈ ಯಂತ್ರಗಳನ್ನು ಖರೀದಿಸಲಾಗುತ್ತದೆ. ಹ್ಯಾಂಡ್ ಹೆಲ್ಡ್ ಮೆಕ್ಯಾನಿಕಲ್ ಸ್ವೀಪರ್ ಗಳನ್ನು ಖರೀದಿಸಲು ಈ ಹಿಂದೆಯೂ ಎರಡು ಬಾರಿ ಯತ್ನಿಸಲಾಗಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ವಿಫಲ ಪ್ರಯತ್ನ ನಂತರ ಇದೀಗ ಹ್ಯಾಂಡ್ ಹೆಲ್ಡ್ ಮೆಕ್ಯಾನಿಕಲ್ ಸ್ವೀಪರ್ ಗಳ ಖರೀದಿಗೆ ಕ್ರಮ ಕೈಗೊಳ್ಳುತ್ತಿದೆ.
ಅಯೋಧ್ಯೆ ರಾಮ ಮಂದಿರ ವಿಚಾರವಾಗಿ ನಟ ಅಲ್ಲು ಅರ್ಜುನ್ ಪ್ರತಿಕ್ರಿಯೆ ನೀಡಿದ್ದಾರೆ. ಶ್ರೀರಾಮನ ಆಗಮನದಿಂದ ಭಾರತದಲ್ಲಿ ಹೊಸ ಯುಗ ಆರಂಭವಾಗಿದೆ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ. ಮುಂಬರುವ ವರ್ಷಗಳಲ್ಲಿ ಅಯೋಧ್ಯೆ ವಿಶ್ವದ ಅತಿದೊಡ್ಡ ಯಾತ್ರಾ ಸ್ಥಳವಾಗಲಿದೆ ಎಂದು ಅಲ್ಲು ಅರ್ಜುನ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ. ಭಾರತಕ್ಕೆ ಎಂತಹ ದಿನ. ರಾಮ ಮಂದಿರ ಉದ್ಘಾಟನೆಯ ಬಗ್ಗೆ ನಾನು ತುಂಬಾ ಭಾವುಕನಾಗಿದ್ದೇನೆ. ಅವರ ಆಗಮನದೊಂದಿಗೆ ಭಾರತದಲ್ಲಿ ಹೊಸ ಯುಗ ಪ್ರಾರಂಭವಾಯಿತು. ಮುಂಬರುವ ವರ್ಷಗಳಲ್ಲಿ ನಾನು ಅಯೋಧ್ಯೆಯನ್ನು ವಿಶ್ವದ ಅತಿದೊಡ್ಡ ತೀರ್ಥಯಾತ್ರೆಯಾಗಿ ನೋಡಲು ಬಯಸುತ್ತೇನೆ. ಜೈ ಶ್ರೀರಾಮ್ ಜೈ ಹಿಂದ್” ಎಂದು ಅಲ್ಲು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಪ್ರತಿ ವರ್ಷ ಅಯೋಧ್ಯೆಗೆ ಖಂಡಿತ ಬರುತ್ತೇನೆ. ನನಗೆ ಅದು ಆಧ್ಯಾತ್ಮಿಕತೆ, ನಂಬಿಕೆ ರಾಜಕೀಯವಲ್ಲ. ಪ್ರತಿಯೊಬ್ಬರೂ ವಿಭಿನ್ನ ಅಭಿಪ್ರಾಯಗಳನ್ನು ಹೊಂದಬಹುದು ಮತ್ತು ಅವರು ಎಲ್ಲಾ ಸಮಯದಲ್ಲೂ ಹೊಂದಿಕೆಯಾಗುವುದಿಲ್ಲ ಎಂದು ಅವರು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಟಿಎಂಸಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಟಿಎಂಸಿ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿಕೆ ನೀಡಿರುವ ವಿಚಾರ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ವಿಪಕ್ಷ ನಾಯಕ ಆರ್. ಅಶೋಕ್, ಮೈತ್ರಿಕೂಟ ಒಂದಾಗುವ ಗ್ಯಾರಂಟಿ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಈ ಕುರಿತು ಮಾತನಾಡಿದ ಆರ್. ಅಶೋಕ್, ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ಎಷ್ಟು ಸ್ಥಾನಗಳನ್ನು ಗೆಲ್ಲುತ್ತದೆಯೋ ಅಷ್ಟು ಸ್ಥಾನ ನಾನು ಪಶ್ಚಿಮ ಬಂಗಾಳದಲ್ಲಿ ಗೆಲ್ಲುತ್ತೇನೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ನಿಜ ಸ್ಥಿತಿಯೂ ಹಾಗೆ ಇದೆ. ಸಂಸತ್ ನಲ್ಲಿ ವಿಪಕ್ಷ ನಾಯಕನಾಗುವ ಯೋಗ್ಯತೆ ಕಾಂಗ್ರೆಸ್ ಪಕ್ಷಕ್ಕಿಲ್ಲ ಎಂದು ಟೀಕಿಸಿದರು. ಬಿಜೆಪಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಪಸ್ ಆಗುತ್ತಾರೆಯೇ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಆರ್. ಅಶೋಕ್, ಶೆಟ್ಟರ್ ಮತ್ತೆ ಬಿಜೆಪಿಗೆ ಬರುವ ಬಗ್ಗೆ ವರಿಷ್ಠರು ನಿರ್ಧರಿಸುತ್ತಾರೆ. ಪಾಪ ಶೆಟ್ಟರ್ ಕಾಂಗ್ರೆಸ್ ಪಕ್ಷದಲ್ಲಿ ಮೂಲೆಗುಂಪಾಗಿದ್ದಾರೆ. ಸರ್ಕಾರ ಬಂದು 8 ತಿಂಗಳಾದ್ರೂ ಅಧಿಕಾರವನ್ನ ಕೊಟ್ಟಿಲ್ಲ. ಅಲ್ಲಿಗೆ ಹೋಗಿ ನಮ್ಮ…
ತುಮಕೂರು: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಅಪರಾಧಿಗೆ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ.(ಪೋಕ್ಸೋ) 2 ವರ್ಷ 4 ತಿಂಗಳ ಜೈಲು ಶಿಕ್ಷೆ ಹಾಗೂ 15,000 ದಂಡ ವಿಧಿಸಿದೆ. 9 ವರ್ಷ ವಯಸ್ಸಿನ ನೊಂದ ಬಾಲಕಿಗೆ 10—11—2021ರಂದು ಶಾಲೆ ಮುಗಿಸಿ ಮನೆಗೆ ನಡೆದುಕೊಂಡು ಬರುತ್ತಿದ್ದ ವೇಳೆ 45 ವರ್ಷ ವಯಸ್ಸಿನ ಸಯದ್ ನೂರುಲ್ಲಾ ಎಂಬಾತ ಗಾಂಧಿನಗರ ರೈಲ್ವೇ ಟ್ರಾಕ್ ಬಳಿಯಲ್ಲಿ ತಡೆದಿದ್ದು, ಏಕಾಏಕಿ ಬಾಲಕಿಯನ್ನು ಪೊದೆಯೊಳಗೆ ಎಳೆದೊಯ್ದು, ಹಲ್ಲೆ ನಡೆಸಿ ಲೈಂಗಿಕ ದೌರ್ಜನ್ಯ ಎಸಗಿದ್ದು, ನೊಂದ ಬಾಲಕಿ ಕೂಗಿಕೊಂಡಾಗ ಆಕೆಯನ್ನು ಸ್ಥಳೀಯರು ರಕ್ಷಿಸಿದ್ದರು. ಈ ಪ್ರಕರಣದ ತನಿಖಾಧಿಕಾರಿಗಳಾದ ಮಂಗಳಮ್ಮನವರು ಘನ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ.(ಪೋಕ್ಸೋ) ಈ ಪ್ರಕರಣವನ್ನು ವಿಚಾರಣೆ ನಡೆಸಿದ ವೇಳೆ, ವಿಚಾರಣೆ ಮಾಡಿದ ಸಾಕ್ಷಿಗಳಿಂದ ಸೈಯದ್ ನೂರುಲ್ಲ ವಿರುದ್ಧ ಇದ್ದ ಪೋಕ್ಸೋ ಕಾಯ್ದೆಯಡಿಯ ಆರೋಪ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಅಪರಾಧಿಗೆ 2 ವರ್ಷ 4 ತಿಂಗಳು ಜೈಲು…
ಗುಜರಾತ್: ಗುಜರಾತ್ ನ ಅಮ್ರೇಲಿ ಜಿಲ್ಲೆಯ ಕಾಡಿನಲ್ಲಿ ರೈಲಿಗೆ ಸಿಲುಕಿದ ಸಿಂಹಿಣಿ ಗಂಭೀರವಾಗಿ ಗಾಯಗೊಂಡು ಇಂದು ಚಿಕಿತ್ಸೆ ವೇಳೆ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜನವರಿ 20 ರಂದು ಗುಜರಾತ್ ನ ಅಮ್ರೇಲಿ ಜಿಲ್ಲೆಯ ರಾಜುಲಾ ತಾಲೂಕಿನಲ್ಲಿ ಪ್ಯಾಸೆಂಜರ್ ರೈಲಿಗೆ ಡಿಕ್ಕಿ ಹೊಡೆದು ಸಿಂಹಿಣಿ ಗಂಭೀರ ಗಾಯಗೊಂಡಿತ್ತು. ಇದನ್ನು ಹೆಚ್ಚಿನ ಚಿಕಿತ್ಸೆಗಾಗಿ ಜುನಾಗಢ್ ಜಿಲ್ಲೆಯ ಶಕ್ಕರ್ ಬಾಗ್ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದೆ.
ಶೀಘ್ರದಲ್ಲೇ ಪ್ರಧಾನಿ ಮೋದಿಯವರ ಬಯೋಪಿಕ್ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ. ಈ ಚಿತ್ರವು ‘ವಿಶ್ವನೇತ’ ಶೀರ್ಷಿಕೆಯೊಂದಿಗೆ ಎಲ್ಲಾ ಭಾರತೀಯ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಯುವ ಪ್ರತಿಭಾವಂತ ಸಿಎಚ್ ಕ್ರಾಂತಿ ಕುಮಾರ್ ನಿರ್ದೇಶಿಸಲಿದ್ದಾರೆ. ವಂದೇ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಬ್ಯಾನರ್ ಅಡಿಯಲ್ಲಿ ಕಾಶಿರೆಡ್ಡಿ ಶರತ್ ರೆಡ್ಡಿ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಚಾಯ್ ವಾಲಾ ಮಟ್ಟದಿಂದ ‘ವಿಶ್ವ ನಾಯಕ’ನಾಗಿ ಬೆಳೆದಿರುವ ಅವರ ಮಹಾಪ್ರಸ್ಥಾನಕ್ಕೆ ದೃಶ್ಯ ರೂಪ ನೀಡಲಿದ್ದಾರೆ ಎಂದು ಚಿತ್ರತಂಡ ಹೇಳಿದೆ.
ಕಾಂಗ್ರೆಸ್ ನ ಭಾರತ ಐಕ್ಯತಾ ನ್ಯಾಯ ಯಾತ್ರೆ ಬಿಜೆಪಿಗರ ನಿದ್ದೆಗೆಡಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ದೇಶದ ಜನರನ್ನು ಒಗ್ಗೂಡಿಸಲು ನಮ್ಮ ಹಮ್ಮೆಯ ನಾಯಕ ರಾಹುಲ್ ಗಾಂಧಿ ಅವರು ಕೈಗೊಂಡಿರುವ ಭಾರತ ಐಕ್ಯತಾ ನ್ಯಾಯ ಯಾತ್ರೆಗೆ ವ್ಯಕ್ತವಾಗುತ್ತಿರುವ ಅಭೂತಪೂರ್ವ ಬೆಂಬಲವು ಬಿಜೆಪಿಗರ ನಿದ್ದೆಗೆಡಿಸಿದೆ. ಈ ಕಾರಣದಿಂದಲೇ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ನ್ಯಾಯಯಾತ್ರೆಗೆ ಅಡ್ಡಿಪಡಿಸಲಾಗುತ್ತಿದೆ ಎಂದು ಕಿಡಿ ಕಾರಿದರು. ಕಾಂಗ್ರೆಸ್ ಯಾತ್ರೆಯಲ್ಲಿ ಭಾಗಿಯಾಗದಂತೆ ಅಸ್ಸಾಂ ಸರ್ಕಾರ ಜನರಿಗೆ ಬೆದರಿಕೆ ಒಡ್ಡುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿದ್ದೇವೋ ಅಥವಾ ಸರ್ವಾಧಿಕಾರಿ ರಾಷ್ಟ್ರದಲ್ಲಿದ್ದೇವೆಯೋ ಎಂಬ ಭಾವನೆ ಜನಸಾಮಾನ್ಯರಲ್ಲಿ ಮೂಡುತ್ತಿದೆ. ರಾಜಕೀಯ ಸ್ವಾರ್ಥಕ್ಕಾಗಿ ದೇವರ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಕಿಡಿ ಕಾರಿದರು.
ಮೊಟ್ಟೆ ಸೇವಿಸುವುದರಿಂದ ನಿಮಗೆ ಸಿಗಲಿದೆ ಉತ್ತಮ ಆರೋಗ್ಯ: ಮೊಟ್ಟೆಯಲ್ಲಿ ಸಮೃದ್ಧ ಪೋಷಕಾಂಶಗಳಿವೆ. ಇವುಗಳು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇದು ಮೆದುಳಿನ ಕಾರ್ಯವನ್ನು ಬೆಂಬಲಿಸುತ್ತವೆ. ಮೊಟ್ಟೆಯು ಪ್ರೊಟೀನ್‌ನ ಉತ್ತಮ ಮೂಲವಾಗಿದೆ. ಇದು ಸ್ನಾಯುಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ಚಳಿಗಾಲದಲ್ಲಿ ಮೊಟ್ಟೆ ಸೇವಿಸಿದರೆ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ. ಹೃದಯದ ಆರೋಗ್ಯಕ್ಕೆ ಮೊಟ್ಟೆ ಸೇವನೆ ಬಹಳ ಉಪಯುಕ್ತವಾಗಿದೆ. ಮೊಟ್ಟೆ ಸೇವನೆಯು ಕಣ್ಣಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಸೋಯಾದಲ್ಲಿವೆ ಹಲವಾರು ಆರೋಗ್ಯ ಪ್ರಯೋಜನಗಳು: ಸೋಯಾ ಹೆಚ್ಚಿನ ಪ್ರೋಟೀನ್ ಸಸ್ಯ ಆಧಾರಿತ ಆಹಾರವಾಗಿದೆ. ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದು ಹೃದಯದ ಆರೋಗ್ಯಕ್ಕೆ ಉತ್ತಮವಾಗಿದೆ. ಬಲವಾದ ಮತ್ತು ಆರೋಗ್ಯಕರ ಮೂಳೆಗಳನ್ನು ಕಾಪಾಡಿಕೊಳ್ಳಲು ಸಹಾಯಕವಾಗಿದೆ. ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ. ರಕ್ತಹೀನತೆಯನ್ನು ತಡೆಗಟ್ಟುವಲ್ಲಿ ಸಹಾಯಕ. ದೇಹಕ್ಕೆ ಅಪಾಯಕಾರಿ ಈ ಆಹಾರಗಳು: ಸಕ್ಕರೆಯನ್ನು ಸೇರಿಸಿದ ಅನೇಕ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಪಾನೀಯಗಳು, ಮಿಠಾಯಿಗಳು, ಕೇಕ್ ಗಳು ಮತ್ತು ಚಾಕೆಲೆಟ್ಸ್ ಅಧಿಕ ಪ್ರಮಾಣದ ಸಕ್ಕರೆಯನ್ನು ಹೊಂದಿರುತ್ತವೆ. ಹೆಚ್ಚು ಸಕ್ಕರೆ…
ಬೆಂಗಳೂರು: ನಾಲ್ಕು ವರ್ಷದ ಬಾಲಕಿ ಮೇಲೆ ಅಪಾಯಕಾರಿ ಮತ್ತು ಆಕ್ರಮಣಕಾರಿ ಎಂದೇ ಹೇಳಲಾದ ಅಮೇರಿಕನ್ ಪಿಟ್ ಬುಲ್ ಜಾತಿಗೆ ಸೇರಿದ ಸಾಕು ನಾಯಿಯೊಂದು ದಾಳಿ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಳೆದ ಜನವರಿ 13ರಂದು ಬೆಂಗಳೂರಿನ ಸಂಜಯ ನಗರದಲ್ಲಿ ಈ ಘಟನೆ ನಡೆದಿದ್ದು, ಬಾಲಕಿ ಗಂಭೀರವಾಗಿ ಗಾಯಗೊಂಡರೂ ಅಪಾಯದಿಂದ ಪಾರಾಗಿದ್ದಾಳೆ. ವ್ಯಕ್ತಿಯೊಬ್ಬರು ಆಕ್ರಮಣಕಾರಿ ಪ್ರವೃತ್ತಿ ಹೊಂದಿರುವ ಪಿಟ್ ಬುಲ್ ತಳಿಯ ನಾಯಿಯನ್ನು ಸಾಕಿದ್ದರು. ಆ ಮನೆಗೆ ನೇಪಾಳ ಮೂಲದ ಸುನಿಲ್ ಎಂಬಾತ ಕೆಲಸಕ್ಕೆ ಹೋಗುತ್ತಿದ್ದ. ಅದೊಂದು ದಿನ ಆತ ತನ್ನ ನಾಲ್ಕು ವರ್ಷದ ಮಗಳು ಸಾನಿಯಾಳನ್ನು ಕೂಡಾ ಜತೆಗೆ ಕರೆದುಕೊಂಡು ಹೋಗಿದ್ದ. ಹಾಗೆ ಮನೆಗೆ ಹೋಗಿದ್ದ ವೇಳೆ ಡೇಂಜರಸ್ ಪಿಟ್‌ಬುಲ್ ಆ ಪುಟ್ಟ ಬಾಲಕಿಯ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಸುಮ್ಮನೆ ಇದ್ದ ಮಗುವಿನ ಮೇಲೆ ಎರಗಿದ ಆಕೆಯ ದೇಹದಲ್ಲಿ ಹಲವು ಕಡೆ ಈ ನಾಯಿ ಗಾಯ ಮಾಡಿದೆ. ಸುನಿಲ್ ಮತ್ತು ಮನೆಯವರು ಸೇರಿ ಕೂಡಲೇ ಸಾನಿಯಾಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರಾದರೂ ಈ…