Subscribe to Updates
Get the latest creative news from FooBar about art, design and business.
- ಐಸಿಡಿಎಸ್ ಸುವರ್ಣ ಮಹೋತ್ಸವ: ಅರಮನೆ ಮೈದಾನದಲ್ಲಿ ಉದ್ಘಾಟನೆ
- LIVE | ICDS ಸುವರ್ಣ ಮಹೋತ್ಸವ: ಬೆಂಗಳೂರು ಅರಮನೆ ಮೈದಾನ
- ತುಮಕೂರು ಉಪ ವಿಭಾಗಾಧಿಕಾರಿ ಮೇಲೆ ಸುಳ್ಳು ಆರೋಪ: ತುಮಕೂರು ಜಿಲ್ಲಾ ನಾಗರಿಕರ ಹಿತರಕ್ಷಣಾ ಸಮಿತಿ ಖಂಡನೆ
- ಕಲಾವಿದರಿಗೆ ಧನ ಸಹಾಯಕ್ಕಾಗಿ ಆನ್ ಲೈನ್ ಅರ್ಜಿ ಆಹ್ವಾನ
- ಆಗ್ನೆಯ ಪದವೀಧರರ ಕ್ಷೇತ್ರದ ಚುನಾವಣೆ: ಮತದಾರರ ಪಟ್ಟಿಗೆ ನೋಂದಾಯಿಸಲು ಡಿ.10 ಕೊನೆಯ ದಿನ
- ನ.28 ರಂದು ಪತ್ರಿಕಾ ವಿತರಕರ ಕ್ರೀಡಾಕೂಟದ ಬಹುಮಾನ ವಿತರಣೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ
- ಡಿ.6–7ರಂದು ಶ್ರೀ ಅಯ್ಯಪ್ಪಸ್ವಾಮಿಯ ಚರಬಿಂಬ ಪ್ರತಿಷ್ಠಾಪನಾ ಮಹೋತ್ಸವ
- ಮಹಿಳೆಗೆ ಚಾಕು ತೋರಿಸಿ ಚಿನ್ನದ ಸರ ಕಳವು!
Author: admin
ಬೆಂಗಳೂರು: ಹೆಚ್.ಡಿ. ಕುಮಾರಸ್ವಾಮಿ ಅವರ ಸಕಲ ವಿದ್ಯೆಗಳೂ ನನಗೆ ಗೊತ್ತಿತ್ತು. ಆದರೆ, ಅವರು ಪ್ಯಾಂಟ್ ಒಳಗೆ ಆರ್ ಎಸ್ ಎಸ್ ಚೆಡ್ಡಿ ಹಾಕಿದ್ದು ಗೊತ್ತೇ ಆಗಲಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ವಾಗ್ದಾಳಿ ನಡೆಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ನಾನಾ ಜೆಡಿಎಸ್ ಮುಖಂಡರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಜೆಡಿಎಸ್ ನಿಂದ ಹೊರಬರುತ್ತಿರುವ ಪ್ರಮುಖರನ್ನು ನಗರದ ಅರಮನೆ ಮೈದಾನದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಿ ಕಾಂಗ್ರೆಸ್ ಗೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು. ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿಯಿಂದ ಜಾತ್ಯತೀತ ಮನೋಭಾವದ ನೂರಾರು ನಾಯಕರು ಬೇಸರಗೊಂಡಿದ್ದು, ಕಾಂಗ್ರೆಸ್ ಸೇರ್ಪಡೆಗಾಗಿ ನನ್ನ ಸಂಪರ್ಕದಲ್ಲಿದ್ದಾರೆ. ದೇವೇಗೌಡರು ಈಗಲೂ ಸೆಕ್ಯುಲರ್. ಅವರಿಂದ ನಮ್ಮ ಮುಸ್ಲಿಂ ಸಮಾಜಕ್ಕೆ ನ್ಯಾಯ ಸಿಕ್ಕಿದೆ ಮತ್ತು 2ನೇ ಹಂತದ ನಾಯಕರನ್ನೂ ಬೆಳೆಸಿದ್ದಾರೆ. ಆದರೆ, ಕುಮಾರಸ್ವಾಮಿ ಖಂಡಿತವಾಗಿ ಸೆಕ್ಯುಲರ್ ಅಲ್ಲ. ಮುಸ್ಲಿಂ ಸಮುದಾಯದವರು ಅನಿವಾರ್ಯವಾಗಿ ನನಗೆ ಮತಹಾಕಿದರು ಎಂದು ಅವರು ಹೇಳಿಕೊಂಡಿರುವುದು ನೋವು ತಂದಿದೆ ಎಂದರು.
ಬೀದರ್: ಜಿಲ್ಲೆಯ ಔರಾದ್ ತಾಲೂಕಿನ ವಡಗಾಂವ ಗ್ರಾಪಂ ವ್ಯಾಪ್ತಿಯ ವಾಡೇನ್ ಬಾಗ್ ತಾಂಡಕ್ಕೆ ಸೋಮವಾರ ಭೇಟಿ ನೀಡಿದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಡಾ.ಭೀಮಸೇನರಾವ ಶಿಂಧೆ, ತಾಂಡದ ಜನರ ಸಮಸ್ಯೆ ಆಲಿಸಿದರು. ತಾಂಡದಲ್ಲಿನ ಶಾಲೆ, ಅಂಗನವಾಡಿ, ರಸ್ತೆ ಸೇರಿದಂತೆ ವಿದ್ಯುತ್ ಸೌಕರ್ಯಗಳ ಕುರಿತು ತಾಂಡದ ನಿವಾಸಿಗಳಿಂದ ಮಾಹಿತಿ ಪಡೆದರು. ಈ ವೇಳೆ ಗ್ರಾಮದ ನಿವಾಸಿ ಬಾಬುರಾವ ಎನ್ನುವರು ಸಾಹೇಬ್ರೆ ನಮಗೆ ರಸ್ತೆ ಮಾಡಿಸಿಕೊಡಿ ಮಕ್ಕಳು ನಿತ್ಯ ಶಾಲೆಗೆ ಹೋಗಲು ಸಮಸ್ಯೆಯಾಗುತ್ತಿದೆ ಎಂದು ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ಅವರು, ತಾಂಡಕ್ಕೆ ಹೋಗಲು ರಸ್ತೆಯಿಲ್ಲ ಎಂಬ ಬಗ್ಗೆ ಮಾಹಿತಿ ಬಂದಿದೆ. ಆದ್ದರಿಂದ ತಾಂಡಕ್ಕೆ ಭೇಟಿ ಎಲ್ಲ ರಸ್ತೆ ಸೇರಿದಂತೆ ಎಲ್ಲ ಸಮಸ್ಯೆಗಳು ವಿಚಾರಿಸಲಾಗುತ್ತಿದೆ. ಸರಕಾರಕ್ಕೆ ಪತ್ರ ಬರೆಯುವ ಮೂಲಕ ತಾಂಡಕ್ಕೆ ರಸ್ತೆ ನಿರ್ಮಾಣ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು. ಈಗಾಗಲೇ ಕಾಂಗ್ರೆಸ್ ಸರಕಾರ ಕೆಕೆಆರ್ ಡಿಬಿಯಿಂದ ನಿರೀಕ್ಷೆಗೂ ಮೀರಿ ಹಣ ನೀಡಲಿದೆ. ಈ ಹಣ ತಾಲೂಕಿನ ಅಗತ್ಯವಿರುವ ಕಡೆಯಲ್ಲಿ ಕಾಮಗಾರಿ ಮಾಡಬೇಕಿದೆ. ಜನರಿಗೆ ಸಮಸ್ಯೆ…
ಬೀದರ್: ವಿದ್ಯುತ್ ತಂತಿ ತಗುಲಿ ದಂಪತಿ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬೀದರ್ ತಾಲೂಕಿನ ಮನ್ನಳ್ಳಿ ಗ್ರಾಮದಲ್ಲಿ ಭಾನುವಾರ ಜರುಗಿದೆ ಮಲ್ಲಿಕಾರ್ಜುನ (51) ಹಾಗೂ ಶರಣಮ್ಮ (40) ಮೃತಪಟ್ಟ ರೈತ ದಂಪತಿಯಾಗಿದ್ದಾರೆ. ತಮ್ಮಹೊಲದಲ್ಲಿ ಕೃಷಿ ಕೆಲಸಕ್ಕೆಂದು ತೆರಳುವ ವೇಳೆ ವಿದ್ಯುತ್ ತಂತಿ ತಗಲಿ ಮೃತಪಟ್ಟಿದ್ದಾರೆ. ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಪರಿಸರ ಮತ್ತು ಅರಣ್ಯ ಸಚಿವ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ್ ಖಂಡ್ರೆ, ಈ ಸುದ್ದಿ ಕೇಳಿ ತುಂಬಾ ದುಃಖವಾಯಿತು. ಮೃತ ದಂಪತಿ ಆತ್ಮಕ್ಕೆ ಶಾಂತಿ ಸಿಗಲಿ, ಸಾವಿನ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬದವರಿಗೆ ದೇವರು ನೀಡಲಿ ಎಂದು ಪ್ರಾರ್ಥಿಸಿದರು. ಇಂತಹ ದುರ್ಘಟನೆಗಳು ಜಿಲ್ಲೆಯಲ್ಲಿ ಮರುಕಳಿಸದಂತೆ ಜೋತು ಬಿದ್ದಿರುವ ಮತ್ತು ಜಾಯಿಂಟ್ ಹಾಕಲಾಗಿರುವ ವಿದ್ಯುತ್ ತಂತಿಗಳ ಪರಿಶೀಲನೆ ಮಾಡಿ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಚೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮೃತ ರೈತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಚೆಸ್ಕಾಂ ಮತ್ತು ಜಿಲ್ಲಾಡಳಿತಕ್ಕೆ ಸೂಚನೆ ಕೊಟ್ಟಿದ್ದೇನೆ ಎಂದು ತಿಳಿಸಿದರು.…
ಕುಮಾರ್ ಪೆರ್ನಾಜೆ, ಪುತ್ತೂರು ನುಗ್ಗೆಕಾಯಿ ಎಂಬ ಕ್ಷಣ ನಮಗೆ ಅದರ ಔಷಧೀಯ ಗುಣಗಳು ನೆನಪಿಗೆ ಬರುತ್ತದೆ ಹಾಗೆ ನುಗ್ಗೆ ಸೊಪ್ಪಿನಲ್ಲಿ ರಕ್ತಹೀನತೆಗೆ ಒಳ್ಳೆಯ ಔಷಧಿ ಕ್ಯಾಲ್ಸಿಯಂ ವಿಟಮಿನ್ ಎ ವಿಟಮಿನ್ ಇ ಪೊಟ್ಯಾಷಿಯಂ ಲೈಂಗಿಕ ಕಾಯಿಲೆಗಳಿಗೆ ನುಗ್ಗೇಕಾಯಿ ರಾಮಬಾಣ ನುಗ್ಗೆಕಾಯಿಯನ್ನು ತಿನ್ನುವುದರಿಂದ ಏನಾಗುತ್ತದೆ ಸಿಡುಬು ಬರುವುದಿಲ್ಲ ಮೂಳೆಗಳ ಬಲ ಹೆಚ್ಚುತ್ತದೆ ಲೈಂಗಿಕ ಶಕ್ತಿ ಹೆಚ್ಚುತ್ತದೆ ಮದುಮೇಹಿಗಳಿಗೆ ಉತ್ತಮ. ಚೋಟುದ್ದವಿದ್ದ ನುಗ್ಗೆಕಾಯಿ ಫಿಟುದ್ದ ಆಯಿತು ಹೈಬ್ರಿಡ್ ಬಂತು ಆದರೆ ಇತ್ತೀಚೆಗೆ ಮಾರುದ್ದದ ಚಿಕ್ಕ ಚಿಕ್ಕ ಗಿಡಗಳಲ್ಲಿ ಮೀಟರ್ ನುಗ್ಗೆಕಾಯಿ ಗಳು ಬಂಟ್ವಾಳ ತಾಲೂಕಿನ ಮುಡಿಪು ಸುಬ್ರಹ್ಮಣ್ಯ ಭಟ್ಟರ ಹಿತ್ತಲಲ್ಲಿ ಬೆಳೆದ ಮೀಟರ್ ನುಗ್ಗೆಕಾಯಿ ನೋಡುಗರ ಕಣ್ತುಂಬಿ ಕಣ್ ಮನಸೆಳೆಯಿತು ಕ್ಯಾಮರಾ ಕಣ್ಣಲ್ಲಿ ಸೆರೆಯಾಯಿತು. ಪ್ರಾರಂಭದಲ್ಲಿ ಮೀಟರ್ ಅಲಸಂಡೆ ಬಂತು ನಾವು ಚಿಕ್ಕದಿರುವಾಗ ತರಕಾರಿಗಳ ಬಗ್ಗೆ ತೊಂಡೆಕಾಯಿ ಬೆಂಡೆಕಾಯಿ ತೋಟದಲ್ಲಿದೆ ಎಂದು ಹಾಡಿದ್ದೇನು ಪಡುವಾಲಕಾಯಿ ಮಾತ್ರ ಇಷ್ಟುದ್ದ ಎಂದು ಡ್ಯಾನ್ಸ್ ಮಾಡುತ್ತಾ ಹೇಳಿದ್ದೇವೆ ಆದರೆ ಇತ್ತೀಚೆಗೆ ಹೀರೆಕಾಯಿ ಸೋರೆಕಾಯಿ ಮುಳ್ಳು ಸೌತೆ ಹಾಗಲಕಾಯಿ ಎಲ್ಲಾ…
ಬೆಂಗಳೂರು: ರಾಜ್ಯದ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿರುವ ಕೆರೆಗಳ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಸುವದರಿಂದ ಆಗುವ ಅನುಕೂಲಗಳು, ವಿದ್ಯುತ್ ಉತ್ಪಾದನೆಯ ಪ್ರಮಾಣ ಮುಂತಾದ ವಿಷಯಗಳ ಬಗ್ಗೆ ವಿಸ್ತ್ರುತ ವರದಿಯನ್ನು ನೀಡುವಂತೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞನ ಮಂಡಳಿಯ ಅಧಿಕಾರಿಗಳಿಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್ ಭೋಸರಾಜು ಸೂಚನೆ ನೀಡಿದರು. ಇಂದು ಭಾರತೀಯ ವಿಜ್ಞಾನ ಸಂಸ್ಥೆ ಯ ಆವರಣದಲ್ಲಿರುವ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞನ ಮಂಡಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆಯನ್ನ ನಡೆಸಿದರು. ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞನ ಮಂಡಳಿ ಐ ಐ ಎಸ್ ಸಿ (ಭಾರತೀಯ ವಿಜ್ಞಾನ ಸಂಸ್ಥೆಯ) ಸಹಯೋಗದಲ್ಲಿ ರಾಜ್ಯದ ಹಲವಾರು ಇಲಾಖೆಗಳ ಸಂಶೋಧನೆ ಹಾಗೂ ವರದಿ ಸಿದ್ಧಪಡಿಸುತ್ತದೆ. ಸಿದ್ದಪಡಿಸುತ್ತಿದೆ. ಹಾಗೆಯೇ, ತಾಂತ್ರಿಕ ಸಲಹೆಯನ್ನು ನೀಡುತ್ತಿದೆ. ಎನ್ಆರ್ಡಿಎಂಎಸ್ ಮೂಲಕ ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸಹಾಯ ಮಾಡುತ್ತಿದೆ. ಅಲ್ಲದೆ, ಜನರಲ್ಲಿ ವೈಜ್ಞಾನಿಕ ಭಾವನೆ ಬೆಳೆಸುವಲ್ಲಿ ಪ್ರಮುಖ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಮಂಡಳಿಯು…
ಬೆಂಗಳೂರು : ಸಾಮಾಜಿಕ ಜಾಲತಾಣ ಇನ್ಸಾಗ್ರಾಮ್ ನಲ್ಲಿ ಬೆಂಗಳೂರು ಹಾಗೂ ಕನ್ನಡಿಗರ ಬಗ್ಗೆ ನಿಂದನೆ ಮಾಡಿದ್ದ ಆರೋಪಿಯನ್ನ ಕೊಡಿಗೇಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ನಿಲಯ್ ಮಂಡಲ್ ಬಂಧಿತ ಆರೋಪಿಯಾಗಿದ್ದಾನೆ. ಈತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಬೆಂಗಳೂರಿನಲ್ಲಿ ಕಾಫಿ ತಿಂಡಿಗೆ ಹೆಚ್ಚಿನ ದರ ಚಾರ್ಜ್ ಮಾಡ್ತಾರೆ. ಕನ್ನಡ ಮಾತಾಡಲು ಒತ್ತಾಯ ಮಾಡುತ್ತಾರೆ ಎಂದು ಆರೋಪಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಎನ್ನಲಾಗಿದೆ.
ತುಮಕೂರು: ಸಾಲಭಾದೇ ತಾಳಲಾರದೆ ಒಂದೇ ಕುಟುಂಬದ ಮೂವರು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರಿನ ಪಂಡಿತನಹಳ್ಳಿ ರೈಲ್ವೆ ಹಳಿ ಬಳಿ ನಡೆದಿದೆ. ತಂದೆ, ತಾಯಿ, ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಸಿದ್ದಗಂಗಯ್ಯ (62), ಸುನಂದಮ್ಮ, ಗೀತಾ ಆತ್ಮಹತ್ಯೆಗೆ ಶರಣಾದ ದುರ್ದೈವಿಗಳಾಗಿದ್ದಾರೆ. ತುಮಕೂರಿನ ಮರಳೂರು ನಿವಾಸಿಯಾಗಿದ್ದ ಸಿದ್ದಗಂಗಯ್ಯ, ಕಳೆದ ಎರಡು ವರ್ಷಗಳ ಹಿಂದೆ ಕೆಇಬಿ ಯಲ್ಲಿ ನಿವೃತ್ತಿ ಹೊಂದಿದ್ದರು. ಸಾಕಷ್ಟು ಸಾಲ ಮಾಡಿಕೊಂಡಿದ್ದ ಸಿದ್ದಗಂಗಯ್ಯ, ಬೆಂಗಳೂರಿನ ಮಲ್ಲೇಶ್ವರಂ ಬಳಿಯಿರುವ ಕೆಸಿ ಜನರಲ್ ಆಸ್ಪತ್ರೆ ಬಳಿ ಟೀ ಶಾಪ್ ಇಟ್ಟುಕೊಂಡಿದ್ದರು. ಇಂದು ಬೆಳಗ್ಗಿನ ಜಾವ ಆಟೋದಲ್ಲಿ ಬಂದು ಪಂಡಿತನಹಳ್ಳಿ ರೈಲ್ವೆ ಹಳಿ ಬಳಿ ರೈಲಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈಲಿಗೆ ಸಿಲುಕಿದ ಪರಿಣಾಮ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿವೆ. ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಮೃತದೇಹಗಳು ರವಾನೆ ಮಾಡಲಾಗಿದ್ದು ಯಶವಂತಪುರ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಬೆಂಗಳೂರು: ಅಹಿಂಸೆ ಹೋರಾಟದ ಸಂದೇಶವನ್ನು ಇಡೀ ಪ್ರಪಂಚ ಒಪ್ಪಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ದಿನಾಚರಣೆಯ ಪ್ರಯುಕ್ತ ಅವರುಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಇಂದು ದೇಶದ ಇಬ್ಬರು ಮಹಾಚೇತನರಾದ ಮಹಾತ್ಮಾ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಸ್ಮರಿಸಿ ಅವರ ದೂರದೃಷ್ಟಿಯನ್ನು ನೆನೆಯುವ ದಿನ.ಗಾಂಧೀಜಿ ಅವರ ಬದುಕು, ನುಡಿಮುತ್ತುಗಳು ನಮ್ಮ ಬದುಕಿಗೆ ಆದರ್ಶ. ಅವರ ಅಹಿಂಸೆ ಹೋರಾಟದ ಸಂದೇಶವನ್ನು ಇಡೀ ಪ್ರಪಂಚ ಒಪ್ಪಿದೆ.ಸ್ವಾತಂತ್ರ್ಯಕ್ಕಾಗಿ ಹೋರಾಡುವಾಗ ನಮ್ಮನ್ನು ಬಂದೂಕಿನ ಗುಂಡಿನ ಮೂಲಕ ಕುಗ್ಗಿಸಬಹುದು ಎಂದು ಬ್ರಿಟೀಷರು ಭಾವಿಸಿದ್ದರು. ಆದರೆ ನಮ್ಮ ನಾಯಕರುಗಳು ಆ ಗುಂಡಿಗೆ ಎದೆಕೊಟ್ಟು ಪ್ರಾಣತ್ಯಾಗ ಮಾಡಿದ ಪರಿಣಾಮ ಇಂದು ದೇಶದಲ್ಲಿ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಸ್ಥಾಪಿತವಾಗಿದೆ ಎಂದರು. ಈ ದೇಶದಲ್ಲಿ ಸ್ವಾತಂತ್ರ್ಯ ತಂದುಕೊಟ್ಟ ನಮ್ಮ ಪಕ್ಷ 60 ವರ್ಷಗಳ ಕಾಲ ಆಡಳಿತ ಮಾಡಿ ಸಂವಿಧಾನ, ತ್ರಿವರ್ಣ ಧ್ವಜ, ರಾಷ್ಟ್ರಗೀತೆ,…
ತುಮಕೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ ತುಮಕೂರು ಕಛೇರಿಯಲ್ಲಿ ಸೋಮವಾರ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 154ನೇ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಕರಾಮುವಿ ತುಮಕೂರು ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕರಾದ ಡಾ.ಲೋಕೇಶ ಆರ್. ರವರು ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪುಷ್ಪನಮನ ಸಲ್ಲಿಸಿ ಮಾತನಾಡಿ, ಮಹಾತ್ಮ ಗಾಂಧೀಜಿ ಭಾರತದ ಹೆಮ್ಮೆ. ಸತ್ಯ, ಅಹಿಂಸೆಯ ಮೂಲಕ ಜಗದ ಹೃದಯ ಗೆದ್ದ ಮಹಾತ್ಮರು. ಅಕ್ಟೋಬರ್ 2 ಭಾರತದ ಜನತೆಯ ಪಾಲಿನ ಮಹತ್ವದ ದಿನ. ಈ ವರ್ಷ ನಾವು ಗಾಂಧೀಜಿಯವರ 154ನೇ ಜಯಂತಿಯನ್ನು ಆಚರಿಸುತ್ತೇವೆ. ಗಾಂಧೀಜಿ ಅವರ ಚಿಂತನೆ, ಆದರ್ಶ, ಜೀವನ ಮೌಲ್ಯಗಳನ್ನು ಸ್ಮರಿಸುವ ಮತ್ತು ಅದರಂತೆ ನಡೆಯುವ ಪಣ ತೊಡುವ ದಿನವಿದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾದ ಡಾ.ಸುರೇಶ್ .ಸಿ. ಮತ್ತು ಪ್ರಾದೇಶಿಕ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ತುಮಕೂರು: ಲಾರಿ ಹಾಗೂ ದ್ವಿಚಕ್ರ ವಾಹನದ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನಲ್ಲಿ ಅರಸಾಪುರ ಗೇಟ್ ಬಳಿಕ ನಡೆದಿದೆ. ಮೃತರನ್ನು ಸಹೋದರರಾದ ಪವನ್ 20 ವರ್ಷ, ಬಾಲಾಜಿ(18) , ತಾಯಿ ಅನಿತಾ (40) ಎಂದು ಗುರುತಿಸಲಾಗಿದೆ. ದ್ವಿಚಕ್ರವಾಹನ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ದುರಂತ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಒಂದೇ ಕುಟುಂಬದ ಮೂವರು ಮೃತಟ್ಟಿದ್ದಾರೆ. ಮೃತರನ್ನು ಸವಾರರು ಮಧುಗಿರಿ ಮೂಲದವರಾಗಿದ್ದಾರೆ. ಘಟನಾ ಸ್ಥಳಕ್ಕೆ ಕೊರಟಗೆರೆ ಸಬ್ ಇನ್ ಸ್ಪೆಕ್ಟರ್ ಚೇತನ್ ಕುಮಾರ್ ಹಾಗೂ ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸಿದರು. ಮಧುಗಿರಿಯಿಂದ ಗೌರಿಬಿದನೂರು ಕಡೆಗೆ ಹೋಗುವಾಗ ಅವಘಡ ಸಂಭವಿಸಿದೆ. ತಾಯಿ ಮಗ ಹಾಗೂ ಅಣ್ಣನ ಮಗ ದುರಂತದಲ್ಲಿ ಮೃತಪಟ್ಟಿದ್ದಾರೆ. ಮಧುಗಿರಿ ಮೂಲದ ವೀರೇನಹಳ್ಳಿ ತಾಂಡದ ವಾಸಿಗಳು ಘಟನೆ ನಡೆಯುತ್ತಿದ್ದಂತೆ ಲಾರಿ ಚಾಲಕ ಪರಾರಿಯಾಗಿದ್ದಾನೆ. ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.