Subscribe to Updates
Get the latest creative news from FooBar about art, design and business.
- ಪ್ರಥಮ ಬಿ.ಸಿ.ಎ. ಪದವಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
- ಕುಣಿಗಲ್ ಪುರಸಭಾ ವ್ಯಾಪ್ತಿಯ ಸಾರ್ವಜನಿಕರಿಗೆ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
- ತುಮಕೂರು: ‘ಕರ್ನಾಟಕ ಪಬ್ಲಿಕ್ ಸ್ಕೂಲ್’ ಸಿನಿಮಾ ಮುಹೂರ್ತ ಸಮಾರಂಭ
- ತುಮಕೂರು: ಪಾದರಕ್ಷೆ ತಯಾರಿಕಾ ಸ್ಪರ್ಧೆಗೆ ಅರ್ಜಿ
- ಭೀಕರ ಅಪಘಾತ: ಶನಿಮಹಾತ್ಮ ದೇವಾಲಯ ವ್ಯವಸ್ಥಾಪಕ ಜಗನ್ನಾಥ್ ನಿಧನ
- ನೈರ್ಮಲ್ಯ ಕಾಪಾಡಿ, ಗರ್ಭಾಶಯದ ಕ್ಯಾನ್ಸರ್ ತಡೆಗಟ್ಟಿ: ಮಹಿಳೆಯರಿಗೆ ಕಾವೇರಿ ಎನ್. ಕರೆ
- ಪೌತಿ ಖಾತೆ, ಕಂದಾಯ ಗ್ರಾಮ ಹಕ್ಕುಪತ್ರ, ಪೋಡಿ ಮುಕ್ತ ಅಭಿಯಾನ: ರೈತರ ಅಲೆದಾಟ ತಪ್ಪಿಸಲು ಸರ್ಕಾರದ ಮಹತ್ವದ ಕ್ರಮ
- ತುಮಕೂರನ್ನು ಬೆಂಗಳೂರಿನ ಭಾಗವಾಗಿಸಿ: ಸಾಧನಾ ಸಮಾವೇಶದಲ್ಲಿ ಡಾ.ಜಿ.ಪರಮೇಶ್ವರ್ ಪ್ರಸ್ತಾಪ
Author: admin
ಮಂಡ್ಯ: ಮಳವಳ್ಳಿ ತಾಲೂಕಿನ ದೇಶವಳ್ಳಿ ಗ್ರಾಮದಲ್ಲಿ ಮೊಬೈಲ್ ರಿಚಾರ್ಜ್ ವಿಚಾರಕ್ಕೆ ಸಂಬಂಧಿಸಿ, ಗಲಾಟೆಯಾಗಿ ಪತ್ನಿಯನ್ನೇ ರಾಡ್ ನಿಂದ ಹೊಡೆದು ಹತ್ಯೆ ಮಾಡಿದ ಘಟನೆ ನಡೆದಿದೆ. ಬಳಿಕ ಪತಿ ಮಗುವಿನ ಜೊತೆ ಪೊಲೀಸರ ಮುಂದೆ ಶರಣಾಗಿದ್ದಾನೆ. ರಾಡ್ ನಿಂದ ಹೊಡೆದು ಪತ್ನಿ ಮಧುಶ್ರೀ(32) ಅವರನ್ನು ಪತಿ ಮಹದೇವ್(38) ಕೊಲೆ ಮಾಡಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಮೃತ ಮಧುಶ್ರೀ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರೆ, ಇತ್ತ ಆರೋಪಿ ಮಹದೇವ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಪತ್ನಿ ಮೇಲೆ ಅನುಮಾನ ಪಡುತ್ತಿದ್ದ ಇತ, ಇದೇ ವಿಚಾರಕ್ಕೆ ದಂಪತಿ ನಡುವೆ ಆಗಾಗ ಗಲಾಟೆ ಆಗುತ್ತಿತ್ತು. ಮೊಬೈಲ್ ರಿಚಾರ್ಜ್ ವಿಚಾರಕ್ಕೆ ದಂಪತಿ ನಡುವೆ ಗಲಾಟೆ ಶುರುವಾಗಿದೆ. ಈ ವೇಳೆ ಕೋಪಗೊಂಡ ಪತಿ, ರಾಡ್ ನಿಂದ ಹೊಡೆದು ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಘಟನೆ ಬಳಿಕ ಮಗು ಜೊತೆ ಪೊಲೀಸರ ಮುಂದೆ ಶರಣಾಗಿ, ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಈ ಕುರಿತು ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬೆಂಗಳೂರು: ಮಲಿನ ನೀರು ಬಂದು ಕೆರೆಗೆ ಸೇರುತ್ತಿರುವ ಕಾರಣ ಐಟಿಬಿಟಿ ಸಿಟಿ, ಸಿಲಿಕಾನ್ ಸಿಟಿ, ಕೆರೆಗಳ ನಗರ ಅಂತಾ ಕರೆಯೋ ಬೆಂಗಳೂರಿನ ಕೆರೆಗಳು ಅಪಾಯದಲ್ಲಿವೆ. ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಕೆರೆ ಅಭಿವೃದ್ಧಿ ಪಡಿಸಲಾಗುತ್ತಿದ್ದರೂ ಇನ್ನೊಂದೆಡೆಗೆ ಮಲಿನ ನೀರು ಬಂದು ಕೆರೆ ಸೇರುತ್ತಿದೆ. ಇದರಿಂದ ಜಲಚರ ಜೀವಿಗಳು ವಾಸ ಮಾಡದೇ ಇರೋ ಮಟ್ಟಕ್ಕೆ ಕೆರೆಗಳ ನೀರು ಕಲುಷಿತ ಆಗಿದೆ. ಮೀನುಗಳು ಸಾವಿನ ಸಂಖ್ಯೆ ಕೆರೆಗಳಲ್ಲಿ ಹೆಚ್ಚಾಗುತ್ತಿದೆ. ಇಷ್ಟೆಲ್ಲ ಆದರೂ ಸರಿಯಾಗಿ ಕೆರೆ ಅಭಿವೃದ್ಧಿ ಮಾಡದಿರುವುದರಿಂದ ಕೆರೆಗಳು ವಿಷಯುಕ್ತವಾಗುತ್ತಿವೆ. ಕೆರೆಗಳ ಸಂರಕ್ಷಣೆಯಲ್ಲಿ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ. ಬೆಂಗಳೂರು ಮಹಾನಗರದಲ್ಲಿ ಇರುವ ಫ್ಯಾಕ್ಟರಿಗಳು ಹೊರ ಸೂಸುವ ತ್ಯಾಜ್ಯ ಮತ್ತು ರಾಜಕಾಲುವೆಯಿಂದ ಬರುವ ಅನ್ ಟ್ರೀಟೆಡ್ ನೀರಿನಿಂದ ಕೆರೆಗಳು ಕಲುಷಿತ ಆಗಿ ನೀರಿನ ಪಿಎಚ್ ಕಡಿಮೆಯಾಗಿ ಆಕ್ಸಿಜನ್ ಕೊರತೆಯಿಂದಾಗಿ ಜಲಚರ ಜೀವಿಗಳು ಸಾವನ್ನಪ್ಪುತ್ತಿವೆ. ಜಲಚರ ಜೀವಿಗಳಿಗಷ್ಟೇ ಅಲ್ಲದೇ ಕೆರೆ ಪಕ್ಕದ ಮರಗಳಿಗೂ ಇದು ವಿಷವಾಗುತ್ತದೆ ಎಂದು ಪರಿಸರವಾದಿಗಳು ಆಕ್ರೋಶ ಹೊರ ಹಾಕಿದ್ದಾರೆ. ಸರ್ಕಾರ ಮತ್ತು ಬಿಬಿಎಂಪಿ,…
ಬೆಂಗಳೂರು : ರಾಜಭವನದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಮಾಡಿದ್ದ ಆರೋಪಿಯನ್ನು ಆಂಧ್ರದ ಚಿತ್ತೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಕೋಲಾರ ಮೂಲದ ಬಾಸ್ಕರ್ ಬಂಧಿತ ಆರೋಪಿ. ವೃತ್ತಿಯಲ್ಲಿ ರೈತನಾಗಿರುವ ಭಾಸ್ಕರ್ ಸೋಮವಾರ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದ. ನಂತರ ವಾಪಸ್ಸು ಕೋಲಾರಕ್ಕೆ ತೆರಳುವ ವೇಳೆ ರಾಜಭವನಕ್ಕೆ ಹುಸಿ ಬಾಂಬ್ ಬೆದರಿಕೆ ಮಾಡಿದ್ದ. ಘಟನೆ ಸಂಬಂಧ ವಿಧಾನಸೌಧ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ 4 ಬಂಡವಾಳ ಹೂಡಿಕೆಯ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗಳಿಂದ ಒಟ್ಟು ರೂ 9, 461 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಆಗಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿದಿದ್ದಾರೆ. ಇವುಗಳಿಂದ ಈ ಪ್ರದೇಶದಲ್ಲಿ 3538 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಸರ್ಕಾರದ ಕಡೆಯಿಂದ ನಡೆಯುತ್ತಿರುವ ಇಂತಹ ಸಂಘಟಿತ ಪ್ರಯತ್ನಗಳು ಬೆಂಗಳೂರಿನ ಆಚೆ’ ಉಪಕ್ರಮದ ಭಾಗವಾಗಿವೆ ಎಂದರು. ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡುವ ಸಮಿತಿಯ ಸಭೆಯಲ್ಲಿ ಒಟ್ಟು ₹34, 115 ಕೋಟಿ ಮೊತ್ತದ ಬಂಡವಾಳ ಹೂಡಿಕೆಯ 14 ಉದ್ಯಮಗಳ ಸ್ಥಾಪನೆಗೆ ಅನುಮೋದನೆ ನೀಡಲಾಯಿತು. ಇದರಿಂದ 13, 308 ಜನರಿಗೆ ಉದ್ಯೋಗ ದೊರೆಯುವ ನಿರೀಕ್ಷೆ ಇದೆ. ಹೆಚ್ಚುವರಿ ರೂ 13, 911 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಮಾಡುವ ಫಾಕ್ಸ್‌ಕಾನ್‌ನ ಪ್ರಸ್ತಾವನೆಯನ್ನು ಸಮಿತಿಯು ಅನುಮೋದಿಸಿದೆ. ಫಾಕ್ಸ್ಕಾನ್, ಈಗಾಗಲೇ ರಾಜ್ಯದಲ್ಲಿ ರೂ 8,000 ಕೋಟಿ ಬಂಡವಾಳ…
ವಿಧಾನಸಭೆಯ ವಿಪಕ್ಷ ನಾಯಕರಾಗಿ ಆಯ್ಕೆಯಾಗಿರುವ ಆರ್. ಅಶೋಕ್ ಅವರ ನಾಮಫಲಕವನ್ನು ಕಿತ್ತು ಹಾಕಬೇಕು ಎಂದು ಯಲಹಂಕ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್. ಆರ್. ವಿಶ್ವನಾಥ್ ಆಗ್ರಹಿಸಿದ್ದಾರೆ. ಇಂದು ಸದನದಲ್ಲಿ ಆರ್. ಅಶೋಕ್ ವಿರುದ್ಧ ಮೊಗಸಾಲೆಯಲ್ಲಿ ಮಾತನಾಡುತ್ತಾ ಕುಳಿತಿದ್ದ ಅವರು, ಮೊದಲು ಆರ್. ಅಶೋಕ್ ನಾಮಫಲಕ ಕಿತ್ತು ಹಾಕಬೇಕು ಎಂದು ಕಿಡಿಕಾರಿದ ಪ್ರಸಂಗ ನಡೆಸಿದೆ. ಪ್ರತಿಪಕ್ಷ ನಾಯಕ್ ಆರ್. ಅಶೋಕ್ ಮತ್ತು ಶಾಸಕ ಎಸ್. ಆರ್. ವಿಶ್ವನಾಥ್ ಮಧ್ಯೆ ಅಸಮಾಧಾನ ಮುಂದುವರೆದಿದ್ದು, ಆರ್. ಅಶೋಕ್ ಕೊಠಡಿಗೆ ಹೋಗಲು ವಿಶ್ವನಾಥ್ ಮತ್ತೆ ನಿರಾಕರಿಸಿದ್ದಾರೆ. ಸದನದಲ್ಲಿ ಮುಂದಿನ ಕಾರ್ಯತಂತ್ರಗಳ ಬಗ್ಗೆ ಆರ್ ಅಶೋಕ್ ಕಚೇರಿಯಲ್ಲಿ ಕ್ಲೋಸ್ ಡೋರ್ ಮೀಟಿಂಗ್ ನಡೆಯುತ್ತಿದ್ದ ಸಂದರ್ಭ ಶಾಸಕ ಮುನಿರತ್ನ ವಿಶ್ವನಾಥ್ ಅವರನ್ನು ಅಶೋಕ್ ಕೊಠಡಿಗೆ ಕರೆದೊಯ್ಯಲು ಕೈ ಹಿಡಿದುಕೊಂಡರು. ಈ ವೇಳೆ ವಿಶ್ವನಾಥ್ ಅಶೋಕ್ ಹೆಸರಿನ ನಾಮಫಲಕ ಇರೋವರೆಗೂ ನಾನು ಆ ಕೊಠಡಿಗೆ ಬರೋದಿಲ್ಲ ಎಂದರು
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರ ಮಾಜಿ ಸಚಿವ ವಿ.ಸೋಮಣ್ಣ ಬ್ಯಾಟ್ ಬೀಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಮಾಜಿ ಸಚಿವ, ಯತ್ನಾಳ್ ಒಬ್ಬರು ಸುಸಂಸ್ಕೃತ ರಾಜಕಾರಣಿ, ನನ್ನ ನೋವು ನನಗೆ ಗೊತ್ತು, ಅವರ ನೋವು ಅವರಿಗೆ ಗೊತ್ತು ಹಾಗಾಗಿ ಅವರು ಮಾತನಾಡಿರಬಹುದು ಎಂದು ಹೇಳಿದ್ದಾರೆ. ಸ್ವಪಕ್ಷದ ಮೇಲೆಯೇ ಬೇಸರಗೊಂಡ ಮಾಜಿ ಸಚಿವ ವಿ.ಸೋಮಣ್ಣ ಅವರ ಸಂಧಾನ ಪ್ರಯತ್ನ ಆರಂಭಿಸಿರುವ ದೆಹಲಿಯ ಬಿಜೆಪಿ ವರಿಷ್ಠರು ಅವರನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ. ಆದರೆ, ಮಾತುಕತೆ ವೇಳೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರೂ ಉಪಸ್ಥಿತರಿರಬೇಕು. ವರಿಷ್ಠರ ಸಮ್ಮುಖದಲ್ಲಿ ಮುಖಾಮುಖಿ ಮಾತುಕತೆ ಆಗಲಿ ಎಂಬ ಪಟ್ಟು ಮುಂದಿಟ್ಟಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಚಳಿಗಾಲದಲ್ಲಿ ಪ್ರತೀ ದಿನ ಒಂದು ಚಮಚ ಜೇನುತುಪ್ಪದ ಸೇವನೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಜೇನುತುಪ್ಪದಲ್ಲಿ ದೇಹದಲ್ಲಿನ ರೋಗಗಳನ್ನು ಗುಣಪಡಿಸುವ ಹಲವಾರು ಔಷಧಿಗಳಿವೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಜೇನುತುಪ್ಪ ತುಂಬಾನೇ ಒಳ್ಳೆಯದು. ಹೊಟ್ಟೆಯ ಸಮಸ್ಯೆಯ ನಿವಾರಣೆ ಆಗುತ್ತದೆ. ಒತ್ತಡ ಮತ್ತು ಆತಂಕವನ್ನು ನಿವಾರಣೆಯಾಗುತ್ತದೆ. ರಕ್ತಹೀನತೆ ಸಮಸ್ಯೆ ನಿವಾರಣೆ. ಕಲೆಮುಕ್ತ ಕಾಂತಿಯುತ ತ್ವಚೆ ನಿಮ್ಮದಾಗುತ್ತದೆ. ಕೂದಲು ಸಮಸ್ಯೆಗಳಿಂದ ಪರಿಹಾರ ಪಡೆಯಲು ಅಲೋವೆರಾ ಬಳಸಿ ಆರೋಗ್ಯ, ಚರ್ಮ & ಕೂದಲಿನ ಆರೈಕೆಯಲ್ಲಿ ಅಲೋವೆರಾ ಅತ್ಯುತ್ತಮ ಔಷಧ. ಕೂದಲು ಉದುರುವಿಕೆ, ತೆಳುವಾಗುವುದು ಅಥವಾ ಶುಷ್ಕವಾಗಿ ಕಾಣುವ ಸಮಸ್ಯೆಗಳಿಗೆ ಅಲೋವೆರಾ ಪರಿಹಾರ ನೀಡುತ್ತದೆ. ಆಮ್ಲಾ ಮತ್ತು ಅಲೋವೆರಾ ಮಿಶ್ರಣವು ಕೂದಲನ್ನು ದಪ್ಪವಾಗಿಸುತ್ತದೆ.3 ಚಮಚ ಅಲೋವೆರಾ ಜೆಲ್, ಅರ್ಧ ಚಮಚ ಜೇನುತುಪ್ಪ ಮತ್ತು 2 ಚಮಚ ತೆಂಗಿನ ಎಣ್ಣೆ ಮಿಶ್ರಣ ಮಾಡಿ ನಿಮ್ಮ ಕೂದಲಿಗೆ ಹಚ್ಚಿ. ಅಲೋವೆರಾವನ್ನು ನಿಮ್ಮ ಕೂದಲಿಗೆ ನೇರವಾಗಿ ಅನ್ವಯಿಸುವುದರಿಂದ ಕೂದಲಿನ ಬುಡದಲ್ಲಿ ತೇವಾಂಶ ಉಳಿಯುತ್ತದೆ, ಕೂದಲು ಉದುರುವಿಕೆ ಕಡಿಮೆಯಾಗುತ್ತದೆ.
ಈಗಿನ್ನೂ ಡಿಸೆಂಬರ್ ತಿಂಗಳು ಆಗಲೆ ಮಲೆನಾಡಿನಲ್ಲೇ ಶೇ. 65ರಿಂದ 70ರಷ್ಟು ಮಳೆ ಕೊರತೆ ಆಗಿದೆ. ಚಿಕ್ಕಮಗಳೂರು ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕು ಎಂದು ಎಷ್ಟೇ ಕೇಳಿದರೂ ಘೋಷಣೆ ಆಗಿಲ್ಲ. ಬೇಸಿಗೆಯಲ್ಲಿ ದೇವರೇ ಕಾಪಾಡಬೇಕು. ಮನುಷ್ಯರ ಸಮಸ್ಯೆಯನ್ನೇ ಕೇಳುವವರಿಲ್ಲ. ಇನ್ನು ಮೂಕ ಪ್ರಾಣಿಗಳ ಗೋಳು ಕೇಳುವವರು ಯಾರು? ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷ ಮೂಕ ಪ್ರಾಣಿಗಳು ಎಂದು ಸಿಟಿ ರವಿ ಹೇಳಿದ್ದಾರೆ. ರಾಜ್ಯದ 220ಕ್ಕೂ ತಾಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಆದರೆ ಒಂದು ರೂ. ಪರಿಹಾರವನ್ನೂ ನೀಡದೆ ರೈತರನ್ನು ಭಿಕ್ಷುಕರಂತೆ ನೋಡುತ್ತಿದೆ ಎಂದು ಮಾಜಿ ಸಚಿವ ಸಿ.ಟಿ. ರವಿ ಆರೋಪಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ರೈತರಿಗೆ 2000 ರು. ಬರ ಪರಿಹಾರ ಕೊಡುತ್ತೇವೆ ಎಂದು ರಾಜ್ಯ ಸರ್ಕಾರ ಹೇಳಿತ್ತು. ಅದನ್ನೂ ಇನ್ನೂ ಕೊಟ್ಟಿಲ್ಲ ಎಂದರು. ಕೇವಲ ತೋರಿಕೆಗಾಗಿ ತಾವು ರೈತರ ಪರ ಎಂದು ಬಾಯಿಮಾತಿನ ಉಪಚಾರ ಮಾಡಲಾಗುತ್ತಿದೆ ಎಂದು ಸಿ.ಟಿ. ರವಿ ಟೀಕಿಸಿದರು.
ಬೆಂಗಳೂರು: ನಗರದಲ್ಲಿ ಇ-ಸಿಗರೇಟ್ ಮಾರಾಟ ಮಾಡುತ್ತಿದ್ದ ಐವರನ್ನು ಕೊತ್ತನೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮುಜಮಿಲ್, ಅಬ್ದುಲ್ ಅಜೀಜ್, ಮಹಮ್ಮದ್ ಅಪ್ಟಲ್, ಅಬ್ದುಲ್ ಸಮೀರ್, ಮುತಾಸಿದ್ದಿಕ್ ಬಂಧಿತ ಆರೋಪಿಗಳು. ಬಂಧಿತರಿಂದ 26 ಲಕ್ಷ ಮೌಲ್ಯದ ಇ-ಸಿಗರೇಟ್ ಉತ್ಪನ್ನ, ವಿದೇಶಿ ಸಿಗರೇಟ್ ಜಪ್ತಿ ಮಾಡಲಾಗಿದೆ. ಆರೋಪಿಗಳು ಅಕ್ರಮವಾಗಿ ಇ-ಸಿಗರೇಟ್ ದಾಸ್ತಾನು ಮಾಡಿ ಮಾರಾಟ ಮಾಡ್ತಿದ್ದರು. ಕೊತ್ತನೂರು ಪೊಲೀಸರು ಈ ಬಗ್ಗೆ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.
ವಾರದ ಹಿಂದೆ ಕರ್ನಾಟಕ ಹೈಕೋರ್ಟ್ ವಿಡಿಯೋ ಕಾನ್ಸರೆನ್ಸ್ ಕಲಾಪದ ವೇಳೆ ಅಶ್ಲೀಲ ಚಿತ್ರ ಪ್ರದರ್ಶನ ಮಾಡಿದ ಘಟನೆ ನಡೆದಿತ್ತು. ಇದೀಗ ಮತ್ತೊಮ್ಮೆ ಇದೇ ರೀತಿಯ ಘಟನೆ ಮರುಕಳಿಸಿದೆ. ಹೈಕೋರ್ಟ್ ಬಳಿಕ ಮತ್ತೊಂದು ಕೋರ್ಟ್ ಕಲಾಪದ ವೇಳೆ ಅಶ್ಲೀಲ ವಿಡಿಯೋ ಪ್ರದರ್ಶನ ಮಾಡಲಾಗಿದೆ. ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಾಧೀಕರಣದ (ಕೆಎಸ್‌ಎಟಿ) ವಿಡಿಯೋ ಕಾನ್ಸರೆನ್ಸ್ ವೇಳೆ ಅಶ್ಲೀಲ ವಿಡಿಯೋ ಪ್ರದರ್ಶನ ಮಾಡಲಾಗಿದೆ. ಘಟನೆ ಬಗ್ಗೆ ಬೆಂಗಳೂರಿನ ಸೆಂಟ್ರಲ್ ಸೆನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ.