nammatumakuru

    Subscribe to Updates

    Get the latest creative news from FooBar about art, design and business.

    What's Hot

    ಹಾಸನಾಂಬೆ ದರ್ಶನ ವರ್ಷಕ್ಕೊಮ್ಮೆ ಮಾತ್ರವೇಕೆ? ಇದರ ಹಿಂದಿದೆ ಕುತೂಹಲಕಾರಿ ಪೌರಾಣಿಕ ಕಥೆ!

    October 30, 2026

    ಹಾಲಿನ ಬೆಲೆ ಏರಿಕೆ ಬಿಸಿ ಹೋಟೆಲ್‌ ಗಳಿಗೂ ತಟ್ಟಿತು; ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ!

    October 30, 2026

    ವಕೀಲರ ಮೇಲಿನ ಹಲ್ಲೆ ಖಂಡಿಸಿ ತುಮಕೂರಿನಲ್ಲಿ ಪ್ರತಿಭಟನೆ: ವಕೀಲರ ಸಂರಕ್ಷಣಾ ಕಾಯ್ದೆ ಕಠಿಣಗೊಳಿಸಲು ಆಗ್ರಹ

    October 29, 2026
    Facebook Twitter Instagram
    ಟ್ರೆಂಡಿಂಗ್
    • ಹಾಸನಾಂಬೆ ದರ್ಶನ ವರ್ಷಕ್ಕೊಮ್ಮೆ ಮಾತ್ರವೇಕೆ? ಇದರ ಹಿಂದಿದೆ ಕುತೂಹಲಕಾರಿ ಪೌರಾಣಿಕ ಕಥೆ!
    • ಹಾಲಿನ ಬೆಲೆ ಏರಿಕೆ ಬಿಸಿ ಹೋಟೆಲ್‌ ಗಳಿಗೂ ತಟ್ಟಿತು; ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ!
    • ವಕೀಲರ ಮೇಲಿನ ಹಲ್ಲೆ ಖಂಡಿಸಿ ತುಮಕೂರಿನಲ್ಲಿ ಪ್ರತಿಭಟನೆ: ವಕೀಲರ ಸಂರಕ್ಷಣಾ ಕಾಯ್ದೆ ಕಠಿಣಗೊಳಿಸಲು ಆಗ್ರಹ
    • ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟ ದಂಪತಿ: ಶಾಸಕ ಕೆ.ಎನ್. ರಾಜಣ್ಣ ಸಂತಾಪ
    • ಮಳೆ ಕೊರತೆ: ಪಾವಗಡಕ್ಕೆ ಜಿಲ್ಲಾಧಿಕಾರಿ ಭೇಟಿ
    • ಡಾ.ಜಿ.ಪರಮೇಶ್ವರ್ ಶೀಘ್ರ ಗುಣಮುಖರಾಗಲೆಂದು ವಿಶೇಷ ಪೂಜೆ
    • ಕನ್ನಡ ಭಾಷೆಗೆ ಅಭಿನಯಿಸುವ ಶಕ್ತಿಯಿದೆ : ಪ್ರೊ.ಎಂ.ಕೃಷ್ಣಗೌಡ
    • ಡಿಸಿಎಂ ಡಾ.ಜಿ.ಪರಮೇಶ್ವರ್ ಆರೋಗ್ಯ ಚೇತರಿಕೆಗೆ ವಿಶೇಷ ಪೂಜೆ |  ₹1.30 ಕೋಟಿ ವೆಚ್ಚದಲ್ಲಿ ಐತಿಹಾಸಿಕ ಶೈಲಿಯ ರಾಜಗೋಪುರ ನಿರ್ಮಾಣ ದಾನಿಗಳ ಸಹಕಾರಕ್ಕೆ ಮನವಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ದಲಿತ ವ್ಯಕ್ತಿಯ ಮೃತದೇಹ ಹೊರತೆಗೆದು ಬೇರೆಡೆ ಶವಸಂಸ್ಕಾರ ಮಾಡಿದ ಅಧಿಕಾರಿಗಳು
    Uncategorized January 6, 2024

    ದಲಿತ ವ್ಯಕ್ತಿಯ ಮೃತದೇಹ ಹೊರತೆಗೆದು ಬೇರೆಡೆ ಶವಸಂಸ್ಕಾರ ಮಾಡಿದ ಅಧಿಕಾರಿಗಳು

    By adminJanuary 6, 2024No Comments2 Mins Read
    thumakuru

    ತುಮಕೂರು: ವಯೋಸಹಜವಾಗಿ ಮೃತಪಟ್ಟ ದಲಿತ ವ್ಯಕ್ತಿಯ ಶವವನ್ನು ಉಪದ್ರವ ನಿವಾರಣಾ ಆದೇಶ ಹೊರಡಿಸಿ ಹೊರತೆಗೆದು ಮತ್ತೊಂದು ಸ್ಥಳದಲ್ಲಿ ಶವಸಂಸ್ಕಾರ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ತುಮಕೂರು ತಾಲೂಕಿನ ಊರ್ಡಿಗೆರೆ ಹೋಬಳಿಯ ದುರ್ಗದಹಳ್ಳಿಯಲ್ಲಿ ನಡೆದಿದೆ. ವೃದ್ಧ ಪೆದ್ದಯ್ಯ ವಯೋಸಹಜವಾಗಿ ಕಳೆದ ತಿಂಗಳು ಡಿಸೆಂಬರ್ನಲ್ಲಿ ಮೃತಪಟ್ಟಿದ್ದರು. ಮೃತರ ಶವ ಸಂಸ್ಕಾರ ಮಾಡಲು ಗ್ರಾಮದಲ್ಲಿ ಸ್ಮಶಾನ ಇಲ್ಲದ ಕಾರಣ ಮೃತ ಪೆದ್ದಯ್ಯನ ಮಗ ತಿಮ್ಮರಾಜು ‘ನಮ್ಮ ತಂದೆ ಮೃತಪಟ್ಟಿದ್ದಾರೆ. ಊಳಲು ಸ್ಮಶಾನ ಇಲ್ಲ. ನಮ್ಮ ತಂದೆಯ ಶವಸಂಸ್ಕಾರವನ್ನು ಎಲ್ಲಿ ಮಾಡಬೇಕು ಎಂದು ತಹಸೀಲ್ದಾರ್ ಹಾಗೂ ಪಿಡಿಒ ಅವರಿಗೆ ಕೇಳಿದ್ದಾರೆ. ಆದರೆ ಅವರಿಂದ ಸಮರ್ಪಕ ಉತ್ತರ ಬಾರದ ಹಿನ್ನೆಲೆಯಲ್ಲಿ ದುರ್ಗದ ಹಳ್ಳಿ ಗ್ರಾಮಕ್ಕೆ ತೆರಳುವ ರಸ್ತೆ ಬದಿಯಲ್ಲೇ ಅಂತ್ಯ ಸಂಸ್ಕಾರ ನೆರವೇರಿಸಿದ್ದರು.

    ಘಟನೆಗೆ ಸಂಬಂಧಿಸಿದಂತೆ ಸ್ಮಶಾನಕ್ಕಾಗಿ ಹಲವು ವರ್ಷಗಳಿಂದ ಹೋರಾಟ ಮಾಡಿರುವ ದುರ್ಗದ ಹಳ್ಳಿಯ ತಿಮ್ಮರಾಜು, ನಾವು ದಲಿತ ಕುಟುಂಬಕ್ಕೆ ವರ್ಗಕ್ಕೆ ಸೇರಿದವರಾಗಿದ್ದು ಭೂಮಿ ಇಲ್ಲದ ಕಾರಣ ಅಧಿಕಾರಿಗಳ ಹೇಳಿಕೆಯಂತೆ ರಸ್ತೆ ಬದಿಯಲ್ಲಿ ಅಂತ್ಯ ಸಂಸ್ಕಾರ ಮಾಡಿರುವುದಾಗಿ ಹೇಳಿದ್ದರು.

    ಪರಮೇಶ್ವರ್ ಸಹ ಪ್ರತಿಕ್ರಿಯಿಸಿದ್ದರು. ಇಂತಹ ಅಮಾನವೀಯ ಘಟನೆ ನಡೆಯಬಾರದೆಂದು ಮುಂದೆ ಈ ರೀತಿ ಆಗದಂತೆ ಜಾಗೃತಿ ವಹಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿ, ಕುಟುಂಬಸ್ಥರು ಒಪ್ಪಿದರೆ ವ್ಯಕ್ತಿಯ ಶವವನ್ನು ಬೇರೆಡೆ ಅಂತ್ಯಸಂಸ್ಕಾರ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.

    ಇದರ ಬೆನ್ನಲ್ಲೇ ತುಮಕೂರು ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಅವರು ಉಪದ್ರವ ನಿವಾರಣಾ ಕಾಯ್ದೆ ಅಡಿಯಲ್ಲಿ ತಹಸೀಲ್ದಾರ್ ಅವರಿಗೆ 48 ಗಂಟೆಗಳ ಒಳಗೆ ಮೃತ ಪೆದ್ದಯ್ಯನ ಶವವನ್ನು ಹೊರ ತೆಗೆದು, ಬೇರೆ ಕಡೆ ಅಂತ್ಯ ಸಂಸ್ಕಾರ ಮಾಡಿ ವರದಿ ನೀಡಲು ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ಮುಂಜಾನೆ ತಹಸೀಲ್ದಾರ್ ಸಿದ್ದೇಶ್ ಹಾಗೂ ಪೊಲೀಸ್ ಅಧಿಕಾರಿಗಳ ಮುಂದಾಳತ್ವದಲ್ಲಿ ಮೃತ ಪೆದ್ದಯ್ಯನ ಶವ ಹೊರತೆಗೆದಿದ್ದಾರೆ.

    ಹೊರ ತೆಗೆದ ಶವವನ್ನು ದುರ್ಗದ ಹಳ್ಳಿಯಿಂದ 2 ಕಿಮೀ ದೂರದಲ್ಲಿರುವ ಗುಡ್ಡದ ಬಳಿ ಗುರುತಿಸಿರುವ ಸ್ಮಶಾನದಲ್ಲಿ ಸಂಸ್ಕಾರ ಮಾಡಲಾಗಿದೆ.

    ಜಿಲ್ಲಾಡಳಿತದ ಈ ನಡೆಗೆ ಪ್ರಗತಿಪರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೂ ಸಂಪ್ರದಾಯದಂತೆ ಒಮ್ಮೆ ಅಂತ್ಯ ಸಂಸ್ಕಾರ ಮಾಡಿದರೆ ಆ ಶವವನ್ನು ಹೊರ ತೆಗೆದು ಮತ್ತೊಂದು ಸ್ಥಳದಲ್ಲಿ ಶವ ಸಂಸ್ಕಾರ ಮಾಡಿರುವ ಯಾವುದೇ ಉದಾಹರಣೆಗಳು ಇಲ್ಲ. ಆದರೆ ಸಚಿವರ ಮಾತನ್ನು ಸಹ ಧಿಕ್ಕರಿಸಿ ಜಿಲ್ಲಾಡಳಿತವು ಏಕ ಪಕ್ಷಿಯ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    admin
    • Website

    Related Posts

    ಹಾಸನಾಂಬೆ ದರ್ಶನ ವರ್ಷಕ್ಕೊಮ್ಮೆ ಮಾತ್ರವೇಕೆ? ಇದರ ಹಿಂದಿದೆ ಕುತೂಹಲಕಾರಿ ಪೌರಾಣಿಕ ಕಥೆ!

    October 30, 2026

    ಗೃಹಿಣಿಯರೇ, ವಿದ್ಯಾರ್ಥಿಗಳೇ ಎಚ್ಚರ! ವರ್ಕ್ ಫ್ರಮ್ ಹೋಮ್ ಹೆಸರಿನಲ್ಲಿ ಆನ್ ಲೈನ್ ವಂಚಕರ ಜಾಲ!

    October 29, 2026

    ಹೊಸಕೋಟೆ, ತುಮಕೂರಿಗೂ ಮೆಟ್ರೋ ಸಂಪರ್ಕ: ಬೆಂಗಳೂರಿನ ಸುತ್ತಮುತ್ತ ಭೂಮಿಗೆ ಹೆಚ್ಚುತ್ತಾ ಬೇಡಿಕೆ?

    October 29, 2026

    Comments are closed.

    Our Picks

    ಕ್ಯಾನ್ಸರ್ ಔಷಧಗಳ ಬೆಲೆಯಲ್ಲಿ ಭಾರಿ ಇಳಿಕೆ: ಕ್ಯಾನ್ಸರ್ ರೋಗಿಗಳಿಗೆ ಬಿಗ್ ರಿಲೀಫ್

    October 29, 2026

    ಭಾರತೀಯ ಷೇರು ಮಾರುಕಟ್ಟೆಗೆ ಭಾರೀ ಹೊಡೆತ: ₹30 ಲಕ್ಷ ಕೋಟಿ ಸಂಪತ್ತು ಕರಗಲು 10 ಕಾರಣಗಳೇನು?

    October 28, 2026

    ಕ್ರೆಡಿಟ್ ಕಾರ್ಡ್ ಹೊಂದಿರುವ ಪತಿ ಮೃತಪಟ್ಟರೆ ಸಾಲವನ್ನು ಪತ್ನಿ ತೀರಿಸಬೇಕಾ? ಬ್ಯಾಂಕಿಂಗ್ ನಿಯಮಗಳೇನು?

    October 26, 2026

    PM Kisan ಹಣ ಯಾವಾಗ ಬರುತ್ತೆ? ರೈತರು ಈ ಕೆಲಸಗಳನ್ನು ಮಾಡದಿದ್ದರೆ ಕಂತು ಸ್ಥಗಿತವಾಗಬಹುದು!

    October 26, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಹಾಸನಾಂಬೆ ದರ್ಶನ ವರ್ಷಕ್ಕೊಮ್ಮೆ ಮಾತ್ರವೇಕೆ? ಇದರ ಹಿಂದಿದೆ ಕುತೂಹಲಕಾರಿ ಪೌರಾಣಿಕ ಕಥೆ!

    October 30, 2026

    ಹಾಸನದ ಅಧಿದೇವತೆ ಶ್ರೀ ಹಾಸನಾಂಬೆ ದೇವಿಯ ದರ್ಶನವೆಂದರೆ ಭಕ್ತರಿಗೆ ಅಪಾರ ಭಕ್ತಿ ಮತ್ತು ನಂಬಿಕೆಯ ವಿಷಯ. ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ…

    ಹಾಲಿನ ಬೆಲೆ ಏರಿಕೆ ಬಿಸಿ ಹೋಟೆಲ್‌ ಗಳಿಗೂ ತಟ್ಟಿತು; ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ!

    October 30, 2026

    ವಕೀಲರ ಮೇಲಿನ ಹಲ್ಲೆ ಖಂಡಿಸಿ ತುಮಕೂರಿನಲ್ಲಿ ಪ್ರತಿಭಟನೆ: ವಕೀಲರ ಸಂರಕ್ಷಣಾ ಕಾಯ್ದೆ ಕಠಿಣಗೊಳಿಸಲು ಆಗ್ರಹ

    October 29, 2026

    ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟ ದಂಪತಿ: ಶಾಸಕ ಕೆ.ಎನ್. ರಾಜಣ್ಣ ಸಂತಾಪ

    October 29, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.