Subscribe to Updates
Get the latest creative news from FooBar about art, design and business.
- ಪ್ರಥಮ ಬಿ.ಸಿ.ಎ. ಪದವಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
- ಕುಣಿಗಲ್ ಪುರಸಭಾ ವ್ಯಾಪ್ತಿಯ ಸಾರ್ವಜನಿಕರಿಗೆ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
- ತುಮಕೂರು: ‘ಕರ್ನಾಟಕ ಪಬ್ಲಿಕ್ ಸ್ಕೂಲ್’ ಸಿನಿಮಾ ಮುಹೂರ್ತ ಸಮಾರಂಭ
- ತುಮಕೂರು: ಪಾದರಕ್ಷೆ ತಯಾರಿಕಾ ಸ್ಪರ್ಧೆಗೆ ಅರ್ಜಿ
- ಭೀಕರ ಅಪಘಾತ: ಶನಿಮಹಾತ್ಮ ದೇವಾಲಯ ವ್ಯವಸ್ಥಾಪಕ ಜಗನ್ನಾಥ್ ನಿಧನ
- ನೈರ್ಮಲ್ಯ ಕಾಪಾಡಿ, ಗರ್ಭಾಶಯದ ಕ್ಯಾನ್ಸರ್ ತಡೆಗಟ್ಟಿ: ಮಹಿಳೆಯರಿಗೆ ಕಾವೇರಿ ಎನ್. ಕರೆ
- ಪೌತಿ ಖಾತೆ, ಕಂದಾಯ ಗ್ರಾಮ ಹಕ್ಕುಪತ್ರ, ಪೋಡಿ ಮುಕ್ತ ಅಭಿಯಾನ: ರೈತರ ಅಲೆದಾಟ ತಪ್ಪಿಸಲು ಸರ್ಕಾರದ ಮಹತ್ವದ ಕ್ರಮ
- ತುಮಕೂರನ್ನು ಬೆಂಗಳೂರಿನ ಭಾಗವಾಗಿಸಿ: ಸಾಧನಾ ಸಮಾವೇಶದಲ್ಲಿ ಡಾ.ಜಿ.ಪರಮೇಶ್ವರ್ ಪ್ರಸ್ತಾಪ
Author: admin
ಬೆಂಗಳೂರು: ಅವಧಿ ಮುಗಿದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ಹೆಚ್‌ಎಂ ಟ್ರೇಡರ್ಸ್ ಅಂಗಡಿ ಮೇಲೆ ಸಿಸಿಬಿ ದಾಳಿ ಮಾಡಿದ ಘಟನೆ ವಿಲ್ಸನ್ ಗಾರ್ಡನ್ ಸಮೀಪದ ಸೋಮೇಶ್ವರನಗರದಲ್ಲಿ ನಡೆದಿದೆ. ಪ್ರತಿಷ್ಠಿತ ಬ್ರಾಂಡ್ ನ ಆಹಾರ ಪದಾರ್ಥಗಳು ಎಕ್ಸ್ ಪೆರಿ ಆಗಿದ್ದರೂ ಮಾರಾಟ ಮಾಡಲಾಗುತ್ತಿತ್ತು. ಬಿಸ್ಕತ್, ಮಿಕ್ಸ್ ಚರ್ ಹಾಗೂ ಸ್ವೀಟ್ಸ್ ಸೇರಿದಂತೆ ಗೃಹ ಬಳಕೆ ವಸ್ತುಗಳನ್ನು ಮಾಲೀಕರು ಸೇಲ್ ಮಾಡುತ್ತಿದ್ದ ಮಾಹಿತಿ ಪಡೆದ ಸಿಸಿಬಿ ಅಧಿಕಾರಿಗಳು, ಏಕಾಏಕಿ ದಾಳಿ ಮಾಡಿದ್ದಾರೆ.
ಬೆಂಗಳೂರು: ನಗರದ ವೈದ್ಯರು ಮಾಡಿದ ವಿಶಿಷ್ಟ ಸರ್ಜರಿಯೊಂದು ವೈದ್ಯಲೋಕದಲ್ಲಿ ಅಚ್ಚರಿ ಮೂಡಿಸಿದೆ. 18 ವರ್ಷಗಳ ಹಿಂದೆ ಯುದ್ಧದ ಸಮಯದಲ್ಲಿ ಯೆಮೆನ್ ಮೂಲದ ವ್ಯಕ್ತಿಯೊಬ್ಬನ ತಲೆಗೆ ಹೊಕ್ಕಿದ್ದ ಬುಲೆಟ್ ಅನ್ನು ಇದೀಗ ಬೆಂಗಳೂರಿನ ಆರ್. ವಿ. ಆಸ್ಟರ್ ಆಸ್ಪತ್ರೆಯ ವೈದ್ಯರು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬುಲೆಟ್ ಸ್ಕಲ್ ಬೋನ್ ಒಳಗೆ ನುಸುಳಿ ಕಿವಿಗೆ ಹೊಕ್ಕಿತ್ತು. ವೈದ್ಯರು ಸವಾಲು ಸ್ವೀಕರಿಸಿ ಶಸ್ತ್ರಚಿಕಿತ್ಸೆ ನಡೆಸಿ 3 ಸೆಂಟಿಮೀಟರ್ ಉದ್ದದ ಬುಲೆಟ್ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
12 ವರ್ಷಗಳ ಹಿಂದೆ, ತನ್ನ 18 ನೇ ವಯಸ್ಸಿನಲ್ಲಿ, ಅಮಿತ್ ಚೌಧರಿ ಎಂಬ ವ್ಯಕ್ತಿ ತಾನು ಮಾಡದ ಅಪರಾಧದಲ್ಲಿ ಸಿಕ್ಕಿಹಾಕಿಕೊಂಡು ಜೈಲು ಸೇರಿದ್ದರು. ಉತ್ತರ ಪ್ರದೇಶದ ಮೀರತ್ ನಲ್ಲಿ ಇಬ್ಬರು ಕಾನ್ಸ್ ಟೇಬಲ್ ಗಳ ಹತ್ಯೆಯ ಆರೋಪ ಇವರ ಮೇಲಿತ್ತು. ಈ ಪ್ರಕರಣದಲ್ಲಿ 17 ಆರೋಪಿಗಳ ಪೈಕಿ ಅಮಿತ್ ಚೌಧರಿ ಹೆಸರು ಕೂಡ ಸೇರಿತ್ತು. 2013ರಲ್ಲಿ ಜಾಮೀನು ಪಡೆದು ಹೊರಬಂದ ಇವರು ತಮ್ಮ ಪ್ರಕರಣವನ್ನು ನ್ಯಾಯಾಲಯದಲ್ಲಿ ವಾದ ಮಾಡಲು ಕಾನೂನು ಅಧ್ಯಯನ ಮಾಡಿದರು. ಕೊನೆಗೂ ತಾನು ನಿರಪರಾಧಿ ಎಂಬುದನ್ನು ಸಾಬೀತು ಪಡಿಸಿದರು.
ಇಂದು ದಕ್ಷಿಣ ಒಳನಾಡು, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣದೊಂದಿಗೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಇನ್ನು ಉತ್ತರ ಒಳನಾಡಿನ ಪ್ರತ್ಯೇಕ ಕಡೆಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗಲಿದ್ದು, ಉಳಿದೆಡೆ ಒಣಹವೆಯೇ ಮುಂದುವರಿಯಲಿದೆ. ದಕ್ಷಿಣ ಒಳನಾಡಿನ ಮೈಸೂರು ಮತ್ತು ಮಂಡ್ಯದಲ್ಲಿ ಪ್ರತ್ಯೇಕವಾಗಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನೀಡಿದೆ. ಕರಾವಳಿಯ ಕೆಲವು ಕಡೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ, ಇದೆ. ಚಳಿಗಾಲ ಆರಂಭವಾಗುತ್ತಿದ್ದು ರಾಜ್ಯಾದ್ಯಂತ ಚಳಿ ಜೋರಾಗುತ್ತಿದೆ. ವಿಜಯಪುರ ಹಾಗೂ ಬೀದರ್‌ನಲ್ಲಿ 14.0 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಕರಾವಳಿಯ ಕೆಲವು ಕಡೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ, ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯಲಿದೆ. ಬೆಂಗಳೂರಿನಲ್ಲಿ ಇಂದಿನಿಂದ ಕೆಲವು ದಿನಗಳ ಕಾಲ ತಂಪು ಗಾಳಿ, ಆಗಾಗ ಮೋಡ ಕವಿದ ವಾತಾವರಣ ಉಂಟಾಗಲಿದೆ. ಉಳಿದಂತೆ ಇಲ್ಲಿ ಒಂದೆರಡು ಕಡೆ ಮಳೆಯಾಗುವ ಮುನ್ಸೂಚನೆ ಇದೆ.
ಕಾಂತಾರ ‘ಚಾಪ್ಟರ್ 1′ ಚಿತ್ರದಲ್ಲಿ ನಟಿಸೋಕೆ ಕಲಾವಿದರು ಬೇಕಾಗಿದ್ದಾರೆ ಎಂದು ಹೊಂಬಾಳೆ ಫಿಲ್ಡ್ ಪೋಸ್ಟರ್ ಹಂಚಿ ಕೊಂಡಿದೆ. ಪುರುಷರ ವಯಸ್ಸು 30ರಿಂದ 60 ವರ್ಷ ಅಂತರದಲ್ಲಿ ಹಾಗೂ ಮಹಿಳೆಯರ ವಯಸ್ಸು 18ರಿಂದ 60 ವರ್ಷ ಅಂತರದಲ್ಲಿ ಇರಬೇಕು. ನೋಂದಣಿ ಮಾಡಲು kantara.film ಗೆ ಭೇಟಿ ನೀಡಬೇಕು. ಡಿಸೆಂಬರ್ 14ವರೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇದೆ. ರೀಲ್ಸ್ ಮತ್ತು ಅವುಗಳನ್ನೇ ಹೋಲುವ ವಿಡಿಯೋಗಳಿದ್ದರೆ ಅದನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೊಂಬಾಳೆ ಫೀಲ್ಡ್ ಕಟ್ಟುನಿಟ್ಟಾಗಿ ಹೇಳಿದೆ. ನಟನೆಯಲ್ಲಿ ಆಸಕ್ತಿ ಹೊಂದಿರುವವರು ಅವಕಾಶ ಸದುಪಯೋಗ ಮಾಡಿಕೊಳ್ಳಿ.
ಬಿಬಿಎಂಪಿ ನಿರ್ವಾಹಣೆಯಲ್ಲಿರುವ 167 ಶಾಲೆಗಳ ಪೈಕೆ 73 ಶಾಲೆಗಳಷ್ಟೆ ಸೇಫ್ ಆಗಿದೆ. ಉಳಿದ 94 ಶಾಲಾ ಕಟ್ಟಡಗಳಲ್ಲಿ 67 ಶಾಲಾ ಕಟ್ಟಡಗಳನ್ನು ದುರಸ್ಥಿಗೊಳಿಸಲು, ಹಾಗೂ 19 ಶಾಲೆಗಳನ್ನು ಕೆಡವಿ ಮರು ನಿರ್ಮಾಣ ಮಾಡಲು ಇಂಜಿನಿಯರಿಂಗ್ ವಿಭಾಗದಿಂದ ಬಿಬಿಎಂಪಿಗೆ ಶಿಫಾರಸು ಮಾಡಲಾಗಿದೆ. ಪೂರ್ವ ವಲಯದ 12, ಪಶ್ಚಿಮ ವಲಯದ 06, ದಕ್ಷಿಣ ವಲಯದ 01 ಶಾಲೆಗಳು ಶಿಥಿಲಾವಸ್ಥೆಯಲ್ಲಿ ಇದೆ. ಶಿವಾಜಿ ನಗರ ನರ್ಸರಿ ಶಾಲೆ ಕಟ್ಟಡ ಕುಸಿದ ಪ್ರಕರಣದ ನಂತರ ಟೆಕ್ನಲ್ ಕಮಿಟಿಗೆ ಕಮಿಷನರ್ ರಿಪೋರ್ಟ್ ಕೇಳಿದ್ದಾರೆ. ಬಿಬಿಎಂಪಿ ನಿರ್ವಾಹಣೆಯಲ್ಲಿರುವ ಎಲ್ಲ ಶಾಲೆ ಹಾಗೂ ಆಸ್ಪತ್ರೆ ಕಟ್ಟಡಗಳ ಸುರಕ್ಷಿತಗೆ ರಿಪೋರ್ಟ್ ಕೇಳಿದ್ವಿ. ಇಂಜಿನಿಯರಿಂಗ್ ವಿಭಾಗದಿಂದ ತಾಂತ್ರಿಕವಾಗಿ ಕಟ್ಟಡಗಳ ಕ್ವಾಲಿಟಿ ಚೆಕ್ ಮಾಡಲಾಗಿದೆ. 167 ಶಾಲೆಗಳ ಪೈಕಿ 19 ಶಾಲೆಯ ಕಟ್ಟಡಗಳು ಹಳೆಯದಾಗಿದ್ದು, ಹೊಸ ಕಟ್ಟಡಗಳ ನಿರ್ಮಾಣಕ್ಕೆ ಟೆಕ್ನಿಕಲ್ ಕಮಿಟಿ ಶಿಫಾರಸ್ಸು ಮಾಡಿದೆ. ಉಳಿದ ಬಿಬಿಎಂಪಿಗೆ ಸಂಬಂಧಿಸಿದ ಎಲ್ಲ ಕಟ್ಟಡಗಳ ಕ್ವಾಲಿಟಿ ಬಗ್ಗೆ ಸಹ ರಿಪೋರ್ಟ್ ಕೇಳಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್…
ಪಾಕಿಸ್ತಾನದ ಸೇನಾ ನೆಲೆಯ ಮೇಲೆ ನಡೆದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 23 ಜನರು ಸಾವನ್ನಪ್ಪಿದ್ದಾರೆ. ಅಫ್ಘಾನಿಸ್ತಾನದ ಗಡಿಯಲ್ಲಿರುವ ಖೈಬರ್-ಪಖ್ತುಂಖ್ವಾದ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿ ಈ ದಾಳಿ ನಡೆದಿದೆ. ತೆಹ್ರೀಕ್-ಎ-ತಾಲಿಬಾನ್ ದಾಳಿಯ ಹೊಣೆ ಹೊತ್ತುಕೊಂಡಿದೆ. ಬೆಳಗ್ಗೆ ಎಲ್ಲರೂ ಮಲಗಿದ್ದಾಗ ದಾಳಿ ನಡೆದಿದೆ. ಪಾಕಿಸ್ತಾನ ಸೇನೆಯ ಬೇಸ್ ಕ್ಯಾಂಪ್ ಆಗಿ ಬಳಸುತ್ತಿದ್ದ ಸ್ಥಳದಲ್ಲಿ ಸ್ಫೋಟ ಸಂಭವಿಸಿದೆ. ಆರು ಸದಸ್ಯರ ಭಯೋತ್ಪಾದಕ ಗುಂಪು ಸ್ಫೋಟಕಗಳನ್ನು ತುಂಬಿದ ಟ್ರಕ್ ನೊಂದಿಗೆ ಡರ್ಬನ್ ಪ್ರದೇಶದ ಸೇನಾ ನೆಲೆಗೆ ಆಗಮಿಸಿ ತಮ್ಮನ್ನು ತಾವು ಸ್ಫೋಟಿಸಿಕೊಂಡಿತು. ಸ್ಫೋಟದಲ್ಲಿ ಕಟ್ಟಡ ಧ್ವಂಸಗೊಂಡಿದ್ದು, ದುರಂತದ ಆವೇಗ ಹೆಚ್ಚಿದೆ. ಅವಶೇಷಗಳಿಂದ ದೇಹವನ್ನು ಹೊರತೆಗೆಯಲು ಪ್ರಯತ್ನಗಳು ನಡೆಯುತ್ತಿವೆ. 27 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪ್ರದೇಶದಲ್ಲಿ ಸೇನೆ ಶೋಧ ಕಾರ್ಯಾಚರಣೆ ಆರಂಭಿಸಿದೆ. ವಾಯುನೆಲೆ ಮೇಲಿನ ದಾಳಿಯ ಹೊಣೆಯನ್ನು ತೆಹ್ರೀಕ್-ಎ-ಜಿಹಾದ್ ಪಾಕಿಸ್ತಾನ ಹೊತ್ತುಕೊಂಡಿದೆ. ಟಿಜೆಪಿ ವಕ್ತಾರ ಮುಲ್ಲಾ ಮುಹಮ್ಮದ್ ಖಾಸಿಂ ಇನ್ನಷ್ಟು ದಾಳಿಯ ಎಚ್ಚರಿಕೆ ನೀಡಿದ್ದಾರೆ. ಈ ಭಯೋತ್ಪಾದಕ ಸಂಘಟನೆಯು ಅಫ್ಘಾನಿಸ್ತಾನದ ಮಾದರಿಯಲ್ಲಿ ಪಾಕಿಸ್ತಾನದಲ್ಲಿ ಸರ್ಕಾರ ರಚಿಸಲು…
ಆಧಾರ್ ಕಾರ್ಡ್‌ನ ಉಚಿತ ನವೀಕರಣಕ್ಕಾಗಿ ಗಡುವನ್ನು ವಿಸ್ತರಿಸಲಾಗಿದೆ. ಆಧಾರ್ ಕಾರ್ಡ್‌ನಲ್ಲಿನ ಗುರುತಿನ ಮಾಹಿತಿ, ವಿಳಾಸ ಇತ್ಯಾದಿಗಳನ್ನು ಉಚಿತವಾಗಿ ಅಪ್ ಡೇಟ್ ಮಾಡುವ ಗಡುವು ನಾಳೆಗೆ ಕೊನೆಗೊಳ್ಳಲಿದೆ ಎಂಬುದು ಈ ಹಿಂದೆ ನೀಡಿದ ಮಾಹಿತಿ. ಗಡುವು ಸಮೀಪಿಸುತ್ತಿದ್ದಂತೆ ಅಕ್ಷಯ ಕೇಂದ್ರಗಳು ಸೇರಿದಂತೆ ಸೇವಾ ಕೇಂದ್ರಗಳು ತುಂಬಿ ತುಳುಕುತ್ತಿದ್ದವು. ಈ ಸಂದರ್ಭದಲ್ಲಿ, ಉಚಿತ ಆಧಾರ್ ನವೀಕರಣದ ಗಡುವನ್ನು ವಿಸ್ತರಿಸಲಾಗಿದೆ. ಆಧಾರ್ ಕಾರ್ಡ್ ನವೀಕರಣ ದಿನಾಂಕವನ್ನು ಇನ್ನೂ ಮೂರು ತಿಂಗಳವರೆಗೆ ವಿಸ್ತರಿಸಲಾಗಿದೆ. ಏಕೆಂದರೆ ಅನೇಕ ಜನರು ಅದನ್ನು ನವೀಕರಿಸಬೇಕಾಗಿದೆ. 14ನೇ ಮಾರ್ಚ್ 2024 ರವರೆಗೆ ಆಧಾರ್ ಮಾಹಿತಿಯನ್ನು ಉಚಿತವಾಗಿ ನವೀಕರಿಸುವ ಸೌಲಭ್ಯ. myAadhaar ಪೋರ್ಟಲ್ ಮೂಲಕ ಆಧಾರ್ ಅನ್ನು ನವೀಕರಿಸಬಹುದು. 50 ಶುಲ್ಕ ಪಾವತಿಸಿ ಹೆಸರು, ಜನ್ಮ ದಿನಾಂಕ, ವಿಳಾಸ ಇತ್ಯಾದಿಗಳನ್ನು ಆನ್ ಲೈನ್ ನಲ್ಲಿ ಸರಿಪಡಿಸಬಹುದು. ಫೋಟೋ, ಬಯೋಮೆಟ್ರಿಕ್, ಐರಿಸ್ ಮುಂತಾದ ಮಾಹಿತಿಯನ್ನು ನವೀಕರಿಸಲು ಆಧಾರ್ ಕೇಂದ್ರಗಳಿಗೆ ಹೋಗಬೇಕು. 10 ವರ್ಷಕ್ಕೊಮ್ಮೆಯಾದರೂ ಆಧಾರ್ ಮಾಹಿತಿಯನ್ನು ನವೀಕರಿಸಬೇಕು ಎಂದು ವಿಶಿಷ್ಟ ಗುರುತಿನ ಪ್ರಾಧಿಕಾರ ಸೂಚಿಸಿದೆ. https://myaadhaar.uidai.gov.in/ …
ಕೇರಳ-ಕರ್ನಾಟಕ ಗಡಿ ಭಾಗದ ತಲಪಾಡಿಯ ಕಿನ್ಯಾ ಗ್ರಾಮದ ಸಂತ್ಯಾಗುತ್ತು ಬಳಿ ಅಕ್ರಮ ಮದ್ಯದ ಅಡ್ಡೆಯ ಮೇಲೆ 25ಕ್ಕೂ ಹೆಚ್ಚು ಅಬಕಾರಿ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ. ಖಚಿತ ಮಾಹಿತಿ ಮೇರೆಗೆ, ಅಕ್ರಮವಾಗಿ ಸಾರಾಯಿ ತಯಾರಿಸುತ್ತಿದ್ದ ನಿತ್ಯಾನಂದ ಭಂಡಾರಿ ಎಂಬಾತನ ಮನೆ ಮೇಲೆ ದಾಳಿ ನಡೆಸಲಾಗಿದೆ ಎಂದು ಅಬಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದಾಳಿ ವೇಳೆ 2240 ಲೀಟರ್ ಸ್ಪಿರಿಟ್ ಹಾಗೂ 222 ಲೀಟರ್ ನಕಲಿ ಲಿಕ್ಕರ್ ಹಾಗೂ ಅದಕ್ಕೆ ಬಳಸಿದ್ದ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮವಾಗಿ ತಯಾರಿಸಿದ ದೇಶಿ ನಿರ್ಮಿತ ಮದ್ಯವನ್ನು ನೆರೆಯ ಕೇರಳಕ್ಕೆ ಸರಬರಾಜು ಮಾಡಲಾಗುತ್ತಿತ್ತು. ದಾಳಿ ವೇಳೆ ಆರೋಪಿ ಭಂಡಾರಿ ಪರಾರಿಯಾಗಿದ್ದಾನೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಅಬಕಾರಿ ಇಲಾಖೆ ಮಂಗಳೂರು ವಿಭಾಗದ ಜಂಟಿ ನಿರ್ದೇಶಕ ನಾಗರಾಜಪ್ಪ ಟಿ ಮತ್ತು ಅಬಕಾರಿ ಉಪ ಆಯುಕ್ತ ಟಿ ಎಂ ಶ್ರೀನಿವಾಸ್ ಅವರ ನಿರ್ದೇಶನದಂತೆ ದಾಳಿ ನಡೆಸಲಾಗಿದೆ.
ಮಹಾರಾಷ್ಟ್ರ: ರಾಯಗಡ ಜಿಲ್ಲೆಯ ಖೋಪೋಲಿಯಲ್ಲಿರುವ ಆಂಚಲ್ ಕೆಮಿಕಲ್ ಫಾರ್ಮಾಸ್ಯುಟಿಕಲ್ ಕಂಪನಿಯ ಆವರಣದಲ್ಲಿ ಅಧಿಕಾರಿಗಳು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಖೋಪೋಲಿಯ ಧೇಕು ಗ್ರಾಮದಲ್ಲಿರುವ ಇಂಡಿಯಾ ಎಲೆಕ್ಟ್ರಿಕ್ ಪೋಲ್ಸ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಯ ಆವರಣದಲ್ಲಿ ಎಂಡಿ ಡ್ರಗ್ ಕಂಪನಿಯನ್ನು ನಿರ್ವಹಿಸುತ್ತಿದ್ದಾರೆ ಎಂದು ವ್ಯಕ್ತಿಗಳು ಆರೋಪಿಸಿದ್ದರು. ಪೊಲೀಸ್ ಕಾರ್ಯಾಚರಣೆಯಲ್ಲಿ ಎಂಡಿ ಡ್ರಗ್ ಪೌಡರ್ ತಯಾರಿಸಲು ಬಳಸಲಾಗಿದ್ದ 15 ಲಕ್ಷ ರೂಪಾಯಿ ಮೌಲ್ಯದ ಕಚ್ಚಾ ಸಾಮಗ್ರಿಗಳು ಹಾಗೂ ಪ್ರಕ್ರಿಯೆಯಲ್ಲಿ ಬಳಸಲಾಗಿದ್ದ 65 ಲಕ್ಷ ರೂಪಾಯಿ ಮೌಲ್ಯದ ಯಂತ್ರೋಪಕರಣಗಳು ಮತ್ತು 107 ಕೋಟಿ ರೂಪಾಯಿ ಮೌಲ್ಯದ ಎಂಡಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಕೊಂಕಣ ರೇಂಜ್ ಐಜಿ ಪ್ರವೀಣ್ ಪವಾರ್ ಎಎನ್‌ಐಗೆ ಮಾಹಿತಿ ನೀಡಿದ್ದು, `ಆಂಚಲ್ ಕೆಮಿಕಲ್~ನಲ್ಲಿ ನಡೆದ ದಾಳಿಯಲ್ಲಿ 107 ಕೋಟಿ ರೂಪಾಯಿ ಮೌಲ್ಯದ ಎಂಡಿ ಡ್ರಗ್ಸ್ ಜಪ್ತಿ ಮಾಡಲಾಗಿದ್ದು, ಬಂಧಿತ ವ್ಯಕ್ತಿಗಳ ವಿಚಾರಣೆ ನಡೆಸಿದ ಪೊಲೀಸರು 218 ರೂಪಾಯಿ ಮೌಲ್ಯದ 174 ಕೆಜಿ ಎಂಡಿ ಡ್ರಗ್ಸ್ ಪತ್ತೆ ಹಚ್ಚಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಾಂತರ ಹಣವನ್ನು ಮತ್ತೊಂದು ಗೋದಾಮಿನಲ್ಲಿ ಸಂಗ್ರಹಿಸಲಾಗಿದೆ.…