Subscribe to Updates
Get the latest creative news from FooBar about art, design and business.
- ತುಮಕೂರು: ಎಸ್ ಐಆರ್ ಗೊಂದಲ, ಹೆಲ್ಪ್ ಲೈನ್ ಗೆ ಚಾಲನೆ ನೀಡಿದ ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ್ ಹಾಲಪ್ಪ
- ತುಮಕೂರು: ಮಕ್ಕಳ ಜನನ ಪ್ರಮಾಣಪತ್ರ ಲೋಪದೋಷ ನಿವಾರಣೆಗೆ ಸರ್ಕಾರಿ ಆದೇಶ
- ತುಮಕೂರು: ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿಗೆ ಅರ್ಜಿ ಆಹ್ವಾನ
- ವಿದ್ಯುತ್ ಶಾಕ್ ನಿಂದ ವಿದ್ಯಾರ್ಥಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ
- ಮಗು ಪಡೆಯಲು ಪ್ಲ್ಯಾನ್ ಮಾಡ್ತಿದ್ದೀರಾ? ಹಾಗಾದ್ರೆ ದಂಪತಿಗಳು ಈ ಒಂದು ಹವ್ಯಾಸ ರೂಢಿಸಿಕೊಳ್ಳಿ!
- 723 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಕೆಇಎ
- ಬೆಳಗಾವಿ: ರಿಪೇರಿ ವೇಳೆ ಕುಸಿದು ಬಿದ್ದ ಮನೆ — ಇಬ್ಬರು ಕಾರ್ಮಿಕರು ದುರ್ಮರಣ
- ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿದ ಗಾಯಕಿ ಎಸ್.ಜಾನಕಿ ಅಂತ್ಯಕ್ರಿಯೆ; ಚಿತೆಗೆ ಮೊಮ್ಮಗಳಿಂದ ಅಗ್ನಿಸ್ಪರ್ಶ
Author: admin
ಪಾವಗಡ: ತಾಲ್ಲೂಕಿನ ರೈತರು ಈಗಾಗಲೇ ಬರ ಪರಿಸ್ಥಿತಿಯನ್ನು ಎದು ರಿಸುತ್ತಿದ್ದು, ಇಲ್ಲಿಯಾವುದೇ ನೀರಾವರಿ ಸೌಲಭ್ಯ ಇಲ್ಲದಿರುವುದುತಾಲೂಕಿನ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದಂತಾಗಿದೆ ಎಂದುಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು ತಿಳಿಸಿದರು. ಪಟ್ಟಣದ ನಿರೀಕ್ಷಣ ಮಂದಿರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು, ತಾಲೂಕಿಗೆ ಇದುವರೆಗೂ ಭದ್ರಾ ನೀರು ಬಂದಿರುವುದಿಲ್ಲ, ಸರ್ಕಾರವು ಶೀಘ್ರವೇ ರೈತರ ಸಮಸ್ಯೆಗೆ ಸ್ಪಂದಿಸ ಬೇಕು, ರೈತರಿಗೆ ಕನಿಷ್ಠ 10,000 ಬೆಳೆ ನಷ್ಟ ಪರಿಹಾರ ನೀಡಬೇಕು. ಸುಟ್ಟು ಹೋಗಿರುವಂತಹ ಟಿಸಿಗಳನ್ನು ಸರಿಪಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು, ಬರ ಪರಿಸ್ಥಿತಿ ಹಿನ್ನೆಲೆ ಯಾವುದೇ ಬ್ಯಾಂಕುಗಳು ರೈತರಯಿಂದ ಬಲವಂತ ಸಾಲ ವಸೂಲಿ ಮಾಡಬಾರದೆಂದು ತಿಳಿಸಿದರು. ಈ ಹಿಂದೆ ಇದ್ದ ಅಕ್ರಮ ಸಕ್ರಮ ಯೋಜನಂತೆ ರೈತರ ಬೋರುಗಳಿಗೆ ವಿದ್ಯುತ್ ಸಂಪರ್ಕ ನೀಡಬೇಕೆಂದು ಒತ್ತಾಯಿಸಿದರು. ಕಾರ್ಯಕ್ರಮದಲ್ಲಿ ರೈತ ಸಂಘದ ಅಧ್ಯಕ್ಷ ಪೂಜಾರಪ್ಪ, ರೈತ ಸಂಘದ ತಾಲೂಕು ಕಾರ್ಯದರ್ಶಿಲಾದ ನರಸಪ್ಪ, ಶಿವು, ಚಿತ್ತಯ್ಯ, ತಾಲೂಕು ಯುವ ಘಟಕದ ಕಾರ್ಯದರ್ಶಿ ರಾಮಾಂಜಿನಪ್ಪ ವೀರಭದ್ರಪ್ಪ, ಗುಡಿಪಲ್ಲಿ, ಹನುಮಂತರಾಯ, ಸದಾಶಿವಪ್ಪ,…
ರಾಮಾಯಣದಲ್ಲಿ ಶ್ರೀ ರಾಮಸೇತು ನಿರ್ಮಾಣದ ವೇಳೆ ಪುಟ್ಟ ಪ್ರಾಣಿ ಅಳಿಲಿನ ಸೇವೆ ಪ್ರಶಂಸನಾರ್ಹ ಮತ್ತು ಗಮನ ಸೆಳೆಯುವಂತಹದ್ದು, ಇದೇ ಒಂದು ವಿಷಯವನ್ನಿಟ್ಟುಕೊಂಡು ಬೆಂಗಳೂರಿನ ಕೈಗಾರಿಕೋದ್ಯಮಿಯೊಬ್ಬರು ನಿರ್ಮಿಸಿರುವ ಬೃಹದಾಕಾರದ ಅಳಿಲು ಪುತ್ಥಳಿ, ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯ ನವ ನಿರ್ಮಾಣದ ವೇದಿಕೆಯಲ್ಲಿ ಶಾಶ್ವತವಾಗಿ ವಿರಾಜಮಾನವಾಗಲಿದೆ. ಬೆಂಗಳೂರಿನ ಪೀಣ್ಯದ ನಾಗಸಂದ್ರ ಮೆಟ್ರೋ ಮುಂಭಾಗದಲ್ಲಿರುವ ಪ್ರಸಿದ್ಧಿ ಇಂಜಿನಿಯರ್ಸ್ ಕಂಪೆನಿಯ ಮಾಲೀಕರಾದ ಸಿ. ಪ್ರಕಾಶ್ ಅವರು ಎರಡೂವರೆ ಟನ್ ಕಾರ್ಟನ್ ಸ್ಟೀಲ್ ಬಳಸಿ, 15 ಅಡಿ ಎತ್ತರ ಹಾಗೂ 7.5 ಅಡಿ ಅಗಲ ವಿಸ್ತೀರ್ಣದಲ್ಲಿ, ಶ್ರೀರಾಮನ ಸೇವೆ ಎಂದು ನಿರ್ಮಿಸಿರುವ ಬೃಹದಾಕಾರದ ಅಳಿಲು ಪುತ್ಥಳಿ, ಅಯೋಧ್ಯೆಯ ಕೇಂದ್ರ ರೈಲ್ವೆ ನಿಲ್ದಾಣ ಆವರಣದ ಮಧ್ಯೆ ಭಾಗದಲ್ಲಿ ಅನಾವರಣಗೊಳ್ಳಲಿದೆ. ಬೆಳಿಗ್ಗೆ ಬೃಹದಾಕಾರದ ಅಳಿಲು ಪುತ್ಥಳಿ ಹೊತ್ತ ಟ್ರಕ್ ರಸ್ತೆ ಮಾರ್ಗವಾಗಿ ಅಯೋಧ್ಯೆಯತ್ತ ತೆರಳಿತು. ಇದೇ 11 ನೇ ತಾರೀಖಿಗೆ ಅಯೋಧ್ಯೆಗೆ ತಲುಪಲಿದ್ದು, 12 ನೇ ತಾರೀಖು ಅಯೋಧ್ಯೆ ರೈಲ್ವೆ ನಿಲ್ದಾಣ ಆವರಣದಲ್ಲಿ ಅಳಿಲು ಪ್ರತಿಷ್ಠಾಪನೆಗೊಳ್ಳಲಿದೆ. ಪ್ರತಿಷ್ಟಾಪನೆಗೆ ಸಂಬಂಧಿಸಿದಂತೆ ಈಗಾಗಲೇ ರೈಲ್ವೆ ಇಲಾಖೆ…
ಅಯೋಧ್ಯೆಯ ರಾಮಮಂದಿರದಲ್ಲಿ 51 ಇಂಚು ಎತ್ತರ ಮತ್ತು 1.5 ಟನ್ ತೂಕದ ರಾಮನ ವಿಗ್ರಹವನ್ನು ಸ್ಥಾಪಿಸಲಾಗುವುದು ಎಂದು ರಾಮಮಂದಿರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ. ಜನವರಿ 22 ರಂದು ರಾಮಮಂದಿರದ ಉದ್ಘಾಟನಾ ಸಮಾರಂಭ. ಅಂದು ಶ್ರೀರಾಮನ ದೊಡ್ಡ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತದೆ. ರಾಮಮಂದಿರ ಉದ್ಘಾಟನೆಗೂ ಮುನ್ನ ಇಬ್ಬರು ಮುಸ್ಲಿಂ ಮಹಿಳೆಯರು ಅಯೋಧ್ಯೆಯಿಂದ ಕಾಶಿಗೆ ‘ರಾಮ ಜ್ಯೋತಿ’ ತರಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ವಾರಣಾಸಿಯ ನಜ್ನೀನ್ ಅನ್ಸಾರಿ ಮತ್ತು ನಜ್ಮಾ ಪರ್ವಿನ್ ದೀಪವನ್ನು ಅಯೋಧ್ಯೆಗೆ ತರಲಿದ್ದಾರೆ. ಶ್ರೀರಾಮನು ಎಲ್ಲರ ಮೂಲಪುರುಷ ಎಂಬ ಸಂದೇಶವನ್ನು ಸಾರುವುದು ಇದರ ಉದ್ದೇಶವಾಗಿದೆ. ಎಲ್ಲಾ ಭಾರತೀಯರು ಒಂದೇ ಎಂದು ಅವರು ಹೇಳುತ್ತಾರೆ. ದೀಪದೊಂದಿಗೆ ಅವರ ಅಯೋಧ್ಯೆಯ ಪ್ರಯಾಣವನ್ನು ಕಾಶಿಯ ದೊಮರಾಜ್ ಓಂ ಚೌಧರಿ ಮತ್ತು ಪಾತಾಳಪುರಿ ಮಠದ ಮಹಂತ್ ಬಾಲಕ ದಾಸ್ ಅವರು ಪ್ರಾರಂಭಿಸಿದರು. ನಜ್ಮಾ ಅವರು ಬಿಎಚ್ ಯುನಿಂದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಪಿಎಚ್ ಡಿ ಮಾಡಿದ್ದಾರೆ. 17 ವರ್ಷಗಳಿಂದ…
ದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯವರು ದೇಶಾದ್ಯಂತ ಪದೇ ಪದೇ ಪ್ರವಾಸ ಮಾಡುತ್ತಿದ್ದರೂ ಮಣಿಪುರಕ್ಕೆ ಏಕೆ ಭೇಟಿ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಖರ್ಗೆ, ರಾಹುಲ್ ಗಾಂಧಿಯವರ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯ ಒಳನೋಟಗಳನ್ನು ಹಂಚಿಕೊಂಡಿದ್ದಾರೆ. “ಮಣಿಪುರದಲ್ಲಿ ಒಂದು ದುರದೃಷ್ಟಕರ ಘಟನೆ ಸಂಭವಿಸಿದೆ ಆದರೆ ಪ್ರಧಾನಿ ಮೋದಿ ಅವರು ಬೀಚ್ ಗೆ ಹೋದರು. ನೀರಿನಲ್ಲಿ ಈಜುವ ಫೋಟೋ ಸೆಷನ್ ಮಾಡಿದರು. ದೇವಾಲಯದ ನಿರ್ಮಾಣ ಸ್ಥಳದಲ್ಲಿ ಫೋಟೋ ತೆಗೆಸಿಕೊಂಡರು. ಕೇರಳ ಮತ್ತು ಮುಂಬೈಗೆ ಹೋಗಿದ್ದರು. ಅವರು ಎಲ್ಲಾ ಕಡೆ ಹೋಗುತ್ತಾರೆ. ಅವರ ಫೋಟೊಗಳನ್ನು ನೀವು ಎಲ್ಲೆಲ್ಲೂ ನೋಡಬಹುದು. ನಂತರ ದೇವರ ‘ದರ್ಶನ’ದಂತೆಯೇ. ಆದರೆ ಈ ಮಹಾನ್ ವ್ಯಕ್ತಿ ಮಣಿಪುರಕ್ಕೆ ಯಾಕೆ ಹೋಗಲಿಲ್ಲ? ಎಂದು ಖರ್ಗೆ ಕೇಳಿದ್ದಾರೆ.
ಚಾಮರಾಜನಗರ: ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಚಾಮರಾಜನಗರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಶನಿವಾರ ಭೇಟಿ ನೀಡಿದ್ದಾರೆ. ನಗರದ ಸಂತೇಮರಳ್ಳಿ ಸರ್ಕಲ್ ನಲ್ಲಿ ಬಿಜೆಪಿ ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ ಮಾಡಲಾಗಿದೆ. ಈ ವೇಳೆ ಮಾಜಿ ಶಾಸಕರಾದ ಎನ್. ಮಹೇಶ್, ನಿರಂಜನ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕರ್ತರ ಸಭೆ ಬಳಿಕ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದೆ ಯಾವಾಗ ವಿಧಾನಸಭಾ ಚುನಾವಣೆ ಬರುತ್ತೆ ಗೊತ್ತಿಲ್ಲ ಕಾರ್ಯಕರ್ತರೆ ನೀವು ಆಶೀರ್ವಾದ ಮಾಡಬೇಕು ಎಂದಿದ್ದಾರೆ. 130 ರಿಂದ 140 ಸ್ಥಾನವನ್ನ ಭಾರತೀಯ ಜನತಾ ಪಾರ್ಟಿಗೆ ನೀಡಬೇಕು. ಚಾಮರಾಜನಗರದ 4 ವಿಧಾನಸಭಾ ಕ್ಷೇತ್ರದಲ್ಲೂ ಕಮಲ ಅರಳಬೇಕು ನಮ್ಮ ಅಭ್ಯರ್ಥಿ ಗೆಲ್ಲಬೇಕು ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ: ತನ್ನ ಸೋದರಸಂಬಂಧಿಯ ಯುವತಿಗೆ ತನ್ನ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕಾಗಿ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ. 25 ವರ್ಷದ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕೃತ್ಯವನ್ನು ಮಾಡಿದ ಯುವತಿಯ ಚಿಕ್ಕಪ್ಪನ ಮಗ ಜ್ಞಾನ್ ಪ್ರಕಾಶ್ (26) ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಪ್ರಕಾಶ್ ಯುವತಿಯ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಯುವತಿಯನ್ನು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಎಸ್ಪಿ ಲಕ್ಷ್ಮಿ ನಿವಾಸ್ ಮಿಶ್ರಾ ಹೇಳಿದ್ದಾರೆ. ಪೊಲೀಸರ ತನಿಖೆ ಪ್ರಕಾರ, ಜ್ಞಾನ್ ಪ್ರಕಾಶ್ ಈ ಯುವತಿಯನ್ನು ಮದುವೆಯಾಗುವುದಾಗಿ ಹೇಳಿಕೊಂಡಿದ್ದಾನೆ, ಆದರೆ ಯುವತಿ ಈ ಮದುವೆ ಒಪ್ಪಿಲ್ಲ ಎಂದು ಹೇಳಲಾಗಿದೆ. ತನ್ನನ್ನು ತಿರಸ್ಕರಿಸಿದ್ದಕ್ಕಾಗಿ ಆಕೆಯ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಘಟನೆ ನಡೆದ ತಕ್ಷಣ ಆತ ಅಲ್ಲಿಂದ ಪರಾರಿಯಾಗಿದ್ದು. ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹಾಗೂ ಆತನ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ನಮ್ಮತುಮಕೂರು ವಿಶೇಷ ವರದಿ: ತುಮಕೂರು ಜಿಲ್ಲೆಯಲ್ಲಿ ಏನು ನಡೆಯುತ್ತಿದೆ? ದಲಿತರಿಗೆ ಸ್ಮಶಾನ ಇದೆ ಎನ್ನುವ ಜಿಲ್ಲಾಡಳಿತ, ಸ್ಮಶಾನಕ್ಕೆ ಮೂಲಭೂತ ಸೌಕರ್ಯವನ್ನೇ ಒದಗಿಸಿಲ್ಲ. ಒಂದು ಸ್ಮಶಾನಕ್ಕೆ ಮೂಲಭೂತ ಸೌಕರ್ಯ ಒದಗಿಸಲೂ ಸಾಧ್ಯವಾಗದಷ್ಟು ಜಿಲ್ಲಾಡಳಿತ ಗತಿಗೆಟ್ಟು ನಿಂತಿದ್ಯಾ? ಅನ್ನೋ ಪ್ರಶ್ನೆಗಳು ಸೃಷ್ಟಿಯಾಗಿವೆ. ಅಂತ್ಯಸಂಸ್ಕಾರ ಮಾಡಲಾಗಿದ್ದ ಮೃತದೇಹವನ್ನು ಮೃತರ ಕುಟುಂಬಸ್ಥರ ಗಮನಕ್ಕೂ ತಾರದೇ, ಮೃತದೇಹವನ್ನು ಹೊರತೆಗೆದು ಬೆಳ್ಳಂ ಬೆಳ್ಳಗೆ ಬೇರೆಡೆಗೆ ಸ್ಥಳಾಂತರಿಸಿದ್ದಾರೆ. ಮೃತದೇಹವನ್ನು ಸ್ಥಳಾಂತರಿಸಲು ಅಧಿಕಾರಿಗಳು ತೋರಿದ ಆತುರ, ಉತ್ಸಾಹ ದಲಿತರ ಸ್ಮಶಾನಕ್ಕೆ ಮೂಲಭೂತ ಸೌಕರ್ಯ ಒದಗಿಸುವಾಗ ಇರಲಿಲ್ಲವಲ್ಲ… ಅದೇ ನಿಜವಾದ ದುರಂತ, ನಾಚಿಕೆಗೇಡಿನ ಸಂಗತಿ. ತುಮಕೂರು ತಾಲೂಕು ಉರ್ಡಿಗೆರೆ ಹೋಬಳಿದುರ್ಗದ ಹಳ್ಳಿ ಗ್ರಾಮಕ್ಕೆ ಜಿಲ್ಲಾಡಳಿತ ರುದ್ರಭೂಮಿಗೆಂದು 2 ಎಕರೆ ಜಮೀನು ಮಂಜೂರು ಮಾಡುತ್ತದೆ. ಈ ಜಾಗಕ್ಕೆ ಮೃತದೇಹಗಳನ್ನು ಕೊಂಡೊಯ್ಯಲು ಕನಿಷ್ಠ ಕಾಲು ದಾರಿಯೂ ಕೂಡ ಇರುವುದಿಲ್ಲ. ಗ್ರಾಮದ ಕೆಲವರಿಗೆ ಈ ರುದ್ರಭೂಮಿ ಎಲ್ಲಿದೆ ಎಂಬ ಮಾಹಿತಿಯೇ ಇಲ್ಲ. ಈ ಜಾಗದಲ್ಲಿ ಮೂಲಭೂತ ಸೌಲಭ್ಯಗಳಿಲ್ಲ. ಹೀಗಿರುವ ಮಧ್ಯೆ ಗ್ರಾಮದ ಡಿ.ಪಿ.ತಿಮ್ಮರಾಜು ಎಂಬವರು, ಅರೆಗುಜ್ಜನಹಳ್ಳಿ ಗ್ರಾಪಂ ಪಿಡಿಓ…
ವಿಜಯಪುರ: 2 ಸರ್ಕಾರಿ ಬಸ್ ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿರುವಂತಹ ಘಟನೆ ವಿಜಯಪುರ ತಾಲೂಕಿನ ಕವಲಗಿ ಬಳಿ ಹೆದ್ದಾರಿಯಲ್ಲಿ ನಡೆದಿದೆ. ಸಾಜೀದಾ ಬೇಗಂ(36), ರೋಹಿಣಿ ಪಂಚಾಳ(31) ಮೃತರು. ಸಾಜೀದಾ ಬಸನವಬಾಗೇಬಾಡಿ ತಾಲೂಕಿನ ಡೋಣೂರು ನಿವಾಸಿ. ಮೃತ ರೋಹಿಣಿ ಪಂಚಾಳ ಕಲಬುರಗಿ ನಗರದ ನಿವಾಸಿ. ಸದ್ಯ ಗಾಯಾಳು ಪ್ರಯಾಣಿಕರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ
ತುರುವೇಕೆರೆ: ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರರ ಜಯಂತಿಯನ್ನು ಆಚರಿಸಲು ಸರ್ಕಾರ ಸುತ್ತೋಲೆ ಹೊರಡಿಸಿದ್ದು ಅದರಂತೆ ಪೂರ್ವ ಭಾವಿ ಸಭೆಯನ್ನು ತಹಶೀಲ್ದಾರ್ ವೈ. ಎಂ. ರೇಣುಕುಮಾರ್ ನೇತೃತ್ವದಲ್ಲಿ ನಡೆಸಲಾಯಿತು. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನಾಂಕ : 15-01-24 ರ ಸೋಮವಾರ ತಾಲ್ಲೂಕು ಕಚೇರಿಯಲ್ಲಿ ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ, ತಾಲ್ಲೂಕಿನ ಸಾರ್ವಜನಿಕರು ಶ್ರೀ ಸಿದ್ದರಾಮೇಶ್ವರರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಎಂದು ಮನವಿ ಮಾಡಿದರು. ತಾಲ್ಲೂಕು ಭೋವಿ ಸಮಾಜದ ಅಧ್ಯಕ್ಷ ಮಹಾಲಿಂಗಯ್ಯ ಮಾತನಾಡಿ, ಇದೇ ಕಾರ್ಯಕ್ರಮದಲ್ಲಿ ನಮ್ಮ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ಹಾಗೂ ಸಮಾಜದ ಹಿರಿಯ ಜೀವಿಗಳಿಗೆ ಗೌರವಿಸಿ ಸನ್ಮಾನಿಸಲಾಗುವುದು, ತಾಲ್ಲೂಕಿನ ನಮ್ಮ ಸಮಾಜದ ಬಂಧುಗಳು ಮತ್ತು ವೀರಶೈವ ಸಮಾಜ ಬಾಂಧವರು ಹಾಗೂ ತಾಲ್ಲೂಕಿನ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ಕೋರಿದರು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಚಂದ್ರಶೇಖರ್, ರೊಟರಿ ಇನ್ನರ್ ವೀಲ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ ಗೀತಾ ಸುರೇಶ…
ತುಮಕೂರು: ಅಕ್ರಮ ಸಂಬಂಧದಿಂದ ಗರ್ಭಿಣಿಯಾಗಿದ್ದ ಯುವತಿಯೊಬ್ಬಳು ಮಗುವಿನ ಜನನವನ್ನೆ ಮರೆಮಾಚಿ ಹಸುಗೂಸಿನ ಸಾವಿಗೆ ಕಾರಣವಾಗಿರೋ ಘಟನೆ ತುಮಕೂರಿನ ಅರೇಗುಜ್ಜನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮನೆಯಲ್ಲಿ ಅತಿ ಸರಳವಾದ ಉಡುಪನ್ನು ಧರಿಸಿಕೊಂಡು ಗರ್ಭ ಧರಿಸಿರೋದನ್ನೇ ಅವಿವಾಹಿತೆ ಮುಚ್ಚಿಟ್ಟಿದ್ದಳು. ಕೊನೆಗೆ ಯಾರಿಗೂ ಗೊತ್ತಾಗದಂತೆ ತಾನೇ ಸ್ವಯಂ ಹೆರಿಗೆ ಮಾಡಿಕೊಂಡಿದ್ದಳು. ಬಳಿಕ ಸಮಾಜಕ್ಕೆ ಹೆದರಿ ಹೆತ್ತಕೂಸನ್ನೆ ಬಯಲಿಗೆಸೆದಿದ್ದಳು. ಪೋಷಕರು ಇಲ್ಲದ ಹಿನ್ನೆಲೆ ಸ್ವಂತ ಅಕ್ಕನ ಮನೆಯಲ್ಲಿ ಆಶ್ರಯ ಪಡೆದಿದ್ದ ಯುವತಿ ಸಮಾಜಕ್ಕೆ ಹೆದರಿ ಈ ರೀತಿಯ ಕೃತ್ಯ ನಡೆಸಿದ್ದಾಳೆ. ಮೂಲತಃ ಗೌರೀಪುರ ಗ್ರಾಮದ 25 ವರ್ಷದ ಯುವತಿ ಎರಡು ದಿನಗಳ ಹಿಂದಷ್ಟೇ ರಾತ್ರಿ 10 ಗಂಟೆಯ ಸುಮಾರಿಗೆ ಮನೆಯಿಂದ ಹೊರಗೆ ಹೋಗಿ, ತಾನೇ ಸ್ವಯಂ ಹೆರಿಗೆ ಮಾಡಿಕೊಂಡಿದ್ದಳು. ನಂತರ ಮಗುವನ್ನ ಅಲ್ಲಿಯೇ ಪಕ್ಕದಲ್ಲಿ ಎಸೆದು ಮನೆಗೆ ತೆರಳಿದ್ದಳು. ಮನೆಗೆ ಹೋಗಿ ಋತುಚಕ್ರದ ಕಾರಣ ಹೇಳಿ ಸ್ನಾನ ಮಾಡಿದ್ದಳು. ಬೆಳಿಗ್ಗೆ ನವಜಾತ ಹೆಣ್ಣುಮಗುವಿನ ಮೃತದೇಹ ಪತ್ತೆಯಾಗಿದ್ದು, ಕೂಡಲೇ ಪೊಲೀಸರಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಮಕ್ಕಳ ರಕ್ಷಣಾ ಘಟಕ, ಆರೋಗ್ಯ…