Author: admin

ಅಪ್ರಾಪ್ತ ಬಾಲಕಿಗೆ ದೈಹಿಕ ಹಿಂಸೆ ನೀಡಿದ ಯೋಧ ಮತ್ತು ಆತನ ಪತ್ನಿಯನ್ನು ಬಂಧಿಸಲಾಗಿದೆ. ಹಿಮಾಚಲ ಪ್ರದೇಶದ ಪಾಲಂಪುರದಲ್ಲಿ ಈ ಘಟನೆ ನಡೆದಿದೆ. ಬಾಲಕಿ ತೀವ್ರ ಕ್ರೌರ್ಯ ಎದುರಿಸಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಮಗುವಿನ ದೇಹದ ಮೇಲೆ ಸುಟ್ಟ ಗಾಯಗಳು ಮತ್ತು ಗಾಯಗಳ ಗುರುತುಗಳಿವೆ. ಮೂಗು ಮುರಿತ ಮತ್ತು ನಾಲಿಗೆಯಲ್ಲಿ ಆಳವಾದ ಗಾಯಗಳಿವೆ ಎಂದು ಮೂಲಗಳು ತಿಳಿಸಿವೆ. ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯ ಮೇಜರ್ ಶೈಲೇಂದ್ರ ಯಾದವ್ ಮತ್ತು ಅವರ ಪತ್ನಿ ಕಿಮ್ಮಿ ರಾಲ್ಸನ್ ಅವರನ್ನು ಬಂಧಿಸಲಾಗಿದೆ. 16 ವರ್ಷದ ಬಾಲಕನಿಗೆ ದಂಪತಿ ಆರು ತಿಂಗಳ ಕಾಲ ಚಿತ್ರಹಿಂಸೆ ನೀಡಿ ಹಸಿವಿನಿಂದ ನರಳಿಸಿದ್ದಾರೆ ಎಂಬುದು ದೂರು. ಆಹಾರ ಕೇಳಿದಾಗ ಕಸದ ತೊಟ್ಟಿಯಿಂದ ತಿನ್ನುವಂತೆ ಕೇಳುತ್ತಾರೆ ಎಂದೂ ಮೂಲಗಳು ತಿಳಿಸಿವೆ. ಅವರು ಹೆಚ್ಚಿನ ಸಮಯ ಬಾಲಕಿಯನ್ನು ಬೆತ್ತಲೆಯಾಗಿರಿಸಿದ್ದರು ಎಂಬ ಆರೋಪವೂ ಇದೆ. ವಿವಸ್ತ್ರಗೊಳಿಸಿದ ಬಳಿಕ ಅಮಾನುಷವಾಗಿ ಥಳಿಸಲಾಗಿದೆ. ದೇಹದಿಂದ ರಕ್ತಸ್ರಾವವಾಗುವವರೆಗೆ ಹೊಡೆತ ಮುಂದುವರಿಯುತ್ತದೆ. ದಂಪತಿಗಳು ತನ್ನ ರಕ್ತವನ್ನು ನೆಕ್ಕುವಂತೆ ಒತ್ತಾಯಿಸುತ್ತಾರೆ ಎಂದು ಹುಡುಗಿ ಆರೋಪಿಸಿದ್ದಾರೆ.…

Read More

ಡ್ರಗ್ಸ್ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೈರಾ ಅವರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಕಾಯ್ದೆಯಡಿ ಶಾಸಕರ ವಿರುದ್ಧ ದಾಖಲಾಗಿರುವ ಹಳೆಯ ಪ್ರಕರಣವನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಂಡೀಗಢದಲ್ಲಿರುವ ಶಾಸಕರ ಬಂಗಲೆ ಮೇಲೆ ದಾಳಿ ನಡೆಸಲಾಗಿತ್ತು. ಇಂದು ಬೆಳಗ್ಗೆ ಖೈರಾ ಅವರ ನಿವಾಸದಲ್ಲಿ ಜಲಾಲಾಬಾದ್ ಪೊಲೀಸರು ಶೋಧ ನಡೆಸಿದ್ದಾರೆ. ಖೈರಾ ಅವರು ತಪಾಸಣೆಯ ದೃಶ್ಯಾವಳಿಗಳನ್ನು ಫೇಸ್ ಬುಕ್ ಲೈವ್ ಮೂಲಕ ಹಂಚಿಕೊಂಡಿದ್ದಾರೆ. ಪೊಲೀಸರೊಂದಿಗೆ ವಾಗ್ವಾದ ನಡೆಸುವುದು, ಪೊಲೀಸರಿಗೆ ವಾರಂಟ್ ಕೇಳುವುದು ಮತ್ತು ಬಂಧನಕ್ಕೆ ಕಾರಣವನ್ನು ತನಿಖೆ ಮಾಡುವುದು ಎಫ್‌ಬಿ ಲೈವ್ ನಲ್ಲಿ ನೋಡಬಹುದು. ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದು, ಸದ್ಯದ ಬಂಧನ ರಾಜಕೀಯ ಪ್ರೇರಿತವಾಗಿದೆ ಎಂದು ಲೈವ್‌ ನಲ್ಲಿ ಆರೋಪಿಸಿದರು. ಖೈರಾ ಬೆಳಿಗ್ಗೆ ತನ್ನ ಮಲಗುವ ಕೋಣೆಗೆ ಪ್ರವೇಶಿಸಿದ್ದಕ್ಕಾಗಿ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಅವರು ನಿರಂತರವಾಗಿ ಸರ್ಕಾರವನ್ನು ಟೀಕಿಸುವ ಮತ್ತು ಅದರ ನೀತಿಗಳ ವಿರುದ್ಧ…

Read More

ಬೆಂಗಳೂರು ಹನುಮಂತ ನಗರದ ಇಬ್ಬರು ಮಹಿಳಾ ಕಾನ್ಸ್ ಟೇಬಲ್ ಗಳಿಗೆ ಠಾಣೆಯಲ್ಲೇ ಸೀಮಂತ ಕಾರ್ಯ ನಡೆದಿದೆ. ಮಹಿಳಾ ಸಿಬ್ಬಂದಿಗಳಿಗೆ ಸೀರೆ ಬಳೆ ಹಾಗೂ ಹೂ ಹಣ್ಣು ಕೊಟ್ಟು ಪೊಲೀಸ್ ಸಿಬ್ಬಂಧಿ ಮಡಿಲು ತುಂಬಿದ್ದಾರೆ. ನೀಲವ್ವ ಹಾಗೂ ಪ್ರಿಯಾಂಕ ಎಂಬುವ ಇಬ್ಬರು ಕಾನ್ಸ್ ಟೇಬಲ್ ಗಳಿಗೆ ಸೀಮಂತ ನಡೆದಿದೆ. ಠಾಣೆಯಲ್ಲೇ ಸೀಮಂತ ಕಾರ್ಯವನ್ನ ಶಾಸ್ರೋಕ್ತವಾಗಿ ಠಾಣಾ ಸಿಬ್ಬಂಧಿ ನೆರವೇರಿಸಿದರು.

Read More

ನಾಳೆ ರಸ್ತೆಗೆ ಇಳಿಯುವ ಮುನ್ನ ಜನರು ಒಮ್ಮೆ ಯೋಚನೆ ಮಾಡುವುದು ಒಳ್ಳೆಯದು. ಅಖಂಡ ಕರ್ನಾಟಕ ಹಿನ್ನೆಲೆಯಲ್ಲಿ 1900ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿವೆ. ಅಲ್ಲದೆ ತಮಿಳುನಾಡು ಮತ್ತು ಕರ್ನಾಟಕ ಗಡಿ ಪ್ರದೇಶವನ್ನು ಬಂದ್ ಮಾಡುವಂತಹ ಯೋಜನೆಗಳು ಇದೆ. ಈ ಹಿನ್ನೆಲೆಯಲ್ಲಿ ಹಲವಾರು ಅಡಚಣೆಗಳು ಎದುರಾಗುತ್ತವೆ. ಆದ್ದರಿಂದ ಎಚ್ಚರ ವಹಿಸುವುದು ಮುಖ್ಯ. ಹೋಟಲ್ ಕೂಡ ಇರೋದಿಲ್ಲ, ಓಲ, ಊಬರ್, ಆಟೋ ಚಾಲಕರ ಸಂಘ ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಯಾವುದೇ ವಾಹನ ಸಂಚಾರ ಇರುವುದಿಲ್ಲ.

Read More

ಬೆಂಗಳೂರು: ಕೃಷಿ ಕ್ಷೇತ್ರದ ಸುಸ್ಥಿರ ಅಭಿವೃದ್ಧಿ ನಮ್ಮ ಆಶಯ ಇದಕ್ಕಾಗಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ಬದ್ದವಾಗಿದೆ ಎಂದು ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು. ವಿಕಾಸ ಸೌಧದ ತಮ್ಮ ಕೊಠಡಿಯಲ್ಲಿ ಕೃಷಿ ಕ್ಷೇತ್ರದ ಸುಧಾರಣೆಗಳ ಮೂಲಕ ರಾಜ್ಯದಲ್ಲಿ ಗ್ರಾಮೀಣ ಜನರ ಸಾಮಾಜಿಕ ಆರ್ಥಿಕ ಅಭಿವೃದ್ದಿ ಕುರಿತು ರಾಜ್ಯದ ವಿವಿಧ ರೈತ ಸಂಘಟನೆಗಳ ಪ್ರಮುಖರು ಹಾಗೂ ಸಾಮಾಜಿಕ ಚಿಂತಕರೊಂದಿಗೆ ಸಭೆ ನಡೆಸಿ ಅಭಿಪ್ರಾಯ ಆಲಿಸಿ ಸಚಿವರು ಮಾತನಾಡಿದರು. ರಾಜ್ಯದಲ್ಲಿ ಗ್ರಾಮೀಣ ಜನರು ಅದರಲ್ಲೂ ಮುಖ್ಯವಾಗಿ ರೈತಾಪಿ ವರ್ಗದ ಮಹಿಳೆಯರ ಶ್ರೇಯೋಭಿವೃದ್ದಿ ಗಮನದಲ್ಲಿರಿಸಿ ರಾಜ್ಯ ಸರ್ಕಾರ ಹಲವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ.ರೈತರಿಗೆ ಶಕ್ತಿ ತುಂಬಲು ಇನ್ನಷ್ಟು ದೂರಗಾಮಿ ಯೋಜನೆಗಳ ಜಾರಿಗೆ ಸರ್ಕಾರ ಸಿದ್ದವಿದೆ ಎಂದು ಸಚಿವರು ಹೇಳಿದರು. ಸಂಘಟನೆಗಳ ಪ್ರಸ್ತಾಪ: ಎಲ್ಲಾ ಬೆಳೆಗಳನ್ನು ಕನಿಷ್ಠ ಬೆಂಬಲಬೆಲೆ ಯೋಜನೆಯಡಿ ತಂದು ಹಂತಹಂತವಾಗಿ ಜಾರಿಗೊಳಿಸುವುದು, ಕೃಷಿ ಬೆಲೆ ಆಯೋಗಕ್ಕೆ ಸ್ವಾಯತ್ತತೆ ನೀಡುವುದು, ಹಾಲಿ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಹೆಚ್ಚುವರಿ ಅಕ್ಕಿಗೆ ಹಣ ನೀಡವ…

Read More

ಬೆಂಗಳೂರು: ರಾಜ್ಯದ ಜನರು ನೀರಿಲ್ಲದೆ ಸಂಕಷ್ಟದಲ್ಲಿ ಇದ್ದರೆ ಜಲ ಸಂಪನ್ಮೂಲ ಸಚಿವರು ತಮಿಳುನಾಡಿಗೆ ಸಂತೋಷವಾಗಿ ನೀರು ಬಿಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ವಿಧಾನಸೌಧ ಬಳಿ ಮಹಾತ್ಮ ಗಾಂಧೀಜಿ ಪ್ರತಿಮೆ ಮುಂಭಾಗದಲ್ಲಿ ತಮಿಳುನಾಡಿಗೆ ಕಾವೇರಿ ಬಿಡುವುದನ್ನು ವಿರೋಧಿಸಿ ಜೆಡಿಎಸ್ – ಬಿಜೆಪಿ ಪಕ್ಷಗಳು ಜಂಟಿಯಾಗಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ರಾಜ್ಯದಲ್ಲಿ ಇನ್ನು ಮಳೆ ಬರುವ ಸಾಧ್ಯತೆ ಬಹಳ ಕಡಿಮೆ. ಜಲಾಶಯಗಳು ಬರಿದಾಗಿವೆ. ಇದ್ದ ನೀರಿನಲ್ಲಿ ಬಹುಪಾಲನ್ನು ತಮಿಳುನಾಡಿಗೆ ಹರಿಸಲಾಗಿದೆ. ಈ ಬಗ್ಗೆ ಪ್ರಾಯಶ್ಚಿತ್ತವೇ ಇಲ್ಲದ ಜಲಸಂಪನ್ಮೂಲ ಸಚಿವರು ತಮಿಳುನಾಡಿಗೆ ನೀರು ಹೋಗುತ್ತಿರುವುದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ. ಇವರಿಗೆ ರಾಜ್ಯದ ಜನ ಕಷ್ಟದಲ್ಲಿ ಇದ್ದರೆ ಸಂತೋಷ ಆಗುತ್ತದೆ ಎನ್ನುವ ವಿಷಯ ತಿಳಿದು ಅಚ್ಚರಿ ಆಯಿತು ಎಂದು ಮಾಜಿ ಮುಖ್ಯಮಂತ್ರಿಗಳು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದರು. ಕಾವೇರಿ ಜಲ ನಿಯಂತ್ರಣ ಮಂಡಳಿಯ ಮುಂದೆ ತಮಿಳುನಾಡು 12,500 ಕ್ಯೂಸೆಕ್ ನೀರು ಬಿಡಿಸಿ ಎಂದು ಬೇಡಿಕೆ ಇಟ್ಟಿತ್ತು. ಸಮಿತಿ ದೊಡ್ಡ…

Read More

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಮಂಗಳವಾರದ ಬೆಂಗಳೂರು ಬಂದ್ನ ನಂತರ ಕನ್ನಡ ಪರ ಸಂಘಟನೆಗಳು ನಾಳೆ ಶುಕ್ರವಾರ ಇನ್ನಷ್ಟು ತೀವ್ರವಾಗಿ ಅಖಂಡ ಕರ್ನಾಟಕ ಬಂದ್ಗೆ ಸಿದ್ಧತೆ ನಡೆಸಿವೆ. ಶುಕ್ರವಾರ ಇನ್ನಷ್ಟು ತೀವ್ರವಾಗಿ ಅಖಂಡ ಕರ್ನಾಟಕ ಬಂದ್ಗೆ ಸಿದ್ಧತೆ ನಡೆಸಿವೆ. ಕರ್ನಾಟಕದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು, ರೈಲು ಸಂಚಾರಕ್ಕೆ ಅಡ್ಡಿಪಡಿಸಲು ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಚಳವಳಿಗಾರರು ಯೋಜಿಸಿದ್ದಾರೆ. ನಿನ್ನೆ ಬುಧವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಬಂದ್ಗೆ ಬೆಂಬಲ ಕೋರಲಾಗಿದೆ. ಕೆಎಫ್ ಸಿಸಿ ಅಧ್ಯಕ್ಷ ಎನ್ಎಂ ಸುರೇಶ್ ಬಂದ್ ಗೆ ಸಂಪೂರ್ಣ ಬೆಂಬಲವನ್ನು ಘೋಷಿಸಿದ್ದಾರೆ ಮತ್ತು ಚಲನಚಿತ್ರೋದ್ಯಮಕ್ಕೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳಾದ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು, ಚಲನಚಿತ್ರಗಳ ಪ್ರದರ್ಶನ ಇತ್ಯಾದಿಗಳನ್ನು ನಾಳೆ ನಿಲ್ಲಿಸಲಾಗುವುದು ಎಂದು ಹೇಳಿದರು. ಬಂದ್ ಅಂಗವಾಗಿ ಹಮ್ಮಿಕೊಂಡಿರುವ ರ್ಯಾಲಿಯಲ್ಲಿ ಸ್ಟಾರ್ ನಟರು ಸ್ವಯಂ ಪ್ರೇರಿತರಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಕ್ಯಾಬ್ ಮತ್ತು ಆಟೋರಿಕ್ಷಾ…

Read More

ಬೆಂಗಳೂರು: ಕರ್ನಾಟಕ ರಣಧೀರರ ವೇದಿಕೆ ಶಂಕರ್ ಗೌಡ್ರು ಮತ್ತು ಕನ್ನಡ ರಣಧೀರರ ಪಡೆ ಚೇತನ್, ಕರ್ನಾಟಕ ಅಸಂಘಟಿತ ಕಾರ್ಮಿಕ ಒಕ್ಕೂಟದ ಪ್ರಸನ್ನ ಗೌಡರ ನೇತೃತ್ವದಲ್ಲಿ ನಮ್ಮ ನಾಡಿನ ಜೀವನದಿಯ ಕಾವೇರಿ ನದಿ ನೀರನ್ನು ನಮ್ಮ ನಾಡಿನ ರೈತರಿಗೆ ಇಲ್ಲದೆ ಹಾಗೂ ನಮ್ಮ ಬೆಂಗಳೂರು ಜನಕ್ಕೆ ಕುಡಿಯಲು ನೀರು ಇಲ್ಲದಂತೆ ಮಾಡಿರುವ ಒಕ್ಕೂಟ ಭಾರತ ಸರ್ಕಾರ ಹಾಗೂ ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ಧ ಬೆಂಗಳೂರು ಮೈಸೂರು ರಸ್ತೆ ಜ್ಞಾನ ಭಾರತಿ ಗೇಟ್ ಬಳಿ ಹೆದ್ದಾರಿ ರಸ್ತೆ ತಡೆದು ಬೃಹತ್ ಮಟ್ಟದ ಹೋರಾಟವನ್ನು ಮಾಡಲಾಯಿತು. ಇದೇ ಸಂದರ್ಭದಲ್ಲಿ ಒಕ್ಕೂಟ ಭಾರತ ಸರ್ಕಾರ ಕೂಡಲೇ ಮಧ್ಯ ಪ್ರವೇಶ ಮಾಡಿ ಕಾವೇರಿ ನೀರು ನಿರ್ವಹಣಾ ಮಂಡಳಿಗೆ ಸೂಕ್ತ ಎಚ್ಚರಿಕೆ ನೀಡಿ ನಮ್ಮ ನಾಡಿನ ಮೇಲೆ ಮಾಡುತ್ತಿರುವ ಮಲತಾಯಿ ಧೋರಣೆಯನ್ನು ಈ ಕೂಡಲೇ ನಿಲ್ಲಿಸಬೇಕು, ನಮ್ಮ ಕನ್ನಡನಾಡಿನ ಹಾಗೂ ತಮಿಳುನಾಡಿನ ವಾಸ್ತವ ಸ್ಥಿತಿಯ ಬಗ್ಗೆ ಅಧಿಕಾರಿಗಳಿಂದ ಪರಿಶೀಲನೆ ನಡೆಸಿ ವರದಿ ತರಸಿಕೊಂಡು ಸರಿಯಾದ ತೀರ್ಮಾನವನ್ನು ಮಾಡದೆ ಇದ್ದಲ್ಲಿ…

Read More

ಹೆಚ್.ಡಿ.ಕೋಟೆ: ಪಟ್ಟಣದ ಅಂಬೇಡ್ಕರ್ ಭವನದಲ್ಲಿ  ಶಾಸಕ ಅನಿಲ್ ಚಿಕ್ಕಮಾದು ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು ಸಭೆಯಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳಿಂದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ಪಡೆದರು. ತಾಲ್ಲೂಕಿನಲ್ಲಿ ಶಿಕ್ಷಣ ಇಲಾಖೆಯ ನ್ಯೂನತೆಗಳ ಬಗ್ಗೆ ಕ್ಷೇತ್ರಶಿಕ್ಷಣಾಧಿಕಾರಿ  ಮಾರಯ್ಯ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕರು,  ತಾಲ್ಲೂಕಿನಲ್ಲಿ ನಿಗದಿತ ಸಮಕ್ಕೆ ಸರಿಯಾಗಿ ಶಿಕ್ಷಕರು ತರಗತಿಗೆ ತೆರಳುತಿಲ್ಲ ಮತ್ತು ಮದ್ಯಪಾನವನ್ನು ಮಾಡಿ ಶಾಲೆಗೆ ತೆರಳುತ್ತಾರೆ ಎಂಬುದಾಗಿ ಸಾರ್ವಜನಿಕ ವಲಯದಲ್ಲಿ ದೂರು ಕೇಳಿಬರುತ್ತಿದ್ದು,  ಮದ್ಯಪಾನವನ್ನು ಮಾಡಿ ಶಾಲೆಗೆ ತೆರಳುವ ಶಿಕ್ಷಕರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈ ಗೊಳ್ಳಬೇಕೆಂದು ಹೆಚ್ಚರಿಕೆ ನೀಡಿದರು ಮದ್ಯಪ್ರವೇಶಿಸಿದ ಜಿಲ್ಲಾಧಿಕಾರಿ ರಾಜೇಂದ್ರ ನೀವು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಾಥಮಿಕ ಮಾಹಿತಿಯನ್ನೇ ತಿಳಿದುಕೊಂಡಿಲ್ಲ ಅಂದರೆ ನೀವೇನು ಕಾರ್ಯನಿರ್ವಾಹಿಸುತ್ತೀರ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು ಸರಿಯಾದ ಮತ್ತು ನಿಖರವಾದ ಮಾಹಿತಿಯನ್ನು ನೀಡದೆ ಶಾಸಕರ ಕೆಂಗಣ್ಣಿಗೆ ಗುರಿಯಾದ ಕ್ಷೇತ್ರಶಿಕ್ಷಣಾಧಿಕಾರಿ ಮಾರಯ್ಯ ಅವರನ್ನು ಹಾಗೂ ಇಲಾಖೆಯ ಎಲ್ಲ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡರು. ಸಾರ್ವಜನಿಕರಿಗೆ ಸೇವೆ…

Read More

ಚಾಮರಾಜನಗರ: ಜೆಡಿಎಸ್ ಇನ್ನು ಮುಂದೆ ಜಾತ್ಯಾತೀತ ಅಂತ ಹೇಳಿಕೊಳ್ಳಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಚಾಮರಾಜನಗರದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತ್ಯಾತೀತ ಹೇಳಿಕೊಳ್ಳುವ  ಜೆಡಿಎಸ್ ಕೋಮುವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡ ಮೇಲೆ ಜಾತ್ಯಾತೀತವಾಗಿ ಉಳಿದಿದೆಯೇ ?  ಎಂದು ಪ್ರಶ್ನಿಸಿದರು. ಜೆಡಿಎಸ್ ಅವರು ಬಿಜೆಪಿಯ ಜೊತೆ ಅಥವಾ ಇನ್ನಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡರೂ ನಮಗೆ ಯಾವುದೇ ತಕರಾರಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಜೆಡಿಎಸ್ , ಬಿಜೆಪಿಯ ಬಿ ಟೀಂ ಆಗಿದ್ದಿದ್ದರೆ 5 ವರ್ಷ ತಾವೇ ಮುಖ್ಯಮಂತ್ರಿಯಾಗಿರುತ್ತಿದ್ದೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಲೋಕಸಭೆ ಚುನಾವಣೆಗೆ ಬಿಜೆಪಿಯೊಂದಿಗೆ ಮೈತ್ರಿ ಕೊಂಡಿರುವ ಜೆಡಿಎಸ್ ನ್ನು ಏನೆಂದು ಕರೆಯಬೇಕು ಎಂದು ಪ್ರಶ್ನಿಸಿದರು.

Read More