Author: admin

ಬೆಂಗಳೂರು: ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಉಡಾಫೆಯಾಗಿ ನಡೆದುಕೊಳ್ಳುತ್ತಿದೆ. ಇವರು ಹೀಗೆ ನಿರ್ಲಕ್ಷ್ಯ ಮಾಡಿದರೆ ಸ್ವಾಮೀಜಿಗಳು, ರೈತರು, ಬೆಂಗಳೂರಿನ ನಾಗರಿಕರು ದಂಗೆ ಏಳುತ್ತಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕಾವೇರಿ ವಿಚಾರದಲ್ಲಿ ಬಿಜೆಪಿಯ ಮುಂದಿನ ಹೋರಾಟದ ಕುರಿತು ಪಕ್ಷದ ಕಚೇರಿಯಲ್ಲಿ ತಮ್ಮ ನೇತೃತ್ವದಲ್ಲಿ ಕಾವೇರಿ ಜಲಾನಯನ ಪ್ರದೇಶದ ಜಿಲ್ಲೆಗಳ ಪಕ್ಷದ ಪದಾಧಿಕಾರಿಗಳ ಸಭೆ ನಡೆಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ಈ ಸರ್ಕಾರ ತೀವ್ರವಾದ ಗಂಡಾಂತರ ತಂದಿದೆ. ಮೊದಲಿಂದಲೂ ಎಡವಟ್ಟು ಮಾಡಿಕೊಂಡು ಬಂದಿದೆ. ಸುಪ್ರೀಂಕೋರ್ಟ್ ನಲ್ಲಿ ಸರಿಯಾಗಿ ವಾದ ಮಾಡದೇ ಮತ್ತೆ 7.5 ಟಿಎಂಸಿ ನಿರು ಬಿಡುವ ಪರಿಸ್ಥಿತಿಗೆ ತಂದಿದೆ.ಇಷ್ಟೆಲ್ಲಾ ಆದರೂ ರಾಜ್ಯಸ ಜನರಿಗೆ ಸರ್ಕಾರ ಮುಂದೇನು ಮಾಡುತ್ತದೆ ಅಂತ ಹೇಳಿಲ್ಲ. ಬಿಜೆಪಿ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಕಾವೇರಿ ಜಲಾನಯನ ಪ್ರದೇಶದ ಜಿಲ್ಲೆಗಳಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದರು.

Read More

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಒಂದು ಜಿರಾಫೆ ಮಾತ್ರ ಇದ್ದು, ಪಶ್ಚಿಮ ಬಂಗಾಳದ ಅಲಿಪುರದಿಂದ ಮತ್ತೊಂದು ಜಿರಾಫೆ ತರಿಸುವ ಪ್ರಯತ್ನ ನಡೆದಿದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ. ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನಕ್ಕೆ ಭೇಟಿ ನೀಡಿದ ಅವರು, ಚಿರತೆ ಮತ್ತು ಜಿಂಕೆಗಳ ಸಾವಿನ ಖುದ್ದು ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಬನ್ನೇರುಘಟ್ಟದಲ್ಲಿರುವ ಜಿರಾಫೆಯನ್ನು ಮೈಸೂರು ಮೃಗಾಲಯದಿಂದ ತರಿಸಲಾಗಿದ್ದು, ಏಕ ಪ್ರಾಣಿ ಇರುವ ಮೃಗಾಲಯಗಳಲ್ಲಿ ಮತ್ತೊಂದು ಅದೇ ಜಾತಿಯ ಪ್ರಾಣಿ ತರಿಸಲು ಸರ್ಕಾರ ಎಲ್ಲ ಬೆಂಬಲ ನೀಡಲಿದೆ ಎಂದು ತಿಳಿಸಿದರು. ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನದಲ್ಲಿ ಉತ್ತಮ ಮೃಗಾಲಯ ಇದೆ, ಸಫಾರಿ ಇದೆ. ಇಲ್ಲಿ ಆನೆ, ಚಿರತೆ, ಹುಲಿ, ಸಿಂಹ, ಕರಡಿ, ಜಿಂಕೆಗಳು ಸ್ವೇಚ್ಛೆಯಾಗಿ ವಿಹರಿಸುವುದನ್ನು ನೋಡಬಹುದಾಗಿದೆ. ಬೆಂಗಳೂರಿಗೆ ಸಮೀಪದಲ್ಲೇ ಇದ್ದು, ಹೆಚ್ಚಿನ ಜನರು ಆಗಮಿಸುವ ಕಾರಣ, ಮುಖ್ಯರಸ್ತೆಯಿಂದ ಪರ್ಯಾಯವಾಗಿ ಮತ್ತೊಂದು ಸಂಪರ್ಕ ರಸ್ತೆ ಕಲ್ಪಿಸುವ ಅಗತ್ಯವಿದೆ ಎಂದು…

Read More

ತುರುವೇಕೆರೆ: ಬೆಂಗಳೂರಿನ ಸೆಂಟರ್ ಫಾರ್ ಕೌಂಟರ್ ಟೆರರಿಸಂ ಇಂಟರ್ನಲ್ ಸೆಕ್ಯೂರಿಟಿ ಡಿವಿಜಿನ್ ನಲ್ಲಿ ನಡೆದ ಡಿ-ಸ್ವಾಟ್ ತರಬೇತಿಯಲ್ಲಿ ಕೇಂದ್ರ ವಲಯದ ಜಿಲ್ಲೆಗಳಲ್ಲಿಯೇ ತುಮಕೂರಿನ ತಂಡವು ಅತ್ಯುತ್ತಮ ತಂಡವಾಗಿ ಆಗಿ ಹೊರಹೊಮ್ಮಿದೆ. ಈ ತಂಡವನ್ನು ತುಮಕೂರು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲೆಯ ಇತರೆ ಪೊಲೀಸ್ ಅಧಿಕಾರಿಗಳು ಅಭಿನಂದಿಸಿದ್ದಾರೆ. ಈ ತಂಡದಲ್ಲಿ ನಮ್ಮ ತುರುವೇಕೆರೆ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಮಂಜುನಾಥ್ ಕೂಡ ಇದ್ದು, ತುರುವೇಕೆರೆ ಪೊಲೀಸ್ ಠಾಣೆಗೆ ಹಾಗೂ ತಾಲ್ಲೂಕಿಗೆ ಗೌರವವನ್ನು ತಂದುಕೊಟ್ಟಿದ್ದಾರೆ. ಮಂಜುನಾಥ್ ರವರನ್ನು ಕುಣಿಗಲ್ ಉಪ ವಿಭಾಗದ ಡಿವೈಎಸ್ಪಿ ಲಕ್ಷ್ಮಿಕಾಂತ್, ತುರುವೇಕೆರೆ ವೃತ್ತ ನಿರೀಕ್ಷಕರು ,ತುರುವೇಕೆರೆ ಠಾಣೆ ಪಿಎಸ್ ಐಗಳಾದ ಕೆ ಗಣೇಶ್ ಮತ್ತು ರಾಮಚಂದ್ರಪ್ಪನವರು ಹಾಗೂ ತುರುವೇಕೆರೆ ಠಾಣೆಯ ಎಲ್ಲಾ ಪೊಲೀಸ್ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ. ವರದಿ: ಸುರೇಶ್ ಬಾಬು ಎಂ. ತುರುವೇಕೆರೆ

Read More

ಸ್ಯಾನ್ ಫ್ರಾನ್ಸಿಸ್ಕೋ ಇಂಡಿಯನ್ ಕಾನ್ಸುಲೇಟ್ ದಾಳಿ ಪ್ರಕರಣದ ಆರೋಪಿಗಳ ವಿವರಗಳನ್ನು NIA ಬಿಡುಗಡೆ ಮಾಡಿದೆ ರಾಷ್ಟ್ರೀಯ ತನಿಖಾ ಸಂಸ್ಥೆ 10 ಆರೋಪಿಗಳ ಭಾವಚಿತ್ರಗಳನ್ನು ಬಿಡುಗಡೆ ಮಾಡಿದೆ. ಮಾರ್ಚ್‌ನಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತಾವಾಸದ ಮೇಲೆ ಖಲಿಸ್ತಾನ್ ಕಾರ್ಯಕರ್ತರು ದಾಳಿ ನಡೆಸಿದ್ದರು. ಆರೋಪಿಗಳ ಬಗ್ಗೆ ತಿಳಿದವರು ಮಾಹಿತಿ ಹಂಚಿಕೊಳ್ಳಬೇಕು ಎಂದು ಎನ್ ಐಎ ಮಾಹಿತಿ ನೀಡಿದೆ. ಇದಕ್ಕಾಗಿ ಮೂರು ಪ್ರತ್ಯೇಕ ನೋಟಿಸ್ ಗಳನ್ನು ನೀಡಲಾಗಿದೆ. ಖಲಿಸ್ತಾನವಾದಿಗಳ ದಾಳಿಯ ವಿರುದ್ಧ ಕ್ರಮಗಳನ್ನು ಬಲಪಡಿಸುವ ಭಾಗವಾಗಿ ಆರೋಪಿಗಳ ಚಿತ್ರಗಳು ಮತ್ತು ಮಾಹಿತಿಯನ್ನು ಬಿಡುಗಡೆ ಮಾಡಲಾಗಿದೆ. ಮಾರ್ಚ್ 19 ರಂದು, ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತಾವಾಸಕ್ಕೆ ಒಂದು ಗುಂಪು ನುಗ್ಗಿತು ಮತ್ತು ಕಾನ್ಸುಲೇಟ್ ‌ನಲ್ಲಿ ಖಲಿಸ್ತಾನ್ ಧ್ವಜವನ್ನು ಹಾರಿಸಿತು.

Read More

ಭಾರತ-ಕೆನಡಾ ರಾಜತಾಂತ್ರಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಮಾಧ್ಯಮಗಳಿಗೆ ಮಾರ್ಗಸೂಚಿಗಳನ್ನು ನೀಡುತ್ತದೆ. ನಿಷೇಧಿತ ಸಂಘಟನೆಗಳಿಗೆ ಸೇರಿದವರಿಗೆ ವೇದಿಕೆ ನೀಡಬಾರದು ಎಂಬುದು ಕೇಂದ್ರ ಸರ್ಕಾರದ ಹೊಸ ನಿರ್ದೇಶನ. ಚಾನೆಲ್ ಚರ್ಚೆಯಲ್ಲಿ ನಿಷೇಧಿತ ಸಂಘಟನೆಯ ಪ್ರತಿನಿಧಿ ಭಾಗವಹಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕೆನಡಾದ ನಾಗರಿಕರಿಗೆ ವೀಸಾವನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ ಎಂದು ಭಾರತ ಘೋಷಿಸಿದ ಕೆಲವೇ ಗಂಟೆಗಳ ನಂತರ ಮಾಧ್ಯಮಗಳಿಗೆ ಮಾರ್ಗಸೂಚಿಗಳು ಸಹ ಹೊರಬಂದಿವೆ. ಉಗ್ರರಿಗೆ ವೇದಿಕೆ ನೀಡದಂತೆ ಮಾಧ್ಯಮಗಳಿಗೆ ಕೇಂದ್ರದ ನಿರ್ದೇಶನ. ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ನಿಯಂತ್ರಣ ಕಾಯಿದೆಯ ಸೆಕ್ಷನ್ 20 ಅನ್ನು ಉಲ್ಲೇಖಿಸಿ, ದೂರದರ್ಶನ ಚಾನೆಲ್ ‌ಗಳು ತಮ್ಮ ವಿಷಯದಲ್ಲಿ ಕಾಯಿದೆಯ ನಿಬಂಧನೆಗಳನ್ನು ಅನುಸರಿಸುವ ಅಗತ್ಯವನ್ನು ಕೇಂದ್ರವು ಒತ್ತಿ ಹೇಳಿತು. ಈ ಮಧ್ಯೆ, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಖಲಿಸ್ತಾನ್ ಕಾರ್ಯಕರ್ತರ ಹತ್ಯೆಯ ಹಿಂದೆ ಭಾರತೀಯ ಏಜೆಂಟ್‌ಗಳ ಕೈವಾಡವಿದೆ ಎಂಬ ತಮ್ಮ ಹಿಂದಿನ ನಿಲುವಿಗೆ ಅಂಟಿಕೊಂಡಿದ್ದಾರೆ. ಹತ್ಯೆಯ ಹಿಂದೆ ಭಾರತೀಯ ಏಜೆಂಟ್ ‌ಗಳ ಕೈವಾಡವಿದೆ ಎಂದು ನಂಬಲು ನಂಬಲರ್ಹವಾದ ಕಾರಣವಿದೆ…

Read More

ಭಾರತದಲ್ಲಿ ಮತ್ತೊಂದು ಕ್ರಿಕೆಟ್ ಸ್ಟೇಡಿಯಂ ಬರಲಿದೆ. ವಾರಣಾಸಿಯ ಗಂಜಾರಿಯಲ್ಲಿ ಅತ್ಯಾಧುನಿಕ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 450 ಕೋಟಿ ವೆಚ್ಚವಾಗುವ ನಿರೀಕ್ಷೆ ಇದೆ. ವಾರಣಾಸಿಯಲ್ಲಿ ಸುಮಾರು 30,000 ಜನರು ಪಂದ್ಯ ವೀಕ್ಷಿಸುವ ಸಾಮರ್ಥ್ಯದ ಕ್ರೀಡಾಂಗಣವನ್ನು ಸಿದ್ಧಪಡಿಸಲಾಗುವುದು. ಮೋದಿಯವರ ಸಂಸದೀಯ ಕ್ಷೇತ್ರವೂ ಕ್ರೀಡಾಂಗಣದ ವೈಶಿಷ್ಟ್ಯ ಹೊಂದಿದೆ. ಕ್ರೀಡಾಂಗಣದ ವಿನ್ಯಾಸದ ಬಗ್ಗೆ ವಿಭಾಗೀಯ ಆಯುಕ್ತ ಕೌಶಲ್ ರಾಜ್ ಶರ್ಮಾ ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದರು, ಉದ್ದೇಶಿತ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಮುಂಭಾಗವು ಕಾಶಿ ಮತ್ತು ಪರಮಶಿವವನ್ನು ನೆನಪಿಸುತ್ತದೆ. ಮೇಲ್ಛಾವಣಿಯು ಶಿವನ ಅರ್ಧಚಂದ್ರಾಕಾರವನ್ನು ಹೋಲುತ್ತದೆ. ಫ್ಲಡ್‌ ಲೈಟ್ ‌ಗಳ ಕಾಲುಗಳಿಗೆ ತ್ರಿಶೂಲ ಮಾದರಿಯನ್ನು ನೀಡಲಾಗುವುದು. ಕಾಶಿಯ ಘಟ್ಟಗಳ ಮಾದರಿಯಲ್ಲಿ ಗ್ಯಾಲರಿ ನಿರ್ಮಿಸಲಾಗುವುದು. ಪೆವಿಲಿಯನ್ ಮತ್ತು ವಿಐಪಿ ಲಾಂಜ್ ಅನ್ನು ಶಿವನ ಕೈಯಲ್ಲಿ ವಾದ್ಯವಾಗಿ ಡಮರು ರೂಪದಲ್ಲಿ ವಿನ್ಯಾಸಗೊಳಿಸಲಾಗಿದೆ. ಬಿಲ್ವ ಪತ್ರದ ಬೃಹತ್ ಆಕೃತಿಗಳನ್ನು ಲೋಹದ ಚೌಕಟ್ಟುಗಳಲ್ಲಿ ಸ್ಥಾಪಿಸಲಾಗುವುದು ಎಂದು ಅವರು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದರು. 450 ಕೋಟಿ…

Read More

ಹರಿಯಾಣದಲ್ಲಿ ಕುಟುಂಬದವರ ಎದುರೇ ಮೂವರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಪಾಣಿಪತ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ನಾಲ್ವರು ಮುಸುಕುಧಾರಿ ಶಸ್ತ್ರಧಾರಿ ಪುರುಷರ ಅಪರಿಚಿತ ತಂಡವು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದೆ. ಬುಧವಾರ ಸಂಜೆ ಈ ಘಟನೆ ನಡೆದಿದೆ. ನಾಲ್ವರ ತಂಡ ಮನೆಗೆ ನುಗ್ಗಿ ಮಹಿಳೆಯರನ್ನು ಹಗ್ಗದಿಂದ ಕಟ್ಟಿ ಹಾಕಿ ಸಾಮೂಹಿಕ ಅತ್ಯಾಚಾರ ಎಸಗಿದೆ. ಸಾಮೂಹಿಕ ಅತ್ಯಾಚಾರಕ್ಕೆ ಚಾಕು ಮತ್ತು ಇತರ ಹರಿತವಾದ ಆಯುಧಗಳಿಂದ ಬೆದರಿಸಲಾಯಿತು. ದುಷ್ಕರ್ಮಿಗಳು ಮನೆಯಲ್ಲಿದ್ದ ಹಣ, ಚಿನ್ನಾಭರಣ ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮಧ್ಯೆ, ಸಾಮೂಹಿಕ ಅತ್ಯಾಚಾರ ನಡೆದ ಸ್ಥಳದಿಂದ ಒಂದು ಕಿಲೋಮೀಟರ್ ದೂರದಲ್ಲಿ ಮತ್ತೊಬ್ಬ ಮಹಿಳೆಯನ್ನು ಅಪರಿಚಿತ ವ್ಯಕ್ತಿಗಳು ಕೊಂದಿದ್ದಾರೆ. ಅಸ್ವಸ್ಥ ಮಹಿಳೆ ಮೇಲೆ ಗುಂಪೊಂದು ದಾಳಿ ಮಾಡಿದೆ. ಗ್ಯಾಂಗ್ ಆಕೆಯ ಪತಿಯನ್ನು ದರೋಡೆ ಮಾಡಿದೆ. ನಗದು ಹಾಗೂ ಮೊಬೈಲ್ ಕಳ್ಳತನವಾಗಿದೆ. ಅದೇ ತಂಡ ಇದರ ಹಿಂದೆ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆ ಕುರಿತು ಮಡ್ಲೌಡಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸದ್ಯಕ್ಕೆ…

Read More

ಮಗಳು ಮೀರಾ ಅವರ ಅನಿರೀಕ್ಷಿತ ನಿಧನದ ನಂತರ ನಟ ಮತ್ತು ಸಂಗೀತ ನಿರ್ದೇಶಕ ವಿಜಯ್ ಆಂಟೋನಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯ್ ತಮ್ಮ ಫೇಸ್ ಬುಕ್ ಮೂಲಕ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.ಮಗಳ ಜೊತೆಯಲ್ಲಿಯೇ ನಾನು ಸಾವನ್ನಪ್ಪಿದ್ದೇನೆ. ಮೀರಾ ಇನ್ನೂ ನನ್ನೊಂದಿಗೆ ಮಾತನಾಡುತ್ತಿರುವಂತೆ ತೋರುತ್ತಿದೆ ಮತ್ತು ಇನ್ನು ಮುಂದೆ ನಾನು ಮಾಡುವ ಯಾವುದೇ ಒಳ್ಳೆಯ ಕಾರ್ಯಗಳು ಅವಳ ಹೆಸರಿನಲ್ಲಿರುತ್ತವೆ ಎಂದು ವಿಜಯ್ ಹೇಳಿದರು. ಮೀರಾ ಧೈರ್ಯಶಾಲಿ ಮತ್ತು ಕರುಣಾಮಯಿ ಮತ್ತು  ಮಗಳು ಧರ್ಮ, ಜಾತಿ, ಮತ, ಹಣ, ಅಸೂಯೆ, ನೋವು, ಬಡತನ ಅಥವಾ ದುಷ್ಟತನವಿಲ್ಲದ ಶಾಂತಿಯುತ ಸ್ಥಳಕ್ಕೆ ಹೋಗಿದ್ದಾಳೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

Read More

ಬೆಂಗಳೂರು: ‘ವೈಯಾಲಿಕಾವಲ್ ಠಾಣೆಯ ಪೊಲೀಸರು ಹಾಗೂ ಇತರರು ಕಿರುಕುಳ ನೀಡಿದ್ದಾರೆ’ ಎಂದು ಆರೋಪಿಸಿ ಮರಣಪತ್ರ ಬರೆದಿಟ್ಟು ನಾಗರಾಜ್ (47) ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿದೆ. ತಲಘಟ್ಟಪುರ ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದ ನಾಗರಾಜ್, ಉದ್ಯಮಿ ಸನಾವುಲ್ಲ ಒಡೆತನದ ಇಪಿಪಿ (ಎನ್ವಿರಾನ್‌ ಮೆಂಟ್ ಪೊಲ್ಯೂಷನ್ ಪ್ರಾಜೆಕ್ಟ್) ಕಂಪನಿ ಉದ್ಯೋಗಿ, ಬುಧವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದರು.

Read More

ಬೆಂಗಳೂರು: ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ ವಿಚಾರ, ಇನ್ನೆರಡು ದಿನಗಳಲ್ಲಿ ಕನ್ನಡಪರ ಸಂಘಟನೆಗಳು ಚರ್ಚೆ ಮಾಡುತ್ತೇವೆ. ನಂತರ ಹೋರಾಟಕ್ಕೆ ನಿರ್ಧರಿಸುತ್ತೇವೆ ಎಂದು ವಿಧಾನಸೌಧದಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು. ಕಾವೇರಿ ನೀರು ಬಿಡಲೇಬೇಕಂದ್ರೆ ಬಂದ್ ಮಾಡಲು ಸಿದ್ಧರಿದ್ದೇವೆ. ನಟರು ಬರುತ್ತೇವೆಂದು ಹೇಳಿದ್ದಾರೆ, ನೋಡೋಣ ಯಾವ ರೀತಿ ಬರುತ್ತಾರೆಂದು. ನಮ್ಮ ಕನ್ನಡ ನಟರು ಎಲ್ಲೆಲ್ಲೋ ಇದ್ದಾರೆ. ನಾಡಿನ ಪರ, ಕನ್ನಡ ಪರ, ರೈತರ ಪರ ಸ್ಯಾಂಡಲ್‌ ವುಡ್‌ ನಟರು ಬರಲಿ ಎಂದರು.

Read More