Author: admin

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಂಗಳವಾರ ಕೊವಿಡ್ ದಿಂದ ಇಬ್ಬರು ಮೃತಪಟ್ಟಿದ್ದಾರೆ  ಎಂದು ವರದಿಯಾಗಿದೆ. 74 ಮಂದಿಗೆ ಕೊವಿಡ್ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 464ಕ್ಕೆ ಏರಿಕೆಯಾಗಿದೆ.  ಕಳೆದ 24 ಗಂಟೆಗಳಲ್ಲಿ 74 ಹೊಸ ಕೋವಿಡ್-19 ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ.  ಸಕ್ರಿಯ ಪ್ರಕರಣಗಳ ಸಂಖ್ಯೆ 464ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಇಂದು ರಾಜ್ಯದಲ್ಲಿ 6,403 ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಪಾಸಿಟಿವ್ ಪ್ರಮಾಣ ಶೇ. 1.15 ರಷ್ಟು ಇದೆ. ಬೆಂಗಳೂರಿನಲ್ಲಿ 2,104 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, 57 ಮಂದಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರು ಗ್ರಾಮಾಂತರ ಮತ್ತು ಹಾಸನದಲ್ಲಿ ತಲಾ 4, ಚಿಕ್ಕಬಳ್ಳಾಪುರದಲ್ಲಿ 3, ಮಂಡ್ಯ ಮತ್ತು ಮೈಸೂರಿನಲ್ಲಿ ತಲಾ ಇಬ್ಬರು ಹಾಗೂ ಚಾಮರಾಜನಗರ ಮತ್ತು ವಿಜಯನಗರದಲ್ಲಿ ತಲಾ ಒಂದು ಪ್ರಕರಣ ವರದಿಯಾಗಿವೆ.

Read More

ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯ ವೈದ್ಯರಿಗಿಲ್ಲದ ವಸತಿಗೃಹದ ಬಗ್ಗೆ ನಮ್ಮತುಮಕೂರು ವಾಹಿನಿ ವರದಿಗೆ ಕೆಲವೇ ಗಂಟೆಗಳಲ್ಲಿ ಅಧಿಕಾರಿ ವರ್ಗ ಸ್ಪಂದಿಸಿದೆ. ಭೂತ ಬಂಗಲೆಯಂತಿದ್ದ ವಸತಿಗೃಹವು ಅನೈತಿಕ ಚಟುವಟಿಕೆಗಳ ತಾಣವಾಗಿತ್ತು. ಇಲ್ಲಿ ನಿಲ್ಲಲು ವೈದ್ಯರು ಹಿಂದೇಟು ಹಾಕುತ್ತಿದ್ದರು. ಪಾಳು ಬಿದ್ದ ಸ್ಥಿತಿಯಲ್ಲಿ ಇರುವ ವಸತಿಗೃಹದ  ಬಗ್ಗೆ ನಮ್ಮ ತುಮಕೂರು ವರದಿ ಮಾಡಿದ ಬೆನ್ನಲ್ಲೇ ಗೃಹ ಸಚಿವರ ಆದೇಶದಂತೆ ನೂತನ ವಸತಿ ಗೃಹಗಳ ನಿರ್ಮಾಣಕ್ಕೆ ಆದೇಶ ನೀಡಲಾಗಿದೆ. ಆದೇಶ ಪ್ರತಿಯಲ್ಲಿ ಹಳೆಯ ವಸತಿ ಗೃಹಗಳನ್ನು ನೆಲಸಮಗೊಳಿಸುವಂತೆ ಆದೇಶಿಸಲಾಗಿದೆ.  ನೂತನ ವಸತಿ ಗೃಹಗಳ ನಿರ್ಮಾಣಕ್ಕೆ ಅಡಿಪಾಯ ಹಾಕುವಂತೆ ಆದೇಶಿಸಲಾಗಿದೆ ಎಂದು  ತಾಲೂಕು ವೈದ್ಯಾಧಿಕಾರಿ ಲಕ್ಷ್ಮಿಕಾಂತ್ ಸ್ಪಷ್ಟನೆ ನೀಡಿದ್ದಾರೆ. ವರದಿ : ಮಂಜುಸ್ವಾಮಿ ಎಂ.ಎನ್. ಕೊರಟಗೆರೆ ಇದನ್ನೂ ಓದಿ:  ಕೊರಟಗೆರೆ: ವೈದ್ಯರು ಇರಬೇಕಾದ ಕೊಠಡಿಗಳು ಭೂತ ಬಂಗಲೆಯಂತಿವೆ!

Read More

ವಿಶೇಷ ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಇರಬೇಕಾದ ಕೊಠಡಿಗಳು ಇದೀಗ ಭೂತ ಬಂಗಲೆಯಂತಿವೇ.. ರಾತ್ರಿ ಸಮಯವಾದರೆ ಸಾಕು ಈ ಆಸ್ಪತ್ರೆಯ ವಟಾರದ ಕಡೆ ಸಾರ್ವಜನಿಕರು ಬರುವುದೇ ಇಲ್ಲ.. ಯಾಕೆಂದರೆ ರಾತ್ರಿಯಾದರೆ ಸಾಕು ಇಲ್ಲಿ ಪುಂಡ ಪೋಕರಿಗಳೇ ಈ ವಟಾರದ ಯಜಮಾನರಾಗಿರುತ್ತಾರೆ. ಅನೈತಿಕ ಚಟುವಟಿಕೆಗಳ ತಾಣವಾಗಿದೆ ಈ ಸರ್ಕಾರಿ ವೈದ್ಯರ ವಟಾರ.. ಕೊರಟಗೆರೆ ಪಟ್ಟಣದ ಹೃದಯ ಭಾಗದಲ್ಲಿರುವ ಸರ್ಕಾರಿ ಆಸ್ಪತ್ರೆ ಅದರ ಮುಂಭಾಗದಲ್ಲಿ ಇರುವ ವೈದ್ಯರ ಕೊಠಡಿಗಳ ಸ್ಥಿತಿ ಕೇಳೋರಿಲ್ಲ,  ಕಳೆದ ಸುಮಾರು 30 ವರ್ಷಗಳಿಂದ ಇಲ್ಲಿ ಒಬ್ಬ ಯಾವ ವೈದ್ಯರು ಉಳಿದುಕೊಂಡಿಲ್ಲ..  ಕೆಲವು ವೈದ್ಯರು ಇಲ್ಲಿಯೇ ಬಾಡಿಗೆ ಮನೆ ಮಾಡಿಕೊಂಡು ಉಳಿದುಕೊಂಡಿದ್ದವರು ಕೂಡ   ಇದೀಗ ನಮಗೆ ಕೊರಟಗೆರೆ ಆಸ್ಪತ್ರೆಯ ಸಹವಾಸವೇ ಬೇಡ ಎಂದು ಬೇರೆಡೆಗೆ ವರ್ಗಾವಣೆ ಮಾಡಿಕೊಂಡು ಹೋಗಿದ್ದಾರೆ . ಇನ್ನು ಈ ಪಾಳು ಬಿದ್ದ ಕೊಠಡಿಗಳು ಪಾಪ ಆಸ್ಪತ್ರೆಯ ಸಿಬ್ಬಂದಿಗಳಿಗೆ ಅಷ್ಟೇ ಸೀಮಿತವಾಗಿದ್ದವು . ಇದೀಗ ಅವರು ಕೂಡ ಆ ಕೊಠಡಿಗಳಲ್ಲಿ ವಾಸವಾಗಿಲ್ಲ, ಇದಕ್ಕೆ ಕಾರಣ…

Read More

ತಮಿಳುನಾಡು ಆಡಳಿತ ಪಕ್ಷ ಡಿಎಂಕೆ ಸಂಸದ ದಯಾನಿಧಿ ಮಾರನ್ ಅವರು ಬಿಹಾರದಿಂದ ತಮಿಳುನಾಡಿಗೆ ಬಂದು ಶೌಚಾಲಯ ತೊಳೆಯುತ್ತಿದ್ದಾರೆ ಎಂದು ಹೇಳಿಕೆ ನೀಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ದಯಾನಿಧಿ ಮಾರನ್ಅವರ ಹೇಳಿಕೆಗೆ ಬಿಹಾರ ಕಾಂಗ್ರೆಸ್ ನಾಯಕಿ ಚಂದ್ರಿಕಾ ಪ್ರಸಾದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾರನ್ ಅವರಿಗೆ ಲೀಗಲ್ ನೋಟಿಸ್‌ ಕಳುಹಿಸಲಾಗಿದೆ. 15 ದಿನದೊಳಗೆ ಕ್ಷಮೆ ಯಾಚಿಸದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು ಹಾಗೂ ಡಿಎಂಕೆ ನಾಯಕರು ಉತ್ತರ ಭಾರತೀಯರ ಮೇಲಿನ ದ್ವೇಷವನ್ನು ಬಿಡಬೇಕು ಎಂದಿದ್ದಾರೆ.

Read More

ಹೂಕೋಸು ಕದ್ದ ಆರೋಪ ಹೊರಿಸಿ ವೃದ್ಧೆಯೊಬ್ಬರನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ  ಘಟನೆ ಒಡಿಶಾದಲ್ಲಿ ನಡೆದಿದೆ. ಒಡಿಶಾದ ಕಿಯೋಂಜಾರ್ ಜಿಲ್ಲೆಯ ಶತ್ರುಘ್ನ ಮಹಂತ (39) ಕೃತ್ಯ ಎಸಗಿದ ಆರೋಪಿಯಾಗಿದ್ದು, ಘಟನೆಯ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಶನಿವಾರ ಈ ಘಟನೆ ಬೆಳಕಿಗೆ ಬಂದಿದೆ. ಹಲ್ಲೆಗೊಳಗಾದ ವೃದ್ಧ ತಾಯಿ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದಿದ್ದರು. ಗಾಯಗಳು ಆಗಿದ್ದ ಹೇಗೆ ಎಂದು ಆಸ್ಪತ್ರೆ ಅಧಿಕಾರಿಗಳು ಪ್ರಶ್ನಿಸಿದಾಗ, ವೃದ್ಧೆ ತನ್ನ ಮಗ ಶತ್ರುಘ್ನ ಮಹಂತ ತನಗೆ ಹಲ್ಲೆ ನಡೆಸಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ಆಸ್ಪತ್ರೆ ಅಧಿಕಾರಿಗಳು ಪೊಲೀಸರಿಗೆ ಕರೆ ಮಾಡಿದ್ದಾರೆ. ವೃದ್ಧೆವೊಬ್ಬರೇ ತಮ್ಮ ಮನೆಯಲ್ಲಿ ಒಬ್ಬರೇ ವಾಸವಾಗಿದ್ದಾರೆ. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಹಿರಿಯ ಮಗ ವರ್ಷಗಳ ಹಿಂದೆ ತೀರಿಕೊಂಡ. ನಂತರ ಅವನು ತನ್ನ ಕಿರಿಯ ಮಗನೊಂದಿಗೆ ಕೆಲವು ದಿನಗಳವರೆಗೆ ಇದ್ದರು . ಆದರೆ ಕೌಟುಂಬಿಕ ಕಲಹದಿಂದ ಅವರು  ಮನೆಯಿಂದ ದೂರ ಸರಿದು ಒಂಟಿಯಾಗಿ ವಾಸವಾಗಿದ್ದರು. ಸರಕಾರಿ ಪಡಿತರ ಹಾಗೂ ಸ್ಥಳೀಯರ ನೆರವಿನಿಂದ ಜೀವನ ಸಾಗಿಸುತ್ತಿದ್ದಾರೆ.…

Read More

ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲಿನೊಂದಿಗೆ ಭಾರತೀಯ ರೈಲ್ವೆ. ದೇಶದ ಮೊದಲ ಅಮೃತ್ ಭಾರತ್ ಎಕ್ಸ್‌ಪ್ರೆಸ್ ಅಯೋಧ್ಯೆ-ದರ್ಭಾಂಗ ಮಾರ್ಗದಲ್ಲಿ ಓಡಲಿದೆ. ಈ ಸೆಮಿ-ಹೈ ಸ್ಪೀಡ್ ರೈಲು ಸಾಮಾನ್ಯ ರೈಲುಗಳಿಗಿಂತ ಕಡಿಮೆ ದರವನ್ನು ನೀಡುತ್ತದೆ. ಇದು ಅಸಾಧಾರಣ ಸೌಲಭ್ಯಗಳನ್ನು ಹೊಂದಿರುವ ನಾನ್-ಎಸಿ ರೈಲು. ಅಮೃತ್ ಭಾರತ್ ಎಕ್ಸ್‌ʼಪ್ರೆಸ್ ಅಯೋಧ್ಯೆ–ದರ್ಭಾಂಗ ಮಾರ್ಗದಲ್ಲಿ ಚಲಿಸಲಿದ್ದು, ಎರಡನೆಯದು ಮಾಲ್ಡಾ-ಬೆಂಗಳೂರು ಮಾರ್ಗದಲ್ಲಿ ಚಲಿಸಲಿದೆ. ರಾಜಧಾನಿ ಮತ್ತು ಶತಾಬ್ದಿ ರೈಲುಗಳಂತೆಯೇ ಈ ಸೇವೆಯು ಗಂಟೆಗೆ 130 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ದೇಶದ ಎಲ್ಲಾ ವರ್ಗದ ಜನರಿಗೆ ಆಧುನಿಕ ಸಾರಿಗೆ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಅಮೃತ್ ಭಾರತ್ ಎಕ್ಸ್‌ಪ್ರೆಸ್ ಅನ್ನು ಪರಿಚಯಿಸಲಾಯಿತು. ಬೋಗಿಗಳು ಎಲ್‌ ಎಚ್‌ ಬಿ ಮಾದರಿಯ ಸುಧಾರಿತ ಸುರಕ್ಷತಾ ವ್ಯವಸ್ಥೆಗಳನ್ನು ಹೊಂದಿವೆ. 22 ಬೋಗಿಗಳ ಈ ರೈಲಿನಲ್ಲಿ ಎಸಿ ಕೋಚ್‌ಗಳ ಬದಲಿಗೆ ಸಾಮಾನ್ಯ ಕೋಚ್‌ ಗಳಿವೆ. ಅಮೃತ್ ಭಾರತ್ ಸಿಸಿಟಿವಿ ಕ್ಯಾಮೆರಾಗಳು, ಆಧುನಿಕ ಶೌಚಾಲಯಗಳು, ಬೋಗಿಗಳಲ್ಲಿ ಸೆನ್ಸಾರ್ ವಾಟರ್ ಟ್ಯಾಪ್‌ ಗಳು ಮತ್ತು ಮೆಟ್ರೋ ಮಾದರಿಯಲ್ಲಿ ಘೋಷಣೆ ವ್ಯವಸ್ಥೆಯನ್ನು ಸಹ…

Read More

ಲೇಹ್ ಲಡಾಖ್ ನಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆಯ ಭೂಕಂಪನ ವರದಿಯಾಗಿದೆ. ಇಂದು ಮುಂಜಾನೆ 4:33ರ ಸುಮಾರಿಗೆ ಈ ಘಟನೆ ನಡೆದಿದೆ. ಯಾವುದೇ ಪ್ರಾಣಹಾನಿ ಅಥವಾ ಹಾನಿಯ ಬಗ್ಗೆ ವರದಿಯಾಗಿಲ್ಲ. ಭೂಕಂಪನದ ಕೇಂದ್ರಬಿಂದು ನೆಲಮಟ್ಟದಿಂದ ಐದು ಕಿಲೋಮೀಟರ್ ಕೆಳಗೆ ಇತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ ಸಿಎಸ್) ತಿಳಿಸಿದೆ. ಜಮ್ಮು ಮತ್ತು ಕಾಶ್ಮೀರದ ಕಿಶ್ತ್‌ವಾರ್‌ನಲ್ಲಿ 3.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಎನ್‌ಸಿಎಸ್ ತಿಳಿಸಿದೆ. ನಸುಕಿನ 1:13ರ ಸುಮಾರಿಗೆ ಕಂಪನ ಸಂಭವಿಸಿದೆ.

Read More

ದೆಹಲಿಯಲ್ಲಿ ದಟ್ಟ ಮಂಜಿನಿಂದಾಗಿ ವಿಮಾನ ಸೇವೆಗೆ ತೊಂದರೆಯಾಗಿದೆ. ದೆಹಲಿ ವಿಮಾನ ನಿಲ್ದಾಣದಿಂದ ಹೊರಡುವ ಮತ್ತು ಹಿಂದಿರುಗುವ 30 ವಿಮಾನಗಳ ಮೇಲೆ ಮಂಜು ಪರಿಣಾಮ ಬೀರಿದೆ. ಅಂತರಾಷ್ಟ್ರೀಯ ವಿಮಾನಗಳು ಸೇರಿದಂತೆ 30 ವಿಮಾನಗಳ ಸೇವೆ ವಿಳಂಬವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಸೇವೆ ವಿಳಂಬದ ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಲು ಪ್ರಯಾಣಿಕರಿಗೆ ಸೂಚನೆ ನೀಡಲಾಗಿದೆ. ಕಡಿಮೆ ಗಾಳಿಯ ಉಷ್ಣತೆಯಿಂದಾಗಿ, ಮಂಜು ವಾಹನ ಸಂಚಾರದ ಮೇಲೆ ಪರಿಣಾಮ ಬೀರಿದೆ. ಹಿಂದಿನ ದಿನ ಮಂಜು ಕವಿದಿದ್ದರಿಂದ ಅಕ್ಕಪಕ್ಕದ ನೋಟವೂ ಮರೆಯಾಗಿ ವಾಹನಗಳು ಒಂದರ ಹಿಂದೊಂದರಂತೆ ಡಿಕ್ಕಿ ಹೊಡೆಯುವ ಪರಿಸ್ಥಿತಿ ಇತ್ತು. ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕವು ಸರಾಸರಿ 400 ತಲುಪಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ನಿರೀಕ್ಷೆ ಇದೆ. ರಾಷ್ಟ್ರೀಯ ಹೆದ್ದಾರಿ ಸೇರಿದಂತೆ 50 ಮೀಟರ್‌ಗಿಂತ ಕಡಿಮೆ ಗೋಚರತೆ ಇದೆ.

Read More

ವಾರಾಂತ್ಯದ ಜೊತೆಗೆ ಕ್ರಿಸ್ಮಸ್ ರಜೆ ಇರುವ ಹಿನ್ನಲೆಯಲ್ಲಿ ಧಾರ್ಮಿಕ ಕೇಂದ್ರಗಳತ್ತ ಭಕ್ತರ ದಂಡೇ ಆಗಮಿಸುತ್ತಿದ್ದು ಈ ಮಧ್ಯೆ ಚಾಮರಾಜನಗರ ಜಿಲ್ಲೆ ಹನೂರಿನಲ್ಲಿರುವ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೂ ಭಕ್ತಸಾಗರ ಹರಿದು ಬಂದಿದೆ. ಸಾಲು ಸಾಲು ರಜೆ, ಫ್ರೀ ಬಸ್ ಸೌಲಭ್ಯ ಇರುವ ಕಾರಣ ಮಾದಪ್ಪನ‌ ಸನ್ನಿಧಿಗೆ ಬರುವ ಭಕ್ತರಲ್ಲಿ ಗಣನೀಯ ಏರಿಕೆಯಾಗಿದ್ದು , ಶ್ರೀಮಲೆ ಮಹದೇಶ್ವರ ಸನ್ನಿಧಿ ಭಕ್ತರಿಂದ ತುಂಬಿ ತುಳುಕುತ್ತಿದೆ.  ಚಿನ್ನದ ರಥ ಮೆರವಣಿಗೆ ವೇಳೆ ಸಹಸ್ರಾರು ಭಕ್ತರು ಸಮಾಗಮವಾಗಿದ್ದು ಉಘೇ ಮಾದಪ್ಪಾ ಉಘೇ ಉಘೇ ಎಂದು ಜೈಕಾರ ಹಾಕಿದ್ದಾರೆ. ವಿಶೇಷ ದಿನಗಳ ಹೊರತುಪಡಿಸಿ ಸಾಮಾನ್ಯ ದಿನಗಳಲ್ಲೂ ಶ್ರೀ ಮಲೇ ಮಹದೇಶ್ವರ ಕ್ಷೇತ್ರಕ್ಕೆ  ಭಕ್ತಗಣ ಹೆಚ್ಚಾಗಿದೆ.  ಅಮಾವಾಸ್ಯೆ, ಹುಣ್ಣಿಮೆ, ವಾರಾಂತ್ಯಗಳಲ್ಲಿ ಹೆಚ್ಚಾಗುತ್ತಿರುವ  ಜನರು ಮಾದಪ್ಪನ ದರ್ಶನಕ್ಕೆ ಆಗಮಿಸುತ್ತಿದ್ದು, ಈ ಬಾರಿ ಭಕ್ತರ ಭೇಟಿ ದಾಖಲೆ ಮಟ್ಟಕ್ಕೇರಿದೆ. ವಾರ್ಷಿಕ 50 ಲಕ್ಷ ಭಕ್ತರು ಮಾದಪ್ಪನ ಸನ್ನಿಧಿಗೆ ಭೇಟಿ ನೀಡುವ ಮೂಲಕ ದಾಖಲೆ ಸೃಷ್ಟಿಯಾಗಿದೆ.

Read More

ಹಿಜಾಬ್ ನಿಷೇಧ ವಾಪಸ್ ತೆಗೆದುಕೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ರಾಜಕೀಯ ಪ್ರೇರಿತವಾದುದು ಎಂದು ಮಾಜಿ ಸಚಿವ ಅಶ್ವಥ್ ನಾರಾಯಣ್ ಕಿಡಿಕಾರಿದರು. ಈ ಕುರಿತು ಮಾತನಾಡಿದ ಶಾಸಕ ಅಶ್ವಥ್ ನಾರಾಯಣ್, ಹಿಜಾಬ್ ವಿಚಾರವಾಗಿ ಸಿಎಂ ರಾಜಕೀಯ ಪ್ರೇರಿತ ಹೇಳಿಕೆ ನೀಡಿದ್ದಾರೆ. ಶಾಲೆಗಳಲ್ಲಿ ಎಲ್ಲರೂ ಒಂದೇ ರೀತಿಯ ಸಮವಸ್ತ್ರ ಧರಿಸಬೇಕು. ವಿಭಜನೆ ಮಾಡುವ ದೃಷ್ಠಿಯಲ್ಲಿ ಸಮವಸ್ತ್ರ ನೀತಿ ಜಾರಿ ಮಾಡಲಿಲ್ಲ. ಕಾನೂನಿನ ಪ್ರಕಾರವೇ ಸಮವಸ್ತ್ರ ನೀತಿ ಜಾರಿ ಮಾಡಲಾಗಿತ್ತು. ಸದ್ಯ ಹಿಜಾಬ್ ವಿಚಾರ ಸುಪ್ರೀಂಕೋರ್ಟ್ ನಲ್ಲಿದೆ. ಆದರೆ ಸಿಎಂ ಸಿದ್ದಾರಾಮಯ್ಯ ಗೊಂದಲವನ್ನುಂಟು ಮಾಡಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಸಮಸ್ಯೆ ನಿವಾರಿಸಬೇಕಾದವರೇ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ರೈತರ ಬಗ್ಗೆ ಸಚಿವ ಶಿವಾನಂದ ಪಾಟೀಲ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅಶ್ವಥ್ ನಾರಾಯಣ್, ಮಾನಸಿಕವಾಗಿ ದುರಂಹಕಾರದ ಮಾತುಗಳನ್ನಾಡಿದ್ದಾರೆ. ಪ್ರಕೃತಿ ಪೂಜೆ ಮಾಡುವ ರೈತರು ಪ್ರಕೃತಿ ವಿಕೋಪ ಬರಲಿ ಎಂದು ಬಯಸಲ್ಲ.ಶಿವಾನಂದ ಪಾಟೀಲ್ ಅವರಿಗೆ ಮಾನಸಿಕ ಅಸ್ವಸ್ಥತೆ, ಬುದ್ದಿ ಭ್ರಮಣೆಯಾಗಿದೆಯೋ ಗೊತ್ತಿಲ್ಲ.…

Read More