Subscribe to Updates
Get the latest creative news from FooBar about art, design and business.
- ಮಗು ಪಡೆಯಲು ಪ್ಲ್ಯಾನ್ ಮಾಡ್ತಿದ್ದೀರಾ? ಹಾಗಾದ್ರೆ ದಂಪತಿಗಳು ಈ ಒಂದು ಹವ್ಯಾಸ ರೂಢಿಸಿಕೊಳ್ಳಿ!
- 723 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಕೆಇಎ
- ಬೆಳಗಾವಿ: ರಿಪೇರಿ ವೇಳೆ ಕುಸಿದು ಬಿದ್ದ ಮನೆ — ಇಬ್ಬರು ಕಾರ್ಮಿಕರು ದುರ್ಮರಣ
- ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿದ ಗಾಯಕಿ ಎಸ್.ಜಾನಕಿ ಅಂತ್ಯಕ್ರಿಯೆ; ಚಿತೆಗೆ ಮೊಮ್ಮಗಳಿಂದ ಅಗ್ನಿಸ್ಪರ್ಶ
- ಚೆಂಪುಗಾನಹಳ್ಳಿಯಲ್ಲಿ ಅದ್ದೂರಿಯಾಗಿ ಜರುಗಿದ ಮಾರಮ್ಮನ ಜಾತ್ರೆ: ಮನೆ ಮನೆ ಬಳಿ ಪೆಂಡಾಲ್, ಭರ್ಜರಿ ಬಾಡೂಟ!
- ಔರಾದ್: ಕೂಲಿ ಕಾರ್ಮಿಕರಿಗೆ ‘ವಿಬಿ–ಜಿ ರಾಮ್ ಜಿ’ ಯೋಜನೆ ಕುರಿತು ಜಾಗೃತಿ
- 9ರೂ. 50 ಪೈಸೆಗೋಸ್ಕರ ಕಾನೂನು ಕ್ರಮ: ಬ್ಯಾಂಕ್ ಮ್ಯಾನೇಜರ್ ಯಡವಟ್ಟಿಗೆ ರೈತ ಕಂಗಾಲು
- ಕೊರಟಗೆರೆ: ಬುಗುರಿ ಆಟವಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿ ಸಾವು
Author: admin
ತಮಿಳುನಾಡಿನ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಘಟಕದಲ್ಲಿ ಸ್ಫೋಟ ಸಂಭವಿಸಿದ್ದು, ಚೆನ್ನೈನ ತೊಂಡಿಯಾರ್ ಪೇಟ್ ನಲ್ಲಿರುವ ಪ್ಲಾಂಟ್ ನಲ್ಲಿ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಐಒಸಿಎಲ್ ಘಟಕದ ಒಳಗಿನ ಕೆಸರಿನ ತೊಟ್ಟಿಯನ್ನು ಸ್ವಚ್ಛಗೊಳಿಸುವ ವೇಳೆ ಈ ಅವಘಡ ಸಂಭವಿಸಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತರುತ್ತಿದ್ದಾರೆ. ಐದು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಬಂದಿವೆ. ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.
ತಮಿಳುನಾಡಿನ ಕಾಂಚೀಪುರಂನಲ್ಲಿ ಪೊಲೀಸ್ ಎನ್ ಕೌಂಟರ್ ನಡೆಸಲಾಗಿದ್ದು, ಬುಧವಾರ ಬೆಳಗ್ಗೆ ನಡೆದ ಎನ್ ಕೌಂಟರ್ ನಲ್ಲಿ ಇಬ್ಬರು ಕುಖ್ಯಾತ ಕ್ರಿಮಿನಲ್ ಗಳನ್ನು ಹೊಡೆದುರುಳಿಸಲಾಗಿತ್ತು. ಕೊಲೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ರಘುವರನ್ ಮತ್ತು ಕರುಪುಪ್ ಅಸಿನ್ ಎನ್ ಕೌಂಟರ್ ನಲ್ಲಿ ಸಾವನ್ನಪ್ಪಿದ್ದಾರೆ. ಕುಖ್ಯಾತ ಪಾತಕಿ ಪ್ರಭಾಕರನ್ ಹತ್ಯೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಇಬ್ಬರೂ ಕಾಂಚೀಪುರಂ ಪೊಲೀಸರ ಕಣ್ಗಾವಲಿನಲ್ಲಿದ್ದರು. ಜಿಲ್ಲೆಯ ಪುತ್ತುಪಾಳ್ಯಂ ಬೀದಿಯಲ್ಲಿ ಮಂಗಳವಾರ ಜನರ ಗುಂಪೊಂದು ಪ್ರಭಾಕರನ್ ಅವರನ್ನು ಹತ್ಯೆ ಮಾಡಿತ್ತು. ರಘುವರನ್ ಮತ್ತು ಆಸಿನ್ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದರು. ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದರು. ಈ ಮಧ್ಯೆ, ಕಾಂಚೀಪುರಂ ಹೊಸ ರೈಲು ನಿಲ್ದಾಣದ ಸೇತುವೆ ಬಳಿಯ ಪಾಳುಬಿದ್ದ ಕಟ್ಟಡದಲ್ಲಿ ಇಬ್ಬರೂ ತಲೆಮರೆಸಿಕೊಂಡಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಇಲ್ಲಿಂದ ಆರೋಪಿಗಳನ್ನು ಬಂಧಿಸುವ ವೇಳೆ ಕುಡುಗೋಲಿನಿಂದ ಪೊಲೀಸರನ್ನು ಕೊಯ್ದು ಪರಾರಿಯಾಗಲು ಯತ್ನಿಸಿದ ವೇಳೆ ಸಬ್ ಇನ್ಸ್ ಪೆಕ್ಟರ್ ಸುಧಾಕರ್ ಗುಂಡು ಹಾರಿಸಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರ ಪ್ರಾಣ…
ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಸಮರ್ಪಣಾ ಸಮಾರಂಭದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾಗವಹಿಸುವುದಿಲ್ಲ ಎಂದು ವರದಿಯಾಗಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪ್ರತಿನಿಧಿಗಳನ್ನು ಸಮಾರಂಭಕ್ಕೆ ಕಳುಹಿಸದಿರಲು ಮಮತಾ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ತೃಣಮೂಲ ಕಾಂಗ್ರೆಸ್ ಅಧಿಕೃತವಾಗಿ ನಿರ್ಧಾರ ಪ್ರಕಟಿಸದಿದ್ದರೂ, ಸಮಾರಂಭವನ್ನು ಬಹಿಷ್ಕರಿಸುವ ಸಾಧ್ಯತೆಯಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ರಾಮಮಂದಿರ ಉದ್ಘಾಟನೆಯನ್ನು ಪ್ರಮುಖ ಪ್ರಚಾರ ಅಸ್ತ್ರವನ್ನಾಗಿ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬುದು ಟಿಎಂಸಿಯ ಮೌಲ್ಯಮಾಪನ. ಧಾರ್ಮಿಕ ಸಮಾರಂಭದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂಬ ಟೀಕೆಯೂ ಇದೆ. ಈ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿಂದೆ ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಕೂಡ ರಾಮಮಂದಿರ ಉದ್ಘಾಟನಾ ಸಮಾರಂಭದ ಆಹ್ವಾನವನ್ನು ತಿರಸ್ಕರಿಸಿ ಮುಂದೆ ಬಂದಿದ್ದರು. ಧಾರ್ಮಿಕ ಸಮಾರಂಭವನ್ನು ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮವನ್ನಾಗಿ ಪರಿವರ್ತಿಸಿರುವ ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು ಟೀಕಿಸಿದ ಯೆಚೂರಿ, ಧರ್ಮವು ವೈಯಕ್ತಿಕ ಆಯ್ಕೆಯಾಗಿದೆ ಮತ್ತು ಅದನ್ನು ರಾಜಕೀಯ ಲಾಭಕ್ಕಾಗಿ ಸಾಧನವನ್ನಾಗಿ ಮಾಡಬಾರದು ಎಂದು ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಮೊದಲ ಬಾರಿಗೆ ಹಿಂದೂ ಮಹಿಳೆಯೊಬ್ಬರು ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಡಾ.ಸವೀರಾ ಪ್ರಕಾಶ್ ಎಂಬ ಯುವತಿ ಇತಿಹಾಸ ನಿರ್ಮಿಸಲಿದ್ದಾರೆ. ಪಾಕಿಸ್ತಾನ್ ಪೀಪಲ್ಸ್ ಪಕ್ಷದ ಅಭ್ಯರ್ಥಿಯಾಗಿ ಜವೀರಾ ಪ್ರಕಾಶ್ ಸ್ಪರ್ಧಿಸಿದ್ದಾರೆ. ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಬುನರ್ ಜಿಲ್ಲೆಯಲ್ಲಿ ಡಾ. ಜವೀರಾ ಪ್ರಕಾಶ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ಫೆಬ್ರವರಿ 8, 2024 ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ. 2022ರಲ್ಲಿ ವೈದ್ಯಕೀಯ ಪದವಿ ಪೂರ್ಣಗೊಳಿಸಿರುವ ಸವೀರಾ, ಬುನೇರ್ ನಲ್ಲಿರುವ ಪಿಪಿಪಿ ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಜವೀರಾ ಅಬೋಟಾಬಾದ್ ಇಂಟರ್ನ್ಯಾಷನಲ್ ಮೆಡಿಕಲ್ ಕಾಲೇಜಿನಲ್ಲಿ ಪದವಿ ಪಡೆದರು. ಇತ್ತೀಚೆಗೆ, ಪಾಕಿಸ್ತಾನದ ಚುನಾವಣಾ ಆಯೋಗವು ಸಾಮಾನ್ಯ ಸ್ಥಾನಗಳಲ್ಲಿ ಮಹಿಳೆಯರಿಗೆ 5 ಪ್ರತಿಶತ ಪ್ರಾತಿನಿಧ್ಯವನ್ನು ಕಡ್ಡಾಯಗೊಳಿಸಿದೆ.
ತುಮಕೂರು: ಸಚಿವ ಮಧು ಬಂಗಾರಪ್ಪ ತೆರಳುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಜಖಂಗೊಂಡಿರುವ ಘಟನೆ ತುಮಕೂರು ಹೊರವಲಯದ ಕ್ಯಾತ್ಸಂದ್ರ ಬಳಿ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಸಚಿವ ಮಧು ಬಂಗಾರಪ್ಪ ಅವರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ ಅಪಾಯದಿಂದ ಪಾರಾಗಿದ್ದಾರೆ. ಸಚಿವ ಮಧು ಬಂಗಾರಪ್ಪ ಬೆಂಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕಾರನ್ನು ಉಜ್ಜಿಕೊಂಡು ಲಾರಿ ಹೋಗಿದೆ. ಇದರಿಂದಾಗಿ ಕಾರಿನ ಮುಂಭಾಗ ಕಿತ್ತು ಹೋಗಿದೆ. ಸ್ವಲ್ಪದರಲ್ಲಿ ತಪ್ಪಿದ ದುರಂತವಾಗಿದೆ. ನಿನ್ನೆ ತಡರಾತ್ರಿ ನಡೆದಿರುವ ಅಪಘಾತವಾಗಿದ್ದು ನಂತರ ಸಚಿವ ಮಧು ಬಂಗಾರಪ್ಪ ಬೇರೆ ಕಾರಿನಲ್ಲಿ ಬೆಂಗಳೂರಿಗೆ ತೆರಳಿದರು. ಈ ಘಟನೆ ಸಂಬಂಧ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕೊರಟಗೆರೆ: ತಾಲೂಕಿನ ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ನೀಲಗೊಂಡನಹಳ್ಳಿ ಗ್ರಾಮ ಪಂಚಾಯಿತಿಯ ಬಿ.ಎಸ್. ಆರ್. ಕಂಪನಿಯ ಸಮೀಪವಿರುವ ರಸ್ತೆಯ ಪಕ್ಕದಲ್ಲಿ ಕೊಳೆತ ಸ್ಥಿತಿಯಲ್ಲಿ ಅನಾಥ ಮೃತದೇಹವೊಂದು ಪತ್ತೆಯಾಗಿದೆ. ಸುಮಾರು ನಾಲ್ಕು ದಿನಗಳ ವ್ಯಕ್ತಿ ಮೃತಪಟ್ಟಿರಬಹುದು ಎಂದು ಸ್ಥಳೀಯರ ಸಂಶಯ ವ್ಯಕ್ತಪಡಿಸಿದ್ದಾರೆ. ನಾಲ್ಕೈದು ದಿನಗಳ ಹಿಂದೆ ಈ ವ್ಯಕ್ತಿ ಗ್ರಾಮದ ದೇವಸ್ಥಾನದ ಬಳಿ ಭಿಕ್ಷೆ ಬೇಡುತ್ತಿದ್ದ ಎಂದು ಸ್ಥಳೀಯರು ಹೇಳಿದ್ದಾರೆ. ಸ್ಥಳಕ್ಕೆ ಕೊರಟಗೆರೆ ಪೊಲೀಸ್ ಠಾಣಾಧಿಕಾರಿ ಸಬ್ ಇನ್ಸ್ಪೆಕ್ಟರ್ ಚೇತನ್ ಕುಮಾರ್, ಕೋಳಾಲ ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ರೇಣುಕಾ ಯಾದವ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ಬೀದರ್: ಜಿಲ್ಲೆಯ Anti Narcotics Squad ವತಿಯಿಂದ ಮಂಠಾಳದಲ್ಲಿ 57 ಲಕ್ಷಕ್ಕೂ ಅಧಿಕ ಮೌಲ್ಯದ ಮಾದಕ ಪದಾರ್ಥ ಓಪಿಯಮ್ ಪೊಪಿ ಸ್ಟ್ರಾ ಮತ್ತು ಒಂದು ಕಂಟೈನರ್ ವಾಹನ ಜಪ್ತಿ ಮಾಡಲಾಗಿದೆ. ಮೇಲಾಧಿಕಾರಿಗಳ ಮಾರ್ಗದರ್ಶನದಂತೆ, ಡಿ.25ರಂದು ನ್ಯಾಮೆಗೌಡ, ಡಿ.ಎಸ್ಪಿ ಹುಮನಾಬಾದ ರವರ ನೇತೃತ್ವದಲ್ಲಿ ಕೃಷ್ಣಕುಮಾರ ಪಾಟೀಲ್, ಸಿ.ಪಿ.ಐ ಮಂಠಾಳ ವೃತ್ತ ರವರು ತಮ್ಮ ತಂಡದ ಶಿವಾನಂದ, ಅನೀಲ, ಪ್ರತಾಪ, ಚಾಲಕ ತಾತೇರಾವ್ ಮತ್ತು ಮಂಠಾಳಾ ಪೊಲೀಸ್ ಠಾಣೆಯ ವೆಂಕಟ್, ಶಿವಕುಮಾರ, ರವರನ್ನೊಳಗೊಂಡ ತಂಡವು ಮಹಾರಾಷ್ಟ್ರ ರಾಜ್ಯದಿಂದ ಮದ್ರಾಸಕ್ಕೆ ರಾಷ್ಟ್ರೀಯ ಹೆದ್ದಾರಿ-65 ರಿಂದ ಮನ್ನಳ್ಳಿ ಬಾರ್ಡರ ಮೂಲಕ ಸರಕಾರದಿಂದ ಯಾವುದೇ ಅನುಮತಿ ಇಲ್ಲದೇ ಅಕ್ರಮವಾಗಿ ಓಪಿಯಮ್ ಪೊಪಿ ಸ್ಟ್ರಾ ಮಾದಕ ಪದಾರ್ಥ ಸಾಗಿಸುತ್ತಿರುವ ಮಾಹಿತಿಯಂತೆ, ಮನ್ನಳ್ಳಿ ಬಾರ್ಡರದ ಅಬಕಾರಿ ಚೆಕ್ ಪೋಸ್ಟ್ ಹತ್ತಿರ ಕಂಟೇನರನ್ನು ಪರಿಶೀಲಿಸಿದ್ದಾರೆ. ಈ ವೇಳೆ ಕಂಟೇನರ್ ನಲ್ಲಿದ್ದ 17.50 ಕೆ.ಜಿ ಓಪಿಯಮ್ ಪೊಪಿ ಸ್ಟ್ರಾ ಮಾದಕ ಪದಾರ್ಥ ಜಪ್ತಿ ಮಾಡಿದ್ದಾರೆ, ಜೊತೆಗೆ, ಆರೋಪಿಯ ಬಳಿಯಿದ್ದ ಒಂದು ಮೊಬೈಲ್ ಮತ್ತು ನಗದು…
ಚಿತ್ರದುರ್ಗ: ಮುರುಘಾಶ್ರೀ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಸ್ ನ ಎ2 ಆರೋಪಿ ಆಗಿರುವ ವಾರ್ಡನ್ ರಶ್ಮಿ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ರಶ್ಮಿಗೆ ಡಿಸೆಂಬರ್ 21ರಂದು ಹೈಕೋರ್ಟ್ ನಿಂದ ಬೇಲ್ ಮಂಜೂರಾಗಿತ್ತು. ಈ ಹಿನ್ನಲೆ ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದಾಖಲೆಗಳನ್ನು ಪರಿಶೀಲಿಸಿ ಇಂದು ಬಿಡುಗಡೆಗೊಳಿಸಿದೆ. ಮುರುಘಾ ಶ್ರೀಗಳ ಲೈಂಗಿಕ ದೌರ್ಜನ್ಯಕ್ಕೆ ವಾರ್ಡನ್ ರಶ್ಮಿ ಸಹಕಾರ ನೀಡಿರುವ ಆರೋಪ ಎದುರಿಸುತ್ತಿದ್ದಾರೆ. ಈ ಹಿನ್ನಲೆ ಚಾರ್ಜ್ಶೀಟ್ನಲ್ಲಿ ಎರಡನೇ ಆರೋಪಿ ಆಗಿರುವ ವಾರ್ಡನ್ ವಿರುದ್ಧ, ಬೆಚ್ಚಿ ಬೀಳಿಸುವ ಆರೋಪಗಳು ಕೇಳಿ ಬಂದಿದ್ದವು. ಮುರುಘಾ ಶ್ರೀಗಳ ಬಳಿ ಬಾಲಕಿಯರನ್ನ ಕರೆದೊಯ್ಯುವ ಕೆಲಸವನ್ನ ಇದೇ ವಾರ್ಡನ್ ಮಾಡುತ್ತಿದ್ದಳು ಎನ್ನಲಾಗಿತ್ತು. ಮುರುಘಾ ಶ್ರೀ ಖಾಸಗಿ ಕೋಣೆಗೆ ಆರೋಪಿ ನಂಬರ್ 2 ಆಗಿರುವ ಇದೇ ಹಾಸ್ಟೆಲ್ ವಾರ್ಡನ್ ಮಕ್ಕಳನ್ನ ಕರೆದುಕೊಂಡು ಹೋಗುತ್ತಿದ್ದಳು ಎಂದು ಆರೋಪಿಸಲಾಗಿತ್ತು.
ಬೋರ್ಡ್ಗಳಲ್ಲಿ ಕನ್ನಡ ಬಳಕೆ ಕಡ್ಡಾಯಕ್ಕೆ ಆಗ್ರಹಿಸಿ ಇಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿದ್ದು, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ನಗರದ ಲಾವೆಲ್ಲೆ ರಸ್ತೆಯನಲ್ಲಿ ಇಂಗ್ಲಿಷ್ ಫಲಕ ಒಡೆದಾಕಿದ್ದಕ್ಕೆ 15 ಕರವೇ ಕಾರ್ಯಕರ್ತರ ವಿರುದ್ಧ ಬೆಂಗಳೂರಿನ ಕಬ್ಬನ್ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದ್ದು, 15 ಜನರನ್ನು ಅರೆಸ್ಟ್ ಮಾಡಲಾಗಿದೆ. 15 ಕರವೇ ಕಾರ್ಯಕರ್ತರ ಬಂಧನ ಖಂಡಿಸಿ ಇತರೆ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ಕನ್ನಡ ನಾಡು ನುಡಿಗಾಗಿ ಹೋರಾಟ ಮಾಡಿದ್ದಕ್ಕೆ ಬಟ್ಟೆ ಬಿಚ್ಚಿ ಕೂರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಪ್ರತಿಭಟನೆ ವೇಳೆ ವಶಕ್ಕೆ ಪಡೆದಿದ್ದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಕರವೇ ಅಧ್ಯಕ್ಷ ನಾರಾಯಣಗೌಡರನ್ನು ಬಿಡುಗಡೆ ಮಾಡಿಲ್ಲ. ಹೀಗಾಗಿ ಅವರನ್ನು ಬಿಡುಗಡೆ ಮಾಡುವಂತೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಈ ವೇಳೆ ಯಲಹಂಕದಲ್ಲಿರುವ ಪೊಲೀಸ್ ಡ್ರೈವಿಂಗ್ ಸ್ಕೂಲ್ ಬಳಿಯ ರಸ್ತೆ ತಡೆದು ಮಹಿಳಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ನಿರಂತರ ಹೆಚ್ಚಳವಾಗುತ್ತಿದ್ದು ಬುಧವಾರ ಕೊರೋನಾದಿಂದ ಒಬ್ಬರು ಮೃತಪಟ್ಟಿದ್ದಾರೆ. ಈಗಾಗಲೇ 103 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 479ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 103 ಹೊಸ ಕೋವಿಡ್-19 ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇಂದು ರಾಜ್ಯದಲ್ಲಿ 7262 ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಪಾಸಿಟಿವ್ ಪ್ರಮಾಣ ಶೇ. 1.41 ರಷ್ಟು ಇದೆ. ಬೆಂಗಳೂರಿನಲ್ಲಿ 2,321 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಆ ಪೈಕಿ 80 ಮಂದಿಗೆ ಸೋಂಕು ದೃಢಪಟ್ಟಿದೆ. ಶಿವಮೊಗ್ಗ, ಚಾಮರಾಜನಗರ ಮತ್ತು ದಕ್ಷಿಣ ಕನ್ನಡದಲ್ಲಿ ತಲಾ 2 ಪ್ರಕರಣ, ವಿಜಯಪುರದಲ್ಲಿ 1. ತುಮಕೂರಿನಲ್ಲಿ 1, ಮೈಸೂರಿನಲ್ಲಿ 3, ಮಂಡ್ಯದಲ್ಲಿ 8 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.