Author: admin

ದೇಶದಲ್ಲಿ ಕರ್ತವ್ಯದ ವೇಳೆ ಮದ್ಯಪಾನ ಮಾಡುವ ಪೈಲಟ್ ‌ಗಳ ಸಂಖ್ಯೆಯಲ್ಲಿ ಶೇ.136ರಷ್ಟು ಹೆಚ್ಚಳವಾಗಿದೆ ಎಂದು ಡಿಜಿಸಿಎ ಅಧ್ಯಯನ ವರದಿ ತಿಳಿಸಿದೆ. ಡಿಜಿಸಿಎ ಅಂಕಿ ಅಂಶಗಳು ಕರ್ತವ್ಯದಲ್ಲಿರುವಾಗ ಮದ್ಯಪಾನ ಮಾಡುವ ಕ್ಯಾಬಿನ್ ಸಿಬ್ಬಂದಿಯ ಸಂಖ್ಯೆಯಲ್ಲಿ 79 ಪ್ರತಿಶತದಷ್ಟು ಹೆಚ್ಚಳವನ್ನು ತೋರಿಸುತ್ತವೆ. ನಾಗರಿಕ ವಿಮಾನಯಾನ ನಿರ್ದೇಶನಾಲಯ ಬಿಡುಗಡೆ ಮಾಡಿರುವ ಹೊಸ ಅಂಕಿಅಂಶಗಳ ಪ್ರಕಾರ, ಕಳೆದ ಆರು ತಿಂಗಳ ಅವಧಿಯಲ್ಲಿ 33 ಪೈಲಟ್‌ ಗಳು ಮತ್ತು 97 ಕ್ಯಾಬಿನ್ ಸಿಬ್ಬಂದಿಯನ್ನು ಕುಡಿದು ಕರ್ತವ್ಯಕ್ಕಾಗಿ ಬಂಧಿಸಲಾಗಿದೆ. ಕಳೆದ ವರ್ಷ ಒಟ್ಟು 14 ಪೈಲಟ್‌ ಗಳು ಮತ್ತು 54 ಕ್ಯಾಬಿನ್ ಸಿಬ್ಬಂದಿಯನ್ನು ಕುಡಿದು ಕರ್ತವ್ಯಕ್ಕೆ ಬಂದಿದ್ದಕ್ಕಾಗಿ ಬಂಧಿಸಲಾಗಿತ್ತು. DGCA ನಿಯಮಗಳ ಪ್ರಕಾರ, ವಿಮಾನವನ್ನು ಹತ್ತುವ ಮೊದಲು ಮತ್ತು ನಂತರ, ಪೈಲಟ್‌ ಗಳು ಮತ್ತು ಕ್ಯಾಬಿನ್ ಸಿಬ್ಬಂದಿ ಆಲ್ಕೋಹಾಲ್ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಬೇಕು. ಏರ್ ಲೈನ್ ​​​​ವೈದ್ಯರು ಉಸಿರಾಟದ ಪರೀಕ್ಷೆಗಳನ್ನು ನಡೆಸುತ್ತಾರೆ. ಪರೀಕ್ಷೆ ವೇಳೆ ಮದ್ಯಪಾನ ಮಾಡಿರುವುದು ಕಂಡು ಬಂದರೆ ಮೂರು ತಿಂಗಳವರೆಗೆ ಪರವಾನಗಿ ರದ್ದು ಮಾಡುವುದು ಸೇರಿದಂತೆ…

Read More

ಬೆಂಗಳೂರು: ಲಾರಿ ಬೈಕ್ ಡಿಕ್ಕಿಯಾಗಿ ವ್ಯಕ್ತಿ ಮೃತಪಟ್ಟಿರುವ ಘಟನೆ ವೈಟ್‌ ಫೀಲ್ಡ್ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶನಿವಾರ ರಾತ್ರಿ ಸ್ನೇಹಿತ ಸೈಯದ್ ಶೇಖ್ ಸದೀರ್ ಮಂಡಲ್ ಜೊತೆ ಬೈಕ್‌ನಲ್ಲಿ ಹೊರಟಿದ್ದಾಗ ಲಾರಿ, ಬೈಕ್ ಡಿಕ್ಕಿ ಹೊಡೆದಿತ್ತು. ತೀವ್ರ ಗಾಯಗೊಂಡಿದ್ದ ಸಾಹೀನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸೈಯದ್ ಅವರಿಗೂ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಳಿಸಿದರು.

Read More

ಬೆಂಗಳೂರು: ಜಯನಗರದ 4ನೇ ಬ್ಲಾಕ್‌ ನಲ್ಲಿ 25 ವರ್ಷದ ಯುವಕ ನಿರ್ಮಾಣ ಹಂತದ ಕಟ್ಟಡದಲ್ಲಿ ಕಬ್ಬಿಣದ ಸರಳುಗಳ ಮೇಲೆ ಬಿದ್ದ ಪರಿಣಾಮ, ಕಬ್ಬಿಣದ ಸರಳುಗಳು ಹೊಟ್ಟೆ, ಕಾಲಿಗೆ ಚುಚ್ಚಿ ಹಿಂದೆ ಬಂದಿದ್ದವು. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಕಬ್ಬಿಣದ ಸರಕುಗಳನ್ನು ಕಟ್ ಮಾಡಿ ಯುವಕನನ್ನು ರಕ್ಷಿಸಿ ಗಂಭೀರ ಗಾಯಗೊಂಡ ಯುವಕನಿಗೆ ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Read More

ನಾನು ನಂದಿನಿ ಬೆಂಗಳೂರು ಬಂದಿನಿ, ಪಿಜಿಲಿ ಇದ್ದೀನಿ ಐಟಿ ಕೆಲಸ ಮಾಡ್ತೀನಿ. ಹಾಡು ತುಂಬಾ ವೈರಲ್ ಆಗಿದೆ. ಈ ವೈರಲ್ ಹಾಡಿಗೆ ಹಸುಗಳ ಫೋಟೋಗಳನ್ನು ಶೇರ್ ಮಾಡಿಕೊಂಡಿರುವ ಬೆಂಗಳೂರಿನ ಜನರು, ಕಸದ ಸಮಸ್ಯೆಗಳ ಬಗ್ಗೆ ಹೊಸ ಲೈನ್‌ ಗಳನ್ನು ಸೇರ್ಪಡೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ನಮ್ಮ ಬೆಂಗಳೂರು ಖಾತೆದಾರರು, ನಾನು ನಂದಿನಿ, ಬೆಂಗಳೂರು ಬಂದಿನಿ ಯಾರು ಊಟ ಹಾಕಲ್ಲ ಹಾಗಾಗಿ, ಬೆಂಗಳೂರು ಕಸ ತಿನ್ನೇನಿ ಅದ್ರೂನು ಹಾಲು ಕೊಡ್ತೀನಿ ಎಂದು ಬರೆದುಕೊಂಡಿದ್ದಾರೆ.

Read More

ಬೆಂಗಳೂರು: ಏಳು ತಿಂಗಳ ಗರ್ಭಿಣಿಯೊಬ್ಬರು ಸತತ 23 ಗಂಟೆಗಳ ಕಾಲ ಸ್ಯಾಕ್ರೋಫೋನ್ ನುಡಿಸಿ ಗಿನ್ನೆಸ್ ದಾಖಲೆ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಳಿಯ ಆವಲಹಳ್ಳಿಯ ಕಲಾವಿದೆ ಸುಬ್ಬಲಕ್ಷ್ಮಿ ಈ ಸಾಧನೆ ಮಾಡಿದ್ದಾರೆ. ಸುಬ್ಬಲಕ್ಷ್ಮೀ 7 ತಿಂಗಳ ಗರ್ಭಿಣಿಯಾಗಿದ್ದು, ಇವರು ವಿರಾಮವನ್ನೇ ಪಡೆಯದೆ 23 ಗಂಟೆಗಳ ಕಾಲ ಸ್ಯಾಕ್ರೋಫೋನ್ ನುಡಿಸಿ ದಾಖಲೆ ನಿರ್ಮಿಸಿದ್ದಾರೆ. 13 ವರ್ಷಗಳಿಂದ ಸ್ಯಾಕ್ರೋಫೋನ್ ನುಡಿಸುತ್ತಿದ್ದಾರೆ.

Read More

ಬೆಂಗಳೂರು: ಬೆಂಗಳೂರು ನಗರದಲ್ಲಿ ಸಿಸಿಬಿ ಪೊಲೀಸರು 553 ಹೋಟೆಲ್, ಬಾರ್ ಆಯಂಡ್ ರೆಸ್ಟೋರೆಂಟ್‌ ಗಳ ಮೇಲೆ ದಾಳಿ ನಡೆಸಿದೆ. 131 ಹೊಟೇಲ್, ರೆಸ್ಟೋರೆಂಟ್ ‌ಗಳು ನಿಯಮಗಳನ್ನು ಉಲ್ಲಂಘಿಸಿ ವ್ಯವಹಾರ ನಡೆಸುತ್ತಿರುವುದು ಪತ್ತೆಯಾಗಿದ್ದು, ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿವೆ. ನಿಯಮ ಉಲ್ಲಂಘಿಸಿದ ಹೋಟೆಲ್, ರೆಸ್ಟೋರೆಂಟ್, ಬಾರ್‌ ಗಳ ವಿರುದ್ಧ ಕೋಟ್ರಾ, ಜೆಜೆ ಆಯಕ್ಟ್ ಅಡಿ 2,300ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ. ಡಿಸಿಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ನಡೆದ ದಾಳಿ ಇದಾಗಿದೆ.

Read More

ಬೆಂಗಳೂರು: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ರೌಡಿಶೀಟರ್‌ ನನ್ನು ಹತ್ಯೆಗೈಯಲು ಸಂಚು ರೂಪಿಸಿದ್ದ ಇಬ್ಬರನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಕೆ. ಜಿ. ಹಳ್ಳಿಯ ಎಚ್‌ ಬಿಆರ್ ಲೇಔಟ್ ನಿವಾಸಿ ಮೊಹಮ್ಮದ್ ಜುಬೇರ್ (37) ಮತ್ತು ಡಿ. ಜೆ. ಹಳ್ಳಿಯ ಡೈವರ್ಸ್ ಕಾಲೋನಿಯ ಫುರ್ಕಾನ್ ಅಲಿಖಾನ್ (38) ಬಂಧಿತರು. ಆರೋಪಿಗಳಿಂದ ಒಂದು ಕಂಟ್ರಿಮೇಡ್ ಪಿಸ್ತೂಲ್ ಮತ್ತು ಎರಡು ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.

Read More

ಲಕ್ನೋ: ಮಹಿಳೆಯರ ಮೇಲೆ ದೌರ್ಜನ್ಯ ಎಸಗುವವರಿಗಾಗಿ ಯಮರಾಜ ಕಾಯುತ್ತಿದ್ದಾನೆ ಎಂದು ಕಿಡಿಗೇಡಿಗಳಿಗೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯಗಳ ವಿಚಾರವಾಗಿ ಅವರು ಗುಡುಗಿದ್ದಾರೆ. ಇತ್ತೀಚೆಗೆ ಅಲ್ಲಿನ ಅಂಬೇಡ್ಕರ್ ನಗರದಲ್ಲಿ ಮೂವರು ಕಿಡಿಗೇಡಿಗಳು ಸೈಕಲ್  ನಲ್ಲಿ ತೆರಳುತ್ತಿದ್ದ ಬಾಲಕಿಯರ ದುಪ್ಪಟ್ಟಾ ಎಳೆದು ಕೆಡವಿ ಇಬ್ಬರ ಸಾವಿಗೆ ಕಾರಣರಾಗಿದ್ದರು. ಇದನ್ನು ಉಲ್ಲೇಖಿಸಿ ಅವರು ಮಾತನಾಡಿದ್ದಾರೆ. ಈ ವೇಳೆ ಮಹಿಳೆಯರಿಗೆ ತೊಂದರೆ ಕೊಡುವವರಿಗೆ ಯಮ ಅಂತವರಿಗೆ ಕಾದು ಕುಳಿತಿದ್ದಾನೆ ಎಂದು ಎಚ್ಚರಿಸಿದ್ದಾರೆ.

Read More

ಲಾಲ್‌ ಬಾಗ್ ‌ನಲ್ಲಿ ಗುಂಪಾಗಿ ಕುಳಿತು ಪಸ್ತಕ ಓದುವುದಕ್ಕೆ ತೋಟಗಾರಿಕೆ ಇಲಾಖೆ ನಿಷೇಧ ಏರಿದೆ. ಹುಲ್ಲು ಹಾಸಿನ ಮೇಲೆ ಕೂತು ಪುಸ್ತಕ ಓದುವವರಿಂದ ಉದ್ಯಾನವನದ ಹೂವು ಮತ್ತು ಹುಲ್ಲು ಹಾಸಿನ ಸೂಕ್ಷ್ಮ ಸಮತೋಲನಕ್ಕೆ ಭಾರಿ ಅಪಾಯ ಎದುರಾಗಿದೆ ಎಂದು ವರದಿಯಾಗಿದೆ. ಲಾಲ್‌ ಬಾಗ್ ಸತ್ಯೋದ್ಯಾನದ ಆಡಳಿತ ಮಂಡಳಿ ನಿಗದಿಗೊಳಿಸಿರುವ ನಿಯಮಾವಳಿಗೆ ಬದ್ಧವಾಗಿದೆ. ಲಾಲ್‌ ಬಾಗ್‌ ಗೆ ಭೇಟಿ ನೀಡಿದ್ದ ಸಂದರ್ಶಕರೊಬ್ಬರು ಗುಂಪು ಅಧ್ಯಯನವನ್ನು ಗಮನಿಸಿ ದೂರು ನೀಡಿದ್ದರು. ಆ ಬಳಿಕ ಈ ಸೂಚನೆ ನೀಡಲಾಗಿದೆ ಎನ್ನಲಾಗಿದೆ.

Read More

ಬೆಂಗಳೂರು: ಅಕ್ರಮವಾಗಿ ಇ-ಸಿಗರೇಟ್ ಸಾಗಿಸುತ್ತಿದ್ದ ಇಬ್ಬರು ಪ್ರಯಾಣಿಕರು ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳಿಂದ 15.9 ಲಕ್ಷ ರೂ. ಮೌಲ್ಯದ ಇ-ಸಿಗರೇಟ್ ವಶಕ್ಕೆ ಪಡೆಯಲಾಗಿದೆ. ಮಲೇಷ್ಯಾದಿಂದ ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರ ಲಗ್ಗೇಜ್‌ ಗಳನ್ನು ಪರಿಶೀಲನೆ ಮಾಡುವಾಗ ಪತ್ತೆಯಾಗಿದೆ. 1,590 ಇ-ಸಿಗರೇಟ್ ‌ಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Read More