Author: admin

ಕಲ್ಯಾಣ ಕರ್ನಾಟಕದ ಸರ್ವಾಂಗೀಣ ಬೆಳವಣಿಗೆಗೆ ನೀಲನಕ್ಷೆ ಸಿದ್ಧಪಡಿಸಲು ಸೂಚಿಸಲಾಗಿದ್ದು, ನಕ್ಷೆ ಸಿದ್ದಗೊಳ್ಳುತ್ತಿದೆ. ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತುಂಬುವಂತೆ ಸೂಚಿಸಲಾಗಿದೆ. ಶಿಕ್ಷಣಕ್ಕೆ ಒತ್ತು ನೀಡಬೇಕು. ಕೆ.ಕೆ ಆರ್.ಡಿ.ಬಿ ವ್ಯಾಪ್ತಿಯ ಯಾವ ಹುದ್ದೆಯೂ ಖಾಲಿ ಇರಬಾರದು. ಈಗಾಗಲೇ 2,618 ಶಿಕ್ಷಕರನ್ನು ನೇಮಕ ಮಾಡಲಾಗಿದ್ದು, ಇನ್ನೂ ಹುದ್ದೆಗಳು ಖಾಲಿ ಇದ್ದರೆ ನೇಮಕಾತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಕಲಬುರ್ಗಿಯಲ್ಲಿ ಮುಖ್ಯಮಂತ್ರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್.ಡಿ.ಆರ್.ಎಫ್ / ಎಸ್.ಡಿ.ಆರ್.ಎಫ್ ಮಾನದಂಡಗಳನ್ನು ಬದಲಾಯಿಸಬೇಕೆಂದು ಕೇಂದ್ರ ಜಲಶಕ್ತಿ ಸಚಿವರಿಗೆ ಪತ್ರ ಬರೆದು ತಿಂಗಳಾಗಿದೆ. ಸರ್ವಪಕ್ಷ ನಿಯೋಗ ದೆಹಲಿಗೆ ತೆರಳಲು ಪತ್ರ ಬರೆದಿದ್ದು, ಈವರೆಗೆ ಒಂದು ತಿಂಗಳಾದರೂ ಪ್ರಧಾನ ಮಂತ್ರಿಗಳು ಸಮಯ ಕೊಟ್ಟಿಲ್ಲ. ಪುನಃ ಪತ್ರ ಬರೆಯುತ್ತಿದ್ದೇನೆ. ಜಂಟಿ ಸಮೀಕ್ಷೆ ಯ ನಂತರ ಎಷ್ಟು ಪರಿಹಾರ ನೀಡಬೇಕೆಂದು ತಿಳಿಯಲಿದೆ ಎಂದರು. ಬೆಳೆ ಪರಿಹಾರ ನೀಡುವ ಸಂಬಂಧ ಈಗಾಗಲೇ ಆದೇಶ ಹೊರಡಿಸಿದ್ದು ಜಾನುವಾರುಗಳಿಗೆ ಸದ್ಯಕ್ಕೆ ಮೇವಿನ ತೊಂದರೆ ಇಲ್ಲ. ಮುಂದೆ ತೊಂದರೆಯಾಗಬಹುದು ಎಂದು ತುರ್ತು ಯೋಜನೆ ತಯಾರು ಮಾಡಿದ್ದು,…

Read More

ತೆಲಂಗಾಣ ವಿಧಾನಸಭಾ ಚುನಾವಣೆಗೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ ಕಾಂಗ್ರೆಸ್ ಸಜ್ಜಾಗಿದೆ. ಕರ್ನಾಟಕ ಮಾದರಿಯಲ್ಲಿ ತೆಲಂಗಾಣಕ್ಕೆ ಆರು ಭರವಸೆಗಳನ್ನು ಘೋಷಿಸುವ ಮೂಲಕ ಕಾಂಗ್ರೆಸ್ ತನ್ನ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿತು. ಈ ಅಭಿಯಾನ ರಾಜ್ಯ ರಚನೆಯಲ್ಲಿ ಸೋನಿಯಾ ಗಾಂಧಿಯವರ ಪಾತ್ರವನ್ನು ನೆನಪಿಸುತ್ತದೆ. ಎರಡು ದಿನಗಳ ಕಾರ್ಯಕಾರಿ ಸಮಿತಿ ಸಭೆಯ ನಂತರ ಹೈದರಾಬಾದ್‌ ನ ವೆಂಗುಗುಡ ಮೈದಾನದಲ್ಲಿ ನಡೆದ ವಿಜಯಭೇರಿ ರ್ಯಾಲಿಯಲ್ಲಿ ಸೋನಿಯಾ ಗಾಂಧಿ ಅವರ ಉಪಸ್ಥಿತಿ ಗಮನ ಸೆಳೆಯಿತು. 2014ರಲ್ಲಿ ರಾಜ್ಯ ರಚನೆಯ ಭರವಸೆ ನೀಡಿದ ಸೋನಿಯಾ ಗಾಂಧಿ ಅವರನ್ನು ಜಯಘೋಷದೊಂದಿಗೆ ಸ್ವಾಗತಿಸಲಾಯಿತು. ಸೋನಿಯಾ ಗಾಂಧಿ ಮಹಿಳೆಯರಿಗೆ ಮಾಸಿಕ 2500 ರೂಪಾಯಿ ಆರ್ಥಿಕ ನೆರವು, 500 ರೂಪಾಯಿಗೆ ಗ್ಯಾಸ್ ಸಿಲಿಂಡರ್ ಸೇರಿದಂತೆ ಆರು ಭರವಸೆಗಳನ್ನು ಘೋಷಿಸಿದರು. ಭರವಸೆಗಳನ್ನು ಈಡೇರಿಸುವುದು ಸೋನಿಯಾ ಅವರ ವಿಶೇಷತೆ ಎಂದು ರಾಹುಲ್ ಗಾಂಧಿ ಕೂಡ ಒತ್ತಿ ಹೇಳಿದರು. ವಿಜಯಭೇರಿ ರ್ಯಾಲಿಯಲ್ಲಿ ಕೆಸಿಆರ್ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಬಿಆರ್‌ಎಸ್ ಬಿಜೆಪಿಯ ಸಂಬಂಧಿ ಪಕ್ಷವಾಗಿರುವುದರಿಂದ ಕೇಂದ್ರೀಯ ಸಂಸ್ಥೆಗಳು ಮುಖ್ಯಮಂತ್ರಿಯನ್ನು ಮುಟ್ಟಲಿಲ್ಲ…

Read More

ನಾನು ಚಾಮರಾಜನಗರ ಮೀಸಲು ಲೋಕಸಭೆ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಚರ್ಚೆ ಮಾಡಿದ್ದೇನೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮ್ ತಿಳಿಸಿದರು. ಟಿ.ನರಸೀಪುರ ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಶಿವರಾಂ, ಬಿಎಸ್ ಯಡಿಯೂರಪ್ಪ ಅವರು ನನಗೆ ಆಶೀರ್ವಾದ ಮಾಡಿದ್ದಾರೆ. ನಾನು ಪಕ್ಷದಲ್ಲಿ ಹಿರಿಯವನಾಗಿದ್ದು ಕ್ಷೇತ್ರದಲ್ಲಿ ಚಿರಪರಿಚಿತನಾಗಿದ್ದೇನೆ. ಅಲ್ಲದೆ ಗ್ರಾಮಗಳಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಎಲ್ಲಾ ಸಮುದಾಯದ ಜನರು ಬೆಂಬಲ ನೀಡುತ್ತಿದ್ದಾರೆ. ಆದ್ದರಿಂದ ಚಾಮರಾಜನಗರ ಲೋಕಸಭೆಯ ಟಿಕೆಟ್ ನನಗೆ ನೀಡಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ಬಿಜೆಪಿ ಪಕ್ಷ ನನಗೆ ಟಿಕೆಟ್ ನೀಡದೆ ಇದ್ದಲ್ಲಿ ರಾಜಕೀಯಕ್ಕೆ ನಿವೃತ್ತಿ ಘೋಷಿಸುತ್ತೇನೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಮ್ ಹೇಳಿದರು.

Read More

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಸೇನಾ ಕಾರ್ಯಾಚರಣೆ ಆರನೇ ದಿನಕ್ಕೆ ಕಾಲಿಟ್ಟಿದೆ. ಗರೋಲ್ ಅರಣ್ಯ ಪ್ರದೇಶದಲ್ಲಿ ಅಡಗಿರುವ ಉಗ್ರರನ್ನು ಹಿಡಿಯಲು ಜಂಟಿ ಪಡೆಗಳು ಪ್ರಯತ್ನಿಸುತ್ತಿವೆ. ನಿನ್ನೆ 5ನೇ ದಿನವೂ ಗರೋಲ್ ಅರಣ್ಯ ಪ್ರದೇಶದಲ್ಲಿ ಜಂಟಿ ಭದ್ರತಾ ಪಡೆಗಳ ಶೋಧಕಾರ್ಯ ಕೇಂದ್ರೀಕೃತವಾಗಿತ್ತು. ಭಯೋತ್ಪಾದಕರು ಜನನಿಬಿಡ ಪ್ರದೇಶಗಳಿಗೆ ಪ್ರವೇಶಿಸುವುದನ್ನು ತಡೆಯಲು ಜಂಟಿ ಪಡೆಗಳು ಅತ್ಯಂತ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿವೆ. ಹೆಚ್ಚಿನ ಗ್ರಾಮಗಳಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಡ್ರೋನ್ ‌ಗಳು ಮತ್ತು ಹೆಲಿಕಾಪ್ಟರ್ ಗಳನ್ನು ಬಳಸಿಕೊಂಡು ಅರಣ್ಯ ಕಣ್ಗಾವಲು. ಬುಧವಾರ ನಡೆದ ಉಗ್ರರ ದಾಳಿಯಲ್ಲಿ ಇಬ್ಬರು ಸೇನಾ ಅಧಿಕಾರಿಗಳು, ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನ ಡಿಎಸ್‌ಪಿ ಮತ್ತು ಒಬ್ಬ ಯೋಧ ಹುತಾತ್ಮರಾಗಿದ್ದರು. ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ದ್ವಿವೇದಿ ಅನಂತನಾಗ್‌ ನಲ್ಲಿ ಮೊಕ್ಕಾಂ ಹೂಡಿದ್ದಾರೆ. ಕಾಡಿನಲ್ಲಿ ಇಬ್ಬರು ಅಥವಾ ಮೂವರು ಉಗ್ರರು ಇರಬಹುದು ಎಂದು ಪೊಲೀಸರು ತೀರ್ಮಾನಿಸಿದ್ದಾರೆ.

Read More

ಬಿಜೆಪಿ ಎಂಎಲ್ ಎ ಟಿಕೆಟ್ ಕೊಡಿಸುವುದಾಗಿ ಹಿಂದೂಪರ ಸಂಘಟನೆ ಕಾರ್ಯಕರ್ತೆ ಚೈತ್ರಾ ಕುಂದಾಪುರ, ಉದ್ಯಮಿ ಟಿಕೆಟ್ ಆಕಾಂಕ್ಷಿ ಗೋವಿಂದಬಾಬು ಐದು ಕೋಟಿ ರೂ. ಹಣ ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿ ಚೈತ್ರಾ ಕುಂದಾಪುರ ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದಾರೆ. “ಐದು ಕೋಟಿ ರೂ. ಹಣದ ಬಗ್ಗೆ ಗೋವಿಂದಬಾಬು ಆಪ್ತನೇ ನನಗೆ ಮಾಹಿತಿ ನೀಡಿದ್ದಾನೆ. ಹಣ ನೀಡಿದ ಬಗ್ಗೆ ನನ್ನ ಜೊತೆಯೂ ಗೋವಿಂದ ಬಾಬು ಚರ್ಚಿಸಿದ್ದಾರೆ. ಚುನಾವಣಾ ಟಿಕೆಟ್ ಗಾಗಿ ಹಣ ವರ್ಗಾಯಿಸಿದ್ದಾರೆ. ಮಂಜುನಾಥ್ ಗೆ 1 ಕೋಟಿ ರೂ., ಅಭಿಮವ ಹಾಲಶ್ರೀ ಸ್ವಾಮೀಜಿಗೆ 1.5 ಕೋಟಿ ರೂ. ವಿಶ್ವನಾಥ್ ಜೀಗೆ 3 ಕೋಟಿ ರೂ. ಹಣ ನೀಡಿದ್ದಾಗಿ ಗೋವಿಂದಬಾಬು ನನಗೆ ಹೇಳಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿ ಎಂದು ನಾನು, ಗೋವಿಂದಬಾಬುಗೆ ಹೇಳಿದ್ದೆ”ಎಂದು ಚೈತ್ರಾ ಕುಂದಾಪುರ ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದಾರೆ.

Read More

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ವಿಶ್ವಕರ್ಮ ಜಯಂತಿಯನ್ನು ಉದ್ಘಾಟಿಸಿದರು. ಮಧುಗಿರಿ ನಿಟ್ಟರಹಳ್ಳಿ ಅಭಯಹಸ್ತೆ ಆದಿಲಕ್ಷ್ಮಿ ಸಂಸ್ಥಾನ ಮತ್ತು ವಿಶ್ವಕರ್ಮ ಸಂಪನ್ಮೂಲ ಮಠದ ಶ್ರೀ ಶ್ರೀ ಶ್ರೀ ಡಾ.ನೀಲಕಂಠಚಾರ್ಯ ಮಹಾಸ್ವಾಮಿಗಳ ದಿವ್ಯಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ವಿಶ್ವಕರ್ಮ ಸಮುದಾಯದ ಮುಖಂಡರು ಮತ್ತು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Read More

ದೆಹಲಿಯಲ್ಲಿ ಆರು ಮಂದಿಯ ತಂಡವೊಂದು ಯುವಕನೊಬ್ಬನನ್ನು ಕಡಿದು ಹತ್ಯೆ ಮಾಡಿದೆ. ವಾಹನ ನಿಲುಗಡೆ ವಿಚಾರವಾಗಿ ನಡೆದ ವಿವಾದ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ನಿ ಹಾಗೂ ಮಗನ ಎದುರೇ ಭೀಕರ ಹತ್ಯೆ ನಡೆದಿದೆ. ಘಟನೆಯಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ನಿನ್ನೆ ರಾತ್ರಿ 9.30ರ ಸುಮಾರಿಗೆ ಆಗ್ನೇಯ ದೆಹಲಿಯ ಸರಿತಾ ವಿಹಾರ್ ನಲ್ಲಿ ಈ ಘಟನೆ ನಡೆದಿದೆ. ಅರವಿಂದ್ ಮಂಡಲ್ ಕೊಲೆಯಾದ. ಶಾಲೆಯಿಂದ ಮಗ ಆಕಾಶ್‌ ನನ್ನು ಕರೆದು ವಾಪಸ್‌ ಬರುತ್ತಿದ್ದಾಗ ಅರವಿಂದ್‌ ಮಂಡಲ್‌, ಮನೋಜ್‌ ಹಲ್ದರ್‌ ಜತೆ ವಾಗ್ವಾದಕ್ಕೆ ಇಳಿದಿದ್ದಾನೆ. ಬೈಕ್ ಪಾರ್ಕಿಂಗ್ ಗೆ ಸಂಬಂಧಿಸಿದಂತೆ ವಿವಾದ ಉಂಟಾಗಿತ್ತು. ಆದರೆ ರಾತ್ರಿ 9:30ರ ಸುಮಾರಿಗೆ ಮೂರು ಬೈಕ್ ಗಳಲ್ಲಿ ಬಂದ ದುಷ್ಕರ್ಮಿಗಳ ತಂಡ ಮನೆಗೆ ನುಗ್ಗಿ ಚಾಕುವಿನಿಂದ ಇರಿದಿದ್ದಾರೆ. ಅರವಿಂದ್ ಅವರನ್ನು ರಕ್ಷಿಸಲು ಯತ್ನಿಸಿದಾಗ ಅವರ ಪತ್ನಿ ರೇಖಾ ಕೂಡ ಗಾಯಗೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡ ಅರವಿಂದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇಬ್ಬರು…

Read More

ನವದೆಹಲಿ: ಇಂದಿನಿಂದ 5 ದಿನಗಳ ಕಾಲ ಸಂಸತ್ ವಿಶೇಷ ಅಧಿವೇಶನ ನಡೆಯಲಿದೆ. ಚಂದ್ರಯಾನ-3 ಯಶಸ್ವಿ ಬಳಿಕ ಭಾರತ ವಿಶ್ವದ ಗಮನ ಸೆಳೆದಿದೆ ಎಂದು ಪ್ರಧಾನಮಂತ್ರಿ  ನರೇಂದ್ರ ಮೋದಿ ಹೇಳಿದರು. ಸಂಸತ್ ಭವನದ ಬಳಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚಂದ್ರನ ಅಂಗಳದಲ್ಲಿ ಭಾರತದ ರಾಷ್ಟ್ರಧ್ವಜ ಹಾರುತ್ತಿದೆ. ಚಂದ್ರಯಾನ-3 ನಮ್ಮ ತಿರಂಗವನ್ನು ಎತ್ತಿ ಹಿಡಿದಿದೆ. ಶಿವಶಕ್ತಿ ಪಾಯಿಂಟ್ ಹೊಸ ಸ್ಫೂರ್ತಿಯ ಕೇಂದ್ರವಾಗಿದೆ ಎಂದರು. ಜಗತ್ತು, ಅಂತಹ ಸಾಧನೆಯನ್ನು ಮಾಡಿದಾಗ, ಅದನ್ನು ಆಧುನಿಕತೆ, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಜೋಡಿಸುವ ಮೂಲಕ ನೋಡಲಾಗುತ್ತದೆ. ಈ ಸಾಧನೆಯಿಂದ ಹಲವು ಅವಕಾಶಗಳು ಭಾರತದ ಬಾಗಿಲುಗಳನ್ನ ತಟ್ಟುತ್ತವೆ. ಇಸ್ರೋ ವಿಜ್ಞಾನಿಗಳ ಸಾಧನೆ ಎಲ್ಲರಿಗೂ ಸ್ಫೂರ್ತಿ ಎಂದರು.

Read More

ಬೆಂಗಳೂರು: ಬೆಂಗಳೂರು ಮಾದಕ ವಸ್ತುಗಳ ರಾಜಧಾನಿ ಆಗ್ತಿದೆ. ರಾಜಧಾನಿ ಸಿಸಿಬಿ ಪೊಲೀಸರು ಅಂಥಾ ಬೃಹತ್ ಮಾದಕ ಜಾಲವೊಂದನ್ನ ಬೇಧಿಸಿ ಬರೋಬ್ಬರಿ 7 ಕೋಟಿ 83 ಲಕ್ಷ ಮೌಲ್ಯದ ಡ್ರಗ್ಸ್ ಅನ್ನು ಸೀಝ್ ಮಾಡಿದ್ದಾರೆ. ಸರಿ ಸುಮಾರು 190kg ತೂಕದ 7 ಕೋಟಿ 83 ಲಕ್ಷ ರೂಪಾಯಿ ಮೌಲ್ಯದ ವಿವಿಧ ಬಗೆಯ ಮಾದಕ ವಸ್ತುಗಳನ್ನು ಕೇವಲ ಒಂದೇ ವಾರದಲ್ಲಿ ಸೀಜ್ ಮಾಡಿದ್ದಾರೆ. ಈ ಪ್ರಕರಣದಲ್ಲಿ, ಬೆಂಗಳೂರಿನ 3 ಮಂದಿ, ಕೇರಳದ ನಾಲ್ವರು, ಒರಿಸ್ಸಾದ ನಾಲ್ವರು ಸೇರಿದಂತೆ ಮೂವರು ವಿದೇಶಿ ಪ್ರಜೆಗಳ ಹೆಡೆಮುರಿ ಕಟ್ಟಿದ್ದಾರೆ.

Read More

ರಾಜ್ಯದಲ್ಲಿ ಹಿಂದೂಪರ ಹೋರಾಟಗಾರ ಹಾಗೂ ಗೋರಕ್ಷಕ ಎಂದು ವಿವಿಧ ಹೋರಾಟಗಳ ಮೂಲಕ ಹಲ್ಲೆ ಹಾಗೂ ವಿವಿಧ ಪ್ರಕರಣಗಳಡಿ ಪುನೀತ್ ಕೆರೆಹಳ್ಳಿ ವಿರುದ್ಧ ಗೂಂಡಾ ಕಾಯ್ದೆಯಡಿ ಕೇಸ್ ದಾಖಲಿಸಿ ಜೈಲಿಗಟ್ಟಿದ್ದರು. ಆದರೆ, ರಾಷ್ಟ್ರ ರಕ್ಷಣಾ ಪಡೆಯ ಪುನೀತ್‌ ಕುಮಾರ್ ಅಲಿಯಾಸ್ ಪುನೀತ್ ಕೆರೆಹಳ್ಳಿಗೆ ಗುಡ್ ನ್ಯೂಸ್ ನೀಡಿರುವ ಸರ್ಕಾರ, ಅವರ ವಿರುದ್ಧ ದಾಖಲಾಗಿದ್ದ ಗೂಂಡಾ ಕಾಯ್ದೆಯನ್ನು ರದ್ದುಗೊಳಿಸಿ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

Read More