Author: admin

ಕೊರಟಗೆರೆ : ಇತಿಹಾಸ ಪ್ರಸಿದ್ಧ  ಶ್ರೀ ಮೀನ ಗೊಂದಿ ಮಲೇ ರಂಗನಾಥ ಸ್ವಾಮಿ ದೇವಾಲಯದಲ್ಲಿ ಜು.26 ರಿಂದ ಪ್ರತಿ ಶನಿವಾರ ಶ್ರಾವಣ ಮಾಸದ ಮಹೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು ಎಂದು 9 ಮಂದಿ ಬುಡ್ಕಟ್ಟಿನ ಅಣ್ಣತಮ್ಮಂದಿರು ಮನವಿ ಮಾಡಿಕೊಂಡಿದ್ದಾರೆ . ಅವರು ಪ್ರತಿಕಾ ಪ್ರಕಟಣೆ ನೀಡಿ,   ಮಧುಗಿರಿ ತಾಲೂಕಿನ ಬಂದ್ರಹಳ್ಳಿ ತೇರಿನ ಬೀದಿ ಒಲಬು ಇಲ್ಲಿ ಪ್ರತಿಷ್ಠಾಪನೆಗೊಂಡಿರುವ ಇತಿಹಾಸ ಪ್ರಸಿದ್ಧ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಶ್ರಾವಣ ಮಾಸದ ಮೊದಲ ಶನಿವಾರ ಜು.26 ರಿಂದ ದೇವಾಲಯದಲ್ಲಿ ಶ್ರೀ ಮೀನಾ ಗೊಂದಿ ಶ್ರೀ ಮಲೆ ರಂಗನಾಥ ಸ್ವಾಮಿ ಗೆ ಪ್ರತಿ ಶ್ರಾವಣ ಶನಿವಾರ ವಿಶೇಷವಾಗಿ ಅಭಿಷೇಕ ಸ್ವಾಮಿಗೆ ವಿಶೇಷ ಅಲಂಕಾರ  ಬೆಳಿಗ್ಗೆ 6 ಗಂಟೆ ಯಿಂದ ರಾತ್ರಿ 6 ಗಂಟೆಯವರೆಗೆ ವಿಶೇಷ ಪೂಜೆ ಮತ್ತು ಪ್ರಸಾದ ವಿನಿಯೋಗ ಏರ್ಪಡಿಸಲಾಗುದು 9 ಮಂದಿ ಬುಡ್ಕಟ್ಟಿನ ಅಣ್ಣ-ತಮ್ಮಂದಿರು ತಿಳಿಸಿದ್ದಾರೆ. ಶ್ರೀ ಮೀನಗೊಂದಿ ಮಲೆ ರಂಗನಾಥ ಸ್ವಾಮಿ…

Read More

ಸರಗೂರು:  ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಜಿಲ್ಲೆಯ ನಾನಾ ದೇವಾಲಯಗಳಲ್ಲಿ ಭಕ್ತರು ದಾಂಗುಡಿ ಇಟ್ಟಿದ್ದರು. ಅದರಲ್ಲೂ ಶಿವನ ದೇವಾಲಯಗಳಿಗಂತೂ ಪೂರ್ಣ ಬೇಡಿಕೆ. ಸಹಸ್ರಾರು ಮಂದಿ ಭಕ್ತರು ಶ್ರದ್ಧಾ, ಭಕ್ತಿಯಿಂದ ಪೂಜೆ ಸಲ್ಲಿಸಿದರು ತಾಲೂಕಿನ ಚಿಕ್ಕದೇವಮ್ಮನ ಬೆಟ್ಟದ ತಾಯಿಗೆ ಹಾಗೂ ಶ್ರೀ ಕ್ಷೇತ್ರ ಬೇಲದಕುಪ್ಪೆ ಮಹದೇಶ್ಶವರ ದೇವಸ್ಥಾನದಗಳಲ್ಲಿ ಭೀಮನ ಅಮಾವಾಸ್ಯೆಯನ್ನು ದೇವಾಲಯಗಳಿಗೆ ಪೂಜೆ ಸಲ್ಲಿಸುವ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು. ಗುರುವಾರ ಬೆಳಗಿನಿಂದಲೇ ಭಕ್ತಾದಿಗಳು ದೇವಾಲಯಗಳತ್ತ ಹೆಜ್ಜೆ ಹಾಕಿದರು. ಪ್ರತಿ ಅಮಾವಾಸ್ಯೆಯ ಸಂದರ್ಭದಲ್ಲೂ ತಾಲೂಕಿನ ದೇವಾಲಯಗಳಿಗೆ ತೆರಳಿ, ಪೂಜೆ ಸಲ್ಲಿಸುವುದು ವಾಡಿಕೆ. ಮಾಮೂಲಿಗಿಂತ ಇಂದು ಜ್ಯೋರ್ತಿಭೀಮೇಶ್ವರ ವ್ರತದ ಹಿನ್ನೆಲೆಯಲ್ಲಿ ತಾಲೂಕಿಯಲ್ಲಿ ಹಬ್ಬದ ವಾತಾವರಣ ಕಂಡುಬಂತು. ಕಾಲಿಡಲೂ ಜಾಗವಿಲ್ಲದಂತೆ ಜನಸ್ತೋಮ ದೇವಾಲಯಗಳಲ್ಲಿ ನೆರೆದಿದ್ದು, ವಿಶೇಷವಾಗಿತ್ತು. ಚಿಕ್ಕ ದೇವಮ್ಮನಾ ಬೆಟ್ಟ ಹಾಗೂ ಬೇಲದಕುಪ್ಪೆ  ಮಹದೇಶ್ವರ ದೇವಸ್ಥಾನದಲ್ಲೂ ವಿಶೇಷ ಪೂಜೆ, ಪಾಲ್ಗೊಂಡಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ದೇವಸ್ಥಾನ ಭೀಮನ ಅಮಾವಾಸ್ಯೆ ಪೂಜೆಗೆ ಪ್ರಸಿದ್ಧಿ. ಇಲ್ಲಿಗೆ ಜಿಲ್ಲೆ ಸೇರಿದಂತೆ ನಾನಾ ಗ್ರಾಮಗಳಿಂದ ಆಗಮಿಸಿದ ಭಕ್ತರು ದೇವರದರ್ಶನ ಪಡೆದರು. ಸಾವಿರಾರು ಭಕ್ತಾದಿಗಳಿಗೆ ಗ್ರಾಮಸ್ಥರಿಂದ…

Read More

ಬೀದರ್ : ಕಲಬುರಗಿ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸುನಿಲ್ ಕುಮಾರ್ ಪ್ರಭಾ, ಚಂದ್ರಪ್ರಕಾಶ್ ಪ್ರಭಾ ಅವರಿಗೆ ಸೇರಿದ ನಾಲ್ಕು ಸ್ಥಳಗಳ ಮೇಲೆ ಬುಧವಾರ ಲೋಕಾಯುಕ್ತ ದಾಳಿ ನಡೆದಿತ್ತು. ಈ ವೇಳೆ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ. 2 ಕೋಟಿ 24 ಲಕ್ಷ 57 ಸಾವಿರ ರೂ. ಮೌಲ್ಯದ ಒಟ್ಟು ಸ್ಥಿರ ಆಸ್ತಿ ಪತ್ತೆಯಾಗಿದ್ದು, ಅದರಲ್ಲಿ 3 ಸೈಟ್, ಒಂದು ಮನೆ ಮತ್ತು ಕೃಷಿ ಭೂಮಿ ಸೇರಿದೆ. ಅದೇ ರೀತಿ ಒಟ್ಟು 2 ಕೋಟಿ 35 ಲಕ್ಷ 23 ಸಾವಿರ 897 ರೂ. ಯ ಚರ ಆಸ್ತಿ ಪತ್ತೆಯಾಗಿದ್ದು, ಇದರಲ್ಲಿ 15 ಲಕ್ಷ 75 ಸಾವಿರ 660 ರೂ. ನಗದು, 1 ಕೋಟಿ 26 ಲಕ್ಷ 60 ಸಾವಿರ ರೂ. ಮೌಲ್ಯದ ಆಭರಣ ವಸ್ತು, 12 ಲಕ್ಷ 50 ಸಾವಿರ ರೂ. ಮೌಲ್ಯದ ಆಭರಣ ವಸ್ತು, 12 ಲಕ್ಷ 50…

Read More

ಕೊರಟಗೆರೆ : ತಾಲೂಕಿನ ಶ್ರೀಕ್ಷೇತ್ರ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳ 44ನೇ ಜನ್ಮವರ್ಧಂತಿ ಅಂಗವಾಗಿ ಶ್ರೀ ಮಠದಲ್ಲಿ ವಿವಿಧ ಸಂಘ ಸಂಸ್ಥೆಗಳು, ಮಠದ ವಿದ್ಯಾರ್ಥಿಗಳು, ಗುರುಕುಲ ಸಾಧಕರಿಂದ ಗುರುವಂದನಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಶ್ರೀಗಳ 44ನೇ ಜನ್ಮವರ್ಧಂತಿ ಕಾರ್ಯಕ್ರಮದ ಅಂಗವಾಗಿ ಪ್ರಾತಃಕಾಲ 6 ಗಂಟೆಯಿಂದ ಶ್ರೀ ಕ್ಷೇತ್ರಧೀಪತಿ ಸಿದ್ದೇಶ್ವರಸ್ವಾಮಿ ಹಾಗೂ ಶ್ರೀಮಠದ ಕರ್ತೃ ಶ್ರೀ ಜಗದ್ಗುರು ರೇಣುಕಾಚಾರ್ಯರು, ಗಣಪತಿ ಮತ್ತು ವೀರಭದ್ರಸ್ವಾಮಿ ಅವರಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ ಮತ್ತು ಮಹಾ ಮಂಗಳಾರತಿ ನಡೆಯಿತು. ನಂತರ 11 ಗಂಟೆಗೆ ಗುರುವಂದನಾ ಕಾರ್ಯಕ್ರಮದಲ್ಲಿ ಏಲೆರಾಂಪುರ ಕುಂಚಿಟಿಗೆ ಮಹಾಸಂಸ್ಥಾನ ಮಠದ ಡಾ,ಹನುಮಂತನಾಥಸ್ವಾಮೀಜಿ, ರಾಮಮೂರ್ತಿಸ್ವಾಮೀಜಿ ಸೇರಿದಂತೆ ರಾಜ್ಯದ ವಿವಿಧ ಮಠಗಳ ಮಠಾಧೀಶ್ವರರು, ಹರ ಗುರು ಚರಮೂರ್ತಿಗಳ ಸಾನಿಧ್ಯದಲ್ಲಿ ತುಮಕೂರು ಕ್ಷೇತ್ರದ ಶಾಸಕ ಜ್ಯೋತಿಗಣೇಶ್ ಸೇರಿದಂತೆ ವಿವಿಧ ಪಕ್ಷಗಳು ಮುಖಂಡರುಗಳು, ಸಂಘಸಂಸ್ಥೆಗಳ ಪದಾಧಿಕಾರಿಗಳು, ಶ್ರೀಮಠದ ಭಕ್ತರು ಭಾಗವಹಿಸಿ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳ ಪಾದ ಪೂಜೆಯೊಂದಿಗೆ ಧಾರ್ಮಿಕ ವಿಧಿ ವಿಧಾನಗಳಿಂದ ಜನ್ಮವರ್ಧಂತಿ…

Read More

ಔರಾದ: ವಿದ್ಯಾರ್ಥಿ ವೇತನ ಬಿಡುಗಡೆ ಹಾಗೂ ಹಾಸ್ಟೆಲ್ ಗಳ ಮೂಲಭೂತ ಸೌಲಭ್ಯವನ್ನು ಸರಿಪಡಿಸುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್  ಪ್ರತಿಭಟನೆ ನಡೆಸಿತು. ಕರ್ನಾಟಕ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಇಲಾಖೆಯ ವ್ಯಾಪ್ತಿಯಲ್ಲಿ 1.258 ಹಾಸ್ಟೆಲ್ ಗಳಿದ್ದು 1,68,833 ವಿದ್ಯಾರ್ಥಿಗಳು ವಸತಿ ನಿಲಯಗಳಲ್ಲಿ ವಾಸವಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ 1972 ವಸತಿ ನಿಲಯಗಳಿದ್ದು 1,87,200 ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಲ್ಲಿ ಉಳಿಯಲು ಅವಕಾಶ ನೀಡಬಹುದಾಗಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಹಿಂದಿನ 3 ವರ್ಷಗಳ ಸರಕಾರದ ವರದಿ ಪ್ರಕಾರ ಅರ್ಜಿ ಸಲ್ಲಿಸಿದ 100 ವಿದ್ಯಾರ್ಥಿಗಳಲ್ಲಿ 40 ರಿಂದ 50 ವಿದ್ಯಾರ್ಥಿಗಳಿಗೆ ಮಾತ್ರ ವಸತಿ ನಿಲಯಗಳಲ್ಲಿ ಅವಕಾಶ ಸಿಗುತ್ತಿದೆ. ಇನ್ನುಳಿದ ವಿದ್ಯಾರ್ಥಿಗಳು ವಸತಿ ನಿಲಯಗಳಿಂದ ವಂಚಿತರಾಗುತ್ತಿದ್ದಾರೆ ಸರ್ಕಾರ ವಸತಿ ನಿಲಯಗಳಿಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಆಯಾ ಜಿಲ್ಲೆಗಳಿಗೆ ಹೊಸ ವಸತಿ ನಿಲಯಗಳನ್ನು ಘೋಷಣೆ ಮಾಡಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿತು. ರಾಜ್ಯದಲ್ಲಿ ಕಳೆದ ನಾಲ್ಕು ತಿಂಗಳುಗಳಿಂದ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಲ್ಲಿ…

Read More

ಸರಗೂರು: ಕಾಡಂಚಿನ ಗ್ರಾಮ ಬಿ ಮಟಕೆರೆ ಈ ಭಾಗದಲ್ಲಿ ಗಿರಿಜನರು, ರೈತರು, ಕೂಲಿ ಕಾರ್ಮಿಕರು, ಹೆಚ್ಚಾಗಿದ್ದು ಇವರಿಗೆ ಅಗತ್ಯ ಇರುವ ಸೇವೆಗಳಾದ ಹೃದಯ ಸಂಬಂಧಿ ಮತ್ತು ಶ್ವಾಸಕೋಶ ಸಮಸ್ಯೆಗಳ ತಪಾಸಣೆ ನಡೆಸಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಟಿ.ರವಿಕುಮಾರ್ ತಿಳಿಸಿದರು. ಹಾರ್ಟ್ ಸಂಸ್ಥೆ ಮೈಸೂರು ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹೆಚ್.ಡಿ ಕೋಟೆ, ಬಿ. ಮಟಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯಿತಿ ಬಿ. ಮಟಕೆರೆ, ಅವಾಂಟ್ ಆಸ್ಪತ್ರೆ ಮೈಸೂರು, ಎ. ಎಸ್. ಜಿ. ಕಣ್ಣಿನ ಆಸ್ಪತ್ರೆ ಇವರ ಸಹಯೋಗದೊಂದಿಗೆ ಬುಧವಾರದಂದು  ಬಿ ಮಟಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ದೀಪವನ್ನು ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಸರಗೂರು ತಾಲೂಕಿನಲ್ಲಿ  ಪ್ರಾಥಮಿಕ ಹಂತದಲ್ಲಿ ಗುರುತಿಸಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ  ಈ  ಶಿಬಿರವನ್ನು ಆಯೋಜಿಸಿದ್ದು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಂಡು ಆರೋಗ್ಯ ಸುಧಾರಿಸಿಕೊಳ್ಳುವಂತೆ  ತಿಳಿಸಿ ಹೇಳಿದರು. ನಂತರ ಮಾತನಾಡಿದ  ಬಿ ಮಟಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವದಾಸ್,  ಹಣವನ್ನು…

Read More

ಸರಗೂರು:   ತಾಲ್ಲೂಕು  ವಿದ್ಯುತ್ ದೀಪಾಲಂಕಾರ ಹಾಗೂ ಧ್ವನಿವರ್ಧಕ ಮತ್ತು ಶಾಮಿಯಾನ ಮಾಲಿಕರ ಸಂಘದ ನೂತನ ಅಧ್ಯಕ್ಷರಾಗಿ ವಾಸುಕಿ ನಾಗೇಶ್ ವರನ್ನು ಸಂಘದ ಪದಾಧಿಕಾರಿಗಳು ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು. ಪಟ್ಟಣದ ಶಿವರಾತ್ರಿ ಶಿವಾನುಭವ ಮಂದಿರದ ಸೋಮವಾರದಂದು ಹೊರಾಂಗಣದಲ್ಲಿ ನಡೆಸಲಾದ ಪೂರ್ವಭಾವಿ ಸಭೆಯಲ್ಲಿ ಸರಗೂರು ತಾಲ್ಲೂಕು  ವಿದ್ಯುತ್ ದೀಪಾಲಂಕಾರ ಹಾಗೂ ಧ್ವನಿವರ್ಧಕ ಮತ್ತು ಶಾಮಿಯಾನ ಮಾಲಿಕರು ಸೇರಿ ವಾಸುಕಿ ನಾಗೇಶ್ ರವರನ್ನು ಸರ್ವಾನುಮತದಿಂದ ಸಂಘದ ಅಧ್ಯಕ್ಷರಾಗಿ ಆಯ್ಕೆ ಮಾಡಿದರು, ಗೌರವಾಧ್ಯಕ್ಷರಾಗಿ  ಅನ್ನಪೂರ್ಣಶ್ವರಿ ಶಾಮಿಯಾನ ಮಾಲಿಕರಾದ ಎಸ್.ನಾರಾಯಣ್, ಉಪಾಧ್ಯಕ್ಷರಾಗಿ ಆದಿಶಕ್ತಿ ಗಣೇಶ್, ಬಸಾಪುರ ರೇವಣ್ಣ, ನ್ಯಾಷನಲ್ ಶಾಮಿಯಾನ ರಾಹೀಲ್ ಪಾಷ,  ಕಾರ್ಯದರ್ಶಿ ಆಗತ್ತೂರು ಪಿ.ಜವರನಾಯಕ, ಸಹಕಾರ್ಯದರ್ಶಿ ಜನನಿ ವಿಜಯ್ ಕುಮಾರ್, ಎಸ್. ಖಜಾಂಚಿ ಚೌಡೇಶ್ವರಿ ರಂಗಸ್ವಾಮಿ, ನಿರ್ದೆಶಕರಾಗಿ ಇಟ್ನಾ ಸಿದ್ದನಾಯಕ, ಮುಳ್ಳೂರು [ಕಡಜೆಟ್ಟ]ಅಶ್ವತ್ ನಾರಾಯಣ,  ಮುಳ್ಳೂರು ಪ್ರಕಾಶ್, ಮಹೇಶ್,  ಬಿ.ಮಟಕೆರೆ ಮಂಜು, ಹಾಗೂ ನಂದಿಗೌಡ್ರು, ಬಸಾಪುರ ಶಿವಣ್ಣ, ಕಬಿನಿ ಸುರೇಂದ್ರ, ಶಾಂತಿಪುರ ಹರೀಶ್, ಹೊಸ ಬಿದರಹಳ್ಳಿ ಚಿನ್ನಯ್ಯ, ಬೆದ್ದಲಪುರ ಸೋಮೇಶ,  ಕೊತ್ತೇಗಾಲ ನಂದಿ,  ಹೊಸಬೀರ್ವಾಳ್ ಕೇಬಲ್…

Read More

ತುಮಕೂರು: ತುಮಕೂರಿನ ಗೊಲನ ಎಂಟರ್‌ ಪ್ರೈಸಸ್‌ ನಲ್ಲಿ ಇದೀಗ ಉದ್ಯೋಗಾವಕಾಶಗಳು ಲಭ್ಯವಿದ್ದು, ಆಸಕ್ತರು ನೇರ ಸಂದರ್ಶನದ ಮೂಲಕ ಉದ್ಯೋಗ ಪಡೆದುಕೊಳ್ಳಬಹುದಾಗಿದೆ. ಗುತ್ತಿಗೆ ಆಧಾರಿತ ಕೆಲಸಗಳಿಗೆ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗಿಯಾಗಬಹುದಾಗಿದೆ. ಪುರುಷ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನೀವು ಇಂದು ಕರೆ ಮಾಡಿದರೆ, ನಾಳೆಯೇ ಕೆಲಸಕ್ಕೆ ಸೇರ್ಪಡೆಗೊಳ್ಳಬಹುದಾಗಿದೆ. ಸೌಲಭ್ಯಗಳು: ಆಕರ್ಷಕ ವೇತನ (ಕರ್ನಾಟಕ ಕನಿಷ್ಠ ವೇತನ ಕಾಯ್ದೆ ಅನ್ವಯ) ಸರ್ಕಾರಿ ಅನುಮೋದಿತ ಸೌಲಭ್ಯಗಳು – ESI & EPF ಸುರಕ್ಷಿತ ಮತ್ತು ಉತ್ತಮ ಕೆಲಸದ ವಾತಾವರಣ ವಿದ್ಯಾರ್ಹತೆ: SSLC / PUC / ITI (ಪಾಸ್ / ಫೇಲ್ – ಎಲ್ಲರೂ ಅರ್ಜಿ ಹಾಕಬಹುದು) ಕೆಲಸದ ಸ್ಥಳಗಳು: ಅಂತರಸನಹಳ್ಳಿ ಕೈಗಾರಿಕಾ ಪ್ರದೇಶ, ತುಮಕೂರು ವಸಂತನರಸಾಪುರ ಕೈಗಾರಿಕಾ ಪ್ರದೇಶ, ತುಮಕೂರು ಸಂಪರ್ಕಿಸಿ ತಕ್ಷಣ: ‪+91 97417 17700 ‪+91 99863 16494 ‪+91 74831 08699 ‪+91 73489 53684 ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್…

Read More

ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ನಿರ್ಮಾಣದ ಕೊತ್ತಲವಾಡಿ ಸಿನಿಮಾ ಇದೇ ಆಗಸ್ಟ್1ಕ್ಕೆ ತೆರೆಗೆ ಬರುತ್ತಿದೆ. ಇದೇ ಸಂದರ್ಭದಲ್ಲಿ ಚಿತ್ರದ ಟ್ರೈಲರ್ ನಿನ್ನೆ ಬಿಡುಗಡೆಯಾಗಿದೆ. ಇನ್ನೂ ಚಿತ್ರ ನೋಡಲು ಯಶ್ ಬರುತ್ತಾರಾ? ಎಂಬಿತ್ಯಾದಿ ಪ್ರಶ್ನೆಗಳಿಗೆ ಪುಷ್ಪಾ ಉತ್ತರಿಸಿದ್ದಾರೆ. ಯಶ್‌ಗೆ ಹೇಳದೇ ಏನು ಮಾಡಿಲ್ಲ ಅವನಿಗೂ ಗೊತ್ತು. ಯಶ್ 25ವರ್ಷ ಆದ್ಮೇಲೆ ರಾಕಿಂಗ್ ಸ್ಟಾರ್ ಅಂತಾ ಗೊತ್ತಾಗಿದ್ದು ನಿಮಗೆ. ಅದರ ಹಿಂದೆ ಅವನು ಪಟ್ಟ ಶ್ರಮ ಎಷ್ಟಿದೆ ಅಂತಾ ನಮಗೆ ಗೊತ್ತು ಎಂದು ಅವರು ಹೇಳಿದರು. ಅವನೇ ಸಿನಿಮಾ ಪ್ರೊಡಕ್ಷನ್ ಮಾಡಲು ನಮಗೆ ಸ್ಫೂರ್ತಿ. ಮನೇಲಿರೋ ಬಾಸ್ (ಯಶ್) ಸಿನಿಮಾ ಮಾಡೋಕೆ ಸ್ಪೂರ್ತಿ ಎಂದಿದ್ದಾರೆ. ಸಿನಿಮಾ ಜನಕ್ಕೆ ಇಷ್ಟ ಆಗಲಿ ಗೆಲ್ಲಲಿ ಆಗ ಅವನು ಖುಷಿ ಪಡ್ತಾನೆ ಎಂದಿದ್ದಾರೆ. ಕೊತ್ತಲವಾಡಿ ಒಂದು ಹಳ್ಳಿಯಲ್ಲಿ ನಡೆಯುವ ಸಿನಿಮಾ. ಹಿಂದೆ ನನ್ನ ಮಗ ಯಶ್ ಕಿರಾತಕ ಸಿನಿಮಾ ಮಾಡಿದ್ದನ್ನ ಈಗಲೂ ನಮ್ಮೂರಿನ ಜನ ನೆನೆದುಕೊಳ್ತಾರೆ. ಆ ಬಗ್ಗೆ ಈಗಲೂ ಮಾತಾಡಿಕೊಳ್ತಾರೆ. ಹಾಗೆ ಈ ಕೊತ್ತಲವಾಡಿ ಸಿನಿಮಾ…

Read More

ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ  ಸಂಬಂಧಿಸಿದಂತೆ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡಕ್ಕೆ (SIT) ವಿವಿಧ ಶ್ರೇಣಿಯ 20 ಪೊಲೀಸ್ ಅಧಿಕಾರಿಗಳನ್ನು ನಿಯೋಜನೆ ಮಾಡಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂಎ ಸಲೀಂ ಆದೇಶಿಸಿದ್ದಾರೆ. ಮಂಗಳೂರು ಡಿಸಿಆರ್‌ಇ ಎಸ್‌ಪಿ ಸಿ.ಎ. ಸೈಮನ್, ಉಡುಪಿ ಸಿಎಎನ್ ಠಾಣೆಯ ಡಿವೈಎಸ್‌ಪಿ ಎ.ಸಿ. ಲೋಕೇಶ್, ದಕ್ಷಿಣ ಕನ್ನಡ ಸಿಇಎನ್ ಠಾಣೆಯ ಡಿವೈಎಸ್‌ಪಿ ಮಂಜುನಾಥ್, ಸಿಎಸ್‌ಪಿ ಪೊಲೀಸ್ ಇನ್‌ಸ್ಪೆಕ್ಟರ್‌ ಮಂಜುನಾಥ್, ಸಿಎಸ್‌ಪಿ ಇನ್‌ಸ್ಪೆಕ್ಟರ್‌ ಇ.ಸಿ. ಸಂಪತ್, ಸಿಎಸ್‌ಪಿ ಪೊಲೀಸ್ ಇನ್‌ಸ್ಪೆಕ್ಟರ್‌ ಕೆ. ಕುಸುಮಧರ್, ಶಿರಸಿ ಗ್ರಾಮಾಂತರ ಪೊಲೀಸ್ ಇನ್‌ಸ್ಪೆಕ್ಟರ್ ಮಂಜುನಾಥ ಗೌಡ, ಉಡುಪಿ, ಬೈಂದೂರು ಇನ್‌ಸ್ಪೆಕ್ಟರ್ ಪಿ.ಡಿ. ಸವಿತ್ರ ತೇಜ್, ಸಿಎಸ್‌ಪಿ ಸಬ್‌ಇನ್‌ಸ್ಪೆಕ್ಟರ್ ಕೋಕಿಲ ನಾಯಕ್, ಸಿಎಸ್‌ಪಿ ಸಬ್‌ಇನ್‌ಸ್ಪೆಕ್ಟರ್ ಶಿವಶಂಕರ್, ಉತ್ತರ ಕನ್ನಡ, ಶಿರಸಿ ಎನ್ಎಂ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ರಾಜ್‌ಕುಮಾರ್ ಉಕ್ಕಳ್ಳಿ, ಉತ್ತರ ಕನ್ನಡ ಅಂಕೋಲ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಆರ್. ಸುಹಾಸ್, ಉತ್ತರ ಕನ್ನಡ ಮುಂಡಗೋಡ ಸಬ್‌ಇನ್‌ಸ್ಪೆಕ್ಟರ್ ವಿನೋದ್ ಎಸ್ ಕಾಳಪ್ಪನವರ್, ಮಂಗಳೂರು ಮೆಕ್ಸಾಂ…

Read More