Author: admin

ಗುಬ್ಬಿ:  ತಾಲೂಕಿನ  ಸೋಮಲಾಪುರ, ಚೇಳೂರು ಹಟ್ಟಿ, ಎಣ್ಣೆ ಕಟ್ಟೆ ಗ್ರಾಮಗಳಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಶಾಸಕ ಎಸ್.ಆರ್. ಶ್ರೀನಿವಾಸ್ ಮಾತನಾಡಿ, ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊರೆಸಿ ಕೊಟ್ಟಿದ್ದೇವೆ, ಈ ಬಾರಿ ರೈತರಿಗೆ 150 ಬೋರ್ವೆಲ್ ಗಳನ್ನು ಇನ್ನು ಮುಂದೆಯೂ ಕೂಡ ಬೋರ್ವೆಲ್ ಗಳನ್ನು ರೈತರಿಗೆ ಕೊರಸಿ ಕೊಟ್ಟಿದ್ದೇವೆ ಇನ್ನ ಮುಂದೆವೂ ಕೂಡ ರೈತರಿಗೆ ಬೋರ್ವೆಲ್ ಗಳನ್ನು ಕೊರೆಸಿಕೊಡುತ್ತೇವೆ. ಸಿಎಂ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ ಅದು ಹೈಕಮಾಂಡ್ ಗೆ ಬಿಟ್ಟ ವಿಚಾರ.  ಪಕ್ಷಕ್ಕೆ ಡ್ಯಾಮೇಜ್ ಆಗೋ ಕೆಲಸವನ್ನು ಯಾವತ್ತೂ ಮಾಡುವುದಿಲ್ಲ ನನಗೂ ತಿಳುವಳಿಕೆ ಇದೆ ಕೆಪಿಸಿಸಿಯಲ್ಲಿ ನಾನೇನು ದೊಡ್ಡ ನಾಯಕನಲ್ಲ ಕೆಪಿಸಿಸಿ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು. ಇದೇ ಸಂದರ್ಭದಲ್ಲಿ ಬಿದರೆ ಯತೀಶ್, ಶಿವಾಜಿ ರಾವ್, ಸಣ್ಣ ರಂಗಯ್ಯ ಮತ್ತಿತರ ಗ್ರಾಮಸ್ಥರು ಹಾಜರಿದ್ದರು. ವರದಿ: ಚೇತನ್ ಗೌಡ, ಗುಬ್ಬಿ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್…

Read More

ಬೆಂಗಳೂರು: ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಭಾಷೆಯನ್ನು ಪ್ರಥಮ ಭಾಷೆಯಾಗಿ ಕಡ್ಡಾಯಗೊಳಿಸುವ ಕೇರಳ ಸರ್ಕಾರದ ಪ್ರಸ್ತಾವಿತ ಮಸೂದೆಯ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮಸೂದೆಯ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಸರಗೋಡು ಸೇರಿದಂತೆ ಗಡಿ ಜಿಲ್ಲೆಗಳಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಕಡ್ಡಾಯಗೊಳಿಸುವುದರಿಂದ ಕನ್ನಡಿಗರಿಗೆ ತೊಂದರೆಯಾಗುತ್ತದೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಈಗಾಗಲೇ ಪತ್ರ ಬರೆಯಲಾಗಿದೆ ಅಂತ ತಿಳಿಸಿದ್ದಾರೆ. ಸಾಂವಿಧಾನಿಕ ಹಕ್ಕುಗಳ ಬಳಕೆ: ಒಂದು ವೇಳೆ ಕೇರಳ ಸರ್ಕಾರ ಈ ಮಸೂದೆಯನ್ನು ಜಾರಿಗೆ ತಂದರೆ, ಭಾಷಾ ಅಲ್ಪಸಂಖ್ಯಾತರ ಹಿತರಕ್ಷಣೆಗಾಗಿ ಮತ್ತು ದೇಶದ ಬಹುತ್ವವನ್ನು ಕಾಪಾಡಲು ಕರ್ನಾಟಕ ಸರ್ಕಾರವು ಲಭ್ಯವಿರುವ ಎಲ್ಲಾ ಸಾಂವಿಧಾನಿಕ ಹಕ್ಕುಗಳನ್ನು ಚಲಾಯಿಸಿ ಇದನ್ನು ವಿರೋಧಿಸಲಿದೆ ಎಂದು ಸಿಎಂ ತಿಳಿಸಿದ್ದಾರೆ. ನಿಯೋಗದ ಮನವಿ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಕಾಸರಗೋಡು ಕನ್ನಡಿಗರ ನಿಯೋಗವು ಸಿಎಂ…

Read More

ಸುಂದರ ಹಾಗೂ ಸದೃಢವಾದ ದೇಹವನ್ನು ಪಡೆಯುವುದು ಕೇವಲ ಜಿಮ್‌ನಲ್ಲಿ ವರ್ಕೌಟ್ ಮಾಡುವುದರಿಂದ ಮಾತ್ರ ಸಾಧ್ಯವಿಲ್ಲ. ವ್ಯಾಯಾಮದ ಜೊತೆಗೆ ನಾವು ಸೇವಿಸುವ ಆಹಾರವೂ ಅಷ್ಟೇ ಮುಖ್ಯ ಪಾತ್ರ ವಹಿಸುತ್ತದೆ. ಮಾಂಸಖಂಡಗಳನ್ನು (Muscles) ಬಲಪಡಿಸಲು ಮತ್ತು ದೇಹದ ಶಕ್ತಿ ಹೆಚ್ಚಿಸಲು ಸಹಕಾರಿಯಾದ 7 ಪ್ರಮುಖ ಆಹಾರಗಳ ಪಟ್ಟಿ ಇಲ್ಲಿದೆ. 1. ಚಿಕನ್ ಬ್ರೆಸ್ಟ್ (Chicken Breast): ಮಾಂಸಖಂಡಗಳ ಬೆಳವಣಿಗೆಗೆ ಪ್ರೋಟೀನ್ ಅತ್ಯಗತ್ಯ. ಚಿಕನ್ ಬ್ರೆಸ್ಟ್‌ನಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಇದ್ದು, ಕೊಬ್ಬಿನಂಶ ಕಡಿಮೆಯಿರುತ್ತದೆ. ಇದು ಸ್ನಾಯುಗಳ ಪುನರ್ನಿರ್ಮಾಣಕ್ಕೆ ಬಹಳ ಸಹಕಾರಿ. 2. ಗ್ರೀಕ್ ಮೊಸರು (Greek Yogurt): ಸಾಮಾನ್ಯ ಮೊಸರಿಗಿಂತ ಗ್ರೀಕ್ ಮೊಸರಿನಲ್ಲಿ ಪ್ರೋಟೀನ್ ಪ್ರಮಾಣ ದುಪ್ಪಟ್ಟು ಇರುತ್ತದೆ. ಇದರಲ್ಲಿ ವೇ (Whey) ಮತ್ತು ಕ್ಯಾಸಿನ್ (Casein) ಎಂಬ ಎರಡು ರೀತಿಯ ಪ್ರೋಟೀನ್‌ಗಳಿದ್ದು, ಇವು ಸ್ನಾಯುಗಳ ಬೆಳವಣಿಗೆಗೆ ದೀರ್ಘಕಾಲದವರೆಗೆ ಶಕ್ತಿ ನೀಡುತ್ತವೆ. 3. ಮೊಟ್ಟೆಗಳು (Eggs): ಮೊಟ್ಟೆಗಳನ್ನು ‘ಸಂಪೂರ್ಣ ಆಹಾರ’ ಎಂದು ಕರೆಯಲಾಗುತ್ತದೆ. ಇದರಲ್ಲಿ ಉತ್ತಮ ಗುಣಮಟ್ಟದ ಪ್ರೋಟೀನ್ ಜೊತೆಗೆ ವಿಟಮಿನ್ ಬಿ ಮತ್ತು…

Read More

ವಿಜಯಪುರ: ಕೇಂದ್ರ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜಯಪುರ (ಬಿಜಾಪುರ) ಸೈನಿಕ ಶಾಲೆಯಲ್ಲಿ ಖಾಲಿ ಇರುವ ವಿವಿಧ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು 18 ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗಳ ವಿವರ ಹಾಗೂ ಸಂಖ್ಯೆ: ಪಿಜಿಟಿ (PGT): 02 ಹುದ್ದೆಗಳು (ರಸಾಯನಶಾಸ್ತ್ರ — 1, ಇಂಗ್ಲಿಷ್ — 1) ಟಿಜಿಟಿ (TGT): 07 ಹುದ್ದೆಗಳು (ಇಂಗ್ಲಿಷ್ — 2, ಜೀವಶಾಸ್ತ್ರ — 1, ಗಣಿತ — 1, ಕನ್ನಡ — 1, ಭೌತಶಾಸ್ತ್ರ — 1, ಸಮಾಜ ವಿಜ್ಞಾನ — 1) ವಾರ್ಡ್ ಬಾಯ್ಸ್: 04 ಹುದ್ದೆಗಳು ಸಂಗೀತ ಶಿಕ್ಷಕರು: 01 ಹುದ್ದೆ ಸಮಾಲೋಚಕರು (Counsellor): 01 ಹುದ್ದೆ ಕ್ರಾಫ್ಟ್ ಇನ್ಸ್ಟ್ರಕ್ಟರ್: 01 ಹುದ್ದೆ ಪಿಇಎಂ/ಪಿಟಿಐ ಕಮ್ ಮ್ಯಾಟ್ರಾನ್: 01 ಹುದ್ದೆ ನರ್ಸಿಂಗ್ ಸಿಸ್ಟರ್: 01 ಹುದ್ದೆ ಶೈಕ್ಷಣಿಕ ಅರ್ಹತೆ:…

Read More

ಸರಗೂರು:  ಮೊಬೈಲ್ ಮತ್ತು ಟಿವಿ ಮಾಧ್ಯಮದ ಪ್ರಭಾವದಿಂದ ಕ್ರೀಡೆಗಳು ನಶಿಸಿ ಹೋಗುತ್ತಿರುವ ಕಾಲಘಟ್ಟದಲ್ಲಿ ಅರ್ಜುನ ಯೂತ್ಸ್ ಸ್ಪೋರ್ಟ್ ಕ್ಲಬ್  ಬಳಗದವರು ಗ್ರಾಮೀಣ ಭಾಗದ ಊರ ಯುವಕರಿಗೆ ಪಂದ್ಯಾವಳಿಯನ್ನು ಆಯೋಜಿಸಿ ಅಭಿವೃದ್ಧಿ ಮತ್ತು ಸಂಬಂಧದ ಬೆಸುಗೆಗೆ ಮುನ್ನುಡಿ ಬರೆಯುತ್ತಿರುವುದು ಮಾದರಿಯಾಗಿದೆ ಎಂದು ಎಚ್.ಡಿ.ಕೋಟೆ ಪುರಸಭೆ ಸದಸ್ಯ ಎಚ್.ಸಿ.ನರಸಿಂಹಮೂರ್ತಿ ಹೇಳಿದರು. ಪಟ್ಟಣದ ಜಯಚಾಮರಾಜೇಂದ್ರ ಕ್ರೀಡಾಂಗಣದಲ್ಲಿ ಶನಿವಾರದಂದು ನಡೆದ ಮೊದಲನೇಯ ವರ್ಷ ತಾಲೂಕು ಮಟ್ಟದ ಅರ್ಜುನ ವಾಲಿಬಾಲ್ ಪ್ರೀಮಿಯರ್ ಲೀಗ್– 2026 ಅರ್ಜುನ ಯೂತ್ಸ್ ಸ್ಪೋರ್ಟ್ ಕ್ಲಬ್ ವತಿಯಿಂದ ವಾಲಿಬಾಲ್‌ ಪಂದ್ಯಾವಳಿಯ ಅಂಬಾರಿ ಹೊತ್ತ ಅರ್ಜುನ ಆನೆ ಪೋಟೋ ಗೆ ಪುಷ್ಪಾರ್ಚನೆ ಸಲ್ಲಿಸಿ ಹಾಗೂ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ಎಲ್ಲರಲ್ಲೂಒಂದೊಂದು ಪ್ರತಿಭೆ ಇದ್ದೇ ಇರುತ್ತದೆ. ಇದನ್ನು ಆತ್ಮವಿಶ್ವಾಸ ಹಾಗೂ ಮನೋಬಲದಿಂದ ಪ್ರಯೋಗಕ್ಕೆ ಒಳಪಡಿಸಿ ಸಾಧನೆ ಮೆರೆಯುವಂತಾಗಬೇಕು ಎಂದರು. ಯುವಕರು ಕ್ರೀಡೆಗಳಲ್ಲಿ ತಮ್ಮ ಪ್ರತಿಭೆ ತೋರಿಸುವ ಕೆಲಸ ಮಾಡಬೇಕು. ದಿನನಿತ್ಯದ ಕೆಲಸಗಳಲ್ಲೇ ತೊಡಗಿಕೊಂಡರೆ ಆಸಕ್ತಿ ಕಳೆದುಕೊಳ್ಳುತ್ತಾರೆ. ರಜಾ ದಿನಗಳಲ್ಲಿ ಆಯೋಜಿಸುವ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ತಮ್ಮಲ್ಲೇ…

Read More

ಬೀದರ್/ಔರಾದ: ಬೀದರ್ ಜಿಲ್ಲೆಯ ಔರಾದ ತಾಲೂಕಿನ ಪ್ರಭಾವಿ ಕಾಂಗ್ರೆಸ್ ಮುಖಂಡರಾದ ಸುಧಾಕರ್ ಕೊಳ್ಳುರ ಅವರನ್ನು ವಿಜಯಪುರ (ಬಿಜಾಪುರ) ಜಿಲ್ಲಾ ಕಾಂಗ್ರೆಸ್ ಸಮಿತಿಯ ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ (KPCC) ಅಧ್ಯಕ್ಷರು ಹಾಗೂ ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರ ಸೂಚನೆಯ ಮೇರೆಗೆ ಈ ನೇಮಕಾತಿ ನಡೆದಿದೆ. ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಸುಧಾಕರ್ ಕೊಳ್ಳುರ ಅವರ ಸೇವೆಯನ್ನು ಗುರುತಿಸಿ ಈ ಜವಾಬ್ದಾರಿಯನ್ನು ನೀಡಲಾಗಿದೆ. ನೇಮಕಾತಿಯ ವಿವರ: ಈ ಕುರಿತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಧ್ಯಮ ಮತ್ತು ಸಂವಹನ ವಿಭಾಗದ ರಾಜ್ಯಾಧ್ಯಕ್ಷರಾದ ರಮೇಶ್ ಬಾಬು ಅವರು ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಔರಾದ ತಾಲೂಕಿನ ಮುಖಂಡರೊಬ್ಬರು ನೆರೆಯ ಜಿಲ್ಲೆಯ ಪ್ರಮುಖ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು ಸ್ಥಳೀಯ ಕಾರ್ಯಕರ್ತರಲ್ಲಿ ಸಂತಸ ತಂದಿದೆ. “ಪಕ್ಷದ ಸಿದ್ಧಾಂತಗಳನ್ನು ಜನರಿಗೆ ತಲುಪಿಸುವಲ್ಲಿ ಮತ್ತು ಮಾಧ್ಯಮಗಳೊಂದಿಗೆ ಸಮನ್ವಯ ಸಾಧಿಸುವಲ್ಲಿ ಸುಧಾಕರ್ ಕೊಳ್ಳುರ ಅವರು ಮಹತ್ವದ ಪಾತ್ರ ವಹಿಸಲಿದ್ದಾರೆ,” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ವರದಿ: ಅರವಿಂದ ಮಲ್ಲಿಗೆ, ಬೀದರ್…

Read More

ಸರಗೂರು:  ತಾಲ್ಲೂಕಿನ ಹಂಚೀಪುರ ಗ್ರಾಮ ಪಂಚಾಯಿತಿ ಸದಸ್ಯರ ಮೇಲೆ ನೂರಳಾಸ್ವಾಮಿ ಮೀನಗಾರರ ಸಂಘದ ಅಧ್ಯಕ್ಷ ಮಣಿಕಂಠ ಎಂಬುವನು ಏಕಾಏಕಿ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಗಾಯಗೊಂಡಿರುವ ಗ್ರಾಮ ಪಂಚಾಯಿತಿ ಸದಸ್ಯ ಕರಿಗೌಡ ಹಾಗೂ ರವಿಕುಮಾರ್ ಅವರು ಬೈಕ್ ನಲ್ಲಿ ಹೋಗುತ್ತಿರುವಾಗ ನೂರಳಾಸ್ವಾಮಿ ಮೀನಗಾರರ ಸಂಘದ ಅಧ್ಯಕ್ಷ ಮಣಿಕಂಠ ಎಂಬುವನು ಏಕಾಏಕಿ ಬಂದು ಬೈಕ್ ಯನ್ನು ಕೆಡೆದು ಹಾಕಿ ಕರಿಗೌಡ ರವರನ್ನು ತುಳಿದಿದ್ದಾನೆ ಎಂದು ತಿಳಿಸಿದರು.  ಘಟನೆ ವಿವರ: ಹಂಚೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಿಯೂರು ಗ್ರಾಮದ ಎಂಬುವನು ಎಂದು ಕಂದಾಯ ಇಲಾಖೆಯ ನಾಡಕಚೇರಿಯಲ್ಲಿ ವಾಸಸ್ಥಳ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದು, ಅದರಂತೆ ಕಂದಾಯ ಇಲಾಖೆ ಗ್ರಾಮಲೆಕ್ಕಿಗರು ಅರಿಯೂರು ಗ್ರಾಮಕ್ಕೆ ಪರಿಶೀಲನೆ ನಡೆಸಲು ಹೋದ ಸಂದರ್ಭದಲ್ಲಿ ಹುಸ್ಕೂರು ಗ್ರಾಮದ ಸದಸ್ಯನಾದ ಕರಿಗೌಡ ಹಾಗೂ ರವಿಕುಮಾರ್ ಮೇಲೆ ಹಲ್ಲೆ ನಡೆಸಿದ್ದಾನೆ. ಮಣಿಕಂಠ ಎಂಬುವನು ಪಟ್ಟಣದ ಎರಡನೇ ವಾರ್ಡಿನ ನಿವಾಸಿ, ಅವನ ಕುಟುಂಬ ಹಾಗೂ ದಾಖಲೆಗಳು ಸರಗೂರು ಪಟ್ಟಣದಲ್ಲಿ ಇದೆ. ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡು…

Read More

ತುಮಕೂರು:  ನಾನು ತುಮಕೂರು ಹಾಲು ಉತ್ಪಾದಕ ಸಹಕಾರ ಸಂಘದ ನಿರ್ದೇಶಕಿಯಾಗಿ  ಜೂ. 9 ಕ್ಕೆ ಒಂದು ವರ್ಷ ಪೂರೈಸಲಿದ್ದು, ಈ ಅವಧಿಯಲ್ಲಿ ಪಾರದರ್ಶಕ ಆಡಳಿತ ಮಾಡಿದ ತೃಪ್ತಿ, ಆತ್ಮವಿಶ್ವಾಸ  ನನಗಿದೆ ಎಂದು ತುಮುಲ್ ನಿರ್ದೇಶಕಿ ಭಾರತಿ ಶ್ರೀನಿವಾಸ್ ಸಂತಸ ವ್ಯಕ್ತಪಡಿಸಿದ್ದರು. ಗುಬ್ಬಿ ಪಟ್ಟಣದ ಕ್ಷೀರ ಭವನದಲ್ಲಿ ಇಂದು ಆಯೋಜನೆ ಮಾಡಲಾಗಿದ್ದ ತುಮುಲ್ ನಿರ್ದೇಶಕಿ ಭಾರತೀ ಶ್ರೀನಿವಾಸ್ ಹುಟ್ಟು ಹಬ್ಬ ಆಚರಣೆ ಹಾಗೂ ಹಾಲು ಉತ್ಪಾದಕ ಸಹಕಾರ ಸಂಘದ ಸದಸ್ಯ ರಿಗೆ ಹಸು ಎತ್ತುವ ಯಂತ್ರ. ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರದ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಹಕಾರ ಕ್ಷೇತ್ರ ನನಗೆ ಸಂಪೂರ್ಣ ಹೊಸದಾಗಿದ್ದು ಈ ಕ್ಷೇತ್ರದಲ್ಲಿ ಕಲಿಯುವುದು ಸಾಕಷ್ಟಿತ್ತು. ಅಧಿಕಾರ ವಹಿಸಿಕೊಂಡ ನಂತರ ತಾಲೂಕಿನ ಸುಮಾರು 70 ಕ್ಕೂ ಹೆಚ್ಚು ಹಾಲಿನ ಕೇಂದ್ರಕ್ಕೆ ಭೇಟಿ ನೀಡಿ ಹಾಲಿನ ಕೇಂದ್ರ ಗಳ ಕುಂದು ಕೊರತೆ, ಸಾಮಾನ್ಯ ಸಮಸ್ಯೆ ಗಳನ್ನು  ಅರಿತು ಒಕ್ಕೂಟದ ಸಭೆಯಲ್ಲಿ ಭಾಗವಹಿಸಿ ನನ್ನ ತಾಲೂಕಿಗೆ  ಬೇಕಿರುವ ಸೌಲಭ್ಯಗಳನ್ನು…

Read More

ತುಮಕೂರು/ಕೊರಟಗೆರೆ: ರಾಜ್ಯದಲ್ಲಿ KPS — ಮ್ಯಾಗ್ನೆಟ್ ಹೆಸರಿನಲ್ಲಿ 40 ಸಾವಿರ ಶಾಲೆಗಳನ್ನು  ಮುಚ್ಚುವ ಸರ್ಕಾರದ ಹುನ್ನಾರವನ್ನು ವಿರೋಧಿಸಿ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ಉಳಿಸಲು ಆಗ್ರಹಿಸಿ !    ಕೊರಟಗೆರೆ ತಾಲೂಕಿನ ಗುಂಡಿನ ಪಾಳ್ಯದಲ್ಲಿ ಪ್ರತಿಭಟನೆ ಮಾಡಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ  AIDSO ಜಿಲ್ಲಾ ಅಧ್ಯಕ್ಷರಾದ ಅಶ್ವಿನಿ ಮಾತನಾಡಿ,  ಪೋಷಕರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ವಿರೋಧವಿದ್ದರೂ ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ 40 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಲು ಸರ್ಕಾರ ಪಟ್ಟು ಹಿಡಿದು ನಿಂತಿದೆ. ಪಂಚಾಯತಿಗೆ ಒಂದು ಹೈಟೆಕ್ ಶಾಲೆ ಎನ್ನುವ ಸರ್ಕಾರ ಅದರ ಆರ್ಥಿಕ  ನಿರ್ವಹಣೆ ಜವಾಬ್ದಾರಿಯನ್ನು  ಪೋಷಕರ ಮೇಲೆ ಹಾಕಲು ಹೊರಟಿದೆ ಮತ್ತು ಇಲಾಖೆಯಲ್ಲಿ ತೀವ್ರವಾದ “ಆರ್ಥಿಕ ನಿರ್ಬಂಧಗಳಿವೆ” ಎಂದು ಒಪ್ಪಿಕೊಂಡ ಸಚಿವರು, ಮೂಲಸೌಕರ್ಯಗಳನ್ನು ನಿರ್ಮಿಸಲು ಅಜೀಂ ಪ್ರೇಮ್‌ಜಿ ಫೌಂಡೇಶನ್, ಇನ್ಫೋಸಿಸ್ ಮತ್ತು ಗಣಿಗಾರಿಕೆ ಕಂಪನಿಗಳಂತಹ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿಗಳ ಮೇಲೆ ಅತಿಯಾಗಿ ಅವಲಂಬಿತವಾಗಿರುವುದನ್ನು ಎತ್ತಿ ತೋರಿಸಿದರು. ಈ ಅವಲಂಬನೆಯನ್ನು ಅಧಿಕೃತಗೊಳಿಸಲು ಹೊಸ ಮಾರ್ಗಸೂಚಿಗಳನ್ನು ರಚಿಸಲಾಗುತ್ತಿದೆ ಎಂದು ಅವರು ಉಲ್ಲೇಖಿಸಿದರು. ಇದು…

Read More

ನಾವು ಪ್ರತಿದಿನ ಹಲ್ಲುಗಳ ಆರೋಗ್ಯಕ್ಕಾಗಿ ಮಾಡುವ ಕೆಲವು ಕೆಲಸಗಳು ವಾಸ್ತವವಾಗಿ ಹಲ್ಲುಗಳನ್ನು ಬಲಹೀನಗೊಳಿಸುತ್ತಿವೆ ಎಂಬುದು ನಿಮಗೆ ತಿಳಿದಿದೆಯೇ? ಭಾರತೀಯ ದಂತ ವೈದ್ಯರ ಪ್ರಕಾರ, ದೇಶದ ಸುಮಾರು 27% ರೋಗಿಗಳಲ್ಲಿ ‘ಎನಾಮೆಲ್ ಸವಕಳಿ’ (Enamel Erosion) ಕಂಡುಬರುತ್ತಿದೆ. ನಾವು ಆರೋಗ್ಯಕರ ಎಂದು ಭಾವಿಸುವ ಕೆಲವು ಅಭ್ಯಾಸಗಳೇ ಹಲ್ಲುಗಳ ಎನಾಮೆಲ್ ನಾಶಕ್ಕೆ ಕಾರಣವಾಗುತ್ತಿವೆ. ಹಲ್ಲುಗಳನ್ನು ರಹಸ್ಯವಾಗಿ ಹಾಳುಮಾಡುತ್ತಿರುವ ಆ 5 ಪ್ರಮುಖ ಅಭ್ಯಾಸಗಳು ಇಲ್ಲಿವೆ: 1. ಅತಿಯಾದ ಒತ್ತಡ ಹಾಕಿ ಹಲ್ಲುಜ್ಜುವುದು (Aggressive Brushing): ಹಲ್ಲುಗಳನ್ನು ಜೋರಾಗಿ ಉಜ್ಜಿದರೆ ಹೆಚ್ಚು ಸ್ವಚ್ಛವಾಗುತ್ತವೆ ಎಂಬುದು ತಪ್ಪು ಕಲ್ಪನೆ. ಗಟ್ಟಿಯಾದ ಬ್ರಷ್ ಬಳಸಿ ಅಥವಾ ಅತಿಯಾದ ಒತ್ತಡ ಹಾಕಿ ಹಲ್ಲುಜ್ಜುವುದರಿಂದ ಹಲ್ಲುಗಳ ರಕ್ಷಣಾ ಕವಚವಾದ ‘ಎನಾಮೆಲ್’ ಸವೆಯುತ್ತದೆ. ಇದು ಹಲ್ಲುಗಳ ಸೂಕ್ಷ್ಮತೆ (Sensitivity) ಮತ್ತು ಹಲ್ಲು ಸವಕಳಿಗೆ ಕಾರಣವಾಗುತ್ತದೆ. 2. ಆಮ್ಲೀಯ ಮತ್ತು ಸಕ್ಕರೆಯುಕ್ತ ಆಹಾರ ಸೇವನೆ: ತಂಪು ಪಾನೀಯಗಳು, ಎನರ್ಜಿ ಡ್ರಿಂಕ್ಸ್, ಸಿಟ್ರಸ್ ಹಣ್ಣಿನ ಜ್ಯೂಸ್‌ಗಳು, ಚಹಾ ಮತ್ತು ಕಾಫಿಗಳ ಅತಿಯಾದ ಸೇವನೆಯು ಹಲ್ಲುಗಳನ್ನು ಆಮ್ಲಕ್ಕೆ…

Read More