Subscribe to Updates
Get the latest creative news from FooBar about art, design and business.
- ಕುರುಗೋಡಿನಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ: ಜಾಗೃತಿ ಜಾಥಾ, ಉದ್ದಿಮೆಗಳ ಮೇಲೆ ದಾಳಿ: ಬಾಲಕನ ರಕ್ಷಣೆ
- ಬಳ್ಳಾರಿಯಲ್ಲಿ ಜೂನ್ 19ರಂದು ಪಿಎಂ: ವಿಬಿಆರ್ ವೈ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮ
- ವಿವಿಧೆಡೆ ಕಳ್ಳರ ಅಟ್ಟಹಾಸ: 25 ಲಕ್ಷದ ಚಿನ್ನ ಮತ್ತು ನಗದು ಕಳ್ಳತನ
- ತೋಟದಿಂದ ಮನೆಗೆ ಬರುತ್ತಿದ್ದ ವೃದ್ದೆಯ ಬರ್ಬರ ಹತ್ಯೆ: ಚಿನ್ನಕ್ಕಾಗಿ ವೃದ್ದೆಯ ಕೊಲೆ ಶಂಕೆ
- ಕೊರಟಗೆರೆ: ಕುಬೇರ ಗಣಪತಿ ಭವನಕ್ಕೆ 5 ಲಕ್ಷ ಧನ ಸಹಾಯ
- ಇ–ಪೌತಿ ಖಾತಾ ಆಂದೋಲನ–2 : ರೈತರಿಂದ ಅರ್ಜಿಗಳ ಸ್ವೀಕಾರ — ಬಾಕಿ ಆರ್ ಆರ್ ಟಿ ಅರ್ಜಿಗಳ ಶೀಘ್ರ ವಿಲೇವಾರಿಗೆ ಸೂಚನೆ
- ನೀಟ್ ಮರು ಪರೀಕ್ಷೆ ; ಕಟ್ಟುನಿಟ್ಟಿನ ಸಿದ್ಧತೆಗೆ ಎಡಿಸಿ ಸೂಚನೆ
- ಕೆಪಿಎಸ್ ಶಾಲೆಗೆ ಕುಂಕಮನಹಳ್ಳಿ ಶಾಲೆಯನ್ನು ವಿಲೀನಗೊಳಿಸದಂತೆ ಆಗ್ರಹ
Author: admin
ಚಿಕ್ಕಮಗಳೂರು: ಹಣದ ಆಸೆಗಾಗಿ ಸ್ವಂತ ಅಪ್ರಾಪ್ತ ಮಗಳನ್ನೇ ವೇಶ್ಯಾವಾಟಿಕೆ ದಂಧೆಗೆ ತಳ್ಳಿದ ಅಮಾನವೀಯ ಘಟನೆ ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ತಂದೆ ಸೇರಿದಂತೆ ಒಟ್ಟು 12 ಮಂದಿ ಆರೋಪಿಗಳನ್ನು ಬೀರೂರು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ವಿವರ: ಅಜ್ಜಂಪುರ ತಾಲೂಕಿನ ನಾಗವಂಗಲ ಗ್ರಾಮದ ನಿವಾಸಿಯಾಗಿರುವ ಆರೋಪಿ ತಂದೆ ತನ್ನ 16 ವರ್ಷದ ಮಗಳನ್ನು ವೇಶ್ಯಾವಾಟಿಕೆಗೆ ತಳ್ಳಿದ ಆರೋಪಿಯಾಗಿದ್ದಾನೆ. ಆರು ವರ್ಷಗಳ ಹಿಂದೆ ಆತನ ಪತ್ನಿ ಮೃತಪಟ್ಟ ನಂತರ ಸಂತ್ರಸ್ತ ಬಾಲಕಿ ಅಜ್ಜ–ಅಜ್ಜಿಯ ಮನೆಯಲ್ಲಿ ವಾಸವಿದ್ದಳು. ಆದರೆ ಇತ್ತೀಚೆಗೆ ತಂದೆ ಗಿರೀಶ್ ಹಾಗೂ ಅಜ್ಜಿ ನಾಗರತ್ನ ಸೇರಿ ಬ್ರೋಕರ್ ನಾರಾಯಣಸ್ವಾಮಿ ಎಂಬಾತನ ಮೂಲಕ ಬಾಲಕಿಯನ್ನು ಮಂಗಳೂರಿನ ಭರತ್ ಶೆಟ್ಟಿ ಎಂಬಾತನ ಮನೆಗೆ ಕರೆದೊಯ್ದಿದ್ದರು. ಮಂಗಳೂರಿನಲ್ಲಿ ಬಾಲಕಿಯ ಮೇಲೆ ಸತತವಾಗಿ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು. ಬಾಲಕಿ ಪ್ರತಿರೋಧ ತೋರಿದಾಗ, “ನಿನ್ನ ತಂದೆಗೆ ಹಣ ನೀಡಿದ್ದೇವೆ” ಎಂದು ಆರೋಪಿಗಳು ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ. ಅಲ್ಲಿಂದ ತಪ್ಪಿಸಿಕೊಂಡು ಬಂದ ಬಾಲಕಿ ತನ್ನ ಚಿಕ್ಕಪ್ಪನಿಗೆ ಮಾಹಿತಿ…
ತುಮಕೂರು: ಜಿಲ್ಲೆಯ 17 ವರ್ಷದ ಯುವ ಪ್ರತಿಭೆ ಟಿ.ಎಸ್.ಪ್ರತೀಕ್ ಎಜೆಂಟಿಕ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (Agentic AI) ಕ್ಷೇತ್ರದಲ್ಲಿ ಸಾಧನೆ ಮಾಡಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಗಳಿಸುವ ಮೂಲಕ ಜಿಲ್ಲೆಯ ಹೆಸರನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆರೆದಿದ್ದಾರೆ. ತುಮಕೂರಿನ ನಿವಾಸಿಯಾದ ಈ ವಿದ್ಯಾರ್ಥಿ, ಇತ್ತೀಚೆಗೆ ನಡೆದ Agentic AI Hackathon ನಲ್ಲಿ ಭಾಗವಹಿಸಿ, ಸಂಪೂರ್ಣವಾಗಿ ಕಂಪ್ಯೂಟರ್ ಮೂಲಕ ಸ್ವತಂತ್ರವಾಗಿ AI ಏಜೆಂಟ್ ಅನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ್ದಾರೆ. ಈ ವಿಶಿಷ್ಟ ತಂತ್ರಜ್ಞಾನಾಧಾರಿತ ಯೋಜನೆಗೆ ಜಾಗತಿಕ ಮಟ್ಟದಲ್ಲಿ ಗುರುತಿಸಿ, ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಮಾನ್ಯತೆ ಲಭಿಸಿದೆ. AI ಏಜೆಂಟ್ ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದು, ನೈಜ ಜೀವನದಲ್ಲಿ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ. ಇಷ್ಟು ಕಿರಿಯ ವಯಸ್ಸಿನಲ್ಲಿ ಇಂತಹ ಉನ್ನತ ಮಟ್ಟದ ತಾಂತ್ರಿಕ ಸಾಧನೆ ಮಾಡಿರುವುದು ತಜ್ಞರ ಮೆಚ್ಚುಗೆಗೆ ಪಾತ್ರವಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್…
ತಿಪಟೂರು: ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದ ಭಕ್ತರು ಸತತ 9ನೇ ವರ್ಷವೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಹಮ್ಮಿಕೊಂಡಿದ್ದು, ಅವರ ಈ ಭಕ್ತಿ ಮಾರ್ಗಕ್ಕೆ ತಾಲ್ಲೂಕು ಯೋಜನಾಧಿಕಾರಿಗಳಾದ ಉದಯ್ ಕೆ. ಹಾರ್ದಿಕ ಶುಭ ಹಾರೈಸಿದರು. ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಯೋಜನಾಧಿಕಾರಿಗಳು, “ಹಿಂದಿನ ಕಾಲದಲ್ಲಿ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರ್ಶನಕ್ಕೆ ತೆರಳುವುದೆಂದರೆ ಅದೊಂದು ಪವಿತ್ರ ಕಾರ್ಯವಾಗಿತ್ತು. ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುತ್ತಿತ್ತು. ಆದರೆ ಇಂದಿನ ವೇಗದ ಬದುಕಿನಲ್ಲಿ ಭಕ್ತಿ ಮತ್ತು ಸಂಪ್ರದಾಯಗಳು ಮಾಸುತ್ತಿವೆ. ಇಂತಹ ಸಮಯದಲ್ಲಿ ಇತಿಹಾಸವನ್ನು ಮರುಕಳಿಸುವಂತೆ ಮತ್ತಿಹಳ್ಳಿ ಗ್ರಾಮಸ್ಥರು ಸುಮಾರು 165 ಕಿಲೋ ಮೀಟರ್ ದೂರವನ್ನು ಕೇವಲ ಮೂರು-ನಾಲ್ಕು ದಿನಗಳಲ್ಲಿ ಕ್ರಮಿಸಿ ಭಗವಂತನ ಆಶೀರ್ವಾದ ಪಡೆಯಲು ಹೊರಟಿರುವುದು ಶ್ಲಾಘನೀಯ,” ಎಂದರು. ಪಾದಯಾತ್ರಿಗಳು ಸರಿಸುಮಾರು 165 ಕಿ.ಮೀ ಕಾಲ್ನಡಿಗೆಯ ಪ್ರಯಾಣ ಮಾಡಲಿದ್ದಾರೆ. ಈ ಪಾದಯಾತ್ರೆ ತಾಲ್ಲೂಕು ಮತ್ತು ರಾಜ್ಯದ ಜನತೆಗೆ ಮಾದರಿಯಾಗಿದೆ ಎಂದು ಉದಯ್ ಕೆ. ಹರ್ಷ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಮತ್ತಿಹಳ್ಳಿ ಗ್ರಾಮ ಪಂಚಾಯತಿ ಸದಸ್ಯರಾದ ಹರೀಶ್ ಕುಮಾರ್ ಸೇರಿದಂತೆ ಗ್ರಾಮದ…
ಸರಗೂರು: ದಿನನಿತ್ಯ ದೇಹವನ್ನು ಸ್ವಚ್ಛಗೊಳಿಸುವ ಹಾಗೆ ದಂತ(ಹಲ್ಲು)ವನ್ನು ಸ್ವಚ್ಛಗೊಳಿಸಬೇಕು, ದಿನಕ್ಕೆರಡು ಬಾರಿ ದಂತವನ್ನು ಸ್ವಚ್ಛಗೊಳಿಸಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ ತಿಳಿಸಿದರು. ತಾಲ್ಲೂಕಿನ ಹಾದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಗಲಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹೆಚ್.ಡಿ.ಕೋಟೆ ಮತ್ತು ಸಾರ್ವಜನಿಕ ಆಸ್ಪತ್ರೆ ಹೆಚ್.ಡಿ.ಕೋಟೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಬಡಗಲಪುರ ಸಹಯೋಗದೊಂದಿಗೆ ,ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ ಹಾಗೂ ಬಾಯಿ ಆರೋಗ್ಯ ಕಾರ್ಯ ಕ್ರಮವನ್ನು ಗುರುವಾರ ದಂದು ಆಯೋಜಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ಶಿಬಿರ ವನ್ನು ನಿಮಗಾಗಿ ಆಯೋಜನೆ ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷ ವಿಶ್ವಬಾಯಿ ಆರೋಗ್ಯ ದಿನಾಚರಣೆಯ ಸಂದರ್ಭದಲ್ಲಿ ಒಂದು ಘೋಷವಾಕ್ಯ ಬಿಡುಗಡೆ ಮಾಡುತ್ತದೆ. (ಸಂತೋಷದ ಬಾಯಿ, ಸಂತೋಷದ ದೇಹ) ಇದರ ಅರ್ಥ ಏನೆಂದರೆಬಾಯಿ ಆರೋಗ್ಯದಿಂದ ಇದ್ದರೆ ಸಂತೋಷ ವಾಗಿರುತ್ತದೆ ,ಬಾಯಿ ಸಂತೋಷ ವಾಗಿದ್ದರೆ, ದೇಹವು ಸಹ ಸಂತೋಷವಾಗಿರುತ್ತದೆ ,ಆದುದರಿಂದ ನಾವೆಲ್ಲರೂ ಬಾಯಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಬಾಯಿ ಆರೋಗ್ಯ…
ವರದಿ: ಹಾದನೂರು ಚಂದ್ರ ಎಚ್.ಡಿ.ಕೋಟೆ: ಸಾಮಾಜಿಕ ಜಾಲತಾಣ, ಎಲೆಕ್ಟ್ರಿಕ್ ಮಾಧ್ಯಮಗಳ ನಡುವೆಯೂ ಇಂದಿಗೂ ಮುದ್ರಣ ಮಾಧ್ಯಮಗಳು ಜನರ ನಂಬಿಕೆ ಮತ್ತು ವಿಶ್ವಾಸರ್ಹತೆಯನ್ನು ಉಳಿಸಿಕೊಂಡಿವೆ ಎಂದು ಕನ್ನಡಪ್ರಭ ದಿನ ಪತ್ರಿಕೆ ಸ್ಥಾನಿಕ ಸಂಪಾದಕ ಅಂಶಿ ಪ್ರಸನ್ನ ಕುಮಾರ್ ತಿಳಿಸಿದರು. ಎಚ್.ಡಿ.ಕೋಟೆ ತಾಲೂಕಿನ ಅಂತರಸಂತೆ ವನ್ಯಜೀವಿ ವಲಯದ ಕಾಕನಕೋಟೆ ಸಫಾರಿ ಕೇಂದ್ರದಲ್ಲಿ ಆಯೋಜಿಸಿದ್ದ ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕು ಪತ್ರಕರ್ತರ ಸಂಘದ ಹೊರ ತಂದಿರುವ ನೂತನ ವರ್ಷದ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತಿವಹಿಸಿ ಮಾತನಾಡಿದ ಅವರು, ಮಾಧ್ಯಮಗಳು ಜನರು ಮತ್ತು ಸರ್ಕಾರದ ನಡುವೆ ಸೇತುವೆಯಂತೆ ಕೆಲಸ ಮಾಡಬೇಕು. ಆ ಮೂಲಕ ಜನರ ನಂಬಿಕೆ ಸಂಪಾದಿಸಬೇಕು. ಸಮಸಮಾಜದ ನಿರ್ಮಾಣದ ಕನಸ್ಸಿಗೆ ಮಾಧ್ಯಮಗಳು ಶ್ರಮಿಸಬೇಕು ಎಂದರು. ಈ ತಾಲೂಕಿನಲ್ಲಿ ಪತ್ರಕರ್ತರು ಮತ್ತು ಶಾಸಕ ಸಂಬಂಧ ಉತ್ತಮವಾಗಿದೆ. ಅನಿಲ್ ಚಿಕ್ಕಮಾದು ಅವರು, ಪತ್ರಕರ್ತರಿಗೆ ಬೆಂಬಲವಾಗಿ ನಿಂತಿದ್ದಾರೆ. ಅವರ ತಂದೆ ಕೂಡ ಪತ್ರಕರ್ತರ ಪರ, ಸಮಾಜ ಪರವಾಗಿದ್ದರು. ಪತ್ರಕರ್ತರಲ್ಲಿ ನೈತಿಕತೆ ಇರಬೇಕು. ಯಾವುದೇ ಆಸೆಗಳಿಗೆ ಬಲಿಯಾಗದೆ, ಸಮಾಜಮುಖಿಯಾಗಿ ಕೆಲಸ ಮಾಡಿದಾಗ…
ಕೊರಟಗೆರೆ : ಇತ್ತೀಚಿಗೆ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಚುನಾವಣೆಯಲ್ಲಿ ಆಯ್ಕೆಯಾದ ತಾಲೂಕು ಸಂಘದ ಪದಾಧಿಕಾರಿಗಳಿಗೆ ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅಭಿನಂದನೆ ತಿಳಿಸಿದರು. ತುಮಕೂರಿನ ಪ್ರವಾಸಿ ಮಂದಿರದಲ್ಲಿ ಕೊರಟಗೆರೆ ತಾಲೂಕಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೂತನವಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರು, ಸೇರಿದಂತೆ ತಾಲೂಕಿನ ಎಲ್ಲಾ ಪದಾಧಿಕಾರಿಗಳು ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನ ಭೇಟಿ ಮಾಡಿ ಸಚಿವರಿಗೆ ಪದಾಧಿಕಾರಿಗಳಿಂದ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರು ನೂತನವಾಗಿ ಆಯ್ಕೆಯಾದ ಪತ್ರಕರ್ತ ಸಂಘದ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನ ತಿಳಿಸಿದರು. ಇದೇ ವೇಳೆ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಶ್ವಥ್ ನಾರಾಯಣ್, ಮಹೇಶ್, ಟೈಗರ್ ನಾಗ್, ರಘುವೀರ್, ಕೆ.ಎಲ್.ಎಂ ಮಂಜು, ನಿಕಟ ಪೂರ್ವ ಅಧ್ಯಕ್ಷ ಹಾಗೂ ಜಿಲ್ಲಾ ನಿರ್ದೇಶಕ ಕೆ.ವಿ.ಪುರುಷೋತ್ತಮ್, ರಂಗಧಾಮಯ್ಯ ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ…
ತುಮಕೂರು: ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ತುಷ್ಟೀಕರಣವನ್ನೇ ದೊಡ್ಡ ಸಾಧನೆ ಎಂದುಕೊಂಡಿದ್ದಾರೆ ಎಂದು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ. ಸುರೇಶ್ ಗೌಡ ಟೀಕಿಸಿದರು. ತುಮಕೂರಿನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ದೇವರಾಜ ಅರಸು ಅವರು ರಾಜ್ಯದ ಶ್ರೇಷ್ಠ ಮುತ್ಸದ್ದಿಗಳಲ್ಲಿ ಒಬ್ಬರು. ಸಿದ್ದರಾಮಯ್ಯ ಅವರು ಅರಸು ಅವರ 2,792 ದಿನಗಳ ಆಡಳಿತದ ದಾಖಲೆಯನ್ನು ಮುರಿದು ಹೆಚ್ಚು ದಿನ ಅಧಿಕಾರ ನಡೆಸಿದ ದಾಖಲೆ ನಿರ್ಮಿಸಿರಬಹುದು. ಆದರೆ, “ಅಧಿಕಾರದಲ್ಲಿ ಎಷ್ಟು ದಿನ ಇದ್ದರು ಎನ್ನುವುದು ಮುಖ್ಯವಲ್ಲ, ಆ ಅವಧಿಯಲ್ಲಿ ಜನರಿಗಾಗಿ ಏನು ಮಾಡಿದರು ಎನ್ನುವುದು ಮುಖ್ಯ” ಎಂದು ಶಾಸಕರು ಪ್ರಶ್ನಿಸಿದರು. ಸಿದ್ದರಾಮಯ್ಯ ಅವರು ಹಿಂದೂ ಮತ್ತು ಮುಸ್ಲಿಮರ ನಡುವೆ ಒಡಕು ಮೂಡಿಸಿ ‘ಒಡೆದು ಆಳುವ ರಾಜಕಾರಣ’ ಮಾಡುತ್ತಿದ್ದಾರೆ. ಇದರಿಂದಾಗಿ ರಾಜ್ಯ ಇಂದು ಕೋಮು ಸಂಘರ್ಷದ ಬೇಗೆಯಲ್ಲಿ ಬೇಯುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ರಾಮಕೃಷ್ಣ ಹೆಗಡೆ ಮತ್ತು ಬಿ.ಎಸ್. ಯಡಿಯೂರಪ್ಪ ಅವರ ಆಡಳಿತವನ್ನು ನೆನಪಿಸಿಕೊಂಡ ಸುರೇಶ್…
ಪಾವಗಡ: ತಾಲ್ಲೂಕಿನ ಅರಸೀಕೆರೆಯ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಹೃತಿಕ್ ಎಚ್. ರಾಜ್ಯ ಮಟ್ಟದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ದಕ್ಷಿಣ ಭಾರತ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. ಧಾರವಾಡದ ಡಯಟ್ (DIET) ವತಿಯಿಂದ ರಾಯಾಪುರದ ಜ್ಞಾನ ವಿಕಾಸ ತರಬೇತಿ ಸಂಸ್ಥೆಯಲ್ಲಿ ನಡೆದ ವೈಯಕ್ತಿಕ ವಿಭಾಗದ ರಾಜ್ಯ ಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಸ್ಪರ್ಧೆಯಲ್ಲಿ ಹೃತಿಕ್ ಪಾಲ್ಗೊಂಡಿದ್ದನು. ಈತ ಪ್ರದರ್ಶಿಸಿದ ‘ಶಾಲೆ ಮತ್ತು ಆಸ್ಪತ್ರೆ ಸೂಚನಾ ವ್ಯವಸ್ಥೆ’ ಹಾಗೂ ‘ಅಗ್ನಿನಂದಕ’ (Fire Extinguisher) ಮಾದರಿಗಳು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿ ವಿಜೇತನಾಗಿ ಹೊರಹೊಮ್ಮಿದ್ದಾನೆ. ಮುಂದಿನ ಹಂತ: ರಾಜ್ಯ ಮಟ್ಟದಲ್ಲಿ ಜಯಗಳಿಸಿರುವ ಹೃತಿಕ್, ಇನ್ನುಳಿದ ವಿಜೇತರೊಂದಿಗೆ ಜನೆವರಿ 19 ರಿಂದ 23 ರವರೆಗೆ ತೆಲಂಗಾಣದ ಹೈದರಾಬಾದ್ ನಲ್ಲಿ ನಡೆಯಲಿರುವ ದಕ್ಷಿಣ ಭಾರತ ವಿಭಾಗೀಯ ಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾನೆ. ಹೃತಿಕನ ಈ ಸಾಧನೆಗೆ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ರೇಣುಕ ರಾಜ್ ಜಿ.ಹೆಚ್., ಎಸ್‌ಡಿಎಂಸಿ ಅಧ್ಯಕ್ಷ ಪ್ರೇಮ್ ಕುಮಾರ್, ಉಪಾಧ್ಯಕ್ಷೆ ಕವಿತಮ್ಮ ಹಾಗೂ…
ತುಮಕೂರು: ಜಿಲ್ಲೆಯ ಛಲವಾದಿ ಮಹಾಸಭಾ (ಟಿ.ಸಿ.ಎಂ.ಎಸ್) ವತಿಯಿಂದ ಹಮ್ಮಿಕೊಳ್ಳಲಾಗಿರುವ 25ನೇ ವರ್ಷದ ವಾರ್ಷಿಕ ಸರ್ವ ಸದಸ್ಯರ ಸಭೆಯ ಅಂಗವಾಗಿ, ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ‘ಪ್ರತಿಭಾ ಪುರಸ್ಕಾರ’ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹತೆಗಳು ಮತ್ತು ಮಾನದಂಡಗಳು: ಶೈಕ್ಷಣಿಕ ವರ್ಷ: 2024-25ನೇ ಸಾಲಿನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು. ಕನಿಷ್ಠ ಅಂಕಗಳು: ಎಸ್.ಎಸ್.ಎಲ್.ಸಿ (SSLC), ಪಿಯುಸಿ (PUC), ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಶೇ. 75 ಕ್ಕಿಂತ ಹೆಚ್ಚು ಅಂಕ ಗಳಿಸಿರಬೇಕು. ವಿಶೇಷ ಸಾಧನೆ: ಕಳೆದ ಶೈಕ್ಷಣಿಕ ಅವಧಿಯಲ್ಲಿ ಪಿ.ಹೆಚ್‌ಡಿ (Ph.D) ಪದವಿ ಪಡೆದ ಸಮುದಾಯದ ಸದಸ್ಯರಿಗೂ ಸಹ ಗೌರವ ಸಲ್ಲಿಸಲಾಗುವುದು. ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ (Marks Card) ಮತ್ತು ಜಾತಿ ಪ್ರಮಾಣ ಪತ್ರದ (Caste Certificate) ಪ್ರತಿಯೊಂದಿಗೆ ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬಹುದಾಗಿದೆ. ಅರ್ಜಿ ತಲುಪಿಸಬೇಕಾದ ವಿಳಾಸ: ಅಧ್ಯಕ್ಷರು, ಶಿರಡಿ ಸಾಯಿಬಾಬಾ ನಗರ, ಬೆಳಗುಂಬ ರಸ್ತೆ, ತುಮಕೂರು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:…
ತುಮಕೂರು: ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ಇಕ್ಬಾಲ್ ಮಜೀದ್ ಫೌಂಡೇಶನ್ ಹಾಗೂ ಪ್ರೇರಣಾ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್ ನೇತೃತ್ವದಲ್ಲಿ ಸಿಐಟಿಯು ಜಿಲ್ಲಾ ಶಾಖೆ, ಜಶನ್ ಸ್ಪೀಚ್ ಅಂಡ್ ಹಿಯರಿಂಗ್ ಸೆಂಟರ್ ಸಹಯೋಗದಲ್ಲಿ ಈ ತಿಂಗಳ 9ರಂದು ನಗರದ ಮೆಳೇಕೋಟೆ ರಿಂಗ್ ರಸ್ತೆಯ ಸ್ಟಾರ್ ಕನ್ವೆನ್ಷನ್ ಹಾಲ್ ನಲ್ಲಿ ವಿಕಲಚೇತನರ ಸಮಾವೇಶ ಏರ್ಪಾಡಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಇಕ್ಬಾಲ್ ಮಜೀದ್ ಫೌಂಡೇಶನ್ ನ ಇಕ್ಬಾಲ್ ಅಹಮ್ಮದ್ ತಿಳಿಸಿದರು. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸುಮಾರು 49 ಸಾವಿರ ವಿಕಲಚೇತನರಿದ್ದಾರೆ ಇವರಲ್ಲಿ ಬಹಳಷ್ಟು ಮಂದಿ ಕ್ರೀಡಾಪಟುಗಳಿದ್ದಾರೆ. ಇಂತಹವರು ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾಕೂಟಗಳಿಗೆ ಹೋಗಿಬರಲು ಸರ್ಕಾರ ವಿಶೇಷ ಬಸ್ ವ್ಯವಸ್ಥೆ ಮಾಡಬೇಕು. ವಿಕಲಚೇತನ ಕಲಾವಿದರು, ಕ್ರೀಡಾಪಟುಗಳಿಗೆ ಹೆಚ್ಚಿನ ಆದ್ಯತೆ, ಅವಕಾಶ ದೊರಕಿಸಿ ಅವರ ಪ್ರತಿಭೆ ಅನಾವರಣಕ್ಕೆ ವೇದಿಕೆ ಒದಗಿಸಿ ಅವರಲ್ಲಿ ಆತ್ಮ ವಿಶ್ವಾಸ ಬೆಳೆಸಬೇಕೆನ್ನುವ ನಿಟ್ಟಿನಲ್ಲಿ ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದರು. 9ರಂದು ಬೆಳಿಗ್ಗೆ 10.30ಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಕಲಚೇತನರ…