Author: admin

ತುಮಕೂರು: ಗೊಲ್ಲರ ಹಟ್ಟಿಗಳಲ್ಲಿ ಇನ್ನೂ ಜೀವಂತವಿರುವ ಕೆಲವು ಹಿಂದಿನ ಆಚರಣೆಗಳು ಹಾಗೂ ಈಗಿನ ಸನ್ನಿವೇಶಕ್ಕೆ ಅವುಗಳ ಅಪ್ರಸ್ತುತತೆ ಬಗ್ಗೆ ಬೆಳಕು ಚೆಲ್ಲಲು ಗುಬ್ಬಿ ತಾಲ್ಲೂಕು ಸಮುದಾಯದ ಕೆಲವು ಮುಖಂಡರು ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ತಾಲ್ಲೂಕಿನ ಶ್ರೀ ಯಾದವ ಸಂಸ್ಥಾನ ಮಠದ ಭಕ್ತ ವೃಂದವು ಈ ಅಭಿಯಾನ ಆರಂಭಿಸುತ್ತಿದ್ದು ಜನವರಿ 8 ರಿಂದ 14 ರ ವರೆಗೆ ಗುಬ್ಬಿ ತಾಲ್ಲೂಕಿನ ವಿವಿಧ ಗೊಲ್ಲರಹಟ್ಟಿಗಳಲ್ಲಿ ಈ ಕಾರ್ಯಕ್ರಮ ನಡೆಸಲು ಇತ್ತೀಚೆಗೆ ಸೇರಿದ ಸಭೆಯಲ್ಲಿ ತೀರ್ಮಾನಿಸಲಾಯಿತು. ಇದರ ಜೊತೆಗೆ ಚಿತ್ರದುರ್ಗದಲ್ಲಿರುವ ಶ್ರೀ ಮಠಕ್ಕೆ ಸಹಾಯ ಹಸ್ತ ಚಾಚುವ ಉದ್ದೇಶದಿಂದ ಶ್ರೀ ಕೃಷ್ಣಯಾದವಾನಂದ ಸ್ವಾಮಿಗಳನ್ನು ಬರಮಾಡಿಕೊಂಡು ಅವರಿಗೆ ದವಸ ಧಾನ್ಯ ನೀಡುವ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ. ಶ್ರೀ ಮಠದಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಅವರಿಗೆ ಪ್ರೋತ್ಸಾಹ ನೀಡಬೇಕಿದೆ. ಅಲ್ಲಿ ಗೋ ಶಾಲೆ ತೆರೆದಿದ್ದು ಅವುಗಳ ಬಗ್ಗೆ ನಿಗಾ ವಹಿಸಬೇಕಾಗಿದೆ. ನಿತ್ಯ ಹಲವಾರು ಭಕ್ತರು ಮಠಕ್ಕೆ ಬರುತ್ತಿದ್ದು ಅವರಿಗೆಲ್ಲ ಪ್ರಸಾದ ವ್ಯವಸ್ಥೆ ಮಾಡಬೇಕಿದೆ. ಇದೇ ರೀತಿಯಲ್ಲಿ ಗುಬ್ಬಿ ತಾಲ್ಲೂಕಿನಲ್ಲಿಯೂ ಶ್ರೀ…

Read More

ತುಮಕೂರು: ನಮ್ಮ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ‘ಕರ್ನಾಟಕ ಕ್ರೀಡಾಕೂಟ 2025–26’ ಆಯೋಜನೆಯಾಗುತ್ತಿದೆ. ಜನವರಿ 16ರಿಂದ 22ರವರೆಗೆ ಒಟ್ಟು 7 ದಿನಗಳ ಕಾಲ ನಗರದ ವಿವಿಧ ಕ್ರೀಡಾಂಗಣಗಳಲ್ಲಿ ಈ ಕ್ರೀಡಾ ಹಬ್ಬ ನಡೆಯಲಿದೆ. ಉದ್ಘಾಟನೆ: ಜ. 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಸಮಾರೋಪ: ಜ. 22ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ ಚಂದ್ ಗೆಹಲೋಟ್ ಭಾಗವಹಿಸಲಿದ್ದಾರೆ. ಲಾಂಛನ: ಜಿಲ್ಲೆಯ ಹೆಮ್ಮೆಯಾದ ‘ಕೃಷ್ಣಮೃಗ’ವನ್ನು ಕ್ರೀಡಾಕೂಟದ ಅಧಿಕೃತ ಲಾಂಛನವಾಗಿ ಬಳಸಲಾಗಿದೆ. ಕ್ರೀಡಾಪಟುಗಳು: ರಾಜ್ಯದ ವಿವಿಧ ಮೂಲೆಗಳಿಂದ ಸುಮಾರು 9,000ಕ್ಕೂ ಹೆಚ್ಚು ಕ್ರೀಡಾಪಟುಗಳು ಮತ್ತು ಅಧಿಕಾರಿಗಳು ಆಗಮಿಸುವ ನಿರೀಕ್ಷೆಯಿದೆ. ಯಾವೆಲ್ಲಾ ಕ್ರೀಡೆಗಳು ನಡೆಯಲಿವೆ?: ಒಟ್ಟು 27 ಬಗೆಯ ಕ್ರೀಡೆಗಳನ್ನು ಆಯೋಜಿಸಲಾಗಿದ್ದು, ಅಥ್ಲೆಟಿಕ್, ಕಬಡ್ಡಿ, ಖೋಖೋ, ಫುಟ್‌ಬಾಲ್, ವಾಲಿಬಾಲ್, ಬ್ಯಾಡ್ಮಿಂಟನ್, ಬಾಕ್ಸಿಂಗ್ ಮುಂತಾದವುಗಳು ತುಮಕೂರಿನಲ್ಲಿ ನಡೆಯಲಿವೆ. ಹಾಕಿ ಮತ್ತು ಈಜು ಸೇರಿದಂತೆ ಕೆಲವು ಕ್ರೀಡೆಗಳು ಮಾತ್ರ ಬೆಂಗಳೂರಿನಲ್ಲಿ ನಡೆಯಲಿವೆ. ಕ್ರೀಡಾಂಗಣಗಳು: ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣವನ್ನು ಸ್ಮಾರ್ಟ್ ಸಿಟಿ…

Read More

ಹೊಳೆನರಸೀಪುರ: ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದ ಕೆಎಸ್‌ ಆರ್‌ ಟಿಸಿ ಬಸ್ ನಿಲ್ದಾಣಕ್ಕೆ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶಿವಕುಮಾರ್ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ  ಬಸ್ ನಿಲ್ದಾಣದ ಆವರಣದಲ್ಲಿ ಎಲ್ಲೆಂದರಲ್ಲಿ ಕಸ ಬಿದ್ದಿರುವುದು ಮತ್ತು ನಿರ್ವಹಣೆಯ ಕೊರತೆಯನ್ನು ಕಂಡ ಶಿವಕುಮಾರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಾರ್ವಜನಿಕರು ದಿನನಿತ್ಯ ಬಳಸುವ ಈ ಪ್ರದೇಶದಲ್ಲಿ ನೈರ್ಮಲ್ಯ ಕಾಪಾಡದಿರುವುದಕ್ಕೆ ಅಧಿಕಾರಿಗಳನ್ನು ಮತ್ತು ಟೆಂಡರ್ ದಾರರನ್ನು ತರಾಟೆಗೆ ತೆಗೆದುಕೊಂಡರು. “ಪ್ರಯಾಣಿಕರ ಹಿತದೃಷ್ಟಿಯಿಂದ ಬಸ್ ನಿಲ್ದಾಣವನ್ನು ಪ್ರತಿ ಗಂಟೆಗೊಮ್ಮೆ ಕಡ್ಡಾಯವಾಗಿ ಸ್ವಚ್ಛಗೊಳಿಸಬೇಕು” ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಶೌಚಾಲಯಗಳ ದುಸ್ಥಿತಿಗೆ ಗರಂ: ನಿಲ್ದಾಣದ ಶೌಚಾಲಯಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಧೂಳು ಮತ್ತು ಅವ್ಯವಸ್ಥೆಯನ್ನು ಕಂಡು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಶೌಚಾಲಯಗಳನ್ನು ಕೂಡಲೇ ಶುಚಿಗೊಳಿಸಿ ಸಾರ್ವಜನಿಕ ಬಳಕೆಗೆ ಯೋಗ್ಯವಾಗುವಂತೆ ಸಿದ್ಧಪಡಿಸಬೇಕು ಎಂದು ಆದೇಶಿಸಿದರು. ಇದೇ ವೇಳೆ ಪ್ರಯಾಣಿಕರೊಂದಿಗೆ ಚರ್ಚಿಸಿದ ಅವರು, ಬಸ್ ನಿಲ್ದಾಣದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ…

Read More

ತಿಪಟೂರು: ನಗರದ ಪ್ರತಿಷ್ಠಿತ ವಿವೇಕಾನಂದ ಇಂಟರ್ನ್ಯಾಷನಲ್ ಶಾಲೆಯ 17ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ಜನವರಿ 8 ರಿಂದ ಒಟ್ಟು ಮೂರು ದಿನಗಳ ಕಾಲ ಅತ್ಯಂತ ಅದ್ದೂರಿಯಾಗಿ ಜರುಗಲಿದೆ ಎಂದು ಶಾಲೆಯ ಸಂಸ್ಥಾಪಕ ಟಿ.ಆರ್.ಕೇಶವಕುಮಾರ್ ತಿಳಿಸಿದ್ದಾರೆ. ಕಾರ್ಯಕ್ರಮದ ವಿವರಗಳು: ಈ ಬಾರಿಯ ವಾರ್ಷಿಕೋತ್ಸವವನ್ನು ‘ಮಕ್ಕಳ ಪ್ರತಿಬಿಂಬ ಅನಾವರಣ’ ಹಾಗೂ ‘ಕೌಶಲ್ಯ 2026’ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತಿದೆ. ನಗರದ ಈಡೇನಹಳ್ಳಿ ಗೇಟ್ ಬಳಿ ಇರುವ ಎಸ್.ಎನ್.ಎಸ್. (SNS) ಕನ್ವೆನ್ಷನ್ ಹಾಲ್‌ನಲ್ಲಿ ನಿರ್ಮಿಸಲಾಗಿರುವ ‘ಯೋಗೇಶ್ ವೇದಿಕೆ’ಯಲ್ಲಿ ಸಾಂಸ್ಕೃತಿಕ ಹಾಗೂ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗೌರವ: ಶೈಕ್ಷಣಿಕ ಸಾಧನೆಯನ್ನು ಪ್ರೋತ್ಸಾಹಿಸುವ ಸಲುವಾಗಿ, ಕಳೆದ ಸಾಲಿನ ಎಸ್.ಎಸ್.ಎಲ್.ಸಿ (SSLC) ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪದಕ ಪ್ರದಾನ ಮಾಡಲಾಗುವುದು: ಸಮ್ಮಪ್ರಸಾದ್ (96.33%): ಚಿನ್ನದ ಪದಕ. ಎಸ್. ಭುವನ್ (95.33%): ಬೆಳ್ಳಿ ಪದಕ. ಮೂರು ದಿನಗಳ ಕಾಲ ನಡೆಯುವ ಈ ಸಂಭ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು, ಶಾಲೆಯ ಸಿಬ್ಬಂದಿ ವರ್ಗ ಹಾಗೂ…

Read More

ಹೆಚ್.ಡಿ.ಕೋಟೆ:  ನೂತನ ಪತ್ರಕರ್ತ ಪದಾಧಿಕಾರಿಗಳ ಅಧಿಕಾರದ ಗದ್ದುಗೆಯನ್ನು ನಿಮ್ಮದೇ ಅಧಿಪತ್ಯದಲ್ಲಿ ಸೇವಾ ಕ್ಷೇತ್ರದೊಂದಿಗೆ ಅಧಿಕಾರವನ್ನು ತಾಳ್ಮೆಯಿಂದ ಮಾನಸಿಕ ಸಿದ್ಧತೆಯೊಂದಿಗೆ ಪ್ರತಿಷ್ಠೆಗಳ ಸೋಂಕಿಲ್ಲದೆ ಗೌರವದಿಂದ ಮುನ್ನಡೆಸುವಂತೆ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ನೂತನ ಸಾಲಿನ ಪದಾಧಿಕಾರಿಗಳಿಗೆ ಹಿತವಚನ ನೀಡಿದರು. ಸಂಘ ಸಂಸ್ಥೆಗಳಲ್ಲಿ ಸದಸ್ಯರೇ ಎಲ್ಲ ಕೆಲಸಗಳನ್ನು ನಿರ್ವಹಿಸಲು ಸಾಧ್ಯವಿಲ್ಲದ ಕಾರಣ ಅದೇ ಪರಿಕಲ್ಪನೆಯಲ್ಲಿ ಸ್ಥಳೀಯ ಪತ್ರಕರ್ತರ ಸಂಘದ ಪದಾಧಿಕಾರಿಗಳನ್ನು ನೂತನವಾಗಿ ನೇಮಕ ಮಾಡಲಾಗಿದ್ದು, ಕುಟುಂಬದಲ್ಲಿನ ತಂದೆ ತಾಯಿಗಳಂತೆ ಸ್ಥಾನಗಳನ್ನು ಗೌರವಿಸಬೇಕಿದೆ ಎಂದು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ತಿಳಿಸಿದರು. ಸ್ಥಳೀಯ ತಾಲೂಕು ಪತ್ರಕರ್ತರ ಸಂಘದ 2026ರಿಂದ2028 ರ ವರೆಗಿನ ಎರಡು ವರ್ಷಗಳ ಅವಧಿಗೆ ನಡೆಸಲಾದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷರಾಗಿ ಪದಾಧಿಕಾರಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು, ಹಿರಿಯರನ್ನು ಗೌರವಿಸುತ್ತಾ ಸರ್ವ ಸದಸ್ಯರನ್ನು ಗಣನೆಗೆ ತೆಗೆದುಕೊಂಡು ಸೇವಾ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಬೇಕಿದ್ದು, ಪತ್ರಕರ್ತರ ಭವನದ ನಿವೇಶನಕ್ಕೆ ಶ್ರಮಿಸುವಂತೆ ಹಾಗೂ ಈ ಸಂಬಂಧ ನಾವು ಕೂಡ ನಿಮ್ಮೊಂದಿಗೆ ಸಹಕರಿಸುವುದಾಗಿ ತಿಳಿಸಿದ…

Read More

ಸರಗೂರು:  ಕಾಂಗ್ರೆಸ್ ಪಕ್ಷದ ಮೈಸೂರು ಗ್ರಾಮಾಂತರ ಜಿಲ್ಲಾ ಪ್ರಚಾರ ಸಮಿತಿ ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಸರಗೂರು ಬ್ಲಾಕ್ ತಾಲೂಕು ಅಧ್ಯಕ್ಷರಾಗಿ ಬಡಗಲಪುರ ಗಂಗಾಧರ್ ಆಯ್ಕೆಯಾಗಿದ್ದಾರೆ . ತಾಲೂಕಿನ ಹಾದನೂರು ಗ್ರಾಮ ಪಂಚಾಯಿತಿಯ ಸದಸ್ಯರಾದ ಬಡಗಲಪುರ ಗಂಗಾಧರ್ ರವರನ್ನು ಮೈಸೂರಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಶನಿವಾರದಂದು ನಡೆದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ವಿನಯ್ ಕುಮಾರ್ ಸೊರಕೆ ಆದೇಶ ಮೇರೆಗೆ ತಮ್ಮನ್ನು ನೇಮಕ ಮಾಡಲಾಗಿದ್ದು, ಅದರಂತೆ ಪ್ರಚಾರ ಸಮಿತಿ ಜಿಲ್ಲಾ ಅಧ್ಯಕ್ಷ ರವಿ ಪಿ. ಮಾನವಿನಹಳ್ಳಿ ಹಾಗೂ ಪಕ್ಷದ ಮುಖಂಡರು ಸಮಿತಿಯ ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು. ನೂತನ ಪ್ರಚಾರ ಸಮಿತಿ ಅಧ್ಯಕ್ಷ ಆಯ್ಕೆ ಹಿನ್ನೆಲೆಯಲ್ಲಿ ಬಡಗಲಪುರ ಗಂಗಾಧರ್ ರವರು ಮಾತನಾಡಿ, ನಾವು ಕಾಡಂಚಿನ ಭಾಗದಲ್ಲಿರುವ ಗ್ರಾಮಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ತಾಲೂಕಿನ ಶಾಸಕರಾದ ಅನೀಲ್ ಚಿಕ್ಕಮಾದು ನಮ್ಮಂತ ಕಾರ್ಯಕರ್ತರಿಗೆ ಸ್ಥಾನ ಮಾನ ಸಿಗಲಿ ಎಂದು ನಮ್ಮನ್ನು ಗುರುತಿಸಿ ಪಕ್ಷದಲ್ಲಿ ಸೇವೆ…

Read More

ತುಮಕೂರು ತಾಲೂಕಿನ ಕುರುಗುಂದ ಗ್ರಾಮದ ಸರ್ಕಾರಿ ಶಾಲೆಯನ್ನ ಕೆಪಿಎಸ್ — ಮ್ಯಾಗ್ನೆಟ್ ಯೋಜನೆ ಅಡಿಯಲ್ಲಿ ಮುಚ್ಚಲು ಹೊರಟಿರುವುದನ್ನು ವಿರೋಧಿಸಿ, ಸರ್ಕಾರಿ ಶಾಲೆಯನ್ನು ಉಳಿಸಲು ಎಐಡಿಎಸ್ಓ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ಮಾಡಿದರು. ಪ್ರತಿಭಟನೆಯಲ್ಲಿ ಊರಿನ ಮುಖಂಡರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಕೆ. ಎಸ್. ರಾಜು ಅವರು ಮಾತನಾಡಿ  ಸರ್ಕಾರಿ ಶಾಲೆಗಳಿಗೆ ಒಳ್ಳೆ ನುರಿತ ಶಿಕ್ಷರನ್ನ ಕೊಟ್ಟು ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕೆಲಸವನ್ನ ಮಾಡಿದರೆ ಯಾವ ಪೋಷಕರು ಕೂಡಾ ಖಾಸಗಿ ಶಾಲೆಗಳಿಗೆ ಕಳಿಸುವುದಿಲ್ಲ. ಇವತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಿ, ಖಾಸಗಿಕರಣ ಮಾಡುತ್ತಿದ್ದಾರೆ.  ನಮ್ಮೂರ ಸರ್ಕಾರಿ ಶಾಲೆಯನ್ನು ಮುಚ್ಚಲು ಯಾರೇ ಅಧಿಕಾರಿ ಬಂದರೂ ಊರಿನ ಜನರು ಒಗ್ಗಟ್ಟಾಗಿ ನಿಂತು ಸರ್ಕಾರಿ ಶಾಲೆಯನ್ನು ಉಳಿಸಲು ಹೋರಾಡಬೇಕು. ನಮ್ಮೂರ ಸರ್ಕಾರಿ ಶಾಲೆಯನ್ನ ಯಾವದೇ ಕಾರಣಕ್ಕೂ ಮುಚ್ಚಕ್ಕೆ ಬಿಡಲ್ಲ ಎಂದು ಹೇಳಿದರು. ಜಿಲ್ಲಾ ಕಾರ್ಯದರ್ಶಿಗಳಾದ ಲಕ್ಕಪ್ಪ ಅವರು ಮಾತನಾಡಿ, ಈಗಾಗಲೇ ರಾಜ್ಯದ್ಯಂತ ಕೆಪಿಎಸ್- – ಮ್ಯಾಗ್ನೆಟ್ ಯೋಜನೆ ವಿರೋಧಿಸಿ ಪೋಷಕರ ಪ್ರತಿಭಟನೆಗಳನ್ನ ನಡೆಸುತ್ತಿದ್ದಾರೆ. ಈ ಯೋಜನೆ…

Read More

ತಿಪಟೂರು: ಪ್ರಾಚೀನ ಕಾಲದಿಂದಲೂ ಭರತನಾಟ್ಯ ಮತ್ತು ನೃತ್ಯಕ್ಕೆ  ತನ್ನದೇ ಪರಂಪರೆ ಇದ್ದು, ಇಂದಿಗೂ ಉಳಿಸಿಕೊಂಡು  ಬರುವಲ್ಲಿ ಯಶಸ್ವಿಯಾಗಿದೆ. ಹಿಂದೆ ಶಿಕ್ಷಣ ಕ್ಷೇತ್ರದಲ್ಲಿ ಬಹಳ ಕೊರತೆ ಇದ್ದು, ನಾವುಗಳು ತುಂಬಾ ವಿದ್ಯಾಭ್ಯಾಸಕ್ಕೆ ಕಷ್ಟ ಪಡುತ್ತಿದ್ದ ಕಾಲ ಇಂದು ದೂರವಾಗಿ, ಉತ್ತಮ ಶಿಕ್ಷಣ ಕೊಡುವಲ್ಲಿ ಯಶಸ್ವಿಯಾಗಿದೆ ಎಂದು ಶಾಸಕ ಕೆ.ಷಡಕ್ಷರಿ ಅಭಿಪ್ರಾಯಪಟ್ಟರು. ನಗರದ ಕೆ.ಎಚ್‌.ಬಿ.ಕಾಲೋನಿಯ ಒಕ್ಕಲಿಗರ ಸಮುದಾಯ ಭವನದ ಆವರಣದಲ್ಲಿ ಸಭಾಂಗಣದಲ್ಲಿ, ಠಾಗೂರ್ ವಿದ್ಯಾ ಸಂಸ್ಥೆ ವತಿಯಿಂದ ಠಾಗೂರ್ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ ಹಾಗೂ ಠಾಗೂರ್ ವಿಕಿರಣo–2025 ಎಂಬ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಠಾಗೂರ್ ವಿದ್ಯಾ ಸಂಸ್ಥೆ ಬಹಳ ವರ್ಷಗಳಿಂದ ತಿಪಟೂರಿನ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದು, ಉತ್ತಮ ಬೋಧನೆ ಮತ್ತು ಫಲಿತಾಂಶ ನೀಡುವುದರಲ್ಲಿ ಯಶಸ್ವಿಯಾಗಿದೆ. ಖಾಸಗಿಯವರು ಶಿಕ್ಷಣ ಕ್ಷೇತ್ರಕ್ಕೆ ಬಂದಿರುವುದರಿಂದ, ಶಿಕ್ಷಣ ಕ್ಷೇತ್ರ ಬದಲಾಗಿ ಉತ್ತಮ ವಿದ್ಯಾಭ್ಯಾಸ ನೀಡುವಲ್ಲಿ ಪರಿಶ್ರಮ ಪಡುತ್ತಿದ್ದಾರೆ. ಶಿಕ್ಷಕರುಗಳು ಗುಣಮಟ್ಟ ಶಿಕ್ಷಣ ನೀಡಿದಲ್ಲಿ,ವಿದ್ಯಾರ್ಥಿಗಳು ಯಶಸ್ವಿನ ಮೆಟ್ಟಿಲು ಏರುತ್ತಾರೆ  ಎಂದು ತಿಳಿಸಿದರು.…

Read More

ತುಮಕೂರು: ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಒತ್ತಾಯಿಸಿ ದಿನಾಂಕ 01.01.2026 ರಂದು ವಿಜಯಪುರ ಉಸ್ತುವಾರಿ ಸಚಿವರ ಮನೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಎಐಕೆಕೆಎಂಎಸ್ ರಾಜ್ಯ ಕಾರ್ಯದರ್ಶಿ ಕಾಮ್ರೆಡ್ ಭಗವಾನ್ ರೆಡ್ಡಿ ಸೇರಿದಂತೆ ಹಲವಾರು ನಾಯಕರುಗಳನ್ನು ಬಂಧಿಸಿ, ಕೊಲೆ ಯತ್ನ ಮುಂತಾದ ಕರಾಳ ಸುಳ್ಳು ಮೊಕದ್ದಮೆಗಳನ್ನು ಹೂಡಿ, ನ್ಯಾಯಾಂಗ ಬಂಧನದಲ್ಲಿಟ್ಟಿರುವುದನ್ನು ವಿರೋಧಿಸಿ ತಿಪಟೂರು ತಾಲೂಕು ತಹಶೀಲ್ದಾರ ಕಚೇರಿಯ ಮುಂದೆ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ (ಎಐಕೆಕೆಎಂಎಸ್) ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಗೃಹ ಸಚಿವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಎಐಕೆಕೆಎಂಎಸ್ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ನಾಯಕರಲ್ಲೊಬ್ಬರಾದ ಕಾಮ್ರೇಡ್ ಎಸ್. ಎನ್. ಸ್ವಾಮಿ ಮಾತನಾಡಿ, ನ್ಯಾಯಕ್ಕಾಗಿ, ಜನರ ಹಿತಾಸಕ್ತಿಗಾಗಿ ಹೋರಾಟವನ್ನು ನಡೆಸುವ ಹೋರಾಟಗಾರರ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುಳ್ಳು ಮೊಕದ್ದಮೆಗಳನ್ನು ಹೂಡಿ ಚಳುವಳಿಗಳನ್ನು ಹತ್ತಿಕ್ಕುವ ಪ್ರಜಾಪ್ರಭುತ್ವ ವಿರೋಧಿ ಫ್ಯಾಸಿಸ್ಟ್ ನಡೆಗಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿವೆ. ಕಳೆದ ನೂರಕ್ಕೂ ಹೆಚ್ಚು ದಿನಗಳಿಂದ ವಿಜಯಪುರದಲ್ಲಿ ಸಾರ್ವಜನಿಕ ಆಸ್ಪತ್ರೆಯನ್ನು ಖಾಸಗಿಯವರ…

Read More

ಚಿಕ್ಕನಾಯಕನಹಳ್ಳಿ: ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಕ್ಷದವರು ಮಹಿಳೆಯರನ್ನು ಸೆಳೆಯಲು ಸೀರೆ ಹಂಚುವುದು, ಹಣ ನೀಡುವ ಕೆಲಸ ಮಾಡುತ್ತಾರೆ. ಆದರೆ ಕೆ.ಆರ್.ಎಸ್ ಪಕ್ಷದವರು ಮಹಿಳೆಯರನ್ನು ಸೆಳೆಯಲು ಈ ರೀತಿಯ ತಂತ್ರಗಳನ್ನು ರೂಪಿಸುವ ಬದಲು ಕಲೆ, ಕ್ರೀಡೆ, ರಂಗೋಲಿ ಸ್ಪರ್ಧೆ, ಹಳ್ಳಿಯ ಜಾನಪದ ಚಟುವಟಿಕೆಗಳಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೋಣ ಎಂದು ಕೆಆರ್‌ ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಜ್ಞಾನಸಿಂಧು ಸ್ವಾಮಿ ಹೇಳಿದರು. ಪಟ್ಟಣದ ಹೊರವಲಯದ ಜೆವಿಆರ್‌ ಕಲ್ಯಾಣ ಮಂಟಪದಲ್ಲಿ ಕೆಆರ್‌ ಎಸ್ ಪಕ್ಷದ ಕಾರ್ಯಕರ್ತರ ಸ್ನೇಹಕೂಟ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷದವರು ಮಹಿಳೆಯರನ್ನು ಪಕ್ಷದತ್ತ ಸೆಳೆಯಲು ಮಾತೃವಂದನೆ, ದುರ್ಗಾಪೂಜೆ, ಧರ್ಮಸ್ಥಳಕ್ಕೆ ಕಳುಹಿಸುವ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಈ ಎಲ್ಲಾ ತಂತ್ರಗಳು ಮಹಿಳಾ ಕಾರ್ಯಕರ್ತರನ್ನು ಹೆಚ್ಚಿಸುವುದಾಗಿದೆ ಎಂದರಲ್ಲದೆ, ಪಕ್ಷದ ಕಾರ್ಯಕರ್ತರು ನಿಮ್ಮ ಗ್ರಾಮ ಪಂಚಾಯಿತಿಗಳ ಬಗ್ಗೆ ತಿಳಿದುಕೊಳ್ಳಿ, ಅಲ್ಲಿನ ಸಮಸ್ಯೆಗಳನ್ನು ಆಲಿಸಿ ಹಾಗೂ ಇತ್ತೀಚಿನ ಹಾಗೂ ಹಿಂದಿನ ರಾಜಕೀಯ ಸ್ಥಿತಿಗತಿಗಳನ್ನು ತಿಳಿದುಕೊಳ್ಳಿ ಎಂದರು. ಜ್ಞಾನಸಿಂಧು ಸ್ವಾಮಿ ಮಾತನಾಡಿ, ಕಾರ್ಯಕರ್ತರು ಗ್ರಾ.ಪಂ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ…

Read More