Author: admin

ಬೆಂಗಳೂರು: ಕೇಂದ್ರ ಸರ್ಕಾರವು ರಾಜ್ಯದ ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳಿಗಾಗಿ ಬಿಡುಗಡೆ ಮಾಡಿದ ಕೋಟ್ಯಂತರ ರೂಪಾಯಿ ಅನುದಾನವನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದುರುಪಯೋಗಪಡಿಸಿಕೊಂಡಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಗಂಭೀರ ಆರೋಪ ಮಾಡಿದ್ದಾರೆ. ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2025–26ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ರಾಜ್ಯಕ್ಕೆ ಬಂಡವಾಳ ಹೂಡಿಕೆಗಾಗಿ ವಿಶೇಷ ಸಹಾಯಧನವಾಗಿ ನೀಡಿದ್ದ 1,323.96 ಕೋಟಿ ರೂಪಾಯಿಗಳನ್ನು ರಾಜ್ಯ ಸರ್ಕಾರವು ಇತರ ಉದ್ದೇಶಗಳಿಗೆ ಬಳಸಿಕೊಂಡಿದೆ ಎಂದು ಆರೋಪಿಸಿದರು. ನೀರಾವರಿ ಯೋಜನೆಗಳಿಗೆ ಅನ್ಯಾಯ: ಸಣ್ಣ ನೀರಾವರಿ ಯೋಜನೆಗಳಾದ ಕೃಷ್ಣ ಭಾಗ್ಯ ಜಲ ನಿಗಮ ಮತ್ತು ಕರ್ನಾಟಕ ನೀರಾವರಿ ನಿಗಮಕ್ಕೆ ಬರಬೇಕಿದ್ದ ಹಣವನ್ನು ಹಣಕಾಸು ಇಲಾಖೆ ತಡೆಹಿಡಿದಿದೆ. ಮುಂದಿನ ಕಂತಿನ ಹಣ ಪಡೆಯಲು ಇಲಾಖೆಯ ಮೇಲೆ ಒತ್ತಡ ಹೇರಿ ಸುಳ್ಳು ‘ಬಳಕೆ ಪ್ರಮಾಣಪತ್ರ’ಗಳನ್ನು (UCs) ಸೃಷ್ಟಿಸಲಾಗುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ತೆಲಂಗಾಣಕ್ಕೆ ವರ್ಗಾಯಿಸಿರುವುದಕ್ಕೆ ಮುಖ್ಯಮಂತ್ರಿಗಳೇ ನೇರ ಹೊಣೆ ಎಂದು ಅವರು…

Read More

ತಿಪಟೂರು: ನಗರದ ಗಾಂಧಿನಗರದ ಸಮೀಪವಿರುವ ಮಾರನಗೆರೆಯಲ್ಲಿ ತೋಟದ ಬಾವಿಯೊಂದಕ್ಕೆ ಬಿದ್ದಿದ್ದ ಚಿರತೆಯನ್ನು ಶನಿವಾರ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಗ್ರಾಮಸ್ಥರು ಸೇರಿ ಯಶಸ್ವಿಯಾಗಿ ರಕ್ಷಿಸಿದ್ದಾರೆ. ಶನಿವಾರ ಬೆಳಿಗ್ಗೆ ತೋಟದ ಬಾವಿಯಲ್ಲಿ ಚಿರತೆ ಬಿದ್ದಿರುವುದನ್ನು ಗಮನಿಸಿದ ಗ್ರಾಮಸ್ಥರು ತೀವ್ರ ಆತಂಕಕ್ಕೊಳಗಾಗಿದ್ದರು. ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಆದರೆ, ಮಧ್ಯಾಹ್ನದವರೆಗೂ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಬಾರದ ಕಾರಣ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಬಾವಿಯೊಳಗೆ ಬಿದ್ದಿದ್ದ ಚಿರತೆಯು ನೀರಿನಲ್ಲಿ ಮುಳುಗದಂತೆ ಅಲ್ಲಿದ್ದ ಕಟ್ಟಿಗೆಯ ತುಂಡೊಂದರ ಮೇಲೆ ಆಸರೆ ಪಡೆದು ಕುಳಿತಿತ್ತು. ಮಧ್ಯಾಹ್ನದ ನಂತರ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ, ಗ್ರಾಮಸ್ಥರ ಸಹಕಾರದೊಂದಿಗೆ ಬಾವಿಯೊಳಗೆ ಬಲೆಯನ್ನು ಇಳಿಸಿ ಚಿರತೆಯನ್ನು ಮೇಲೆತ್ತುವಲ್ಲಿ ಯಶಸ್ವಿಯಾದರು. ರಕ್ಷಿಸಲಾದ ಚಿರತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಿರತೆ ರಕ್ಷಣೆಯಾದ ಬಳಿಕ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್…

Read More

ತುಮಕೂರು: ವೈದ್ಯಕೀಯ ಕ್ಷೇತ್ರವು ಸದಾ ಬದಲಾಗುತ್ತಿರುತ್ತದೆ, ಇಲ್ಲಿ ಜ್ಞಾನಕ್ಕೆ ಕೊನೆಯಿಲ್ಲ. ವೈದ್ಯಕೀಯ ವಿದ್ಯಾರ್ಥಿಗಳು ಕೇವಲ ಪದವಿಗಷ್ಟೇ ಸೀಮಿತವಾಗದೆ, ಹೊಸ ಸಂಶೋಧನೆ ಮತ್ತು ವೈದ್ಯಕೀಯ ಕ್ಷೇತ್ರದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಸದಾ ಜಾಗೃತರಾಗಿರಬೇಕು ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಮಹಾಸ್ವಾಮೀಜಿ ಕರೆ ನೀಡಿದರು. ನಗರದ ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಮೆಡ್‌ಸ್ಪಾರ್ಕ್’ ವಿದ್ಯಾರ್ಥಿ ಸಿ.ಎಂ.ಇ ಮತ್ತು ‘ಫಾರ್ಮಕ್—ಓ–ಸಿಲೆನ್ಸ್’ ಅಂತರ ಕಾಲೇಜು ರಸಪ್ರಶ್ನೆ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿ ವಿದ್ಯಾರ್ಥಿಗಳಿಗೆ ಸದಾ ಹೊಸತನ್ನು ಕಲಿಸುವ ಉತ್ಸಾಹ ಹೊಂದಿರುವ ನಮ್ಮ ಸಿಬ್ಬಂದಿ ಜ್ಞಾನವನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಹಾಗೆಯೇ ಸಿಬ್ಬಂದಿಯು ನಿತ್ಯವೂ ಅಪ್ಡೇಟ್ ಆಗುತ್ತಿರಬೇಕು ಎಂದರು. ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಸ್. ಸಚ್ಚಿದಾನಂದ ಮಾತನಾಡಿ, ವೈದ್ಯಕೀಯ ವೃತ್ತಿಯು ಅತ್ಯಂತ ಪವಿತ್ರವಾದುದು. ವಿದ್ಯಾರ್ಥಿಗಳು ತಾಂತ್ರಿಕ ಕೌಶಲಗಳ ಜೊತೆಗೆ ವೃತ್ತಿಪರ ನೀತಿ ಸಂಹಿತೆಯನ್ನು ರೂಪಿಸಿಕೊಳ್ಳಬೇಕು. ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸುವುದು ಮತ್ತು ಮಾನವೀಯತೆಯಿಂದ ಸೇವೆ ಸಲ್ಲಿಸುವುದು ಒಬ್ಬ ಉತ್ತಮ ವೈದ್ಯನ ಆದ್ಯ ಕರ್ತವ್ಯವಾಗಿದೆ.…

Read More

ತುಮಕೂರು: ಪ್ರತಿಯೊಬ್ಬರು ಖಾದಿ ಬಟ್ಟೆಗಳನ್ನು ಧರಿಸುವ ಮೂಲಕ ನೇಕಾರ ಸಮುದಾಯಕ್ಕೆ ಉತ್ತೇಜನ ನೀಡಬೇಕು ಎಂದು ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ ಹೇಳಿದರು. ನಗರದ ಅಮಾನಿಕೆರೆಯ ಗಾಜಿನ ಮನೆಯಲ್ಲಿ ಅಭಿವೃದ್ಧಿ ಆಯುಕ್ತರು ಹಾಗೂ ನಿರ್ದೇಶಕರು (ಕೈಮಗ್ಗ) ಜವಳಿ ಮಂತ್ರಾಲಯ, ಭಾರತ ಸರ್ಕಾರ, ನವದೆಹಲಿ, ಕರ್ನಾಟಕ ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಮಹಾಮಂಡಳ ನಿ., ಕಾವೇರಿ ಹ್ಯಾಂಡ್ಲೂಮ್ಸ್, ಬೆಂಗಳೂರು ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆ, ಜಿ.ಪಂ, ತುಮಕೂರು ಇವರ ಸಂಯುಕ್ತಾಶ್ರಯದಲ್ಲಿ 14 ದಿನಗಳ ಕಾಲ ಏರ್ಪಡಿಸಲಾಗಿರುವ ರಾಜ್ಯ ಹ್ಯಾತ್ಕರ್ಗ ವಿಶೇಷ ಕೈಮಗ್ಗ ಮೇಳ ವಸ್ತು ಭಂಡಾರ-2026 ಉದ್ಘಾಟಿಸಿ ಅವರು ಮಾತನಾಡಿದರು. ನೇಕಾರರು ಬಹಳ ಕಷ್ಟಪಟ್ಟು ಬಟ್ಟೆಗಳನ್ನು ನೆಯ್ಗೆ ಮಾಡುತ್ತಾರೆ. ಅವರು ನೆಯ್ಗೆ ಮಾಡುವ ಬಟ್ಟೆಗಳನ್ನು ಪ್ರತಿಯೊಬ್ಬರೂ ಖರೀದಿಸಿ ತೊಟ್ಟರೆ ಆ ಸಮುದಾಯದ ಬೆಳವಣಿಗೆಗೆ ಸಹಕರಿಸಿದಂತಾಗುತ್ತದೆ. ಹಾಗಾಗಿ ನಾವೆಲ್ಲರೂ ಹೆಚ್ಚು ಹೆಚ್ಚು ಖಾದಿ ಬಟ್ಟೆಗಳನ್ನು ಧರಿಸಲು ಮುಂದಾಗಬೇಕು ಎಂದರು. ವ್ಯಕ್ತಿತ್ವದಲ್ಲಿ ತೂಕ ಇದ್ದರೆ ನಾವು ತೊಡುವ ಬಟ್ಟೆಗೂ ಮೌಲ್ಯ ಬರುತ್ತದೆ. ಬಣ್ಣ ಬಣ್ಣದ…

Read More

ತುಮಕೂರು: ಉರ್ದು ಮಾಧ್ಯಮ ಶಾಲೆಗಳಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಹೊರಗೆ ಉಳಿಯುತ್ತಿದ್ದು, ಆ ಮಕ್ಕಳನ್ನು ಶಾಲೆಗೆ ಮರಳಿ ಕರೆತರುವುದು ಆಯಾಯ ಶಾಲೆಗಳ ಶಿಕ್ಷಕರಿಗೆ ಸವಾಲಿನ ಕೆಲಸವಾಗಿದೆ ಎಂದು ಡಿಡಿಪಿಐ ರಘುಚಂದ್ರ ತಿಳಿಸಿದರು. ನಗರದ ಧಾನ್ಯ ಪ್ಯಾಲೇಸ್‌ ನಲ್ಲಿ ತಹರೀಕ್ ಉರ್ದು–ಅದಬ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಿಕ್ಷಕರು ಎಂಬ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಯ ಶಿಕ್ಷಕರು ಒಂದು ಮಾದರಿ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡರೆ, ಮಕ್ಕಳು ತಾನಾಗಿಯೇ ಶಾಲೆಗೆ ಪ್ರವೇಶ ಪಡೆಯುತ್ತಾರೆ. ಇಂದಿನ ಅಗತ್ಯಕ್ಕೆ ಅನುಗುಣವಾಗಿ, ಜ್ಞಾನದ ಜೊತೆಗೆ, ಮಾನವೀಯ ಗುಣಗಳನ್ನು ಕಲಿಸುವತ್ತ ಶಿಕ್ಷಕರು ಮುಂದಾಗಬೇಕೆಂದರು. ಉರ್ದು ಶಾಲೆಗಳು ಪ್ರಮುಖವಾಗಿ ಶಿಕ್ಷಕರ ಕೊರತೆ ಎದುರಿಸುತ್ತಿದೆ. ಬಹುತೇಕ ಅತಿಥಿ ಉಪನ್ಯಾಸಕರಿಂದ ಶಾಲೆಗಳಲ್ಲಿ ಪಾಠ ಪ್ರವಚನ ನಡೆಯುತ್ತಿವೆ. ಉತ್ತಮ ಫಲಿತಾಂಶದ ಹಿನ್ನೆಲೆಯಲ್ಲಿ ಸ್ವಲ್ಪ ಒತ್ತಡ ಹಾಕಿದರೂ ಕೆಲಸಕ್ಕೆ ಬರುವುದಿಲ್ಲ. ಹಾಗಾಗಿ ಸಮುದಾಯದ ಮುಖಂಡರು ಹಾಗೂ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತಂದು ಖಾಯಂ ಉಪನ್ಯಾಸಕರ ನೇಮಕಕ್ಕೆ ಮುಂದಾಗಬೇಕೆಂದು ಡಿಡಿಪಿಐ ರಘುಚಂದ್ರ…

Read More

ಕುಣಿಗಲ್: ಅಮೆರಿಕಾದ ಲೈಂಗಿಕ ಅಪರಾಧಿ ಜೆಫ್ರಿ ಎಫ್ಟೀನ್ ಫೈಲ್‌ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಉಲ್ಲೇಖವಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಯುವ ಕಾಂಗ್ರೆಸ್ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಶನಿವಾರ ಪಟ್ಟಣದ ಗ್ರಾಮದೇವತೆ ಸರ್ಕಲ್ ಬಳಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಿಖಿಲ್ ರಾಜಣ್ಣ, ಕುಣಿಗಲ್ ಕ್ಷೇತ್ರದ ಅಧ್ಯಕ್ಷ ಸಿ.ಬಿ.ಸಂತೋಷ್, ಕುಣಿಗಲ್ ಬ್ಲಾಕ್ ಅಧ್ಯಕ್ಷ ಮಾರುತಿ, ಹುಲಿಯೂರುದುರ್ಗ ಬ್ಲಾಕ್ ಅಧ್ಯಕ್ಷ ಪಾಲಗೆರೆ ರಾಮು ಅವರ ನೇತೃತ್ವದಲ್ಲಿ ಜಮಾಯಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಗ್ರಾಮದೇವತೆ ವೃತ್ತದಿಂದ ಎಸ್.ಹುಚ್ಚಮಾಸ್ತಿಗೌಡ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಧಿಕ್ಕಾರ ಕೂಗಿದರು. ಕುಣಿಗಲ್ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಸಿ.ಬಿ.ಸಂತೋಷ್ ಮಾತನಾಡಿ, ಅಮೆರಿಕಾದ ಲೈಂಗಿಕ ಅಪರಾಧಿ ಜೆಫ್ರಿ ಎಫ್ಟೀನ್, ಅಪ್ರಾಪ್ತ ಹೆಣ್ಣು ಮಕ್ಕಳನ್ನು ಲೈಂಗಿಕ ಕೃತ್ಯಗಳಿಗೆ ಬಳಸಿಕೊಂಡು, ವಿವಿಧ ದೇಶಗಳ ಪ್ರಸಿದ್ಧ ವ್ಯಕ್ತಿಗಳೊಂದಿಗೆ ಒಡನಾಟವನ್ನು ಹೊಂದಿದ್ದನು. ಅಮೆರಿಕಾದಲ್ಲಿ…

Read More

ತುಮಕೂರು: 2025–26ನೇ ಸಾಲಿನ ಎಸ್‌ ಎಸ್‌ ಎಲ್‌ ಸಿ ವಾರ್ಷಿಕ ಪರೀಕ್ಷೆಗಳು ಮಾರ್ಚ್ 18 ರಿಂದ ಆರಂಭವಾಗುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಹತ್ವದ ಸಭೆ ನಡೆಸಿದರು. ಜಿಪಂ ಸಭಾಂಗಣದಲ್ಲಿ ಜರುಗಿದ ಪೂರ್ವ ಸಿದ್ಧತಾ ಪರೀಕ್ಷೆ 1 ಮತ್ತು 2 ರಲ್ಲಿ ಶೇಕಡ 50ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ಶಾಲೆಗಳ ಮುಖ್ಯ ಶಿಕ್ಷಕರುಗಳು, ಡಿಡಿಪಿಐ, ಬಿಇಒಗಳೊಂದಿಗಿನ ಸಭೆಯಲ್ಲಿ ಫಲಿತಾಂಶ ಉತ್ತಮಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಯಿತು. ಜೊತೆಗೆ ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಂಡುಬಂದ ನ್ಯೂನತೆಗಳ ಕುರಿತು ಚರ್ಚಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಂಬಂಧ ಪಟ್ಟ ಎಲ್ಲಾ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಲಾಯಿತು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ತುಮಕೂರು: ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ ಅಧ್ಯಕ್ಷತೆಯಲ್ಲಿ ಕುಡಿಯುವ ನೀರು ಸೇರಿದಂತೆ ವಿವಿಧ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ, ನಗರ ಪ್ರದೇಶಗಳಲ್ಲಿ ಈಗಾಗಲೇ ಟ್ಯಾಂಕರ್ ನೀರು ಸರಬರಾಜು ಮಾಡುತ್ತಿರುವ ಕ್ರಮ ಸರಿಯಲ್ಲ, ಇಲ್ಲಿಯವರೆಗೆ ನೀರು ಸಂಗ್ರಹಕ್ಕೆ ನಗರಾಡಳಿತ ಯಾವ ಕ್ರಮ ತೆಗೆದುಕೊಂಡಿದೆ ಎಂದು ಪ್ರಶ್ನಿಸಿ ಬೇಸಿಗೆ ಬಂದ ಕೂಡಲೇ ಟ್ಯಾಂಕರ್ ಸರಬರಾಜು ಎಂಬ ಉತ್ತರ ಬರುವುದು ಸಮಾಧಾನಕರವಲ್ಲ. ಇದಕ್ಕೆ ಸರಿಯಾದ ವ್ಯವಸ್ಥೆ ಮಾಡಿಕೊಳ್ಳಬೇಕು. ಮುಂಜಾಗೃತ ಕ್ರಮದ ವ್ಯವಸ್ಥೆ ಮಾಡಿಕೊಳ್ಳದಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಾತ್ರೆಗೆ ಅನುಮತಿ ಕಡ್ಡಾಯ: ಬೇಸಿಗೆ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬ ಜಾತ್ರೆಗಳು ಆಗುತ್ತವೆ. ಈ ಸಂದರ್ಭದಲ್ಲಿ ಜನರ ಕ್ಷೇಮ ಕಾಳಜಿಗೆ ಯಾವ ಕ್ರಮ ಅನುಸರಿಸಿದ್ದೀರಿ ಎಂದು ಉಪ ವಿಭಾಗಾಧಿಕಾರಿಗಳನ್ನು ಪ್ರಶ್ನಿಸಿದ ಅವರು, ಯಾವುದೇ ಜಾತ್ರೆ ಹಬ್ಬ ಆಚರಿಸಲು ಸ್ಥಳೀಯ ಆಡಳಿತದ ಅನುಮತಿ ಕಡ್ಡಾಯವಾಗಿ ಪಡೆಯಬೇಕು.…

Read More

ತುಮಕೂರು: ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಗೂಳೂರು ಹೋಬಳಿಗೆ ಸೇರಿದ ಹೆತ್ತೇನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಬಂಗಾರದ ಚೆಲುವೆ, ಭವರೋಗವೈದ್ಯೆ ಮಕ್ಕಳ ತಾಯಿ ಎಂದೇ ಹೆಸರುವಾಸಿಯಾಗಿರುವ ಅನಾದಿಕಾಲದಿಂದಲೂ ಭಕ್ತರನ್ನು ಹರಸುತ್ತ ಬಂದಿರುವ ಕ್ಷೇತ್ರಮಾತೆ ಶ್ರೀ ಆದಿಶಕ್ತಿ ಮಾರಮ್ಮನವರ ಜಾತ್ರಾ ಮಹೋತ್ಸವ ಫೆಬ್ರವರಿ 16 ಮತ್ತು 17ರಂದು ನಡೆಯಲಿದೆ. ಗ್ರಾಮದ ಮನೆಮನೆಗಳನ್ನು ದೇವಾಲಯಗಳನ್ನು ಶುಚಿಗೊಳಿಸಿ ಸುಣ್ಣ ಬಣ್ಣಗಳೊಂದಿಗೆ ಅಲಂಕರಿಸಿ ದಿನಾಂಕ 14 ರಂದು ಅಮ್ಮನವರನ್ನು ತವರುಮನೆ ಕಂಬತ್ತನಹಳ್ಳಿಗೆ ಕಳುಹಿಸಿಕೊಡಲಾಗುವುದು. ಸುತ್ತಮುತ್ತಲ ಗ್ರಾಮಗಳಾದ ಹೆತ್ತೇನಹಳ್ಳಿ ಪಾಳ್ಯ, ಕುಮ್ಮಂಜಪಾಳ್ಯ, ರಂಗಯ್ಯನಪಾಳ್ಯ, ಕಂಬತ್ತನ ಹಳ್ಳಿಗಳ ಭಕ್ತರಿಂದ ಪೂಜೆ ಸ್ವೀಕರಿಸಿ 15ರ ಭಾನುವಾರ ಹೆತ್ತೇನಹಳ್ಳಿಗೆ ಹೂವಿನ ಹಾರ ತುಂಬಿದ ವಧುವಿನಂತೆ ಸಿಂಗರಿಸಿ ಕಳುಹಿಸಿಕೊಡಲಾಗುವುದು. ಈ ದೃಶ್ಯವನ್ನು ಕಣ್ಣು ತುಂಬಿಕೊಳ್ಳುವುದೇ ಒಂದು ಭಾಗ್ಯ ಎನ್ನುತ್ತಾರೆ ಭಕ್ತರು. ಫೆ. 16ರ ಸೋಮವಾರ ರಥವನ್ನು ಬಣ್ಣ ಬಣ್ಣದ ವಸ್ತ್ರ ಧ್ವಜಗಳಿಂದ ಸಿದ್ಧಗೊಳಿಸಿ ಅಲಂಕೃತಗೊಳಿಸಲಾಗುವುದು. ಅಗ್ನಿಕೊಂಡವನ್ನು ಸಿದ್ಧಪಡಿಸಲಾಗುವುದು. ಇದರ ಜೊತೆಗೆ, ಗುಗ್ಗಿರಿ ಪೂಜೆ, ಕಿಚ್ಚು ಹಾಯುವುದು, ತುಂಬೆ ಹೂವಿನ ವಿಶೇಷ ಪೂಜೆ ನೆರವೇರಿಸಿ ಸೋಮವಾರ ರಾತ್ರಿ…

Read More

ವಿಶೇಷ ವರದಿ: ಮಂಜುಸ್ವಾಮಿ ಎಂ.ಎನ್. ತುಮಕೂರು : ಜಿಲ್ಲೆಯ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಸಿದ್ದರಬೆಟ್ಟವು ಅತ್ಯಂತ ಪ್ರಾಚೀನ ಮತ್ತು ಪೌರಾಣಿಕ ಇತಿಹಾಸವನ್ನು ಹೊಂದಿರುವ ಸುಕ್ಷೇತ್ರವಾಗಿದ್ದು. ಈ ಪುಣ್ಯಕ್ಷೇತ್ರವನ್ನು ಸಿದ್ದರ ತಪೋಭೂಮಿ, ಆಯುರ್ವೇದಿಕ್ ದಿವ್ಯ ಔಷಧಿಗಳ ತಾಣ, ನವಕೋಟಿ ಸಿದ್ದರು ತಪಸ್ಸು ಮಾಡಿದ ಪುಣ್ಯಸ್ಥಳವೆಂದು ಸಹ ಈ ಕ್ಷೇತ್ರವನ್ನು ಕರೆಯಲ್ಪಡುತ್ತಾರೆ. ಪೌರಾಣಿಕ ಹಿನ್ನೆಲೆಯನ್ನು ಹೊಂದಿರುವ ಸುಕ್ಷೇತ್ರವಾಗಿದ್ದು ರಾಮಾಯಣ ಕಾಲದಲ್ಲಿ ಶ್ರೀ ಆಂಜನೇಯ ಸ್ವಾಮಿಯು ಹಿಮಾಲಯದಿಂದ ಸಂಜೀವಿನಿ ಪರ್ವತವನ್ನು ಹೊತ್ತು ತರುವಾಗ ಒಂದು ತುಂಡು ಕಳಚಿ ಬಿದ್ದ ಕ್ಷೇತ್ರವಾಗಿದೆ ಎಂಬಾ ಇತಿಹಾಸವು ಇದೆ. ಇಂದಿಗೂ ಕೂಡ ಶ್ರೀ ಸಿದ್ಧರಬೆಟ್ಟ ಕ್ಷೇತ್ರದಲ್ಲಿ ಸಂಜೀವಿನಿ ಸೇರಿದಂತೆ ಜೀವಾಮೃತ ನೀಡುವ ಗಿಡ ಮೂಲಿಕೆಗಳು, ದಿವ್ಯ ಔಷಧಿಯ ಸಸ್ಯಗಳು ಇರುವುದು ಸತ್ಯವಾಗಿದೆ. ಈ ಕಾರಣಗಳಿಂದ ಈ ಸಿದ್ಧರಬೆಟ್ಟ ಕ್ಷೇತ್ರವನ್ನು “ಸುವರ್ಣ ಗಿರಿ” ಮತ್ತು “ರಸ ಸಿದ್ಧರಬೆಟ್ಟ” ಎಂದು ಕರೆಯುತ್ತಾರೆ.  ಸುವರ್ಣಮುಖಿ ನದಿಯ ಉಗಮ ಸ್ಥಾನವಾಗಿದೆ. ನವಕೋಟಿ ಸಿದ್ದರು ಈ ಪುಣ್ಯಭೂಮಿಯಲ್ಲಿ ತಪಸ್ಸು ಮಾಡಿದ ಹಿನ್ನೆಲೆಯಿಂದ ಈ ಕ್ಷೇತ್ರವನ್ನು “ಸಿದ್ದರಬೆಟ್ಟ” ಎಂದು ನಾಮಕರಣ…

Read More