Subscribe to Updates
Get the latest creative news from FooBar about art, design and business.
- ಇ–ಪೌತಿ ಖಾತಾ ಆಂದೋಲನ–2 : ರೈತರಿಂದ ಅರ್ಜಿಗಳ ಸ್ವೀಕಾರ — ಬಾಕಿ ಆರ್ ಆರ್ ಟಿ ಅರ್ಜಿಗಳ ಶೀಘ್ರ ವಿಲೇವಾರಿಗೆ ಸೂಚನೆ
- ನೀಟ್ ಮರು ಪರೀಕ್ಷೆ ; ಕಟ್ಟುನಿಟ್ಟಿನ ಸಿದ್ಧತೆಗೆ ಎಡಿಸಿ ಸೂಚನೆ
- ಕೆಪಿಎಸ್ ಶಾಲೆಗೆ ಕುಂಕಮನಹಳ್ಳಿ ಶಾಲೆಯನ್ನು ವಿಲೀನಗೊಳಿಸದಂತೆ ಆಗ್ರಹ
- ಜೂನ್ 19ರಂದು ತುಮಕೂರಿನಲ್ಲಿ ಪ್ರಧಾನ ಮಂತ್ರಿ ವಿಕಸಿತ ಭಾರತ ಉದ್ಯೋಗ ಯೋಜನೆ ಫಲಾನುಭವಿಗಳಿಗೆ ಪ್ರೋತ್ಸಾಹಧನ ವಿತರಣೆ
- ಸಿರಾನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
- ಜು.18: ನ್ಯಾಯಾಲಯಗಳಲ್ಲಿ ವಿಶೇಷ ಲೋಕ ಅದಾಲತ್: ವಿವಿಧ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಸಹಕಾರಿ
- ಕೊರಟಗೆರೆ: ಆಟೋ ಡಿಕ್ಕಿಯಾಗಿ ಯುವಕ ಸಾವು
- ಸಮಾಜ ಕಲ್ಯಾಣ ಇಲಾಖೆ: ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಆರಂಭ
Author: admin
ತಿಪಟೂರು: ಇಲ್ಲಿನ ನಗರದ ನಿವಾಸಿಯಾದ ಗೌರವ್ ಎಂಬ ಬಾಲಕ ಇಂದು ಬೆಳಿಗ್ಗೆ ಟ್ಯೂಷನ್‌ಗೆ ಹೋದವನು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾನೆ. ಬಾಲಕನು ಇಂದು ಮುಂಜಾನೆ ಮನೆಯಿಂದ ಟ್ಯೂಷನ್‌ಗೆ ತೆರಳಿದ್ದನು. ಆದರೆ ತರಗತಿ ಮುಗಿದ ನಂತರವೂ ಆತ ಮನೆಗೆ ತಲುಪಿಲ್ಲ. ಕುಟುಂಬಸ್ಥರು ಮತ್ತು ಸಂಬಂಧಿಕರು ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಾಲಕನ ಚಹರೆ: ಕಾಣೆಯಾದ ಸಮಯದಲ್ಲಿ ಬಾಲಕನು ನೀಲಿ ಬಣ್ಣದ ಟ್ರ್ಯಾಕ್ ಪ್ಯಾಂಟ್ ಹಾಗೂ ಸ್ವೆಟರ್ ಧರಿಸಿದ್ದನು ಎಂದು ತಿಳಿದುಬಂದಿದೆ. ಸಾರ್ವಜನಿಕರಲ್ಲಿ ವಿನಂತಿ: ಈ ಬಾಲಕನ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಅಥವಾ ಬಾಲಕ ಎಲ್ಲಾದರೂ ಕಂಡುಬಂದಲ್ಲಿ ಕೂಡಲೇ ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಕರೆ ಮಾಡಬೇಕೆಂದು ಪೋಷಕರು ವಿನಂತಿಸಿದ್ದಾರೆ. ಸಂಪರ್ಕ ಸಂಖ್ಯೆ: 9844437887 ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಗುಬ್ಬಿ: ಕಾನೂನಾತ್ಮಕವಾಗಿ ಕ್ರಯಕ್ಕೆ ಪಡೆದ ಜಮೀನನ್ನು ಇದು ಬೇರೆಯವರು ಅಕ್ರಮವಾಗಿ ಖಾತೆ ಬದಲಾವಣೆ ಮಾಡಿಕೊಂಡು ಬೇರೆ ವ್ಯಕ್ತಿಗೆ ಮಾರಾಟ ಮಾಡಿ ನಮಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ರೈತ ಮುಖಂಡ ವರಹಸಂದ್ರ ಗ್ರಾಮದ ರಂಗಸ್ವಾಮಿ ಬೇಸರ ವ್ಯಕ್ತಪಡಿಸಿದರು. ವರಹಸಂದ್ರ ಗ್ರಾಮದಲ್ಲಿ ಮಾಧ್ಯಮ ದವರೊಂದಿಗೆ ತಮ್ಮ ಅಳಲನ್ನು ತೊಡಿಕೊಂಡರು. ಗುಬ್ಬಿ ತಾಲೂಕು ಕಡಬ ಹೋಬಳಿಯ ವರಹಸಂದ್ರ ಗ್ರಾಮದ ಸ. ನಂ. 19/1ರಲ್ಲಿ ಒಟ್ಟು 4.31 ಎಕರೆ ಜಮೀನು ತುರುವೇಕೆರೆ ತಾಲೂಕು ದಂಡಿನಶಿವರ ಹೋಬಳಿ ಸಿದ್ದನಹಟ್ಟಿ ಗ್ರಾಮದ ಕೆಂಪಯ್ಯ ಬಿನ್ ಕೆಂಪಯ್ಯ ಇವರ ಹೆಸರಿಗೆ ಖಾತೆ ಇದ್ದು ಇವರ ಮರಣದ ನಂತರ ಇವರ ಹೆಂಡತಿ ಮಾಳಮ್ಮನಿಗೆ 1.08 ಎಕರೆ ಜಮೀನು ವಿಭಾಗದ ಮೂಲಕ ಬಂದು ಇವರು 1978 ರಲ್ಲಿ ಜಮೀನು ಮಾರಾಟ ಮಾಡಿರುತ್ತಾರೆ. ಉಳಿಕೆ ಜಮೀನಿನಲ್ಲಿ ನಮ್ಮ ತಂದೆ ಶ್ಯಾನ್ ಬೋಗ್ ನರಸಿಂಹಯ್ಯ 1979 ರಲ್ಲಿ ಕೆಂಪಯ್ಯ ನವರಿಂದ ನಾವು 19/1ರಲ್ಲಿ 1.23 ಎಕರೆ ನಮಗೆ ಶುದ್ದ ಕ್ರಯಕ್ಕೆ ತೆಗೆದುಕೊಂಡು ಸುಮಾರು 60 ವರ್ಷಗಳಿಂದ ಅನುಭವದಲ್ಲಿ…
ನಮ್ಮ ಜೀವನದಲ್ಲಿ ನಾನಾ ರೀತಿಯ ವ್ಯಕ್ತಿಗಳು ಎದುರಾಗುತ್ತಾರೆ. ಕೆಲವರು ಸೌಮ್ಯ ಸ್ವಭಾವದವರಾಗಿದ್ದರೆ, ಇನ್ನು ಕೆಲವರು ನಮ್ಮ ತಾಳ್ಮೆಯನ್ನು ಪರೀಕ್ಷಿಸುವಂತಿರುತ್ತಾರೆ. ಕಚೇರಿಯಲ್ಲಿ ಕಿರಿಕಿರಿ ಉಂಟುಮಾಡುವ ಸಹೋದ್ಯೋಗಿ ಇರಬಹುದು ಅಥವಾ ಸದಾ ಟೀಕಿಸುವ ಸಂಬಂಧಿಕರಿರಬಹುದು; ಇಂತಹವರನ್ನು ನಿಭಾಯಿಸುವುದು ಮಾನಸಿಕವಾಗಿ ದಣಿವು ಉಂಟುಮಾಡುತ್ತದೆ. ಆದರೆ ನಮ್ಮ ಶಾಂತಿಯನ್ನು ಕಳೆದುಕೊಳ್ಳದೆ ಇವರನ್ನು ಹೇಗೆ ಎದುರಿಸಬೇಕು ಎಂಬುದಕ್ಕೆ ಇಲ್ಲಿವೆ ಕೆಲವು ಪರಿಣಾಮಕಾರಿ ಟಿಪ್ಸ್: ೧. ನಂಬಿಕಸ್ತ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಿ: ಮನಸ್ಸಿನಲ್ಲಿರುವ ನೋವು ಅಥವಾ ಕಿರಿಕಿರಿಯನ್ನು ತಪ್ಪು ವ್ಯಕ್ತಿಯ ಮುಂದೆ ತೋಡಿಕೊಂಡರೆ ಅದು ನಿಮ್ಮ ಕೋಪವನ್ನು ಹೆಚ್ಚಿಸಬಹುದು. ಬದಲಾಗಿ, ನಿಮ್ಮನ್ನು ಅರ್ಥಮಾಡಿಕೊಳ್ಳುವ ಮತ್ತು ನಿಮಗೆ ಸಾಂತ್ವನ ನೀಡುವ ನಂಬಿಕಸ್ತ ಸ್ನೇಹಿತರೊಂದಿಗೆ ಮಾತನಾಡಿ. ಇದರಿಂದ ನಿಮ್ಮ ಮಾನಸಿಕ ಒತ್ತಡ (Cortisol level) ಶೇ. ೨೦–೩೦ ರಷ್ಟು ಕಡಿಮೆಯಾಗುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ. ೨. ಮಾನಸಿಕವಾಗಿ ಸಿದ್ಧರಾಗಿರಿ: ಕೆಲವು ವ್ಯಕ್ತಿಗಳು ಸದಾ ಒಂದೇ ರೀತಿಯಲ್ಲಿ ವರ್ತಿಸುತ್ತಾರೆ. ಅವರ ವರ್ತನೆಯ ಮಾದರಿಯನ್ನು ಗಮನಿಸಿ ನೀವು ಮೊದಲೇ ಮಾನಸಿಕವಾಗಿ ಸಿದ್ಧರಾದರೆ, ಅವರು ಎಷ್ಟೇ ಕೆಟ್ಟದಾಗಿ ವರ್ತಿಸಿದರೂ…
ಬೀದರ್/ ಔರಾದ: ತಾಲೂಕಿನ ಸಂತಪುರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ತಯಾರಕರ ಫೆಡರೇಷನ್ ನ ತಾಲೂಕು ಅಧ್ಯಕ್ಷ ರಾಜಕುಮಾರ ಶೆಂಬೆಳ್ಳಿ ಅವರನ್ನುಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರುಗಳಾದ ಮಲ್ಲಮ್ಮ, ಶಿಕ್ಷಕಿ ಗೀತಾ, ಶಿಕ್ಷಕರಾದ ಬಾಬುರಾವ್ ಹಾಗೂ ಬಸವರಾಜ್ ಉಪಸ್ಥಿತರಿದ್ದರು. ಅಲ್ಲದೆ ಮುಖಂಡರಾದ ಎಸೆಪ್ಪ ಸೇಂಬೆಳ್ಳಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, ಬಿಸಿಯೂಟ ಯೋಜನೆಯ ಯಶಸ್ಸಿನಲ್ಲಿ ತಯಾರಕರ ಪಾತ್ರ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಬೀದರ್: ಹಿರಿಯ ರಾಜಕಾರಣಿ ಹಾಗೂ ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರು ಕಂಡುಬಂದಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 102 ವಯಸ್ಸಿನ ಭೀಮಣ್ಣ ಖಂಡ್ರೆ ಅವರು ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ. ಅವರ ಆರೋಗ್ಯ ಸ್ಥಿತಿಯನ್ನು ಗಮನಿಸಿ ಕುಟುಂಬಸ್ಥರು ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ರಾಜ್ಯದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ತಂದೆಯಾಗಿರುವ ಭೀಮಣ್ಣ ಖಂಡ್ರೆ ಅವರು ಹೈದರಾಬಾದ್ ಕರ್ನಾಟಕ ಭಾಗದ ಪ್ರಭಾವಿ ನಾಯಕರಾಗಿದ್ದಾರೆ. ಅವರ ಆರೋಗ್ಯ ಚೇತರಿಕೆಗಾಗಿ ಅಭಿಮಾನಿಗಳು ಮತ್ತು ಬೆಂಬಲಿಗರು ಪ್ರಾರ್ಥಿಸುತ್ತಿದ್ದಾರೆ. ಪ್ರಸ್ತುತ ಅವರು ವೈದ್ಯರ ನಿಗಾದಲ್ಲಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ವರದಿ: ಅರವಿಂದ್ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಗುಬ್ಬಿ: ತಾಲೂಕಿನ ಸೋಮಲಾಪುರ, ಚೇಳೂರು ಹಟ್ಟಿ, ಎಣ್ಣೆ ಕಟ್ಟೆ ಗ್ರಾಮಗಳಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಶಾಸಕ ಎಸ್.ಆರ್. ಶ್ರೀನಿವಾಸ್ ಮಾತನಾಡಿ, ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊರೆಸಿ ಕೊಟ್ಟಿದ್ದೇವೆ, ಈ ಬಾರಿ ರೈತರಿಗೆ 150 ಬೋರ್ವೆಲ್ ಗಳನ್ನು ಇನ್ನು ಮುಂದೆಯೂ ಕೂಡ ಬೋರ್ವೆಲ್ ಗಳನ್ನು ರೈತರಿಗೆ ಕೊರಸಿ ಕೊಟ್ಟಿದ್ದೇವೆ ಇನ್ನ ಮುಂದೆವೂ ಕೂಡ ರೈತರಿಗೆ ಬೋರ್ವೆಲ್ ಗಳನ್ನು ಕೊರೆಸಿಕೊಡುತ್ತೇವೆ. ಸಿಎಂ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ ಅದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಪಕ್ಷಕ್ಕೆ ಡ್ಯಾಮೇಜ್ ಆಗೋ ಕೆಲಸವನ್ನು ಯಾವತ್ತೂ ಮಾಡುವುದಿಲ್ಲ ನನಗೂ ತಿಳುವಳಿಕೆ ಇದೆ ಕೆಪಿಸಿಸಿಯಲ್ಲಿ ನಾನೇನು ದೊಡ್ಡ ನಾಯಕನಲ್ಲ ಕೆಪಿಸಿಸಿ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು. ಇದೇ ಸಂದರ್ಭದಲ್ಲಿ ಬಿದರೆ ಯತೀಶ್, ಶಿವಾಜಿ ರಾವ್, ಸಣ್ಣ ರಂಗಯ್ಯ ಮತ್ತಿತರ ಗ್ರಾಮಸ್ಥರು ಹಾಜರಿದ್ದರು. ವರದಿ: ಚೇತನ್ ಗೌಡ, ಗುಬ್ಬಿ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್…
ಬೆಂಗಳೂರು: ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಭಾಷೆಯನ್ನು ಪ್ರಥಮ ಭಾಷೆಯಾಗಿ ಕಡ್ಡಾಯಗೊಳಿಸುವ ಕೇರಳ ಸರ್ಕಾರದ ಪ್ರಸ್ತಾವಿತ ಮಸೂದೆಯ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮಸೂದೆಯ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಸರಗೋಡು ಸೇರಿದಂತೆ ಗಡಿ ಜಿಲ್ಲೆಗಳಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಕಡ್ಡಾಯಗೊಳಿಸುವುದರಿಂದ ಕನ್ನಡಿಗರಿಗೆ ತೊಂದರೆಯಾಗುತ್ತದೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಈಗಾಗಲೇ ಪತ್ರ ಬರೆಯಲಾಗಿದೆ ಅಂತ ತಿಳಿಸಿದ್ದಾರೆ. ಸಾಂವಿಧಾನಿಕ ಹಕ್ಕುಗಳ ಬಳಕೆ: ಒಂದು ವೇಳೆ ಕೇರಳ ಸರ್ಕಾರ ಈ ಮಸೂದೆಯನ್ನು ಜಾರಿಗೆ ತಂದರೆ, ಭಾಷಾ ಅಲ್ಪಸಂಖ್ಯಾತರ ಹಿತರಕ್ಷಣೆಗಾಗಿ ಮತ್ತು ದೇಶದ ಬಹುತ್ವವನ್ನು ಕಾಪಾಡಲು ಕರ್ನಾಟಕ ಸರ್ಕಾರವು ಲಭ್ಯವಿರುವ ಎಲ್ಲಾ ಸಾಂವಿಧಾನಿಕ ಹಕ್ಕುಗಳನ್ನು ಚಲಾಯಿಸಿ ಇದನ್ನು ವಿರೋಧಿಸಲಿದೆ ಎಂದು ಸಿಎಂ ತಿಳಿಸಿದ್ದಾರೆ. ನಿಯೋಗದ ಮನವಿ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಕಾಸರಗೋಡು ಕನ್ನಡಿಗರ ನಿಯೋಗವು ಸಿಎಂ…
ಸುಂದರ ಹಾಗೂ ಸದೃಢವಾದ ದೇಹವನ್ನು ಪಡೆಯುವುದು ಕೇವಲ ಜಿಮ್‌ನಲ್ಲಿ ವರ್ಕೌಟ್ ಮಾಡುವುದರಿಂದ ಮಾತ್ರ ಸಾಧ್ಯವಿಲ್ಲ. ವ್ಯಾಯಾಮದ ಜೊತೆಗೆ ನಾವು ಸೇವಿಸುವ ಆಹಾರವೂ ಅಷ್ಟೇ ಮುಖ್ಯ ಪಾತ್ರ ವಹಿಸುತ್ತದೆ. ಮಾಂಸಖಂಡಗಳನ್ನು (Muscles) ಬಲಪಡಿಸಲು ಮತ್ತು ದೇಹದ ಶಕ್ತಿ ಹೆಚ್ಚಿಸಲು ಸಹಕಾರಿಯಾದ 7 ಪ್ರಮುಖ ಆಹಾರಗಳ ಪಟ್ಟಿ ಇಲ್ಲಿದೆ. 1. ಚಿಕನ್ ಬ್ರೆಸ್ಟ್ (Chicken Breast): ಮಾಂಸಖಂಡಗಳ ಬೆಳವಣಿಗೆಗೆ ಪ್ರೋಟೀನ್ ಅತ್ಯಗತ್ಯ. ಚಿಕನ್ ಬ್ರೆಸ್ಟ್‌ನಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಇದ್ದು, ಕೊಬ್ಬಿನಂಶ ಕಡಿಮೆಯಿರುತ್ತದೆ. ಇದು ಸ್ನಾಯುಗಳ ಪುನರ್ನಿರ್ಮಾಣಕ್ಕೆ ಬಹಳ ಸಹಕಾರಿ. 2. ಗ್ರೀಕ್ ಮೊಸರು (Greek Yogurt): ಸಾಮಾನ್ಯ ಮೊಸರಿಗಿಂತ ಗ್ರೀಕ್ ಮೊಸರಿನಲ್ಲಿ ಪ್ರೋಟೀನ್ ಪ್ರಮಾಣ ದುಪ್ಪಟ್ಟು ಇರುತ್ತದೆ. ಇದರಲ್ಲಿ ವೇ (Whey) ಮತ್ತು ಕ್ಯಾಸಿನ್ (Casein) ಎಂಬ ಎರಡು ರೀತಿಯ ಪ್ರೋಟೀನ್‌ಗಳಿದ್ದು, ಇವು ಸ್ನಾಯುಗಳ ಬೆಳವಣಿಗೆಗೆ ದೀರ್ಘಕಾಲದವರೆಗೆ ಶಕ್ತಿ ನೀಡುತ್ತವೆ. 3. ಮೊಟ್ಟೆಗಳು (Eggs): ಮೊಟ್ಟೆಗಳನ್ನು ‘ಸಂಪೂರ್ಣ ಆಹಾರ’ ಎಂದು ಕರೆಯಲಾಗುತ್ತದೆ. ಇದರಲ್ಲಿ ಉತ್ತಮ ಗುಣಮಟ್ಟದ ಪ್ರೋಟೀನ್ ಜೊತೆಗೆ ವಿಟಮಿನ್ ಬಿ ಮತ್ತು…
ವಿಜಯಪುರ: ಕೇಂದ್ರ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜಯಪುರ (ಬಿಜಾಪುರ) ಸೈನಿಕ ಶಾಲೆಯಲ್ಲಿ ಖಾಲಿ ಇರುವ ವಿವಿಧ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು 18 ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗಳ ವಿವರ ಹಾಗೂ ಸಂಖ್ಯೆ: ಪಿಜಿಟಿ (PGT): 02 ಹುದ್ದೆಗಳು (ರಸಾಯನಶಾಸ್ತ್ರ — 1, ಇಂಗ್ಲಿಷ್ — 1) ಟಿಜಿಟಿ (TGT): 07 ಹುದ್ದೆಗಳು (ಇಂಗ್ಲಿಷ್ — 2, ಜೀವಶಾಸ್ತ್ರ — 1, ಗಣಿತ — 1, ಕನ್ನಡ — 1, ಭೌತಶಾಸ್ತ್ರ — 1, ಸಮಾಜ ವಿಜ್ಞಾನ — 1) ವಾರ್ಡ್ ಬಾಯ್ಸ್: 04 ಹುದ್ದೆಗಳು ಸಂಗೀತ ಶಿಕ್ಷಕರು: 01 ಹುದ್ದೆ ಸಮಾಲೋಚಕರು (Counsellor): 01 ಹುದ್ದೆ ಕ್ರಾಫ್ಟ್ ಇನ್ಸ್ಟ್ರಕ್ಟರ್: 01 ಹುದ್ದೆ ಪಿಇಎಂ/ಪಿಟಿಐ ಕಮ್ ಮ್ಯಾಟ್ರಾನ್: 01 ಹುದ್ದೆ ನರ್ಸಿಂಗ್ ಸಿಸ್ಟರ್: 01 ಹುದ್ದೆ ಶೈಕ್ಷಣಿಕ ಅರ್ಹತೆ:…
ಸರಗೂರು: ಮೊಬೈಲ್ ಮತ್ತು ಟಿವಿ ಮಾಧ್ಯಮದ ಪ್ರಭಾವದಿಂದ ಕ್ರೀಡೆಗಳು ನಶಿಸಿ ಹೋಗುತ್ತಿರುವ ಕಾಲಘಟ್ಟದಲ್ಲಿ ಅರ್ಜುನ ಯೂತ್ಸ್ ಸ್ಪೋರ್ಟ್ ಕ್ಲಬ್ ಬಳಗದವರು ಗ್ರಾಮೀಣ ಭಾಗದ ಊರ ಯುವಕರಿಗೆ ಪಂದ್ಯಾವಳಿಯನ್ನು ಆಯೋಜಿಸಿ ಅಭಿವೃದ್ಧಿ ಮತ್ತು ಸಂಬಂಧದ ಬೆಸುಗೆಗೆ ಮುನ್ನುಡಿ ಬರೆಯುತ್ತಿರುವುದು ಮಾದರಿಯಾಗಿದೆ ಎಂದು ಎಚ್.ಡಿ.ಕೋಟೆ ಪುರಸಭೆ ಸದಸ್ಯ ಎಚ್.ಸಿ.ನರಸಿಂಹಮೂರ್ತಿ ಹೇಳಿದರು. ಪಟ್ಟಣದ ಜಯಚಾಮರಾಜೇಂದ್ರ ಕ್ರೀಡಾಂಗಣದಲ್ಲಿ ಶನಿವಾರದಂದು ನಡೆದ ಮೊದಲನೇಯ ವರ್ಷ ತಾಲೂಕು ಮಟ್ಟದ ಅರ್ಜುನ ವಾಲಿಬಾಲ್ ಪ್ರೀಮಿಯರ್ ಲೀಗ್– 2026 ಅರ್ಜುನ ಯೂತ್ಸ್ ಸ್ಪೋರ್ಟ್ ಕ್ಲಬ್ ವತಿಯಿಂದ ವಾಲಿಬಾಲ್ ಪಂದ್ಯಾವಳಿಯ ಅಂಬಾರಿ ಹೊತ್ತ ಅರ್ಜುನ ಆನೆ ಪೋಟೋ ಗೆ ಪುಷ್ಪಾರ್ಚನೆ ಸಲ್ಲಿಸಿ ಹಾಗೂ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ಎಲ್ಲರಲ್ಲೂಒಂದೊಂದು ಪ್ರತಿಭೆ ಇದ್ದೇ ಇರುತ್ತದೆ. ಇದನ್ನು ಆತ್ಮವಿಶ್ವಾಸ ಹಾಗೂ ಮನೋಬಲದಿಂದ ಪ್ರಯೋಗಕ್ಕೆ ಒಳಪಡಿಸಿ ಸಾಧನೆ ಮೆರೆಯುವಂತಾಗಬೇಕು ಎಂದರು. ಯುವಕರು ಕ್ರೀಡೆಗಳಲ್ಲಿ ತಮ್ಮ ಪ್ರತಿಭೆ ತೋರಿಸುವ ಕೆಲಸ ಮಾಡಬೇಕು. ದಿನನಿತ್ಯದ ಕೆಲಸಗಳಲ್ಲೇ ತೊಡಗಿಕೊಂಡರೆ ಆಸಕ್ತಿ ಕಳೆದುಕೊಳ್ಳುತ್ತಾರೆ. ರಜಾ ದಿನಗಳಲ್ಲಿ ಆಯೋಜಿಸುವ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ತಮ್ಮಲ್ಲೇ…