Author: admin

ಬೆಂಗಳೂರು: ಮನೆ ಬಾಗಿಲಿಗೆ ಹಾಕಿದ್ದ ಬೀಗ ಒಡೆದು ಚಿನ್ನಾಭರಣ ಹಾಗೂ ನಗದು ಕಳವು ಮಾಡುತ್ತಿದ್ದ ಆರೋಪಿಯನ್ನು ಗೋವಿಂದರಾಜನಗರ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ರಾಮನಗರ ಜಿಲ್ಲೆ ಕನಕಪುರದ ಕುರುಪೇಟೆಯ ಗೋಪಿನಾಥ್ ಅಲಿಯಾಸ್ ಗೋಪಿ ಬಂಧಿತ ಆರೋಪಿ, ಈತ ನಗರದ ಕೋಣನಕುಂಟೆಯ ಬೀರೇಶ್ವರ ನಗರದಲ್ಲಿ ನೆಲೆಸಿದ್ದ. ಬಂಧಿತನಿಂದ 76.50 ಲಕ್ಷದ 107 ಚಿನ್ನಾಭರಣ, ‍ 1.14 ಲಕ್ಷ ನಗದು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Read More

ನಾಡಿನ ಅರಣ್ಯ ಮತ್ತು ವನ್ಯಜೀವಿಗಳ ಸಂಪತ್ತನ್ನು ಸಂರಕ್ಷಿಸಲು ಪ್ರಾಣ ತ್ಯಾಗ ಮಾಡಿದ ಹುತಾತ್ಮರಾದ ಅರಣ್ಯ ಸಿಬ್ಬಂದಿಗಳಿಗೆ ಇಂದು ಅರಣ್ಯ ಇಲಾಖೆ ಗೌರವ ನಮನಗಳನ್ನು ಸಲ್ಲಿಸಿತು. ಬೆಳಗಾವಿ ವೃತ್ತದ ಅರಣ್ಯ ಇಲಾಖೆ ಸಂಕೀರ್ಣದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ವತಿಯಿಂದ ಪರೇಡ್ ಗೌರವ ವಂದನೆ ಸಲ್ಲಿಸಲಾಯಿತು. ಮುಖ್ಯ ಅತಿಥಿಗಳು ಹಾಗೂ ಮುಖ್ಯ  ಸಂರಕ್ಷಣಾಧಿಕಾರಿಗಳು ಅತಿಥಿಗಳು ಇಲಾಖೆಯ ಅಧಿಕಾರಿ ವರ್ಗ, ವಿವಿಧ ಸಂಘದ ಪದಾಧಿಕಾರಿಗಳು, ಅರಣ್ಯ ಹುತಾತ್ಮರವರಿಗೆ ಹೂ ಗುಚ್ಚ ಅರ್ಪಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಲ್ಲಾಧಿಕಾರಿಗಳಾದ ನಿತೀಶ್ ಪಾಟೀಲ್ ಅವರು ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡುತ್ತಾ ಅರಣ್ಯ ಸಿಬ್ಬಂದಿ ಕೆಲಸ ಸುಲಭದ ಕೆಲಸವಲ್ಲ ತಮ್ಮ ಜೀವದ ಹಂಗಿಲ್ಲದೆ ಕಾರ್ಯನಿರ್ವಹಿಸುತ್ತಿರುತ್ತಾರೆ. ಹಾಸನದಲ್ಲಿ ಆನೆಯ ದಾಳಿಗೆ ಅರಣ್ಯ ಸಿಬ್ಬಂದಿ ಹುತಾತ್ಮರನ್ನು ಸ್ಮರಣೆ ಮಾಡಿದರು. ಅತಿಥಿಯಾಗಿ ಪ್ರಧಾನಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ವಿಜಯಲಕ್ಷ್ಮಿ ದೇವಿ, ಮಂಜುನಾಥ್ ಚವ್ಹಾಣ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ, ಪೊಲೀಸ್ ಆಯುಕ್ತರಾದ ಸಿದ್ದರಾಮಪ್ಪ, ಕಮಾಂಡರ್ ಪಿ.ಸಿ.ವಿಂಗ್ ಬ್ರಿಗೇಡ್ ಸಿ.ದಯಾಲನ್,  ಜಿಲ್ಲಾ ಪೊಲೀಸ್…

Read More

ಬೈಲಹೊಂಗಲ: ಸಹಕಾರಿ ಸಂಘಗಳು ರೈತರನ್ನು ಆರ್ಥಿಕವಾಗಿ ಬೆಳವಣಿಗೆಗೆ ಹೊಂದಲು ಅತ್ಯಂತ ಮಹತ್ವವನ್ನು ಹೊಂದಿದ್ದು ರೈತರು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸವದತ್ತಿ ತಾಲೂಕಿನ ಡಿಸಿಸಿ ಬ್ಯಾಂಕ್ ನಿರ್ದೇಶಕಿ ರತ್ನಕ್ಕಾ ಮಾಮನಿ ಹೇಳಿದರು. ಸಮೀಪದ ಹೊಸೂರ ಗ್ರಾಮದ ಶತಮಾನದ ಅಂಚಿನಲ್ಲಿರುವ ಪ್ರಾಕೃಪಸ ಸಂಘದ ನೂತನ ಕೃಷಿ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ರೈತರ ಕೃಷಿ ಚಟುವಟಿಕೆಗಳಿಗೆ ಶೂನ್ಯ ಬಡ್ಡಿದರದಲ್ಲಿ ಬೆಳೆಸಾಲ ಹಾಗೂ ಪ್ರತಿಶತ 3ರಂತೆ ದೀರ್ಘಾವಧಿಯ ಸಾಲವನ್ನು ಡಿಸಿಸಿ ಬ್ಯಾಂಕ್ ಮುಖಾಂತರ ರೈತರಿಗೆ ವಿತರಿಸುತಿದ್ದು ಅದನ್ನು ಸದುಪಯೋಗ ಪಡಿಸಿಕೊಂಡು ಸಕಾಲಕ್ಕೆ ಮರುಪಾವತಿಬೇಕು. ದಿ. ಆನಂದ ಮಾಮನಿಯವರು ತಾಲೂಕಿನ ಸಹಕಾರಿ ಸಂಘಗಳ ಬೆಳವಣಿಗೆಗ ಸಾಕಷ್ಟು ಮುತವರ್ಜಿವಹಿಸಿದ್ದರು. ಅವರಿಗೆ ನೀಡಿದ ಸಹಕಾರದಿಂದ ತಾಲೂಕಿನ ಸಂಘಗಳು ಆರ್ಥಿಕವಾಗಿ ಸದೃಡವಾಗುವದರೊಂದಿಗೆ ಸ್ವಂತ ಕಟ್ಟಡ ನಿರ್ಮಾಣವಾಗುತ್ತಿವೆ ಎಂದರು. ಸವದತ್ತಿ ಎಪಿಎಂಸಿ ಮಾಜಿ ಅಧ್ಯಕ್ಷ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ಬ್ರಿಟಿಷ್ ಸರ್ಕಾರದ ಅವಧಿಯಲ್ಲಿ 1930ರಲ್ಲಿ ಸಾವಿರ ರೂಪಾಯಿ ಬಂಡವಾಳದಿಂದ ಗ್ರಾಮದ ಹಿರಿಯರು ಪ್ರಾರಂಭಿಸಿದ ಸಂಸ್ಥೆ ಇಂದು 10ಕೋಟಿ ರೂಪಾಯಿ ವಹಿವಾಟ ನಡೆಸುವದರೊಂದಿಗೆ 14ನೂರು ರೈತ…

Read More

ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ 21 ವರ್ಷದ ಯುವಕನೊಬ್ಬ ತನ್ನ ತಂದೆ ಮತ್ತು ಅಜ್ಜನನ್ನು ಕೊಂದಿದ್ದಾನೆ. ಕೌಟುಂಬಿಕ ಸಮಸ್ಯೆಯೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ. ಸೆಪ್ಟೆಂಬರ್ 7ರ ರಾತ್ರಿ ಜೋಡಿ ಕೊಲೆ ನಡೆದಿತ್ತು. ವಿಕ್ರಮಜಿತ್ ರಾವ್ ಮತ್ತು ರಾಮ್‌ಕುಮಾರ್ ಹತ್ಯೆಯಾದವರು. ಕೌಟುಂಬಿಕ ಕಲಹದಿಂದ ವಿಕ್ರಮಜಿತ್ ರಾವ್ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಘಟನೆಯ ರಾತ್ರಿ ಆರೋಪಿಗಳು ಡಂಕೌರ್‌ನ ಬಲ್ಲು ಖೇರಾ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಫಿಲ್ಮ್ ಸ್ಟುಡಿಯೋಗೆ ಬಂದು ಜಾಸ್ಮಿನ್ ತಂದೆಯ ಮೇಲೆ ಹಲ್ಲೆ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಜಾಸ್ಮಿನ್ ಸ್ಟುಡಿಯೋದಲ್ಲಿಟ್ಟಿದ್ದ ಕೊಡಲಿಯಿಂದ ರವಿಯ ಮುಖ, ಕತ್ತು ಮತ್ತು ತಲೆಗೆ ತುಂಡರಿಸಿದ್ದಾಳೆ. ಕಿರುಚಾಟ ಕೇಳಿ ಎಚ್ಚರಗೊಂಡ ರೋಡ್‌ವೇಸ್‌ನ ನಿವೃತ್ತ ಉದ್ಯೋಗಿ ಅಜ್ಜ ರಾಮ್‌ ಕುಮಾರ್ ಅವರ ಮೇಲೂ ಜಾಸ್ಮಿನ್ ಹಲ್ಲೆ ನಡೆಸಿದ್ದಾರೆ. ರಾಮ್‌ ಕುಮಾರ್ ಗುರುತು ಹಿಡಿಯುವ ಭೀತಿಯಿಂದ ಹಲ್ಲೆ ನಡೆಸಲಾಗಿದೆ. ಕತ್ತರಿಸಿದರೂ ರಾಮಕುಮಾರ್ ಚಲಿಸುತ್ತಿರುವುದನ್ನು ಕಂಡ ಜಾಸ್ಮಿನ್ ಅವರು ತಪ್ಪಿಸಿಕೊಳ್ಳುವ ಭಯದಲ್ಲಿ ಸುತ್ತಿಗೆಯಿಂದ ತಲೆಗೆ ಹಲವು ಬಾರಿ…

Read More

ಬೆಂಗಳೂರು: 2023ರ ಡಿಸೆಂಬರ್ 11ರಂದು ಮಾದಿಗ ಸಮುದಾಯದ ರಾಜ್ಯಮಟ್ಟದ ಬೃಹತ್ ಸಮಾವೇಶ ನಡೆಯಲಿದ್ದು, ಈ ಬಗ್ಗೆ ಬೆಂಗಳೂರಿನ ಲಿಡಕರ್ ಭವನದಲ್ಲಿ ಇಂದುಪೂರ್ವಭಾವಿ ಸಭೆ ಯಶಸ್ವಿಯಾಗಿ ನಡೆಯಿತು. ತುಮಕೂರಿನ ಜನ ಧ್ವನಿ ಪತ್ರಿಕೆಯ ಸಂಪಾದಕರಾದ ರಾಮಯ್ಯ ಅವರು ಈ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಭೀಮಾಶಂಕರ್ SCP/TSP ಮೀಸಲು ಹಣದ ಬಗ್ಗೆ ಉಪನ್ಯಾಸ ನೀಡಿದರು. ಸರ್ಕಾರದ ಅಧೀನ ಕಾರ್ಯದರ್ಶಿಗಳಾಂತಹ ಎಸ್.ಮೂರ್ತಿ ಮಾತನಾಡಿ, ದಲಿತರು ಸ್ವಾವಲಂಬಿಗಳಾಗಬೇಕು, ಸರ್ಕಾರ ನೀಡುವ ಸವಲತ್ತುಗಳ ಬಗ್ಗೆ ಪರಿಪೂರ್ಣವಾಗಿ ಅರಿತು ಅದನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗುವಂತೆ ಕರೆ ನೀಡಿದರು. ಮಾತಂಗ ಪೌಂಡೇಷನ್ ಅಧ್ಯಕ್ಷರಾದ  ಆರ್.ಲೋಕೇಶ್, ಆದಿಜಾಂಬವ ಸಂಘ ಅಧ್ಯಕ್ಷರಾದ ಜಂಬೂದ್ವೀಪ ಸಿದ್ದರಾಜು, ಜೈ ಮಾದಿಗ ಬೌದ್ದಿಕ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ಬಿ.ಆರ್.ಮುನಿರಾಜು, ಶ್ರೀ ಜಾಂಬವ ರಮೇಶ್ ಕುಮಾರ್ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು.  ಯುವ ಮುಖಂಡರಾದ ಪ್ರವೀಣ್ ರವರು ಮೀಡಿಯಾ ಸಹಕಾರದೊಂದಿಗೆ ಅಚ್ಚುಕಟ್ಟಾಗಿ ಈ ಕಾರ್ಯಕ್ರಮ ರೂಪಿಸಿದ್ದರು. ಮಹಿಳಾ ಮುಂಚೂಣಿ ಮುಖಂಡರಾದ ಸುಜಾತ ಬೈಲಪ್ಪ, ಕೂಡ್ಲಗಿ ವಿಶಾಲಾಕ್ಷಿ, ನೆಲಮಂಗಲ ತಾಲ್ಲೂಕಿನ  ಉಮಾದೇವಿ…

Read More

ಕ್ರೀಡಾ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಹೆಚ್ಚಾಗಿ ಭಾಗವಹಿಸುವಂತಾಗಬೇಕು ಎಂದು ಬಿಇಓ ನಟರಾಜು ಹೇಳಿದರು. ಪಟ್ಟಣದ ರವೀಂದ್ರ ಭಾರತಿ ಪ್ರೌಢಶಾಲೆಯಲ್ಲಿ ಶಾಲಾ ನಾಯಕರುಗಳ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ ಮತ್ತು ಹೋಬಳಿ ಮಟ್ಟದ ಕ್ರೀಡೆಗಳ ಪ್ರತಿಭಾ ಕಾರಂಜಿಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತುಮಕೂರು ವಿಶ್ವವಿದ್ಯಾಲಯಲದಲ್ಲಿ ಬಿಎಸ್ಸಿ ವಿಭಾಗದ ಗಣಿತಶಾಸ್ತ್ರದಲ್ಲಿ ಹೆಚ್ಚಿನ ಅಂಕಗಳಿಸಿ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ವೈಷ್ಣವಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ  ಗೌರವಿಸಲಾಯಿತು. ಈ ಕಾರ್ಯಕ್ರಮದ ವೇಳೆ ಶಾಲಾ ನಾಯಕರುಗಳಿಗೆ ವಿದ್ಯಾಸಂಸ್ಥೆಗಳು ಪ್ರತಿಜ್ಞಾವಿಧಿ ಭೋಧಿಸಿದರು, ಈ ವೇಳೆ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಈ ವೇಳೆ ಹೊಳವನಹಳ್ಳಿ ಪಿಯು ಕಾಲೇಜಿನ ಪ್ರಾಶುಂಪಾಲರಾದ ವೀರಣ್ಣ, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಹನುಮಂತರಾಯಪ್ಪ, ರವೀಂದ್ರ ವಿದ್ಯಾಸಂಸ್ಥೆಯ ಉಪಾಧ್ಯಕ್ಷರು ಶ್ರೀಮತಿ ಉಮಾಜಗಧೀಶ್ವರ್, ಕಾರ್ಯದರ್ಶಿ ಶೋಭಾ ಕೃಷ್ಣಮೂರ್ತಿ, ನವೀನ್ ಕುಮಾರ್, ಖಚಾಂಚಿ ಆದಿ ರಮೇಶ್, ಸಲಹಾಗಾರರಾದ ಶ್ರೀ ಲಕ್ಷ್ಮೀನರಸಿಂಹಮೂರ್ತಿ, ಪಿಯು ಕಾಲೇಜಿನ ಪ್ರಾಶುಂಪಾಲರಾದ ಶ್ರೀಮತಿ ಚೈತ್ರಾ, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರು ಶಿವಗಂಗಾ, ದೈಹಿಕ…

Read More

ಮಧುಗಿರಿ: ರಾಜಕೀಯ ಜೀವನದಲ್ಲಿ ಅಧಿಕಾರ ಇಂದು ಇದ್ದು ನಾಳೆ ಇರಲ್ಲ, ಆದರೆ ಶಿಕ್ಷಕರ ಜೀವನದಲ್ಲಿ ಶಿಕ್ಷಣ ನೀಡುವ ಅಧಿಕಾರ ಕೊನೆವರೆಗೂ ಉಳಿಯುತ್ತೆ ಎಂದು  ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ತಿಳಿಸಿದರು. ಮಧುಗಿರಿ ಪಟ್ಟಣದ ಮಾಲಿಮರಿಯಪ್ಪ ರಂಗ ಮಂದಿರದಲ್ಲಿ ಶಿಕ್ಷಣ ಇಲಾಖೆ ತಾಲೂಕ್ ಆಡಳಿತ ತಾಲೂಕು ಪಂಚಾಯತ್ ಇಲಾಖೆಗಳ ಸಹಯೋಗದಲ್ಲಿ ಶನಿವಾರ ನಡೆದ ಡಾ ಸರ್ವಪಲ್ಲಿ ರಾಧಾಕೃಷ್ಣ ರವರ 136 ನೇ ಜಯಂತಿ ಮತ್ತು ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಏಳು ಕೋಟಿ ಜನಸಂಖ್ಯೆ ಇದೆ ಅದರಲ್ಲಿ ಶಿಕ್ಷಕರು ಆಗುವಂತಹರು ಕೆಲವರು  ಭಗವಂತ ಅವರಿಗೆ ನೀಡಿರುವ ಶಕ್ತಿ ಅಂತ ನಾವು ಸ್ಮರಣೆ ಮಾಡಬೇಕು, ತಂದೆ ತಾಯಿ ಜನ್ಮ ಕೊಟ್ಟಿರಬಹುದು ಆದರೆ ಮಕ್ಕಳನ್ನು ತಿದ್ದಿ ಸಮಾಜದಲ್ಲಿ ಉನ್ನತ ಮಟ್ಟಕ್ಕೆ ತಲುಪಿಸುವ ಶಕ್ತಿ ಶಿಕ್ಷಕರಿಗೆ ಮಾತ್ರ ಇದೆ,  ಕಳೆದ 40 ರಿಂದ 50 ವರ್ಷಗಳ ಹಿಂದೆ ಹೆಣ್ಣು ಮಕ್ಕಳಲ್ಲಿ ಶಿಕ್ಷಣದ ಕೊರತೆ ತೀರ ಇತ್ತು, ಇಂದು ಸಹ ಕೆಲವು…

Read More

ತುಮಕೂರು: ವ್ಯಕ್ತಿ ಒಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ತುಮಕೂರಿನ ಶಿರಾಗೇಟ್ ಎಚ್.ಎಂ.ಎಸ್ ಶಾಲೆ ಬಳಿ ನಡೆದಿದೆ. ಗ್ಯಾಸ್ ವಿಜಯ್ ಮೃತ ವ್ಯಕ್ತಿಯಾಗಿದ್ದಾರೆ. ಕೌಟುಂಬಿಕ ಕಲಹದಿಂದ ವ್ಯಕ್ತಿ ಈ ರೀತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ತುಮಕೂರಿನ ಅರಳಿಮರಪಾಳ್ಯದ ನಿವಾಸಿಯಾಗಿದ್ದಾರೆ. ಆಟೋ ಚಾಲಕನಾಗಿದ್ದ ವಿಜಯ್ ಶವದ ಪಕ್ಕ ವಿಷದ ಬಾಟಲು ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ತುಮಕೂರು ನಗರ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ ಅಲ್ಲದೆ ಈ ಸಂಬಂಧಪಟ್ಟ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಅಂತ್ಯಸಂಸ್ಕಾರ ನಡೆಸಲು ದಲಿತರಿಗೆ ಸೂಕ್ತವಾದ ಸ್ಮಶಾನದ ವ್ಯವಸ್ಥೆ ಒದಗಿಸಬೇಕು ಎಂದು ಒತ್ತಾಯಿಸಿ ಹೆಚ್.ಡಿ.ಕೋಟೆ ಪಟ್ಟಣದ ಆಡಳಿತ ಸೌಧದ ಮುಂಭಾಗದಲ್ಲಿ ನಡೆಸಿದ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿತು. ಹೆಚ್.ಡಿ.ಕೋಟೆ ತಾಲ್ಲೂಕಿನ ಆನೇಕ ಗ್ರಾಮಗಳಲ್ಲಿ ಸ್ಮಶಾನವಿಲ್ಲದೆ ಜನರು, ಸತ್ತ ವ್ಯಕ್ತಿಯ ಶವ ಸಂಸ್ಕಾರಮಾಡಲು ಪರದಾಡುತ್ತಿದ್ದಾರೆ. ದಲಿತರಿಗೆ ಸರಿಯಾದ ರೀತಿಯಲ್ಲಿ ಸ್ಮಶಾನವನ್ನು ಒದಗಿಸಿಕೊಡಬೇಕೆಂದು ತಾಲ್ಲೂಕು ಆಡಳಿತಕ್ಕೆ ಪ್ರತಿಭಟನಾಕಾರರು ಮನವಿ ಮಾಡಿದರು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಚಾಲಕ ಕೋಟೆ ಬೆಟ್ಟಯ್ಯ, ನಾವು ಈ ಭೂಮಿಯ ಮೇಲೆ ಹುಟ್ಟಿದಾಗಿಂದ ಇದುವರೆಗೂ ಒಂದಲ್ಲ ಒಂದು ರೀತಿಯಲ್ಲಿ ಬದುಕಲು ಹೋರಾಟ ನಡೆಸುತ್ತಾ ಬಂದಿರುತ್ತೇವೆ, ನಾವು ಬದುಕನ್ನು ನಡೆಸಲು ನಮಗೆ ದೊರಕ ಬೇಕಾದ ಮೂಲಭೂತ ಸೌಕರ್ಯಗಳಿಗಾಗಿ ಹೋರಾಟ ಮಾಡಿದ್ದೇವೆ ಆದರೆ ಇಂದು ಸತ್ತಮೇಲೆ ನಮ್ಮನ್ನು ಊಳಲು ಜಾಗಕೊಡಿ ಎಂದು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಬೆಟ್ಟಯ್ಯಕೋಟೆ, ಜಿಲ್ಲಾ ಪಂಚಾಯಿತಿ ಸದಸ್ಯ ಹೆಚ್.ಪಿ. ಮಂಜುನಾಥ್, ರೈತಮುಖಂಡ ಮಹದೇವನಾಯಕ, ಅಕ್ಬರ್ ಪಾಷ, ಮಲಾರ…

Read More

ಕೊರಟಗೆರೆ: ಇಡೀ ವಿಶ್ವದಲ್ಲೇ ತನ್ನದೇ ಆದ ವೈಶಿಷ್ಟ್ಯತೆಗಳಿಂದ ಹೆಗ್ಗುರುತು ಹೊಂದಿರುವ ಬೆಂಗಳೂರನ್ನು ನಾಡಪ್ರಭು ಕೆಂಪೇಗೌಡ ಅವರು ನಿರ್ಮಿಸಿದ್ದು ಯಾವುದೇ ಸ್ವಾರ್ಥಪರತೆ, ಜಾತಿ ಮೋಹವಿಲ್ಲದೇ ಬಳಪೇಟೆ ಕಬ್ಬನ್ ಪೇಟೆ ಚಿಕ್ಕಪೇಟೆ ಎಂಬುದಾಗಿ ಸ್ಥಾಪಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಬೆಂಗಳೂರಿನಲ್ಲಿ ತನಗಾಗಿ ಯಾವುದನ್ನು ಸ್ವಾರ್ಥಕ್ಕಾಗಿ ಬಳಸಲಿಲ್ಲವೆಂದು ಕೇಂದ್ರ ಒಕ್ಕಲಿಗರ ಸಂಘದ ನಿರ್ದೇಶಕ ಹನುಮಂತರಾಯಪ್ಪ ಅವರು ತಿಳಿಸಿದರು. ತಾಲೂಕಿನ ಹೊಳವನಲ್ಲಿ ಹೋಬಳಿ ವ್ಯಾಪ್ತಿಯ ಮಧ್ಯ ವೆಂಕಟಪುರ ಗ್ರಾಮದಲ್ಲಿ ಅಸ್ತಿತ್ವಕ್ಕೆ ಬಂದ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಯುವ ಪಡೆಯ ನೂತನ ಸಂಘಟನೆ ನಾಮ ಫಲಕ ಅನಾವರಣಗೊಳಿಸಿ ಮಾತನಾಡಿದ ಅವರು ಒಕ್ಕಲಿಗ ಸಮುದಾಯದವರು ಸ್ವಾರ್ಥ ಪರರಲ್ಲ ವಿಶಾಲವಾದ ಮನಸ್ಸುಳ್ಳ ದಾನಿಗಳಾಗಿದ್ದು ಭೂಮಿಯನ್ನ ಹದಗೊಳಿಸಿ ಉತ್ತು ಹೊತ್ತು ಕಷ್ಟಪಟ್ಟು ಬೆಳೆದು ನಾಡು ಕಟ್ಟುತ್ತಿದ್ದೇವೆ ಎಂದು ತಿಳಿಸಿದರು. ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ಇಂದು ಯಾವುದಕ್ಕೂ ಕಡಿಮೆ ಇಲ್ಲದೆ ಅತ್ಯುತ್ತಮವಾಗಿ ಇಡೀ ಜಗತ್ತೇ ಬೆರಗುಗೊಳಿಸುವಂತಹ ಸಾಧನೆ ಮಾಡಿದ್ದು ಇಂದಿಗೂ ಕೂಡ ಬೆಂಗಳೂರಿನಲ್ಲಿ ವಿಶ್ವದ ಮೂಲೆ ಮೂಲೆಯ ದೇಶದ ಜನರು ಬಂದು ನೆಲಸಿ…

Read More