Author: admin

ಕುವೈತ್’ನ ಎಮಿರ್ ಶೇಖ್ ನವಾಫ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರಿಗೆ ಗೌರವ ಸೂಚಕವಾಗಿ ಕೇಂದ್ರ ಸರ್ಕಾರವು ಇಂದು ದೇಶಾದ್ಯಂತ ಒಂದು ದಿನದ ಶೋಕಾಚರಣೆ ಘೋಷಿಸಿದೆ. ಕುವೈತ್ ರಾಜ್ಯದ ಅಮೀರ್ ಶೇಖ್ ನವಾಫ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರು ನಿನ್ನೆ ನಿಧನರಾಗಿದ್ದರು. ಇಂದು ತ್ರಿವರ್ಣ ಧ್ವಜವನ್ನು ಭಾರತದಾದ್ಯಂತ ನಿಯಮಿತವಾಗಿ ಹಾರಿಸುವ ಎಲ್ಲಾ ಕಟ್ಟಡಗಳ ಮೇಲೆ ಅರ್ಧಮಟ್ಟದಲ್ಲಿ ಹಾರಿಸಲಾಗುವುದು. ಅಗಲಿದ ಗಣ್ಯರಿಗೆ ಗೌರವದ ಸಂಕೇತವಾಗಿ, ಕೇಂದ್ರ ಸರ್ಕಾರವು ಇಂದು ಭಾರತದಾದ್ಯಂತ ಒಂದು ದಿನದ ರಾಜ್ಯ ಶೋಕಾಚರಣೆ ನಡೆಸಲು ನಿರ್ಧರಿಸಿದೆ ಎಂದು ಗೃಹ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಶೋಕಾಚರಣೆಯ ದಿನದಂದು ಯಾವುದೇ ಅಧಿಕೃತ ಮನರಂಜನೆ ಇರುವುದಿಲ್ಲ ಎಂದು ಗೃಹ ಸಚಿವಾಲಯ ತಿಳಿಸಿದೆ.

Read More

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಬಹುತೇಕ ಸಿದ್ಧವಾಗಿದ್ದು, ಜನವರಿ 22 ರಂದು ಮಧ್ಯಾಹ್ನ 12 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಜನವರಿ 22 ರಂದು ಮಧ್ಯಾಹ್ನ 12 ಗಂಟೆಗೆ ಸಮಾರಂಭ ನಡೆಯಲಿದೆ. ಹೀಗಾಗಿ ಅಂದು ಯಾವ ಭಕ್ತರು ಅಯೋಧ್ಯೆಗೆ ಆಗಮಿಸಬಾರದು ಎಂದು ರಾಮಮಂದಿರ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ. ಈ ಕುರಿತು ಭಕ್ತರಿಗೆ ನೀಡಿದ ಸಂದೇಶದಲ್ಲಿ ಅವರು, “ಜನವರಿ 22 ರಂದು ಅಯೋಧ್ಯೆಗೆ ಬರಬೇಡಿ. ನಿಮಗೆ ಹತ್ತಿರವಿರುವ ದೇವಸ್ಥಾನದಲ್ಲಿ ಸಂಭ್ರಮ ಆಚರಿಸಿ ಎಂದು ಮಾಹಿತಿ ನೀಡಿದ್ದಾರೆ. ಅಂದಹಾಗೆ ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಪಟ್ಟಣದಲ್ಲಿ ಜನದಟ್ಟಣೆಯನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.

Read More

ಸಾಕಾನೆ ದಾಳಿಗೆ ಆದಿವಾಸಿ ವ್ಯಕ್ತಿ ಬಲಿಯಾಗಿರುವ ಘಟನೆ ತಮಿಳುನಾಡಿನ ತೆಪ್ಪಕಾಡು ಆನೆ ಶಿಬಿರದಲ್ಲಿ ನಡೆದಿದೆ. ಇತ್ತೀಚಿಗೆ ರಾಷ್ಟ್ರಪತಿ ದ್ರೌಪದಿಮುರ್ಮು ಅವರು ಮತ್ತು ಪ್ರಧಾನಿ ಮೋದಿ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಿದ್ದರು. ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ತೆಪ್ಪಕಾಡು‌ ಆನೆ ಶಿಬಿರ ಇದಾಗಿದ್ದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿದೆ. ಇದೇ ಶಿಬಿರದಲ್ಲಿ ಈ ಘಟನೆ ನಡೆದಿದೆ. ವಿಲ್ಸನ್ ಎಂಬ ಸಾಕಾನೆ ಆದಿವಾಸಿ ವ್ಯಕ್ತಿ ಸಿ.ಕೆ.ಮಥನ್ ಎಂಬ ವ್ಯಕ್ತಿ ದಾಳಿ ಮಾಡಿದ್ದು ಸಿ.ಕೆ.ಮಥನ್ ಸಾವನ್ನಪ್ಪಿದ್ದಾರೆ.  ಆನೆ ಶಿಬಿರದಲ್ಲಿರುವ ಮಾವುತರ ಮನೆಗೆ ಸಂಬಂಧಿ ಮಥನ್ ಬಂದಿದ್ದರು. ಈ ವೇಳೆ ಏಕಾಏಕಿ ಆನೆ ದಾಳಿ ನಡೆಸಿದೆ.  ಸ್ಥಳಕ್ಕೆ ತಮಿಳುನಾಡಿನ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

8 ಬಾರಿ ಮೈಸೂರು ದಸರಾ ಅಂಬಾರಿ ಹೊತ್ತು  ಯಶಸ್ವಿಯಾಗಿದ್ದ ಅರ್ಜುನ ಆನೆ   ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮೃತಪಟ್ಟು 11 ದಿನಗಳು ಕಳೆದಿದ್ದು, ಈ ನಡುವೆ ಅರ್ಜುನನ್ನ ನೆನೆದು ಮಾವುತ ವಿನು ಕಣ್ಣೀರು ಹಾಕಿದ್ದಾರೆ. 11 ದಿನದ ಅರಾಧನೆ ಕಾರ್ಯ ಹಿನ್ನೆಲೆ ವಿನು ಕುಟುಂಬ ಸಮೇತವಾಗಿ ಅರ್ಜುನ ಆನೆ ಸಮಾಧಿ ಬಳಿ ಆಗಮಿಸಿ  ಪೂಜೆ ಸಲ್ಲಿಕೆ ಮಾಡಿದರು.  ಅರ್ಜುನನಿಗೆ ಪ್ರಿಯವಾದ ಕಬ್ಬು, ಬೆಲ್ಲ, ಹುಲ್ಲು, ಭತ್ತ, ಅನ್ನದ ಮುದ್ದೆ ಎಡೆ ಇಟ್ಟು, ತಿಂಡಿ ತಿನಿಸು ಹಣ್ಣು ಹಂಪಲು ಇಟ್ಟು ಪೂಜೆ ಸಲ್ಲಿಸಿದರು. ತನ್ನ ಪ್ರೀತಿಯ ಆನೆ ಕಳೆದುಕೊಂಡು ಕಂಗೆಟ್ಟಿರುವ ಮಾವುತನ ಕುಟುಂಬ ಸಮಾಧಿ ಬಳಿ ರೋದಿಸುತ್ತಾ ಕುಳಿತ ದೃಶ್ಯ ಕಂಡು ಬಂದಿತು.. ಈ ವೇಳೆ ಎದ್ದೇಳು ಅರ್ಜುನ ಎಂದು ಮಾವುತ ವಿನು ಬಿಕ್ಕಿ ಬಿಕ್ಕಿ ಅತ್ತಿದ್ದು ಅಪ್ಪ‌ ನನ್ನ ಸ್ವಾಮಿಯನ್ನು ಎಬ್ಬಿಸು. ಎಂತಹ ಧೈರ್ಯವಂತ ನೀನು, ಯಾವ ಆನೆಗೂ ಬಗ್ಗುತ್ತಿರಲಿಲ್ಲ ಎಲ್ಲಾ ಮೋಸ ಮಾಡಿದ್ರು ಎಂದು  ಮಾವುತ ವಿನು ರೋಧಿಸಿದರು.

Read More

ಮಹಾರಾಷ್ಟ್ರ: ಅತಿರೇಕಕ್ಕೇರಿದ ಜಗಳದಿಂದಾಗಿ  ವ್ಯಕ್ತಿಯೊಬ್ಬ ತನ್ನ ಗೆಳತಿಯ ಕಾಲಿನ ಮೇಲೆಯೇ ಕಾರು ಹತ್ತಿಸಿರುವ ಘಟನೆ ನಡೆದಿದೆ. ಆತ ಮಹಾರಾಷ್ಟ್ರ ಹಿರಿಯ ಅಧಿಕಾರಿಯೊಬ್ಬರ ಮಗನಾಗಿದ್ದು, ಥಾಣೆಯ ಹೋಟೆಲ್ ಬಳಿ ಗೆಳತಿ ಕಾಲಿನ ಮೇಲೆ ಕಾರು ಹತ್ತಿಸಿದ್ದಾನೆ. ಡಿಸೆಂಬರ್ 11 ರಂದು ಘಟನೆ ನಡೆದಿದ್ದು, ಆರೋಪಿ ಅಶ್ವಜಿತ್ ಗಾಯಕ್ವಾಡ್ ಮತ್ತು ಇತರ ಇಬ್ಬರ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), 279 (ಉದ್ದೇಶಪೂರಿತ ಚಾಲನೆ), 504 (ಉಲ್ಲಂಘನೆಯನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸೋಮವಾರ ಘೋಡ್ ಬಂದರ್ ರಸ್ತೆಯ ಹೋಟೆಲ್ ಬಳಿ ಈ ಘಟನೆ ನಡೆದಿದ್ದು, ಅಲ್ಲಿ ಯುವತಿ ಅಶ್ವಜಿತ್ ಗಾಯಕ್ವಾಡ್ ಅವರನ್ನು ಭೇಟಿಯಾಗಲು ಹೋಗಿದ್ದರು. ಇಬ್ಬರ ನಡುವೆ ವಾಗ್ವಾದ ನಡೆಯಿತು. ನಂತರ, ಸಂತ್ರಸ್ತೆ ಕಾರಿನಿಂದ ವಸ್ತುಗಳನ್ನು ತೆಗೆದುಕೊಂಡು ಹೊರಡಲು ಸಿದ್ಧಳಾದಾಗ ಆಕೆಯ ಕಾಲಿನ ಮೇಲೆ ಕಾರು ಹತ್ತಿಸಿದ್ದಾನೆ. ಘಟನೆ ಬಳಿಕ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.…

Read More

ಆತ ಮದುವೆಯಾಗಿ ಪತ್ನಿಗೆ ವಿಚ್ಛೇದನ ಕೊಟ್ಟಿದ್ದ. ಈ ನಡುವೆ ಮೂರು ವರ್ಷದ ಹಿಂದೆ ಮತ್ತೊಬ್ಬಳ ಜೊತೆ ಮದುವೆಯಾಗಿದ್ದನು. ಅವಳಿಗೂ ಪತಿಯಿಂದ ವಿಚ್ಛೇದನವಾಗಿತ್ತು. ಇಬ್ಬರೂ ಜೀವನದಲ್ಲಿ  ವಿಚ್ಛೇದನವಾದ ನಂತರ  ಎರಡನೆಯ ಕೌಟುಂಬಿಕ ಜೀವನ  ಆರಂಭಿಸಿದ್ದರು. ಈ ನಡುವೆ ಪತಿರಾಯ ಎರಡನೇ ಪತ್ನಿಗೂ ಮೋಸ ಮಾಡಿ ಮತ್ತೊಬ್ಬಳ ಜೊತೆ ಅನೈತಿಕ ಸಂಬಂಧ ಬೆಳೆಸಿದ್ದ. ಆ ಅನೈತಿಕ ಸಂಬಂಧ ಪ್ರಶ್ನೆ ಮಾಡಿದ ಎರಡನೇ ಪತ್ನಿ ಈಗ ಜೀವ ಕಳೆದುಕೊಂಡಿದ್ದಾಳೆ. ಪತಿಯು ಎರಡನೇ ಪತ್ನಿ ರಮ್ಯಾಗೂ ವಂಚನೆ ಮಾಡಿ ಬೆಂಗಳೂರಿನಲ್ಲಿ ಸಂಬಂಧಿ ಮಹಿಳೆಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಸುದ್ದಿಯು ಪತ್ನಿ ರಮ್ಯಾಗೆ ಗೊತ್ತಾಗಿದೆ. ಬೆಂಗಳೂರಿನಲ್ಲಿ ಪತಿಯು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ. ಈ ಘಟನೆ ಬಳಿಕ ಪತಿ ಮತ್ತು ಪತ್ನಿ ನಡುವೆ ಅನೈತಿಕ ಸಂಬಂಧ ವಿಚಾರವಾಗಿ ಪದೇ ಪದೇ ಜಗಳ ಶುರುವಾಗಿತ್ತು. ಮೊನ್ನೆ  ರಾತ್ರಿ ಪತಿ-ಪತ್ನಿ ನಡುವೆ ಇದೇ ವಿಚಾರಕ್ಕಾಗಿ ಗಲಾಟೆ ಶುರುವಾಗಿ, ಪತಿಯು ಅಡುಗೆ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಪತ್ನಿಯ ಕತ್ತು ಸೀಳಿ ಕೊಲೆ…

Read More

ಬೆಂಗಳೂರು: ನಗರದಲ್ಲಿ ಮತ್ತೊಂದು ಹನಿಟ್ರ್ಯಾಪ್ ಪ್ರಕರಣ ಬೆಳಕಿಗೆ ಬಂದಿದೆ. ತನ್ನ ಪತ್ನಿಯನ್ನು ವಿಧವೆ ಎಂದು ಹೇಳಿ ನೋಡಿಕೊಳ್ಳುವಂತೆ ಉದ್ಯಮಿ ಜೊತೆ ಬಿಟ್ಟು ಹನಿಟ್ರ್ಯಾಪ್ ನಡೆಸಿದ ಪ್ರಕರಣ ಸಂಬಂಧ ದಂಪತಿ ಸಹಿತ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಖಲೀಮ್, ಸಭಾ, ಓಬೆದ್ ರಕೀಮ್, ಅತೀಕ್ ಬಂಧಿತ ಆರೋಪಿಗಳಾಗಿದ್ದು, ಈ ಪೈಕಿ ಖಲೀಮ್ ಮತ್ತು ಸಭಾ ದಂಪತಿಯಾಗಿದ್ದಾರೆ. ಈ ಗ್ಯಾಂಗ್ ಅತೀವುಲ್ಲಾ ಎಂಬ ಉದ್ಯಮಿಯನ್ನ ಟ್ರ್ಯಾಪ್ ಮಾಡಿ ಹನಿಟ್ರ್ಯಾಪ್ ಮಾಡಿತ್ತು. ಅತೀವುಲ್ಲಾಗೆ ಪತ್ನಿ ಸಭಾಳನ್ನ ವಿಧವೆ ಅಂತಾ ಪರಿಚಯ ಮಾಡಿಸಿಕೊಟ್ಟು ಆಕೆಯನ್ನು ನೋಡಿಕೊಳ್ಳುವಂತೆ ಹೇಳಿದ್ದ. ನಂತರ ಸಭಾ ಮತ್ತು ಅತೀವುಲ್ಲಾ ನಡುವೆ ದೈಹಿಕ ಸಂಪರ್ಕ ನಡೆದಿತ್ತು. ಕೆಲ ದಿನಗಳ ನಂತರ ಆರ್ ಆರ್ ನಗರದಲ್ಲಿ ರೂಮ್ ಬುಕ್ ಮಾಡಲು ಆಧಾರ್ ಕಾರ್ಡ್ ಜೊತೆ ಬಾ ಎಂದು ಅತೀವುಲ್ಲಾನನ್ನು ಕರೆದಿದ್ದಾಳೆ. ಅದರಂತೆ, ಆರ್ ಆರ್ ನಗರಕ್ಕೆ ಬಂದಿದ್ದ ಅತೀವುಲ್ಲಾ, ರೂಮ್ ಬುಕ್ ಮಾಡಿ ಒಳಗಡೆ ಹೋದ ಕೆಲ ಹೊತ್ತಲ್ಲೇ ಖಲೀಮ್, ರಕೀಬ್, ಅತೀಕ್ ಎಂಟ್ರಿ…

Read More

ಬೆಂಗಳೂರು: ಸಾರ್ವಜನಿಕ ಶಾಂತಿ ಕದಡುತ್ತಿರುವುದನ್ನು ಪ್ರಶ್ನಿಸಿದ ವ್ಯಕ್ತಿ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ ನಗರ ಠಾಣೆ ಪೊಲೀಸರು ಹಲ್ಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗುರುವಾರ ಮುಂಜಾನೆ 4 ಗಂಟೆಗೆ ನೆರೆಹೊರೆಯವರೊಂದಿಗೆ ಜಗಳವಾಡುತ್ತಿರುವುದನ್ನು ಕಂಡು ಗಿರಿನಗರ ನಿವಾಸಿ ಜಗದೀಶ್ ಅವರನ್ನು ಬಂಧಿಸಲಾಗಿದೆ. ಗಿರಿನಗರ ಪೊಲೀಸ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ ದೇವರಾಜ್ ಅರಸ್ ಅವರು ಮತ್ತು ಪೊಲೀಸ್ ಪೇದೆ ಮೇಲೆಯೂ ಹಲ್ಲೆ ನಡೆಸಲಾಗಿದ್ದು, ನಂತರ ಎಫ್ ‌ಐಆರ್ ದಾಖಲಿಸಿದ್ದಾರೆ. ಆರೋಪಿ ಮೇಲೆ ಹಲ್ಲೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಎಫ್‌ ಐಆರ್ ಪ್ರಕಾರ, ಪಿಎಸ್‌  ಐ ದೇವರಾಜ್ ಅರಸ್ ರಾತ್ರಿ ಕರ್ತವ್ಯದಲ್ಲಿದ್ದರು ಮತ್ತು ಗುರುವಾರ ಬೆಳಗಿನ ಜಾವ 3:50 ರ ಸುಮಾರಿಗೆ ಮಹಿಳೆಯೊಬ್ಬರು ಪೊಲೀಸರಿಗೆ ಕರೆ ಮಾಡಿ ವ್ಯಕ್ತಿಯೊಬ್ಬರು ತನ್ನ ನೆರೆಹೊರೆಯವರ ಮೇಲೆ ಕೂಗಾಡುತ್ತಿದ್ದಾರೆ ಮತ್ತು ಅವರೊಂದಿಗೆ ಜಗಳವಾಡುತ್ತಿದ್ದಾರೆ ಎಂದು ಹೇಳಿದ್ದರು. ಘಟನಾ ಸ್ಥಳಕ್ಕೆ ದೇವರಾಜ್ ಅರಸ್ ಹಾಗೂ ಕಾನ್‌ ಸ್ಟೆಬಲ್ ಭೇಟಿ ನೀಡಿದಾಗ ಜಗದೀಶ್ ಲಂಚ ಪಡೆದು ತಮ್ಮ ಮೇಲೆ…

Read More

ದೆಹಲಿ: ಅಪ್ರಾಪ್ತ ಬಾಲಕನನ್ನು  ಆರು ಮಂದಿ ಸ್ನೇಹಿತರು ಸೇರಿ ಹತ್ಯೆ ಮಾಡಿರುವ ಘಟನೆ  ನಡೆದಿದೆ. 17 ವರ್ಷದ ವಿವೇಕ್ ಮೃತ ದುರ್ದೈವಿಯಾಗಿದ್ದಾನೆ. ಸ್ನೇಹಿತರಲ್ಲಿ ಒಬ್ಬಾತ ಮದ್ಯಪಾನ ಮಾಡಲೆಂದು ಆತನನ್ನು ಆಹ್ವಾನಿಸಿದ್ದ ಬಳಿಕ ಆರು ಮಂದಿ ಸ್ನೇಹಿತರು ಸೇರಿ ಚಾಕುವಿನಿಂದ ಚುಚ್ಚಿ, ಕಲ್ಲು ಎತ್ತಿಹಾಕಿ ಹತ್ಯೆ ಮಾಡಲಾಗಿದೆ. ಸತ್ಪುಲಾ ಪಾರ್ಕ್ ಗೆ ಕರೆದೊಯ್ದು ಹತ್ಯೆ ಮಾಡಲಾಗಿದೆ. ಮೂವರು ಅಪ್ರಾಪ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ವಿವೇಕ್ ವಿರುದ್ಧ ಹಗೆ ಸಾಧಿಸಲು ಈ ಸಂಚು ರೂಪಿಸಿದ್ದರು. ಬಾಲಕ ಮನೆಯಿಂದ ಹೊರ ಹೋಗುವಾಗ ತಂದೆಯನ್ನು ಭೇಟಿಯಾಗಲು ಹೋಗುವುದಾಗಿ ಸುಳ್ಳು ಹೇಳಿದ್ದ, ಹಿಂದಿರುಗದಿದ್ದಾಗ ಹಲವು ಬಾರಿ ಕರೆ ಮಾಡಿದ್ದಾರೆ ಆದರೆ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು ಎಂದು ಪೋಷಕರು ತಿಳಿಸಿದ್ದಾರೆ.

Read More

ನಾಗ್ಪುರ: ಕಟೋಲ್ ತಾಲೂಕಿನ ಸೋನ್ ಖಾಂಬ್ ನಲ್ಲಿ ಟ್ರಕ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಆರು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಏಳು ಜನರು ನಾಗ್ಪುರದಿಂದ ಕಟೋಲ್ ಕಡೆಗೆ ಪ್ರಯಾಣಿಸುತ್ತಿದ್ದಾಗ ಟ್ರಕ್ ಕಾರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ವರದಿಗಳ ಪ್ರಕಾರ, ರಾತ್ರಿ 1.30 ರ ಸುಮಾರಿಗೆ ಅಪಘಾತ ಸಂಭವಿಸಿದೆ. ಸ್ಕಾರ್ಪಿಯೋದಲ್ಲಿದ್ದ ಒಂದೇ ಗ್ರಾಮದ 6 ಮಂದಿ ಸಾವನ್ನಪ್ಪಿದ್ದಾರೆ. ಮೃತರನ್ನು ಅಜಯ್ ದಶರತ್ ಚಿಖ್ಲೆ (45), ವಿಠ್ಠಲ್ ದಿಗಂಬರ್ ತೋಟೆ (45), ಸುಧಾಕರ ರಾಮಚಂದ್ರ ಮಾನಕರ್ (42), ರಮೇಶ್ ಓಂಕಾರ್ ಹೆಲೊಂಡೆ (48), ಮಯೂರ್ ಮೊರೇಶ್ವರ್ ಇಂಗ್ಲೆ (26) ಮತ್ತು ವೈಭವ್ ಸಾಹೇಬ್ರಾವ್ ಚಿಖ್ಲೆ (32) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ನಾಗ್ಪುರದ ಸರ್ಕಾರಿ ವೈದ್ಯಕೀಯ ಆಸ್ಪತ್ರೆಯಲ್ಲಿ ಟ್ರಾಮಾ ಸೆಂಟರ್ಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Read More