Author: admin

ಬೆಂಗಳೂರು: ಚರ್ಚ್ ಸ್ಪೋಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗೆ, ಕರ್ನಾಟಕ ಹೈಕೋರ್ಟ್ ಎರಡು ವಾರಗಳ ಜಾಮೀನು ಮಂಜೂರು ಮಾಡಿದೆ. ಅಖಿಲ್ ಜುಲೈ 2000 ದಲ್ಲಿ ಬೆಂಗಳೂರಿನಲ್ಲಿ ನಡೆದ ಚರ್ಚ್ ಸ್ಪೋಟ ಪ್ರಕರಣದ ಅಪರಾಧಿಗಳಲ್ಲಿ ಒಬ್ಬರಾಗಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ಗೋವಾದಲ್ಲಿ ಉಂಟಾದ ಸ್ಪೋಟಗಳಲ್ಲಿ ದೀನದ‌ರ್ ಅಂಜುಮನ್ ಪಂಥಕ್ಕೆ ಸೇರಿದ 24 ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾಗಿದೆ. ಜೀವಾವಧಿ ಶಿಕ್ಷೆಗೆ ಗುರಿಯಾದ 13 ಮಂದಿಯಲ್ಲಿ ಅಖಿಲ್ ಕೂಡ ಒಬ್ಬ.

Read More

ಬೆಂಗಳೂರು: ವಾಚ್ ತಯಾರಿಕ ಕಂಪನಿಯ ಮ್ಯಾನೇಜರ್, ಸೂಪರ್ವೈಸರ್‌ ಕಿರುಕುಳದಿಂದ ಬೇಸತ್ತ ಕಾರ್ಮಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ನಗರದ ಟಿ. ದಾಸರಹಳ್ಳಿಯಲ್ಲಿ ನಡೆದಿದೆ. ದಾಸರಹಳ್ಳಿಯಲ್ಲಿ ನೆಲೆಸಿರುವ ಅಂಧ್ರಪ್ರದೇಶದ ಗುಡಿಬಂಡೆ ನಿವಾಸಿ ಗೋವಿಂದ (24) ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕ. ಕಳೆದ ಆರು ವರ್ಷಗಳಿಂದ ಪೀಣ್ಯ ಬಳಿಯ ಕೆಡಿಡಿಎಲ್ ವಾಚ್ ತಯಾರಿಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಗೋವಿಂದ ಅವರು ರಾತ್ರಿ ಅಪಾರ್ಟೆಂಟ್ ‌ನಲ್ಲಿ ಮೇಂಟೆನೆಂಸ್ ಕೆಲಸ ಮಾಡಿಕೊಂಡು ತಂಗಿದ್ದರು.

Read More

ಇಲ್ಲೊಬ್ಬ ಯುವತಿ 100ಕ್ಕೂ ಹೆಚ್ಚು ಮಕ್ಕಳನ್ನು ಪಡೆಯುವ ಆಸೆ ಹೊಂದಿದ್ದಾಳೆ. ರಷ್ಯಾ ನಿವಾಸಿಯಾಗಿರುವ ಕ್ರಿಸ್ಟಿನಾ ಜಾರ್ಜಿಯಾದಲ್ಲಿ ತನ್ನ ಕುಟುಂಬದ ಜೊತೆ ವಾಸವಾಗಿದ್ದಾಳೆ. ಆಕೆ ಪತಿ ಕೋಟ್ಯಾಧಿಪತಿ. ಪ್ರಸ್ತುತ ದಂಪತಿಗೆ 22 ಮಕ್ಕಳಿದ್ದಾರೆ. 26 ವರ್ಷದ ಹುಡುಗಿ 22 ಮಕ್ಕಳನ್ನು ಹೊಂದಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಬಹುದು. ಆದರೆ, ಮಾಹಿತಿಯ ಪ್ರಕಾರ ಆಕೆಯ ಹಿರಿಯ ಮಗಳು 8 ವರ್ಷದ ವಿಕ್ಟೋರಿಯಾ ಮಾತ್ರ ಅವಳ ಹೊಟ್ಟೆಯಿಂದಲೇ ಜನಿನಿಸಿರುವ ಮಗು. ಉಳಿದ 21 ಮಕ್ಕಳು ಬಾಡಿಗೆ ತಾಯ್ತನದ ಮೂಲಕ ಜನಿಸಿವೆ. ಈಗಾಗಲೇ ಆಕೆ ಬಾಡಿಗೆ ತಾಯ್ತನಕ್ಕಾಗಿ ಸುಮಾರು 1.4 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದಾಳೆ.

Read More

ಚಿರತೆ ದಾಳಿಗೆ 17 ಕುರಿ ಹಾಗೂ 14 ಮೇಕೆ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮಲ್ಲೇಶ್ವರ ಗ್ರಾಮದಲ್ಲಿ ನಡೆದಿದೆ. ಚಂದ್ರು, ಬಸವರಾಜು, ಮಂಜು ಮತ್ತು ಲಕ್ಷ್ಮಣ್ ಎಂಬುವರಿಗೆ ಸೇರಿದ ಕುರಿಗಳು ಸುಶೀಲಮ್ಮ ಎಂಬುವವರ ತೋಟದ ಮನೆಯಲ್ಲಿದ್ದವು. ಈ ವೇಳೆ ಚಿರತೆ ದಾಳಿ ಮಾಡಿದ್ದು, ಅಂದಾಜು 4 ಲಕ್ಷ ರೂ. ಮೌಲ್ಯದ ಕುರಿಗಳ ಸಾವನ್ನಪ್ಪಿವೆ. ಬಳಿಕ ಪಶು ವೈದ್ಯ ಉಮೇಶ್ ಅವರು ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ಜನಪ್ರಿಯ ಹಿಂದಿ ಚಲನಚಿತ್ರ ಹಿನ್ನೆಲೆ ಗಾಯಕ ಅನುಪ್ ಘೋಷಾಲ್(78) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರನ್ನು ಇತ್ತೀಚೆಗೆ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಅವರು ಶುಕ್ರವಾರ ಹೃದಯಾಘಾತದಿಂದ ಕೊನೆಯುಸಿರೆಳೆದರು. ಬಂಗಾಳಿ ಹಾಡುಗಳ ಜೊತೆಗೆ, ‘ಮಾಸೂಮ್’ ಚಿತ್ರದ’ ತುಜೈ ನರಾಜ್ ನಹಿ ಜಿಂದಗಿ’ ನಂತಹ ಸಾಂಪ್ರದಾಯಿಕ ಹಾಡುಗಳಿಗೆ ಅವರು ಹೆಸರುವಾಸಿಯಾಗಿದ್ದರು. ಕೇವಲ ಹಾಡುಗಾರಿಕೆಯಲ್ಲಿ ಮಾತ್ರವಲ್ಲದೇ, 2011ರಲ್ಲಿ ಟಿಎಂಸಿಯಿಂದ ಶಾಸಕರಾಗಿಯೂ  ಗೆಲುವು ಸಾಧಿಸಿದ್ದರು.

Read More

1993ರ ಪಾಲಾರ್ ಬಾಂಬ್ ಸ್ಫೋಟದ ಪ್ರಮುಖ ಅಪರಾಧಿ, ವೀರಪ್ಪನ್ ಸಹಚರ ಜ್ಞಾನಪ್ರಕಾಶ್(69) ನಿಧನರಾಗಿದ್ದಾರೆ. 29 ವರ್ಷಗಳ ಕಾಲ ಬೆಳಗಾವಿ ಹಾಗೂ ಮೈಸೂರು ಜೈಲಿನಲ್ಲಿದ್ದ ಜ್ಞಾನಪ್ರಕಾಶ್‌, ಜಾಮೀನಿನ ಮೇಲೆ ಮೈಸೂರು ಜೈಲಿನಿಂದ 2022ರ ಡಿಸೆಂಬರ್ 20 ರಂದು ಬಿಡುಗಡೆಯಾಗಿದ್ದರು. ಮೃತ ಜ್ಞಾನಪ್ರಕಾಶ್‌ ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಹೀಗಾಗಿ, ಮಾನವೀಯತೆ ಆಧಾರದ ಮೇಲೆ ಸುಪ್ರೀಂಕೋರ್ಟ್ ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಜ್ಞಾನಪ್ರಕಾಶ್  ಅವರು ಚಾಮರಾಜನಗರ ಜಿಲ್ಲೆ ಹನೂರು ತಾಲೂಕು ಮಾರ್ಟಳ್ಳಿ ಸಮೀಪ ಸಂದನಪಾಳ್ಯದಲ್ಲಿ ವಾಸವಿದ್ದರು.

Read More

ದೇಶದ ಅತಿ ದೊಡ್ಡ ಮಸೀದಿ ನಿರ್ಮಾಣಕ್ಕೆ ಅಯೋಧ್ಯೆ ವೇದಿಕೆಯಾಗಲಿದೆ. ಮೊಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮತ್ತು ಮುಂಬೈ ಮೂಲದ ಬಿಜೆಪಿ ಮುಖಂಡ ಹಾಜಿ ಅರಾಫತ್ ಶೇಖ್, ಅಯೋಧ್ಯೆಯಿಂದ 25 ಕಿ.ಮೀ. ದೂರದಲ್ಲಿರುವ ಧನಿಪುರದಲ್ಲಿ ಈ ಮಸೀದಿಯನ್ನು ನಿರ್ಮಿಸಲಾಗುವುದು ಎಂದು ಹೇಳಿದ್ದಾರೆ. 2024ರಲ್ಲಿ ಕಟ್ಟಡದ ಶಂಕುಸ್ಥಾಪನೆ ನಡೆಯಲಿದೆ ಎಂದು ತಿಳಿದು ಬಂದಿದೆ. 21 ಅಡಿ ಎತ್ತರ ಹಾಗೂ 36 ಅಡಿ ಅಗಲದಲ್ಲಿ 9 ಸಾವಿರ ಮಂದಿ ಏಕಕಾಲಕ್ಕೆ ಪ್ರಾರ್ಥನೆ ಸಲ್ಲಿಸಲು ಅನುಕೂಲವಾಗುವಂತೆ ಮಸೀದಿ ನಿರ್ಮಿಸಲಾಗುವುದು ಎಂದು ವರದಿಯಾಗಿದೆ.

Read More

ಕರ್ನಾಟಕದ 18ಕ್ಕೂ ಅಧಿಕ ಜಿಲ್ಲೆಗಳಲ್ಲಿ ಡಿಸೆಂಬರ್ 17ರಿಂದ 2 ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ರಾಯಚೂರು, ವಿಜಯಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಕರಾವಳಿ, ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.

Read More

ಬೆಂಗಳೂರು: ಕ್ರಿಸ್ಮಸ್ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಮಾತ್ರ ಉಳಿದಿದೆ. ಈ ಮಧ್ಯೆ ಕ್ರಿಸ್ಮಸ್ ಸಲುವಾಗಿ ಬೆಂಗಳೂರಿನಲ್ಲಿ ಕೇಕ್ ಶೋ ಆಯೋಜನೆ ಮಾಡಿದ್ದು, ಇಂದಿನಿಂದ ಶುರುವಾಗಿ ಜನವರಿ 01ರ ವರೆಗೂ ನಡೆಯಲಿದೆ. ಯುಬಿ ಸಿಟಿ ಸಮೀಪದ ಸೇಂಟ್ ಜೋಸೆಫ್‌ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿರುವ ಕೇಕ್ ಶೋ ಥಿಂಕ್ ಲೋಕಲ್- ಆಕ್ಟ್ ಗ್ಲೋಬಲ್ ಪರಿಕಲ್ಪನೆಯಲ್ಲಿ ಕೇಕ್ ಪ್ರದರ್ಶನಕ್ಕೆ ಜಾಗತಿಕ ವಿನ್ಯಾಸದ ಟಚ್ ನೀಡಲಾಗಿದೆ. ಈ ಕೇಕ್ ಶೋಗೆ ಭೇಟಿ ನೀಡಿ ವಿಶೇಷ ರೀತಿಯ, ವಿಶೇಷ ವಿನ್ಯಾಸದ ಕೇಕ್ ‌ಗಳನ್ನು ಸವಿಯಲು ಸುವರ್ಣಾವಕಾಶವನ್ನು ನೀಡಲಾಗಿದೆ.  

Read More

ತುಮಕೂರು:  ಸೈಬರ್ ವಂಚಕರು ಮುಂಬೈ ಪೊಲೀಸರ ಹೆಸರಿನಲ್ಲಿ ಮಹಿಳೆಯನ್ನ ಬೆದರಿಸಿ 27 ಲಕ್ಷ ರೂ. ಸುಲಿಗೆ ಮಾಡಿದ್ದಾರೆ. ತುಮಕೂರು ನಗರದ ಸಪ್ತಗಿರಿ ಬಡಾವಣೆಯ ಮಹೇಂದ್ರಿ ಎಂಬ ವೃದ್ಧೆ ವಂಚಿತರಾದವರಾಗಿದ್ದಾರೆ. ತುಮಕೂರು ನಗರದ ಸಪ್ತಗಿರಿ ಬಡಾವಣೆಯ ಮಹೇಂದ್ರಿ ಎಂಬ ವೃದ್ಧೆಗೆ  ದೂರವಾಣಿ ಕರೆ ಮಾಡಿದ ಸೈಬರ್ ಖದೀಮರು 27 ಲಕ್ಷ ದೋಚಿದ್ದಾರೆ. ನಾವು ಮುಂಬೈ ಪೊಲೀಸರು, ನೀವು ಸಾರ್ವಜನಿಕರಿಗೆ ಕರೆ ಮಾಡಿ ತೊಂದರೆ ಕೊಡುತ್ತಿದ್ದೀರಿ ಎಂದು ದೂರು ದಾಖಲಾಗಿದೆ. ಇದನ್ನು ಮುಚ್ಚಿ ಹಾಕಲು ಹಣ ನೀಡುವಂತೆ ಬೇಡಿಕೆ ಇಟ್ಟು 27 ಲಕ್ಷ ಹಣ ವಂಚಿಸಿದ್ದಾರೆ. ಬಳಿಕ ಸೈಬರ್ ವಂಚಕರ ಮೋಸದ ಬಲೆಗೆ ಬಿದ್ದಿರುವುದು ತಿಳಿದ ವೃದ್ಧೆ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

Read More