Subscribe to Updates
Get the latest creative news from FooBar about art, design and business.
- 9ರೂ. 50 ಪೈಸೆಗೋಸ್ಕರ ಕಾನೂನು ಕ್ರಮ: ಬ್ಯಾಂಕ್ ಮ್ಯಾನೇಜರ್ ಯಡವಟ್ಟಿಗೆ ರೈತ ಕಂಗಾಲು
- ಕೊರಟಗೆರೆ: ಬುಗುರಿ ಆಟವಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿ ಸಾವು
- ತುಮಕೂರು: ಜು.12ರಂದು ಛತ್ರಪತಿ ಶ್ರೀ ಶಿವಾಜಿ ಮಹಾರಾಜರ 399ನೇ ಜಯಂತ್ಯೋತ್ಸವ
- ಬಲಿಜ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
- ಘೋಡಂಪಳ್ಳಿ: ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಭಕ್ತಿಭಾವದ ಪೂಜೆ
- ಸರಗೂರು: ತಾಲೂಕು ದಲಿತ ಸಂಘರ್ಷ ಸಮಿತಿ ಒಕ್ಕೂಟದ ಉಸ್ತುವಾರಿಯಾಗಿ ಉಯ್ಯಂಬಳ್ಳಿ ಮಲ್ಲಿಕಾರ್ಜುನ ಆಯ್ಕೆ
- ಪುತ್ತೂರಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಡಿ.ಸುರೇಶ್ ಅವರಿಗೆ ಯಶವಂತಪುರ ಗ್ರಾಮಸ್ಥರಿಂದ ಅದ್ಧೂರಿ ಸನ್ಮಾನ
- ಬೀದರ್: ಸ್ನಾನದ ಗೃಹಕ್ಕೆ ನುಗ್ಗಿ ಕೊಡಲಿಯಿಂದ ಕೊಚ್ಚಿ ಮಹಿಳೆಯ ಬರ್ಬರ ಹತ್ಯೆ!
Author: admin
ಬೆಂಗಳೂರು: ತಾವು ಮಲಗುತ್ತಿದ್ದ ಜಾಗದಲ್ಲಿ ಮಲಗಿದ್ದ ಎಂಬ ಒಂದೇ ಕಾರಣಕ್ಕೆ ಅಪರಿಚಿತ ವ್ಯಕ್ತಿಯ ಮೇಲೆ ಕಾಲಿನಿಂದ ಒದ್ದು ಹತ್ಯೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಆರ್.ಟಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಸೈಯದ್ ಕಮ್ರಾನ್ ಮತ್ತು ವಿಶಾಲ್ ಅಹಿವದಾಸ್ ಎಂದು ಗುರುತಿಸಲಾಗಿದೆ. ಆರೋಪಿಗಳಿಬ್ಬರು ಕೌಟುಂಬಿಕ ಕಲಹದಿಂದ ಮನೆಯಿಂದ ಹೊರಬಂದಿದ್ದರು. ಮನೆಯಿಂದ ಹೊರಬಿದ್ದ ಬಳಿಕ ಇಬ್ಬರೂ ಆರ್.ಟಿ. ನಗರ ಹೆಬ್ಬಾಳ ಸೇರಿದಂತೆ ವಿವಿಧೆಡೆ ಸುತ್ತಾಡಿ ಬೆಳಿಗ್ಗೆ ಸಿಕ್ಕ ಕೆಲಸ ಮಾಡಿಕೊಂಡು ಬಂದ ಹಣದಲ್ಲಿ ಮದ್ಯ ಸೇವಿಸಿ ಆರ್.ಟಿ. ನಗರದ ಕೃಷ್ಣಪ್ಪ ಕಾಂಪ್ಲೆಕ್ಸ್ ನ ನೆಲಮಹಡಿಯಲ್ಲಿ ಮಲಗಿಕೊಂಡು ಜೀವನ ಮಾಡುತ್ತಿದ್ದರು ಎನ್ನಲಾಗಿದೆ. ಡಿ.11ರಂದು ರಾತ್ರಿ ಇಬ್ಬರು ಮದ್ಯ ಸೇವಿಸಿಕೊಂಡು ಮಲಗಲು ನೆಲಮಹಡಿಗೆ ಬಂದಾಗ ಅಷ್ಟರಲ್ಲಾಗಲೇ ಆ ಜಾಗದಲ್ಲಿ ಅಪರಿಚಿತ ವ್ಯಕ್ತಿ ಮಲಗಿರುವುದು ಕಂಡು ಬಂದಿದೆ. ಈ ವೇಳೆ ಇಬ್ಬರೂ ಆರೋಪಿಗಳು ಆ ಅಪರಿಚಿತನ ಜೊತೆ ಜಗಳಕ್ಕೆ ಹೋಗಿ ಸಿಟ್ಟಿನಲ್ಲಿ ವ್ಯಕ್ತಿಯ ಎದೆ ಹಾಗೂ ಮುಖದ ಮೇಲೆ ಮನಸೋಇಚ್ಛೆ ಒದ್ದು ಹತ್ಯೆ ಮಾಡಿ, ಪರಾರಿಯಾಗಿದ್ದಾರೆ. ಮಾರನೇ ದಿನ…
ಆಸ್ಟ್ರೇಲಿಯಾದ ಸ್ಟಾರ್ ಓಪನರ್ ಡೇವಿಡ್ ವಾರ್ನರ್ ಹೊಸ ದಾಖಲೆ ಬರೆದಿದ್ದಾರೆ. ವಾರ್ನರ್ ಟೆಸ್ಟ್ ನಲ್ಲಿ ಆಸೀಸ್ ಪರ ಐದನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಅವರು ಇದುವರೆಗೆ 110 ಟೆಸ್ಟ್ ಗಳಲ್ಲಿ 8,651 ರನ್ ಗಳಿಸಿದ್ದಾರೆ. ಈ ಮೂಲಕ ಮಾಜಿ ನಾಯಕ ಮೈಕಲ್ ಕ್ಲಾರ್ಕ್ (8,643) ಅವರನ್ನು ಹಿಂದಿಕ್ಕಿದ್ದಾರೆ. ಭರ್ಜರಿ ಶತಕ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ನನ್ನ ಆಟ ಇನ್ನೂ ಇದೆ ಎಂಬ ಸಂದೇಶವನ್ನು 37 ವರ್ಷದ ಕ್ರಿಕೆಟಿಗ ರವಾನಿಸಿದ್ದಾರೆ. ಆದರೆ ಈ ಸರಣಿ ವಾರ್ನರ್ ಪಾಲಿಗೆ ಕೊನೆಯ ಟೆಸ್ಟ್ ಸರಣಿ ಎಂದು ಕೆಲವು ವರದಿಗಳಾಗಿವೆ. ಅಭಿಮಾನಿಗಳು ಸಹ ಹೀಗೆಯೇ ತಿಳಿದಿದ್ದಾರೆ. 37 ವರ್ಷದ ಡೇವಿಡ್, ತಮ್ಮ ನಿವೃತ್ತಿ ಮಾತುಕತೆಯಿಂದ ದೂರವಿರಲು ಬಯಸಿದ್ದಾರೆ. ಅದಕ್ಕೆ ಈ ಆಟವೇ ಸಾಕ್ಷಿ.
ಟೊಮ್ಯಾಟೊವನ್ನು ರೆಫ್ರಿಜರೇಟರ್ ನಲ್ಲಿ ಇಡಬಹುದೇ? ಇಲ್ಲಿದೆ ಕುತೂಹಲಕಾರಿ ಮಾಹಿತಿ: ಟೊಮೆಟೊಗಳನ್ನು ಫ್ರಿಜ್ ನಲ್ಲಿ ಇರಿಸಿದಾಗ, ರೆಫ್ರಿಜರೇಟರ್ ನ ಶೀತದಿಂದಾಗಿ ಲೈಕೋಪೀನ್ ರಚನೆಯು ಬದಲಾಗುತ್ತದೆ. ಇದನ್ನು ಸೇವಿಸಿದರೆ ಕರುಳು ಉಬ್ಬುವುದು, ವಾಕರಿಕೆ, ವಾಂತಿ ಮತ್ತು ಭೇದಿ ಮುಂತಾದ ಲಕ್ಷಣಗಳನ್ನು ಉಂಟುಮಾಡುತ್ತದೆ. ಇದು ಯಕೃತ್ತು ಮತ್ತು ಮೂತ್ರಪಿಂಡಗಳನ್ನು ಸಹ ಹಾನಿಗೊಳಿಸುತ್ತದೆ. ಹಾಗಾಗಿ ಟೊಮೇಟೊವನ್ನು ಫ್ರಿಡ್ಜ್ ನಲ್ಲಿ ದೀರ್ಘಕಾಲ ಇಟ್ಟ ನಂತರ ಬಳಸಬಾರದು. ಫ್ರಿಡ್ಜ್ ನಲ್ಲಿ ಟೊಮೆಟೊಗಳನ್ನು ಇಡುವುದರಿಂದ ಅವುಗಳ ರುಚಿ ಮತ್ತು ವಾಸನೆ ಎರಡೂ ಬದಲಾಗುತ್ತದೆ. ಅವರು ತಿನ್ನಲು ಅಪಾಯಕಾರಿ. ಕರಿಬೇವು ಸೊಪ್ಪಿನ ಪ್ರಯೋಜನಗಳೇನು ಗೊತ್ತಾ?: ಭಾರತೀಯ ಪಾಕ ಪದ್ಧತಿಯಲ್ಲಿ ಕರಿಬೇವಿನ ಸೊಪ್ಪಿಗೆ ಹೆಚ್ಚಿನ ಮಹತ್ವವಿದೆ. ದಕ್ಷಿಣ ಭಾರತದಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಕರಿಬೇವಿನ ಎಲೆಗಳು ಕಾರ್ಬಜೋಲ್ ಆಲ್ಕಲಾಯ್ಡ್ ಗಳನ್ನು ಹೊಂದಿರುತ್ತವೆ. ಇವು ಸ್ವತಂತ್ರ ರಾಡಿಕಲ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ. ದೇಹದ ಜೀವಕೋಶಗಳಿಗೆ ಪೌಷ್ಟಿಕಾಂಶವನ್ನು ಒದಗಿಸುವುದರ ಜೊತೆಗೆ, ಇದು ಟೈಪ್ -2 ಮಧುಮೇಹವನ್ನು ತಡೆಯುತ್ತದೆ. ಅದೇ ಸಮಯದಲ್ಲಿ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು…
ಹೊಸ ನಾಯಕತ್ವ, ನಟ ವಿಜಯಕಾಂತ್ ಅವರ ಪಕ್ಷಕ್ಕೆ ವಿಜಯಕಾಂತ್ ಅವರ ಪತ್ನಿ ಹಾಗೂ ಪಕ್ಷದ ಖಜಾಂಚಿ ಪ್ರೇಮಲತಾ ವಿಜಯಕಾಂತ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ವಿಜಯಕಾಂತ್ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಇಂದು ನಡೆದ ಸಾಮಾನ್ಯ ಸಭೆ ಹಾಗೂ ಕಾರ್ಯಕಾರಿಣಿ ಸಭೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿಜಯಕಾಂತ್ ಅವರ ಆರೋಗ್ಯ ಸಮಸ್ಯೆಯಿಂದ ನಾಯಕತ್ವ ಬದಲಾವಣೆಯಾಗಿದೆ. ಕಳೆದ ಕೆಲವು ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ವಿಜಯಕಾಂತ್ ಅವರು ಪಕ್ಷದ ಕಾರ್ಯಗಳಲ್ಲಿ ಸರಿಯಾಗಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಉಸಿರಾಟದ ಕಾಯಿಲೆಯಿಂದ ತೀವ್ರ ಅಸ್ವಸ್ಥರಾಗಿದ್ದ ವಿಜಯಕಾಂತ್ ಕಳೆದ ದಿನ ಆಸ್ಪತ್ರೆಯಿಂದ ನಿರ್ಗಮಿಸಿದ್ದರು. ಆ ಬಳಿಕ ಪಕ್ಷದಲ್ಲಿ ನಾಯಕತ್ವ ಬದಲಾವಣೆಯಾಗಿದೆ. ಪಕ್ಷದ ಅಧ್ಯಕ್ಷರಾಗಿ ವಿಜಯಕಾಂತ್ ಮುಂದುವರಿಯಲಿದ್ದಾರೆ. ಇಂದು ಚೆನ್ನೈನಲ್ಲಿ ನಡೆದ ಸಭೆಯಲ್ಲಿ ವಿಜಯಕಾಂತ್ ಕೂಡ ಭಾಗವಹಿಸಿದ್ದರು. ಸೆಪ್ಟೆಂಬರ್ 14, 2005 ರಂದು ಪಕ್ಷ ಸ್ಥಾಪನೆಯಾದಾಗಿನಿಂದ ವಿಜಯಕಾಂತ್ ಪಕ್ಷದ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಆದರೆ ಅವರ ಆರೋಗ್ಯ ಸಮಸ್ಯೆಗಳು ಡಿಎಂಡಿಕೆ ನಾಯಕತ್ವದಲ್ಲಿ ಬದಲಾವಣೆಗೆ ಕಾರಣವಾಯಿತು. ಮುಂದಿನ ದಿನಗಳಲ್ಲಿ ಲೋಕಸಭೆ ಚುನಾವಣೆ ಸೇರಿದಂತೆ…
ದುಬೈನಲ್ಲಿ ನಡೆದ ಕಾರ್ಯಕ್ರಮವೊಂದರ ನಂತರ ನಟಿ ಪೂಜಾ ಹೆಗ್ಡೆಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂಬ ಸುದ್ದಿ ಅಂತರ್ಜಾಲದಲ್ಲಿ ವೈರಲ್ ಆದ ನಂತರ ಅವರ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಪೂಜಾ ಅವರು ಕ್ಲಬ್ ನ ಉದ್ಘಾಟನೆಗೆ ದುಬೈಗೆ ಹೋಗಿದ್ದ ವೇಳೆ ಅಲ್ಲಿ ವಾಗ್ವಾದ ಉಂಟಾಗಿದ್ದು ಆಕೆಗೆ ಜೀವ ಬೆದರಿಕೆ ಹಾಕಲಾಗಿದೆ ಎಂಬ ವರದಿ ಕೇಳಿ ಬಂದಿತ್ತು. ಆದರೆ, ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ, ಇದು ಸುಳ್ಳು ಸುದ್ದಿ ಎಂದು ನಟಿಯ ತಂಡದವರು ಹೇಳಿದ್ದಾರೆ. ನಟಿಯು ಇನ್ನೂ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ. ಟಾಲಿವುಡ್ ನಟಿ ಪೂಜಾ ಹೆಗ್ಡೆ ಇತ್ತೀಚೆಗೆ ದುಬೈನಲ್ಲಿ ಜಗಳ ಮಾಡಿಕೊಂಡಿದ್ದು, ಈ ಹಿನ್ನೆಲೆ ಕೆಲವರು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಬಾಲಿವುಡ್ ಸಾಮಾಜಿಕ ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೆ ಪೂಜಾ ಹೆಗ್ಡೆ ತಂಡ ಪ್ರತಿಕ್ರಿಯಿಸಿದೆ. ಇದು ಸಂಪೂರ್ಣ ಆಧಾರ ರಹಿತ ಸುದ್ದಿಯಾಗಿದ್ದು, ಸಾಕ್ಷಿ ಇಲ್ಲದೆ ಬರೆಯುವುದಾದರೂ ಹೇಗೆ ಎಂದು ಪೂಜಾ ಹೆಗ್ಡೆ ತಂಡ ಪ್ರಶ್ನಿಸಿದೆ. ಇಂತಹ ಸುಳ್ಳು ಸುದ್ದಿಗಳನ್ನು ಜನರು…
ಸಂಸತ್ತಿನಲ್ಲಿ ಭದ್ರತಾ ಲೋಪವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಒಪ್ಪಿಕೊಂಡಿದ್ದಾರೆ. ಸಂಸತ್ತಿನ ಭದ್ರತೆ ಸ್ಪೀಕರ್ ಅಧಿಕಾರ ವ್ಯಾಪ್ತಿಯಲ್ಲಿದೆ ಎಂದರು. ಸ್ಪೀಕರ್ ಕೋರಿಕೆ ಮೇರೆಗೆ ಉನ್ನತ ಮಟ್ಟದ ತನಿಖಾ ತಂಡ ರಚಿಸಲಾಗಿತ್ತು. ನಿನ್ನೆಯ ಘಟನೆಯಲ್ಲಿ ಪ್ರತಿಪಕ್ಷಗಳು ರಾಜಕೀಯ ಮಾಡುತ್ತಿವೆ ಎಂದು ಅಮಿತ್ ಶಾ ಆರೋಪಿಸಿದ್ದಾರೆ. ಆಜ್ ತಕ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಗೃಹ ಸಚಿವರ ಪ್ರತಿಕ್ರಿಯೆ. ಭದ್ರತಾ ಲೋಪದ ಬಗ್ಗೆ ಪ್ರತಿಕ್ರಿಯಿಸುವಂತೆ ಗೃಹ ಸಚಿವಾಲಯವನ್ನು ಒತ್ತಾಯಿಸುತ್ತಿರುವಾಗಲೇ ಅಮಿತ್ ಶಾ ಸಂಸತ್ತಿನ ಹೊರಗೆ ಗಮನಾರ್ಹ ಪ್ರತಿಕ್ರಿಯೆ ನೀಡಿದ್ದಾರೆ. ಸಂಸತ್ತಿನಲ್ಲಿ ಭದ್ರತಾ ಲೋಪ ಗಂಭೀರವಾಗಿದೆ ಎಂದು ಅಮಿತ್ ಶಾ ಗಮನ ಸೆಳೆದಿದ್ದಾರೆ. ಸಂಸತ್ತಿನ ಭದ್ರತೆಯನ್ನು ಹೆಚ್ಚಿಸಲಾಗುವುದು ಮತ್ತು ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಸಚಿವರು ಭರವಸೆ ನೀಡಿದರು. ತನಿಖಾಧಿಕಾರಿಗಳು ತನಿಖಾ ವರದಿಯನ್ನು ಸಭಾಧ್ಯಕ್ಷರ ಮುಂದೆ ಸಲ್ಲಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು. ನಿನ್ನೆ ಮಧ್ಯಾಹ್ನ ಇಬ್ಬರು ಜನರು ಕಲರ್ ಸ್ಪ್ರೇಯೊಂದಿಗೆ ಸಂಸತ್ತಿಗೆ ಬಂದು ಆತಂಕ ಸೃಷ್ಟಿಸಿದ್ದರು.ಸಂಸತ್ ದಾಳಿಯ 22ನೇ ವಾರ್ಷಿಕೋತ್ಸವದಂದು ಭಾರೀ ಭದ್ರತಾ…
ಐಎಎಸ್ ಅಧಿಕಾರಿ ರೋಹಿನಿ ಸಿಂಧೂರಿ ವಿರುದ್ಧ ಐಪಿಎಸ್ ಅಧಿಕಾರಿ ರೂಪ ಮೌದ್ಗಲ್ ಮಾಡಿದ್ದ ಆಕ್ಷೇಪಾರ್ಹ ಸೋಷಿಯಲ್ ಮೀಡಿಯಾ ಪೋಸ್ಟ್ ಗಳನ್ನು ಡಿಲಿಟ್ ಮಾಡುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ನಾಳೆಯೊಳಗೆ ಐಎಎಸ್ ಅಧಿಕಾರಿ ರೋಹಿನಿ ಸಿಂಧೂರಿ ವಿರುದ್ಧ ಪೋಸ್ಟ್ ಮಾಡಿದ್ದ ಎಲ್ಲ ಪೋಸ್ಟ್ ಗಳು ಹಾಗೂ ಕಾಮೆಂಟ್ ಗಳನ್ನು ಡಿಲೀಟ್ ಮಾಡುವಂತೆ ಸುಪ್ರೀಂ ಕೋರ್ಟ್ ಮೌಖಿಕ ಆದೇಶ ನೀಡಿದೆ. ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಹಾಗೂ ಪಂಕಜ್ ಮಿತ್ತಲ್ ಅವರನ್ನುಒಳಗೊಂಡ ಪೀಠ ಇಂದು ಮೇಲಿನ ಸೂಚನೆ ನೀಡಿದೆ. ಇತ್ತೀಚಿಗೆ ರಾಜ್ಯದಲ್ಲಿ ಈ ಇಬ್ಬರು ಅಧಿಕಾರಿಗಳ ವಾಗ್ವಾದ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಜತೆಗೆ ಸರಕಾರಕ್ಕೂ ಮುಜುಗರ ತಂದೊಡ್ಡಿತ್ತು. ರೋಹಿಣಿ ಸಿಂಧೂರಿ ವಿರುದ್ಧ ರೂಪಾ ಹಲವಾರು ಆರೋಪಗಳನ್ನು ಮಾಡಿದ್ದರು. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಪೋಸ್ಟ್ ಗಳನ್ನು ಹಾಕಿದ್ದರು. ಈ ಕುರಿತು ರೋಹಿಣಿ ಸಿಂಧೂರಿ ಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಇಬ್ಬರು ಅಧಿಕಾರಿಗಳು ಸಂಧಾನದ ಮೂಲಕ ಪ್ರಕರಣವನ್ನು ಇತ್ಯರ್ಥ ಮಾಡಿಕೊಳ್ಳುವಂತೆ…
ಬೆಳಗಾವಿಯ ಸುವರ್ಣ ವಿಧಾನಸೌಧ ಬಳಿ ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟ ಸಂಘದಿಂದ ಗುರುವಾರ ಪ್ರತಿಭಟನೆ ನಡೆದಿದೆ. ಈ ವೇಳೆ ಸಚಿವ ಸಂತೋಷ್ ಲಾಡ್ ಮದ್ಯಪ್ರಿಯರ ಬೇಡಿಕೆಗಳನ್ನು ಆಲಿಸಿದರು. ಒಬ್ಬರಿಗೆ 1 ಕ್ವಾರ್ಟರ್ ನಿಗದಿ ಮಾಡಿ ಬಾರ್ ಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಬಾರ್ ಗಳ ಬಳಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ, ಮದ್ಯಪ್ರಿಯರ ಭವನ ಸ್ಥಾಪಿಸಬೇಕು. ಡಿಸೆಂಬರ್ 31 ಮದ್ಯಪಾನ ಪ್ರಿಯರ ದಿನ ಎಂದು ಘೋಷಣೆ ಮಾಡಬೇಕು. ಬೆಳಗಾವಿಯ ಸುವರ್ಣ ವಿಧಾನಸೌಧ ಬಳಿ ಮದ್ಯಪ್ರಿಯರು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆದಿದೆ. ‘ನಿತ್ಯ ದುಡಿ.. ಸತ್ಯ ನುಡಿ.. ಸ್ವಲ್ಪ ಕುಡಿ.. ಮನೆಗೆ ನಡಿ’ ಎಂಬ ಘೋಷಣಾ ವಾಕ್ಯದಡಿ ಸುವರ್ಣಗಾರ್ಡನ್ ಟೆಂಟ್ ನಲ್ಲಿ ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟ ಸಂಘ ಪ್ರತಿಭಟನೆ ನಡೆಸಿದೆ. ಇನ್ನು ಸಚಿವ ಸಂತೋಷ್ ಲಾಡ್ ಮದ್ಯಪ್ರಿಯರ ಸಮಸ್ಯೆ ಆಲಿಸಿದರು. ಲಿವರ್ ಸಮಸ್ಯೆಯಿಂದ ಬಳಲುವವರಿಗೆ ಚಿಕಿತ್ಸೆ ಕೊಡಿಸಬೇಕು. ‘ಕುಡುಕ’ ಎಂಬ ಪದ ನಿಷೇಧಿಸಿ ಮದ್ಯಪ್ರಿಯರು ಎಂದು ಮಾಡಬೇಕು ಎಂದು ಸಚಿವರ ಬಳಿ ಮದ್ಯಪ್ರಿಯರು…
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮಾಜಿ ಸಚಿವ ವಿ. ಸೋಮಣ್ಣ ಅವರ ಪಾಪದ ಕೊಡ ತುಂಬಿದೆ. ಅವರು ನಾಶ ಆಗುತ್ತಾರೆ ಎಂದು ಎಂಪಿ ರೇಣುಕಾಚಾರ್ಯ ವಾಗ್ದಾಳಿ ಮಾಡಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ಪಾಪದ ಕೊಡ ತುಂಬಿರುವುದಕ್ಕೆ ಇಬ್ಬರೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಮಾತಾಡುತ್ತಿದ್ದಾರೆ. ಯತ್ನಾಳ್ ಮತ್ತು ಸೋಮಣ್ಣನವರೇ ಎಚ್ಚರ ನಾನು ಸುಮ್ಮನಿರಲ್ಲ. ಎಲ್ಲಿಯವರೆಗೆ ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಮಾತಾಡುತ್ತೀರಿ ಅಲ್ಲಿಯವರೆಗೆ ನಾನು ಮಾತನಾಡುವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು: ಯಲಹಂಕದ ಕೊಂಡಪ್ಪ ಲೇಔಟ್ ಬಳಿ ಇರುವ ಶಿವಚೇತನಾ ಪ್ರಾವಿಷನ್ ಸ್ಟೋರ್ ನಲ್ಲಿ ರಾಬರಿ ನಡೆಸಿದ ಕದೀಮರು ಸುಮಾರು 66 ಸಾವಿರ ಮೌಲ್ಯದ ಸಿಗರೇಟ್ ದೋಚಿ ಪರಾರಿಯಾಗಿದ್ದರು. ಈ ಪ್ರಕರಣ ಬೆನ್ನುಹತ್ತಿದ ಯಲಹಂಕ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ಸಿಗರೇಟ್ ದೋಚಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಸದ್ಯ ಈ ಕೃತ್ಯಕ್ಕೆ ಬಳಕೆ ಮಾಡಿದ್ದ ವಸ್ತುಗಳು ಹಾಗೂ ಸಿಗರೇಟ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿ ಪ್ರಸಾದ್ ತಿಳಿಸಿದ್ದಾರೆ.