Subscribe to Updates
Get the latest creative news from FooBar about art, design and business.
- ಆರೋಗ್ಯಪೂರ್ಣವಾಗಿ ದೇಶವನ್ನು ಮುನ್ನಡೆಸಿದ ಶಕ್ತಿ ಕಾಂಗ್ರೆಸ್: ಕಂದೇಗಾಲ ಶಿವರಾಜು
- ಕುವೆಂಪು ಅವರ ಪುಸ್ತಕಗಳನ್ನು ಯುವ ಪೀಳಿಗೆ ಅಧ್ಯಯನ ಮಾಡಬೇಕು: ಎಂ.ಎಂ.ನಟರಾಜು ಅಭಿಪ್ರಾಯ
- ಅಭಿವೃದ್ಧಿ ಕಾಮಗಾರಿಗಳಿಗೆ ವೇಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪ್ರಗತಿ ಪರಿಶೀಲನೆ
- ಏನೂ ಮಾಡದ ಸ್ಪಂದನಾ ಸೇಫ್ ಆಗುತ್ತಿರುವುದು ಹೇಗೆ? | ಮಾಳು ನಿಪನಾಳ್ ಅಸಮಾಧಾನ
- ಮನೆಯವರಿಗೆ, ಸ್ನೇಹಿತರಿಗೆ ಗೊತ್ತಾಗದಂತೆ ಮಾಸ್ಕ್ ಧರಿಸಿ 14 ಕೋಟಿ ಲಾಟರಿ ಬಹುಮಾನ ಪಡೆದ ಯುವಕ: ಕಾರಣ ಕೇಳಿದ್ರೆ ಶಾಕ್ ಆಗ್ತೀರಿ…!
- ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಗೆಲುವು ಕಟ್ಟಟ್ಟ ಬುತ್ತಿ: ಜಿಲ್ಲಾಧಿಕಾರಿ ಶುಭ ಕಲ್ಯಾಣ್
- ವಾಜಪೇಯಿ ಅವರ 101ನೇ ಜಯಂತಿ: ವಾಜಪೇಯಿ ನಡೆದು ಬಂದ ಹಾದಿ ಸದಾ ಪ್ರೇರಣೆ: ವಿಹೆಚ್ ಪಿ ಜಿಲ್ಲಾಧ್ಯಕ್ಷರಾದ ಪ್ರದೀಪ್
- “ಧಂ ಹೋಡಿಯೋದ್ ಕಮ್ಮಿ ಮಾಡ್ಬೇಕಲೈ…!” | ಒಂದು ಸಿಗರೇಟ್ ಬೆಲೆ ಎಷ್ಟು ಏರಲಿದೆ? 72 ರೂ. ಆಗೋದು ಸತ್ಯನಾ?
Author: admin
ಪುಣೆ: ಗಂಡ ಕಾರಿಗಾಗಿ ಲೋನ್ ಮಾಡಿದ್ದು, ಇಎಂಐ ಇನ್ಸ್ಟಾಲ್ ಮೆಂಟ್ ತುಂಬುವುದಕ್ಕಾಗಿ ಹೆಂಡ್ತಿಗೆ ತನ್ನ ತವರಿನಿಂದ ಒಂದೂವರೆ ಲಕ್ಷ ರೂಪಾಯಿ ಕೇಳಿಕೊಂಡು ಬರುವಂತೆ ಕಿರುಕುಳ ನೀಡಿದ್ದಾನೆ. ಆದರೆ, ಹಣ ತರುವ ಸ್ಥಿತಿಯಲ್ಲಿಆಕೆ ಇರಲಿಲ್ಲ. ಇದರಿಂದ ಕೋಪಗೊಂಡ ಗಂಡ ಹೀನ ಕೆಲಸಕ್ಕೆ ಕೈ ಹಾಕಿದ್ದಾನೆ. ತನ್ನ ಬೇಡಿಕೆಗೆ ಬಗ್ಗದ ಪತ್ನಿಗೆ ಬುದ್ಧಿ ಕಲಿಸಲು ಪತಿ ಸ್ನಾನ ಗೃಹದಲ್ಲಿ ಕ್ಯಾಮರಾ ಫಿಕ್ಸ್ ಮಾಡಿ ಆಕೆ ಸ್ನಾನ ಮಾಡುತ್ತಿರುವ ದೃಶ್ಯವನ್ನು ಚಿತ್ರೀಕರಿಸಿಕೊಂಡಿದ್ದಾನೆ. ಬಳಿಕ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿದ್ದಾನೆ. ಪುಣೆಯ ಅಂಬೇಗಾಂವ್ ನಲ್ಲಿ ಈ ಘಟನೆ ನಡೆದಿದ್ದು, 4 ವರ್ಷಗಳ ಹಿಂದೆಯಷ್ಟೇ ಈ ಮಹಿಳೆ ಆರೋಪಿ ಜೊತೆಗೆ ವಿವಾಹವಾಗಿದ್ದಳು. ಸದ್ಯ ಯುವತಿ ತನ್ನ ಗಂಡ ಸೇರಿದಂತೆ 6 ಜನರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಮಿಂಚುಹುಳುಗಳು ಈಗ ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸುತ್ತಿವೆಯಂತೆ, ನಂಬಲಸಾಧ್ಯವಾದರೂ ಇದು ಸತ್ಯ. ದೇಶದಲ್ಲಿನ ಒಟ್ಟಾರೆ ಮಿಂಚುಹುಳಗಳ ಪೈಕಿ ಶೇ.76ರಷ್ಚು ಮಿಂಚುಹುಳುಗಳು ಈಗಾಗಲೇ ನಶಿಸಿ ಹೋಗಿವೆ ಎಂದು ಅಧ್ಯಯನವೊಂದು ತಿಳಿಸಿದೆ. ಭಾರತೀಯ ವನ್ಯಜೀವಿ ಸಂಸ್ಥೆ (WII) ಸಹಯೋಗದೊಂದಿಗೆ ಇಬ್ಬರು ವಿಜ್ಞಾನಿಗಳು ನಡೆಸಿದ ಇತ್ತೀಚಿನ ರಾಷ್ಟ್ರವ್ಯಾಪಿ ಮಿಂಚುಹುಳುಗಳ ಜನಗಣತಿಯು ಕೇವಲ ಒಂದು ವರ್ಷದೊಳಗೆ ದೇಶಾದ್ಯಂತ ಅವುಗಳ ಸಂಖ್ಯೆಯಲ್ಲಿ ತೀವ್ರ ಮತ್ತು ಕಳವಳಕಾರಿ 76 ಪ್ರತಿಶತದಷ್ಟು ಕುಸಿತವನ್ನು ಬಹಿರಂಗಪಡಿಸಿದೆ. ಡೆಹ್ರಾಡೂನ್‌ನ ಗ್ರಾಫಿಕ್ ಎರಾ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ. ವೀರೇಂದ್ರ ಪ್ರಸಾದ್ ಉನಿಯಾಲ್ ಮತ್ತು ಡಾ. ನಿಧಿ ರಾಣಾ ಅವರು ಪ್ರಾರಂಭಿಸಿದ ಪ್ರವರ್ತಕ ರಾಷ್ಟ್ರವ್ಯಾಪಿ ಮಿಂಚುಹುಳು ಜನಗಣತಿಯ ನಂತರ ಈ ವಾಸ್ತವಾಂಶವು ಬೆಳಕಿಗೆ ಬಂದಿದೆ. ಈ ಸಂಯೋಜಿತ ಅಂಶಗಳು ಮಿಂಚುಹುಳುಗಳ ನೈಸರ್ಗಿಕ ಜೀವನ ಚಕ್ರವನ್ನು ತೀವ್ರವಾಗಿ ಅಡ್ಡಿಪಡಿಸುತ್ತಿವೆ ಮತ್ತು ಅವುಗಳ ಜನಸಂಖ್ಯೆಯನ್ನು ತೀವ್ರವಾಗಿ ಅಪಾಯಕ್ಕೆ ಸಿಲುಕಿಸುತ್ತಿವೆ ಎಂದು ಉನಿಯಾಲ್ ವಿವರಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು…
ಕೊಪ್ಪಳ: ಪೈಪ್ ನ ಮೇಲೆ ತುಂಗಭದ್ರಾ ಎಡದಂಡೆ ಕಾಲುವೆ ದಾಟಲು ಮುಂದಾಗಿದ್ದ ಬಾಲಕಿಯೊಬ್ಬಳು ನೀರುಪಾಲಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕರೆಕಲ್ ಕ್ಯಾಂಪ್ ಬಳಿಯಲ್ಲಿ ನಡೆದಿದೆ. ಚೈತ್ರಾ ಯಾದವ್(13) ನೀರುಪಾಲಾದ ಬಾಲಕಿಯಾಗಿದ್ದಾಳೆ. ಕಾಲುವೆ ಎಡಭಾಗದಲ್ಲಿ ಬಾಲಕಿಯ ಪಾಲಕರು ಕುರಿಯ ಹಟ್ಟಿಯನ್ನು ಹಾಕಿಕೊಂಡಿದ್ದರು. ಕಾಲುವೆಗೆ ಅಡ್ಡಲಾಗಿ ಹಾಕಿರುವ ಪೈಪ್ ಮೂಲಕ ಕಾಲುವೆಯ ಬಲಭಾಗಕ್ಕೆ ಬಂದು, ತಮ್ಮ ದಿನಬಳಕೆ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಎಂದಿನಂತೆ ಮಂಗಳವಾರ ಬಾಲಕಿಯು ಪೈಪ್ ಮೇಲಿಂದ ಕಾಲುವೆ ದಾಟಲು ಹೋಗಿದ ವೇಳೆ ಕಾಲು ಜಾರಿ ಕಾಲುವೆಗೆ ಬಿದ್ದು ಈ ದುರಂತ ಸಂಭವಿಸಿದೆ. ಮಾಹಿತಿ ತಿಳಿದ ಕೂಡಲೇ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಬಾಲಕಿಗಾಗಿ ಹುಡುಕಾಟ ನಡೆಸಿದ್ದು, ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ:…
ಬೆಂಗಳೂರು: ಇಬ್ಬರು ಮಹಿಳೆಯರನ್ನು ಬಟ್ಟೆ ಬಿಚ್ಚಿಸಿ ಡಿಜಿಟಲ್ ಅರೆಸ್ಟ್ ಮಾಡಿಸಿದ ಘಟನೆ ವರದಿಯಾಗಿದೆ. ಕೆಲವು ಸೈಬರ್ ಅಪರಾಧಿಗಳು, ಮುಂಬೈ ಪೊಲೀಸ್ ಅಧಿಕಾರಿಗಳಂತೆ ನಟಿಸಿ, ಅವರನ್ನು ವಿವಸ್ತ್ರಗೊಳಿಸಿ ವೀಡಿಯೊ ಕರೆಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಘಟನೆ ಜುಲೈ 17, 2025 ರಂದು ನಡೆದಿದ್ದು, ಕೊಲಾಬಾ ಪೊಲೀಸ್ ಠಾಣೆಯ ಅಧಿಕಾರಿಗಳೆಂದು ಹೇಳಿಕೊಂಡ ವ್ಯಕ್ತಿಗಳು ಸಂತ್ರಸ್ತ ಮಹಿಳೆಯರಿಗೆ ಕರೆ ಮಾಡಿ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಕರೆ ಮಾಡಿದ ಆರೋಪಿಗಳು ಮಹಿಳೆಯೊಬ್ಬರು ಜೆಟ್ ಏರ್ ವೇಸ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಮತ್ತು ಹಣ ವರ್ಗಾವಣೆ, ಮಾನವ ಕಳ್ಳಸಾಗಣೆ ಮತ್ತು ಕೊಲೆಗೂ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದರು. ನಿಖರವಾದ ಆಧಾರ್ ವಿವರಗಳನ್ನು ಉಲ್ಲೇಖಿಸಿ ಮತ್ತು ನಕಲಿ ಬಂಧನ ವಾರಂಟ್‌ಗಳೊಂದಿಗೆ ಬೆದರಿಕೆ ಹಾಕುವ ಮೂಲಕ, ಅವರು ಮಹಿಳೆಯರಲ್ಲಿ ಭಯವನ್ನು ಹುಟ್ಟುಹಾಕಿದರು ಮತ್ತು ಹಲವಾರು ಅವಮಾನಕರ ಮತ್ತು ಕಾನೂನುಬಾಹಿರ ಬೇಡಿಕೆಗಳಿಗೆ ಒಪ್ಪುವಂತೆ ಒತ್ತಾಯಿಸಿದರು ಎಂದು ವರದಿಯಾಗಿದೆ. ಆರ್ ಬಿಐ ಮತ್ತು ಸಿಬಿಐ ಮಾರ್ಗಸೂಚಿಗಳ ಅಡಿಯಲ್ಲಿ ಪರಿಶೀಲನಾ ವಿಧಾನಗಳನ್ನು ಉಲ್ಲೇಖಿಸಿ ವಂಚಕರು ಮಹಿಳೆಯೊಬ್ಬರ…
ತುಮಕೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 10+2 (ಪದವಿ ಪೂರ್ವ) ಮತ್ತು 10+2+3 (ಸ್ನಾತಕ ಪದವಿ) ವಿದ್ಯಾರ್ಹತೆ ಹೊಂದಿರುವ ಎಲ್ಲಾ ವಯೋಮಾನದ ವಿದ್ಯಾರ್ಥಿಗಳು ಯುಜಿಸಿ ಅನುಮೋದಿತ ಸ್ನಾತಕ/ಸ್ನಾತಕೋತ್ತರ ಕೋರ್ಸ್ ಗಳಿಗೆ ಪ್ರವೇಶಾತಿ ಪಡೆಯಬಹುದಾಗಿದ್ದು, ಕರಾಮುವಿಯು ತುಮಕೂರು ಪ್ರಾದೇಶಿಕ ಕೇಂದ್ರದಲ್ಲಿ 2025–26ನೇ (ಜುಲೈ ಆವೃತ್ತಿ) ಶೈಕ್ಷಣಿಕ ಸಾಲಿನ ಪ್ರವೇಶಾತಿ ಆರಂಭವಾಗಿದ್ದು, ಬಿ.ಎ, ಬಿ.ಕಾಂ, ಬಿ.ಬಿ.ಎ, ಬಿ.ಸಿ.ಎ, ಬಿ.ಲಿಬ್.ಐ.ಎಸ್ಸಿ., ಬಿ.ಎಸ್ಸಿ., ಬಿ.ಎಸ್.ಡಬ್ಲ್ಯೂ., ಎಂ.ಎ., ಎಂ.ಸಿ.ಜೆ., ಎಂ.ಕಾಂ., ಎಂ.ಎಸ್ಸಿ., ಎಂ.ಲಿಬ್.ಐ.ಎಸ್ಸಿ., ಎಂ.ಬಿ.ಎ., ಎಂ.ಸಿ.ಎ., ಎಂ.ಎಸ್.ಡಬ್ಲ್ಯೂ ಮತ್ತು ಪಿ.ಜಿ ಸರ್ಟಿಫಿಕೇಟ್., ಡಿಪ್ಲೊಮಾ., ಸರ್ಟಿಫಿಕೇಟ್ ಕೋರ್ಸ್ ಗಳಿಗೆ ಪ್ರವೇಶಾತಿ ಮಾಡಿಕೊಳ್ಳಲಾಗುತ್ತಿದೆ. ಪ್ರಥಮ ವರ್ಷದ ಪ್ರವೇಶಾತಿಗೆ 2025ರ ಸೆಪ್ಟೆಂಬರ್ 15 ಕೊನೆಯ ದಿನಾಂಕ. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಮಂಜೂರಾಗುವ ಶುಲ್ಕ ಪಾವತಿ ಸೌಲಭ್ಯದಡಿ ಕರಾಮುವಿಯ ಈ ಮೇಲ್ಕಂಡ ಕೋರ್ಸ್ ಗಳಿಗೆ ಸೇರ ಬಯಸುವ ಅಲ್ಪಸಂಖ್ಯಾತ ವರ್ಗದ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬುದ್ಧಿಸ್ಟ್ ಮತ್ತು ಪಾರ್ಸಿ) ಅರ್ಹ ಅಭ್ಯರ್ಥಿಗಳು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಂತರ್ಜಾಲ https://dom.karnataka.gov.in ದಲ್ಲಿರುವ ಕರಾಮುವಿಯ ಪ್ರವೇಶಾತಿ ಪೋರ್ಟಲ್…
ಬೀದರ್: ಜಿಲ್ಲೆಯ ಸಾರ್ವಜನಿಕರು ಭಿಕ್ಷೆ ಬೇಡುತ್ತಿರುವುದು ಕಂಡು ಬಂದರೆ ಅವರಿಗೆ ಭಿಕ್ಷೆ ನೀಡಿ ಪ್ರೋತ್ಸಾಹಿಸದೇ ಅದನ್ನು ಬಹಿಷ್ಕರಿಸಿ, ಬೀದರ್ ಜಿಲ್ಲೆಯನ್ನು ಭಿಕ್ಷಾಟನೆ ಮುಕ್ತವಾಗಿ ಮಾಡಲು ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಭಿಕ್ಷೆ ಬೇಡುತ್ತಿರುವವರು ಕಂಡು ಬಂದರೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ತಿಳಿಸಿ ಅಥವಾ ಟೋಲ್ ಫ್ರೀ ಸಂಖ್ಯೆ 10581 ಮತ್ತು ಸಹಾಯವಾಣಿ ಸಂಖ್ಯೆ: 94823 00400 ಕರೆ ಮಾಡಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದಡಿ ನಡೆಯುವ ಮಕ್ಕಳ ಸಹಾಯವಾಣಿ 1098 ಹಾಗೂ ಪೊಲೀಸ್ ಸಹಾಯವಾಣಿ 112ಗೆ ಅಥವಾ ಸಮೀಪದಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಅವರು ಮಾಹಿತಿ ನೀಡಿದ್ದಾರೆ. ಭಿಕ್ಷಾಟನೆ ನಿಷೇಧ ಕಾಯ್ದೆ 1975ರ ಪ್ರಕಾರ ಮೂರು ತಿಂಗಳು ಕಠಿಣ ಕಾರಗೃಹವಾಸ ಹಾಗೂ ದಂಡವನ್ನು ವಿಧಿಸಲಾಗುವುದು. ಅದೇ ರೀತಿ ಮಕ್ಕಳನ್ನು ಭಿಕ್ಷಾಟನೆಗೆ ಬಳಸಿದ್ದಲ್ಲಿ ಬಾಲನ್ಯಾಯ ಮಕ್ಕಳ ರಕ್ಷಣೆ…
ಹಿಮಾಚಲ ಪ್ರದೇಶದ ಶಿಲೈ ಗ್ರಾಮದಲ್ಲಿ ಹಟ್ಟಿ ಬುಡಕಟ್ಟಿನ ಇಬ್ಬರು ಸಹೋದರರು ಒಬ್ಬ ಮಹಿಳೆಯೊಂದಿಗೆ ವಿವಾಹವಾಗಿದ್ದು, ಬಹುಪತಿತ್ವದ ಸಂಪ್ರದಾಯದ ಅಡಿಯಲ್ಲಿ ಈ ವಿವಾಹ ನೂರಾರು ಜನರ ಸಮ್ಮುಖದಲ್ಲಿ ನಡೆಯಿತು. ನವ ವಧು ಸುನೀತಾ ಚೌಹಾಣ್ ಮತ್ತು ವರರಾದ ಪ್ರದೀಪ್ ಮತ್ತು ಕಪಿಲ್ ನೇಗಿ ಅವರು ಯಾವುದೇ ಒತ್ತಡವಿಲ್ಲದೆ ಈ ಮದುವೆಯ ನಿರ್ಧಾರ ತೆಗೆದುಕೊಂಡಿದ್ದೇವೆ ಅಂತ ಹೇಳಿದರು. ಜುಲೈ 12 ರಂದು ಸಿರ್ಮೌರ್ ಜಿಲ್ಲೆಯ ಟ್ರಾನ್ಸ್–ಗಿರಿ ಪ್ರದೇಶದಲ್ಲಿ ನಡೆದ ಮೂರು ದಿನಗಳ ಮದುವೆ ಸಮಾರಂಭಕ್ಕೆ ಸ್ಥಳೀಯ ಜಾನಪದ ಹಾಡುಗಳು ಮತ್ತು ನೃತ್ಯಗಳು ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆದವು. ಈ ವಿವಾಹ ಸಮಾರಂಭದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇನ್ನೂ ವಧು ಕುನ್ಹಾತ್ ಗ್ರಾಮದ ಸುನೀತಾ ಈ ಮದುವೆಯ ಬಗ್ಗೆ ಪ್ರತಿಕ್ರಿಯಿಸುತ್ತಾ, ಈ ಸಂಪ್ರದಾಯದ ಬಗ್ಗೆ ತನಗೆ ಅರಿವಿತ್ತು ಮತ್ತು ಯಾವುದೇ ಒತ್ತಡವಿಲ್ಲದೆ ತನ್ನ ನಿರ್ಧಾರವನ್ನು ತೆಗೆದುಕೊಂಡೆ ಮತ್ತು ಈ ಬಂಧವನ್ನು ನಾನು ತುಂಬಾನೇ ಗೌರವಿಸುತ್ತೇನೆ ಎಂದು ಹೇಳಿದರು. ಶಿಲೈ ಗ್ರಾಮದ ಪ್ರದೀಪ್…
ಸರಗೂರು: ಸದಾ ಸಮಾಜದ ಏಳಿಗೆಗಾಗಿ ದುಡಿಯುತ್ತಿರುವ ಆದಿ ಕರ್ನಾಟಕ ಮಹಾಸಭಾ ಸರಗೂರು ತಾಲೂಕು ಘಟಕದಿಂದ ಆಗಸ್ಟ್ 4 ರಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಆದಿ ಕರ್ನಾಟಕ ಮಹಾಸಭಾದ ತಾಲೂಕು ಶಿವಣ್ಣ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವರ್ಷದಂತೆ ಈ ಸಾಲಿನಲ್ಲಿಯೂ ಪ್ರತಿಭಾ ಮಕ್ಕಳನ್ನು ಪ್ರೋತ್ಸಾಹಿಸಿ, ಉನ್ನತ ವಿದ್ಯಾಭ್ಯಾಸಕ್ಕೆ ನೆರವಾಗಲೆಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಎಸ್ ಎಸ್‌ಎಲ್ ಸಿ, ಪಿಯು ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಸಲ್ಲಿಕೆಗೆ ಜು.30 ಕಡೆ ದಿನವಾಗಲಿದೆ. ಹೀಗಾಗಿ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಅಂಬೇಡ್ಕರ್ ಟ್ರಸ್ಟ್ ಸಂಪರ್ಕಿಸಬೇಕು ಎಂದು ಅವರು ಮನವಿ ಮಾಡಿದರು. ಅಂಬೇಡ್ಕರ್ ಟ್ರಸ್ಟ್, ಆದಿ ಕರ್ನಾಟಕ ಮಹಾಸಭಾ ಜಂಟಿಯಾಗಿ ಪಟ್ಟಣದ ಅಂಬೇಡ್ಕರ ಭವನದಲ್ಲಿ ಆ.4ರಂದು ಬೆಳಗ್ಗೆ 11ಕ್ಕೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದ್ದು, ಶಾಸಕ…
ಸರಗೂರು: ತಾಲೂಕಿನ ಬಿ ಮಟಕರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಕವಾಡಿ ಗ್ರಾಮದ ನಾಗಪ್ಪ ಎಂಬುವರ ಮಗನಾದ ಪ್ರಸನ್ನ ಸೇರಿದ ಜಮೀನಲ್ಲಿ ಸೋಮವಾರದಂದು ಹುಲಿ ಹೆಜ್ಜೆ ಗುರುತು ಕಂಡು ಬಂಕವಾಡಿ ಗ್ರಾಮ ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಭಾನುವಾರಂದು ರಾತ್ರಿ ಹುಲಿ ಜಮೀನಿನಲ್ಲಿ ಕಾಣಿಸಿಕೊಂಡಿದೆ. ಜಮೀನಿನಲ್ಲಿ ಕಾವಲು ಕಾಯುತ್ತಿದ್ದ ರೈತರು ಹುಲಿಯನ್ನು ಕಂಡು ಗಾಬರಿಗೊಂಡಿದ್ದಾರೆ. ಸೋಮವಾರ ಬೆಳಗ್ಗೆ ಗ್ರಾಮಸ್ಥರಿಗೆ ಹುಲಿ ಹೆಜ್ಜೆ ಗುರುತು ಕಂಡು ಬಂದಿದ್ದು, ಹುಲಿ ಜಮೀನಿನಲ್ಲೇ ಬೀಡು ಬಿಟ್ಟಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಹುಲಿಯನ್ನು ಸೆರೆಹಿಡಿಯಲು ಮೊಳೆಯೂರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಹುಲಿ ಹೆಜ್ಜೆ ಗುರುತನ್ನು ಕಂಡು ಅತಂಕಕೊಳಗಿರುವ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆದರೆ ಅಧಿಕಾರಿಗಳು ತಮಗೂ ಇದಕ್ಕೂ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದ್ದು, ಗ್ರಾಮಸ್ಥರ ಮನವಿಗೆ ಸ್ಪಂದಿಸುತ್ತಿಲ್ಲ, ಸ್ಥಳಕ್ಕೂ ಬಂದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಕಳೆದ ಒಂದು ತಿಂಗಳಿನಿಂದ ಹುಲಿ ಹಾಗೂ ಆನೆಗಳು ಹಾವಳಿಯಿಂದ ದಿನನಿತ್ಯ ಜಮೀನಲ್ಲಿ…
ತುಮಕೂರು : ಜಿಲ್ಲೆಯ ಶಿರಾ ತಾಲ್ಲೂಕಿನ ಯಲಿಯೂರು ಗ್ರಾಮದ ವಾಸಿಯಾದ ರವೀಶ ವೈ.ಟಿ. ತಾಲ್ಲೂಕು ಮೀನುಗಾರರ ಸಹಕಾರ ಸಂಘ ನಿಯಮಿತ ಯಲಿಯೂರು ಈ ಸಂಘದ ಅಧ್ಯಕ್ಷರಾಗಿದ್ದು, ಮಧುಗಿರಿ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಾರ್ಯಾಲಯದ ನಿರ್ದೇಶನದಂತೆ ಈ ಹಿಂದೆ ಸಂಘದ ಬ್ಯಾಂಕಿನ ವ್ಯವಹಾರಗಳನ್ನು ತಡೆ ಹಿಡಿದಿದ್ದು, ಬ್ಯಾಂಕಿನ ವ್ಯವಹಾರ ತಡೆಹಿಡಿದಿರುವುದನ್ನು ತೆರವುಗೊಳಿಸುವಂತೆ ಬ್ಯಾಂಕಿಗೆ ಪತ್ರ ಬರೆಯಲು ಮಧುಗಿರಿ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಸಣ್ಣಪ್ಪಯ್ಯ ಮತ್ತು ಪ್ರಥಮ ದರ್ಜೆ ಸಹಾಯಕ ರಾಘವೇಂದ್ರ ಪಿರ್ಯಾದಿ ರವೀಶ ವೈ ಟಿ ಇವರಿಂದ 20,000 ಸಾವಿರ ರೂ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ. ದೂರುದಾರನಾದ ರವೀಶ.ವೈ.ಟಿ. ಲಂಚದ ಹಣ ಕೊಡಲು ಇಷ್ಟವಿಲ್ಲದೇ ದಿನಾಂಕ : 21/07/2025 ರಂದು ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಪೊಲೀಸ್ ಇನ್ಸ್ ಪೆಕ್ಟರ್ ರಾಜು ಟಿ. ಮೊ.ನಂ:05/2025 ಕಲಂ–7(0) ಭ್ರಷ್ಟಾಚಾರ ಪ್ರತಿಬಂಧಕ ಅಧಿನಿಯಮ–1988 (ತಿದ್ದುಪಡಿ–2018) ರಂತೆ ಪ್ರಕರಣ ದಾಖಲಿಸಿಕೊಂಡು, ಟ್ರ್ಯಾಪ್ ಕಾರ್ಯಾಚರಣೆ…