Author: admin

ಪ್ರಗತಿಪರ ಸಾಹಿತಿಗಳಿಗೆ ಪದೇ ಪದೇ ಬೆದರಿಕೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ಸರ್ಕಾರವು ನಗರ ಕೇಂದ್ರ ಅಪರಾಧ ವಿಭಾಗಕ್ಕೆ ಪೊಲೀಸ್ ಇಲಾಖೆ ವರ್ಗಾಯಿಸಿದೆ. ಪ್ರಕರಣದ ಮೇಲ್ವಿಚಾರಣೆ ಮತ್ತು ತನಿಖೆಗೆ ಎಸಿಪಿ ಶ್ರೇಣಿಯ ಪೊಲೀಸ್ ಅಧಿಕಾರಿಯನ್ನು ನಿಯೋಜಿಸಲು ನಿರ್ಧರಿಸಲಾಗಿದೆ. ಪ್ರಗತಿಪರ ಸಾಹಿತಿಗಳ ನಿಯೋಗ ಆ.23 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಕಳವಳ ವ್ಯಕ್ತಪಡಿಸಿತ್ತು. ಈ ಸಂಬಂಧ ಡಿಜಿಪಿ ಮತ್ತು ಐಜಿಪಿ ಅಲೋಕ್ ಮೋಹನ್ ಆದೇಶ ಹೊರಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಲ್ಲದೆ, ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಮತ್ತು ಸಂಬಂಧಿಸಿದ ಡಿಸಿಪಿ ಅವರು ಪ್ರತಿದಿನವೂ ಪ್ರಕರಣಗಳನ್ನು ಪರಿಶೀಲಿಸುವಂತೆ ನಿರ್ದೇಶನಗಳನ್ನು ನೀಡಲಾಗಿದೆ. ಹಲವು ಬರಹಗಾರರಿಗೆ ಬೆದರಿಕೆ ಪತ್ರಗಳು ಬಂದಿದ್ದು, ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ.

Read More

ಗುಬ್ಬಿ ತಾಲೂಕಿನ ಸಿ.ಎಸ್.ಪುರ ಹೋಬಳಿಯ ಸಾರ್ವಜನಿಕ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಉಂಡಿ ಮಂಜುಳ ಶಿವಪ್ಪರವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ಇದೇ ವೇಳೆ ವೈದ್ಯಾಧಿಕಾರಿಗಳೊಂದಿಗೆ ಮಾತನಾಡಿದ ಉಂಡಿ ಮಂಜುಳ ಶಿವಪ್ಪರವರು ಆರೋಗ್ಯ ಕೇಂದ್ರದ ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚೆ ನಡೆಸಿದರಲ್ಲದೇ, ಸಂಬಂಧಪಟ್ಟ ಅಧಿಕಾರಿಗಳನ್ನ ಕರೆಸಿ ಮಾತನಾಡಿ, ಸೂಕ್ತ ಕ್ರಮ ಜರುಗಿಸುವಂತೆ ತಾಲೂಕು ಹೆಲ್ತ್ ಆಫೀಸರ್ ಗೆ ಆದೇಶ ನೀಡಿದರು. ಇದೇ ವೇಳೆ ನ್ಯಾಯಾಧೀಶರಿಗೆ ಉತ್ತರಿಸಿದ ಹೆಲ್ತ್ ಆಫೀಸರ್, ಇಬ್ಬರು ನುರಿತ ನರ್ಸ್ ಗಳನ್ನು ನೇಮಿಸುತ್ತೇನೆ ಮತ್ತು ಇಬ್ಬರು ವೈದ್ಯಾಧಿಕಾರಿಗಳಿದ್ದಾರೆ ಅವರಿಗೆ ಬೆಳಗ್ಗೆ ಒಬ್ಬರು ಮತ್ತು ರಾತ್ರಿ ಒಬ್ಬರು ಕಾರ್ಯನಿರ್ವಹಿಸುವಂತೆ ಹೇಳುತ್ತೇನೆ, ಸಾರ್ವಜನಿಕರಿಗೆ ಯಾವುದೇ ಪ್ರಥಮ ಚಿಕಿತ್ಸೆ ಕೊಡುವಂತಹ ಕೆಲಸವನ್ನು ಮಾಡುತ್ತೇವೆ ಎಂದು ಸ್ಥಳದಲ್ಲೇ ಉತ್ತರಿಸಿದರು. ಸ್ಥಳದಲ್ಲಿ ಗುಬ್ಬಿ ವಕೀಲರ ಸಂಘದ ಜಂಟಿ ಕಾರ್ಯದರ್ಶಿ ನಂದೀಶ ಬಿ.ವಿ., ವಕೀಲರಾದ ಡಿ.ಮಂಜುನಾಥ್, ಎಂ.ಪಿ.ರವೀಶ್ ಸಿ.ಕೆ.ಪುರ, ಪಿಎಸ್ ಐ ಶಿವಕುಮಾರ್, ಪಿಡಬ್ಲ್ಯುಡಿ ಅಧಿಕಾರಿಗಳು ಮತ್ತಿತರರು ಹಾಜರಿದ್ದರು.…

Read More

ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ವಿರೋಧಿಸಿ ರೈತರು ಶ್ರೀರಂಗಪಟ್ಟಣದಲ್ಲಿ ರೈತರು ನೇಣು ಕುಣಿಕೆಗಳನ್ನು ಕೈಯಲ್ಲಿ ಹಿಡಿದುಕೊಂಡು ಪ್ರತಿಭಟನೆ ನಡೆಸಿದರು. ರೈತ ಮುಖಂಡ ನಂಜುಂಡೇಗೌಡ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು, ಡ್ಯಾಮ್ ಭರ್ತಿಯಾಗದಿದ್ದರೂ ತಮಿಳುನಾಡಿಗೆ ನೀರು ಬಿಟ್ಟಿರುವ ಕ್ರಮದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ರು. ಗ್ಯಾರೆಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಸರ್ಕಾರ ರೈತರಿಗೆ ನೇಣು ಭಾಗ್ಯ ನೀಡುತ್ತಿದೆ. ತಮಿಳುನಾಡಿಗೆ ನೀರು ಹರಿಸೋದನ್ನ ನಿಲ್ಲಿಸದಿದ್ದರೆ, ಸಾಮೂಹಿಕ ಆತ್ಮಹತ್ಯೆಗೆ ಶರಣಾಗ್ತೇವೆ ಅಂತ ರೈತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Read More

“ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇವೆ ಎಂದರೆ ಪ್ರತಿ ನಿಲ್ದಾಣದಲ್ಲೂ ಬಸ್ ಇಳಿದು ಹತ್ತುವಂತೆ ಮಾಡುವುದಲ್ಲ, ಒಮ್ಮೆ ಹತ್ತಿದರೆ ಕಡೆಯ ತನಕವೂ ಇರುವಂತಹ ದೃಢ ನಿರ್ಧಾರ ಮಾಡಬೇಕು. ಬಸ್ ಹತ್ತುವುದು, ಇಳಿಯುವುದು ಮಾಡಬಾರದು. ಮಾಡಿದರೆ ಆಗ ನಮ್ಮ ಬೆಲೆಯನ್ನೇ ಕಳೆದುಕೊಳ್ಳುತ್ತೇವೆ” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಜೆಡಿಎಸ್ ನಾಯಕ ಮಾಜಿ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಪಕ್ಷದಲ್ಲಿ ಹೆಚ್ಚು ಕಾಲ ಇದ್ದಷ್ಟು ಹಿರಿತನ, ಜವಾಬ್ದಾರಿ ಮತ್ತು ಗೌರವ ಬರುತ್ತದೆ. ಬರುವುದು, ಹೋಗುವುದು ಮಾಡಿದರೆ ನಾಯಕತ್ವಕ್ಕೂ ಧಕ್ಕೆಯಾಗುತ್ತದೆ. ಈ ಮಾತನ್ನು ಕೇವಲ ಇಂದು ಪಕ್ಷ ಸೇರ್ಪಡೆಯಾದ ಶಿವಮೊಗ್ಗ ಜಿಲ್ಲೆಯವರಿಗೆ ಮಾತ್ರ ಹೇಳುತ್ತಿಲ್ಲ, ರಾಜ್ಯದ ಸಮಸ್ತ ಕಾರ್ಯಕರ್ತರು, ಮುಖಂಡರಿಗೆ ಕಿವಿ ಮಾತು ಹೇಳುತ್ತಿದ್ದೇನೆ” ಎಂದು ತಿಳಿಸಿದರು.

Read More

ಕಾಶ್ಮೀರ ಕಡತಗಳಿಗೆ ರಾಷ್ಟ್ರೀಯ ಪ್ರಶಸ್ತಿ ನೀಡುವುದರ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್. ಕಾಶ್ಮೀರ ಫೈಲ್ಸ್ ಅನ್ನು ರಾಷ್ಟ್ರೀಯ ಏಕೀಕರಣಕ್ಕಾಗಿ ನೀಡಲಾಯಿತು. ಇದನ್ನು ಟೀಕಿಸಿ ತಮಿಳುನಾಡು ಮುಖ್ಯಮಂತ್ರಿ ಹೊರ ಬಂದರು. ದಿ ಕಾಶ್ಮೀರ್ ಫೈಲ್ಸ್‌ ಗಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವುದು ಆಶ್ಚರ್ಯ ತಂದಿದೆ ಎಂದು ಸ್ಟಾಲಿನ್ ಹೇಳಿದ್ದಾರೆ. ಚಲನಚಿತ್ರ-ಸಾಹಿತ್ಯ ಪ್ರಶಸ್ತಿಗಳಲ್ಲಿ ರಾಜಕೀಯ ತಪ್ಪಿಸಬೇಕು ಎಂದರು. ಕೀಳು ರಾಜಕೀಯ ಲಾಭಕ್ಕಾಗಿ ಈ ರೀತಿಯ ಪ್ರಶಸ್ತಿಗಳನ್ನು ಬಳಸಿಕೊಳ್ಳುವುದು ಸರಿಯಲ್ಲ ಎಂದು ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ.

Read More

ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಪ್ರಯುಕ್ತ ನಾರಾಯಣ ನೇತ್ರಾಲಯವು ನೇತ್ರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅಂಧರಿಗೆ ದೃಷ್ಟಿ ನೀಡಲು ಕಣ್ಣುಗಳನ್ನು ದಾನ ಮಾಡುವಂತೆ ಮನವಿ ಮಾಡಿಕೊಂಡಿದೆ. ಮರಣದ ಬಳಿಕ ಕಣ್ಣುಗಳ ದಾನದಿಂದ ‘ಕಾರ್ನಿಯಲ್ ಅಂಧತ್ವ’ಕ್ಕೆ ಒಳಗಾದವರಿಗೆ ದೃಷ್ಟಿ ನೀಡಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರೂ ನೇತ್ರದಾನದ ಮಹತ್ವ ಅರಿತು ಕಣ್ಣುಗಳನ್ನು ದಾನ ಮಾಡಬೇಕು. ನೇತ್ರದಾನ ಪಾಕ್ಷಿಕದ ಭಾಗವಾಗಿ ಸೆ. 2ರ ರಾತ್ರಿ 11. 59  ಕ್ಕೆ ‘ಮಧ್ಯರಾತ್ರಿ ಓಟ’ ಹಮ್ಮಿಕೊಳ್ಳಲಾಗಿದೆ.

Read More

ಮ್ಯಾನ್ಮಾರ್‌ ನಿಂದ 2500 ವಲಸಿಗರನ್ನು ಗಡಿಪಾರು ಮಾಡಲು ಮಣಿಪುರ ಸಿದ್ಧವಾಗಿದೆ. ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ರಾಜ್ಯ ಈ ಬಗ್ಗೆ ಸ್ಪಷ್ಟಪಡಿಸಿದೆ. ಮ್ಯಾನ್‌ ಗಳೊಂದಿಗೆ ಗಡಿ ಹಂಚಿಕೊಂಡಿರುವ ಐದು ಜಿಲ್ಲೆಗಳಲ್ಲಿ ಅಕ್ರಮ ವಲಸಿಗರು ಇದ್ದಾರೆ ಎಂದು ಮಣಿಪುರ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಮಣಿಪುರ ಗಲಭೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿರೇನ್ ಸಿಂಗ್ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿದರು. ಇದೇ ತಿಂಗಳ 29ರಂದು ಮಣಿಪುರದಲ್ಲಿ ವಿಧಾನಸಭೆ ಅಧಿವೇಶನ ನಡೆಯಬೇಕಿದ್ದ ಸಂದರ್ಭದಲ್ಲಿ ಸಭೆ ನಡೆಸಲಾಗಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರು ಸಭೆಯಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಪ್ರಧಾನಿ ಮತ್ತು ಗೃಹ ಸಚಿವರು ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿರುವುದೇ ಮಣಿಪುರದಲ್ಲಿ ಪರಿಸ್ಥಿತಿ ಸುಧಾರಿಸಲು ಕಾರಣ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.ರಾಜ್ಯ ಸಹಜ ಸ್ಥಿತಿಯತ್ತ ಸಾಗುತ್ತಿದೆ. ಮಣಿಪುರ ಸರ್ಕಾರವು ಶಾಂತಿ ಪ್ರಯತ್ನಗಳು ಮತ್ತು ಪುನರ್ವಸತಿ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

Read More

ಬೆಳಗಾವಿಯ ಮಾರ್ಕಂಡಯ್ಯ ಕೋ ಆಪರೇಟಿವ್ ಶುಗರ್ ಮಿಲ್ ನ ಮಾರ್ಕಂಡಯ್ಯ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಚುನಾವಣೆಯು ರವಿವಾರ ದಿನಾಂಕ 27.8.2023ರಂದು ಜರಗಲಿದ್ದು ಅವಿನಾಶ ರಾಮ್ ಭಾವು ಪೋತದಾರ್ ಪ್ಯಾನಲ್ ಪರವಾಗಿ ಮತಯಾಚನೆ ಮಾಡಿದ್ದಾರೆ. ಕಳೆದ 2019- 20 ರಲ್ಲಿ ಪ್ರಾರಂಭಿಸಿದ ಮಾರ್ಕಂಡಯ್ಯ ಕಾರ್ಖಾನೆ ಇನ್ನೂ ಬಾಲ್ಯಾವಸ್ಥೆಯಲ್ಲಿ ಇದೆ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಬೇಕಾಗಿದೆ. ಈಗಾಗಲೇ ಮೂರು ವರ್ಷಗಳಿಂದ ಅಭಿವೃದ್ಧಿಪರವಾಗಿ ಕಾರ್ಖಾನೆಯನ್ನು ತೆಗೆದುಕೊಂಡು ಹೋಗುತ್ತಿದ್ದೇವೆ. ಇನ್ನಷ್ಟು ಕೆಲಸಗಳನ್ನು ಮಾಡಬೇಕಾಗಿದೆ ಅವಿನಾಶ್ ರಾಮಭಾವು ಪೋತದಾರ್ ಪ್ಯಾನಲ್ ತಮ್ಮ ಮತ ನೀಡಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.

Read More

ಕುಸ್ತಿ ಸೂಪರ್‌ ಸ್ಟಾರ್ ಬ್ರೇ ವ್ಯಾಟ್ ನಿಧನರಾಗಿದ್ದಾರೆ. ಅವರಿಗೆ 36 ವರ್ಷ ವಯಸ್ಸಾಗಿತ್ತು. ಅವರು WWE ಚಾಂಪಿಯನ್‌ ಶಿಪ್, WWE ಯೂನಿವರ್ಸಲ್ ಚಾಂಪಿಯನ್‌ ಶಿಪ್, WWE ರಾ ಟ್ಯಾಗ್ ಟೀಮ್ ಚಾಂಪಿಯನ್‌ಶಿಪ್, ಟ್ಯಾಗ್ ಟೀಮ್ ಎಲಿಮಿನೇಟರ್, WWE ಇಯರ್ ಎಂಡ್ ಅವಾರ್ಡ್ – ಅತ್ಯುತ್ತಮ ಪುರುಷ ಕುಸ್ತಿಪಟು (2019) ನಂತಹ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. WWE ಮುಖ್ಯ ಅಧಿಕಾರಿ ಟ್ರಿಪಲ್ ಎಚ್ ಬ್ರೇ ವ್ಯಾಟ್ ಸಾವಿನ ಸುದ್ದಿಯನ್ನು ಜಗತ್ತಿಗೆ ತಿಳಿಸಿದರು. WWE ಹಾಲ್ ಆಫ್ ಫೇಮರ್ ಮೈಕ್ ರೊಟುಂಡಾದಿಂದ ವಿಂಡ್‌ಹ್ಯಾಮ್ ರೊಟುಂಡಾ ಅಥವಾ ಬ್ರೇ ವ್ಯಾಟ್ ಫೋನ್ ಕರೆಯನ್ನು ಸ್ವೀಕರಿಸಿದ್ದಾರೆ ಎಂದು ಟ್ರಿಪಲ್ ಎಚ್ ತಿಳಿಸಿದ್ದಾರೆ. ಬ್ರೇ ವ್ಯಾಟ್ ಅವರು ಅಮೆರಿಕನ್ ಕುಸ್ತಿಪಟು ಬಾಬಿ ಲ್ಯಾಶ್ಲೇ ಅವರೊಂದಿಗಿನ ದ್ವೇಷದ ನಂತರ ರೆಸಲ್‌ಮೇನಿಯಾ 39 ಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಬ್ರೇ ವ್ಯಾಟ್ ಅವರ ಕೊನೆಯ ಪಂದ್ಯವು LA ನೈಟ್ ವಿರುದ್ಧ ರಾಯಲ್ ರಂಬಲ್‌ ನಲ್ಲಿತ್ತು. ಆ ದಿನ ಗೆದ್ದ ಬ್ರೇ ವ್ಯಾಟ್ ನಂತರ…

Read More

ನೃಪತುಂಗ ವಿಶ್ವವಿದ್ಯಾಲಯದ ಕುಲಪತಿ ಶ್ರೀನಿವಾಸ ಎಸ್. ಬಳ್ಳಿ ಅವರು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ ಇಪಿ) ಬೆಂಬಲಿಸಿ, ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದಾರೆ. ಕಸ್ತೂರಿರಂಗನ್ ನೇತೃತ್ವದಲ್ಲಿ ರಚಿಸಲಾದ ಎನ್‌ ಇಪಿ ರಾಜಕೀಯ ಹಿತಾಸಕ್ತಿಯಿಂದ ಹೊರತಾಗಿದೆ. ಕರ್ನಾಟಕದಲ್ಲಿ ಜಾರಿಗೊಳಿಸಲಾದ ಹೊಸ ನೀತಿಯು ತ್ರಿಭಾಷಾ ಸೂತ್ರವನ್ನು ಒಳಗೊಂಡಿದ್ದು, ಮಾತೃ ಭಾಷೆಯಲ್ಲೂ ಕಲಿಕೆಗೆ ಅವಕಾಶ ಮಾಡಿಕೊಟ್ಟಿದೆ. ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯ ಜತೆಗೆ ಇತರೆ ಭಾಷೆಗಳ ಆಯ್ಕೆಯ ಸ್ವಾತಂತ್ರ್ಯ ನೀಡಲಾಗಿದೆ.

Read More