Subscribe to Updates
Get the latest creative news from FooBar about art, design and business.
- ಆರೋಗ್ಯಪೂರ್ಣವಾಗಿ ದೇಶವನ್ನು ಮುನ್ನಡೆಸಿದ ಶಕ್ತಿ ಕಾಂಗ್ರೆಸ್: ಕಂದೇಗಾಲ ಶಿವರಾಜು
- ಕುವೆಂಪು ಅವರ ಪುಸ್ತಕಗಳನ್ನು ಯುವ ಪೀಳಿಗೆ ಅಧ್ಯಯನ ಮಾಡಬೇಕು: ಎಂ.ಎಂ.ನಟರಾಜು ಅಭಿಪ್ರಾಯ
- ಅಭಿವೃದ್ಧಿ ಕಾಮಗಾರಿಗಳಿಗೆ ವೇಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪ್ರಗತಿ ಪರಿಶೀಲನೆ
- ಏನೂ ಮಾಡದ ಸ್ಪಂದನಾ ಸೇಫ್ ಆಗುತ್ತಿರುವುದು ಹೇಗೆ? | ಮಾಳು ನಿಪನಾಳ್ ಅಸಮಾಧಾನ
- ಮನೆಯವರಿಗೆ, ಸ್ನೇಹಿತರಿಗೆ ಗೊತ್ತಾಗದಂತೆ ಮಾಸ್ಕ್ ಧರಿಸಿ 14 ಕೋಟಿ ಲಾಟರಿ ಬಹುಮಾನ ಪಡೆದ ಯುವಕ: ಕಾರಣ ಕೇಳಿದ್ರೆ ಶಾಕ್ ಆಗ್ತೀರಿ…!
- ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಗೆಲುವು ಕಟ್ಟಟ್ಟ ಬುತ್ತಿ: ಜಿಲ್ಲಾಧಿಕಾರಿ ಶುಭ ಕಲ್ಯಾಣ್
- ವಾಜಪೇಯಿ ಅವರ 101ನೇ ಜಯಂತಿ: ವಾಜಪೇಯಿ ನಡೆದು ಬಂದ ಹಾದಿ ಸದಾ ಪ್ರೇರಣೆ: ವಿಹೆಚ್ ಪಿ ಜಿಲ್ಲಾಧ್ಯಕ್ಷರಾದ ಪ್ರದೀಪ್
- “ಧಂ ಹೋಡಿಯೋದ್ ಕಮ್ಮಿ ಮಾಡ್ಬೇಕಲೈ…!” | ಒಂದು ಸಿಗರೇಟ್ ಬೆಲೆ ಎಷ್ಟು ಏರಲಿದೆ? 72 ರೂ. ಆಗೋದು ಸತ್ಯನಾ?
Author: admin
ಸರಗೂರು: ಶಾಸಕ ಅನೀಲ್ ಚಿಕ್ಕಮಾದು ಅಭಿವೃದ್ಧಿ ಕೆಲಸ ಕಾರ್ಯಗಳು ಮಾಡಿರುವ ಬಗ್ಗೆ ತಾಲೂಕಿನ ಜನತೆ ಮತ್ತು ಸಾರ್ವಜನಿಕರಿಗೆ ಗೊತ್ತು. ಶಾಸಕರ ವಿರುದ್ಧ ಟೀಕೆ ಮಾಡುವವರಿಗೆ ಏನು ಗೊತ್ತು, ತಾಲ್ಲೂಕಿನಲ್ಲಿ ವಿರೋಧ ಮಾಡುವರು ಇದ್ದರೆ ಮಾತ್ರ ಶಾಸಕರಿಗೆ ಇನ್ನಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳು ಮಾಡಲು ಸಾಧ್ಯ ಎಂದು ಕೋತ್ತೆಗಾಲ ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ ತಿಳಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ವಿರೋಧ ಪಕ್ಷಗಳು ಟೀಕೆ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಅವರು ಏನೂ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಹೀಗಾಗಿ ತಾಲೂಕಿನಲ್ಲಿ ಅಭಿವೃದ್ಧಿ ಆಗುತ್ತಿಲ್ಲ ಎಂದು ಅಪಪ್ರಚಾರ ಮಾಡಲಾಗುತ್ತಿದ್ದು, ಇದರಿಂದ ಏನೂ ಪ್ರಯೋಜನವಿಲ್ಲ ಎಂದು ಅವರು ಹೇಳಿದರು. ಅನೀಲ್ ಚಿಕ್ಕಮಾದು ರವರು ತಂದೆ ಕಾಲದಿಂದಲೂ ಜಾತಿ ರಾಜಕಾರಣ ಮಾಡಿಕೊಂಡು ಬಂದಿಲ್ಲ. ಅವರು ಪಕ್ಷಾತೀತವಾಗಿ ಜನರ ಸೇವೆಯಲ್ಲಿ ಹೆಚ್ಚಿನ ತೊಡಗಿಸಿಕೊಂಡು ಬರುತ್ತಿದ್ದಾರೆ. ತಾಲ್ಲೂಕಿನ ಜನರಿಗೆ ಯಾವುದೇ ಸಮಯದಲ್ಲಿ ಸಮಸ್ಯೆ ಉಂಟಾಗಿದೆ ಎಂದು ಗಮನಕ್ಕೆ ಬಂದ ಕೂಡಲೇ…
ಸರಗೂರು: ತಾಲೂಕಿನ ಬಿ.ಮಟಕರೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಹಿರೇಹಳ್ಳಿ ದೇವದಾಸ್ ಅವರು ಅವಿರೋಧವಾಗಿ ಆಯ್ಕೆಯಾದರು. ಗುರುವಾರ ಪಂಚಾಯಿತಿ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ದೇವದಾಸ್ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಹಿರೇಹಳ್ಳಿ ದೇವದಾಸ್ ಅವರು, ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ನೀರಾವರಿ ಇಲಾಖೆಯ ಎಂಜಿನಿಯರ್ ಉಷಾ ಘೋಷಿಸಿದರು. ಪಿಡಿಒ ಭಾಗ್ಯಮ್ಮ, ಸಹಕರಿಸಿದರು. ಪಂಚಾಯಿತಿ ಆವರಣದಲ್ಲಿ ಚುನಾವಣೆ ಪ್ರಕ್ರಿಯೆ ನಡೆದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ನಾಮಧಾರಿಗೌಡದ ಸಮುದಾಯದ ಮುಖಂಡರು ಸಿಹಿ ಹಂಚಿ ಹಾಗೂ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು. ಉಪಾಧ್ಯಕ್ಷೆ ಗೌರಿಬಾಯಿ, ಸದಸ್ಯರಾದ ಅಜಿತ್‌ಕುಮಾರ್, ಎಂ.ನಾಗೇಂದ್ರ, ಕುರ್ಣೇಗಾಲ ಬೆಟ್ಟಸ್ವಾಮಿ, ಬೊಮ್ಮ, ವೀಣಾಕುಮಾರ್, ಎಚ್.ಕೃಷ್ಣ, ನಾಗೇಶ್, ನಾಗರತ್ನ, ರೂಪಾಬಾಯಿ, ರಾಣಿಬಾಯಿ, ಸುನೀತಾಬಾಯಿ, ಮೀನಾ ಕುಮಾರಿ, ಚಿನ್ನಮ್ಮ ಮಾದಪ್ಪ, ವಿನೋದ್, ನಾಗಯ್ಯ, ರತ್ನಮ್ಮ, ಎನ್.ಆರ್.ಅಶ್ವಿನಿ, ಸುಮತಿ, ಬಿಲ್ ಕಲೆಕ್ಟರ್ ಮಹೇಶ್, ಸರಸ್ವತಿ ಹಾಜರಿದ್ದರು. ಇದೇ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ದೇವದಾಸ್ ಅವರು, ಪಂಚಾಯಿತಿಯು ಕಾಡಂಚಿನ ಗ್ರಾಮಗಳನ್ನು…
ಸರಗೂರು: ತಾಲೂಕಿನ ಚಿಕ್ಕ ದೇವಮ್ಮ ಬೆಟ್ಟಕ್ಕೆ ಸಹಕಾರ ಸಚಿವ ಎನ್.ಕೆ.ರಾಜಣ್ಣ ಕುಟುಂಬ ಸದಸ್ಯರಾದ ಮಗಳು ರಶ್ಮಿ ಮತ್ತು ಸೊಸೆ ಭಾವನಾ ಹಾಗೂ ಕುಟುಂಬದವರು ಗುರುವಾರದಂದು ಭೇಟಿ ನೀಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದತಾಪಂ ಮಾಜಿ ಅಧ್ಯಕ್ಷ ಮನುಗನಹಳ್ಳಿ ಗುರುಸ್ವಾಮಿ, ರಾಜ್ಯ ಸರ್ಕಾರ ಸಹಕಾರ ಸಚಿವರಾದ ಎನ್.ಕೆ.ರಾಜಣ್ಣರವರು ನಮ್ಮ ತಾಲೂಕಿನ ನಾಡದೇವಿ ಚಿಕ್ಕಮ್ಮ ತಾಯಿ ಭೇಟಿ ನೀಡಿ ಸಂದರ್ಭದಲ್ಲಿ ತಾಲ್ಲೂಕಿನ ಅಭಿವೃದ್ಧಿ ಕೆಲಸ ಬಗ್ಗೆ ಮಾಹಿತಿಯನ್ನು ನೀಡಿದರು. ತಾಯಿಯ ಬೆಟ್ಟಕ್ಕೆ ಪ್ರವಾಸೋದ್ಯಮ ಮಾಡಲು ನಮ್ಮ ಶಾಸಕರು ಹಗಲು ಇರುಳು ಶ್ರಮ ಪಡುತ್ತಿದ್ದಾರೆ. ವನಜಲಸಿರಿ ನಾಡು ಎಂದು ಪ್ರಸಿದ್ಧವಾಗಿರುವ ತಾಲೂಕನ್ನು ಇನ್ನಷ್ಟು ಅಭಿವೃದ್ಧಿ ಮಾಡಲು ರಾಜಣ್ಣರವರು, ನಮ್ಮ ತಾಲೂಕಿನ ಸಹಕಾರ ಬ್ಯಾಂಕ್ ಗಳಿಗೆ ಅನುದಾನವನ್ನು ನೀಡಿದರೆ, ತಾಲೂಕಿನ ರೈತರಿಗೆ ಅನುಕೂಲವಾಗುತ್ತದೆ ಎಂದು ಅವರ ಮಗಳಿಗೆ ರಶ್ಮಿರವರಿಗೆ ತಿಳಿಸಿದರು. ನಂತರ ಮಾತನಾಡಿದ ಎನ್.ಕೆ.ರಾಜಣ್ಣ ರವರ ಮಗಳು ರಶ್ಮಿ ಮಾತನಾಡಿ, ನಾವು ಮೈಸೂರಿನ ಚಾಮುಂಡಿ ಆಷಾಡ ಮಾಸದಲ್ಲಿ ತಾಯಿಗೆ ಪೂಜೆ ಮಾಡಿಸಲು ಬಂದಿದ್ದೆವು. ತಾಲ್ಲೂಕಿನ…
ಸರಗೂರು: ಪಟ್ಟಣದ 10 ವಾರ್ಡಿನಲ್ಲಿ ಗುರುವಾರ ದಂದು ಬೆಳ್ಳಂಬೆಳಗ್ಗೆ ಕೋತಿಗಳ ಹಾವಳಿಯಿಂದ ಹೊರಗಡೆ ಹೋಗಲು ಭಯವಾಗುತ್ತಿದೆ. ಕೂಡಲೇ ಕೋತಿಗಳನ್ನು ಹಿಡಿದು ಬೇರೆ ಕಡೆ ಸಾಗಿಸಬೇಕು ಎಂದು ವಾರ್ಡಿನ ಜನರು ಒತ್ತಾಯಿಸಿದರು. ಪಟ್ಟಣದಲ್ಲಿ ಸುಮಾರು ವಾರ್ಡುಗಳಲ್ಲಿ ಹತ್ತು-–ಹನ್ನೆರಡು ಮಹಿಳೆಯರು ಹಾಗೂ ಸಣ್ಣ ಮಕ್ಕಳ ಮೇಲೆ ಕೋತಿಗಳು ದಾಳಿ ಮಾಡಿ, ಗಾಯಗೊಳಿಸಿದ್ದ ಘಟನೆಗಳು ನಡೆದಿವೆ. ಮಹಿಳೆಯರು ಮತ್ತು ಮಕ್ಕಳು ಮನೆಯಿಂದ ಹೊರಗೆ ಬರಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಮತ್ತು ಪಟ್ಟಣ ಪಂಚಾಯಿತಿಯವರು ಕೂಡಲೇ ಇದಕ್ಕೊಂದು ಪರಹಾರ ಕಂಡುಹಿಡಿಯಬೇಕು ಎಂದು ವಾರ್ಡಿನ ಶಾಂತಿ ಆರೋಪ ಮಾಡಿದ್ದಾರೆ. ಅರಣ್ಯ ಮತ್ತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗಳಿಗೆ ಕರೆ ಮಾಡಿ ವಿಷಯ ತಿಳಿಸಿದರೂ ಅವರು ನಮಗೆ ಬರುವುದಿಲ್ಲ.ಇವರಿಂದ ಅವರಿಗೆ ಹೇಳುತ್ತಿದ್ದಾರೆ.ಇದರ ಬಗ್ಗೆ ಯಾರಿಗೂ ಹೇಳಬೇಕು ಎನ್ನುವುದು ಗೊತ್ತಿಲ್ಲ.ಕೋತಿಗಳ ಹಾವಳಿಯಿಂದ ವಾರ್ಡಿನ ಜನರು ಕಂಗಾಲಾಗಿದ್ದು, ರಸ್ತೆಯಲ್ಲಿ ಮತ್ತು ಮನೆಯ ಮುಂಭಾಗದಲ್ಲಿ ಒಬ್ಬೊಬ್ಬರೇ ತಿರುಗಾಡುವಂತಿಲ್ಲ. ಮನುಷ್ಯರ ಮೇಲೆ ದಾಳಿ ಮಾಡುವುತ್ತಿದ್ದವೆ ಅಂಗವಿಕಲರ ಮಹಿಳೆ ಮನೆ ಮುಂಭಾಗದಲ್ಲಿ ಕುಳಿತಿರುವಾಗ ದಾಳಿ…
ಬೀದರ್: ಜಿಲ್ಲೆಯ ಔರಾದ ತಾಲೂಕಿನ ಶೇಂಬೆಳ್ಳಿ ಗ್ರಾಮ ಪಂಚಾಯಿತಿಯಲ್ಲಿ 15 ನೇ ಹಣಕಾಸಿನಲ್ಲಿ ಅವ್ಯವಹಾರ ನಡೆಸಿದ್ದು, ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆ ಪದಾಧಿಕಾರಿಗಳು ಮಂಗಳವಾರ ಔರಾದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಅವರಿಗೆ ಮನವಿ ಸಲ್ಲಿಸಿದರು. ಅಕ್ರಮದ ಬಗ್ಗೆ ತನಿಖೆ ನಡೆಸಬೇಕು ಹಾಗೂ ಪಂಚಾಯಿತಿ ಪಿಡಿಒ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು ಇದೆ ವೇಳೆ ಕಮಲಹಾಸನ್, ಎಶೇಪ್ಪ ಶೇಂಬೆಳ್ಳಿ, ಆನಂದ ಶೇಂಬೆಳ್ಳಿ, ಶಿರೋಮಣಿ, ಸಿದ್ಧಾರ್ಥ್ ಯೋಗಿ, ದಾವಿದ ಎಕ್ಲಾರ್, ರಾಜಕುಮಾರ ಶೇಂಬೆಳ್ಳಿ ಇದ್ದರು. ವರದಿ: ಅರವಿಂದ ಮಲ್ಲಿಗೆ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಬೀದರ್ : ಔರಾದ್ ಪಟ್ಟಣದ ಬಾಲಕಿಯರ ವಸತಿ ನಿಲಯದಲ್ಲಿ ಪದವಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆಯ ಹಿನ್ನೆಲೆ ಜಿಲ್ಲೆಯ ವಸತಿ ನಿಲಯಗಳ ಮಕ್ಕಳಲ್ಲಿ ಮಾನಸಿಕ ಸ್ಥೈರ್ಯ ಹೆಚ್ಚಿಸುವ ದಿಸೆಯಲ್ಲಿ ಅವರೊಂದಿಗೆ ಮನೋವೈದ್ಯರ ಮೂಲಕ ಪ್ರತಿ ವಾರ ಸಮಾಲೋಚನೆ ನಡೆಸಲು ಕ್ರಮವಹಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗಿರೀಶ್ ಬದೋಲೆ ಅವರು ಅಧಿಕಾರಿಗೆ ನಿರ್ದೇಶನ ನೀಡಿದರು. ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಧ್ಯಾನೇಶ್ವರ್ ನಿರಗುಡೆ ಮತ್ತು ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಕಿರಣ ಪಾಟೀಲ್ ಸೇರಿದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿ ಅಗತ್ಯ ಸಲಹೆಗಳು ನೀಡಿದ್ದಾರೆ. ಜಿಲ್ಲೆಯ ಸಿಎಚ್ ಸಿ ಮತ್ತು ಪಿಎಚ್ ಸಿ ಕೇಂದ್ರಗಳಲ್ಲಿನ ವೈದ್ಯಾಧಿಕಾರಿಗಳು ಪ್ರತಿ ವಾರಕ್ಕೊಮ್ಮೆ ತಮ್ಮ ವ್ಯಾಪ್ತಿಯ ವಸತಿ ನಿಲಯಗಳಿಗೆ ಭೇಟಿ ನೀಡಬೇಕು. ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಬೇಕು. ಅವರ ಚಲನವಲನಗಳಲ್ಲಿ…
ಆಂಧ್ರಪ್ರದೇಶ: ವೇಶ್ಯಾವಾಟಿಕೆ ಮಾಡಲು ಒಪ್ಪದ ಲಿವ್–ಇನ್ ಸಂಗಾತಿಯನ್ನು ಗೆಳೆಯನೇ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ರಾಜೋಳು ಮಂಡಲ ವ್ಯಾಪ್ತಿಯ ಬಿ ಸವರಂ ಗ್ರಾಮದ ಸಿದ್ಧಾರ್ಥ ನಗರದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಪುಷ್ಪಾ ಎಂಬಾಕೆ ಮೃತಪಟ್ಟ ಮಹಿಳೆಯಾಗಿದ್ದಾರೆ. ಆಕೆಗೆ ಈ ಹಿಂದೆಯೇ ಬೇರೊಬ್ಬರ ಜತೆ ವಿವಾಹವಾಗಿತ್ತು. ಪತಿಯಿಂದ ಬೇರ್ಪಟ್ಟು ಕಳೆದ ಆರು ತಿಂಗಳಿನಿಂದ ಶೇಖ್ ಶಮ್ಮಾ ಎಂಬಾತನೊಂದಿಗೆ ವಾಸಿಸುತ್ತಿದ್ದಳು. ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಶಮ್ಮಾ ಆಕೆಗೆ ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಒತ್ತಾಯಿಸಿದ್ದಾನೆ. ತನ್ನೊಂದಿಗೆ ತಾನು ಹೇಳಿದ್ದ ಜಾಗಕ್ಕೆ ಬರಬೇಕೆಂದು ಕೇಳಿದ್ದಾನೆ ತೀವ್ರ ವಾಗ್ವಾದ ನಡೆದಿದೆ, ಆಕೆ ನಿರಾಕರಿಸಿದ್ದಾಳೆ. ಬಳಿಕ ಆತ ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ, ಆಕೆಯ ಎದೆಯ ಎಡಭಾಗ ಮತ್ತು ಕಾಲಿಗೆ ಇರಿದಿದ್ದಾನೆ. ಆತನನ್ನು ತಡೆಯಲು ಯತ್ನಿಸಿದ್ದ ಪುಷ್ಪಾ ತಾಯಿ ಹಾಗೂ ಆಕೆಯ ಸಹೋದರನ ಮೇಲೂ ಶಮ್ಮಾ ಹಲ್ಲೆ ನಡೆಸಿದ್ದಾನೆ. ಅತಿಯಾದ ರಕ್ತಸ್ರಾವದಿಂದ ಪುಷ್ಪಾ ಅಲ್ಲೇ ಕೊನೆಯುಸಿರೆಳೆದಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯ ಹುಡುಕಾಟಕ್ಕೆ…
ಹಾವೇರಿ: ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕಳಲಗೊಂಡ ಗ್ರಾಮದ ಬಳಿ ಶಾಲಾ ಬಸ್ ಚಾಲನೆ ಮಾಡುತ್ತಿದ್ದ ವೇಳೆಯೇ ಚಾಲಕ ಹೃದಯಾಘಾತದಿಂದ ಚಾಲಕ ಮೃತಪಟ್ಟ ನಡೆದಿದೆ. ಪಕ್ಕಿರೇಶ ಮಲ್ಲೇಶಣ್ಣನವರ್ (25) ಖಾಸಗಿ ಶಾಲೆಯ ಬಸ್ ನಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಇವರು ಸಂಜೆ ಶಾಲೆಯಿಂದ ಮಕ್ಕಳನ್ನು ಮನೆಗೆ ಡ್ರಾಪ್ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ರಸ್ತೆ ಬದಿಯಲ್ಲಿ ಅವರು ಬಸ್ ನಿಲ್ಲಿಸಿದ್ದಾರೆ. ಈ ವೇಳೆ ಮಕ್ಕಳು ಚೀರಾಡಿ ಸ್ಥಳೀಯರನ್ನು ಸಹಾಯಕ್ಕಾಗಿ ಕರೆದಿದ್ದಾರೆ, ತಕ್ಷಣ ಚಾಲಕನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಚಾಲಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಗಾಂಧೀನಗರ: ಮೀನು ನೋಡಲು 7 ವರ್ಷದ ಮಗಳನ್ನು ಕರೆದುಕೊಂಡು ಹೋದ ತಂದೆ ಮಗಳನ್ನು ಕಾಲುವೆಗೆ ತಳ್ಳಿ ಹಾಕಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಗುಜರಾತ್ ನಲ್ಲಿ ನಡೆದಿದೆ. ಭೂಮಿಕಾ ಮೃತ ಬಾಲಕಿಯಾಗಿದ್ದು, ಖೇಡಾ ನಿವಾಸಿ ವಿಜಯ್ ಸೋಲಂಕಿ ತನ್ನ ಮಗಳನ್ನು ಹತ್ಯೆ ಮಾಡಿದ ತಂದೆಯಾಗಿದ್ದಾನೆ. ಘಟನೆ ಸಂಬಂಧ ಪತಿ ವಿರುದ್ಧ ಅಂಜನಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನನ್ನ ಮಗಳು ಆಕಸ್ಮಿಕವಾಗಿ ಸಾವನ್ನಪ್ಪಿಲ್ಲ. ಪತಿ ಗುಜರಾತ್ ನ ನರ್ಮದಾ ಕಾಲುವೆಗೆ ತಳ್ಳಿ ಹತ್ಯೆ ಮಾಡಿದ್ದಾನೆ ಎಂದು ದೂರು ನೀಡಿದ್ದಾರೆ. ಸೋಲಂಕಿ ದಂಪತಿ ತಮ್ಮ ಮಗಳ ಜೊತೆ ಸ್ಥಳೀಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಮೂವರು ದ್ವಿಚಕ್ರ ವಾಹನದಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ, ತವರು ಮನೆಗೆ ಹೋಗುವ ಬಯಕೆಯನ್ನು ಅಂಜನಾ ವ್ಯಕ್ತಪಡಿಸಿದರು. ಅದಕ್ಕೆ ಪತಿ ನಿರಾಕರಿಸಿದ. ‘ನನಗೆ ಗಂಡು ಮಗು ಬೇಕಿತ್ತು. ಆದರೆ, ನೀನು ಹೆಣ್ಣು ಮಗುವಿಗೆ ಜನ್ಮ ನೀಡಿದ್ದೀಯಾ’ ಎಂದು ಪತ್ನಿಯನ್ನು ನಿಂದಿಸಿದ್ದ. ಕೆಲವು ನಿಮಿಷಗಳ ನಂತರ, ರಾತ್ರಿ 8 ಗಂಟೆ ಸುಮಾರಿಗೆ, ಆ…
‘ಜಸ್ಟಿಸ್ ಫಾರ್ ಸೌಮ್ಯ’(Justice for Soumya) ಎಂಬ ಚಿತ್ರವೊಂದು ಸದ್ದಿಲ್ಲದೇ ಚಿತ್ರೀಕರಣ ಮುಗಿಸಿದೆ. ನೈಜ ಘಟನೆಯೊಂದನ್ನು ಆಧರಿಸಿದ ಕಥೆ ಈ ಚಿತ್ರದಲ್ಲಿದೆ ಎಂದು ಹೇಳಲಾಗಿದೆ. ಚಿತ್ರದ ನಿರ್ದೇಶಕರಾದ ಟೈಗರ್ ನಾಗ್ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಹಾಡು “ಧಗ ಧಗ ಉರಿಯುತ್ತಿವೆ ಜ್ವಾಲೆ” ಎಂಬ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಈ ಹಾಡನ್ನು ಟೈಗರ್ ನಾಗ್ ತಾವೇ ಬರೆದು ಹಾಡಿದ್ದಾರೆ. ಚಿತ್ರಕ್ಕೆ ವಿಪಿನ್ ಛಾಯಾಗ್ರಹಣ ಮಾಡಿದ್ದಾರೆ. ಕೆ.ಮಂಜು ಕೋಟೆಕೆರೆ ಸಂಭಾಷಣೆ ಇದೆ. ಟೈಗರ್ ನಾಗ್ ಸಂಗೀತ ನೀಡಿ, ಗೀತೆ ರಚನೆ ಮಾಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC