Author: admin

ಬೆಂಗಳೂರು: ಹೈಕಮಾಂಡ್ ನಿರ್ಧಾರವನ್ನು ನಾನು, ಡಿ.ಕೆ.ಶಿವಕುಮಾರ್ ಇಬ್ಬರೂ ಪಾಲಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಒಬಿಸಿ ಸಲಹಾ ಮಂಡಳಿ ಸಭೆಯ ಸುದ್ದಿಗೋಷ್ಟಿ ವೇಳೆ, ಒಬಿಸಿ ನಾಯಕ ಇರುವ ಕರ್ನಾಟಕದಲ್ಲಿ ಸಿಎಂ ಬದಲಾವಣೆ ಆಗುತ್ತಾ? ಸಿಎಂ ಬದಲಾವಣೆ ಚರ್ಚೆ ಬಗ್ಗೆ ಪ್ರಶ್ನೆ ಕೇಳಿದ ವೇಳೆ ಎಐಸಿಸಿ ಒಬಿಸಿ ಅಧ್ಯಕ್ಷ ಅನಿಲ್ ಜೈ ಹಿಂದ್ ಅವರು ತಬ್ಬಿಬ್ಬಾದರು. ಪ್ರಶ್ನೆಗೆ ತಡವರಿಸಿದಾಗ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಬಂದು ಅನಿಲ್ ಜೈ ಹಿಂದ್ ಕಿವಿಯಲ್ಲಿ ಏನೋ ಹೇಳಿದರು. ಬಳಿಕ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನೀತಿ, ಸಿದ್ಧಾಂತ ನಿಮಗೆ ಗೊತ್ತಿದೆ, ಹಿಂದುಳಿದ ವರ್ಗಗಳ ಭಾಗೀದಾರರನ್ನ ಉತ್ತೇಜಿಸುತ್ತದೆ. ನಿಮ್ಮ ಪ್ರಶ್ನೆ ಆಶ್ಚರ್ಯ ತಂದಿದೆ ಜಾರಿಕೊಂಡರು. ಇದೇ ವೇಳೆ ಅನಿಲ್ ಜೈ ಹಿಂದ್‌ ಗೆ ಅದು ಹೈಕಮಾಂಡ್ ತೀರ್ಮಾನ ಅಂತೇಳಿ ಎಂದು ಸಿದ್ದರಾಮಯ್ಯ ಅವರೇ ಹೇಳಿಕೊಟ್ಟ ಘಟನೆಯೂ ನಡೆಯಿತು. ಬಳಿಕ ಹೈಕಮಾಂಡ್ ತೀರ್ಮಾನ ಎಂದು ಹೇಳಿ ಅವರು ಸುಮ್ಮನಾದರು. ಆದರೆ ಅಷ್ಟಕ್ಕೆ ಬಿಡದ ಸಿಎಂ ಸಿದ್ದರಾಮಯ್ಯ, ತಾವೇ ಮೈಕ್ ತೆಗೆದುಕೊಂಡು ಮತ್ತೊಮ್ಮೆ…

Read More

ಸರಗೂರು:  ಜುಲೈ ತಿಂಗಳ ಪಡಿತರ ಆಹಾರ ಧಾನ್ಯ ಅರ್ಧ ತಿಂಗಳು ದಾಟಿದರೂ ಪಡಿತರ ಚೀಟಿದಾರಿಗೆ ಇನ್ನೂ ತಲುಪಿಲ್ಲ. ಅಂಗಡಿ ಮುಂದೆ ಎಷ್ಟು ಹೊತ್ತು ಕಾದರೂ ಬಾಗಿಲು ತೆರೆಯದೇ ಇರುವ ಕಾರಣದಿಂದ ಜನರು ಕಾದು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.  ಪಟ್ಟಣದ ಕೆಲವು ವಾರ್ಡ್ ಗಳಲ್ಲಿ ಜನರಿಗೆ ಸರಿಯಾದ ಸಮಯಕ್ಕೆ ಪಡಿತರ ಆಹಾರ ಧಾನ್ಯವನ್ನು ನ್ಯಾಯ ಬೆಲೆ ಅಂಗಡಿ ಮಾಲಿಕರು ತಲುಪಿಸುತ್ತಿಲ್ಲ,  ಅಂಗಡಿಯನ್ನು ಮುಚ್ಚಿಕೊಂಡಿರುವುದು  ಬುಧವಾರದಂದೂ ಕಂಡು ಬಂದಿದೆ. ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ನೀಡದೆ ಅಂಗಡಿ ಮಾಲಿಕರು ನಿರ್ಲಕ್ಷ ಮಾಡುತ್ತಿದ್ದಾರೆ ವಾರ್ಡಿನ ಜನರು ಆರೋಪಿಸಿದರು. ಪ್ರಧಾನ ಮಂತ್ರಿಗಳ ಗರೀಬ್ ಕಲ್ಯಾಣ ಯೋಜನೆಯಡಿ 5 ಕೆ.ಜಿ. ಹಾಗೂ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ. ಒಟ್ಟು 10 ಕೆ.ಜಿ. ಅಕ್ಕಿಯನ್ನು ಪ್ರತಿ ಪಡಿತರ ಚೀಟಿದಾರರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಪ್ರತಿ ತಿಂಗಳು ವಿತರಿಸಲಾಗುತ್ತದೆ. ಪ್ರಸಕ್ತ ಜುಲೈ ತಿಂಗಳಿನ ಅರ್ಧ ಭಾಗ ಮುಗಿದರೂ ಇನ್ನೂ ಪಡಿತರ ಚೀಟಿದಾರರಿಗೆ ಅಕ್ಕಿ ದೊರೆತಿಲ್ಲ. ಪಟ್ಟಣದಲ್ಲಿ 12 ನ್ಯಾಯಬೆಲೆ…

Read More

ಸರಗೂರು:  ಶಾಸಕರು ತಾಲೂಕಿನಲ್ಲಿ ಒಂದು ಗುಂಟೆ ಜಾಗ ಹಾಗೂ ರೆಸ್ಟಾರ್ಟ್ ನ್ನು ತೆಗೆದುಕೊಂಡಿಲ್ಲ. ಯಾರಿಗೂ ಅವಕಾಶವನ್ನೂ ನೀಡಿಲ್ಲ, ತಾಲ್ಲೂಕಿನ ಸಂಪತ್ತು ಹಾಳು ಮಾಡಲು ಮುಂದಾಗಿಲ್ಲ. ಆದರೆ ಮಾದ್ಯಮ ಮತ್ತು ಪತ್ರಿಕೆಯಲ್ಲಿ ಶಾಸಕರ ವಿರುದ್ಧ ತಾಲೂಕಿನ ಸಂಪತ್ತು ಹಾಳು ಮಾಡುತ್ತಿದ್ದಾರೆ ಎಂದು ಜೆಡಿಎಸ್ ಪಕ್ಷದ ಮುಖಂಡ ಕೃಷ್ಣನಾಯಕರವರು ಹೇಳಿಕೆ ನೀಡಿದ್ದಾರೆ. ಅವರು ಸುಳ್ಳು ಮಾಹಿತಿಯನ್ನು ನೀಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಬಿರ್ವಾಳ್ ಚಿಕ್ಕಣ್ಣ ಕಿಡಿಕಾರಿದರು. ತಾಲ್ಲೂಕಿಗೆ ಕೃಷ್ಣನಾಯಕ ಅಮಾವಾಸ್ಯೆ ಮತ್ತು ಪೂರ್ಣಿಮೆಗೆ ಬರುತ್ತಿದ್ದಾರೆ. ನಮ್ಮ ಶಾಸಕ ಅನಿಲ್ ಚಿಕ್ಕಮಾದುರವರ ಬಗ್ಗೆ ಅವರಿಗೆ ಏನು ಗೊತ್ತು? ತಾಲೂಕಿನ ಬಗ್ಗೆ ಸಾರ್ವಜನಿಕರು ಹಾಗೂ ರೈತರ ಕಷ್ಟ ಕೇಳುವುದಕ್ಕೆ ಬರಲ್ಲ. ಇನ್ನೂ ತಾಲೂಕಿನ ಅಭಿವೃದ್ಧಿ ಕೆಲಸದ ಬಗ್ಗೆ ಆ ವ್ಯಕ್ತಿಗೇನು ಗೊತ್ತು? ಎಲ್ಲೋ ಕುಳಿತುಕೊಂಡು ಮಾಧ್ಯಮಗಳಲ್ಲಿ ಆರೋಪ ಮಾತನಾಡುವುದು ತಪ್ಪು.  ತಾಲ್ಲೂಕಿಗೆ ಬಂದು ಪತ್ರಿಕಾಗೋಷ್ಠಿ ನಡೆಸಿ ನೇರವಾಗಿ ಆರೋಪ ಮಾಡಿ, ಅದನ್ನು ಬಿಟ್ಟು ಅಲ್ಲಿ ಇಲ್ಲಿ ಕುಳಿತು ಮಾತನಾಡುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನ…

Read More

ಸರಗೂರು: ಜಿ.ಪಂ. ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ವಿರೋಧ ಪಕ್ಷಗಳ ನಾಯಕರು ಶಾಸಕ ಅನಿಲ್ ಕುಮಾರ್ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನ ಮಾಡುತ್ತಿದ್ದಾರೆ ಎಂದು ತಾಲೂಕು ಯೂಥ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಸಹಳ್ಳಿ ನವೀನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಎರಡು ವರ್ಷ ಪೂರೈಸಿದೆ. ಶಾಸಕ ಅನಿಲ್ ಅವರು  ತಾಲೂಕಿನ ಅಭಿವೃದ್ಧಿ ಕಾರ್ಯಗಳನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ನಾಲ್ಕು ಬಾರಿ ತಾಲೂಕಿಗೆ ಸಿಎಂ ಸಿದ್ದರಾಮಯ್ಯನವರನ್ನು ಕರೆಸಿ, ಬಹುಕೋಟಿ ವೆಚ್ಚದ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಿಸಿದ್ದಾರೆ. ಶಾಸಕರು ದಿ. ಸಂಸದ ಆರ್. ಧ್ರುವನಾರಾಯಣ್ ರವರ ಮಾರ್ಗದರ್ಶನದಲ್ಲಿ ಮುಂದೆ ಸಾಗುತ್ತಿದ್ದಾರೆ. ಆದರೆ ಸುಳ್ಳು ಮಾಹಿತಿಗಳನ್ನು ಹರಡಿ ಅವರ ಹೆಸರನ್ನು ಕೆಡಿಸಲು ವಿರೋಧಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ನವೀನ್ ಆರೋಪಿಸಿದರು. ಮುಂದಿನ ಜಿ.ಪಂ.  ಹಾಗೂ ತಾಲೂಕು ಪಂಚಾಯತ್ ಚುನಾವಣೆಯನ್ನು ಎದುರಿಸಲು ಸಾಧ್ಯವಿಲ್ಲದೇ ವಿಪಕ್ಷಗಳು ಈ ಅಪಪ್ರಚಾರ ಮಾಡುತ್ತಿದ್ದಾರೆ. ಆರೋಪ ಮಾಡುವವರು ನಮ್ಮ ಜೊತೆಗೆ ಬರಲಿ, ಶಾಸಕರು ತಾಲೂಕಿನಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನ ತೋರಿಸುತ್ತೇವೆ ಎಂದು…

Read More

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 10+2 (ಪದವಿ ಪೂರ್ವ) ಮತ್ತು 10+2+3 (ಸ್ನಾತಕ ಪದವಿ) ವಿದ್ಯಾರ್ಹತೆ ಹೊಂದಿರುವ ಎಲ್ಲಾ ವಯೋಮಾನದ ವಿದ್ಯಾರ್ಥಿಗಳು ಯುಜಿಸಿ ಅನುಮೋದಿತ ಸ್ನಾತಕ/ಸ್ನಾತಕೋತ್ತರ ಕೋರ್ಸ್ ಗಳಿಗೆ ಪ್ರವೇಶಾತಿ‌ ಪಡೆಯಬಹುದಾಗಿದ್ದು, ಕರಾಮುವಿಯು ತುಮಕೂರು ಪ್ರಾದೇಶಿಕ ಕೇಂದ್ರದಲ್ಲಿ 2025-26ನೇ (ಜುಲೈ ಆವೃತ್ತಿ) ಶೈಕ್ಷಣಿಕ ಸಾಲಿನ ಪ್ರವೇಶಾತಿ ಆರಂಭವಾಗಿದ್ದು, ಬಿ.ಎ, ಬಿ.ಕಾಂ, ಬಿ.ಬಿ.ಎ, ಬಿ.ಸಿ.ಎ, ಬಿ.ಲಿಬ್.ಐ.ಎಸ್ಸಿ., ಬಿ.ಎಸ್ಸಿ., ಬಿ.ಎಸ್.ಡಬ್ಲ್ಯೂ., ಎಂ.ಎ., ಎಂ.ಸಿ.ಜೆ., ಎಂ.ಕಾಂ., ಎಂ.ಎಸ್ಸಿ., ಎಂ.ಲಿಬ್‌.ಐ.ಎಸ್ಸಿ., ಎಂ.ಬಿ.ಎ., ಎಂ.ಸಿ.ಎ., ಎಂ.ಎಸ್.ಡಬ್ಲ್ಯೂ ಮತ್ತು ಪಿ.ಜಿ ಸರ್ಟಿಫಿಕೇಟ್., ಡಿಪ್ಲೊಮಾ., ಸರ್ಟಿಫಿಕೇಟ್ ಕೋರ್ಸ್ ಗಳಿಗೆ ಪ್ರವೇಶಾತಿ ಮಾಡಿಕೊಳ್ಳಲಾಗುತ್ತಿದೆ. “ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮಾತ್ರ ರಾಜ್ಯದಲ್ಲಿ ದೂರ ಶಿಕ್ಷಣ ನೀಡುವ ಏಕ ಮಾತ್ರ ವಿಶ್ವವಿದ್ಯಾನಿಲಯವಾಗಿರುತ್ತದೆ”. ಪ್ರಥಮ ವರ್ಷದ ಪ್ರವೇಶಾತಿ ಶುಲ್ಕದ ವಿವರ:- ಬಿ.ಎ-ರೂ.9,240/-., ಬಿ.ಕಾಂ- ರೂ.9,790, ಬಿ.ಬಿ.ಎ/ಬಿ.ಎಲ್.ಐ.ಎಸ್ಸಿ-13,640/-., ಬಿ.ಸಿ.ಎ/ಬಿ.ಎಸ್ಸಿ-ರೂ.26,290/-., ಬಿ.ಎಸ್.ಡಬ್ಲ್ಯೂ-ರೂ.14,190/-., ಎಂ.ಎ-ರೂ.11,660/-., ಎಂ.ಸಿ.ಜೆ-ರೂ.17,820/-., ಎಂ.ಕಾಂ-ರೂ.13,640/-., ಎಂ.ಬಿ.ಎ–ರೂ.32,890/-.‌, ಎಂ.ಎಸ್ಸಿ/ಎಂ.ಸಿ.ಎ-ರೂ.32,670/-., ಎಂ.ಎಸ್.ಡಬ್ಲ್ಯೂ-ರೂ.23,430/-., ಎಂ.ಎಲ್.ಐ.ಎಸ್ಸಿ-ರೂ.19,965/-ಗಳಾಗಿರುತ್ತದೆ. ಪ್ರಥಮ ವರ್ಷದ ಪ್ರವೇಶಾತಿಗೆ 2025ರ ಸೆಪ್ಟೆಂಬರ್ 15 ಕೊನೆಯ ದಿನಾಂಕ. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ…

Read More

ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಯೆಮೆನ್ ಅಧಿಕಾರಿಗಳು ಮುಂದೂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮರಣದಂಡನೆಯನ್ನು ಬುಧವಾರ ನಿಗದಿಪಡಿಸಲಾಗಿತ್ತು. ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೊಲ್ಲೆಂಗೋಡ್ ಮೂಲದ ಪ್ರಿಯಾ, ಜುಲೈ 2017 ರಲ್ಲಿ ಯೆಮೆನ್ ಪ್ರಜೆಯೊಬ್ಬರ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿ ಈ ಶಿಕ್ಷೆಗೆ ಗುರಿಯಾಗಿದ್ದರು. ಯೆಮನ್‌ ನ ಸ್ಥಳೀಯ ಅಧಿಕಾರಿಗಳು ಜುಲೈ 16 ರಂದು ನಿಗದಿಯಾಗಿದ್ದ ಮರಣದಂಡನೆಯನ್ನು ಮುಂದೂಡಿದ್ದಾರೆ ಎಂದು ತಿಳಿದುಬಂದಿದೆ ಎಂಬುವುದಾಗಿ ಮೂಲಗಳು ತಿಳಿಸಿವೆ. 2020 ರಲ್ಲಿ, ಯೆಮೆನ್ ನ್ಯಾಯಾಲಯವು ಅವರಿಗೆ ಮರಣದಂಡನೆ ವಿಧಿಸಿತು ಮತ್ತು ದೇಶದ ಸುಪ್ರೀಂ ನ್ಯಾಯಾಂಗ ಮಂಡಳಿಯು ನವೆಂಬರ್ 2023 ರಲ್ಲಿ ಅವರ ಮೇಲ್ಮನವಿಯನ್ನು ವಜಾಗೊಳಿಸಿತು. 38 ವರ್ಷದ ನರ್ಸ್ ಪ್ರಸ್ತುತ ಇರಾನ್ ಬೆಂಬಲಿತ ಹೌತಿಗಳ ನಿಯಂತ್ರಣದಲ್ಲಿರುವ ಯೆಮೆನ್ ರಾಜಧಾನಿ ಸನಾದಲ್ಲಿರುವ ಜೈಲಿನಲ್ಲಿದ್ದಾರೆ. ಸೂಫಿ ನಾಯಕ ಶೇಖ್ ಹಬೀಬ್ ಉಮರ್ ಬಿನ್ ಹಫೀಜ್ ಅವರ ಪ್ರತಿನಿಧಿಗಳು ಮತ್ತು ಮಹ್ದಿ ಅವರ ಕುಟುಂಬದ ನಡುವೆ ಧಮರ್‌ ನಲ್ಲಿ ಮಾತುಕತೆ ನಡೆಯುತ್ತಿರುವುದರಿಂದ ಮರಣದಂಡನೆ…

Read More

ಬೆಂಗಳೂರು: ಭಾರತಿನಗರ ರೌಡಿಶೀಟರ್ ಶಿವಪ್ರಕಾಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೆಆರ್‌ ಪುರಂ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್‌, ನನಗೂ ಕೊಲೆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಉದ್ದೇಶಪೂರ್ವಕವಾಗಿ ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿದ್ದಾರೆ. ಕೊಲೆಯಾದವನು ಮತ್ತು ಕೊಲೆ ಮಾಡಿದ ಆರೋಪಿಗಳು ನನಗೆ ಗೊತ್ತಿಲ್ಲ. ದೂರು ನೀಡಿದವರು ನನಗೆ ಗೊತ್ತಿಲ್ಲ. ಯಾರೇ ಸುಮ್ಮನೆ ದೂರು ನೀಡಿದರೂ ಎಫ್‌ ಎಆರ್ ದಾಖಲಿಸಬಹುದೇ ಎಂದು ಪ್ರಶ್ನಿಸಿದರು. ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದ ನಂತರ ನನಗೆ ಈ ವಿಚಾರ ಗೊತ್ತಾಯಿತು. ನನಗೆ ಸಂಬಂಧ ಇಲ್ಲದ ಪ್ರಕರಣದಲ್ಲಿ ನನ್ನ ಹೆಸರು ಬಂದಿದೆ. ಎಫ್‌ ಐಆರ್‌ ನಿಂದ ನನ್ನ ಹೆಸರು ತೆಗೆಯಲು ನಾನು ಕಾನೂನು ಸಮರ ಮಾಡುತ್ತೇನೆ. ಗೃಹ ಸಚಿವ ಪರಮೇಶ್ವರ್‌ ಅವರಿಗೂ ಮನವಿ ಮಾಡುತ್ತೇನೆ ಎಂದು ತಿಳಿಸಿದರು. ಹಲಸೂರು ಕೆರೆಯ ಸಮೀಪದ ಮನೆಯೊಂದರ ಎದುರು ಮಂಗಳವಾರ ರಾತ್ರಿ ಶಿವಪ್ರಕಾಶ್‌ ನನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಬಗ್ಗೆ  ಶಿವಪ್ರಕಾಶ್‌ ತಾಯಿ ವಿಜಯಕ್ಷ್ಮಿ ಭಾರತಿನಗರ ಠಾಣೆಗೆ ದೂರು ನೀಡಿದ್ದು…

Read More

ರಾಮನಗರ: ಡಿಜಿಟಲ್ ಅರೆಸ್ಟ್ ಬೆದರಿಕೆಯಿಂದ ನೊಂದು ಬೆಸ್ಕಾಂ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನಪಟ್ಟಣ ತಾಲೂಕಿನ ಕೆಲಗೆರೆ ಗ್ರಾಮದಲ್ಲಿ ನಡೆದಿದೆ. ಬೆಸ್ಕಾಂ ಸಿಬ್ಬಂದಿ 42 ವರ್ಷದ ಕುಮಾರ್ ಆತ್ಮಹತ್ಯೆಗೆ ಶರಣಾದವರಾಗಿದ್ದಾರೆ. ತಮ್ಮ  ಡೆತ್‌ ನೋಟ್‌ ನಲ್ಲಿ ಡಿಜಿಟಲ್ ಅರೆಸ್ಟ್ ಕಿರುಕುಳದ ಬಗ್ಗೆ ಮಾಹಿತಿ ನೀಡಿದ್ದಾರೆ. ಬೆಂಗಳೂರಿನ ಹೆಚ್‌ ಎಸ್‌ ಆರ್ ಲೇಔಟ್‌ನಲ್ಲಿ ಬೆಸ್ಕಾಂ ಹೊರಗುತ್ತಿಗೆ ನೌಕರರನಾಗಿ ಕುಮಾರ್ ಕೆಲಸ ಮಾಡುತ್ತಿದ್ದರು. ವಿಕ್ರಮ್ ಗೋಸ್ವಾಮಿ ಎಂಬಾತ ವೀಡಿಯೋ ಕಾಲ್ ಮಾಡಿ ತಾನು ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ನೀವು ಡಿಜಿಟಲ್ ಅರೆಸ್ಟ್ ಆಗಿದ್ದೀರಿ ಎಂದು ಬೆದರಿಸಿದ್ದ. ಕೇಸ್‌ ನಿಂದ ಕೈಬಿಡಲು ಅಕೌಂಟ್‌ ಗೆ ಹಣ ಹಾಕು ಎಂದು ಬೆದರಿಸಿದ್ದ. ಸುಮಾರು 11 ಲಕ್ಷ ಹಣವನ್ನ ತನ್ನ ಅಕೌಂಟ್‌ ಗೆ ಹಾಕಿಸಿಕೊಂಡಿದ್ದ. ಆದರೆ ಮತ್ತೆ ಹಣ ನೀಡುವಂತೆ ಬೆದರಿಸಿದ್ದ. ಕಿರುಕುಳಕ್ಕೆ ಬೇಸತ್ತ ಕುಮಾರ್ ಡೆತ್‌ನೋಟ್ ಬರೆದು ನೇಣಿಗೆ ಶರಣಾಗಿದ್ದಾರೆ. ಘಟನೆ ಸಂಬಂಧ ಚನ್ನಪಟ್ಟಣ ತಾಲೂಕಿನ ಎಂ.ಕೆ.ದೊಡ್ಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ…

Read More

ಸರಗೂರು:  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಕಾರ್ಯಕ್ರಮಗಳ ಮೂಲಕ ಜನರ ಏಳಿಗೆಯ ಮೂಲಕ ದೇಶದ ಉನ್ನತಿ ಕಾರ್ಯವನ್ನು ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆಯವರು ಮಾಡುತ್ತಿದ್ದಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ವಿ.ಭಾಸ್ಕರ್ ತಿಳಿಸಿದರು. ತಾಲೂಕಿನ ದಡದಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ದಂದು ಪರಿಸರ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 11 ಸಾವಿರ ದೇವಸ್ಥಾನಗಳಿಗೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಜೀರ್ಣೋದ್ಧಾರ ಮಾಡುವುದಕ್ಕೆ ಸಹಾಯ ಮಾಡಿಕೊಂಡು ಬರುತ್ತಿದ್ದಾರೆ ಎಂದರು. ಕಾಡಿನಲ್ಲಿ ಹಣ್ಣು ಹಂಪಲುಗಳನ್ನು ನೀಡುವ ಮರಗಳ ಕ್ಷೀಣತೆಯಿಂದಾಗಿ ವನ್ಯಪ್ರಾಣಿಗಳು ಕಾಡನ್ನು ಬಿಟ್ಟು ನಾಡಿಗೆ ಬರುತ್ತಿವೆ.  ಗ್ರಾಮೀಣ ಭಾಗದಲ್ಲಿ ತುರ್ತು ಸಂದರ್ಭದಲ್ಲಿ ಸೇವಾ ಮನೋಭಾವದಿಂದ ಧಾವಿಸುವವರು ಇದ್ದರೆ ಅದು ಶೌರ್ಯ ವಿಪತ್ತು ಘಟಕ, ಅವರ ಎಲ್ಲಾ ಕಾರ್ಯಗಳು ಮಾದರಿ, ಮುಂದಿನ ಭವಿಷ್ಯಾಕ್ಕಾಗಿ ಮಾಡಬೇಕಾದ ದೊಡ್ಡ ಆಸ್ತಿ ಎಂದರೆ ಸ್ವಚ್ಚ ಪರಿಸರ.  ಒಬ್ಬ ವಿದ್ಯಾರ್ಥಿ ಒಂದು ಗಿಡ ನೆಡುವ ಸಂಕಲ್ಪ ಮಾಡಬೇಕು. ಆಗ ಮಾತ್ರ ನಮ್ಮ ಸ್ವಚ್ಚ ನಿರ್ಮಲ ಪರಿಸರದ ನಿರ್ಮಾಣದ ಕನಸು…

Read More

ಸರಗೂರು: ಜುಲೈ 18ರಂದು ರಾಜ್ಯಾದ್ಯಂತ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ದಸಂಸ (ಅಂಬೇಡ್ಕರ್ ವಾದ) ಸಂಚಾಲಕ ಕೂಡಗಿ ಗೋವಿಂದರಾಜು ತಿಳಿಸಿದ್ದಾರೆ. ತಾಲ್ಲೂಕಿನ ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಶುಕ್ರವಾರದಂದು ಬೆಳಗ್ಗೆ 11 ಗಂಟೆಗೆ ಸರ್ಕಾರದಿಂದ ದರಖಾಸ್ತು ಮೂಲಕ ಮಜೂರಾತಿ ಮಾಡಿರುವ ವಿತರಣೆ ಮಾಡದೆ ಇರುವ ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಹಮ್ಮಿಕೊಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ದರಖಾಸ್ತು ಭೂಮಿ ಸಕ್ರಮೀಕರಣವು ಆಯಾ ಕ್ಷೇತ್ರದ ಶಾಸಕರುಗಳ ಅಧ್ಯಕ್ಷತೆ ಹೊಂದಿರುವ ಸಮಿತಿಗಳು ನಿರ್ಲಕ್ಷತೆಯಿಂದ ಸರಿಯಾಗಿ ಕೆಲಸ ನಿರ್ವಹಿಸದೆ ಫಾರಂ 53 54 57 ಅರ್ಜಿ ಸಲ್ಲಿಸಿರುವ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಮತ್ತು ತಳಸಮುದಾಯಗಳ ಅರ್ಜಿಗಳು ರಾಶಿಗಟ್ಟಲೆ ಕೊಳೆಯುತ್ತಾ ಬಿದ್ದಿವೆ. ಬಾಬಾ ಸಾಹೇಬರ ಸೈದ್ಯಾಂತಿಕಾ ನೆಲೆಯಲ್ಲಿ ದಲಿತ ಚಳುವಳಿಗಳು ಹಿಂದಿನಿಂದಲೂ ಭೂಮಿ ಶಿಕ್ಷಣ ವಸತಿ ಹಾಗೂ ಉದ್ಯೋಗ ಮತ್ತು ಮೂಲಭೂತ ಅವಶ್ಯಕತೆಗಾಗಿ ಆಳುವ ಪ್ರಭುತ್ವದೊಂದಿಗೆ ನಿರಂತರ ಸಂಘರ್ಷ ನಡೆಸುತ್ತಲೇ ಬಂದಿದೆ. ಆದರೆ ಆಳುವ ಸರ್ಕಾರ ತನ್ನ ವಿಫಲತೆಯನ್ನು…

Read More