Author: admin

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನ್ಯಾಯಾಲಯದಿಂದ ದೊಡ್ಡ ಮಟ್ಟದ ನೆಮ್ಮದಿ ಸಿಕ್ಕಿದೆ. ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ‘ಬಿ-ರಿಪೋರ್ಟ್’ (ಅಂತಿಮ ವರದಿ) ಅನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಬುಧವಾರ (ಜನವರಿ 28) ಅಂಗೀಕರಿಸಿದೆ. ಸಿಎಂ ಕುಟುಂಬಕ್ಕೂ ಕ್ಲೀನ್ ಚಿಟ್: ಕೇವಲ ಸಿದ್ದರಾಮಯ್ಯ ಮಾತ್ರವಲ್ಲದೆ, ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ, ಭಾಮೈದ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಜಮೀನು ಮಾರಾಟ ಮಾಡಿದ್ದ ದೇವರಾಜ್ ಅವರಿಗೂ ನ್ಯಾಯಾಲಯ ರಿಲೀಫ್ ನೀಡಿದೆ. ಲೋಕಾಯುಕ್ತ ಪೊಲೀಸರು ನಡೆಸಿದ ಸುದೀರ್ಘ ತನಿಖೆಯಲ್ಲಿ ಸಿಎಂ ಕುಟುಂಬಸ್ಥರ ವಿರುದ್ಧ ಯಾವುದೇ ಅಕ್ರಮ ನಡೆದಿಲ್ಲ ಎಂಬ ಅಂಶ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಸಲ್ಲಿಸಲಾಗಿದ್ದ ವರದಿಯನ್ನು ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಎತ್ತಿ ಹಿಡಿದಿದ್ದಾರೆ. ಇತರರ ವಿರುದ್ಧ ತನಿಖೆ ಮುಂದುವರಿಕೆ: ಮುಖ್ಯಮಂತ್ರಿಗಳ ವಿರುದ್ಧದ…

Read More

ಸರಗೂರು:   ವಿದ್ಯಾರ್ಥಿಗಳು ಪದವಿ ಪೂರ್ವ ಹಂತದಲ್ಲಿ ಪುಸ್ತಕವನ್ನು  ಓದುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು. ಪುಸ್ತಕಗಳು ಬದುಕಿನ ಶೈಲಿಯಾಗಬೇಕು. ಇದರಿಂದ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಮೈಸೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಮಾನಂದ ತಿಳಿಸಿದರು. ತಾಲೂಕಿನ ಸಮೀಪದ ತುಂಬಸೋಗೆ ಎಂಎಂಕೆ ಸ್ವತಂತ್ರ ಪದವಿ ಪೂರ್ವ ಕಾಲೇಜು ಶಾಲಾ ಮತ್ತು ಕಾಲೇಜಿ ಕಾಲೇಜು  ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಆತ್ಮವಿಶ್ವಾಸ ಮತ್ತು ದೃಢತೆಯಿಂದ ಮಾತನಾಡಬೇಕು. ನಿಮ್ಮನ್ನು ನೀವೇ ನಂಬಬೇಕು. ನಿಮ್ಮಲ್ಲಿ ಸಾಧನೆ ಆಟ ಮತ್ತು ಛಲ ಇರಬೇಕು, ಪ್ರತಿ ವಿದ್ಯಾರ್ಥಿ ಕೈಯಲ್ಲಿ ಇದು ಸಾಧ್ಯ. ಆದ್ದರಿಂದ ಸಾಮಾನ್ಯ ಜ್ಞಾನ ಸಂಪಾದಿಸಬೇಕು. ಇದು ಮುಂದಿನ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗುತ್ತದೆ. ನೀವು ಶಿಕ್ಷಣದಲ್ಲಿ ಸಾಧನೆ ಮಾಡಿದರೆ ನಿಮ್ಮ ಪೋಷಕರು ಖುಷಿಯಾಗಿರುತ್ತಾರೆ. ಅವರ ಆಸೆ ಈಡೇರುತ್ತದೆ.  ಉತ್ತಮ ಜೀವನ ರೂಪಿಸಿಕೊಳ್ಳುವುದಕ್ಕೆ ಶಿಕ್ಷಣ ಅಗತ್ಯ ಎಂದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮೇಗೌಡ ಮಾತನಾಡಿ, ಮಕ್ಕಳಿಗೆ ಸಾಧನೆ ಮುಖ್ಯ. ಈ ಸಾಧನೆಯಿಂದ ಪರೀಕ್ಷೆ ಫಲಿತಾಂಶ ಉತ್ತಮಗೊಂಡು ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ…

Read More

ತುಮಕೂರು: ಸಂವಿಧಾನದ ರಕ್ಷಣೆ ಮತ್ತು ಶೋಷಿತ ವರ್ಗಗಳ ಹಿತಕಾಯುವ ಉದ್ದೇಶದೊಂದಿಗೆ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ‘ಸಂವಿಧಾನ ರಕ್ಷಣಾ ನೀಲಿ ಸೇನೆ’ ರಾಜ್ಯ ಮಟ್ಟದ ಸಂಘಟನೆಯ ಉದ್ಘಾಟನಾ ಸಮಾರಂಭವು ಇಂದು (ಜನವರಿ 26, 2026) ನಗರದ ಎಂ.ಜಿ. ರಸ್ತೆಯ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸಾವಿರಾರು ಸೈನಿಕರ ಸಮ್ಮುಖದಲ್ಲಿ ಅತ್ಯಂತ ವ್ಯವಸ್ಥಿತವಾಗಿ ನೆರವೇರಿತು. ರಾಜ್ಯಾಧ್ಯಕ್ಷರಾದ ಎಂ. ನರಸಿಂಹರಾಜು ಅವರು ಸಸಿಗೆ ನೀರೆರೆಯುವ ಮೂಲಕ ಸಂಘಟನೆಗೆ ಚಾಲನೆ ನೀಡಿದರು. ನಂತರ ಮಾತನಾಡಿ,  ಉದ್ಘಾಟನಾ ಭಾಷಣ ಮಾಡಿದ ರಾಜ್ಯಾಧ್ಯಕ್ಷ ಎಂ.ನರಸಿಂಹರಾಜು ಅವರು, “ಇಂದಿನ ರಾಜಕೀಯ ಸನ್ನಿವೇಶದಲ್ಲಿ ಮನುವಾದಿ ಶಕ್ತಿಗಳ ಕುತಂತ್ರದಿಂದಾಗಿ ಸಂವಿಧಾನವು ಅಪಾಯದಲ್ಲಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಹಕ್ಕುಗಳಿಂದಲೇ ಇಂದು ಬಹುಜನರು ಎಲ್ಲಾ ರಂಗಗಳಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಆದರೆ, ಅಧಿಕಾರಕ್ಕಾಗಿ ಜಾತಿ-ಧರ್ಮಗಳ ಹೆಸರಿನಲ್ಲಿ ಜನರ ನಡುವೆ ಕಂದಕ ಸೃಷ್ಟಿಸುವ ಕೆಲಸವಾಗುತ್ತಿದೆ,” ಎಂದು ಆತಂಕ ವ್ಯಕ್ತಪಡಿಸಿದರು. ಬಂಗಾರಪ್ಪ (ಉಪಾಧ್ಯಕ್ಷರು) ಮಾತನಾಡಿ, ಸಂಘಟನೆಯಲ್ಲಿ ಎಲ್ಲಾ ಸಮುದಾಯದ ಪದಾಧಿಕಾರಿಗಳಿದ್ದು, ಸರ್ವರಿಗೂ ಸಮಾನ ನ್ಯಾಯ ಒದಗಿಸಲು…

Read More

ಗುಬ್ಬಿ: ತಾಲೂಕಿನ ಚೇಳೂರು ಹೋಬಳಿಯ ಬಿದರೆ ಗ್ರಾಮಠಾಣಾ ವ್ಯಾಪ್ತಿಯ ಸಾರ್ವಜನಿಕ ಆಸ್ತಿ ಹಾಗೂ ಪುರಾತನ “ಗಂಗಸ ಕಟ್ಟೆ” (ಗೋಕಟ್ಟೆ) ಒತ್ತುವರಿ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಬಿದರೆ ಗ್ರಾಮಕ್ಕೆ ಸೇರಿದ ಗಂಗಸ ಕಟ್ಟೆಯು ಪುರಾತನ ಕಾಲದಿಂದಲೂ ಹಸು, ಎಮ್ಮೆ, ಕುರಿ, ಮೇಕೆ ಸೇರಿದಂತೆ ಸಾಕುಪ್ರಾಣಿಗಳ ಕುಡಿಯುವ ನೀರಿನ ಆಧಾರವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಕಟ್ಟೆಗೆ ಮಣ್ಣು ಸುರಿದು ವಶಪಡಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯಿತಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. “ಸಾರ್ವಜನಿಕ ಆಸ್ತಿಯನ್ನು ರಕ್ಷಿಸಬೇಕಾದ ಅಧಿಕಾರಿಗಳು ಒತ್ತುವರಿದಾರರ ಪರವಾಗಿ ನಿಂತಿರುವುದು ವಿಪರ್ಯಾಸ. ಬಿದರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಮಣ್ಣು ತೆರವುಗೊಳಿಸಲು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ” ಎಂದು ರೈತ ಮುಖಂಡರು ಆರೋಪಿಸಿದರು. ಗುಬ್ಬಿ ತಾಲೂಕಿನಾದ್ಯಂತ ಕೆರೆ-ಕಟ್ಟೆಗಳು ಹಾಗೂ ಗುಂಡು-ದೋಪುಗಳು ಒತ್ತುವರಿಯಾಗುತ್ತಿದ್ದರೂ ಅಧಿಕಾರಿಗಳು ಕಣ್ಣು…

Read More

ಬೆಂಗಳೂರು: ದಕ್ಷ ಹಾಗೂ ಜನಸ್ನೇಹಿ ಆಡಳಿತಕ್ಕೆ ಹೆಸರಾಗಿದ್ದ ದಿವಂಗತ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ಪುತ್ರಿ ಚೈತನ್ಯಾ ಬೀಳಗಿ ಅವರಿಗೆ ರಾಜ್ಯ ಸರ್ಕಾರವು ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡಿದೆ. ಇಂದು (ಜನವರಿ 28) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ನೇಮಕಾತಿ ಆದೇಶದ ಪ್ರತಿಯನ್ನು ಹಸ್ತಾಂತರಿಸಿದರು. ಪ್ರಾಮಾಣಿಕ ಹಾಗೂ ಕರ್ತವ್ಯನಿಷ್ಠ ಅಧಿಕಾರಿಯಾಗಿದ್ದ ಮಹಾಂತೇಶ್ ಬೀಳಗಿ ಅವರು ಸೇವೆಯಲ್ಲಿದ್ದಾಗಲೇ 2025ರ ನವೆಂಬರ್ 25ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಅಕಾಲಿಕ ನಿಧನ ಹೊಂದಿದ್ದರು. ಅವರ ನಿಧನವು ಇಡೀ ರಾಜ್ಯಕ್ಕೆ ದೊಡ್ಡ ನಷ್ಟವಾಗಿತ್ತು. ಕುಟುಂಬದ ಆಧಾರಸ್ತಂಭವಾಗಿದ್ದ ಅವರ ಅಗಲಿಕೆಯಿಂದ ಸಂಕಷ್ಟಕ್ಕೀಡಾಗಿದ್ದ ಕುಟುಂಬಕ್ಕೆ ನೆರವಾಗಲು ಸರ್ಕಾರಿ ನೌಕರಿ ನೀಡಬೇಕೆಂಬ ಒತ್ತಾಯ ಕೇಳಿಬಂದಿತ್ತು. ಕರ್ನಾಟಕ ನಾಗರಿಕ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1996ರ ಅನ್ವಯ ಈ ನೇಮಕಾತಿ ಮಾಡಲಾಗಿದೆ.  ಚೈತನ್ಯಾ ಬೀಳಗಿ ಅವರಿಗೆ ಪ್ರಥಮ ದರ್ಜೆ ಸಹಾಯಕಿ (FDA) ಹುದ್ದೆಯನ್ನು ನೀಡಲಾಗಿದೆ. ವಾಣಿಜ್ಯ ತೆರಿಗೆ ಇಲಾಖೆಯಲ್ಲಿ (Commercial Tax Department) ನೇಮಕ ಮಾಡಲಾಗಿದೆ.…

Read More

ಬೆಂಗಳೂರು: ಕನ್ನಡ ಬಿಗ್ ಬಾಸ್ ಸೀಸನ್ 12ರ ವಿನ್ನರ್ ಪಟ್ಟ ಗಿಲ್ಲಿ ನಟ ಪಾಲಾಗಿದ್ದರೂ, ವಿಧಾನಸಭೆಯಲ್ಲಿ ಈ ವಿಷಯವು ಒಂದು ವಿಭಿನ್ನ ರಾಜಕೀಯ ತಿರುವು ಪಡೆದುಕೊಂಡಿದೆ. ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಅವರು ಕೇಂದ್ರ ಸರ್ಕಾರದ ತೆರಿಗೆ ನೀತಿಯನ್ನು ಟೀಕಿಸುವ ಭರದಲ್ಲಿ, ಈ ಬಾರಿಯ ನಿಜವಾದ ಬಿಗ್ ಬಾಸ್ ವಿನ್ನರ್ ನಿರ್ಮಲಾ ಸೀತಾರಾಮನ್ ಎಂದು ಲೇವಡಿ ಮಾಡಿದ್ದಾರೆ. ಪ್ರದೀಪ್ ಈಶ್ವರ್ ಹೇಳಿದ್ದೇನು? ನಿನ್ನೆ ಸದನದಲ್ಲಿ ಮಾತನಾಡಿದ ಪ್ರದೀಪ್ ಈಶ್ವರ್, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿರುದ್ಧ ವಾಗ್ದಾಳಿ ನಡೆಸಿದರು. “ಈ ಬಾರಿಯ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ ಅಲ್ಲ, ಬದಲಾಗಿ ನಿರ್ಮಲಾ ಸೀತಾರಾಮನ್. ಏಕೆಂದರೆ ಬಿಗ್ ಬಾಸ್ ಗೆದ್ದವರಿಗೆ ಸಿಗುವ 50 ಲಕ್ಷ ರೂಪಾಯಿ ಬಹುಮಾನ ಮೊತ್ತದಲ್ಲಿ ಶೇ. 18ರಷ್ಟು ಜಿಎಸ್‌ಟಿ, ಶೇ. 13ರಷ್ಟು ಇನ್ಕಮ್ ಟ್ಯಾಕ್ಸ್ ಹಾಗೂ ಶೇ. 4ರಷ್ಟು ಸೆಸ್ ಸೇರಿ ಸುಮಾರು 52% ರಷ್ಟು ತೆರಿಗೆ ರೂಪದಲ್ಲಿ ಕೇಂದ್ರದ ಪಾಲಾಗುತ್ತದೆ. ಕೊನೆಗೆ…

Read More

ಮಹಾರಾಷ್ಟ್ರದ ಬಾರಾಮತಿಯಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ ಎಂಬ ಆಘಾತಕಾರಿ ಸುದ್ದಿ ವರದಿಯಾಗಿದೆ. ಇಂದು ಬೆಳಿಗ್ಗೆ ಸುಮಾರು 8:45ಕ್ಕೆ ಮುಂಬೈನಿಂದ ಬಾರಾಮತಿಗೆ ಹೊರಟಿದ್ದ ಚಾರ್ಟರ್ಡ್ ವಿಮಾನವು ಬಾರಾಮತಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವ ಸಮಯದಲ್ಲಿ ತಾಂತ್ರಿಕ ದೋಷದಿಂದಾಗಿ ಪತನಗೊಂಡಿದೆ. ಜಿಲ್ಲಾ ಪಂಚಾಯತ್ ಚುನಾವಣೆ ಹಿನ್ನೆಲೆ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲು ತೆರಳುತ್ತಿದ್ದ ಅಜಿತ್ ಪವಾರ್ ಅವರಿದ್ದ ವಿಮಾನವು ರನ್‌ವೇ ಮೇಲೆ ಅಪ್ಪಳಿಸಿದ ತಕ್ಷಣ ಬೆಂಕಿ ಹೊತ್ತಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ರಕ್ಷಣಾ ತಂಡಗಳು ಧಾವಿಸಿದ್ದು, ಪರಿಶೀಲನೆ ನಡೆಸುತ್ತಿವೆ. ಈ ಭೀಕರ ಅಪಘಾತದಲ್ಲಿ ವಿಮಾನದಲ್ಲಿದ್ದ ಅಜಿತ್ ಪವಾರ್ ಹಾಗೂ ಇತರ ಐವರು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ದೃಢಪಡಿಸಿದೆ. ಮಹಾರಾಷ್ಟ್ರದ ರಾಜಕೀಯದ ಪ್ರಭಾವಿ ನಾಯಕರಲ್ಲಿ ಒಬ್ಬರಾದ ಅಜಿತ್ ಪವಾರ್ ಅವರ ಅಗಲಿಕೆ ಇಡೀ ರಾಜ್ಯದ ರಾಜಕೀಯ ವಲಯದಲ್ಲಿ ತೀವ್ರ ಆಘಾತ ಮತ್ತು ಶೋಕವನ್ನುಂಟು ಮಾಡಿದೆ. ಮುಖ್ಯಮಂತ್ರಿ ಏಕನಾಥ್…

Read More

ಸರಗೂರು: ತಾಲ್ಲೂಕಿನ ಬಿ. ಮಟಕೆರೆ ಕರ್ನಾಟಕ ಪಬ್ಲಿಕ್ ಶಾಲೆಯ ಅಭಿವೃದ್ಧಿ ಸಮಿತಿ (ಸಿಡಿಸಿ) ಅಧ್ಯಕ್ಷರ ನೇಮಕಾತಿ ವಿಚಾರ ಈಗ ವಿವಾದಕ್ಕೆ ಈಡಾಗಿದ್ದು, ಶಾಸಕರ ನಡೆಗೆ ಪೋಷಕರು ಮತ್ತು ಸಮಿತಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಶಾಸಕರ ವಿರುದ್ಧ ನಿರ್ಲಕ್ಷ್ಯದ ಆರೋಪ: ಸೋಮವಾರ ಶಾಲೆಯಲ್ಲಿ ನಡೆದ ಸಿಡಿಸಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯ ಕೂಡಗಿ ಗೋವಿಂದರಾಜು, “2018-19ರಲ್ಲಿ ಅಂದಿನ ಸಂಸದರಾಗಿದ್ದ ದಿವಂಗತ ಆರ್.ಧ್ರುವನಾರಾಯಣ್ ಅವರು ಗ್ರಾಮೀಣ ಭಾಗದ ಹಿಂದುಳಿದ ವರ್ಗಗಳ ಮಕ್ಕಳಿಗೆ ಗುಣಮಟ್ಟದ ಇಂಗ್ಲಿಷ್ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ಈ ಶಾಲೆಯನ್ನು ಮಂಜೂರು ಮಾಡಿಸಿದ್ದರು. ಆದರೆ ಶಾಲೆ ಆರಂಭವಾಗಿ 7 ವರ್ಷಗಳಾದರೂ, ಸ್ಥಳೀಯ ಶಾಸಕರು ಒಮ್ಮೆಯೂ ಶಾಲೆಗೆ ಭೇಟಿ ನೀಡಿ ಇಲ್ಲಿನ ಕುಂದುಕೊರತೆ ಆಲಿಸಿಲ್ಲ” ಎಂದು ಕಿಡಿಕಾರಿದರು. ನೇಮಕಾತಿ ವಿಚಾರದಲ್ಲಿ ಅಸಮಾಧಾನ: ಹಿಂದಿನ ಅಧ್ಯಕ್ಷ ಭೀಮರಾಜ್ ಅವರ ನಿಧನದ ನಂತರ ತೆರವಾಗಿದ್ದ ಸ್ಥಾನಕ್ಕೆ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಪೋಷಕರನ್ನೇ ಅಧ್ಯಕ್ಷರನ್ನಾಗಿ ನೇಮಿಸಬೇಕೆಂದು ಸದಸ್ಯರು ಮನವಿ ಮಾಡಿದ್ದರು. ಆದರೆ, ಸದಸ್ಯರ ಗಮನಕ್ಕೆ ತರದೆ…

Read More

ಪಾವಗಡ:  77ನೇ ಗಣರಾಜ್ಯೋತ್ಸವದ ಅಂಗವಾಗಿ ಪಟ್ಟಣದ ಹೆಲ್ಪ್ ಸೊಸೈಟಿ , ಸೇವಾ ಟ್ರಸ್ಟ್ ಮತ್ತು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ, ಶ್ರೀಶಾಲಾ ಕಾನ್ವೆಂಟ್, ಅಕ್ಷಯ ಬ್ಲೂಜಂ ಶಾಲೆ, ಸಹಯೋಗದಲ್ಲಿ 1,750 ಅಡಿಗಳ ಉದ್ದದ ತಿರಂಗಾ ಯಾತ್ರೆ ಅತ್ಯಂತ ವೈಭವದಿಂದ ನೆರವೇರಿತು. ಪಟ್ಟಣದ ಸ್ವಾಮಿ ವಿವೇಕಾನಂದ ಕಾಲೇಜಿನ ಮುಂಭಾಗದಲ್ಲಿ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಡಾ.ಶಶಿಕಿರಣ್ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ದೇಶಪ್ರೇಮ ಮೂಡಿಸಿಕೊಳ್ಳಬೇಕು, ನಮ್ಮ ದೇಶವನ್ನು ಕಾವಲು ಕಾಯುವ ಸೈನಿಕರ ಬಗ್ಗೆ ಅಭಿಮಾನ ಇಟ್ಟುಕೊಳ್ಳಬೇಕು, ಚಿತ್ರ ನಟರ ಫೋಟೋಗಳನ್ನು ಸ್ಟೇಟಸ್ ನಲ್ಲಿ ಹಾಕಿಕೊಳ್ಳದೆ ದೇಶಕ್ಕಾಗಿ ಹೋರಾಡಿದ ವೀರ ನಾಯಕರ ಫೋಟೋಗಳನ್ನು ಸ್ಟೇಟಸ್ ನಲ್ಲಿ ಹಾಕಿಕೊಂಡು ದೇಶ ಪ್ರೇಮವನ್ನು ಮೆರೆಯ ಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ನಂತರ ತಿರಂಗ ಯಾತ್ರೆ   ಶಿರಾ ರಸ್ತೆ,ಬಳ್ಳಾರಿ ರಸ್ತೆ, ಶನಿಮಹಾತ್ಮ ಸರ್ಕಲ್ ಮುಖಾಂತರ ಪಟ್ಟಣದ ತಾಲೂಕು ಕ್ರೀಡಾಂಗಣಕ್ಕೆ ತಿರಂಗಾ ಯಾತ್ರೆ ಆಗಮಿಸಿದಾಗ, ಶಾಸಕರಾದ ಎಚ್.ವಿ.ವೆಂಕಟೇಶ್ ಮತ್ತು ತಹಶೀಲ್ದಾರ್ ವೈ.ರವಿ, ಇ.ಓ. ಮಧುಸೂದನ್ ಮತ್ತು ಬಿ.ಇ.ಓ. ರೇಣುಕಮ್ಮ ಮತ್ತಿತರ ಅಧಿಕಾರಿಗಳು ಬರಮಾಡಿಕೊಂಡು,…

Read More

ತುಮಕೂರು: “ದಾಸ್ಯದಲ್ಲಿ ಹುಟ್ಟಿ ದಾಸ್ಯದಲ್ಲಿ ಜನ ಸಾಯುತ್ತಿದ್ದ ಕಾಲ ಹಿಂದಿತ್ತು. ನಾವೆಲ್ಲರೂ ಭಾಗ್ಯವಂತರು ಇಂದು ಪ್ರಜಾತಂತ್ರ, ಗಣರಾಜ್ಯ, ಜನಗಳಿಂದ, ಜನಗಳಿಗಾಗಿ, ಜನಗಳಿಗೋಸ್ಕರ ನಡೆಯುವ ಒಂದು ಆಡಳಿತ. ನಾವೇ ಆಯ್ಕೆ ಮಾಡಿರುವ ಪ್ರತಿನಿಧಿಗಳು. ಹಾಗಾಗಿ ಬಹಳ ಹೆಮ್ಮೆಯಿಂದ ಗಣರಾಜ್ಯೋತ್ಸವವನ್ನು ಆಚರಿಸಬೇಕು ಎಂದು ಸರ್ವೋದಯ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ  ಪ್ರೊ. ರವಿವರ್ಮ ಕುಮಾರ್ ಹೇಳಿದರು. ಸರ್ವೋದಯ ಶಿಕ್ಷಣ ಸಂಸ್ಥೆಯ ಶಾಲಾ ಕಾಲೇಜುಗಳ ವತಿಯಿಂದ ಆಚರಿಸಲಾದ ಗಣರಾಜ್ಯೋತ್ಸವದ ಸಮಾರಂಭದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ, ಗೌರವ ವಂದನೆಯನ್ನು ಸ್ವೀಕರಿಸಿ ಮಾತನಾಡಿದ ಅವರು, ದಾಸ್ಯದಲ್ಲಿ ಹುಟ್ಟಿ ದಾಸ್ಯದಲ್ಲಿ ಜನ ಸಾಯುತ್ತಿದ್ದ ಕಾಲ ಹಿಂದಿತ್ತು. ನಾವೆಲ್ಲರೂ ಭಾಗ್ಯವಂತರು ಇಂದು ಪ್ರಜಾತಂತ್ರ, ಗಣರಾಜ್ಯ, ಜನಗಳಿಂದ, ಜನಗಳಿಗಾಗಿ, ಜನಗಳಿಗೋಸ್ಕರ ನಡೆಯುವ ಒಂದು ಆಡಳಿತ. ನಾವೇ ಆಯ್ಕೆ ಮಾಡಿರುವ ಪ್ರತಿನಿಧಿಗಳು. ಹಾಗಾಗಿ ಬಹಳ ಹೆಮ್ಮೆಯಿಂದ ಗಣರಾಜ್ಯೋತ್ಸವವನ್ನು ಆಚರಿಸಬೇಕು. ಹಾಗೆಯೇ ನೀವು ಮುಂದೆ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ಹಣಕ್ಕೆ, ಜಾತಿಗೆ, ಧರ್ಮಕ್ಕೆ ನಿಮ್ಮ ಮೌಲ್ಯಯುತವಾದ ಮತಗಳನ್ನು ಮಾರಿಕೊಳ್ಳಬೇಡಿ. ಕೈ ಬಾಯಿ ಶುದ್ಧವಾಗಿರಿಸಿಕೊಂಡು, ಆತ್ಮ ಸಾಕ್ಷಿಗೆ ಅನುಗುಣವಾಗಿ, ಭ್ರಷ್ಟಾನಿಗಿರದ…

Read More