Author: admin

ತುರುವೇಕೆರೆ: ತುರುವೇಕೆರೆ ವಿಧಾನ ಸಭಾ ಕ್ಷೇತ್ರದ ಆರ್ ಪಿಐ ಅಭ್ಯರ್ಥಿ ಪಿ.ಅಟ್ಟಯ್ಯ ಅವರು ತಾಲೂಕಿನ ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ ಪ್ರತಿ ಹಳ್ಳಿಯಲ್ಲೂ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಮಾಯಸಂದ್ರ ಹೋಬಳಿಯ ದೊಡ್ಡ ಮಲ್ಲಿಗೆರೆ ಗ್ರಾಮದಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ನಮ್ಮತುಮಕೂರು ಜೊತೆಗೆ ಮಾತನಾಡಿದ ಅವರು, ತಾಲೂಕಿನ ಪ್ರತಿ ಹಳ್ಳಿಗೂ ಭೇಟಿ ನೀಡಿದ ವೇಳೆ ನಮ್ಮ ಬೆಂಬಲಕ್ಕೆ ಮತದಾರರು ಒಲವು ತೋರಿದ್ದಾರೆ. ಈ ಬಾರಿ 20ರಿಂದ 30 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ದೊಡ್ಡ ಮಲ್ಲಿಗೆರೆ ಗ್ರಾಮಸ್ಥರು ಹಾಗೂ ಆರ್ ಪಿ ಐ ಪಕ್ಷದ ಜಿಲ್ಲಾ ಉಪಾಧ್ಯಕ್ಷ, ಪುಟ್ಟಸ್ವಾಮಿ, ದಯಾನಂದ, ರವೀಶ್, ಹುಚ್ಚಮ್ಮ, ಲಕ್ಷ್ಮಿದೇವಮ್ಮ, ಮಾರಮ್ಮ, ಗೌರಮ್ಮ, ಸಾಕಮ್ಮ, ದೊಡ್ಡಯ್ಯ ಹಾಗೂ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು. ವರದಿ: ಸುರೇಶ್ ಬಾಬು ಎಂ. ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ…

Read More

ಅಮೆರಿಕ(America)ದ ಟೆಕ್ಸಾಸ್​ನಲ್ಲಿ ಗುಂಡಿನ ದಾಳಿ ನಡೆದಿದ್ದು 8 ವರ್ಷದ ಬಾಲಕ ಸೇರಿ ಐವರು ಸಾವನ್ನಪ್ಪಿದ್ದಾರೆ. ಟೆಕ್ಸಾಸ್‌ನ ಕ್ಲೀವ್‌ಲ್ಯಾಂಡ್‌ನಲ್ಲಿ ಈ ಘಟನೆ ನಡೆದಿದೆ, ಆತ ರಾತ್ರಿಹೊತ್ತು ಮನಬಂದಂತೆ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದ, ನೆರೆಯ ಮನೆಯವರು ಈ ಶಬ್ದದಿಂದ ಮನೆಯಲ್ಲಿ ಮಕ್ಕಳು ಮಲಗಲು ಕಷ್ಟವಾಗುತ್ತಿದೆ ನಿಲ್ಲಿಸಿ ಎಂದು ಕೇಳಿಕೊಂಡಿದ್ದಕ್ಕೆ, ಬಾಲಕ ಸೇರಿ ಮನೆಯ ಐವರನ್ನು ಹತ್ಯೆ ಮಾಡಿದ್ದಾನೆ  ಎಂದು ತಿಳಿದುಬಂದಿದೆ. ಘಟನೆ ವೇಳೆ ಬಂದೂಕುಧಾರಿ ಪಾನಮತ್ತನಾಗಿದ್ದ ಎಂದು ಹೇಳಿದ್ದಾರೆ. ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಶಂಕಿತ ತನ್ನ ರೈಫಲ್‌ ಹಿಡಿದುಕೊಂಡು ಬರುತ್ತಿರುವುದು ಸೆರೆಯಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಮನೆಯಲ್ಲಿ 10 ಜನರಿದ್ದರು, ಮೃತರಲ್ಲಿ ಮೂವರು ಮಹಿಳೆಯರು ಹಾಗೂ ಓರ್ವ ಪುರುಷ ಸೇರಿದ್ದಾರೆ. ಮೃತರು 8 ರಿಂದ 40 ರ ವಯಸ್ಸಿನವರು ಎಂದು ಗುರುತಿಸಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA…

Read More

ಬಾಗಲಕೋಟೆ: ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ನೂತನ ಪ್ರಚಾರ್ಯರಾಗಿ ಪ್ರೊ. ಎಸ್.ಆರ್ ಮುಗನೂರಮಠ ಅಧಿಕಾರ ಸ್ವೀಕರಿಸಿದರು. ಪ್ರಚಾರ್ಯರಾಗಿ ಕಾರ್ಯ ನಿರ್ವಹಿಸುತಿದ್ದ ಡಾ. ವ್ಹಿ.ಎಸ್ ಕಟಗಿಹಳ್ಳಿಮಠ ಅವರು ನಿವೃತ್ತರಾದ ಹಿನ್ನೆಲೆ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಎಸ್.ಆರ್ ಮುಗನೂರಮಠ ನೂತನ ಪ್ರಾಚಾರ್ಯರಾಗಿ ಅಧಿಕಾರ ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಅವರು ಉತ್ತರ ಕರ್ನಾಟಕದ ಪ್ರತಿಷ್ಠಿತ ಕಾಲೇಜುಗಳಲ್ಲಿ ಬಸವೇಶ್ವರ ಕಲಾ ಮಹಾವಿದ್ಯಾಲಯವು ಒಂದಾಗಿದ್ದು ಮಹಾವಿದ್ಯಾಲಯದ ಶ್ರೇಯೋಭಿವೃದ್ಧಿಗಾಗಿ ನಾವೆಲ್ಲರು ಒಗ್ಗಟ್ಟಾಗಿ ಶ್ರಮಿಸೋಣ ಎಂದರು. ನೂತನವಾಗಿ ಅಧಿಕಾರ ಸ್ವೀಕರಿಸಿ ಪ್ರಾಚರ್ಯರಿಗೆ ಹೂಗುಚ್ಚ ಕೊಡುವುದರ ಮೂಲಕ ಸತ್ಕರಿಸಲಾಯಿತು. ಈ ವೇಳೆ ವಿವಿಧ ಕಾಲೇಜುಗಳ ಪ್ರಚಾರ್ಯರು, ಭೋದಕ ಬೋದಕೇತರ ಸಿಬ್ಬಂದಿಗಳು ಪಾಲ್ಗೊಂಡು ಅಭಿನಂದಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ಬೆಳಗಾವಿ ಉತ್ತರ ಮತಕ್ಷೇತ್ರದ ಪಕ್ಷದ ಅಭ್ಯರ್ಥಿ ರಾಜು ಟೋಪಣ್ಣನವರು ಇಂದು ಬೆಳಗಾವಿ ಉತ್ತರ ಮತಕ್ಷೇತ್ರ ದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದರು ಈ ಸಂದರ್ಭದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ನಿರಾಣಿ ಕಿತ್ತೂರು ಚೆನ್ನಮ್ಮ ಗೌರವ ವಂದನೆ ಸಲ್ಲಿಸಿ ಪ್ರಚಾರ ಪ್ರಾರಂಭಿಸಿದರು. ನಗರದ ಕಾಕತಿ ವೇಸ್ ನಾರೇಕರ್ ಗಲ್ಲಿ ಮಾರ್ಗವಾಗಿ ಸಾಗಿ ಮತದಾರರಿಗೆ ಮನವಿ ಮಾಡಿಕೊಂಡರು ಆಮ್ ಆದ್ಮಿ ಪಕ್ಷ ಮತ ನೀಡಬೇಕು ಆಮ್ ಆದ್ಮಿ ಪಕ್ಷ ದಿಲ್ಲಿ ಹಾಗೂ ಪಂಜಾಬ್ ನಲ್ಲಿ ಕೈಗೊಂಡಿರುವ ಅಭಿವೃದ್ಧಿ ಮತ್ತು ಜನಪರ ಕಾರ್ಯಕ್ರಮಗಳನ್ನು ಕರ್ನಾಟಕದಲ್ಲಿ ಕೂಡ ಹಮ್ಮಿಕೊಳ್ಳಲು ಮತದಾರರು ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಂಡರು. ಬೆಳಗಾವಿಯಲ್ಲಿ ನಡೆದಿರುವಂತ ಭ್ರಷ್ಟಾಚಾರ ಕುರಿತು ಪ್ರಸ್ತಾಪಿಸಿ ಈ ವಿಷಯದ ಕುರಿತಾಗಿ ನಾವು ಏನು ಹೆಚ್ಚಿಗೆ ಮಾತನಾಡುವುದಿಲ್ಲ ಬೆಲೆ ಏರಿಕೆ ಇಂದ ಜನರು ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಬೇಸತ್ತು ಹೋಗಿದ್ದಾರೆ ಹಾಗಾಗಿ ಜನ ಬದಲಾವಣೆ ಬಯಸುತ್ತಾ ಇದ್ದಾರೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್…

Read More

ಬೆಳಗಾವಿ: ಹಿಂದಿನ ಚುನಾವಣೆಯ ಟೆನ್ಶನ್ ನನಗೆ ಈ ಬಾರಿ ಇಲ್ಲ. ಕಳೆದ 5 ವರ್ಷ ಜನರ ಮಧ್ಯೆ ನಿಂತು ಮಾಡಿದ ಕೆಲಸ ನನ್ನ ಕೈ ಹಿಡಿಯಲಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಿರಂತರ ಪ್ರಚಾರ ಕಾರ್ಯದ ಮಧ್ಯೆ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮೊದಲಿನಿಂದಲೂ ಕ್ಷೇತ್ರಾದ್ಯಂತ ಒಳ್ಳೆಯ ರೆಸ್ಪಾನ್ಸ್ ಇದೆ. 5 ವರ್ಷಜನರ ಮಧ್ಯೆ ನಿಂತಿದ್ದೇನೆ, ಅದು ಫಲ ಕೊಡುತ್ತದೆ ಎಂದರು. ಕ್ಷೇತ್ರದ ಯಾವುದೇ ಭಾಗಕ್ಕೆ ಹೋದರೂ ನಾನು ಮಾಡಿಸಿದ ಒಂದಿಲ್ಲೊಂದು ಅಭಿವೃದ್ಧಿ ಕೆಲಸಗಳು ಕಾಣುತ್ತವೆ. ಪ್ರತಿ ಊರಲ್ಲಿ, ಪ್ರತಿಯೊಬ್ಬರು ನೆನೆಸಿಕೊಳ್ಳುತ್ತಾರೆ, ಅಕ್ಕ ಅದು ನೀವು ಮಾಡಿಸಿಕೊಟ್ಟಿದ್ದು, ಅಕ್ಕ ಇದು ನೀವು ಮಾಡಿಸಿಕೊಟ್ಟಿದ್ದು ಎಂದು ಜನ ನೆನಪಿಸುತ್ತಾರೆ. ಅಕ್ಕ ನಿಮ್ಮಿಂದಾಗಿ ನಮ್ಮೂರಿಗೆ ರಸ್ತೆಯಾಯಿತು. ಎಷ್ಟೊವರ್ಷದಿಂದ ಓಡಾಡಲೂ ಪರದಾಟ ನಡೆಸುತ್ತಿದ್ದೆವು. ನಮ್ಮೂರಲ್ಲಿ ಚರಂಡಿ ಇಲ್ಲದೆ ರಸ್ತೆ ಮೇಲೆಯೇ ಹೊಲಸು ನೀರು ಹರಿಯುತ್ತಿತ್ತು. ನೀವು ಮಾಡಿಸಿಕೊಟ್ಟಿದ್ದರಿಂದ ನೆಮ್ಮದಿಯಿಂದ ಓಡಾಡುವಂತಾಗಿದೆ ಎಂದು ಜನರು ಸ್ಮರಿಸುತ್ತಾರೆ. ಕೊರೋನಾ, ಪ್ರವಾಹದಂತಹ…

Read More

ಕ್ಯಾಲಿಫೋರ್ನಿಯಾ: ಸತತ ಮೂರು ತ್ರೈಮಾಸಿಕ ಅವಧಿಯಲ್ಲಿ ಆದಾಯ ಇಳಿಮುಖ ಕಾಣುತ್ತಾ ನಿರಾಸೆ ಹೊಂದಿದ್ದ ಮೆಟಾ ಪ್ಲಾಟ್​ಫಾರ್ಮ್ಸ್ ಸಂಸ್ಥೆಯ ಈ ಕ್ಯಾಲೆಂಡರ್ ವರ್ಷದ ಮೊದಲ ಸ್ಥಾನದಲ್ಲಿ ಅದ್ವಿತೀಯ ಆದಾಯ ಗಳಿಸಿರುವುದು ವರದಿಯಾಗಿದೆ. ವಾಟ್ಸಾಪ್, ಫೇಸ್​ಬುಕ್ ಮತ್ತು ಇನ್ಸ್​ಟಾಗ್ರಾಮ್​ನ ಮಾಲೀಕ ಸಂಸ್ಥೆ ಮೆಟಾ ಪ್ಲಾಟ್​ಫಾರ್ಮ್ಸ್​ನ ಆದಾಯ 2023 ಜನವರಿಯಿಂದ ಮಾರ್ಚ್​ವರೆಗಿನ ಅವಧಿಯಲ್ಲಿ 28.6 ಬಿಲಿಯನ್ ಡಾಲರ್ ಇದೆ. ಹಿಂದಿನ ವರ್ಷದ ಇದೇ ಅವಧಿಗಿಂತ ಆದಾಯದಲ್ಲಿ ಹೆಚ್ಚಳವಾಗಿರುವುದು ಕೇವಲ ಶೇ. 3 ರಷ್ಟು ಮಾತ್ರ. ಆದರೆ, ಇದು ಷೇರುಪೇಟೆ ನುರಿತರು ಅಂದಾಜು ಮಾಡಿದ್ದಕ್ಕಿಂತ ಉತ್ತಮವಾಗಿದೆ. ಇದರ ಪರಿಣಾಮವಾಗಿ ಮೆಟಾ ಷೇರು ಮೌಲ್ಯ ಶೇ. 15ರಷ್ಟು ಹೆಚ್ಚಳವಾಗಿದೆ. ಏಪ್ರಿಲ್ 28 ಶುಕ್ರವಾರ ಮೆಟಾ ಷೇರುಬೆಲೆ 239 ಡಾಲರ್ ಎಂದು (ಸುಮಾರು 19,500 ರೂ) ದಾಖಲಾಗಿದೆ. ಅಮೆರಿಕದ ಡೌ ಜೋನ್ಸ್, ಎಸ್ ಅಂಡ್ ಪಿ, ನಾಸ್ಡಾಕ್ ಷೇರುಪೇಟೆಗಳಲ್ಲಿ ಲಿಸ್ಟ್ ಆಗಿರುವ ಮೆಟಾ ಪ್ಲಾಟ್​ಫಾರ್ಮ್ ಅಲ್ಲೆಲ್ಲಾ ಕಡೆಯೂ ಅಭಿವೃದ್ಧಿ ಕಂಡಿದೆ. ಇದರ ಪರಿಣಾಮವಾಗಿ ಮೆಟಾದ ಷೇರುಸಂಪತ್ತು ಹೆಚ್ಚಾಗಿದೆ. ಇದರ ಜೊತೆಗೆ…

Read More

ಭಾರತದಲ್ಲಿ ಬೇಸಿಗೆ ಬಿಸಿಲು ವಿಪರೀತವಾಗಿರುದರಿಂದ . ದೇಶದ ಬಹುತೇಕ ರಾಜ್ಯಗಳಲ್ಲಿ ಇದೇ ಪರಿಸ್ಥಿತಿ ಇದೆ. ಹಲವು ನಗರಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್​ ದಾಟಿದೆ. ದೆಹಲಿಯ ಬಹುತೇಕ ಎಲ್ಲಾ ಭಾಗವು ತೀವ್ರ ಶಾಖದ ಪರಿಣಾಮದಿಂದ ಅಪಾಯದಲ್ಲಿದೆ ಎಂದು ಇತ್ತೀಚೆಗಷ್ಟೆ ವರದಿಯಾಗಿದೆ.  ಮೊಬೈಲ್​ಗಳು ಸಿಕ್ಕಾಪಟ್ಟೆ ಹೀಟ್ ಆಗುತ್ತಿದೆ. ಇದರಿಂದ ಮೊಬೈಲ್ ಹ್ಯಾಂಗ್ ಆಗುವುದು, ಸ್ವಿಚ್ ಆಫ್ ಆಗುವುದು ಕೊನೆಗೆ ಬ್ಲಾಸ್ಟ್ ಆಗುವಂತಹ ತೊಂದರೆಗಳು ಕೂಡ ಎದುರಾಗುತ್ತಿದೆ. ಈಗಿರುವ ಫಾಸ್ಟ್ ಚಾರ್ಜರ್​ಗಳಿಂದ ಬೇಗನೆ ಬಿಸಿ ಆಗುವ ಮೊಬೈಲ್​ಗಳು ಬಿಸಿಲಿನಿಂದ ಇನ್ನಷ್ಟು ಹೆಚ್ಚಾಗಿ ಹೀಟ್ ಆಗುತ್ತಿದೆ. ಮೊಬೈಲ್​ ಅತೀಯಾಗಿ ಬಿಸಿಯಾಗಲು ಅಥವಾ ಬ್ಲಾಸ್ಟ್​​ ಆಗಲು ಮುಖ್ಯ ಕಾರಣ ಚಾರ್ಜ್​ ಆಗುತ್ತಿರುವಾಗಲೇ ಮೊಬೈಲ್​ ಬಳಕೆ ಮಾಡುವುದು. ಕಳೆದ ವಾರವಷ್ಟೆ ಕೇರಳದಲ್ಲಿ ಎಂಟು ವರ್ಷದ ಬಾಲಕಿ ಮೊಬೈಲ್​ ಅನ್ನು ಚಾರ್ಜ್​ಗೆ ಹಾಕಿ ವಿಡಿಯೋ ನೋಡುವಾಗ ಬ್ಲಾಸ್ಟ್ ಆಗಿ ಪ್ರಾಣ ಕಳೆದುಕೊಂಡ ಬಗ್ಗೆ ಸುದ್ದಿಯಾಗಿತ್ತು. ಚಾರ್ಜ್​ಗೆ ಹಾಕಿ ಮೊಬೈಲ್ ಉಪಯೋಗಿಸಿದಾಗ RAM ಸೇರಿದಂತೆ ಪ್ರೊಸೆಸರ್​ಗಳು ಎಲ್ಲವೂ ಕಾರ್ಯ ನಿರ್ವಹಿಸುತ್ತಲೇ…

Read More

ಒಂಟಿ ಮಹಿಳೆಯನ್ನು ಹಿಂಬಾಲಿಸಿಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ನಡೆಸಿ, ಬರ್ಬರವಾಗಿ ಹತ್ಯೆ ನಡೆಸಿದ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಚಿಕ್ಕಾವಳ್ಳಿ ಗ್ರಾಮದಲ್ಲಿ ನಡೆದಿದೆ. 55 ವರ್ಷದ ವಯಸ್ಸಿನ ಸಾವಿತ್ರಮ್ಮ ಕೃತ್ಯದಲ್ಲಿ ಬಲಿಯಾದ ಮಹಿಳೆಯಾಗಿದ್ದು, ಸಾವಿತ್ರಮ್ಮ ರಾಗಿ ಹಿಟ್ಟು ಆಡಿಸಲು ಹೋಗುವ ಸಂದರ್ಭದಲ್ಲಿ ಹಿಂಬಾಲಿಸಿ, ಬಲವಂತವಾಗಿ ಎಳೆದುಕೊಂಡು ಹೋಗಿ ಬಲತ್ಕಾರ ಮಾಡಲಾಗಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಬಂದ ಶ್ವಾನದಳದ ತಂಡ ಸ್ಥಳ ಪರಿಶೀಲನೆ ನಡೆಸಿದ್ದು, ಈ ವೇಳೆ ಆರೋಪಿಯು ಸಿಕ್ಕಿ ಬಿದ್ದಿದ್ದಾನೆ. ಇದೇ ಗ್ರಾಮದ ಮಲ್ಲಿಕಾರ್ಜುನ ಎಂಬಾತ ಹತ್ಯೆ ಆರೋಪಿಯಾಗಿದ್ದು, ಈತ ಸಾವಿತ್ರಮ್ಮನವರ ಸಂಬಂಧಿಯಾಗಿದ್ದು, ಜಮೀನು ವಿಚಾರದಲ್ಲಿ ಸಾವಿತ್ರಮ್ಮನವರಿಗೂ ಆರೋಪಿಗೂ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ದ್ವೇಷದ ಹಿನ್ನೆಲೆಯಲ್ಲಿ ಸಾವಿತ್ರಮ್ಮನವರನ್ನು ಅತ್ಯಾಚಾರ ನಡೆಸಿ ಹತ್ಯೆ ಮಾಡಿದ್ದಾನೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಸದ್ಯ ಆರೋಪಿ ಮಲ್ಲಿಕಾರ್ಜುನನನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರ ತನಿಖೆಯ ಬಳಿಕ ಘಟನೆಯ ಸತ್ಯಾಸತ್ಯತೆ ತಿಳಿದು ಬರಬೇಕಿದೆ.…

Read More

ಬೆಂಗಳೂರು:   ನೂರನೇ ಸಂಚಿಕೆಯ ಮನ್ ಕೀ ಬಾತ್ ಭಾನುವಾರ ಬೆಳಿಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ. ಆದರೆ, ಸದ್ಯ ಕರ್ನಾಟಕದಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುದರಿಂದ ಮೋದಿ ಭಾನುವಾರವೂ ರಾಜ್ಯದಲ್ಲೇ ಇರಲಿದ್ದಾರೆ. ಅವರು ಮನ್ ಕೀ ಬಾತ್​​ನ ನೂರನೇ ಸಂಚಿಕೆ ಕಾರ್ಯಕ್ರಮ ವೀಕ್ಷಣೆ ಮಾಡಲು ರಾಜ್ಯದಲ್ಲೇ ಇರುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮದ 100 ನೇ ಸಂಚಿಕೆಯ ಪ್ರಸಾರಕ್ಕಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಈಗಾಗಲೇ ವಿಶೇಷ ಸಿದ್ಧತೆಗಳನ್ನು ನಡೆಸಿದೆ. ಈ ನಿಟ್ಟಿನಲ್ಲಿ ದೆಹಲಿಯಲ್ಲಿ ಬುಧವಾರ ರಾಷ್ಟ್ರೀಯ ಸಮಾವೇಶ ಆಯೋಜಿಸಲಾಗಿತ್ತು. ಇದರಲ್ಲಿ 105 ಜನರನ್ನು ವಿಶೇಷವಾಗಿ ಆಹ್ವಾನಿಸಲಾಗಿದ್ದು, ಅವರ ಸೃಜನಶೀಲ ಮತ್ತು ಸಾಮಾಜಿಕ ಕಾರ್ಯಗಳನ್ನು ಪ್ರಧಾನಿ ಮೋದಿ ತಮ್ಮ ಮನ್​ ಕೀ ಬಾತ್​ನಲ್ಲಿ ಪ್ರಸ್ತಾಪಿಸಿದ್ದಾರೆ. ರಾಜ್ಯ ಪ್ರವಾಸದಲ್ಲಿರುವ ಮೋದಿ ಇಂದು (ಶನಿವಾರ) ರಾತ್ರಿ ಬೆಂಗಳೂರಿನ ರಾಜಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಬೆಳಗ್ಗೆ ಅವರು ಯಾವುದೇ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸುವುದಿಲ್ಲ. ಬದಲಿಗೆ ರಾಜಭವನದಲ್ಲೇ ಇದ್ದುಕೊಂಡು ಮನ್ ಕೀ ಬಾತ್​​ನ ನೂರನೇ…

Read More

ಮಾನಸಿಕವಾಗಿ ಕುಗ್ಗಿರುವವರಲ್ಲಿ ವ್ಯಾಯಾಮ ಅಥವಾ ಇನ್ನಿತರ ದೈಹಿಕ ಚಟುವಟಿಕೆಗಳಿಂದ ಹೆಚ್ಚಿನ ಪ್ರಯೋಜನ ನೀಡುತ್ತದೆ ಎಂದು ಅಧ್ಯಯನ ತಿಳಿಸಿದೆ. ಈ ಸಂಬಂಧ ದಕ್ಷಿಣ ಆಸ್ಟ್ರೇಲಿಯಾ ವಿಶ್ವವಿದ್ಯಾಲಯ ಸಂಶೋಧಕರ ತಂಡ ಸಂಶೋಧನೆ ನಡೆಸಿದೆ. ಇದರ ಅನುಸಾರ ಔಷಧಗಳಿಗಿಂತ ವ್ಯಾಯಾಮಗಳು ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಈ ಕುರಿತು ಬ್ರಿಟಿಷ್​​ ಜರ್ನಲ್​ ಆಫ್​ ಸ್ಪೋರ್ಟ್​ ಮೆಡಿಸಿನ್​ನಲ್ಲೂ ಪ್ರಕಟವಾಗಿದೆ. ಈ ಸಂಬಂಧ ವು 97 ಅಧ್ಯಯನ, 1039 ಪ್ರಯೋಗ ನಡೆಸಿದ್ದು, 1, 28, 119 ಭಾಗಿದಾರರ ಮೇಲೆ ಅಧ್ಯಯನ ಮಾಡಲಾಗಿದೆ. ಈ ವೇಳೆ, ವ್ಯಾಯಾಮದಂತಹ ದೈಹಿಕ ಚಟುವಟಿಕೆಯಲ್ಲಿ ಹೆಚ್ಚು ತೊಡಗಿದವರಲ್ಲಿ ದುಃಖ, ಆತಂಕ ಮತ್ತು ಖಿನ್ನತೆಗಳು ಯಾವ ರೀತಿ ಪರಿಣಾಮ ಬೀರುತ್ತದೆ ಎಂದು 12 ವಾರಗಳ ಕಾಲ ಅಧ್ಯಯನ ನಡೆಸಲಾಗಿದೆ. ಇವರ ಮಾನಸಿಕ ಆರೋಗ್ಯ ಸುಧಾರಣೆ ಮಾಡುವಲ್ಲಿ ದೈಹಿಕ ಚಟುವಟಿಕೆಗಳು ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ ತಿಳಿದು ಬಂದಿದೆ. ಅದರಲ್ಲೂ ಗರ್ಭಿಣಿ ಮತ್ತು ಹೆರಿಗೆ ಬಳಿಕ ಮಹಿಳೆಯರಲ್ಲಿ ಕಾಡುವ ಮಾನಸಿಕ ಸಮಸ್ಯೆ, ಇನ್ನಿತರ ರೋಗಗಳಿಗೆ ಒಳಗಾಗಿ ಮಾನಸಿಕವಾಗಿ ಕುಗ್ಗಿರುವವರಲ್ಲಿ ವ್ಯಾಯಾಮ…

Read More