nammatumakuru

    Subscribe to Updates

    Get the latest creative news from FooBar about art, design and business.

    What's Hot

    ಭೀಕರ ರಸ್ತೆ ಅಪಘಾತ: ತೆಲುಗು ನಟ ಭರತ್ ಕಾಂತ್ ಸಾವು

    May 13, 2026

    ಕಿರುತೆರೆ ಮತ್ತು ಬೆಳ್ಳಿತೆರೆಯ ಜನಪ್ರಿಯ ನಟ ದಿಲೀಪ್ ರಾಜ್ ಇನ್ನಿಲ್ಲ: ಹೃದಯಾಘಾತದಿಂದ ನಿಧನ: ಬೆಳಗ್ಗಿನ ಜಾವ ಆಗಿದ್ದೇನು?

    May 13, 2026

    ಉದ್ಯೋಗಾಧಾರಿತ ಡಿಪ್ಲೊಮಾ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನ

    May 13, 2026
    Facebook Twitter Instagram
    ಟ್ರೆಂಡಿಂಗ್
    • ಭೀಕರ ರಸ್ತೆ ಅಪಘಾತ: ತೆಲುಗು ನಟ ಭರತ್ ಕಾಂತ್ ಸಾವು
    • ಕಿರುತೆರೆ ಮತ್ತು ಬೆಳ್ಳಿತೆರೆಯ ಜನಪ್ರಿಯ ನಟ ದಿಲೀಪ್ ರಾಜ್ ಇನ್ನಿಲ್ಲ: ಹೃದಯಾಘಾತದಿಂದ ನಿಧನ: ಬೆಳಗ್ಗಿನ ಜಾವ ಆಗಿದ್ದೇನು?
    • ಉದ್ಯೋಗಾಧಾರಿತ ಡಿಪ್ಲೊಮಾ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನ
    • ಮೇ 20ರಂದು ತುಮಕೂರಿನಲ್ಲಿ ರಾಜ್ಯ ಸರ್ಕಾರದ ಬೃಹತ್ ಸಾಧನಾ ಸಮಾವೇಶ: 1.50 ಲಕ್ಷ ಫಲಾನುಭವಿಗಳಿಗೆ ಸವಲತ್ತು: ಕೃಷ್ಣಬೈರೇಗೌಡ
    • ಮುಖ್ಯಮಂತ್ರಿಗಳ ಸಾಧನ ಸಮಾವೇಶಕ್ಕೆ ಭರ್ಜರಿ ಸಿದ್ಧತೆ: ಹಳ್ಳಿ ಹಳ್ಳಿಗೂ ತಲುಪಿ ಆಹ್ವಾನ ನೀಡುತ್ತಿರುವ ಕಂದಾಯ ಅಧಿಕಾರಿಗಳು 
    • ನೀಟ್ ಯುಜಿ ಪರೀಕ್ಷೆ ರದ್ದು: ಲಕ್ಷಾಂತರ ವಿದ್ಯಾರ್ಥಿಗಳ ಬದುಕಿನೊಂದಿಗೆ NTA ಚೆಲ್ಲಾಟ: AIDSO
    • ನಾಲ್ಕು ತಿಂಗಳಿನಿಂದ ಗೌರವಧನವಿಲ್ಲ: ರಾಜ್ಯ, ಕೇಂದ್ರ ಸರ್ಕಾರಗಳಿಂದ ವಿಳಂಬ ನೀತಿ: ಆಶಾಕಾರ್ಯಕರ್ತೆಯರಿಂದ ಪ್ರತಿಭಟನೆ
    • ತುಮಕೂರು: ಅಮ್ಲಾಪುರದ ಮದರಸಾದಲ್ಲಿ ಹೊರ ರಾಜ್ಯದ ಮಕ್ಕಳಿಗೆ ಹಿಂಸೆ: ಓಡಿಬಂದ 24 ಮಕ್ಕಳ ರಕ್ಷಣೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಹಿಂದಿನ ಚುನಾವಣೆಯ ಟೆನ್ಶನ್ ನನಗೆ ಈ ಬಾರಿ ಇಲ್ಲ, ನಾನು ಮಾಡಿದ ಕೆಲಸ ನನ್ನ ಕೈ ಹಿಡಿಯಲಿದೆ : ಲಕ್ಷ್ಮೀ ಹೆಬ್ಬಾಳಕರ್ ವಿಶ್ವಾಸ
    ಜಿಲ್ಲಾ ಸುದ್ದಿ April 30, 2023

    ಹಿಂದಿನ ಚುನಾವಣೆಯ ಟೆನ್ಶನ್ ನನಗೆ ಈ ಬಾರಿ ಇಲ್ಲ, ನಾನು ಮಾಡಿದ ಕೆಲಸ ನನ್ನ ಕೈ ಹಿಡಿಯಲಿದೆ : ಲಕ್ಷ್ಮೀ ಹೆಬ್ಬಾಳಕರ್ ವಿಶ್ವಾಸ

    By adminApril 30, 2023No Comments3 Mins Read
    laxmi hebalkar

    ಬೆಳಗಾವಿ: ಹಿಂದಿನ ಚುನಾವಣೆಯ ಟೆನ್ಶನ್ ನನಗೆ ಈ ಬಾರಿ ಇಲ್ಲ. ಕಳೆದ 5 ವರ್ಷ ಜನರ ಮಧ್ಯೆ ನಿಂತು ಮಾಡಿದ ಕೆಲಸ ನನ್ನ ಕೈ ಹಿಡಿಯಲಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ನಿರಂತರ ಪ್ರಚಾರ ಕಾರ್ಯದ ಮಧ್ಯೆ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮೊದಲಿನಿಂದಲೂ ಕ್ಷೇತ್ರಾದ್ಯಂತ ಒಳ್ಳೆಯ ರೆಸ್ಪಾನ್ಸ್ ಇದೆ. 5 ವರ್ಷಜನರ ಮಧ್ಯೆ ನಿಂತಿದ್ದೇನೆ, ಅದು ಫಲ ಕೊಡುತ್ತದೆ ಎಂದರು.


    Provided by
    Provided by

    ಕ್ಷೇತ್ರದ ಯಾವುದೇ ಭಾಗಕ್ಕೆ ಹೋದರೂ ನಾನು ಮಾಡಿಸಿದ ಒಂದಿಲ್ಲೊಂದು ಅಭಿವೃದ್ಧಿ ಕೆಲಸಗಳು ಕಾಣುತ್ತವೆ. ಪ್ರತಿ ಊರಲ್ಲಿ, ಪ್ರತಿಯೊಬ್ಬರು ನೆನೆಸಿಕೊಳ್ಳುತ್ತಾರೆ, ಅಕ್ಕ ಅದು ನೀವು ಮಾಡಿಸಿಕೊಟ್ಟಿದ್ದು, ಅಕ್ಕ ಇದು ನೀವು ಮಾಡಿಸಿಕೊಟ್ಟಿದ್ದು ಎಂದು ಜನ ನೆನಪಿಸುತ್ತಾರೆ. ಅಕ್ಕ ನಿಮ್ಮಿಂದಾಗಿ ನಮ್ಮೂರಿಗೆ ರಸ್ತೆಯಾಯಿತು. ಎಷ್ಟೊವರ್ಷದಿಂದ ಓಡಾಡಲೂ ಪರದಾಟ ನಡೆಸುತ್ತಿದ್ದೆವು. ನಮ್ಮೂರಲ್ಲಿ ಚರಂಡಿ ಇಲ್ಲದೆ ರಸ್ತೆ ಮೇಲೆಯೇ ಹೊಲಸು ನೀರು ಹರಿಯುತ್ತಿತ್ತು. ನೀವು ಮಾಡಿಸಿಕೊಟ್ಟಿದ್ದರಿಂದ ನೆಮ್ಮದಿಯಿಂದ ಓಡಾಡುವಂತಾಗಿದೆ ಎಂದು ಜನರು ಸ್ಮರಿಸುತ್ತಾರೆ.

    ಕೊರೋನಾ, ಪ್ರವಾಹದಂತಹ ಸಂದರ್ಭದಲ್ಲಿ ಜನರ ಜೊತೆ ನಿಂತಿದ್ದೇನೆ. ನಮ್ಮ ಇಡೀ ಕುಟುಂಬಕ್ಕೆ ಕೊರೋನಾ ಬಂದಿತು. ಆದರೆ ನಮ್ಮ ತೊಂದರೆಯನ್ನು ಜನರಿಗೆ ತೋರ್ಪಡಿಸದೆ ನಮ್ಮ ಇಡೀ ತಂಡವನ್ನು ಜನರ ಸೇವೆಯಲ್ಲಿ ತೊಡಗಿಸಿದ್ದೆವು. ಉಚಿತ ಅಂಬುಲೆನ್ಸ್ ಮೂಲಕ ಹಳ್ಳಿ ಹಳ್ಳಿಯಲ್ಲಿ ರೋಗಿಗಳಿಗೆ ನೆರವಾಗಿದ್ದೇನೆ. ಆಹಾರದ ಕಿಟ್, ಔಷಧದ ಕಿಟ್ ಹಂಚುವ ಮೂಲಕ ಅವರ ಕಷ್ಟದಲ್ಲಿ ಕುಟುಂಬದ ಸದಸ್ಯೆಯಾಗಿ ನಿಂತಿದ್ದೇನೆ. ನಾನು ಆಸ್ಪತ್ರೆಯ ಬೆಡ್ ಮೇಲಿದ್ದ ಸಂದರ್ಭದಲ್ಲೂ ಜನರ ಫೋನ್ ಸ್ವೀಕರಿಸುತ್ತ ಕೊರೋನಾ ಸೋಂಕಿತರಿಗೆ ಬೆಡ್ ವ್ಯವಸ್ಥೆ ಸೇರಿದಂತೆ ಅವರು ಕೇಳಿದ್ದೆಲ್ಲ ವ್ಯವಸ್ಥೆ ಮಾಡಿಸಿದ್ದೇನೆ ಎಂದು ಲಕ್ಷ್ಮೀ ಹೆಬ್ಬಾಳಕರ್ ನೆನಪಿಸಿದರು.

    ಪ್ರವಾಹ ಸಂದರ್ಭದಲ್ಲಿ ನಾನೇ ಸ್ವತಃ ಹಳ್ಳಿ ಹಳ್ಳಿಗೆ ಹೋಗಿ ಜನರ ಕಣ್ಣೀರು ಒರೆಸುವ ಕೆಲಸ ಮಾಡಿದ್ದೇನೆ. ಪ್ರತಿ ಮನೆಯ ಸಂಕಷ್ಟಕ್ಕೆ ಸ್ಪಂದಿಸಿದ್ದೇನೆ. ಎಂತಹ ಸಂದರ್ಭದಲ್ಲೂ ಪಲಾಯನ ಮಾಡದೆ ನಿಂತು ಕೆಲಸ ಮಾಡಿದ್ದೇನೆ. ನಾನೊಬ್ಬಳೇ   ಅಲ್ಲ, ನನ್ನ ಸಹೋದರ, ಮಗ, ನಮ್ಮ ಇಂಡೀ ತಂಡ ಊಟ, ನಿದ್ದೆ ಬಿಟ್ಟು ಜನರೊಂದಿಗೆ ನಿಂತಿದೆ. ರಾತ್ರಿಯಾದರೂ ಸಮಸ್ಯೆ ಪರಿಹರಿಸದೆ ನನಗೆ ಮನೆಗೆ ಬರಲು ಮನಸ್ಸಾಗುತ್ತಿರಲಿಲ್ಲ. ತಮ್ಮ ಕಷ್ಟಕಾಲದಲ್ಲಿ ನಾನು ಮಾಡಿದ ಸೇವೆಗೆ ಜನರೇ ಸಾಕ್ಷಿಯಾಗಿದ್ದಾರೆ. ಇದನ್ನೆಲ್ಲ ನೋಡಿದ ಜನರು ಈಗ ಮನೆ ಮಗಳ ಕೈ ಬಿಡಲು ಸಾಧ್ಯವೇ ಇಲ್ಲ. ಯಾರೋ ಈಗ ಚುನಾವಣೆಯ ಸಂದರ್ಭದಲ್ಲಿ ಬಂದು ಏನೇ ಸುಳ್ಳು ಹೇಳಿದರೂ, ಏನೇ ಸುಳ್ಳು ಭರವಸೆ ನೀಡಿದರೂ ಅಂತವರ ಮಾತಿಗೆ ಜನರು ಮರುಳಾಗುವುದಿಲ್ಲ. ತಮ್ಮ ಕಷ್ಟ ಕಾಲದಲ್ಲಿ ಕೈ ಹಿಡಿದವರು ಯಾರು ಎಂಬುದು ಗೊತ್ತಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಭಾವುಕರಾಗಿ ನುಡಿದರು.

    ಎಂಇಎಸ್ ಅಭ್ಯರ್ಥಿ ಈ ಬಾರಿ ನಿಮಗೆ ಪೈಪೋಟಿ ನೀಡುತ್ತಾರೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಎಂಇಎಸ್ ಅಭ್ಯರ್ಥಿ ಹಿಂದೆಯೂ ಇದ್ದರು, ಈಗಲೂ ಇದ್ದಾರೆ. ಅದೇನೂ ವ್ಯತ್ಯಸವಾಗಿಲ್ಲ. 2018ರ ಚುನಾವಣೆಯಲ್ಲಿ ನನ್ನ ಜೊತೆ ಇದ್ದ ಮರಾಠಾ ಸಮಾಜದ ಜನರು ಈಗಲೂ ನನ್ನ ಜೊತೆಗೇ ಇದ್ದಾರೆ. ಮರಾಠಾ ಸಮಾಜಕ್ಕೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಿದ್ದೇನೆ. ಸಮಾಜಕ್ಕೆ ಗೌರವ ಬರುವ ಹಾಗೆ ಸಮಾಜದ ಋಣ ತೀರಿಸುವ ಕೆಲಸ ಮಾಡಿದ್ದೇನೆ. ಯಾರೊಬ್ಬರೂ ಬಿಟ್ಟು ಹೋಗಿಲ್ಲ, ಬದಲಾಗಿ ನನ್ನ ಅಭಿವೃದ್ಧಿ ಕೆಲಸ ನೋಡಿ ಬಹಳಷ್ಟು ಜನರು ಹಿಂದೆ ಅಂತರ ಕಾದುಕೊಂಡಿದ್ದವರೂ ಈಗ ನನ್ನ ಜೊತೆಗೆ ಸೇರಿದ್ದಾರೆ. ಸ್ವಾರ್ಥಕ್ಕೋಸ್ಕರ 4 ತಿಂಗಳು ಬಂದು ರಾಜಕಾರಣ ಮಾಡುವವರ ಬಗ್ಗೆ ಜನರಿಗೆ ಗೊತ್ತಿದೆ. ಹಾಗಾಗಿ ಹಿಂದಿಗಿಂತ ನನ್ನ ಬಲ ಈ ಬಾರಿ ಸಾಕಷ್ಟು ವೃದ್ಧಿಯಾಗಿದೆ ಎಂದು ಹೇಳಿದರು.

    ಯಾರನ್ನೂ ನಾನು ವಿರೋಧಿಗಳು ಎಂದು ಪರಿಗಣಿಸುವುದಿಲ್ಲ. ಅವರು ಅವರ ಕೆಲಸ ಮಾಡುತ್ತಿದ್ದಾರೆ. ನಾನು ನನ್ನ ಕೆಲಸ ಮಾಡುತ್ತಿದ್ದೇನೆ. ಬೇರೆ ಪಕ್ಷದವರಾಗಲಿ, ಚುನಾವಣೆಗೆ ಸ್ಪರ್ಧಿಸಿರುವ ಯಾರೇ ಆಗಲಿ ನನ್ನ ವಿರೋಧಿಗಳು ಎಂದುಕೊಳ್ಳುವುದಿಲ್ಲ. ಅನೇಕರು ರಾಜಕೀಯ ಕಾರಣಕ್ಕೆ ನನ್ನನ್ನು ವಿರೋಧಿಸುತ್ತಿರಬಹುದು. ಆದರೆ, ಲಕ್ಷ್ಮೀ ಹೆಬ್ಬಾಳಕರ್ ನಮ್ಮ ಕ್ಷೇತ್ರದಲ್ಲಿ ಹಿಂದೆಂದೂ ಆಗದಷ್ಟು ಕೆಲಸ ಮಾಡಿಸಿದ್ದಾರೆ ಎಂದು ಅವರ ಮನಸ್ಸಾಕ್ಷಿಗೆ ಗೊತ್ತಿದೆ. ಹಾಗಾಗಿ  ದಿನದಿಂದ ದಿನಕ್ಕೆ ಬಹಳಷ್ಟು ಜನರು ನನ್ನ ಬೆಂಬಲಕ್ಕೆ ಬರುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರವಾಗಿ ತಿಳಿಸಿದರು.

    ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಸ್ವಂತ ಬಲದ ಮೇಲೆ ಸರಕಾರ ರಚಿಸಲಿದೆ. ಜನರು ಬೆಲೆ ಏರಿಕೆ, ಭ್ರಷ್ಟಾಚಾರ, ಡಿ ಮೊನಿಟೈಸೇಶನ್, ಕೊರೋನಾ, ಪ್ರವಾಹ, ಪಿಎಸ್ ಐ ಸ್ಕ್ಯಾಮ್, ಶಿಕ್ಷಕರ ನೇಮಕಾತಿ ಸ್ಕ್ಯಾಮ್, ಎಂಜಿನಿಯರ್ಸ್ ನೇಮಕಾತಿ  ಸ್ಕ್ಯಾಮ್ ಎಲ್ಲದರಿಂದ ರೋಸಿ ಹೋಗಿದ್ದಾರೆ. ನಮ್ಮ ಕ್ಷೇತ್ರದಲ್ಲೇ ಸಂತೋಷ ಪಾಟೀಲ ಎನ್ನುವ ಯುವಕ ಭ್ರಷ್ಟಾಚಾರಕ್ಕೆ ನಲುಗಿ ಆತ್ಮಹತ್ಯೆ ಮಾಡಿಕೊಂಡ. ಎಲ್ಲವೂ ಕ್ಷೇತ್ರದ ಜನರಿಗೆ ಗೊತ್ತಿದೆ. ಹಾಗಾಗಿ ಜನರು ಬಹಳ ಬುದ್ದಿವಂತರಿದ್ದಾರೆ. ಹಾಗಾಗಿ ಖಂಡಿತ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಬಹುಮತವನ್ನು ಕೊಟ್ಟೇ ಕೊಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL

    ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

     

    admin
    • Website

    Related Posts

    ಸಚಿವ ಡಿ. ಸುಧಾಕರ್ ನಿಧನ: ಚಿತ್ರದುರ್ಗ ಜಿಲ್ಲೆಗೆ ನಾಳೆ ರಜೆ, ರಾಜ್ಯಾದ್ಯಂತ 3 ದಿನ ಶೋಕಾಚರಣೆ ಘೋಷಣೆ

    May 10, 2026

    ಭದ್ರಾವತಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿ ಕೊಲೆ; ಪತ್ನಿ ಹಾಗೂ ಪ್ರಿಯಕರನಿಗೆ ಮರಣದಂಡನೆ ಶಿಕ್ಷೆ

    May 10, 2026

    ಕಾರವಾರ: ಕಾರ್ಮಿಕರು ಸರ್ಕಾರದಿಂದ ಸಿಗುವ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಿ: ನ್ಯಾ.ಕವಿತಾ ಎಸ್.ಉಂಡೋಡಿ

    May 9, 2026

    Comments are closed.

    Our Picks

    ಭೀಕರ ರಸ್ತೆ ಅಪಘಾತ: ತೆಲುಗು ನಟ ಭರತ್ ಕಾಂತ್ ಸಾವು

    May 13, 2026

    ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ: ತಮಿಳುನಾಡಿನಲ್ಲಿ ನಟ ವಿಜಯ್ ಅಬ್ಬರ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುನ್ನಡೆ

    May 4, 2026

    ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕೋರ್ಟ್ ಕದ ತಟ್ಟಿದ ನಟ ದರ್ಶನ್: ಮೇ 4ಕ್ಕೆ ವಿಚಾರಣೆ

    April 29, 2026

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    ಭೀಕರ ರಸ್ತೆ ಅಪಘಾತ: ತೆಲುಗು ನಟ ಭರತ್ ಕಾಂತ್ ಸಾವು

    May 13, 2026

    ಹೈದರಾಬಾದ್: ತೆಲುಗು ಚಿತ್ರರಂಗದ ಉದಯೋನ್ಮುಖ ನಟ ಹಾಗೂ ಸೋಶಿಯಲ್ ಮೀಡಿಯಾ ಸ್ಟಾರ್ ಕೆ. ಭರತ್ ಕಾಂತ್ (31) ರಸ್ತೆ ಅಪಘಾತದಲ್ಲಿ…

    ಕಿರುತೆರೆ ಮತ್ತು ಬೆಳ್ಳಿತೆರೆಯ ಜನಪ್ರಿಯ ನಟ ದಿಲೀಪ್ ರಾಜ್ ಇನ್ನಿಲ್ಲ: ಹೃದಯಾಘಾತದಿಂದ ನಿಧನ: ಬೆಳಗ್ಗಿನ ಜಾವ ಆಗಿದ್ದೇನು?

    May 13, 2026

    ಉದ್ಯೋಗಾಧಾರಿತ ಡಿಪ್ಲೊಮಾ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನ

    May 13, 2026

    ಮೇ 20ರಂದು ತುಮಕೂರಿನಲ್ಲಿ ರಾಜ್ಯ ಸರ್ಕಾರದ ಬೃಹತ್ ಸಾಧನಾ ಸಮಾವೇಶ: 1.50 ಲಕ್ಷ ಫಲಾನುಭವಿಗಳಿಗೆ ಸವಲತ್ತು: ಕೃಷ್ಣಬೈರೇಗೌಡ

    May 13, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.