Subscribe to Updates
Get the latest creative news from FooBar about art, design and business.
- ನವೆಂಬರ್ 22ರಂದು ಸಾಹೇ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ: ಡಾ.ಕೆ.ಬಿ.ಲಿಂಗೇಗೌಡ
- ಕಲ್ಪೋತ್ಸವ: ಗಮನ ಸೆಳೆದ ಜಂಬೂ ಸವಾರಿ, ಕಲಾತಂಡಗಳ ಮೆರುಗು
- ರೈತ ಹೋರಾಟಗಾರ ಸಿ.ಅಜ್ಜಪ್ಪ ನಿಧನ
- ವಿಕಲಚೇತನ ಸಾಧಕರಿಂದ ಅರ್ಜಿ ಆಹ್ವಾನ
- ಬೀದರ್ | ಪ್ರತಿ ಟನ್ ಕಬ್ಬಿಗೆ 2,950ರೂ. ನಿಗದಿ: ಪ್ರತಿಭಟನೆ ಕೈ ಬಿಟ್ಟ ರೈತರು
- ಇ–ಸ್ವತ್ತು ದಾಖಲೆ ವಿಳಂಬ: ಮಹಾನಗರ ಪಾಲಿಕೆಗೆ ಡಿಸಿ ಶುಭ ಕಲ್ಯಾಣ್ ದಿಢೀರ್ ಭೇಟಿ
- ತಿಪಟೂರು | ‘ಶೌರ್ಯ ಪ್ರಶಸ್ತಿ’ ಪುರಸ್ಕೃತ ಪ್ರಣವ್ ಬೆಳ್ಳೂರು ಅವರಿಗೆ ಸನ್ಮಾನ
- ರಾಗಿ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ ಬೆಲೆ ನಿಗದಿ
Author: admin
ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 9ರಂದು ಮಧುಮಲೈಗೆ ಭೇಟಿ ಮಾಡಿ ಆಸ್ಕರ್ ಪ್ರಶಸ್ತಿ ಗಳಿಸಿದ ‘ಎಲಿಫೆಂಟ್ ವಿಸ್ಪರರ್ಸ್’ ಡಾಕ್ಯುಮೆಂಟರಿ ಚಿತ್ರದಲ್ಲಿ ನಟಿಸಿರುವ ಬೊಮ್ಮ ಹಾಗೂ ತಂಡದೊಂದಿಗೆ ಸಂವಾದ ನಡೆಸಲಿದ್ದಾರೆ. ಆಸ್ಕರ್ ಪ್ರಶಸ್ತಿ ಮೂಲಕ ವಿಶ್ವದ ಗಮನ ಸೆಳೆದ ‘ ಎಲಿಫೆಂಟ್ ವಿಷ್ಪರರ್ಸ್’ ತಂಡವನ್ನು ಮೋದಿ ಭೇಟಿ ಮಾಡಲಿದ್ದಾರೆ. ಏಪ್ರಿಲ್ 8ರಂದು ರಾತ್ರಿ ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸಲಿದ್ದಾರೆ. ವಿಮಾನದ ಮೂಲಕ ಮೈಸೂರಿಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ. ಏಪ್ರಿಲ್ 9ರಂದು ಬೆಳಗ್ಗೆ 6 ಗಂಟೆಗೆ ಹೆಲಿಕಾಪ್ಟರ್ ಮೂಲಕ ಬಂಡೀಪುರಕ್ಕೆ ತೆರಳುತ್ತಾರೆ. ಅಲ್ಲಿ ಸಫಾರಿ, ಅರಣ್ಯ ಸಿಬ್ಬಂದಿಯೊಂದಿಗೆ ಸಂವಾದ ನಡೆಸಲಿದ್ದಾರೆ. ನಂತರ ತೆಪ್ಪಕಾಡು, ಮಧುಮಲೈ ಕಡೆಗೆ ತೆರಳಿ ಬೊಮ್ಮ ಮತ್ತು ತಂಡವನ್ನು ಭೇಟಿ ಮಾಡಿ ನಂತರ ಹೆಲಿಕಾಪ್ಟರ್ ಮೂಲಕ ಮತ್ತೆ ಮೈಸೂರಿಗೆ ಆಗಮಿಸಲಿದ್ದಾರೆ. ನಂತರ ಬೆಳಗ್ಗೆ 10 ಗಂಟೆಗೆ ಮುಕ್ತ ವಿವಿ ಸಭಾಂಗಣದಲ್ಲಿ ಹುಲಿ ವರದಿ ಬಿಡುಗಡೆ ಮಾಡಲಿದ್ದಾರೆ. ಇದು 2 ಗಂಟೆಗಳ ಕಾರ್ಯಕ್ರಮವಾಗಿರುತ್ತದೆ. ದೇಶದ ನಾನಾ ರಾಜ್ಯಗಳು ಸೇರಿದಂತೆ ವಿದೇಶಗಳಿಂದಲೂ…
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ರವರು ಕನ್ನಡಿಗರ ವಿರುದ್ಧ. ಜಾಲಹಳ್ಳಿ ವಾರ್ಡಿನ ಕಾತನಗರಧಲ್ಲಿ ತಮಿಳು ಭಾಷೆಯಲ್ಲಿ ಭಾಷಣ ಮಾಡುತ್ತಾ ಕನ್ನಡಿಗರು ಬಂದರೆ ಓಡಾಡಿಸಿಕೊಂಡು ಓಡಿರಿ ಮಿಕ್ಕಿದ್ದು ನಾನು ನೋಡಿಕೊಳ್ಳುತ್ತೇನೆ ಯಾವ ತರ ಹೊಡಿಬೇಕು ಅಂದ್ರೆ ಅವರು ತಿರುಗಿ ನೋಡಬಾರದು ಆತರ ಹೊಡಿರಿ ಎಂದರು. ಮತ್ತೆ ಯಾರ್ಯಾರು ಹೊಡಿತೀರಾ ಕೈ ಎತ್ತಿ ನೋಡೋಣ ಎಂಧು ಪ್ರಚೋದನಕಾರಿ ಹೇಳಿಕೆಯನ್ನು ಕೊಡುವುದರ ಮೂಲಕ ತಮ್ಮ ವೋಟ್ ಬ್ಯಾಂಕ್ ಲಾಭಿಗಾಗಿ ಸಮಾಜದಲ್ಲಿ ಗಲಭೆಗೆ ಕಾರಣವಾಗಿರುವ ಮುನಿರತ್ನಂ ರವರ ವಿರುದ್ಧ ಇಂದು ನಮ್ಮ ಕರ್ನಾಟಕ ಸೇನೆಯ ರಾಜ್ಯಧ್ಯಕ್ಷರಾದಂತ ಶ್ರೀ ಎಂ ಬಸವರಾಜ್ ಪಡ್ಕೋಟೆ ಅಣ್ಣನವರ ನೇತೃತ್ವದಲ್ಲಿ ಇಂದು ಬಿಜೆಪಿ ಕಚೇರಿಗೆ ಬೇಟಿ ಕೊಟ್ಟು ಅವರನ್ನು ಕರ್ನಾಟಕದಿಂದ ಬಹಿಷ್ಕಾರ ಮಾಡಬೇಕೆಂದು ಮತ್ತು ಪಕ್ಷದಿಂದ ಹುಚ್ಚಾಟನೆ ಮಾಡಬೇಕೆಂದು ಇಂದು ನಮ್ಮ ಕರ್ನಾಟಕ ಸೇನೆ ಒತ್ತಾಯಿಸಿ ಮನವಿ ಪತ್ರ ಕೊಡಲಾಯಿತು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್…
ತುರುವೇಕೆರೆ: ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳನ್ನು ತೊರೆದು ಹಲವಾರು ಮುಖಂಡರುಗಳು ಹಾಗೂ ಕಾರ್ಯಕರ್ತರು ಮುಖಂಡರಾದ ಎಚ್.ಆರ್. ರಾಮೇಗೌಡ ರವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು. ಹೆಚ್.ಆರ್.ರಾಮೇಗೌಡ ರವರ ಸ್ನೇಹಿತರಾದ ರೇಣುಕೇಶ್, ಯದು,ದಿವಾಕರ್,ಶೇಕರ್ ಮತ್ತು ಬೆಂಬಲಿಗರು ತುರುವೇಕೆರೆ ಪಟ್ಟಣದ ಆರಾಧ್ಯ ದೇವತೆ ಉಡುಸಲಮ್ಮ ದೇವಿಗೆ ಪೂಜೆಯನ್ನು ಸಲ್ಲಿಸಿ ದೇವಿ ಆಶೀರ್ವಾದವನ್ನು ಪಡೆದು ಜೆ.ಡಿ.ಎಸ್. ಮುಖಂಡರುಗಳಾದ ಬಾಣ ಸಂದ್ರ ರಮೇಶ್,ಹೇಡಗೀಹಳ್ಳಿ ವಿಶ್ವನಾಥ್ ರವರ ಜೊತೆಗೂಡಿ ಬಾಣಸಂದ್ರ ರಸ್ತೆಯ ಮೂಲಕ ಜೆ ಡಿ ಎಸ್ ಪಕ್ಷ ಮತ್ತು ಕೃಷ್ಣಪ್ಪ ರವರ ಪರ ಘೋಷಣೆಗಳನ್ನು ಕೂಗುತ್ತಾ ದಬ್ಬೇಘಟ್ಟ ರಸ್ತೆಯಲ್ಲಿರುವ ಜೆ ಡಿ ಎಸ್ ಕಚೇರಿಗೆ ಆಗಮಿಸಿದರು. ಆಗಮಿಸಿದ ತಕ್ಷಣ ಪಕ್ಷದ ಪಟಾಕಿಯನ್ನು ಸಿಡಿಸಿ ಸಂಭ್ರಮಿಸಿ ಪಕ್ಷದ ಪರ ಮತ್ತು ತಮ್ಮ ನಾಯಕರುಗಳ ಪರ ಘೋಷಣೆಗಳನ್ನು ಕೂಗಿದರು ನಂತರ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ಮಾಜಿ ಶಾಸಕರಾದ ಎಂ ಟಿ ಕೃಷ್ಣಪ್ಪರವರು ಮೆರವಣಿಗೆ ಮೂಲಕ ಸಾಗಿ ಬಂದ ಮುಖಂಡರು ಹಾಗೂ ಕಾರ್ಯಕರ್ತರುಗಳನ್ನು ಪಕ್ಷದ ಶಾಲು ಮತ್ತು ಹಾರ ಹಾಕುವ ಮೂಲಕ…
ತುರುವೇಕೆರೆ : ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ಮಂಗಳವಾರ ಜೈನ ತೀರ್ಥಂಕರ ವರ್ಧಮಾನ ಮಹಾವೀರರವರ ಜಯಂತಿಯನ್ನು ತುಂಬಾ ಸರಳವಾಗಿ ಆಚರಿಸಲಾಯಿತು. ಜಯಂತಿ ಅಂಗವಾಗಿ ಜೈನ ಸಮಾಜದ ಬಂಧುಗಳು ಗ್ರಾಮದ ಅಂಚೆ ಕಚೇರಿ ಮುಂಭಾಗದಲ್ಲಿ ಸಾರ್ವಜನಿಕರಿಗೆ ಬೆಳಿಗ್ಗೆಯಿಂದಲೂ ಮಧ್ಯಾಹ್ನ 2 ಗಂಟೆಯವರೆಗೆ ಮಜ್ಜಿಗೆ ಮತ್ತು ಹೆಸರು ಬೇಳೆಯನ್ನು ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಜೈನ ಸಮಾಜದ ಮುಖಂಡ ವಿಪುಲ್ ಜೈನ್ ಈ ಬಾರಿ ಮಹಾವೀರದ ಜಯಂತಿಯನ್ನು ಚಾರು ಕೀರ್ತಿ ಭಟ್ಟಾರಕ ಶ್ರೀಗಳ ಅಗಲಿಕೆ ಹಿನ್ನೆಲೆಯಲ್ಲಿ ಜಯಂತಿಯನ್ನು ಬಹಳ ಸರಳವಾಗಿ ಆಚರಿಸುತ್ತಿದ್ದೇವೆ. ಶ್ರೀಗಳು ಜೈನ ಧರ್ಮ ಇಂದಿಗೂ ತನ್ನತನವನ್ನು ಉಳಿಸಿಕೊಂಡು ಬರುವುದಕ್ಕೆ ಪ್ರಮುಖ ಕಾರಣವೆಂದರೆ, ಜೈನ ತತ್ವಶಾಸ್ತ್ರದ ಗ್ರಂಥಗಳು ಹಾಗೂ ಜೈನ ವಾಸ್ತು ಶಿಲ್ಪ ಕಲೆ ಎಂಬುದನ್ನು ಅರಿತು ಜೈನ ಬಸದಿಗಳ ಜೀರ್ಣೋದ್ಧಾರ ಜೈನ ಸಾಹಿತ್ಯದ ಪ್ರಕಟಣೆಗೆ ವಿಶೇಷವಾಗಿ ಹೊತ್ತು ನೀಡುವುದರ ಜೊತೆಗೆ ಅವುಗಳ ಸಂರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು ಎಂದು ಶ್ರೀಗಳ ಬಗ್ಗೆ ಮಾತನಾಡಿ ನಾಡಿನ ಜನತೆಗೆ ವರ್ಧಮಾನ ಮಹಾವೀರರ ಜಯಂತಿಯ ಶುಭಾಶಯಗಳು…
ಯಮಕನಮರಡಿ: ಹತ್ತರಗಿ ಗ್ರಾಮದ ಸರ್ವೇ ನಂ. 445 ರಲ್ಲಿ ಸರ್ಕಾರಿ ಜಾಗವನ್ನು ಅತಿಕ್ರಮಣ ಮಾಡಿದ ಯಮಕನಮರಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ, ಬಿಜೆಪಿ ಮುಖಂಡ ರವೀಂದ್ರ ಹಂಜಿ ಅವರ ವಿರುದ್ಧ ಸರ್ಕಾರ ಕ್ರಿಮಿನಲ್ ಕೇಸ್ ದಾಖಲಿಸಿ, ಕಠಿಣ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಮುಖಂಡ ಕಿರಣ ರಜಪೂತ್ ಆಗ್ರಹಿಸಿದರು. ಪಟ್ಟಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಮಕನಮರಡಿ ಅರ್ಬನ್ ಬ್ಯಾಂಕ್, ರಾಜೀವ್ ಗಾಂಧಿ ಆಸ್ಪತ್ರೆ, ವಿದ್ಯಾ ವರ್ಧಕ್ ಸಂಸ್ಥೆ ಹೆಸರಲ್ಲಿ ಒಟ್ಟರೆ 8 ಗುಂಟೆ ಜಾಗ ಸರ್ವೇ ನಂ. 445ರಲ್ಲಿ 1996ರಲ್ಲಿ ಖರೀದಿ ಮಾಡಿದ್ದಾರೆ. ಆದರೆ ಈ ಮೂರು ಸಂಸ್ಥೆಗಳ ಹೆಸರಲ್ಲಿ ಹೆಚ್ಚುವರಿಯಾಗಿ 26 ಗುಂಟೆ ಜಾಗ ಅತಿಕ್ರಮಣ ಮಾಡಿದ್ದಾರೆಂದು ದಾಖಲೆ ಸಮೇತ ಆರೋಪ ಮಾಡಿದರು. ಈ ಜಾಗ ಖರೀದಿಸುವಾಗ ಐದು ಜನ ಬಿಡುದಾರರು ಭಾಗವಹಿಸಿದ್ದು, ಅವರ ಗಮನಕ್ಕೆ ಬಾರದೆ ನಕಲಿ ಸಹಿ ಮಾಡಿ 4 ಗುಂಟೆ ಜಾಗವನ್ನು ಖರೀಸಿದ್ದಾರೆ. 2007-2008ರಿಂದ 2023ರವರೆ ಸಾಲಿನಲ್ಲಿ ಇದೇ ಆಸ್ತಿಗೆ ಸಂದಂಧಿಸಿದಂತೆ ಗ್ರಾಪಂಗೆ ತೆರಿಗೆ ಕಟ್ಟಿದ್ದು, 2011-12ರಲ್ಲಿ…
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿ ಅಭಿವೃದ್ಧಿಗೆ ಚಾಲನೆ ನೀಡಲಾಗಿದ್ದು, ಪುಷ್ಕರಣಿ ಮಧ್ಯಭಾಗದಲ್ಲಿರುವ ಕಟ್ಟೆಯ ಕೆಳಭಾಗದಲ್ಲಿ ವರುಣ ದೇವರ ಶಿಲಾಮಯ ಪೀಠವೊಂದು ಪತ್ತೆ ಆಗಿದೆ ಇದು ಜನರಲ್ಲಿ ಸಂಚಲನ ಮೂಡಿಸಿದೆ. ಈಗಾಗಲೇ ಪುಷ್ಕರಣಿಯ ಮಧ್ಯಭಾಗದಲ್ಲಿರುವ ಕಟ್ಟೆಯನ್ನು ತೆಗೆಯಾಲಾಗಿದ್ದು, ನೂತನ ಶಿಲಾಮಯ ಕಟ್ಟೆಗೆ ಚಾಲನೆಯನ್ನೂ ನೀಡಲಾಗಿದೆ. ಇದೀಗ ಶಿಲಾಮಯ ಕಂಬಗಳನ್ನು ಕಟ್ಟೆಯ ನಾಲ್ಕು ಬದಿಗಳಲ್ಲಿ ಇಡಲು ಆಳವಾದ ಗುಂಡಿಗಳನ್ನು ತೆಗೆಯುವ ಸಂದರ್ಭ ದಲ್ಲಿ ದೊಡ್ಡದಾದ ಪಾಣಿಪೀಠ ಹಾಗೂ ಒಂದು ತಾಮ್ರದ ಸಣ್ಣ ಕರಡಿಗೆ ಪತ್ತೆಯಾಗಿದೆ ಎಂದು ಹೇಳಲಾಗಿದೆ ಹಿಂದೆ ದೇವಸ್ಥಾನದ ಜೀರ್ಣೋದ್ಧಾರ ಸಂದರ್ಭದಲ್ಲಿ ಶಿಲಾಶಾಸನ, ಕೆತ್ತನೆ ಶಿಲ್ಪಗಳು, ರಾಜರ ಕಾಲದ ನಾಣ್ಯಗಳು, ಗರ್ಭಗುಡಿಯಲ್ಲಿ ಪ್ರಭಾವಳಿ ಪತ್ತೆಯಾಗಿದ್ದವು. ಇದೀಗ ಪುಷ್ಕರಣಿ ಅಭಿವೃದ್ಧಿ ಸಂದರ್ಭದಲ್ಲೂ ಹೊಸ ವಿಸ್ಮಯಗಳು ಬೆಳಕಿಗೆ ಬಂದಿವೆ. ಈ ಮೂಲಕ ದೇವಸ್ಥಾನದ ಮಹಿಮೆ ಜನರಿಗೆ ಗೋಚರವಾಗುತ್ತಿದೆ. ಕೆರೆಯಲ್ಲಿದ್ದ ವರುಣ ದೇವರ ಮೂರ್ತಿ ಸುತ್ತಲು ಕಟ್ಟಿದ ಮುರ ಕಲ್ಲನ್ನು ತೆರವುಗೊಳಿಸಿದ ಸಂದರ್ಭ ದಲ್ಲಿ ಶಿಲಾಮಯವಾದ ಮತ್ತೊಂದು ಪಾಣಿಪೀಠ ಪತ್ತೆಯಾಗಿದೆ. ಪ್ರತಿ ದಿನವೂ…
ತುಮಕೂರು: ಜಿಲ್ಲೆಯ ಮಧುಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ವಿ. ವೀರಭದ್ರಯ್ಯ ಮತ್ತು ಜೆಡಿಎಸ್ ಪಕ್ಷದ ಹಲವು ಮುಖಂಡರುಗಳು ಮತದಾರರನ್ನು ತಮ್ಮತ್ತ ಸೆಳೆಯಲು ಧರ್ಮಸ್ಥಳ ಪ್ಯಾಕೇಜ್ ಪ್ರವಾಸಕ್ಕೆ ಕಳುಹಿಸಿಕೊಡುತ್ತಿದ್ದ ವಿಡಿಯೋ ಒಂದು ಕಳೆದ ಮೂರು ದಿನಗಳ ಹಿಂದೆ ಅಷ್ಟೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ನಿಂದ ಸ್ಪರ್ಧೆಗಿಳಿದಿರುವ ಎಂ.ವಿ. ವೀರಭದ್ರಯ್ಯ ಮತದಾರರಿಗೆ ತಮ್ಮ ಪರ ಮತ ಹಾಕಲು ಎರಡು ದಿನಗಳ ಧರ್ಮಸ್ಥಳ ಪ್ಯಾಕೇಜ್ ಪ್ರವಾಸ ಏರ್ಪಡಿಸಿದ್ದಾರೆ ಹಾಗೂ ರಾತ್ರಿ ವೇಳೆ ಬಸ್ ಕಳುಹಿಸುತ್ತಿದ್ದಾರೆ ಎಂದು ಚುನಾವಣಾ ಅಧಿಕಾರಿಗಳಿಗೆ ಘಟನೆಗೆ ಸಂಬಂಧಿಸಿದಂತೆ ದೂರು ನೀಡಲಾಗಿತ್ತು. ಇಂದು ಬೆಳ್ಳಂ ಬೆಳಗ್ಗೆ ಪ್ರವಾಸಕ್ಕೆ ಹೊರಟಿದ್ದ ಮೂರು ಬಸ್ ಗಳನ್ನು ದೊಡ್ಡೇರಿ ಹೋಬಳಿಯ ಗಿಡದಾಗಲನಹಳ್ಳಿ ಹತ್ತಿರ ಮಧುಗಿರಿ ಉಪವಿಭಾಗಾಧಿಕಾರಿ ರಿಷಿ ಆನಂದ್ ನೇತೃತ್ವದ ಚುನಾವಣಾ ಅಧಿಕಾರಿಗಳ ತಂಡ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರವಾಸಕ್ಕೆ ತೆರಳುತ್ತಿದ್ದ ಅಮಾಯಕ ಜನರು ಐ.ಡಿ.ಹಳ್ಳಿ ಹೋಬಳಿಯ ಯರಮನಹಳ್ಳಿ ಮತ್ತು ಕಸಬಾ ಹೋಬಳಿಯ ಶೆಟ್ಟಿಹಳ್ಳಿ ಮತ್ತು ಮರಬಳ್ಳಿ ಗ್ರಾಮದ ಗ್ರಾಮಸ್ಥರು…
ದೇವರ ಪೂಜೆ ಹಕ್ಕು ಪಡೆಯುವ ವಿಚಾರದಲ್ಲಿ ಇಬ್ಬರು ಅರ್ಚಕರ ನಡುವೆ ಗಲಾಟೆ ಯಿಂದಾಗಿ ಅರ್ಚಕರೊಬ್ಬರು ದೇಗುಲಕ್ಕೆ ಬೀಗ ಹಾಕಿ ಕಣ್ಮರೆಯಾಗಿರುವ ಘಟನೆ ಕೊರಟಗೆರೆ ತಾಲೂಕು ಕುರಂಕೋಟೆ ಗ್ರಾಮದಲ್ಲಿ ನಡೆದಿದೆ. ದೊಡ್ಡಕಾಯಪ್ಪ ಸ್ವಾಮಿಯ ಗರ್ಭಗುಡಿ ಮತ್ತು ದೇವಾಲಯಕ್ಕೆ ಬೀಗ ಜಡಿದು ಅರ್ಚಕ ಶ್ರೀನಿವಾಸಮೂರ್ತಿ ಪರಾರಿಯಾಗಿದ್ದಾರೆ. ಒಂದು ವರ್ಷದ ಅವಧಿಗೆ ಅರ್ಚಕ ಶ್ರೀನಿವಾಸ್ ಮೂರ್ತಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಕಳೆದ ಶನಿವಾರ ಶ್ರೀನಿವಾಸ್ ಮೂರ್ತಿಯ ಪೂಜೆ ಅವಧಿ ಮುಗಿದಿದೆ. ಮತ್ತೊರ್ವ ಅರ್ಚಕ ವೆಂಕಟೇಶ್ ಗೆ ಪೂಜೆ ಅಧಿಕಾರ ಹಸ್ತಾಂತರವಾಗಬೇಕಿತ್ತು. ಆದರೆ ಅಧಿಕಾರ ಹಸ್ತಾಂತರ ಮಾಡದೆ ದೇವಾಲಯಕ್ಕೆ ಬೀಗ ಜಡಿದ ಶ್ರೀನಿವಾಸ್ ಮೂರ್ತಿ ಕಣ್ಮರೆಯಾಗಿದ್ದಾರೆ. ದೊಡ್ಡಕಾಯಪ್ಪ ಸೇವಾ ಸಮಿತಿ ಮತ್ತು ಗ್ರಾಮಸ್ಥರಿಂದ ತಹಶೀಲ್ದಾರ್ ಮತ್ತು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ತಹಶೀಲ್ದಾರ್ ಹಾಗೂ ಮುಜರಾಯಿ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದು, ಗ್ರಾಮಸ್ಥರೊಂದಿಗೆ ಸಭೆ ನಡೆಸಿದ್ದಾರೆ. ದೇವಾಲಯಕ್ಕೆ ಬೀಗ ಜಡಿದ ಪರಿಣಾಮ ದೊಡ್ಡಕಾಯಪ್ಪ ಸ್ವಾಮಿಯ ದರ್ಶನ ಸಿಗದೆ ಭಕ್ತರು ಪರದಾಡುತ್ತಿದ್ದು, ದೊಡ್ಡಕಾಯಪ್ಪ ಅರ್ಚಕ ಶ್ರೀನಿವಾಸಮೂರ್ತಿ…
ತುಮಕೂರು: ಜಿಲ್ಲೆಯ ಕೊರಟಗೆರೆ ತಾಲ್ಲೂಕು ಕಸಬಾ ಹೋಬಳಿ ಹುಲಿಕುಂಟೆ ಗ್ರಾಮದ ಅಲೆಮಾರಿ ಕುಟುಂಬಗಳು ಚುನಾವಣೆ ವೇಳೆ ವಿಶೇಷ ಬೇಡಿಕೆಯನ್ನಿಟ್ಟಿದ್ದು, ಪ್ರತಿ ಗುಡಿಸಲಿನಲ್ಲೂ ಭೂಮಿ, ವಸತಿ ಕೊಡದೇ ನಮ್ಮ ಓಟು ಕೊಡೆವು ಎಂಬ ಕರಪತ್ರವನ್ನು ಅಳವಡಿಸಿದ್ದಾರೆ. ಅನೇಕ ವರ್ಷಗಳಿಂದ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕು ಕಸಬಾ ಹೋಬಳಿ ಹುಲಿಕುಂಟೆ ಗ್ರಾಮದ ಅಲೆಮಾರಿ ಕುಟುಂಬಗಳು ಸೇರಿದಂತೆ ತಾಲೂಕಿನ ಇತರೆ ಹೋಬಳಿಯ ಅಲೆಮಾರಿ ಕುಟುಂಬಗಳು ನಿವೇಶನ ವಸತಿಗಾಗಿ ಜನಪ್ರತಿನಿಧಿಗಳಲ್ಲಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಸೂರು ಕಲ್ಪಿಸಿಕೊಡಲು ಅಲೆದು ಕಂಗಾಲಾಗಿದ್ದೇವೆ, ಹಾಗಾಗಿ ಈ ಬಾರಿ 2023 ನೇ ಮೇ 10 ನೇ ದಿನಾಂಕದಂದು ನಡೆಯಲಿರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಅಥವಾ ಮುಖಂಡರುಗಳು ನಮ್ಮಲ್ಲಿ ಮತ ಕೇಳಲು ಬಂದಾಗ ನಾವುಗಳು ನಮ್ಮ ಮತಗಳನ್ನು ಹಣ ಹೆಂಡಕ್ಕೆ ಮಾರಿಕೊಳ್ಳಬಾರದೆಂದು ತೀರ್ಮಾನಿಸಿದ್ದು, ಜೊತೆಗೆ ಭೂಮಿ ವಸತಿ ಕೊಡದೆ ನಾವು ನಮ್ಮ ಮತಗಳನ್ನು ನೀಡಬಾರದೆಂದು ನಿರ್ಧರಿಸಿದ್ದೇವೆ ಎಂದು ಘೋಷಿಸಿಕೊಂಡಿದ್ದಾರೆ. ನಾವುಗಳು ವಾಸವಿರುವ ಜಾಗಗಳಲ್ಲಿ ಪ್ಲಕ್ಸ್ ಮತ್ತು ಮನೆಗಳ ಬಾಗಿಲುಗಳಿಗೆ…
ನವದೆಹಲಿ: ಭಾರತೀಯ ಕಂಪನಿಯಿಂದ ತಯಾರಿಸಲ್ಪಟ್ಟ ಐಡ್ರಾಪ್‌ಗಳನ್ನು ಯುಎಸ್‌ಎ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದೆ. ಈ ಐಡ್ರಾಪ್ಸ್ ನಿಂದ ಹಲವು ಜನರಲ್ಲಿ ಸೋಂಕು ಹರಡುತ್ತಿದೆ ಎಂದು ಯುಎಸ್‌ಎ ವರದಿ ಮಾಡಿದೆ . ಚೆನ್ನೈ ಮೂಲದ ಗ್ಲೋಬಲ್ ಫಾರ್ಮಾ ಹೆಲ್ತ್‌ಕೇರ್ ಎಜ್ರಿಕೇರ್ ಆರ್ಟಿಫಿಶಿಯಲ್ ಟಿಯರ್ಸ್ ಎಂಬ ಬ್ರಾಂಡ್‌ನಲ್ಲಿ ತಯಾರಿಸಿದ ಐಡ್ರಾಪ್ಸ್ ನಿಂದ ಮೂರು ಸಾವು, ಎಂಟು ಕುರುಡುತನ ಮತ್ತು ಹಲವರಲ್ಲಿ ಸೋಂಕುಗಳು ಪತ್ತೆಯಾಗಿವೆ ಎನ್ನಲಾಗಿದೆ. ಕಲುಷಿತ ಕೃತಕ ಐಡ್ರಾಪ್ಸ್ ಬಳಕೆಯಿಂದ ಕಣ್ಣಿನ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಹೇಳಿದೆ. ಚೆನ್ನೈನಿಂದ ದಕ್ಷಿಣಕ್ಕೆ ಸುಮಾರು 40 ಕಿಮೀ ದೂರದಲ್ಲಿರುವ ಗ್ಲೋಬಲ್ ಫಾರ್ಮಾ ಹೆಲ್ತ್‌ಕೇರ್ ಫೆಬ್ರವರಿಯಲ್ಲಿ ಯುಎಸ್ ಮಾರುಕಟ್ಟೆಗೆ ಲಿಂಕ್ ಮಾಡಿದ ಐಡ್ರಾಪ್‌ಗಳ ಉತ್ಪಾದನೆಯನ್ನು ನಿಲ್ಲಿಸಿತ್ತು. ಇದು ಗ್ರಾಹಕರ ಮಟ್ಟದಲ್ಲಿ ಅವಧಿ ಮೀರಿದ ಕೃತಕ ಐಡ್ರಾಪ್ ಗಳನ್ನುಸ್ವಯಂಪ್ರೇರಣೆಯಿಂದ ಹಿಂಪಡೆದಿದೆ ಎಂದು ಹೇಳಿದೆ. ಅದ್ದರಿಂದ ಇಂತಹ ಐಡ್ರಾಪ್‌ಗಳಿಂದ ಸೋಂಕುಗಳು ಪತ್ತೆಯಾದರೆ ಚಿಕಿತ್ಸೆ ನೀಡುವುದು ಕಷ್ಟಕರವಾಗಿದೆ ಎಂದು ಸಾಂಕ್ರಾಮಿಕ ರೋಗ ತಜ್ಞರು ಹೇಳಿದ್ದಾರೆ. ನಮ್ಮತುಮಕೂರು.ಕಾಂನ…