Author: admin

ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ಈಗಾಗಲೇ 2023ರ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ( Public Holiday List ) ಪ್ರಕಟಿಸಲಾಗಿತ್ತು. ಈ ವೇಳೆಯಲ್ಲಿ ಏ.3ರಂದು ಮಹಾವೀರ ಜಯಂತಿ ಪ್ರಯುಕ್ತ ರಜೆಯನ್ನು ಘೋಷಣೆ ಮಾಡಲಾಗಿತ್ತು.ಆದರೆ ಈ ರಜೆಯನ್ನು ಬದಲಾವಣೆ ಮಾಡಲಾಗಿದೆ. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ತಿದ್ದುಪಡಿ ಆದೇಶ ಹೊರಡಿಸಿದ್ದು, 2023ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ದಿನಾಂಕ 21-11-2022ರ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿತ್ತು ಎಂದಿದ್ದಾರೆ. ರಾಜ್ಯ ಸರ್ಕಾರದಿಂದ ಪ್ರಕಟಿಸಿದಂತ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯ ಕ್ರಮ ಸಂಖ್ಯೆ 4ರಲ್ಲಿ ಮಹಾವೀರ ಜಯಂತಿ ಪ್ರಯುಕ್ತ ರಜೆಯನ್ನು ದಿನಾಂಕ 03-04-2023ರಂದು ನೀಡಲಾಗಿತ್ತು. ಈ ರಜೆಯನ್ನು ದಿನಾಂಕ 04-04-2023ರಂದು ನೀಡಲಾಗಿದೆ ಎಂದು ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್…

Read More

ತುಮಕೂರು: ದಿನದಿಂದ ದಿನಕ್ಕೆ ಚುನಾವಣೆ ಕಾವು ರಂಗೇರುತ್ತಿದೆ. ಇನ್ನೊಂದೆಡೆ ಕಾಂಗ್ರೆಸ್ ಅಭ್ಯರ್ಥಿಗಳು ಅದರಲ್ಲೂ ಟಿಕೆಟ್ ಆಕಾಂಕ್ಷಿತ ಅಭ್ಯರ್ಥಿಗಳು ತಮ್ಮ ಕ್ಷೇತ್ರಗಳಲ್ಲಿ ಬಿರುಸಿನ ಸಂಚಾರ ನಡೆಸಿದ್ದಾರೆ ಅದರಲ್ಲಿ ತುಮಕೂರು ಜಿಲ್ಲೆ ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ನಿರಂತರವಾಗಿ ಕಳೆದು ಒಂದು ವರ್ಷದಿಂದ ಜನರೊಂದಿಗೆ ಸ್ಥಳೀಯ ಕಾರ್ಯಕ್ರಮಗಳೊಂದಿಗೆ ಬರೆಯುತ್ತಿದ್ದಾರೆ. ಅದರಲ್ಲೂ ಅವರಿಗೆ ಟಿಕೇಟು ಘೋಷಣೆಯಾದ ನಂತರ ಸಂಪೂರ್ಣವಾಗಿ ಕ್ಷೇತ್ರದ ಜನರೊಂದಿಗೆ ಬೆರೆಯುತ್ತಿರುವ ಪರಮೇಶ್ವರ್ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಿಡುವಿಲ್ಲದ ಪ್ರಚಾರದ ಸಮಯದ ನಡುವೆ ಗ್ರಾಮಸ್ಥರೊಂದಿಗೆ ಭರ್ಜರಿಯಾಗಿ ಡಾನ್ಸ್ ಮಾಡಿದ್ದಾರೆ. ಇದು ಕೊರಟಗೆರೆ ವಿಧಾನಸಭಾ ಕ್ಷೇತ್ರದಾದ್ಯಂತ ಸಾಕಷ್ಟು ವೈರಲ್ ಆಗುತ್ತಿದೆಕೊರಟಗೆರೆ ತಾಲೂಕಿನ ಚಿಕ್ಕಣ್ಣನಹಳ್ಳಿ ಗ್ರಾಮದ ಜನರೊಂದಿಗೆ ಉರುಮೆ ಸದ್ದಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಸಜ್ಜನ ವೈಟ್ ಕಾಲರ್ ರಾಜಕಾರಣಿ ಎಂಬ ಖ್ಯಾತಿಯ ಪರಮೇಶ್ವರ್ ಉರುಮೆ ಸದ್ದಿಗೆ ಹೆಜ್ಜೆ ಹಾಕುವ ಮೂಲಕ ನಾನು ಹೈಟೆಕ್ ಲೈಫ್ ಸ್ಟೈಲ್ಗೂ ಸೈ, ಜನಸಾಮಾನ್ಯರ ಜೊತೆಯಾಗಿ ಲೋಕಲ್ ಡಾನ್ಸ್ ಗೂ ಸೈ ಅನ್ನೋದನ್ನ ತೋರಿಸಿದ್ದಾರೆ.…

Read More

ಈ ಚುನಾವಣೆಯು ತಂದೆಯ ಕೊನೆಯ ಚುನಾವಣೆಯಾಗಿದ್ದು, ವರುಣ ಕ್ಷೇತ್ರದಲ್ಲಿ ಅವರ ಗೆಲುವು ಖಚಿತವಾಗಿದೆ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು. ಮಳವಳ್ಳಿ ತಾಲ್ಲೂಕಿನ ನಾಗೇಗೌಡನದೊಡ್ಡಿ ಗೇಟ್ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವರುಣಾ ಕ್ಷೇತ್ರವನ್ನು ಸಿದ್ದರಾಮಯ್ಯನವರಿಗೆ ತ್ಯಾಗ ಮಾಡಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಕ್ಷೇತ್ರ ತ್ಯಾಗ ಎನ್ನುವ ಪ್ರಶ್ನೆ ಬರುವುದಿಲ್ಲ, ವರುಣ ಕ್ಷೇತ್ರ ಒಬ್ಬ ನಾಯಕರಿಗೆ ಮಾತ್ರ ಸೇರಿದ ಕ್ಷೇತ್ರವಲ್ಲ, ನಮ್ಮ ತಂದೆ ಅವರು ಕೊನೆಯ ಚುನಾವಣೆಗೆ ವರುಣ ಕ್ಷೇತ್ರದಲ್ಲೇ ನಿಂತು ಗೆಲ್ಲಬೇಕು ಎನ್ನುವುದು ಕಾರ್ಯಕರ್ತರಲ್ಲಿತ್ತು. ಹೈಕಮಾಂಡ್ ಕೂಡ ತಂದೆಯವರು ವರುಣದಲ್ಲಿ ನಿಂತರೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದರು. ಸಿದ್ದರಾಮಯ್ಯನವರು ವರುಣ ಕ್ಷೇತ್ರಕ್ಕೆ ಬರಲಿ ಯಾವುದೇ ರಿಸ್ಕ್ ಇಲ್ಲದೇ ನಾವು ಗೆಲ್ಲಿಸಿ ಕೊಡುತ್ತೇವೆ ಎಂದು ಕಾರ್ಯಕರ್ತರು ಮತ್ತು ನಾಯಕರ ಒತ್ತಾಯವಾಗಿತ್ತು ಎಂದು ಅವರು ಇದೇ ವೇಳೆ ಹೇಳಿದರು. ಈ ವೇಳೆ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ದಡದಪುರ ಶಿವಣ್ಣ ಜೊತೆಗಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್…

Read More

ಮಧುಗಿರಿ: ಬಹುಜನ ಸಮಾಜ ಪಕ್ಷದಿಂದ 2023ರ ವಿಧಾನಸಭಾ ಚುನಾವಣೆಯ ಅಭ್ಯರ್ಥಿಯನ್ನಾಗಿ ತನ್ನನ್ನು ಘೋಷಿಸಿದ್ದು, ತಾನು ಸ್ಥಳೀಯ ಅಭ್ಯರ್ಥಿಯಾಗಿದ್ದು, ಕ್ಷೇತ್ರದ ಜನರು ತನಗೆ ಬೆಂಬಲ ನೀಡಬೇಕೆಂದು ಸಿಎ.ಎನ್.ಮಧು ಮನವಿ ಮಾಡಿದರು ಪಟ್ಟಣದ ಬೈಪಾಸ್ ರಸ್ತೆಯಲ್ಲಿರುವ ತಮ್ಮ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಧುಗಿರಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ನನ್ನ ಗುರಿಯಾಗಿದೆ. ಈ ಹಿಂದೆ ಮಧುಗಿರಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕೆಂದು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಸಾವಿರಾರು ಸಂಖ್ಯೆ ಜನ ಸಮೂಹದೊಂದಿಗೆ ರ್ರ್ಯಾಲಿ ಮುಖಾಂತರ ಹೋರಾಟ ಮಾಡಿದ್ದು, ಬರಗಾಲ ಪ್ರದೇಶವಾದ ಮಧುಗಿರಿಯಿಂದ ಹಲವಾರು ಯುವಜನರು ಸ್ಥಳೀಯವಾಗಿ ಉದ್ಯೋಗ ಸಿಗದೇ ಉದ್ಯೋಗ ಹುಡುಕುತ್ತಾ ಬೆಂಗಳೂರಿಗೆ ಒಲಸೆ ಹೋಗಿದ್ದಾರೆ, ಮಧುಗಿರಿಯೂ ಕಂದಾಯ ಜಿಲ್ಲೆಯಾದರೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗುವುದು ದೊಡ್ಡ ಮಟ್ಟದಲ್ಲಿ ಕಾರ್ಖಾನೆಗಳ ಸ್ಥಾಪನೆ ಇದರಿಂದ ಕೆಲಸ ಹುಡುಕುತ್ತಾ ವಲಸೆ ಹೋಗುವುದು ತಪ್ಪುತ್ತದೆ, ಮುಂದಿನ ಚುನಾವಣೆಯಲ್ಲಿ. ಶಾಸಕರಾಗಿ ಆಯ್ಕೆಯಾದರೆ ಮಧುಗಿರಿ ತಾಲೂಕು ಅನ್ನು ಜಿಲ್ಲೆ ಮಾಡುವ ಉದ್ದೇಶ ಹೊಂದಲಾಗಿದೆ. ಇದೇ ಅಲ್ಲದೆ ತಾಲೂಕಿನ ಅಭಿವೃದ್ಧಿಗಾಗಿ ಹಲವಾರು…

Read More

ತುರುವೇಕೆರೆ: ಪಟ್ಟಣದಲ್ಲಿ ಇರುವ ಸಿದ್ದರಾಮೇಶ್ವರ ಕಲ್ಯಾಣ ಮಂಟಪದಲ್ಲಿ ಇಂದು ತುರುವೇಕೆರೆ ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿ ಬೆಮೆಲ್ ಕಾಂತರಾಜು, ತಿಪಟೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಷಡಕ್ಷರಿ ಇವರುಗಳ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಕಾಂಗ್ರೆಸ್ ಸಮಾವೇಶವನ್ನು ಏರ್ಪಡಿಸಲಾಯಿತು. ಇದೇ ವೇಳೆ ಕಾಂಗ್ರೆಸ್ ಮುಖಂಡ ರಾಯಸಂದ್ರ ರವಿಕುಮಾರ್ ಮಾತನಾಡಿ, ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ, ನಮ್ಮ ಸಮಾಜದವರಿಗೆ ಈ ಬಾರಿ ಕಾಂಗ್ರೆಸ್ ಪಕ್ಷ ಅನಿವಾರ್ಯವಾಗಿದೆ ಎಂದರು. ಬಿಜೆಪಿ ಪಕ್ಷ ನಮ್ಮನ್ನು ಕಡೆಗಣಿಸಿದೆ. ನಮ್ಮ ಸಮಾಜ ಕೇವಲ ಭಾರತೀಯ ಜನತಾ ಪಾರ್ಟಿಗೆ ಸೀಮಿತವಲ್ಲ, ಕಾಂಗ್ರೆಸ್ ನಲ್ಲೂ ನಮ್ಮ ಸಮಾಜದವರು ಮಂತ್ರಿ ಆದಂತಹ ಉದಾಹರಣೆಗಳಿವೆ, ನಾವೆಲ್ಲ ಜಾತ್ಯತೀತವಾಗಿ ನಡೆದುಕೊಳ್ಳುತ್ತೇವೆ ಎಂದರು. ಬೆಮೆಲ್ ಕಾಂತರಾಜು ಮಾತನಾಡಿ, ನಾನು ಜೆಡಿಎಸ್ ಪಕ್ಷದ ಬಗ್ಗೆ ಏನೂ ಮಾತನಾಡುವುದಿಲ್ಲ. ಯಾಕೆಂದರೆ, ಅದು ಗೆಲ್ಲಲು ಸಾಧ್ಯವಿಲ್ಲ, ಈ ಹಿಂದೆ 15 ವರ್ಷ ಶಾಸಕರಾಗಿದ್ದ ಎಂ.ಟಿ. ಕೃಷ್ಣಪ್ಪನವರು ಯಾವುದೇ ಅಭಿವೃದ್ಧಿ ಕೆಲಸ ಮಾಡಲು ವಿಫಲರಾಗಿದ್ದಾರೆ ಎಂದರು. ಈ ತಾಲೂಕಿಗೆ…

Read More

ಶ್ರೀ ಶಿವಕುಮಾರ ಸ್ವಾಮೀಜಿ ಅವರ 116 ನೇ ಜನ್ಮದಿನೋತ್ಸವ ಹಿನ್ನೆಲೆಯಲ್ಲಿ ತುಮಕೂರಿನ ಸಿದ್ಧಗಂಗಾ ಮಠದಲ್ಲಿ 116 ಮಕ್ಕಳಿಗೆ ಶಿವಕುಮಾರ ಶ್ರೀಗಳ ಹೆಸರು ನಾಮಕರಣ ಮಾಡುವ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗಂಡು ಮಕ್ಕಳಿಗೆ ಶಿವಕುಮಾರ ಎಂದು ನಾಮಕರಣ ಮಾಡಿದ್ರೆ, ಹೆಣ್ಣು ಮಕ್ಕಳಿಗೆ ಶಿವಾನಿ ಎಂದು ನಾಮಕರಣ ಮಾಡಲಾಯಿತು. ಸಿದ್ದಗಂಗಾ ಮಠದ ಆವರಣದಲ್ಲಿರುವ ವಜ್ರಮಹೋತ್ಸವ ಕಟ್ಟಡದ ಸಭಾಂಗಣದಲ್ಲಿ ಶಾಸ್ತ್ರೋಕ್ತವಾಗಿ ನಾಮಕರಣ ಕಾರ್ಯಕ್ರಮ ನಡೆಯಿತು. ನಾಮಕರಣ ಮಾಡಲಾದ ಮಕ್ಕಳಿಗೆ ತೊಟ್ಟಿಲು ಹಾಗೂ ಬಟ್ಟೆಯನ್ನು ಸಿದ್ದ ಗಂಗಾ ಮಠದಿಂದ ವಿತರಿಸಲಾಯಿತು. ಶ್ರೀ ಸಿದ್ದ ಲಿಂಗ ಸ್ವಾಮೀಜಿ ನೇತೃತ್ವದಲ್ಲಿ ನಾಮಕರಣ ಮಾಡಲಾಯಿತು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ಮದ್ಯದ ಪ್ರಕರಣದಲ್ಲಿ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಜಾಮೀನು ಇಲ್ಲ. ದೆಹಲಿ ರೋಸ್ ಅವೆನ್ಯೂ ನ್ಯಾಯಾಲಯದ ನ್ಯಾಯಾಧೀಶ ಎಂ.ಕೆ.ನಾಗ್ಪಾಲ್ ಅವರಿಂದ ಈ ಆದೇಶ ಹೊರಬಿದ್ದಿದೆ. ಜಾಮೀನು ನೀಡಬಾರದು ಎಂಬ ಸಿಬಿಐ ವಾದವನ್ನು ಗಮನದಲ್ಲಿಟ್ಟುಕೊಂಡು ಈ ಆದೇಶ ಹೊರಡಿಸಲಾಗಿದೆ. ಹಿರಿಯ ವಕೀಲರಾದ ದಯನ್ ಕೃಷ್ಣನ್ ಮತ್ತು ಮೋಹಿತ್ ಮಾಥುರ್ ಅವರು ನ್ಯಾಯಾಲಯದಲ್ಲಿ ಸಿಸೋಡಿಯಾ ಪರವಾಗಿ ವಾದಿಸಿದರು. 2021-22ರ ಮದ್ಯ ನೀತಿ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಸೋಡಿಯಾ ಅವರನ್ನು ತನಿಖೆ ನಡೆಸಲಾಗುತ್ತಿದೆ. ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ದಾಖಲಿಸಿರುವ ಪ್ರಕರಣದಲ್ಲಿ ಪ್ರಸ್ತುತ ಸಿಸೋಡಿಯಾ ನ್ಯಾಯಾಂಗ ಬಂಧನದಲ್ಲಿದ್ದಾರೆ. ಫೆಬ್ರವರಿ 26 ರಂದು ಮದ್ಯ ಹಗರಣ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿತ್ತು. ಎಂಟು ಗಂಟೆಗಳ ವಿಚಾರಣೆಯ ಕೊನೆಯಲ್ಲಿ ಬಂಧನವಾಗಿದೆ. ಸಿಬಿಐ ದಾಖಲಿಸಿರುವ ಪ್ರಕರಣದಲ್ಲಿ ಸಿಸೋಡಿಯಾ ಮೊದಲ ಆರೋಪಿಯಾಗಿದ್ದಾರೆ. ನಂತರ ಜಾರಿ ನಿರ್ದೇಶನಾಲಯವೂ ಬಂಧನವನ್ನು ದಾಖಲಿಸಿತ್ತು. ಸಿಸೋಡಿಯಾಗೆ ಜಾಮೀನು ನೀಡುವುದರಿಂದ ತನಿಖೆಯನ್ನು ಹಾಳುಮಾಡುತ್ತದೆ ಮತ್ತು ಸಾಕ್ಷ್ಯಾಧಾರಗಳನ್ನು ನಾಶಪಡಿಸುತ್ತದೆ ಎಂದು ಸಿಬಿಐ ಪರವಾಗಿ ವಿಶೇಷ ಪಬ್ಲಿಕ್…

Read More

ಚುನಾವಣೆ ಸಮಯದಲ್ಲೇ ಬಿಜೆಪಿ ಶಾಸಕರೊಬ್ಬರ ಆಡಿಯೋವೊಂದು ವೈರಲ್ ಆಗಿದ್ದು, ಕ್ಷೇತ್ರದಲ್ಲಿ ಬಾರೀ ಸಂಚಲನ ಮೂಡಿಸಿದೆ. ರಾಯಚೂರು ನಗರ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಮೋದಿನೂ ಇಲ್ಲ ಯಾರೂ ಇಲ್ಲ, ನಾನೇ ಸಿಂಗಲ್ ಆರ್ಮಿ, ನಾನೇ ಮೋದಿ, ನಾನೇ ಟ್ರಂಪ್ ಎಂದು ಆಡಿಯೋದಲ್ಲಿ ಮಾತನಾಡಿದ್ದಾರೆ. ಶಿವರಾಜ್ ಪಾಟೀಲ್  ಮಾತನಾಡಿದ್ದಾರೆ  ಎನ್ನಲಾದ ಒಟ್ಟು 3 ನಿಮಿಷ 19 ಸೆಕೆಂಡ್ ಗಳ ಫೋನ್ ಸಂಭಾಷಣೆಯ ಆಡಿಯೋ ಇದಾಗಿದೆ. ಹಾಗಾದರೇ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಮಾತನಾಡಿರುವ ಆಡಿಯೋನಲ್ಲಿ ಏನಿದೆ ಗೊತ್ತೆ..? ಶಿವರಾಜ್ ಪಾಟೀಲ್ ಮಾತನಾಡಿರುವ ಆಡಿಯೋದಲ್ಲಿ, ಮೋದಿಯಿಲ್ಲ,ಪಾದಿಯಿಲ್ಲ.. ನಾನೊಬ್ಬನೇ ಶಿವರಾಜ್ ಪಾಟೀಲ್.. ಯಾವ ಬದನೆಕಾಯಿ ಮಾತು ನಾನು ಕೇಳಲ್ಲ.. ನಾನೇ ಸಿಂಗಲ್ ಆರ್ಮಿ, ನಾನೇ ಮೋದಿ, ನಾನೇ ಟ್ರಂಪ್ ಎಂದಿದ್ದಾರೆ. ಮೋದಿ ರೈಟ್ ಹ್ಯಾಂಡ್‌ ಗೆ ನಾನು ಕೇಳಲ್ಲ, ನನಗೆ ರೈಟ್ ಇಲ್ಲ, ಲೆಫ್ಟ್ ಇಲ್ಲ. ನನ್ನ ಮುಂದೆ ಹೇಳಿದ್ರೆ ಏನೂ ನಡೆಯಂಗಿಲ್ಲ. ಮೊದಲಿನಿಂದಲೂ ನನ್ನ ಕ್ಷೇತ್ರಕ್ಕೆ ‌ಲೀಡರ್…

Read More

ಮಾನನಷ್ಟ ಮೊಕದ್ದಮೆಯಲ್ಲಿ ಖುದ್ದು ಹಾಜರಾಗುವುದರಿಂದ ವಿನಾಯಿತಿ ನೀಡುವಂತೆ ರಾಹುಲ್ ಗಾಂಧಿ ಮಾಡಿರುವ ಮನವಿಯನ್ನು ಗುಜರಾತ್ ಭಿವಾಂಡಿ ಮ್ಯಾಜಿಸ್ಟ್ರೇಟ್ ಕೋರ್ಟ್ ಇಂದು ವಿಚಾರಣೆ ನಡೆಸಲಿದೆ. ಮಹಾತ್ಮ ಗಾಂಧಿಯವರ ಹತ್ಯೆಯ ಹಿಂದೆ ಆರ್‌ಎಸ್‌ಎಸ್ ಕೈವಾಡವಿದೆ ಎಂಬ ಆರೋಪದ ವಿರುದ್ಧ ಪ್ರಕರಣ ದಾಖಲಾಗಿದೆ. ಆರೆಸ್ಸೆಸ್ ಕಾರ್ಯಕರ್ತ ರಾಜೇಶ್ ಕುಂಟೆ ದೂರು ನೀಡಿದವರು. ಲೋಕಸಭೆ ಸದಸ್ಯ ಹಾಗೂ ರಾಜಕೀಯ ನಾಯಕರಾಗಿರುವ ಕಾರಣ ಸಾಕಷ್ಟು ಪ್ರವಾಸ ಮಾಡಬೇಕಾಗಿರುವುದರಿಂದ ಖುದ್ದು ಹಾಜರಾಗುವುದನ್ನು ತಪ್ಪಿಸಬೇಕು ಎಂಬುದು ರಾಹುಲ್ ಮನವಿ. ಆದರೆ ಇದೇ ಪ್ರಕರಣದಲ್ಲಿ ದೋಷಿಯಾಗಿರುವ ರಾಹುಲ್ ಅವರನ್ನು ಅನರ್ಹಗೊಳಿಸಲಾಗಿದ್ದು, ಸದ್ಯಕ್ಕೆ ಅರ್ಜಿಗೆ ಯಾವುದೇ ಸಂಬಂಧವಿಲ್ಲ ಎಂದು ದೂರುದಾರರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಹರಿದ್ವಾರದ ನ್ಯಾಯಾಲಯದಲ್ಲಿ ರಾಹುಲ್ ಗಾಂಧಿ ವಿರುದ್ಧ ಮತ್ತೆ ಮಾನನಷ್ಟ ಮೊಕದ್ದಮೆ ಹೂಡಲಾಯಿತು.ಭಾರತ ಜೋಡೋ ಯಾತ್ರೆಯ ವೇಳೆ ಕುರು ದೇವಸ್ಥಾನದಲ್ಲಿ ಆರ್‌ಎಸ್‌ಎಸ್ ಅನ್ನು 21 ನೇ ಶತಮಾನದ ಕೌರವರು ಎಂದು ಬಣ್ಣಿಸುವುದರ ವಿರುದ್ಧ ಆರ್‌ಎಸ್‌ಎಸ್ ಕಾರ್ಯಕರ್ತ ಕಮಲ್ ಭಂಡೋರಿಯಾ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ನ್ಯಾಯಾಲಯವು ಈ ತಿಂಗಳ 12 ರಂದು ಪ್ರಕರಣವನ್ನು ಪರಿಗಣಿಸಲಿದೆ.…

Read More

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೋಲಿನೊಂದಿಗೆ ಆರಂಭವಾಯಿತು. ಚೆನ್ನೈ ವಿರುದ್ಧ ಗುಜರಾತ್ ಐದು ವಿಕೆಟ್‌ಗಳ ಜಯ ಸಾಧಿಸಿತು. ಗುಜರಾತ್ ಟೈಟಾನ್ಸ್ ಚೆನ್ನೈ ಸೂಪರ್ ಕಿಂಗ್ಸ್ 178 ರನ್ ಗಳನ್ನು ನಾಲ್ಕು ಎಸೆತಗಳು ಬಾಕಿ ಇರುವಂತೆಯೇ ಹಿಂದಿಕ್ಕಿತು. ರಾಹುಲ್ ತೆವಾಟಿ ಮತ್ತು ರಶೀದ್ ಖಾನ್ ಅಂತಿಮ ಓವರ್ ಗಳಲ್ಲಿ ಗುಜರಾತ್ ತಂಡವನ್ನು ಗೆಲುವಿನ ದಡಕ್ಕೆ ತಂದರು. ಆರಂಭಿಕರಾದ ಶುಭಮನ್ ಗಿಲ್ ಮತ್ತು ವೃದ್ಧಿಮಾನ್ ಸಹಾ ಗುಜರಾತ್‌ಗೆ ಅಮೋಘ ನೆರವಿನಿಂದ ನೆರವಾದರು. ಗುಜರಾತ್ ಐಪಿಎಲ್ ನಲ್ಲಿ ಇದುವರೆಗೆ ಆಡಿರುವ ಹತ್ತು ಪಂದ್ಯಗಳಲ್ಲಿ ಒಂಬತ್ತರಲ್ಲಿ ಗೆದ್ದಿದೆ. ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ರಶೀದ್ ಖಾನ್ ನಿರ್ಣಾಯಕ ವಿಕೆಟ್ ಮತ್ತು ಎರಡು ಬೌಂಡರಿಗಳನ್ನು ಗಳಿಸಿ ಪಂದ್ಯ ಶ್ರೇಷ್ಠರಾದರು. ಕೊನೆಯ ಓವರ್‌ಗಳಲ್ಲಿ ಅಮೋಘ ಪ್ರದರ್ಶನಕ್ಕೆ ಹೆಸರಾದ ರಶೀದ್ ಖಾನ್ ಮತ್ತು ರಾಹುಲ್ ತೆವಾಟಿ ಅಮೋಘ ಪ್ರದರ್ಶನದೊಂದಿಗೆ ಹೆಜ್ಜೆ ಹಾಕಿದರು. ಕೊನೆಯ ಎರಡು ಓವರ್‌ಗಳಲ್ಲಿ ಇಬ್ಬರೂ 26 ರನ್ ಗಳಿಸಿದರು. ಕೊನೆಯ ಓವರ್‌ನಲ್ಲಿ, ತೆವಾಟಿಯಾ ಸತತ ಎರಡು ಬೌಂಡರಿಗಳನ್ನು…

Read More